ಶ್ರೀಮತಿ ಆರ್. ಡಿ. ಅಹಲ್ಯಾ ಅವರು ಬರೆದ “’ಕದ್ರಿ ಗೋಪಾಲನಾಥ್ ಸ್ಯಾಕ್ಸೋಫೋನ್ ಕಚೇರಿ- ಸಂಗೀತದ ಒಂದು ರಸಸಂಜೆ!”

Kadri solo)
Photo: Ramasharan

ಇಲ್ಲಿನ ಯು.ಕೆ ಕನ್ನಡ ಬಳಗದ, ಯಾರ್ಕಶೈರ್ ಚಾಪ್ಟರ್ ಆಯೋಜಿಸಿ ನಡೆಸಿದ, ಡಾ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫ಼ೋನ್ ಕಚೇರಿ ನನ್ನ ಪಾಲಿಗೆ “ರಾಮರಸಾಯನ”ವಾಗಿತ್ತು. ಅವರೊಡನೆ ವೇದಿಕೆಯಲ್ಲಿ ಸಹವಾದಕರಾಗಿದ್ದ, ಶ್ರೀಮತಿ. ಡಾ ಜ್ಯೋತ್ನಾ ಶ್ರೀಕಾಂತ್ ಅವರ ಪಿಟೀಲು, ಹಾಗೂ ತಂಜಾವೂರು ಗೋವಿಂದರಾಜು ಅವರ ಡೋಲು ವಾದನ, ಪಂಚಾಮೃತವೆನಿಸಿತ್ತು. ಈ ಸಂಗೀತ ರಸಸಂಜೆಯು, ಒಂದು ನವರಸಭರಿತ, ವೈವಿಧ್ಯಮಯ, ರಾಗ-ರಂಜಿತ, ರಸಪೂರ್ಣ, ವಿಶ್ವವಿಖ್ಯಾತ, ವಾದ್ಯ-ವೈಭವ, ಕನ್ನಡ ಕಲಾಪ್ರೇಮಿಗಳ ಸಮ್ಮಿಳನವೆಂದರೆ ಅತಿಶಯೋಕ್ತಿಯೇನಲ್ಲ. ಇದೇ ಹಿಂದೂ ಸಂಸ್ಕೃತಿಯ, “ಕರ್ನಾಟಕ ಶಾಸ್ತ್ರೀಯ ಸಂಗೀತ” ಹಾಗೂ ಸಾಮವೇದ ರಸಗಾನ. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳೆನಿಸಿದ, ಪ್ರಸಿದ್ಧ ವಾಗ್ಗೇಯಕಾರರಾದ, ಶ್ರೀ ಮುತ್ತುಸ್ವಾಮಿ ದೀಕ್ಷಿತರು, ಶಾಮಾಶಾಸ್ತ್ರಿಗಳು ಹಾಗೂ ಶ್ರೀ ತ್ಯಾಗರಾಜ ಮಹಾಸ್ವಾಮಿಗಳು ರಚಿಸಿದ ಮಹಾಕೃತಿಗಳ ಅನಾವರಣ ಇಲ್ಲಿ ಈ ಸಂಗೀತ ಸಂಜೆಯಲ್ಲಿ ನಡೆಯಿತು. ಡಾ ಕದ್ರಿ ಗೋಪಾಲನಾಥ್ ಅವರ ವಾದ್ಯ ವೈಭವ ಮಾಧುರ್ಯವು, ರಂಜನೀಯವಾದ ನವರಸಭರಿತ ಶ್ರವಣಜ್ಞಾನವಾಯಿತು. ಮೊದಲನೆಯದಾಗಿ ವಿಘ್ನವಿನಾಶಕ ವಿಘ್ನೇಶ್ವರನಾದ, ಮಹಾಗಣಪತಿಯ ಪ್ರಾರ್ಥನೆ, ಸಭಿಕರ ಮನಸೆಳೆಯುವ ಭಕ್ತಿರಸಪ್ರಧಾನವಾದ, ಹಂಸಧ್ವನಿ ರಾಗದಲ್ಲಿ, ಆದಿತಾಳದ ಸಮೇತ, ಮುತ್ತುಸ್ವಾಮಿ ದೀಕ್ಷಿತರ “ವಾತಾಪಿ ಗಣಪತಿ ಭಜೇಹಂ”, ಎಂಬ ಪ್ರಖ್ಯಾತ ಕೀರ್ತನೆಯೊಂದಿಗೆ ಪ್ರಾರಂಭವಾಯಿತು. ಅದರ ಸವಿಯನ್ನು ಸಭಿಕರಿಗೆ ಉಣಿಸಿದ ನಂತರ, ಎರಡನೆಯದಾಗಿ ತ್ಯಾಗರಾಜರ ರಚನೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತವಾದ, ಅಭೇರಿ ರಾಗದ ವಿಳಂಬ ಕೃತಿ, “ನಗುಮೋಮು ಗನಲೇನಿ,” ಕೃತಿಯನ್ನು ಅತ್ಯಮೋಘವಾಗಿ ನುಡಿಸುತ್ತಾ, ನೆರವಲ್ ಪ್ರಸ್ತಾರ, ಸ್ವರ-ವಿನ್ಯಾಸ, ಮನೋಧರ್ಮ, ವಿವಿಧ ಶೈಲಿಯ ಸ್ವರ ನಡೆಯೊಂದಿಗೆ, ಪಿಟೀಲು ಹಾಗೂ ಡೋಲು ವಾದ್ಯಗಳ ಸಹಕಾರದೊಂದಿಗೆ, ಮನಮೋಹಕವಾಗಿ ಮುಕ್ತಾಯ ಸ್ವರಗಳೊಂದಿಗೆ ರಂಜಿಸುತ್ತಾ, ಸಕಲ ಸಭಿಕರನ್ನೂ ರಾಗ-ಸ್ವರ ಲೋಕಕ್ಕೊಯ್ದರು. Read More »