ಕೋವಿಡ್ ಪಿಡುಗು ನಮ್ಮನ್ನೆಲ್ಲ ಬಾಧಿಸಿ ಹೋದ ನಂತರ ಹಳೆಯ ಅಡಕಪದಗಳಿಗೆ (Acronyms) ಹೊಸದೊಂದು ಅರ್ಥ ಬಂದಿದೆ. BC(Before Christ) ಈಗ Before Covid ಎಂತಲೂ, AD (Anno Domini) ಈಗ After Disease, ಅಥವಾ After Done (with Corona) ಎಂತಲೂ ಕೆಲವರು ಕರೆಯುತ್ತಾರೆ. ಇತ್ತೀಚೆಗೆ ಕೋರೋನಾ ನಂತ ಮೊದಲ ಬಾರಿ ಬೆಂಗಳೂರಿಗೆ ಹೋದ ಬೇಸಿಂಗ್ ಸ್ಟೋಕ್ ರಾಮಮೂರ್ತಿಯವರ ತಮ್ಮ ಆರು ವಾರಗಳ ಕಾಲದ ವಾಸ್ತವ್ಯದಲ್ಲಿ ಅನುಭವಿಸಿದ ಸಿಹಿ, ಆಶ್ಚರ್ಯಕರ ಮತ್ತು ಇತರೇ ಅನುಭವಗಳವನ್ನು ಈ ಸ್ವಾರಸ್ಯಕರವಾದ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಟ್ರೇಡ್ ಮಾರ್ಕ್ ಆದ ಅಲ್ಲಿ ಸ್ವಲ್ಪ ಇತಿಹಾಸ, ಇಲ್ಲಿ ಸ್ವಲ್ಪ ಹಾರ್ಟಿಕಲ್ಚರ್, ಬಾಟನಿ ಹೀಗೆ ಸ್ವಲ್ಪ spice sprinkling ಸಹ ಉದುರಿಸಿ ಉಣಬಡಿಸಿದ್ದಾರೆ. Enjoy! (ತತ್ಕಾಲ್ ಸಂಪಾದಕ)
ಕೋವಿಡ್ ನಿಂದ ಕಳೆದ ಮೂರು ವರ್ಷ ಬೆಂಗಳೂರಿಗೆ ಹೋಗಿರಲಿಲ್ಲ. ಈ ವರ್ಷ ಜನವರಿ ತಿಂಗಳಲ್ಲಿ ಹೋಗಿ ಆರು ವಾರ ಇದ್ದು, ಅಲ್ಲಿ ಈ ಮೂರು ವರ್ಷಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಈ ಲೇಖನ. ಬೆಂಗಳೂರು Airport ಬಹಳ ಚೆನ್ನಾಗಿದೆ ಇದು ನಮ್ಮೆಲ್ಲರ ಹೆಮ್ಮೆಯ ವಿಷಯ. Immigration ಸಹ ತುಂಬಾ ಸರಾಗ ಮತ್ತು ವಿನಯದಿಂದ ನಡೆಯಿತು. ಕೋವಿಡ್ ಔಪಚಾರಿಕತೆಗಳು ಏನೂ ಇರಲಿಲ್ಲ. ಕೆಲವು ವರ್ಷದ ಹಿಂದೆ Auto ಅಥವಾ Taxi ಸಮಸ್ಯೆ ಇತ್ತು, ಆದರೆ ಈಗ Uber ಮತ್ತು Ola ಇರುವುದರಿಂದ ಯಾವ ತೊಂದರೆಯೂ ಇಲ್ಲ. ಸುಮಾರು ಐದು ನಿಮಿಷದ ಒಳಗೆ ನಿಮ್ಮ ವಾಹನ ಬರುವ ಸಾಧ್ಯತೆ ಇದೆ. ದರದ ಚೌಕಾಸಿ ಅಥವಾ ಜಗಳ ಬರಿ ನೆನಪುಗಳು ಅಷ್ಟೇ !
ಇನ್ನೊಂದು ವಿಷಯ ಗಮನಕ್ಕೆ ಬರುವುದು ದೇಶದಲ್ಲಿ ಆಗಿರುವ Digital Revolution. ರಸ್ತೆ ಯಲ್ಲಿ ತರಕಾರಿ ಮಾರುವರು , ಚಾಟ್ ಅಂಗಡಿಯವರು ಸಹ ಇದರಲ್ಲಿ ಭಾಗವಹಿಸಿದ್ದಾರೆ. ಫೋನಿನಿಂದ QR Code scan ಮಾಡಬಹುದು. ಅನೇಕ ಉಪಹಾರ ಮಂದಿರಗಳಲ್ಲಿ QR code ನಿಂದ ಅವತ್ತಿನ ತಿಂಡಿಗಳ ವಿವರ ತಿಳಿಯಬಹುದು. ಅಂಗಡಿ ಸಾಮಾನುಗಳನ್ನು on line ನಲ್ಲಿ ತರಿಸಬಹುದು. ನೋಡಿದರೆ ಬೆಂಗಳೂರಿನಲ್ಲಿ ಎಲ್ಲರ ಮನೆಯಲ್ಲೂ ಒಂದು ನಾಲಕ್ಕು ಚಕ್ರದ ವಾಹನ ಇರಬಹುದೇನೋ ಅನ್ನಿಸುತ್ತೆದೆ, ರಸ್ತೆಯಲ್ಲಿ ಅಷ್ಟೊಂದು traffic! Highway ಗಳು ಈಗ ಚೆನ್ನಾಗಿವೆ, ಆದರೆ ಬಹು ಮಂದಿ ವಾಹನ ನಡೆಸುವ ನಿಯಮಗಳನ್ನು ಪಾಲಿಸಿವುದಿಲ್ಲ ಅನ್ನುವುದು ಬಹಳ ಶೋಚಿನಿಯವಾದ ವಿಷಯ.
ಇನ್ನು ಮೆಟ್ರೋ (ನಮ್ಮ ಮೆಟ್ರೋ ) ಬಹಳ ಅನುಕೂಲವಾಗಿದೆ. ನಾನು ಬಹಳ ಹಿಂದೆ ಒಂದು ಸಲಿ ಇಲ್ಲಿ ಪ್ರಯಾಣ ಮಾಡಿದ್ದೆ.
ಆದರೆ ಏನು ಬದಲಾವಣೆ ಆಗಿದೆ ಅನ್ನುವ ವಿಚಾರ ಗೊತ್ತಿರಲಿಲ್ಲ. ಸರಿ, ಇದರಲ್ಲಿ ಪ್ರಯಾಣ ಮಾಡಿ ನೋಡೋಣ ಅಂತ ನ್ಯಾಷನಲ್ ಕಾಲೇಜು ನಿಲ್ದಾಣಕ್ಕೆ ಬಂದೆ. ಟಿಕೆಟ್ counter ನಲ್ಲಿ ಮಂತ್ರಿ ಮಾಲ್ ಗೆ ಎಷ್ಟು ಅಂತ ಕೇಳಿದಾಗ ಆಕೆ ೧೮ ರೂಪಾಯಿ ಅಂದಳು, ನಾನು ಆಶ್ಚರ್ಯದಿಂದ ”೧೮ ಆ?” ಅಂದೆ. ಆಕೆ ಹೌದು ಸರ್, ಸೀನಿಯರ್ concession ಇಲ್ಲ ಅಂದಳು! ನನಗೆ ಆಶ್ಚರ್ಯ ಆಗಿದ್ದು ಕೇವಲ ೧೮ ರೂಪಾಯಿ ಮಾತ್ರ ಅಂತ , ಆದರೆ ಆಕೆ ನಾನು ಇದು ದುಬಾರಿ ಅಂತ ಹೇಳುತ್ತಿದ್ದೇನೆ ಅಂತ ತಿಳಿದಿರಬೇಕು!! (London Tube ನಲ್ಲಿ ಕನಿಷ್ಠ £೭!) ದುಡ್ಡು ಕೊಟ್ಟೆ, ಚಿಲ್ಲರೆ ಬಂತು, ಟಿಕೆಟ್ ಕೊಡಿ ಅಂದೆ. ಆಕೆ ಕೊಟ್ಟಿದ್ದೀನಿ ನೋಡಿ ಸರ್ ಅಂದಳು. (ಈ ಮನುಷ್ಯ ಎಲ್ಲಿಂದ ಬಂದಿದ್ದಾನೆ ಅಂತ ಯೋಚಿಸರಬಹುದು!!). ನೋಡಿದರೆ ಟಿಕೆಟ್ ಒಂದು ಬಿಲ್ಲೆ ಆದರೆ Digital ಬಿಲ್ಲೆ ! ಅಂತೂ ಪ್ರಯಾಣ ಕೇವಲ ೧೦ ನಿಮಿಷ ಮಾತ್ರ. ಅದೇ Auto ನಲ್ಲಿ ಮಲ್ಲೇಶ್ವರಕ್ಕೆ ಹೋಗಿದ್ದರೆ ೧೦೦ ರೂಪಾಯಿ ಮತ್ತು ಅರ್ಧ ಅಥವಾ ಮುಕ್ಕಾಲು ಗಂಟೆ ಸಮಯ ಹಿಡಿಯುತ್ತಿತ್ತು.
ಬೆಳಗ್ಗೆ ಅಥವಾ ಸಾಯಂಕಾಲ ತಿಂಡಿ/ಊಟಕ್ಕೆ ಜನಗಳು ಉಪಹಾರ ಮಂದಿರಗಳ ಮುಂದೆ ನಿಂತಿರುವುದನ್ನ ನೋಡಿದರೆ ಮನೆಯಲ್ಲಿ ಅಡಿಗೆ ಮಾಡುವ ಅಭ್ಯಾಸ ಇಲ್ಲವೇನೋ ಅನ್ನುವ ಸಂಶಯ ಹುಟ್ಟುತ್ತದೆ. ಗಾಂಧಿ ಬಜಾರ್ನಲ್ಲಿರುವ ಹೆಸರಾದ ವಿದ್ಯಾರ್ಥಿ ಭವನದ ಮುಂದೆ queue ನಿಂತಿರುತ್ತಾರೆ. ಎಲ್ಲಾ ಉಪಹಾರ ಮಂದಿರಗಳಲ್ಲೂ ಇದೇ ಸಮಸ್ಯೆ.
ಸಂಕ್ರಾಂತಿ ಸಮಯದಲ್ಲಿ, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಮುಂತಾದವು ಈಗ ಅನೇಕ ಅಂಗಡಿಗಳಲ್ಲಿ Prepack ಸಿಗುತ್ತೆ. ಮನೆಯಲ್ಲಿ ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ. ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ಅಂಗಡಿಗಳು ಅನೇಕ.
ನಾವು ಇದ್ದ ಆರು ವಾರದಲ್ಲಿ, ಅಡಿಗೆ ಮಾಡಿಕೊಳ್ಳುವ ಸೌಲಭ್ಯ ಇದ್ದಿದ್ದರೂ ಮಾಡುವ ಅವಶ್ಯಕತೆ ಇರಲಿಲ್ಲ. ಹತ್ತಿರದಲ್ಲೇ ಇದ್ದ ವಿದ್ಯಾರ್ಥಿ ಭವನ, ಭಟ್ಟರ ಹೋಟೆಲ್ ಅಥವಾ ಉಡುಪಿ ಕೃಷ್ಣ ಭವನದಲ್ಲಿ ಬೆಳಗ್ಗೆ ಬಿಸಿ ಬಿಸಿ ಇಡ್ಲಿ ದೋಸೆ (Take Away) ಸಿಗಬೇಕಾದರೆ ಮನೆಯಲ್ಲಿ ಕಷ್ಟ ಪಡಬೇಕಾಗಿಲ್ಲ ಅಲ್ಲವೇ? ಊಟ ಸಹ On Line ನಲ್ಲಿ ತರಿಸಬಹುದು! When in Rome Do as Romans Do ಅಂದ ಹಾಗೆ.
ನಮ್ಮ ಮನೆಯ ಕಿರಿಯ ಇಬ್ಬರು ಸಂಬಂಧಿಕರು ಬ್ರೂವರಿ (Brewery )ಗೆ ಹೋಗೋಣ ಅಂದರು. (ಬೆಂಗಳೂರಿನಲ್ಲಿ ಸುಮಾರು ೩೦-೪೦ ಇವೆಯಂತೆ). ಸಾಯಂಕಾಲ ೭ ೩೦ ಕ್ಕೆ booking ಇದ್ದಿದ್ದು, ಸುಮಾರು ೧೫೦೦ ಜನ ಇದ್ದಿರಬಹುದು ಆ ಸಮಯದಲ್ಲಿ! QR code scan ಮಾಡಿದರೆ ಅನೇಕ ರೀತಿಯ beer ಮಾಹಿತಿ ಸಿಗುತ್ತೆ. (ಈ Beer ಇಲ್ಲಿ ಸಿಗುವ Lager)
ಸುಮಾರು ೨೫-೩೦ ವರ್ಷದ ಹಿಂದೆ, ಬಸವನಗುಡಿ ಅಥವಾ ಮಲ್ಲೇಶ್ವರದ ರಸ್ತೆಗಳಲ್ಲಿ ಒಂಟಿ ಮನೆಗಳು ಇದ್ದವು, ಈಗ ಎಲ್ಲೆಲ್ಲಿ ನೋಡಿದರೂ ಹಳೇ ಮನೆಗಳನ್ನು ಕೆಡವಿ ೩ ಅಥವಾ ೪ ಅಂತಸ್ತಿನ apartment ಗಳು ಬಂದಿವೆ. ರಸ್ತೆಗಳ ತುಂಬಾ ಮರಳು, ಸಿಮೆಂಟ್ ಇತ್ಯಾದಿ. ಇದು ಸಾಲದು ಅಂತ ಚರಂಡಿ ರಿಪೇರಿ, ಅದರ ಕಲ್ಲಿನ ಚಪ್ಪಡಿಗಳೂ ಸಹ ರಸ್ತೆ ಮಧ್ಯೆ. ಹೀಗಾಗಿ ರಸ್ತೆಯಲ್ಲಿ ನಡೆಯುವುದೇ ಒಂದು ಸಮಸ್ಯೆ, ಗಾಂಧಿ ಬಜಾರ್ ನಂತೂ ಪೂರ್ತಿ ಅಗದು ಬಿಟ್ಟಿದ್ದಾರೆ. ಇದು ಹೇಗೆ ಅನ್ನುವ ಪ್ರಶ್ನೆ ನೀವು ಕೇಳಬಹುದು. ಕಾರಣ, ಇಂಗ್ಲಿಷ್ನನಲ್ಲಿ ಹೇಳಬೇಕಾದರೆ, Lack of Accountability. ಸರಿಯಾದ ಉಸ್ತುವಾರಿ ಸಹ ಕಡಿಮೆ. ಆದರೆ ಸ್ಥಳೀಯ ಜನ ಇದನ್ನ ಸಹಿಸಿಕೊಂಡು ಇದು ತಮ್ಮ ಹಣೆ ಬರಹ ಎಂದು ಸುಮ್ಮನಿರುತ್ತಾರೆ. ನಿಮ್ಮ ಪ್ರತಿನಿಧಿ (ಕಾರ್ಪೊರೇಟರ್ )ಗೆ ದೂರು ಕೊಡಬಹುದಲ್ಲ ಎಂದು ಕೇಳಿದಾಗ ಬಂದ ಉತ್ತರ ಇದು " ಇವರು ಇರುವುದು ನಮಗೆ ಸಹಾಯ ಮಾಡುವುದಕ್ಕೆ ಅಲ್ಲ ತಮ್ಮ ಜೇಬು ತುಂಬಿಸಿಕೊಳ್ಳುವುದಕ್ಕೆ!"
ಆದರೆ ನೀವು ಮೈಸೂರಿಗೆ ಹೋಗಿ, ಅಲ್ಲಿನ ವಾತಾವರಣ, ಸೌಂದರ್ಯ ಕಂಡು ಹೆಮ್ಮೆ ಬರುತ್ತೆ. ಸಧ್ಯ ಇಲ್ಲಿ Apartment ಹುಚ್ಚುತನ ಇನ್ನೊ ಬಂದಿಲ್ಲ. ಹಳೆ ಕಟ್ಟಡಗಳನ್ನು ಒಡೆದಿಲ್ಲ, ರಸ್ತೆಯಲ್ಲಿ ಅಷ್ಟೇನೂ ಗಲಾಟೆ ಇಲ್ಲ. ಮುಂದೆ IT ಕಂಪನಿಗಳು ಇಲ್ಲಿ ಬಂದರೆ ಮೈಸೂರಿನ ಗತಿ ಬೆಂಗಳೂರಿನ ಹಾಗೆ ಅನ್ನುವ ನನ್ನ ಅಭಿಪ್ರಾಯ! (ದಯವಿಟ್ಟು Software ನವರು ನನ್ನ ಹತ್ತಿರ ಜಗಳ ಮಾಡಬೇಡಿ, ಇರೋ ವಿಚಾರ ಹೇಳುತ್ತಿದ್ದೇನೆ.)
ಅಪ್ಪಿ ತಪ್ಪಿ ನೀವು ರಾಜಕೀಯದ ವಿಚಾರ ಎತ್ತಿ ಬೇಡಿ, ನಾನು ಒಮ್ಮೆ ದೇಶದಲ್ಲಿ ಅಸಹಿಸ್ಣುತೆ ( intolerance ) ಹೆಚ್ಚಾಗಿದೆ ಅನ್ನುವ comment ಮಾಡಿದೆ. ನಮ್ಮ ಕೆಲವು ಸಂಬಂಧಿಕರು ನನ್ನ ಮೇಲೆ serious ಆಗಿ ಜಗಳಕ್ಕೆ ಬಂದರು, ಬಿಬಿಸಿನ ಬೈದರು, ನಿಮ್ಮ ಪತ್ರಿಕೆಗಳು "anti India" ಇನ್ನೂ colonial mind set ಹೋಗಿಲ್ಲ ಇತ್ಯಾದಿ, ಇತ್ಯಾದಿ. ಆದರೆ ಈಗ UK ಇಂತಹ ವಿಚಾರದಲ್ಲಿ ಎಷ್ಟು ಮುಂದುವರೆದಿದೆ ಅನ್ನುವ ಮಾಹಿತಿಯನ್ನು ಅವರಿಗೆ ಕೇಳುವ ಕುತೂಹಲ ಅಥವಾ ಉತ್ಸಾಹ ಇರಲಿಲ್ಲ.
ಇದ್ದ ಆರು ವಾರದಲ್ಲಿ, ಹೊರಗೆ , ಅಂದರೆ ಬೆಂಗಳೂರು ಬಿಟ್ಟು ಜಾಸ್ತಿ ಅನೇಕ ಕಾರಣಗಳಿಂದ ಹೋಗಲಿಲ್ಲ. ಆದರೆ ಹೆಸರಘಟ್ಟ ದಲ್ಲಿರುವ Horticulture Research Institute ಗೆ ಭೇಟಿ ಕೊಟ್ಟಿದ್ದು ಅದ್ಭುತವಾಗಿತ್ತು. ನಮ್ಮ ಮನೆಯಲ್ಲಿ ನಮ್ಮಿಬ್ಬರಿಗೂ ತೋಟಗಾರಿಕೆ ಮೇಲೆ ಆಸಕ್ತಿ ಇದೆ, ಇದರ ಬಗ್ಗೆ ಅನಿವಾಸಿಯಲ್ಲಿ ಹಿಂದೆ ಬರೆದಿದ್ದೇನೆ. ಈ ಸಂಸ್ಥೆ ೧೯೩೮ ರಲ್ಲಿ ಅಂದಿನ ಮೈಸೂರು ಸರ್ಕಾರ ಹಣ್ಣು ಮತ್ತು ತರಕಾರಿ ಸಂಶೋಧನೆಗೆ ಈ ಸಂಸ್ಥೆಯನ್ನು ಹೆಸರಘಟ್ಟದಲ್ಲಿ ಸ್ಥಾಪನೆ ಮಾಡಿದರು. ನಾಲ್ಮಡಿ ಕೃಷ್ಣರಾಜ ಓಡೆಯರ್ ಮಹಾರಾಜರು ರಾಜ್ಯಕ್ಕೆ ಮಾಡಿದ ಅನೇಕ ಸೇವೆಗಳಲ್ಲಿ ಇದೊಂದು. ಸುಮಾರು ೫೦೦ ಎಕರೆ ವಿಸ್ತರಣೆಯಲ್ಲಿ ಇರುವ ಸಂಸ್ಥೆ ಈಗ ಕೇಂದ್ರ ಸರ್ಕಾರದ Institute of Agricultural Research (IAR) ಗೆ ಸೇರಿದ್ದು. ಕೆಲವು ಹಣ್ಣುಗಳ ಮತ್ತು ತರಕಾರಿಯ ಬಗ್ಗೆ ಇಲ್ಲಿನ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಗಿಡಗಳಿಗೆ ಬರುವ ರೋಗ ಮತ್ತು ಅದರ ನಿವಾರಣೆಯ ರೀತಿ ರೈತರಿಗೆ ಮಾಹಿತಿ ಕೊಡುವ ಕೆಲವನ್ನು ಇಲ್ಲಿ ನಡೆಯುತ್ತದೆ. ಇವರ ಸಂಶೋಧನೆ ಅಂತರ ರಾಷ್ಟ್ರೀಯ ಪ್ರಶಂಸೆ ಪಡದಿದೆ ಅನ್ನುವುದು ಹೆಮ್ಮೆಯ ವಿಚಾರ. ಇಲ್ಲೇ ಬೆಳದ ಗಿಡ ಮತ್ತು ಬೀಜಗಳನ್ನ ಖರೀದಿ ಮಾಡಬಹುದು. ಅರ್ಕ (Arka ) ಈ ಸಂಸ್ಥೆಯ ವ್ಯಾಪಾರ ಗುರುತು (Trade Mark ). ಈ ಹೆಸರಿನಲ್ಲಿ ಗಿಡಗಳನ್ನು ಮಾರುವುದರಿಂದ ಜನಗಳಿಗೆ (ರೈತರಿಗೆ) ಇದು ಈ ಸಂಸ್ಥೆಯಿಂದ ಬಂದಿದ್ದು ಅಂಬ ಭರವಸೆ ಬರುತ್ತೆ. ಗುಣಮಟ್ಟದ ಬಗ್ಗೆ( Quality ) ಗೊಂದಲ ಇರುವುದಿಲ್ಲ. IAR ಸೇರಿದ ಸಂಸ್ಥೆಗಳು ಸರ್ಕಾರಕ್ಕೆ ೧೩೦೦೦ ಕೋಟಿ ಆದಾಯ ತರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇಲ್ಲೇ ಬೆಳೆದ ಗಿಡಗಳ ಬೀಜಗಳನ್ನುಖರೀದಿ ಮಾಡ ಬಹುದು. ೧೫ ರೀತಿಯ Bougainvillea ಮತ್ತು ಗುಲಾಬಿ ಹೂವುಗಳ ತೋಟ ನೋಡುವುದಕ್ಕೆ ಸುಂದರ ವಾಗಿತ್ತು. ಅಲ್ಲಿ ಕೆಲಸ ಮಾಡುವ ಸ್ಥಳೀಯ ಮಹಿಳೆಯಯರು ಹೈಬ್ರಿಡ್ ಮಾವಿನ ಸಸಿಗಳನ್ನು ಮಾಡುವ ಕೌಶಲ್ಯ (Skill ) ವನ್ನು ಮೆಚ್ಚಬೇಕು. IAR ಸೇರಿದ ಸಂಸ್ಥೆಗಳಿಂದ ಸರ್ಕಾರಕ್ಕೆ ೧೩೦೦೦ ಕೋಟಿ ರೂಪಾಯಿ ಆದಾಯ ಎಂದು ಅಂದಾಜು ಮಾಡಲಾಗಿದೆ.
ಮಾರ್ಚ್ ತಿಂಗಳಲ್ಲಿ ಬಿಸಿಲು ಹೆಚ್ಚು, ಹೊರಗೆ ಹೋಗುವುದು ಕಷ್ಟ , ಅಲ್ಲದೇ ಇಲ್ಲಿ ನಮ್ಮ ಮನೆ ಯೋಚನೆ ಬರುವುದು ಸಹಜ, ಆದ್ದರಿಂದ ಆರು ವಾರಕ್ಕೆ ಮೀರಿ ಅಲ್ಲಿರುವುದು ನಮಗೆ ಕಷ್ಟವೇ . ಪುನಃ ಈ ವರ್ಷ ಬೆಂಗಳೂರಿಗೆ ಹೋಗುವ ನಿರೀಕ್ಷೆ ಇದೆ.
ರಾಮಮೂರ್ತಿ
ಬೇಸಿಂಗ್ ಸ್ಟೋಕ್
6 thoughts on “ಬೆಂಗಳೂರಿನಲ್ಲಿ ಆರು ವಾರ – ಬೇಸಿಂಗ್ ಸ್ಟೋಕ್ ರಾಮಮೂರ್ತಿ ಲೇಖನ”
Author’s reply:
ಶ್ರೀವತ್ಸ ಮತ್ತು ಪ್ರಸಾದ್ ಅವರ ಕಾಮೆಂಟ್ಸ್ ಗಳಿಗೆ ತುಂಬಾ ವಂದನೆಗಳು. ನಿಜ ನನ್ನ ಮೆಟ್ರೋ ಪ್ರಯಾಣ , ಪ್ರಸಾದ್ ಹೇಳಿದಾಗೆ , a confused ಬೋರೇಗೌಡ ಬೆಂಗಳೂರಿಗೆ ಹೋದ ಹಾಗೆ ಇತ್ತು ಎನ್ನಬಹುದು. ಈಚೆಗೆ ನಾನು ಲಂಡನ್ underground ನಲ್ಲಿ
ಪ್ರಯಾಣ ಮಾಡಿಲ್ಲ ಬಹುಷಃ ಇನ್ನೂ paper ticket ಇನ್ನೂ ಇರಬಹುದು .
ಇಂಡಿಯ ತರಹದ Emerging ದೇಶಗಳಲ್ಲಿ ಒಂದು ಅನುಕೂಲ ಅಂದರೆ ಆಧುನಿಕ technology ಯನ್ನು ಬೇಗ ಅವಳಿಸಿಕೊಳ್ಳಬಹುದು.
ಒಟ್ಟಿನಲ್ಲಿ ಅನೇಕ ರೀತಿಗಳಲ್ಲಿ ಇಂಡಿಯ ಮುಂದೆವರೆಯುತ್ತಿದೆ , ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚು ಟೆಕ್ನಾಲಜಿ awareness ಇರುವುದನ್ನ ಕಾಣಬಹುದು.
ಬೇಸಿಂಗ್ ಸ್ಟೋಕ್ ರಾಮಮೂರ್ತಿ
Nice article which sums up most NRI’s experience in current Bangalore ..
May be because of the population and coupled with beautiful warm sunshine everything there seems so vibrant and full of life. People are so active – cultural programmes to suit each and everyone. Sounds of music and drums…people celebrating events in style- and spending money like water. Upper Middle-class Kannadiga’s life style totally westernised …
And yes , street vendors have gone digital for payments…But at least there is one satisfaction for us NRI’s … We can pay them cash without the need to bargain …
Information on ‘Horticulture Research Institute’ is very useful, Thanks
ರಾಮಮೂರ್ತಿಯವರ ಬೆಂಗಳೂರಿಗೆ ಮರುಪ್ರಯಾಣದ ವಿವರಗಳು ಕುತೂಹಲಕರವಾಗಿದೆ. ಅಲ್ಲಿಯ Mr/Ms Know it all ಕೈಯಲ್ಲಿ ಸಿಕ್ಕಿ ಒದ್ದಾಡುವದರ ಬಗ್ಗೆ ಸಮಯೋಚಿತ ಎಚ್ಚರ ಕೊಟ್ಟಿದ್ದಕ್ಕೆ ಸಹ ಧನ್ಯವಾದಗಳು. ಅದು ಎರಡು mind set ಗಳ ತಾಕಲಾಟ. ಪ್ರಸಾದರು ಹೇಳಿದಂತೆ ಕಾಲಕ್ರಮೇಣ ಬದಲಾದೀತು. ನಿಮ್ಮ ತೋಟಗಾರಿಕೆಯಲ್ಲಿಯ ಆಸ್ಥೆಯಿಂದಾಗಿ ಹೆಸರಘಟ್ಟ ವಿಷಯ ತಿಳಿಯಿತು. ಬೋಗೇನ್ವಿಲ್ಲಾ ತೋಟ ರಮಣೀಯವಾಗಿ ಕಾಣಿಸುತ್ತದೆ. ಇನ್ನೊಂದು ವರ್ಷ್ ADನಲ್ಲಿ ಮತ್ತೆ ಹೋಗಿ ಬಂದ ಮೇಲೆ ಬರೆಯಿರಿ!
ರಾಮಮೂರ್ತಿ ಅವರ ‘ಬೆಂಗಳೂರಿನಲ್ಲಿ ಆರುವಾರ’ ಬಹಳ ಲವಲವಿಕೆಯ ಓದು. ನಾನು ಕೂಡ ಇದೆ ಸಮಯದಲ್ಲಿ ಸುಮಾರು ಆರು ವಾರಗಳನ್ನು ಕಳೆದಿದ್ದು ನನ್ನ ಅನುಭವ ಕೂಡ ಇದೇ ಆಗಿದೆ. ೩-೪ ದಶಕಗಳ ಹಿಂದೆ ನಾವು ಬಿಟ್ಟುಬಂದ ನಗರ ಹೇಗೆ ತೀಕ್ಷ್ಣವಾಗಿ ಬದಲಾಗಿದೆ ಎನ್ನುವುದನ್ನು ಈ ಲೇಖನ ಮನದಟ್ಟು ಮಾಡುತ್ತದೆ. ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಮುನ್ನಡೆಯುತ್ತಿರುವ ವಿಚಾರ ನಮಗೆಲ್ಲ ಹೆಮ್ಮೆ ತರುವುದರ ಜೊತೆ ಅಚ್ಚರಿಯನ್ನು ಉಂಟು ಮಾಡಿದೆ. ಓಲಾ ಊಬರ್ಗಳು ಬೆಂಗಳೂರಿನ ಸ್ಥಳೀಯ ಬಡಾವಣೆಗಳಲ್ಲಿ ಸಂಚರಿಸಲು ಅನುಕೂಲವಾಗಿದ್ದರೆ ಮೆಟ್ರೋ ನಗರದ ದೂರ ತಾಣಗಳಿಗೆ ಪ್ರಯಾಣಮಾಡಲು ಅನುಕೂಲಕರ ಎಂಬ ವಿಚಾರ ಒಪ್ಪುತ್ತೇನೆ. ಬಹಳ ವರ್ಷಗಳ ತರುವಾಯ ರಾಮಮೂರ್ತಿ ಅವರು ಬೆಂಗಳೂರಿಗೆ ತೆರಳಿದ್ದು ಕ್ಷಿಪ್ರಬದಲಾವಣೆಗಳು ಅವರಿಗೆ ಸೋಜಿಗವೆನಿಸಿರಬಹುದು. ಹಿಂದೆ ಹಳ್ಳಿಯಿಂದ ಬೆಂಗಳೂರಿಗೆ ಬಂದಾಗ “ಬೋರೇಗೌಡ ಬೆಂಗಳೂರಿಗೆ ಬಂದ” ಎಂಬ ಮುಗ್ಧ ಭಾವನೆ ಮೂಡಿಬರುತ್ತಿತ್ತು. ಈಗ ಇಂಗ್ಲೆಂಡಿನಿಂದ ಬೆಂಗಳೂರಿಗೆ ಹೋದಾಗ ಆ ಭಾವನೆ ಉಂಟಾಗುತ್ತಿರುವುದು ಒಂದು ವಿಚಿತ್ರ ಅನುಭವವೇ ಸರಿ. ಇಂಗ್ಲೆಂಡ್ ಹಲವು ವಿಚಾರದಲ್ಲಿ ಬೆಂಗಳೂರಿಗಿಂತ ಹಿಂದೆ ಉಳಿದಿದೆ! ಕೊನೆಯದಾಗಿ ರಾಮ ಮೂರ್ತಿ ಅವರು ಗಮನಿಸಿದ ಹಾಗೆ ಅಸಹಿಷ್ಣುತೆ ಭಾರತದಲ್ಲಿ ಹೆಚ್ಚಾಗಿದೆ, ಜನರಿಗೆ ಯಶಸ್ಸಿನ ಅಮಲು ತಟ್ಟಿದೆ. ನಮ್ರತೆ ಮತ್ತು ವಿನಯಶೀಲತೆಗೆ ಹೆಸರಾಗಿದ್ದ ಕರ್ನಾಟಕದಲ್ಲೂ ಈಗ ದೇಶಭಕ್ತಿಯ ಹೆಸರಿನಲ್ಲಿ ಭಾರತವೇ ಶ್ರೇಷ್ಠ, ನಮ್ಮ ದೃಷ್ಟಿ ಕೋನವೇ ಸರಿ, ಎಂಬ ಭಾವನೆ ಮೂಡುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿರುವ ನೈತಿಕ ಪ್ರಜ್ಞೆ ಕಾಣೆಯಾಗುತ್ತಿದೆ. ಪ್ರಗತಿ ತರುವ ಕೆಲವು ಅನಿವಾರ್ಯ ಪರಿಣಾಮಗಳಲ್ಲಿ ಇದು ಒಂದು. ಜನರ ಅರಿವು ಹೆಚ್ಚಾದಂತೆ ಮುಂದಕ್ಕೆ ಸಹಿಷ್ಣುತೆ ಭಾವನೆ ತನಗೆತಾನೇ ಮತ್ತೆ ಮರಳಿ ಬರುತ್ತದೆ. ಬ್ರಿಟನ್ ಸಾಮ್ರಾಜ್ಯವನ್ನು ಒಳಗೊಂಡಂತೆ ಪ್ರಪಂಚದಲ್ಲಿ ನಡೆದ ವಿದ್ಯಮಾನಗಳನ್ನು ಗಮನಿಸಿದಾಗ ಈ ಅಸಮತೆ, ಗರ್ವ ಒಂದು ತಾತ್ಕಾಲಿಕ ಹಂತ. ಸಮಯ ಸರಿದಂತೆ ಜನರ ಆಲೋಚನೆಗಳು ಬದಲಾಗುತ್ತವೆ. ಸಮಾಜದ ಮೌಲ್ಯಗಳು ಬದಲಾಗುತ್ತವೆ. ಒಟ್ಟಾರೆ ಈ ಲೇಖನ ಇತ್ತೀಚಿನ ಬೆಂಗಳೂರಿನ ಪರಿಚಯ ಒದಗಿಸುವಲ್ಲಿ ಯಶಸ್ವಿಯಾಗಿದೆ.
Bangalurinalli aruvara Is interesting writing, with of blend of old Bangalore , our Gandhi bazar , pavement chaos, vidyarthe bavan Dosa, new modern one with digitalisation, namma metro, very interesting to note that how attitude of our youngsters has changed, eating habits.etc . I am from Bangalore grew up in that area. Enjoyed reading it.
Desaiavara photography of Prince Charles 3 is shows his passion for photography .The background to Charles photo how and when, where it was taken , is narrated in a light hearted tone. Enjoyed reading.
Thank you, Vathsala avare for reading and commenting about the Prince Charles turned into King Charles III. It was a stroke of luck. I got in touch with my colleague from the past (after tracing him with great difficulty after the article was published) and asked him about the super- 8 film he had used to cover the visit. But unfortunately he cannot find it. So it is worth preserving everything and hoarding like a magpie! Thanks again for your interest. Shrivatsa Desai

LikeLike