ಊರ ಮಳೆ,ಮತ್ತದರ ಸುತ್ತ – ಅಮಿತ ರವಿಕಿರಣ್

 ಹೊಸ ಪರಿಚಯಅಮಿತ ರವಿಕಿರಣ್

ಅಮಿತ  ಮತ್ತು ಕುಟುಂಬ

ಉತ್ತರ  ಐರ್ಲ್ಯಾಂಡಿನ  ಬೆಲ್ ಫಾಸ್ಟ್ ನಲ್ಲಿ ನೆಲೆಸಿರುವ  ಶ್ರೀಮತಿ ಅಮಿತ ರವಿಕಿರಣ್ ಹುಟ್ಟಿ ಬೆಳದಿದ್ದು ಉತ್ತರ ಕನ್ನಡದ ಮುಂಡಗೋಡದಲ್ಲಿ. ಬೆಳೆದಿದ್ದು ಉಡುಪಿಯ ಸಾಲಿಗ್ರಾಮದಲ್ಲಿ. ಹಿಂದುಸ್ತಾನಿ ಸಂಗೀತದಲ್ಲಿ ಪದವಿ ಮತ್ತು ಜಾನಪದ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಅವರ ಮತ್ತೊಂದು ತವರಾದ ಧಾರವಾಡದಲ್ಲಿ! ಹಾಡುವುದು ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು  ಇವರ ಆತ್ಮೀಯ ಸ್ನೇಹಿತರು.ಇವೆಲ್ಲ ಭಾರವಲ್ಲದ ಆದರೆ ಅವರು ಹೋದಲ್ಲೆಲ್ಲ ಜೊತೆಯಾಗುವ ಲಗ್ಗೇಜುಗಳು ಎನ್ನುತ್ತಾರೆ ಅಮಿತಾ! ಅಪ್ರತಿಮ ಹಾಡುಗಾರ್ತಿಯಾದ ಅಮಿತ ಹಲವು ಗಝಲ್ , ಹಿಂದೂಸ್ತಾನ ಸಂಗೀತ ಮತ್ತು ಭಾವಗೀತೆಗಳ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಕರ್ನಾಟಕದ ಜನಪ್ರಿಯ ಸಂಗೀತ ಕಾರ್ಯಕ್ರಮವಾದ ‘ಸರಿಗಮಪ’ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಇವರ ಪ್ರತಿಭೆಯನ್ನು ನೋಡಿದ ಪ್ರಸಿದ್ದ  ಹಿರಿಯ ಕಲಾವಿದೆ ಬಿ. ಜಯಶ್ರೀ ಯವರು ಅಮಿತಾರಿಗೆ ಇಪ್ಪತ್ತು ಸಾವಿರ ರೂಪಾಯಿಗೂ ಹೆಚ್ಚಿನ ನಗದು ಬಹುಮಾನ ಕಳಿಸಿ ಮೆಚ್ಚಿಗೆ ,ಅಭಿಮಾನ ವ್ಯಕ್ತಪಡಿಸಿದ್ದು ಅವರ ಹಾಡುಗಾರಿಕೆಗೆ ಸಾಕ್ಷಿ!

ಬರವಣಿಗೆ ನನಗೆ ಇಷ್ಟ ಯಾಕಂದ್ರೆ, ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ ಎನ್ನುವ ಇವರು ತಮ್ಮ ಬರವಣಿಗೆಗಳನ್ನೆಲ್ಲ ಸೇರಿಸಿ  http://bhavanaloka.blogspot.co.uk   ಎನ್ನುವ ಬ್ಲಾಗ್ ನ್ನು ಹೊಂದಿದ್ದಾರೆ. ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ .ಅಡುಗೆಯ ಕಲೆಯಲ್ಲಿ ಆಸಕ್ತಿ ಇರುವ ಇವರದ್ದೊಂದು ಫುಡ್ ಬ್ಲಾಗ್  ಕೂಡ ಇದೆ –http:// tastytwist4all.blogspot.com ತಮ್ಮ ಕಲೆಗಳಿಂದಾಗಿ  ಉತ್ತರ  ಐರ್ಲ್ಯಾಂಡಿನ ಫೆಲ್ಲೋಶಿಪ್ ಗಳಿಸಿದ್ದಾರೆ. ಭಾರತೀಯ ಕಲೆಗಳನ್ನು  ಉತ್ತರ  ಐರ್ಲ್ಯಾಂಡಿ ಹರಡುತ್ತಿರುವ ಇವರದು ಹುಮ್ಮಸ್ಸಿನ ಬದುಕು!!-ಸಂ

Read More »

ಬದುಕಿನ ಹಾಸು ಹೊಕ್ಕಾಗಿ ಸುರಿವ ‘ಇಂಗ್ಲೆಂಡಿನಲ್ಲಿ ಮಳೆ’ – ಡಾ. ಜಿ.ಎಸ್. ಶಿವಪ್ರಸಾದ್ ಬರೆದ ಕವನ

ನಮ್ಮ ‘ಅನಿವಾಸಿ’ ಗುಂಪಿನ ಸಕ್ರಿಯ ಬರಹಗಾರರಾದ ಡಾ. ಜಿ.ಎಸ್. ಶಿವಪ್ರಸಾದ್ ರಿಗೆ ಕಳೆದ ತಿಂಗಳು ಆಗಸ್ಟ್ ನಲ್ಲಿ ಅರವತ್ತು ತುಂಬಿದ ಸಂಭ್ರಮ. ಸರಿ, ಅವರ ಕುಟುಂಬದವರು, ಸ್ನೇಹಿತರು ಸುಮ್ಮನಿದ್ದರೆ?! ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮವನ್ನು ನಡೆಸೇಬಿಟ್ಟರು. ಆ ಸಂಭ್ರಮದಲ್ಲಿ ಪಾಲ್ಗೊಂಡವರಿಗೆ ಕಾದಿತ್ತು ಸರ್ ಪ್ರೈಸ್! ಶಿವಪ್ರಸಾದ್ ರಿಗೆ ಎಲ್ಲರೂ ಕೊಡುವ ಉಡುಗೊರೆಯ ಮಾತಿರಲಿ, ಅವರೇ ಎಲ್ಲರಿಗೂ ತಮ್ಮ ಕವನಗಳ ಉಡುಗೊರೆಯನ್ನು (ಪುಸ್ತಕ ಬಿಡುಗಡೆ) ಕೊಟ್ಟು ಸತ್ಕರಿಸಿದರು. ಹಾಂ, ಆ ಸಮಾರಂಭದ ಬಗ್ಗೆ “ಅನಿವಾಸಿ” ಜಾಲ ಜಗುಲಿಯಲ್ಲಿ ಸೆಪ್ಟೆಂಬರ್ ೯ ರ ಇಂಗ್ಲೆಂಡಿನ ಕನ್ನಡಿಗ ಮತ್ತು ಹುಟ್ಟುಹಬ್ಬ – ಡಾ. ಪ್ರೇಮಲತ ಬಿ.ಲೇಖನವನ್ನು ಓದಿ, ಮತ್ತಷ್ಟು ಆಸಕ್ತ ವಿವರಗಳು ಸಿಗುತ್ತವೆ . ಈ ಶುಕ್ರವಾರದ ಜಗುಲಿಯಲ್ಲಿ ಶಿವಪ್ರಸಾದ್ ರ ಮೊದಲ ದ್ವಿಭಾಷಿಕ ಕವನ ಸಂಗ್ರಹದಿಂದ ಆಯ್ದ ಒಂದು ಕವನವಿದೆ, ತಪ್ಪದೆ ಓದಿ. – ಸಂ.

ಇಂಗ್ಲೆಂಡಿನಲ್ಲಿ ಮಳೆ

 

ಮಳೆ, ಮಳೆ, ಜಡಿ ಮಳೆ%e0%b2%9c%e0%b2%bf%e0%b2%a8%e0%b3%81%e0%b2%97%e0%b2%bf-%e0%b2%9c%e0%b2%bf%e0%b2%a8%e0%b3%81%e0%b2%97%e0%b2%bf-%e0%b2%9c%e0%b2%bf%e0%b2%97%e0%b3%81%e0%b2%aa%e0%b3%8d%e0%b2%b8%e0%b3%86-%e0%b2%a4

ಹಗಲಿರುಳು ಸುರಿಯುವ ಮಳೆ

ಜಿನುಗಿ, ಜಿನುಗಿ, ಜಿಗುಪ್ಸೆ ತರುವ ಮಳೆ

ಹಲವೊಮ್ಮೆ

ಹದವಾಗಿ ಇಳಿಯುವ ತುಂತುರು ಮಳೆ

 

%e0%b2%95%e0%b2%a3%e0%b3%8d%e0%b2%a3%e0%b2%bf%e0%b2%97%e0%b3%86-%e0%b2%a4%e0%b2%82%e0%b2%aa%e0%b2%a8%e0%b3%8d%e0%b2%a8%e0%b3%80%e0%b2%af%e0%b3%81%e0%b2%b5-%e0%b2%ae%e0%b2%b3%e0%b3%86

 

ನಾಡಿನ ಅಡಿಯಿಂದ ಮುಡಿಯವರೆಗೆ

ಹಸಿರು ಮೂಡಿಸಿ

ಕಣ್ಣಿಗೆ ತಂಪನ್ನೀಯುವ ಮಳೆ

ಮೋಡ ಕಟ್ಟಿ ಮಬ್ಬು ಕವಿದ

ಬೇಸರ ದಿನಗಳ ಹಿಂದೆ ಮಳೆ

 

 ಹೆನ್ರಿ ದೊರೆ ದಂಡೆತ್ತಿ ಹೋದಾಗ

ವಿಜಯೊತ್ಸಾಹದಲಿ ಸುರಿದ ಮಳೆ

ಆನ್ ಬಲೀನಳ ಶಿರಚ್ಛೇದನವಾಗಿ

ರುಂಡ ಉರುಳಿದಾಗ ರೋದಿಸಿದ ಮಳೆ

ಶತಮಾನಗಳ ಇತಿಹಾಸದಲಿ

ಬೆರತು ಮಣ್ಣಾದ ಮಳೆ

 

ಟೆನ್ನಿಸ್ ರಾಣಿ ವೀನಸ್ ಆಟ ಕಾವೇರಿದಾಗಅವತರಿಸಿದ ಮಳೆ.jpg

ಹೃದಯ ಮಿಡಿತಗಳ ಹಿಡಿದಿಟ್ಟ ಮಳೆ

ಎಲಿಜ಼ಬತ್ ರಾಣಿ ಹುಟ್ಟು ಹಬ್ಬದ

ಸಡಗರವನ್ನಡಗಿಸಲು ಅವತರಿಸಿದ ಮಳೆ

 

ಹಲವು ಬಿಳಿ ತಲೆಗಳ ಒಳಗೆ

ವರ್ಣ ಭೇದ (ರೇಸಿಸಮ್)  ಭಾವನೆಗಳ

ತೊಳೆಯಲೆತ್ನಿಸಿ ವಿಫಲವಾದ ಮಳೆ

 

ಇಂಗ್ಲಿಷ್ ಸಂಸ್ಕೃತಿಯ ಸೌಜನ್ಯ

ನಯ ನಾಜೂಕುಗಳ ಬದುಕಿನ

ಹಾಸು ಹೊಕ್ಕಾಗಿ, ಸಾರಿ, ಥ್ಯಾಂಕ್ಯುಗಳ

ನಡುವೆ ಎಡಬಿಡದೆ ಸುರಿಯುವ ಮಳೆ

 

ಡಾ. ಜಿ.ಎಸ್. ಶಿವಪ್ರಸಾದ್