೧ಜಗದ ಕೊಳೆಯತೊಳೆಯೆಇಳೆಗೆ ಬಂದೇ ಏನೇಇಬ್ಬನಿ?೨ರಾತ್ರಿಯೆಲ್ಲ ಬಿಕ್ಕಳಿಸಿಜಾರದೇ ಉಳಿದ ಕಂಬನಿಇಬ್ಬನಿ೩ರಾತ್ರಿಯೆಲ್ಲಅಪ್ಪಿತಬ್ಬಿಅಪ್ಪಿತಪ್ಪಿಉಳಿದ ಮುತ್ತಿನ ಹನಿಇಬ್ಬನಿ೪ಮುಂಜಾವಿನ ಕೊರಳಿಗೆವಜ್ರದ ಹರಳುಇಬ್ಬನಿ೫ನೇಸರನ ಸ್ವಾಗತಕೆಥಳಿ ಹೊಡೆದ ನೀರುಇಬ್ಬನಿ೬ರಾತ್ರಿಯ ಸೆಕೆಗೆಮೂಡಿದ ಬೆವರುಇಬ್ಬನಿ೭ಪ್ರೇಮಿಯ ಕೂದಲಿನಅಂಚಿಗೆ ಉಳಿದ ಹನಿಇಬ್ಬನಿ೮ಕಣ್ಣು ಬಿಟ್ಟ ಮಗುಅಮ್ಮನನ್ನು ಕಂಡ ಖುಷಿಯಲ್ಲಿಮೂಡಿದ ಕಣ್ಣಂಚಿನ ಪಸೆಇಬ್ಬನಿ೯ಮುಂಜಾವಿನೆದೆಯಿಂದಉ ದು ರಿಬೀಳುವ ಹನಿಇಬ್ಬನಿ೧೦ಮತ್ತೆ ಬೆಳಗಾಯಿತುಮತ್ತೆ ಹೊಸಜೀವ ಬಂದಿತುನಿಸರ್ಗದ ಆನಂದ ಬಾಷ್ಪಇಬ್ಬನಿ೧೧ರಾತ್ರಿ ಹೊತ್ತುಯಾವುದೋ ಕೀಟ ಮಾಡಿದ ಗಾಯಕ್ಕೆಎಲೆ ಮೇಲೆ ಮೂಡಿದ ಗುಳ್ಳೆಇಬ್ಬನಿ೧೨ಅನಂತದಲಿ ಬಿಂದುಬಿಂದುವಿನಲಿ ಅನಂತಒಂದು ಮಂಜಿನ ಹನಿಯೊಳಗೊಂದು ಬ್ರಹ್ಮಾಂಡ೧೩ಎಲೆಯ ಮೇಲೆಮುಂಜಾವಿನಮುತ್ತಿನ ಗುರುತುಸ್ವಲ್ಪ ಹೊತ್ತುಹಾಗೇ ಇರಲಿ ಬಿಡು೧೪ಪದಗಳಲ್ಲಿಹುಡುಕಿದರೂ ಸಿಗದ ಕವಿತೆಪುಟ್ಟ ಹುಲ್ಲಿನೆಳೆಯ ಮೇಲೆಮುಂಜಾವಿನ ಮಂಜಿನೊಳಗೆನಗುತ್ತ ಕಣ್ಬಿಡುತ್ತಿತ್ತು
*****
ʼಹೋದಲೆಲ್ಲ ಹಾದಿ ʼ ಸರಣಿ:
೧. ಬೆಂಚಿನ ಸ್ವಗತ
೧ಮುಂಜಾವಿನ ಬಾಗಿಲು ಅದೇ ತೆರೆದಿತ್ತುಅರ್ಲಿಮಾರ್ನಿಂಗ್ ವಾಕಿನ ಮಧ್ಯವಿರಾಮಕ್ಕೆಬಂದು ನನ್ನ ಮೇಲೆ ಕೂತರು ಇಬ್ಬರುವಯಸ್ಸು ಎಪ್ಪತ್ತೋ ಎಂಬತ್ತೋಒಬ್ಬರು ತಮ್ಮ ತೀರಿಹೋದ ಹೆಂಡತಿಯನ್ನುಪರದೇಶಕ್ಕೆ ಹೋದ ಮಕ್ಕಳನ್ನು ನೆನಯುತ್ತ‘ನನ್ನ ಬದುಕು ಈ ಬೆಂಚಿನಂತೆ ಒಂಟಿ,’ ಎಂದು ಹಲುಬಿದರು.ಇನ್ನೊಬ್ಬರು ಸಮಾಧಾನ ಮಾಡುತ್ತಿದ್ದರು೨ಕಾಲೇಜಿಗೆ ಚಕ್ಕರ್ನನ್ನ ಮೇಲೆ ಹಾಜರ್ಕಿಲಿಕಿಲಿ ನಗುಚಿಲಿಪಿಲಿ ಮಾತುಕದ್ದು ಕದ್ದು ಮುತ್ತುಹುಸಿಮುನಿಸುಅಳುನಟನೆತುಂಟನಗು‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ?’ ಎಂದಳು‘ಈ ಬೆಂಚು ಇಲ್ಲಿರುವವರೆಗೂ,’ ಎಂದಅವನ ಕೆನ್ನೆಗೊಂದು ಮುತ್ತು ಸಿಕ್ಕಿತು೩ಲಂಚ್ ಬ್ರೇಕಿನಲ್ಲಿ ಹತ್ತಿರದ ಆಫೀಸಿನಿಂದ ಬಂದುಡಬ್ಬಿ ಬಿಚ್ಚಿದರು; ಅವನ ಡಬ್ಬ ಇವನುಇವನ ಡಬ್ಬ ಅವಳು ಹಂಚಿಕೊಂಡರುಇವನ ಹೆಂಡತಿ ಕೊಡುವ ಕಾಟ ಅವಳು ಕೇಳಿಸಿಕೊಂಡಳುಅವಳ ಗಂಡ ಕೊಡುವ ಕಷ್ಟ ಇವನು ಕೇಳಿಸಿಕೊಂಡ‘ನಮ್ಮ ಬದುಕು ಈ ಬೆಂಚಿನಂತೆಎಲ್ಲೂ ಹೋಗುವುದಿಲ್ಲ, ಏನೂ ಆಗುವುದಿಲ್ಲ,’ ಎಂದರುಮತ್ತೆ ಆಫೀಸಿಗೆ ಹೋಗುವ ಸಮಯವಾಯಿತು೪ಈಗ ರಾತ್ರಿಯ ನೀರವಮೌನದಲ್ಲಿಬೀದಿದೀಪಗಳ ಮಬ್ಬುಬೆಳಕಲ್ಲಿಒಂಟಿಯಾಗಿದಿನದ ನೂರಾರು ಕತೆಗಳ ನೆನೆಯುತ್ತದಿನದ ಸಾವಿರಾರು ಕವನಗಳ ಕನವರಿಸುತ್ತನಿದ್ದೆ ಬರದೇಕೂತೇ ಇದ್ದೇನೆ
೨. ಎಲ್ಲಿ ಹೋಗುವಿರಿ ಹೇಳಿ ಹಾದಿಗಳೇ
ಕಲ್ಲು ಮುಳ್ಳಿನ ಹಾದಿಯನೆನಪುಗಳು ಕಳೆದಿಲ್ಲಬಿದ್ದು ಕಲ್ಲಿನ ಮೇಲಾದ ಗಾಯದ ಗುರುತುಗಳುಚುಚ್ಚಿಸಿಕೊಂಡ ಅಪಮಾನಗಳುಇಲ್ಲಿ ಎಲ್ಲ ಒಳ್ಳೆಯವರುಎಂಬ ನಂಬಿಕೆಯಲ್ಲಿಹಲ್ಲು ಕೊರೆದ ಹಾದಿಯಲ್ಲಿಜೊತೆಗೆ ಬಂದವರುನನಗಿಂತ ಸ್ವಲ್ಪ ಹೆಚ್ಚೇ ನೋವುಂಡವರುಹೂವಿನ ದಾರಿಯ ಮೇಲೆನಡೆಸುವೆ ಎಂದು ಭರವಸೆ ಕೊಟ್ಟವರುಹೂವಿನ ಜೊತೆ ಮುಳ್ಳೂ ಇರುತ್ತದೆಎಂದು ಹೇಳುವುದನ್ನು ಮರೆತರುನನಗೆ ಅರಿವಾಗುವಷ್ಟರಲ್ಲಿ ಅವರಿದ್ದೂ ಇರಲಿಲ್ಲಅಲ್ಲಿಯೂ ಸಲ್ಲಲಿಲ್ಲಇಲ್ಲಿಗೂ ಒಗ್ಗಿಕೊಳ್ಳಲಿಲ್ಲದೇಶಬಿಟ್ಟ ಪರದೇಸಿಕಲ್ಲಿಗಿಂತ ಕಲ್ಲಾಗಿಪರಸಿಕಲ್ಲಿನ ಹಾದಿಯ ಮೇಲೆಅಂಗಡಿ ಅಂಗಡಿಗಳಲ್ಲಿನಡೆವ ಜನರ ಮುಖಗಳಲ್ಲಿಸುಖ ಸಂತೋಷ ಹುಡುಕುತ್ತೇನೆಹಾದಿಹೋಕ ನಾನುಹಾದಿಹೋಕನಾಗಿಯೇ ಉಳಿದಿದ್ದೇನೆವಾರಾಂತ್ಯಕ್ಕೆ ಬಿಡುವು ಹುಡುಕುತ್ತೇನೆಹುಲ್ಲುಹಾಸಿನ ಹಾದಿಯಫೋಟೋ ತೆಗೆದುಫೋನಿನ ವಾಲ್-ಪೇಪರ್ ಮಾಡಿಕೊಳ್ಳುತ್ತೇನೆಹೈವೇಯ ಸೈನ್-ಬೋರ್ಡುಗಳುಈಗ ನನ್ನ ಮಿತ್ರರುನನ್ನ ಕಾರಿನ ದಾರಿ ಹೇಳಿಕೊಡುವವರುಹಗಲು ಸಂಜೆ ಅದೇ ಹಾದಿಕಾರಿಗಿಂತ ಯಾಂತ್ರಿಕವಾಗಿ ಬದುಕು ನಡೆಸುತ್ತೇನೆ*ಕಾಲ ಮಾಗುತಿದೆದಾರಿ ಸವೆಯುತಿದೆತಾಣದ ಮರೀಚಿಕೆಹಾಗೇ ಉಳಿದಿದೆಹಾಗೇ ಉಳಿದರೇ ಬದುಕೆ?
ಈ ವಾರದ ಸಂಚಿಕೆಯ ವಿಶೇಷ – ‘ಫೋಟೋ (ಚಿತ್ರ) ಕವನ’. ಒಂದು ಚಿತ್ರಕಲೆಯನ್ನು ನೋಡಿದಾಗ ನಮ್ಮ ಮನಸ್ಸುಗಳು ನಮ್ಮ ಜೀವನ ಅನುಭವಕ್ಕೆ ತಕ್ಕಂತೆ ಮತ್ತು ಆ ಒಂದು ಕ್ಷಣದಲ್ಲಿ ನಮ್ಮ ಚಿತ್ತ ಸ್ಥಿತಿಯ ಆಧಾರದ ಮೇಲೆ ಕಲೆಯನ್ನು ವಿಶ್ಲೇಷಿಸಲು ಶುರುಮಾಡುತ್ತವೆ. ಹಲವಾರು ಭಾವನಾ ತರಂಗಳು ಉದ್ಭವಿಸುತ್ತವೆ. ಕೆಲವೊಮ್ಮೆ ನಾಲ್ಕಾರು ಸಾಧ್ಯತೆಗಳೂ ಮೂಡುತ್ತವೆ. ಒಮ್ಮೊಮೆ ಆ ಕಲೆ ಗೋಜಲಾಗಿ ಅದರ ಅರ್ಥ ಹೊಳೆಯದಿರಬಹುದು. ಅರ್ಥ ಹೊಳೆಯಲೇ ಬೇಕೆಂದಿಲ್ಲ. ಆ ಚಿತ್ರ ಒಂದು ವಿಶೇಷ ಅನುಭವನ್ನು ಕೊಡಬಹುದು, ಅದು ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿಯೂ ಇರಬಹುದು. ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಾಗದೆ ಇರಬಹುದು. ಈ ವಿಚಾರ ಒಂದು ಕವಿತೆಯ ಓದಿಗೂ ಅನ್ವಯವಾಗಬಹುದು. ಇನ್ನು ಫೋಟೋ ಕರ್ತೃ (ಕ್ಯಾಮರಾ ಹಿಡಿದು ಹೊರಟವರು) ನೋಡುವ ನೋಟಕ್ಕೆ ಬೇರೊಂದು ದೃಷ್ಟಿಕೋನವೇ ಇರಬಹುದು. ಒಂದು ರೂಪಕ ಅಥವಾ ಪ್ರತಿಮೆಯಾಗಿ ಕಾಣುತ್ತಿರುವ ಚಿತ್ರ ವಾಸ್ತವವನ್ನೂ ಮೀರಿ ಇನ್ನೊಂದು ವಿಚಾರವನ್ನು ಹೇಳುತ್ತಿರಬಹುದು. ಹೀಗೆ ಒಂದು ಚಿತ್ರ ಕಲೆ ಹಲವಾರು ವ್ಯಾಖಾನಗಳನ್ನು ಮೂಡಿಸುತ್ತದೆ. ಫೋಟೋ ಕಲೆಯನ್ನು ಭಾವನಾತ್ಮಕ ನೆಲೆಯಲ್ಲಷ್ಟೇ ಅಲ್ಲದೆ ತಾಂತ್ರಿಕ ನೆಲೆಯಲ್ಲೂ ಅಳೆಯಬಹುದು. ಕತ್ತಲೆ, ನೆರಳು, ಬೆಳಕು, ಬಣ್ಣ, ಕೋನ, ಆಳ, ವಿಸ್ತಾರ ಹೀಗೆ ಅನೇಕ ತಾಂತ್ರಿಕ ಲಕ್ಷಣಗಳ ಹಿನ್ನೆಲೆಯಲ್ಲಿ ಗ್ರಹಿಸಬಹುದು. ಜನ ಸಾಮಾನ್ಯರು ತೆಗೆಯಬಹುದಾದ ಹಲವಾರು ಫೋಟೋಗಳ ಹಿಂದೆ ಯಾವ ಉದ್ದೇಶವು ಇಲ್ಲದೆ ಅದು ಒಂದು ಉಲ್ಲಾಸ ಘಳಿಗೆಯ ನೆನಪಿನ ಗುಚ್ಛವಾಗಿರಬಹುದು. ಸ್ಮರಣ ಸಂಚಿಕೆಯಾಗಿರಬಹುದು. ಒಂದು ಫೋಟೋ ನಮ್ಮದೇ ವ್ಯಕ್ತಿಚಿತ್ರವಾದಾಗ ನಮ್ಮ ರೇಖಾರೂಪಗಳನ್ನು ನೋಡಿಕೊಂಡು ನಮ್ಮ ಆತ್ಮವಿಶ್ವಾಸ ಹಿಗ್ಗಿ ಅರಳಬಹುದು ಅಥವಾ ಒಪ್ಪಿಗೆಯಾಗದಿದ್ದಲ್ಲಿ ಬೇಸರವೂ ಉಂಟಾಗಬಹುದು.
ಡಾ.ಲಕ್ಷ್ಮಿನಾರಾಯಣ ಗುಡೂರ್ ಅವರು ತೆಗೆದಿರುವ ಸುಂದರ ಚಿತ್ರಗಳಿಗೆ ಅವರೇ ಶೀರ್ಷಿಕೆಯನ್ನು ಕೊಟ್ಟು ನೋಡುಗರ ಕಲ್ಪನೆಗಳಿಗೆ ರೆಕ್ಕೆಯನ್ನು ಒದಗಿಸಿದ್ದಾರೆ. ಈ ಚಿತ್ರಗಳನ್ನು ಸಂಪಾದಕರು, ಡಾ. ಗುಡೂರ್ ಅವರ ಅನುಮತಿ ಪಡೆದು ನಮ್ಮ ಆಶುಕವಿಗಳಾದ ಡಾ.ಮುರಳಿ ಹತ್ವಾರ್ ಅವರಿಗೆ ಕವನವನ್ನು ಬರೆಯಲು ಕೋರಿ ಅವರು ಸಮ್ಮತಿಸಿ ಚಿತ್ರಕ್ಕೆ ಸರಿದೂಗುವ ಒಂದಲ್ಲ, ಎರಡು ಕವಿತೆಯನ್ನು ಬರೆದುಕೊಟ್ಟಿದ್ದಾರೆ ಮತ್ತು ಅವರು ತಮ್ಮ ಬರಹದ ಕೊನೆಗೆ ಟಿಪ್ಪಣಿಯಲ್ಲಿ ಇದರ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಕವಿಯ ಇಂಗಿತವನ್ನು ಅರ್ಥಮಾಡಿಕೊಳ್ಳಲು ಈ ಟಿಪ್ಪಣಿಯನ್ನು ಓದುವುದು ಒಳಿತು.
-ಸಂಪಾದಕ
ಬುದ್ಧನಂತೆ ಕುಳಿತಿದೆ
ರೆಕ್ಕೆ ಬಿಚ್ಚಿ ಹಾರಲು
ನೀಲ ಗಗನ ಕರೆದಿದೆ
ಹಸಿರ ತೇರನೇರಿ ನಭಕೆ
ಕನಸ ತೂರು ಎಂದಿದೆ
ಹಕ್ಕಿ ಲಯದ ಯಾನಕೆ
ನೀರಿನಲೆಯ ನರ್ತನ
ವಾದ್ಯ ಬೆಳೆದ ಗಾನಕೆ
ರಾಗದಲೆಯ ತನನನ
ಸಂಜೆ ಇಳಿದು ಕಡಲಿಗೆ
ನೆರಳ ಹಾಸು ಹರಡಿದೆ
ಇರುಳ ಕಾಯ್ವ ಕೊಂಬಿಗೆ
ದೀಪವಂಟಿ ಬೆಳಗಿದೆ
ಕೆರೆಯ ತುದಿಯ ಪೀಠಕೆ
ಮರದ ನೆರಳು ಚಾಚಿದೆ
ದಡವ ಹಿಡಿದ ಮನವದು
ಬುದ್ಧನಂತೆ ಕುಳಿತಿದೆ
-ಮುರಳಿ ಹತ್ವಾರ್
*
ಕಥೆಗಳು ಸಾರ್ ಕಥೆಗಳು
ಕಥೆಗಳು ಸಾರ್ ಕಥೆಗಳು
ತಳ ಕಾಣದ ಬಾವಿಯ ಕಪ್ಪೆಗಳು
ವಟಗುಟ್ಟುವ ಕಥೆಗಳು
ಆಸೆಯ ಕೈ ಹಿಗ್ಗಿಸುತ ಚಾಚಿ
ಸಿಕ್ಕ ಮೋಡವನೆಲ್ಲ ಆಪೋಶನ ಮಾಡಿ
ಊದಿದ ಬಿಸಿಯುರಿಗೆ ಹಂಡೆಯ ನೀರೆಲ್ಲ ಬಿಸಿ.
ಆಹಾ! ಎಂದು ಅಲೆ-ಅಲೆಯಲಿ ಮಿಂದ ಮೈಗಳು
ರಾಕೆಟ್ಟು ಹಾರಿಸಲು ತೋಡಿದ ಗುಂಡಿಯ ತುಂಬಾ
ಪ್ಲಾಸ್ಟೀಕಿನ ಸರಕುಗಳ ದುರ್ನಾತದ ರಾಶಿ
ದೂರದ ಚುಕ್ಕಿಯಲೊಂದು ಮನೆ ಕಟ್ಟುವ
ಹುಚ್ಚು ಕನಸಿನ ಮನಸುಗಳು
ಬುದ್ಧನ ಮರ, ಪೋಪನ ನಗರ
ಎಲ್ಲೆಂದರಲ್ಲಿ ವಾಲಗ ಊದಿ
ಜಂಗಮ ಗುರುವಿಗೆ ಸ್ಥಾವರ ಕಟ್ಟುವ
ಹಮ್ಮಿನ ಖಾಲಿ ಕತ್-ತಲೆಗಳು
ಬಣ್ಣ-ಬಣ್ಣದ ಬಾಂಬುಗಳ ಸ್ಫೋಟದಲಿ
ಮನೆಯ ಗೋಡೆ ತಾರಸಿಯೆಲ್ಲಾ ತೂತು
ಚಿತ್ರ ವಿಚಿತ್ರ ಫೋಟೋಗಳಲೆಲ್ಲ ಮುಚ್ಚಿಟ್ಟು
ನಕ್ಕ ಹಾಗೆ ನಟಿಸುವ ಮುಖಗಳು
ತಾನೆಷ್ಟೇ ಬೆಳಕೆಂದುಕೊಂಡರೂ, ಮಾನವ ಜಾತಿ,
ದಿನ ಕಳೆದಂತೆ ಮಲಗುವ ಉದ್ದುದ್ದ ನೆರಳು;
ತಿರುಳಿಲ್ಲದ ಕರಿ ಇರುಳು ಬರೆದ ಹುರುಳಿಲ್ಲದ ಕಥೆಗಳು
ಹಳಿಯ ಮೇಲೂ ಉರುಳದ ಚಕ್ರಗಳು
ತಳ ಒಡೆದು ನೀರುಕ್ಕಿ ಹರಿವ ಅಕ್ಷರಗಳು
ಬರೆವ ಹೊಸ ಹಗಲಿನ ಕಥೆಗಳಿಗೆ
ಕಾದಿವೆ ಬಾವಿಯ ಕಪ್ಪೆಗಳು.
-ಮುರಳಿ ಹತ್ವಾರ್
*
ಟಿಪ್ಪಣಿ
1. ಪ್ರಸಾದರು ಚಿತ್ರ-ಕವಿತೆ ಬೇಕೆಂದು ಕೇಳಿ ಸ್ವಲ್ಪ ಸಮಯಕ್ಕೆ ಬಂದ ಗೂಡೂರರ ಚಿತ್ರ ಸರಣಿಯ ಮೊದಲ ಚಿತ್ರ ಏಂಜೆಲ್ ಅಫ್ ದ ನಾರ್ಧ್. ಅದನ್ನು ನೋಡಿದಾಗ ಕಣ್ಕಟ್ಟಿದ್ದು ದೊಡ್ಡ ಕಪ್ಪು ರೆಕ್ಕೆಗಳು. ಬಿಳಿಯ ಮೋಡವನ್ನೆಲ್ಲ ನುಂಗುತ್ತಿರುವ ದುರಾಸೆಯ ರಕ್ಕಸನಂತೆ ಕಂಡ ಆ ಕಪ್ಪು ಬೆಳೆದ ಮಸೂರದಲ್ಲೇ ಉಳಿದ ಚಿತ್ರಗಳನ್ನು ನೋಡಿದ್ದರಿಂದ ಎಲ್ಲಾ ಚಿತ್ರಗಳ ಕಪ್ಪು ನೆರಳು ‘ಕಥೆಗಳು ಸಾರ್ ಕಥೆಗಳು’ಕವಿತೆಯ ಭಾವ ಮತ್ತು ಅಕ್ಷರಗಳಾದವು. ಹಾಗಾಗಿ ಕಪ್ಪೇ ಇಲ್ಲದ ಹಾರಲು ನಿಂತ ಹಕ್ಕಿಯ ಚಿತ್ರದಲ್ಲೂ, ಶೀರ್ಷಿಕೆಯ ‘ವ್ಯಾಟಿಕನ್ ಅಲ್ಲಿ ಕಪ್ಪು ಹುಡುಕಿದ್ದು.
2. ಎರಡನೇ ಬಾರಿ, ಉದ್ದೇಶ ಪೂರ್ವಕವಾಗಿ ಆ ಹಾರುವ ಹಕ್ಕಿಯ ಚಿತ್ರದಿಂದ ಮೊದಲು ಮಾಡಿ ಬೆಳಕನ್ನು ದಿಟ್ಟಿಸಿದಾಗ, ಹುಟ್ಟಿದ ಭಾವ ಗಗನ ದಾಟುವ ಹೆಬ್ಬಯಕೆ (ambition). ಆ ಮಸೂರದಲ್ಲಿ ಬೆಳೆದದ್ದು ಬೆಳಕನ್ನು ಬರೆದ ಕವನವಾಯಿತು.
3. ಹತ್ತು-ಹನ್ನೆರಡು ವರ್ಷದ ಹಿಂದೆ ಬೆಳೆಸಿಕೊಂಡ ಫೋಟೋಗ್ರಪಿ ಹವ್ಯಾಸದ ಅಭ್ಯಾಸದಲ್ಲಿ ನನ್ನ ತಿಳುವಳಿಕೆಯನ್ನ ಹೆಚ್ಚಿಸಿದ್ದು ರಾಬರ್ಟ ಆಡಮ್ಸನ ಈ ಸಾಲುಗಳು:
" the photography I care most about shares some assumptions with painting of the past. The effort, as I see it, is to document coherence in an apparently incoherent situation. Which means that first you have to believe in coherence, though that can't itself be photographed, and then you have to find a visual metaphor to suggest it. Of course when you're working you don't think at all about doing such a thing, or what you'd end up with a piece of mystical goo"
Robert Adams. Landscape: theory. 1980. P8.
ಮೇಲಿನ ಸಾಲುಗಳನ್ನು ಮೊದಲ ಬಾರಿ ಓದಿದಾಗ ನೆನಪಾದದ್ದು ಮಂಕುತಿಮ್ಮನ ಈ ಕಗ್ಗ:
ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು
ಅಸಮಂಜಸದಲಿ ಸಮನ್ವಯ ಸೂತ್ರ ನಯವ
ವ್ಯಸನಮಯ ಸಂಸಾರದಲಿ ವಿನೋದವ ಕಾಣ್ವ ರಸಿಕತೆಯೇ ಯೋಗವೆಲೋ ಮಂಕುತಿಮ್ಮ
ಹೀಗೆ, ಆಗಾಗ ಓದಿದ್ದು, ನೋಡಿದ್ದು, ಮಾಡಿದ್ದು ಎಲ್ಲ ಸೇರಿ ಮೂಡಿಸಿದ್ದು ಮೇಲಿನ ಎರಡು ಕವನಗಳು
-ಮುರಳಿ ಹತ್ವಾರ್