ಯು ಕೆ ಕನ್ನಡ ಬಳಗದ 2016 ಯುಗಾದಿ ಉತ್ಸವದ ಸಮಯದಲ್ಲಿ ನಡೆದ ಕಾವ್ಯ ಗೋಷ್ಠಿಯಲ್ಲಿ ಶಿವಪ್ರಸಾದ್ ಅವರು ತಾವೇ ಓದಿದ ಕವಿತೆ ಇದು.
ಸ್ಕಾಚ್ ವಿಸ್ಕಿ
ಸ್ಕಾಚ್ ವಿಸ್ಕಿ ಎಂದರೆ
ನನಗಿಲ್ಲ ತೊಂದರೆ
ಸ್ನೇಹಿತರು ಸೇರಿ ಒಂದಾದರೆ
ಜಾನಿವಾಕರ್, ಗ್ಲೆನ್ ಫಿಡಿಕ್ ನನ್ನ ಒಲವು
ವಿಸ್ಕಿ ಒಂದೆ ನಾಮ ಹಲವು
ಎರಡು ಪೆಗ್ ಇಳಿಸಿದಾಗ
ಕಂಡದ್ದೆಲ್ಲಾ ಚೆಲುವು !
ಒಂದು ಪೆಗ್ ವಿಸ್ಕಿ
ಅದಕೊಂದಿಷ್ಟು ಸೋಡ
ಕುರುಕಲು ಬೇಕು
ಬಿಸಿ ಬಜ್ಜಿ ಪಕೋಡ
ವಿಸ್ಕಿ ಕುಡಿದಾಗ ನಾನೊಬ್ಬ ದಿಲ್ದಾರ್ ರಾಜ
ಹೇಗೆ ವಿವರಿಸಲಿ ಇದರ ಮಜ
ಮಿತಿ ಮೀರಿದರೆ ಅನಾರೋಗ್ಯ ನಿಜ
ಮಲಗೆದ್ದ ಮೇಲೆ ಹ್ಯಾಂಗ್ ಓವರ್ ಸಹಜ!
ವಾರಾಂತ್ಯದಲಿ ವಿಸ್ಕಿಯ ಆರಾಧನೆ
ಇನ್ನಿಲ್ಲ ಬೇಸರ ಮನೋವೇದನೆ
ಮೈ ಮನಸ್ಸುಗಳಾಗಿವೆ ಹಗುರ
ಚಿಂತೆಗಳು ಸದ್ಯಕ್ಕೆ ದೂರ
ಡಾ. ಜಿಎಸ್ ಶಿವಪ್ರಸಾದ್