ಕವಿತೆ: ಹೋಗಿ ಬರ್ತೀಯಾ ಅಪ್ಪ!

 ಆತ್ಮೀಯ ಓದುಗರೇ,
ಈ  ವಾರ  ವಾರ 'ಅನಿವಾಸಿಯಲ್ಲಿ ಡಾ ಶ್ರೀಕಾಂತ್ ಕೃಷ್ಣಮೂರ್ತಿ ಅವರು ರಚಿಸಿದ ''ಹೋಗಿ ಬರ್ತೀಯ ಅಪ್ಪ''  ಎನ್ನುವ  ಕವನವಿದೆ. ಮನಸ್ಸನ್ನು ಆರ್ದ್ರಗೊಳಿಸುವ  ಈ ಕವಿತೆಯ ಭಾವ ಖಂಡಿತ ಓದುಗರನ್ನು ಕಾಡುತ್ತದೆ. ಅದನ್ನು ಅವರೇ ಆಂಗ್ಲ ಭಾಷೆಯಲ್ಲಿ ಸಹ ಅಷ್ಟೇ ಸೊಗಸಾಗಿ ಅನುವಾದ ಮಾಡಿ ಕೊಟ್ಟಿದ್ದಾರೆ.ದಯವಿಟ್ಟು ಓದಿ ಪ್ರತಿಕ್ರಿಯಿಸಿ. ನಿಮ್ಮ ಕಥೆ,ಕವನ,ಅನುಭವ-ಪ್ರವಾಸ ಕಥನ, ಚಿತ್ರ- ಬರಹಗಳನ್ನು ಅನಿವಾಸಿಯ ಮಿಂಚಂಚೆ ವಿಳಾಸಕ್ಕೆ ತಪ್ಪದೆ ಕಳಿಸುತ್ತಿರಿ. ಅನಿವಾಸಿ ಅಕ್ಷರ ವೃಕ್ಷ ಸದಾ ಹಸಿರಾಗಿರಲಿ ಎಂಬ ಸದಾಶಯದೊಂದಿಗೆ. ಈ ವಾರದ ಓದಿಗೆ ನಿಮಗಿದೋ ಸ್ವಾಗತ.

-ಸಂಪಾದಕಿ 
ಹೋಗಿ ಬರ್ತೀಯಾ ಅಪ್ಪ!

ಚಳಿಯೆಂದು ನಡುಗಿ ಕಂಬಳಿಯನ್ನು ಹೊದೆಯುತ್ತ
ಕುಳಿತಿದ್ದೆ ಅಪ್ಪಾ ಈಗ್ಯಾಕೆ- ಮಲಗಿದ್ದೀ
ಚಳಿಪೆಟ್ಟಿಕೆಯಲಿ ಜಡ್ಡಾಗಿ

ಥಂಡಿ ತುಂಬಿದ ನಿನ್ನ ಕೊಂಡೊಯ್ದು ಮೆಲ್ಲಾಗೆ
ಬಂಡೀಲಿ ಇಡುತಾ ಬಾಗಿಲು- ಕಾಲನ್ನ
ತುಂಡಿಸೀತೆಂದು ತೊಡೆಕೊಟ್ಟೆ

ಹಿಡಿ ಮಂತ್ರ ಹೇಳಾಯ್ತು ಮಡಕೆಯೂ ಒಡೆದಾಯ್ತು
ಮುಡಿಕೊಟ್ಟು ಕೊಳ್ಳಿ ಮುಟ್ಟಿಸಿದಾಕ್ಷಣ
ಸುಡುತಿದೆ ಎದೆಯೂ ಚುರ್ಕ್ಕಂತ
ಬಾಳೆಲ್ಲ ಎತ್ತರದಾಳಿದ್ದೆ ಯಾತಕ್ಕೆ
ಭಾಳ ಸೋತಿದ್ದೀ ಅಪ್ಪಾ ನೀ- ಈವತ್ತು
ಮೂಳೆಯ ತುಣುಕು ಮೂರಾದೆ

ಹರಿಗೋಲ ಒಳಗಿಂದ ತಿರುಗಿಯೂ ನೋಡದೆ
ಹರಿಬಿಟ್ಟೆನಪ್ಪಾ ಪರವೂರಿಗೊಯ್ವಳು
ಕರಕೊಂಡು ನಿನ್ನಾ ಕಾವೇರಿ

 ಶ್ರೀಕಾಂತ್ ಕೃಷ್ಣಮೂರ್ತಿ
ಫೋಟೊ:ಅಮಿತಾ ರವಿಕಿರಣ್

So long dad!

Cold, shivering, covered in a rug,
you’d sit there. Why do you sleep now,
rigid, in the ice-box!

Taking the cold you, gently, placing 
in the hearse...might the door clip it?
I place your foot on my lap

Mantras muttered, pot shattered
hair shaved off, soon as I light the pyre 
Ah it burns! My heart!

All your life, a tall man you were
How much you have shrunk appa! Today,
to just a few shards of bones

From the boat, not once looking back
I set you adrift, away, off to another town 
Kaveri will lead you along!


Shrikaanth Krishnamurthy
(ಚಿತ್ರ:ಅಂತರ್ಜಾಲದಿಂದ)

7 thoughts on “ಕವಿತೆ: ಹೋಗಿ ಬರ್ತೀಯಾ ಅಪ್ಪ!

  1. ಮೆಚ್ಚಿಕೆಯನ್ನು ತಿಳಿಸಿರುವ ಎಲ್ಲ ಸಹೃದಯಿಗಳಿಗೂ ನನ್ನ ಧನ್ಯವಾದಗಳು. ನನ್ನ ಮಾತುಗಳ ನಿಮ್ಮ ಅಂತರಾಳದ ಭಾವಗಳಿಗೆ ಸ್ಪಂದಿಸಿವೆ, ಮುಟ್ಟಿವೆ ಎಂದು ತಿಳಿದು ಸಂತೋಷವಾಯಿತು.

    I am touched by the appreciative and insightful responses. Thanks for letting me know that I have touched your hearts with my words.

    🙏🙏

    Like

  2. ದೂರದ ಅಪ್ಪ, ಜೊತೆಗೆ ಇತ್ತೀಚಿನ ಹಲವು ಬಿದಾಯಗಳ ನೆನಪುಗಳೂ ಉಮ್ಮಳಿಸಿ ಬಂದು ಕಲುಕಿದವು ಡಾ ಶ್ರೀಕಾಂತ್ ಅವರ ‘ಜೋಡು’ ಕವನಗಳು. ಉಭಯ ಭಾಷೆಗಳ ಮೇಲೆ ಇರುವ ಕವಿಯ ಪ್ರಭುತ್ವ ಎದ್ದು ಕಾಣುತ್ತದೆ. ಮರಳಿ ಬಂದ ಹರಗೋಲಿನ ಅರ್ಧ ಚಿತ್ರ ಹರಿದ ಎದೆಯ ರೂಪಕದಂತಿದೆ! ‘Placing the foot on son’s lap lest the door of the hearse not clip it’ is graphic and wrenching. ‘Tall man reduced to shards’ drives home ‘ashes to ashes’ reality and the running river to the next town the eternity of soul. Very powerful ‘poems’ show how effective the translation by the author can be in expressing the emotion. Well done. ಶ್ರೀವತ್ಸ ದೇಸಾಯಿ

    Like

    • Very aptly translated in English. Inspite of the translation, I could relate to the poem from personal perspective very well.
      Almost, as if, it reflected every minute of our feelings when the ashes were dispersed in Kaveri river. As if, the poem was composed for us personally !!

      Liked by 1 person

  3. ಡಾ. ಶ್ರೀಕಾಂತರ ಕವನ ಮಗನ ಭಾವನೆಗಳನ್ನು / ಮನಃಸ್ಥಿತಿಯನ್ನು ಮನ ಮುಟ್ಟುವಂತೆ ಚಿತ್ರಿಸಿದೆ. ಇಲ್ಲಿ ಬರುವ ರೂಪಕಗಳೂ ಅಷ್ಟೇ ಸುಂದರವಾಗಿವೆ. ಕನ್ನಡದ ಕವನ ಓದುಗನ ಚಿಂತನೆ ಓಡಲು ಹೂಡಿದ ಕುದುರೆಯಂತಿದೆ.

    – ರಾಂ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.