ಶ್ರೀವತ್ಸ ದೇಸಾಯಿ ಮತ್ತು ರಾಮಶರಣರ ಹನಿಗವನಗಳು

ಶ್ರೀವತ್ಸ ದೇಸಾಯಿ ಮತ್ತು ರಾಮಶರಣರ ಹನಿಗವನಗಳು

ಪ್ರಿಯ ಓದುಗರೆ, ನಮ್ಮ ಈ ಹನಿಗವನದ ಮಾಸದಲ್ಲಿ ಶ್ರೀವತ್ಸ ದೇಸಾಯಿ ಮತ್ತು ರಾಮಶರಣರವರು ಬರೆದು, ಹನಿಗವನ ಗೋಷ್ಠಿ’ಯಲ್ಲಿ ವಾಚಿಸಿದ ಕವನಗಳನ್ನು ಓದುವ ಅವಕಾಶ ನಮ್ಮೆಲ್ಲರಿಗೆ. ದೇಸಾಯಿಯವರ ಹನಿಗವನ ”ಬ್ರೆಕ್ಸಿಟ್” ನಲ್ಲಿ  ಪ್ರಸ್ತುತ ರಾಜಕೀಯದ ವ್ಯ೦ಗ್ಯ ಚಿತ್ರಣವಿದೆ ಮತ್ತು ಬಿ೦ದುಗವನ ಸ೦ಸ್ಕೃತ ಶ್ಲೋಕವನ್ನು ಆಧರಿಸಿದೆ.
ರಾಮಶರಣರವರ ತಮ್ಮ ಕೊನೆಯ ಮೂರು ಕವನಗಳಲ್ಲಿ ತ೦ದೆಯು ಮೋದದಿ೦ದ ಈಗಿನ ಮಕ್ಕಳನ್ನು ನೋಡುವ ಚಿತ್ರಣವಿದೆ. “ ಇಷ್ಟೆಲ್ಲ ತಲೆಬಿಸಿ ಕೈಕು ?“ ಎ೦ದ ಹಾಗೆ ಪ್ರತಿ ಹನಿಗವನವನ್ನು ತಲೆಬಿಸಿ ಮಾಡಿಕೊಳ್ಳದೆ ನಿಮ್ಮದೇ ರೀತಿಯಲ್ಲಿ ಆನ೦ದಿಸಿ – ಸ೦

1)ಬ್ರೆಕ್ಸಿಟ್-ಯೂರೋ ನಿರ್ಗಮನ!

ಕೃಪೆ: ಲಕ್ಷ್ಮಿನಾರಾಯಣ ಗುಡೂರ್

( ಮುದ್ದಣ -ಮನೋರಮೆ ಸಂವಾದದಲ್ಲಿ)
ಮುದ್ದಣ: ಬ್ರೆಕ್ಸಿಟ್ಟಿಗೂ ಬಿಸ್ಕೀಟ್ಟಿಗೂ ಏನು ಸಂಬಂಧ?
(ಮನೋರ)ಮೇ (Mrs May) ಅಂದಳು:
ಬ್ರೆಕ್ಸಿಟ್ ಮೊದಲು ನಿಮಗೆ
ಬಿಸ್ಕೀಟು-ಚಹ ಉಂಟು (Bisuit with tea )
ಬ್ರೆಕ್ಸಿಟ್ ನಂತರದ ದುಬಾರಿ ಯುಗದಲ್ಲಿ
ಬಿಸ್ಕತ್ತೂ ಇಲ್ಲ, ಟೀ-ಕಾಫಿನೂ ಇಲ್ಲ,
ದಿನಕ್ಕೈದು ಕಪ್, ನಲ್ಲ
ನಿನ್ನ ಸಪ್ತಾಕ್ಷರಿ ಮಂತ್ರ ಮಾತ್ರ ಉಂಟು!

 

 

 

2) ಬಿಂದುಗವನ

ಬಿಂದುವಿನ ಅಂತರ ಮಾತ್ರ ಚಿತೆಗೂ ಚಿಂತೆಗೂ
ಸುಡುವುದು ಚಿತೆ ಸತ್ತ ನಂತರ
ನನ್ನಾಕೆ ಬಿಂದುವಿನ ಉರಿಗಣ್ಣು

ನನ್ನನ್ನು ಸುಡುತ್ತಿದೆ ನಿರಂತರ!

3) ಲಿಮರಿಕ್ಕೂ ಒಂದು ಹನಿಗವನ

ಚೊಕ್ಕ ಲಿಮರಿಕ್ಕೂ ಒಂದು ಹನಿಗವನ
ಅದರ ನಿಯಮಗಳತ್ತ ಇರಲಿ ಗಮನ
ಐದು ಸಾಲುಗಳ ಅ-ಅ-ಬ-ಬ-ಅ ಪ್ರಾಸ
ಓದಿ ”ಅಬ್ಬಾ!” ಎಂದರೆ ನೀ ಪಾಸ್
ಅವರು ನಕ್ಕರಂತೂ ಆಯಿತು ಹಾಸ್ಯಕವನ!

               ಶ್ರೀವತ್ಸ ದೇಸಾಯಿ

ಹನಿಗವನಗಳು

. ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್
ಹಾಗೆಂದೇ ಬರೆದಿರುವೆ ಇಂದು ಹನಿಗವಿತೆಗಳ್
ಇದರೊಳಗೇನೂ ಇಲ್ಲ ಹೂರಣಗಳ್
ನಗಬೇಡಿ ದಯಮಾಡಿ ಗೊಳ್

. ಸರ್ವಜ್ಞ ಬರೆದ ತ್ರಿಪದಿ
ದಿನಕರನ ಕಾಲದಲ್ಲಿ ಚೌಪದಿ
ಡುಂಡೀರಾಜ್ ಕೈಯಲ್ಲಿ some ಪದಿ
ನಮ್ಮ ಸಾಮರ್ಥ್ಯ no ಪದಿ

. ಸಾನೆಟ್ಟಿನಲ್ಲಿದೆ ಸಾಲು ಹದಿನಾಕು
ಏಳರಿಂದ ಹನ್ನೊಂದಿದ್ದರೆ ಹೈಕು
ಇಷ್ಟೆಲ್ಲಾ ತಲೆಬಿಸಿ ಕೈಕು?
ಹನಿಗವಿತೆಯಲ್ಲಿರುವುದೇ ಮೂರರಿಂದ ನಾಕು

೪. ತೊಟ್ಟು ತೊಟ್ಟಾಗಿ ಬಿದ್ದಂತೇ ಹನಿಗವನ
Honey-honey ಆಯಿತೆನ್ನ ಮನ
ತೊಟ್ಟುತ್ತಲೇ ಇತ್ತು ನಿರಂತರ ನೀಳ್ಗವನ
ಆದೆನಾ ಮಳ್ಳ ಹನಿ ಬಿದ್ದು ಶಿರದ ಮೇಲೆನ್ನ

. ನಮ್ಮಪ್ಪನ ಕಾಲದ ತಂದೆತನ
ಹೊರಗಡೆ ಕರ್ಮ ಮನೇಲಿ ಆರಾಮ
ನಮ್ಮ ಕಾಲದಲ್ಲಿ ತಂದೆತನ
ಹೊರಗೂ ದನ ಮನೇಲೂ ದನ.

 

 

. ನಮ್ಮನೆ ಮಕ್ಕಳಿಗೆ ಕಂಡರೆ ಪಿಜ್ಜಾ
ಎರಡೂ ಕೈತುಂಬ ತಿನ್ನೋದೇ ಮಜಾ
ಪದರು ಪದರಾಗಿ ಹರಡಿದ್ದು ಚೀಜಾ?
ನೋಡೋದೇ ನನಗೆ ಸಜಾ

೭. ಬರುತಿದೆ ಅವನಿಗೆ ಚಿಗುರು ಮೀಸೆ
ಮಗನಿರುವುದೀಗ ಯೌವ್ವನದ ಮೂಸೆ
ಜೊತೆಯಲ್ಲೇ ಇರುವ ಆಸೆ
ಬೀಳಲೇ ಅದರಲ್ಲೀಗ ಎಂಬುದೇ ಜಿಜ್ಞಾಸೆ

ರಾಮಶರಣ