ಈ ಕೆಳಗಿನ ಚಿತ್ರದಿಂದ ಪ್ರೇರಿತರಾದ ಇಬ್ಬರ (ಡಾ ದಾಕ್ಷಾಯಣಿ ಮತ್ತು ಡಾ ರಾಜಾರಾಮ್) ಕವನ ಮತ್ತು ಬರಹಗಳನ್ನು ಓದಿರಿ:
(22-9-2014 ಇಂದು ಇದೇ ಚಿತ್ರಕ್ಕೆ ಡಾ ಸುದರ್ಶನ ಗುರುರಾಜರಾವ್ ಬರೆದ ಇನ್ನೊಂದು ಕವನವನ್ನೂ ಪ್ರಕಟಿಸಿದ್ದೇವೆ. -ಸಂ)

(೧) ಬಿಂಬ, ಪ್ರತಿಬಿಂಬ
ನೋಡಿ ಪ್ರತಿಬಿಂಬ, ಮೂಡಿದೆ ಪರಿಪೂರ್ಣವಾಗಿ
ಎಂದ ವಿಚಾರವಾದಿ ಹುಡುಗ.
ನನ್ನ ಕಣ್ಣಲಿ ಮೂಡಿದ ಬಿಂಬ ನೋಡದೆ ಹೋದನೆ,
ನಿಡುಸುಯ್ದಳು ಭಾವುಕ ಹುಡುಗಿ.