ನಲ್ಮೆಯ ಓದುಗರಿಗೆ ನಮಸ್ಕಾರ.
‘ಕನ್ನಡ ನಾಡಿನ ವೀರ ರಮಣಿಯ
ಗಂಡುಭೂಮಿಯ ವೀರನಾರಿಯ
ಚರಿತೆಯ ನಾನು ಹಾಡುವೆ’..
ಈ ಗೀತೆ ಆಕಾಶವಾಣಿಯಲ್ಲಿ ಹರಿದು ಬರುತ್ತಿದ್ದರೆ ಮಕ್ಕಳಾದ ನಮಗೆ ಮೈಯೆಲ್ಲಾ ರೋಮಾಂಚನ..ಧಮನಿ ಧಮನಿಯಲ್ಲೂ ನಾಡಭಕ್ತಿಯ ಸಂಚಲನ. ಈ ಚಿತ್ರದುರ್ಗ, ಕೋಟೆ , ಮದಕರಿನಾಯಕರನ್ನು ಜನ ಮಾನಸದಲ್ಲಿ ಶಾಶ್ವತವಾಗಿಸಿದ್ದೇ ನಮ್ಮ ತ.ರಾ.ಸು. ಅವರು. ಅದೆಂಥ ಅದ್ಭುತ ಪಾತ್ರಪ್ರಪಂಚದ ಸೃಷ್ಟಿಕರ್ತ !! ಹಂಸಗೀತೆಯ ಭೈರವಿ ವೆಂಕಟಸುಬ್ಬಯ್ಯನವರನ್ನು , ದುರ್ಗಾಸ್ತಮಾನದ ಓಬವ್ವ ನಾಗತಿಯನ್ನು ಮರೆಯಲಾದೀತೇ? ಐತಿಹಾಸಿಕ ಕಾದಂಬರಿಗಳ ನಿಜವಾದ ಛವಿ ಅರಿಯಬೇಕಾದರೆ ಅವರ ‘ನೃಪತುಂಗ'ದಂಥ ಕಾದಂಬರಿಗಳನ್ನೋದಬೇಕು. ನಾಡು ತನ್ನ ಪುಣ್ಯಪ್ರಭೆಯಿಂದ ಕಂಡ ಅಂಥ ಅಸಾಮಾನ್ಯ ಸಾಹಿತಿಗೆ ಜನುಮದಿನದ (ಏಪ್ರಿಲ್ 21, 1920) ಶುಭಾಶಯಗಳು.
‘ಬೇಸನ್ ಕಿ ಸೊಂಧಿ ರೋಟಿ ಪರ್ ಖಟ್ಟಿ ಚಟ್ನಿ ಜೈಸಿ ಮಾ
ಯಾದ್ ಆತಿ ಹೈ ಚೌಕಾ -ಬಾಸನ್
ಚಿಮಟಾ ಫುಕನಿ ಜೈಸಿ ಮಾ
ಆಧಿ ಸೋಯಿ ಆಧಿ ಜಾಗಿ
ಥಕಿ ದೋಪೆಹರ್ ಜೈಸಿ ಮಾ...
ಪಂಕಜ್ ಉದಾಸ್ ರ ಗಜಲ್ ನಂತೆ ಯಾವ್ಯಾವುದೋ ಕಾರಣಕ್ಕೆ ಎಲ್ಲೆಲ್ಲೋ ಕಾಡುತ್ತದೆ ಅಮ್ಮನ ನೆನಪು ನಮ್ಮೆಲ್ಲರಿಗೂ. ನಮ್ಮನ್ನು ಹೆತ್ತು, ಹೊತ್ತು ತಿರುಗಿದ ಅಮ್ಮನ ಬೆನ್ನು ಬಾಗಿ, ಮೊಣಕಾಲು ಮುಷ್ಕರ ಹೂಡಿದಾಗ, ಬೇಕೆಂದಾಗ ಅವರ ಸಮಯಕ್ಕೆ ಆಗದ ನಮ್ಮಂಥ ಅನಿವಾಸಿಗಳ ಆ ‘ಗಿಲ್ಟ್’ ಬಹುಶ: ಬೇರಾರಿಗೂ ಸುಲಭಕ್ಕೆ ಅರ್ಥವಾಗುವಂಥದ್ದಲ್ಲ. ಆ ತಳಮಳ, ತಹತಹಿಕೆಗಳನ್ನೂ, ಅದಕ್ಕೆ ಕಂಡುಕೊಂಡ ತಾತ್ಕಾಲಿಕ ಉಪಶಮನಗಳನ್ನೂ ತುಂಬ ಮಾರ್ಮಿಕವಾಗಿ ಮನಮುಟ್ಟುವಂತೆ ತಮ್ಮ ಚಿಕ್ಕ-ಚೊಕ್ಕ ಲೇಖನದಲ್ಲಿ ಚಿತ್ರಿಸಿದ್ದಾರೆ ಉಮೇಶ ನಾಗಲೋತಿಮಠ ಅವರು.
ಜೀವನ ಚಕ್ರದಲ್ಲಿ ಏರು-ಇಳಿವು, ನೋವು-ನಲಿವು, ಸರಸ-ವಿರಸ, ಸಿಹಿ-ಕಹಿ ಎಲ್ಲ ಇರತಕ್ಕದ್ದೇ. ಮನವ ಮಾಗಿಸಲು, ಹಣ್ಣಾಗಿಸಲು ಪ್ರಕೃತಿ ಹೂಡಿದ ತಂತ್ರವಿರಬಹುದೇನೋ?! ಬನ್ನಿ..ತಾವೇ ರಚಿಸಿ ಜೊತೆಗೆ ಸುಂದರವಾದ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ ಮೇಟಿಯವರು. ಅವರ ‘ ಜೀವನ ಚೈತ್ರ’ ದಲ್ಲೊಂದು ಜೀಕು ಜೀಕಿ ಬರೋಣ. ಹಾಡಿದವರಾರೆಂದಿರಾ? ಚೈತ್ರದಲ್ಲಿ ಕೋಗಿಲೆ ತಾನೇ ಹಾಡುವುದು? ಅನಿವಾಸಿಯ ಕೋಗಿಲೆ ಅಮಿತಾ ರವಿಕಿರಣ ಅವರ ದನಿಯಲ್ಲಿ.
ಓದಿ..ಆಸ್ವಾದಿಸಿ..ಎರಡು ಸಾಲು ಅನಿಸಿಕೆ ಬರೆಯಲು ಮರೆಯದಿರಿ.
~ ಸಂಪಾದಕಿ
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು
ನನ್ನ ವಯಸ್ಸಾದ ತಾಯಿಯನ್ನ ಊರಲ್ಲೇ ಬಿಟ್ಟು ವಿದೇಶಕ್ಕೆ ಕಾರಣಾಂತರದಿಂದ ಬಂದ ವೈದ್ಯ ನಾನು.ತಾಯಿಯನ್ನ ನನ್ನಲ್ಲಿಗೆ ಕರೆಸಿಕೊಂಡರೂ ಅವಳಿಗೆ ಇಲ್ಲಿ ಯಾರೂ ಮಾತನಾಡಲು ಇಲ್ಲವೆಂದು ಎರುಡು ಮೂರು ತಿಂಗಳಲ್ಲೇ ಬೇಸರವಾಗಿ ಮರಳಿ ತನ್ನ ಊರಿಗೆ ಹೊರಟು ನಿಲ್ಲುತ್ತಿದ್ದಳು.
ಕೊರೊನ ನಂತರ ಊರಲ್ಲಿ ಒಬ್ಬಳೇ . ಪಕ್ಕದ ಮನೆಯವರ ಹತ್ತಿರ ಮಾತನಾಡಬಹುದು ಅಷ್ಟೇ .
ಇದನ್ನೇ ವಿಷಯ ತಲೆಯಲ್ಲಿ ಇಟ್ಟುಕೊಂಡು ವೈದ್ಯನಾದ ನಾನು ಆಸ್ಪತ್ರೆಗೆ ಕೊರೊನ ರೋಗಿಗಳ ಸೇವೆಗೆ ಹೋಗಿದ್ದೆ. ಅಂದು ಇಲ್ಲಿಯ ಬಿಳಿ ಅಜ್ಜಿ (ಗಂಟಲು ಕ್ಯಾನ್ಸರ ಚಿಕಿತ್ಸೆ ಮುಗಿದ ಮೇಲೆ )ಮೂಗಿನಲ್ಲಿ ಹಾಕಿದ ನಳಿಕೆ ಯಾವುದೊ ಕಾರಣದಿಂದ ಬಂದ ಆಗಿ ೧ದಿನ ಪೂರ್ತಿ ಅನ್ನ ನೀರಿಲ್ಲದೆ ಬಳಲಿ ಆಸ್ಪತ್ರೆಗೆ ಬಂದಿದ್ದಳು .
ನಾನು ನನ್ನ ಸ್ವ ರಕ್ಷಣಾ ಕವಚ (personal protective equipment)ಧರಿಸಿ ಅವಳಿದ್ದ ಕೊಠಡಿಗೆ ಹೋಗಿ ಮಾತನಾಡಿಸಿದಾಗ ಅವಳು ನನ್ನ ಕೈ ಗಟ್ಟಿಯಾಗಿ ಹಿಡಿದು “ಅಯ್ಯೋ ಮಗನೇ ಬೇಗ ಬಂದಿದಕ್ಕೆ ಧನ್ಯವಾದಗಳು , ೧-೨ ದಿನದಿಂದ ನನ್ನ ಹೊಟ್ಟೆಗೆ ಏನೂ ನೀರೂ ಆಹಾರ ಹೋಗಿಲ್ಲ , ದಯಮಾಡಿ ಬೇಗ ಇದಕ್ಕೆ ಪರಿಹಾರ ಹುಡುಕು , ನನಗೆ ಬಹಳ ಭಯವಾಗುತ್ತಿದೆ “ಎಂದಳು . ನಾನು ಅವಳನ್ನು ನೋಡುವಾಗ ನನ್ನ ತಾಯಿಯ ಮುಖವೇ ಕಾಣತೊಡಗಿತು ನಾನು ವೈದ್ಯನಾದರೂ ದೇವರನ್ನು ನಂಬುವ ಆಸ್ತಿಕ . ನನ್ನ ಕೆಲಸ ಪ್ರಾರಂಭಿಸುವ ಮೊದಲು ಮನದಲ್ಲೇ ದೇವರನ್ನ ಪ್ರಾರ್ಥಿಸಿ “ನೀನೇ ಈ ಅಜ್ಜಿಯ ಚಿಕಿತ್ಸೆ ಮಾಡುತ್ತಿರುವೆ ಭಗವಂತಾ , ನಾನು ನಿಮಿತ್ತ ಮಾತ್ರ “ ಎಂದೆ . ಅವಳ ಕೈಗಳು ನನ್ನ ಕೈ ಗಟ್ಟಿಯಾಗಿ ಹಿಡಿದುಕೊಂಡಿದ್ದವು . ನನಗೆ ನನ್ನ ತಾಯಿಯೇ ನನ್ನ ಕೈ ಹಿಡಿದುಕೊಂಡಿದ್ದಾಳೆ ಎಂದೆನಿಸತೊಡಗಿತು. ನನ್ನ ಕೆಲಸ ಪ್ರಾರಂಭಿಸಿದೆ
ನಾನು ಕ್ಷ ಕಿರಣ ಪರೀಕ್ಷೆ , ಅಂತರದರ್ಶಕ ಪರೀಕ್ಷೆ , ರಕ್ತ ಪರೀಕ್ಷೆ ಇತ್ಯಾದಿ ಮಾಡಿ ಕ್ಯಾನ್ಸರ ಗಡ್ಡೆ ಏನಾಗಿದೆ ಎಂದು ತಿಳಿದುಕೊಂಡು ಕೊನೆಗೆ ಅವಳಿಗೆ ಹೊಸ ನಳಿಕೆಯನ್ನು ಬಹಳ ಜಾಗರೂಕತೆಯಿಂದ ಹಾಕಿ ಅವಳ ಹೊಟ್ಟೆಗೆ ಅನ್ನ ನೀರು ಹೋಗುವಂತೆ ಮಾಡಿದೆವು .
ಚಿಕಿತ್ಸೆ ಫಲಕಾರಿಯಾಗಿ ಆ ಮಹಾಮಾತೆ ನನ್ನ ಕೈ ಹಿಡಿದು ತನ್ನ ತುಟಿಗಳಿಂದ ಚುಂಬನದ ಮಳೆಗರೆದು ಧನ್ಯವಾದ ಹೇಳಿ ನನ್ನ ಆಶೀರ್ವದಿಸಿದಳು. . ಅವಳ ಆಶೀರ್ವಾದದ ಸ್ಪರ್ಶ ನಾನು ಹಾಕಿಕೊಂಡ ಎರೆಡೆರೆಡು ಗಾವ್ನ್ ದಾಟಿ ಬಂದು ನನಗೆ ತಲುಪಿದಂತೆ ಅನ್ನಿಸಿತು . ನನಗೋ ಚಿಕಿತ್ಸೆ ಫಲಕಾರಿಯಾದ ಖುಷಿ , ನನ್ನ ತಾಯಿ ದೂರದಲ್ಲಿರುವ ದುಃಖ , ಆ ಅಜ್ಜಿಯ ಪ್ರೀತ್ಯಾಶೀರ್ವಾದ , ಈ ಎಲ್ಲವೂ ಒಟ್ಟಿಗೆ ಬಂದು ಕಣ್ಣಂಚು ಒದ್ದೆಯಾದವು .
ದೇವರು ನೀಡಿದ್ದ ಸಂದೇಶ ಬಲು ಸ್ಪಷ್ಟವಾಗಿತ್ತು .
ನಮ್ಮಲ್ಲಿ ಅನೇಕರು ನಮ್ಮ ಊರು ಬಿಟ್ಟು ಬೇರೆ ಊರಿಗೆ , ದೇಶ ಬಿಟ್ಟು ಬೇರೆ ದೇಶಕ್ಕೆ ಕಾರಣಾಂತರಗಳಿಂದ ಚಲಿಸಿದ್ದೇವೆ , ನೆಲೆಸಿದ್ದೇವೆ . ನಮ್ಮಗಳ ತಂದೆ ತಾಯಂದಿರು ಹಲವು ಕಾರಣದಿಂದ ನಮ್ಮಗಳ ಜೊತೆ ಇರದಿದ್ದರೂ , ಅವರ ಹಾರೈಕೆ , ಆಶೀರ್ವಾದ ನಮ್ಮ ಮೇಲೆ ಸದಾ ಇರುತ್ತದೆ . ಹಾಗೆಯೇ ನಮ್ಮ ಮನದ ಮಿಡಿತ , ಪ್ರಾರ್ಥನೆ ಅವರಿಗಾಗಿ ಸದಾ ಇರುತ್ತದೆ .
ನಮ್ಮೆಲ್ಲರ ತಂದೆ-ತಾಯಿ , ಗುರು ಹಿರಿಯರನ್ನು ಸದಾ ದೇವರು ಆಯುರಾರೋಗ್ಯದಿಂದ ಇಡಲಿ ಎಂಬುದೇ ನಮ್ಮೆಲ್ಲರ
ಆಶಯವಲ್ಲವೇ ?
~ ಇಂಗ್ಲೆಂಡ ಕನ್ನಡಿಗ
Dr Umesh Nagalotimath
ಜೀವನ ಚೈತ್ರ
ರಚನೆ ಹಾಗೂ ಸಂಗೀತ ಸಂಯೋಜನೆ ಶಿವ್ ಮೇಟಿ, ಗಾಯನ – ಅಮಿತ ರವಿಕಿರಣ
ಗೌರಿಯವರೆ ನಿಮ್ಮ ಸಂಪಾದಕೀಯ ಬಹಳ ಅಥ್ರಪುೂಣ ವಾಗಿದೆ. ನಾನು ತ.ರ.ಸು ಪುಸ್ರಕಗಳನ್ನು ಓದಿ ನಮ್ಮ ನಾಡಿನ ಚರಿತ್ರೆಯನ್ನು ಅರಿತು ಹೆಮ್ಮೆ ಪಟ್ಟವಳು. ಓನಕೆ ಓಬವ್ವ ನನ್ನ favourite. ಉಮೇಶರವರ ಕಳಕಳಿ ಚಿರಪರಿಚಿತ. ಹತ್ತಾರು ವರುಷಗಳ ಹಿಂದೆ ಬಿಟ್ಟುಬಂದ ತಂದೆ ತಾಯಿ ಯಿನ್ನಲ್ಲ. ಏಲ್ಲಾ ಬಂದುಬಳಗವನ್ನು ತೊರೆದು ಬಂದ guilt, and we are not there to help when they need us.
That feelings will never go away. One way of coping with the feeling is to help other people, In their distress and get satisfaction. Umesh ರವರು ಚಿನ್ನಾಗಿ ಚಿತ್ರಿಸಿದ್ದಾರೆ. ಅಮಿತರವರು ಮೇಟಿಯವರ ಕವನ ಸಿಹಿ,ಕಹಿ ಜೀವನದ cycleನ್ನು ಬಾವಪುಣ್ರವಾಗಿ ಹಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು VathsalaRamamurthy
ತರಾಸು ಅವರ ಜನ್ಮದಿನದ ನಪದಲ್ಲಿ ಅವರ ನೆನಪನ್ನು ಕೆಲವೇ ವಾಕ್ಯಗಳಲ್ಲಿ ವಿದ್ವತ್ಪೂರ್ಣವಾಗಿ ಗೌರಿಯವರು ಬರೆದಿದ್ದಾರೆ.
ಉಮೇಶ ಅವರಿಗೆ ಸ್ವಾಗತ. ತಾಯಿಯ ಬಗ್ಗೆ, ತಾಯಿಯನ್ನು ತಾಯ್ನಾಡನ್ನು ಬಿಟ್ಟು ಬಹುದೂರ ಬಂದಿರುವ ಅನಿವಾಸಿಗಳ ಗಿಲ್ಟ್ ಅನ್ನು ನೈಜಘಟನೆಯ ಮೂಲಕ ಸರಳವಾಗಿ ಬರೆದಿದ್ದಾರೆ.
ಮೇಟಿಯವರು ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ತುಂಬ ಸೊಗಸಾಗಿದೆ. ಅಮಿತಾ ಅವರ ಹಾಡುಗಾರಿಕೆಯ ಬಗ್ಗೆ ಎರಡು ಮಾತೇ ಇಲ್ಲ. ಇದೊಂದು ಪೂರ್ಣಪ್ರಮಾಣದ ಹಾಡಾಗಿ ಹೊರ ಬರಲಿ ಎನ್ನುವುದು ನನ್ನ ಕೋರಿಕೆ.

LikeLike
ಸಮಯೋಚಿತವಾಗಿ ಸಂಪಾದಕರ ಲೇಖನಿಯಿಂದ ಮೂಡಿಬಂದ ತರಾಸು ಸ್ಮರಣೆ ದುರ್ಗಾಸ್ತಮಾನದ ನೆನಹುಗಳನ್ನು ಹಿತವಾಗಿ ಕೆದರಿದೆ.
ಮೇಟಿಯವರ ಅರ್ಥಪೂರ್ಣ ಹಾಡನ್ನು ಭಾವಪೂರ್ಣವಾಗಿ ಶ್ರೋತ್ರರ ಕಿವಿಗೆ ಹಿತವಾಗಿ ಹದವಾಗಿ ಮತ್ತೆ ಮತ್ತೆ ಬೇಕೆನಿಸುವಂತೆ ಸುರಿದಿದ್ದಾರೆ ಅಮಿತಾ.
ಉಮೇಶರ ಅನುಭವ ವೃದ್ಧರ ಆರೈಕೆ ಮಾಡುವ ಅನಿವಾಸಿ ವೈದ್ಯರಿಗೆ – ದಾದಿಯರಿಗೆ ಸಹಜ. ಅವರು ಆ ಭಾವನೆಗಳನ್ನು ಮನ ಮಿಡಿಯುವಂತೆ ಹಂಚಿಕೊಡಿದ್ದಾರೆ.
– ರಾಂ

– ಕೇಶವ
LikeLike