ಆಂಗ್ ಕ್ಲೂಂಗದಿಂದ ಹೊಮ್ಮಿದ ದಕ್ಷಿಣಾದಿ ಸಂಗೀತ! – ಶ್ರೀವತ್ಸ ದೇಸಾಯಿ ಬರಹ

ಮೊದಲೇ ನನ್ನ ’ಕೈ’ ತೋರಿಸಿ ಹೇಳಿ ಬಿಡುತ್ತೇನೆ. ನನಗೆ ಸಂಗೀತ ಅರ್ಥವಾಗುವದು ಅಷ್ಟರಲ್ಲೇ ಇದೆ. ಆದರೆ ”ಪಶುವಿಗೂ, ಮಗುವಿಗೂ ಅಷ್ಟೇ ಅಲ್ಲ ಹಾವಿಗೂ ಸಹ ಗಾನ ರಸ ಅನಂದಿಸಲು ಬರುತ್ತದೆ”  ಎಂಬುದನ್ನು ಸುಂದರವಾಗಿ ಹೇಳುವ ’ಪಶುರ್ವೇತ್ತಿ  ಶಿಶುರ್ವೇತ್ತಿ ವೇತ್ತಿ ಗಾನ ರಸಂ ಫಣಿಃ’ ಎಂಬ ಸಂಸ್ಕೃತ ವಾಣಿಯ ಸಮರ್ಥನೆ ಮಾಡಿಕೊಂಡು ನಾನು ಕೇಳಿದ ಒಂದು ಅಪರೂಪದ ಕಚೇರಿಯ ಬಗ್ಗೆ ಬರೆಯುತ್ತಿದ್ದೇನೆ. ಮೊನ್ನೆ ಬೆಂಗಳೂರಿಗೆ ಹೋಗಿದ್ದಾಗ, 19-01-2014 ರಂದು ಯು.ಕೆ. ಕನ್ನಡ ಬಳಗದ ಹಿರಿಯ ಆಜೀವ ಸದಸ್ಯೆ ಡಾ […]