ಆತ್ಮೀಯ ಓದುಗರೇ ! ಈ ವಾರದ ನನ್ನ ಸಂಪಾದಕೀಯ ಅವಧಿಯ ಕಡೆಯ ಸಾಪ್ತಾಹಿಕ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಮೇರುನಟ, ವರನಟ ಡಾ||ರಾಜ್ ಕುಮಾರ್ ಅವರನ್ನು ತಮ್ಮ ಬಾಲ್ಯದಲ್ಲಿ ನೇರ ದರ್ಶನ ಪಡೆದ ಕೃತಾರ್ಥದ ಸವಿ ನೆನಪನ್ನು ನಮ್ಮ ಸದಸ್ಯರಾದ ಡಾ||ಶ್ರೀರಾಮುಲು ಅವರು ‘ ನಾನು ಕಂಡ ಡಾ|| ರಾಜ್ ಕುಮಾರ್- ಒಂದು ಸ್ಮರಣೆ ‘ ಎಂಬ ಶೀರ್ಷಿಕೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ೨೭ನೇ ಸೆಪ್ಟೆಂಬರ್ ನಂದು ಮಗಳ ದಿನಾಚರಣೆಯ ಅಂಗವಾಗಿ ಡಾ||ವೀರೇಶ್ ಪಾಟೀಲ್ ಅವರು ‘ಅಪ್ಪಾ ತೂಗು ನೀ ನನ್ನ ‘ ಎಂಬ ಶೀರ್ಷಿಕೆಯ ಮುಗ್ದ ಮನದ ಬೃಹತ್ ಭಾವನೆಯ ಮುದ್ದಾದ ಚಿತ್ರಗವನ ನಿಮ್ಮ ಮುಂದೆ ಹಂಚಿಕೊಂಡಿದ್ದಾರೆ. ಓದಿ ಪ್ರತಿಕ್ರಿಯಿಸಿ.
ನನ್ನ ಸಂಪಾದಕೀಯ ಅವಧಿಯ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಿ ಎಂದು ಭಾವಿಸುತ್ತೇನೆ. ಅನಿವಾಸಿಯ ಮುಂದಿನ ಸಂಪಾದಕಿಯಾಗಿ ಶ್ರೀಮತಿ. ಅಮಿತಾ ರವಿಕಿರಣ್ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಶುಭ ಕೋರುತ್ತಾ ನಿರ್ಗಮಿಸುತ್ತಿದೇನೆ. ಧನ್ಯವಾದಗಳು. -ಸವಿ.ಸಂ
ನಾನು ಕಂಡ ಡಾ||ರಾಜಕುಮಾರ್- ಒಂದು ಸ್ಮರಣೆ
ನಾನು ಬಾಲ್ಯದಲ್ಲಿ ವಾಸವಾಗಿದ್ದ ಜಾಗ ಬೆಂಗಳೂರಿನ ಚಾಮರಾಜಪೇಟೆ. ಅದು ಚಾರಿತ್ರಿಕ ದೃಷ್ಟಿಯಿಂದ ಪುರಾತನವೂ
ಪ್ರಖ್ಯಾತವೂ ಆಗಿದ್ದು ಬೆಂಗಳೂರಿನ ಕೇಂದ್ರಬಿಂದು ಆಗಿತ್ತು ಮತ್ತು ”ಸಹೃದಯತೆ ಮತ್ತು ವಿಧೇಯತೆಗೆ ಮನೆಮಾತಾದ,
ಹಸನ್ಮುಖಿ ಸ್ಥಳೇಯ ಜನರಿಂದ ತುಂಬಿತ್ತು” ಎಂಬ ಖ್ಯಾತಿಯಿದ್ದ ಸ್ಥಳವಾಗಿತ್ತು. ಬ್ರಿಟಿಷರ ಆಡಳಿತ ಕಾಲದಲ್ಲಿ
ಚಾಮರಾಜಪೇಟೆಯ ಹೆಸರು ಎಲ್ಲರಿಗೂ ಗೊತ್ತಿರುತ್ತಿತ್ತು. ಅದರಲ್ಲೂ ಪ್ರತ್ಯೇಕವಾಗಿ ಏ ವಿ ರೋಡ್.
ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಭಾರತದ ವಿಭಜನೆಯಾದ ಮೇಲೆ ಹಿಂದೂ ಮುಸ್ಲಿಂ ಗಲಾಟೆಯಿಂದ ನಮ್ಮ ಪೂರ್ವಜರು
ಎಲ್ಲವನ್ನು ಕಳೆದುಕೊಂಡು ಬೆಂಗಳೂರಿಗೆ ಆಂಧ್ರ-ಕರ್ನಾಟಕ ಸರಹದ್ದಿನಿಂದ ವಲಸೆ ಬಂದರಂತೆ. ನಮ್ಮ ತಾಯಿಯವರು
ಆದವಾನಿ ಕಡೆಯವರು. ತೆಲುಗು ಮಾತೃಭಾಷೆ ಆದರೂ ಅವರ ಪೂರ್ವಜರು ಎರಡೂ ಕಡೆ ಕನ್ನಡವನ್ನು ಚೆನ್ನಾಗಿ
ಮಾತನಾಡುತ್ತಿದ್ದರು. ನಾನು ಜನ್ಮತಾಳಿ ಬೆಳೆದದ್ದು ಕರ್ನಾಟಕದ ಆಗ್ನೇಯಭಾಗದ ಚಿಂತಾಮಣಿಯಲ್ಲಿ. ಪ್ರಾಥಮಿಕ
ಶಾಲೆಯಿಂದ ಹಿಡಿದು ಎಲ್ಲವಿದ್ಯಾ ಭ್ಯಾಸ ನಾನು ಚಾಮರಾಜಪೇಟೆಯಲ್ಲಿದ್ದಾಗಲೇ ಮಾಡಿದ್ದು. ಕಳೆದ ವರ್ಷ ಚಾಮರಾಜಪೇಟೆಗೆ ಭೇಟಿ ಕೊಟ್ಟಾಗ ಎಲ್ಲಾ ಅಯೋಮಯ! ಇದು ನಾ ಬೆಳೆದು ಬಂದ ಸ್ಥಳವೇ ಎನಿಸಿತು. ಸುಮಾರು ನಾಲಕ್ಕುವರೆ ದಶಕಗಳಿಂದ ಇಂಗ್ಲೆಂಡ್ನಲ್ಲಿ
ವಾಸಿವಾಗಿರುವ ನನಗೆ ದಂಗು ಬಡದಂತಾಯಿತು. ನನ್ನಾಕೆ ಹುಟ್ಟಿದ್ದು ಬಳ್ಳಾರಿಯಲ್ಲಿ. ಆಕೆಯದೂ ವಿದ್ಯಾಭ್ಯಾ ಸ ಬೆಂಗಳೂರಿನ
ಚಾಮರಾಜಪೇಟೆಯ ಮಾಡೆಲ್ ಶಾಲೆಯಲ್ಲಿ ಮತ್ತು ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ.
ಚಾಮರಾಜಪೇಟೆ ಹೆಸರು ಬಂದದ್ದು ಆಗಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯೆರಿಂದ . ಆರಂಭದಲ್ಲಿ
ಜಯಚಾಮರಾಜೇಂದ್ರ ರಸ್ತೆ ಎಂದು ಕರೆಯಲ್ಪಡುತ್ತಿತ್ತು ನಂತರ ಚಾಮರಾಜಪೇಟೆ ಎಂದು ಹೆಸರುವಾಸಿ ಆಯಿತು.
ಚಾಮರಾಜಪೇಟೆ ನಿರ್ಮಾಣವಾಗಿದ್ದು 1880 ರಲ್ಲಿ ಎಂದು ಇತಿಹಾಸ ಹೇಳುತ್ತದೆ. ಆಗಿನ ಜನಸಂಖ್ಯೆ 80,000 ಮಾತ್ರ .
ಬೆಳೆಯುತ್ತಿದ್ದ ಜನಸಂಖ್ಯೆ , ಬಡತನ, ನೈರ್ಮಲ್ಯತೆ ಮತ್ತು ಆರೋಗ್ಯದ ಕೊರತೆಯಿಂದ ಕೆಲವು ನವವಿಸ್ತಾರಗಳನ್ನು
ನಿರ್ಮಾಣ ಮಾಡಿದರಂತೆ, ಅಂತಹ ಬಡಾವಣೆಗಳಲ್ಲಿ ಚಾಮರಾಜಪೇಟೆ ಮೊದಲನೆಯದು ಅಂತ ಇತಿಹಾಸಕಾರ ಸುರೇಶ
ಮೋನಾರಿಂದ ತಿಳಿದುಬರುತ್ತದೆ.
A V ರೋಡು
ಚಾಮರಾಜಪೇಟೆಯಲ್ಲಿ ಐದು ಮುಖ್ಯ ರಸ್ತೆಗಳಿದ್ದವು. ಅವಗಳನ್ನು ಸಾಮಾನ್ಯವಾಗಿ ಒಂದನೆ, ಎರಡನೇ , ಮೂರನೇ ,
ನಾಲ್ಕನೇ ಮತ್ತು ಐದನೇ ರೋಡುಗಳು ಎಂದು ಕರೆಯುವದು ಜನರೂಢಿಯಾಗಿತ್ತು. ನಾವು ವಾಸುತಿದ್ದ ಫಸ್ಟ್ ಮೇನ್
ರೋಡಿನ ಮತ್ತೊಂದು ಹೆಸರು A V Road ಎಂತಲೇ ಕರೆಯಲ್ಪಡುವ ರಸ್ತೆ. A V ಅಂದರೆ ಆಲ್ಬರ್ಟ್ ವಿಕ್ಟರ್. ಬಹಳ ಜನರು
ಆಲ್ಬರ್ಟ್ ವಿಕ್ಟರ್ ನ ಹೆಸರು ಕೇಳಿರದಿದ್ದರೆ ಆಶ್ಚರ್ಯವಿಲ್ಲ. ಈತ ವಿಕ್ಟೋರಿಯಾ ರಾಣಿಯ ಮೊಮ್ಮಗನಾಗಿದ್ದ. ಈತ 1889ರಲ್ಲಿ
ಭಾರತ ಪ್ರವಾಸ ಕೈಗೊಂಡು ಅನೇಕ ಕಡೆ ಭೇಟಿ ಕೊಟ್ಟನಂತೆ. ಆತನೇ ಬೆಂಗಳೂರಿನ ಪ್ರಖ್ಯಾತ ಲಾಲ್ಬಾಗ್ ದ ಗ್ಲಾಸ್ ಹೌಸ್ ಗೆ
ಅಡಿಪಾಯ ಹಾಕಿದ್ದ ದಾಖಲೆ ಇವೆ (30/11/1889 ರಂದು). ಚಾಮರಾಜಪೇಟೆಯಲ್ಲಿ ಸಮಾಜದ ತರಹದ ಜನರು
ವಾಸವಾಗಿದ್ದರು. ಅವರಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರು, ಸಂಸ್ಕೃತ ಪಂಡಿತರು ಮತ್ತು ಪ್ರಸಿದ್ಧ ವೈದ್ಯರು. ಇಲ್ಲಿನ ಪ್ರಸಿದ್ಧ
ಪುರಾತನ ಕಟ್ಟಡಗಳಲ್ಲಿ ಸಂಸ್ಕೃತ ಕಾಲೇಜು ಒಂದು. 1915 ರಲ್ಲಿ ಸ್ಥಾಪಿತವಾದ ಸುಪ್ರಸಿದ್ದ ಕನ್ನಡ ಸಾಹಿತ್ಯ ಪರಿಷತ್ತು
ಈಗಲೂ ಚಟುವಟಿಕೆಗಳಿಂದ ಕೂಡಿದೆ. ಬೆಂಗಳೂರಿನ ಪುರಾತನ ಕೋಟೆ, ವೆಂಕಟೇಶ್ವರಸ್ವಾಮಿ ದೇವಸ್ಥಾನ ಹಾಗು ಅದರ
ಎದುರಿಗೆ ಇರುವ ಮತ್ತು ನಾನು ಓದಿದ ಬೆಂಗಳೂರು ವೈದ್ಯಕೀ ಯ ಕಾಲೇಜು, ಟಿಪ್ಪು ಸುಲ್ತಾನನ ಅರಮನೆ ಮತ್ತು
ವಿಕ್ಟೋರಿಯಾ ಆಸ್ಪತ್ರೆ ಎಲ್ಲ ಒಂದಕ್ಕೊಂದು ಸಮೀಪದಲ್ಲಿ ಇರುವುದು ವೈಶಿಷ್ಠ್ಯ. ಪ್ರವಾಸಿಗರಿಗೆ ಈ ಸ್ಥಳಗಳನ್ನು ವೀಕ್ಷಸಿಲು
ತುಂಬ ಅನಕೂಲ. ಈಗ ಬೆಂಗಳೂರಿನ ಹೊಸ ಹೊಸ ವಿಸ್ತಾರಗಳು ಬಂದು, ತುಂಬ ಜನಕ್ಕೆ ಇದರ ಬಗ್ಗೆ ತಿಳದಿಲ್ಲ
ಎಂದುಕೊಳ್ಳುತ್ತೇನೆ.
AV ರೋಡು ಆಯಿತು ಆಲೂರು ವೆಂಕಟರಾವ್ ರಸ್ತೆ
1960 ರಲ್ಲಿ ರಸ್ತೆಗಳಿಗೆ ಪುನರ್ನಾಮಕರಣವಾದಾಗ ಆಲ್ಬರ್ಟ್ ವಿಕ್ಟರ್ ರೋಡಿಗೆ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ
ಕರ್ನಾಟಕದ ಕುಲಪುರೋಹಿತ ಎಂದೇ ಹೆಸರಾದ ಶ್ರೀ ಆಲೂರು ವೆಂಕಟರಾವ್ ಅವರ ಹೆಸರಿಟ್ಟರು. ಈ ಪ್ರದೇಶದ
ಸುತ್ತುಮುತ್ತಲೇ ಕನ್ನಡ ಚಳುವಳಿ ಆರಂಭವಾದದ್ದನ್ನು ನನ್ನ ಬಾಲ್ಯದ ದಿನಗಳಲ್ಲಿ ಕಂಡಿದ್ದೇನೆ.
1962 ರಲ್ಲಿ ನಾಡಿನ ಪ್ರಸಿದ್ಧ ಕಾದಂಬರಿಕಾರರಾಗಿದ್ದ ಆ ನ ಕೃಷ್ಣರಾವ್ ಅವರ ನೇತೃತ್ವದಲ್ಲಿ ಮತ್ತು ಖ್ಯಾತ ಪತ್ತೇದಾರಿ
ಕಾದಂಬರಿ ಲೇಖಕ ಮ ರಾಮಮೂರ್ತಿ ಅವರ ಸಹಾಯದಿಂದ ಕನ್ನಡ ಚಳುವಳಿ ಆರಂಭವಾದದ್ದು ಇಲ್ಲಿಂದಲೇ .
ಅದಾದ ನಂತರ ಕರ್ನಾಟಕದಲ್ಲಿ ಮತ್ತು ಕನ್ನಡ ಭಾಷೆ ಮತ್ತು ಜನರಲ್ಲಿ ಸಹ ಬಹಳಷ್ಟು ಬದಲಾವಣೆಯಾಯಿತು ಎಂದರೆ
ಅತಿಶಯೋಕ್ತಿ ಆಗಲಾರದು. ಅದು ಪ್ರಗತಿಯ ಮೊದಲ ಮೆಟ್ಟಲು. ಈ ಹೋರಾಟದಲ್ಲಿ ನಾನು ಸಹ ನನ್ನ ಇಬ್ಬರು ಮಿತ್ರರ
ಜೊತೆಗೆ ಭಾಗವಹಿಸಿದ್ದ ನೆನಪು. ಅವರಲ್ಲಿ ಒಬ್ಬನ ಹೆಸರು ಕೆ ಪ್ರಭಾಕರ ರೆಡ್ಡಿ. ಆತ ”ಕನ್ನಡ ವೇದಿಕೆ’’ಯ ಅಧ್ಯಕ್ಷ ಆಗಿದ್ದರು
ಮತ್ತು ನಿವೃತ್ತ ಕನ್ನಡ ಕಲಾವಿದರ ಏಳಿಗೆಗಾಗಿಯೂ ಬಹಳಷ್ಟು ಕೆಲಸ ಮಾಡಿದರು. ಅದಕ್ಕಾಗಿಯೇ ಕಳೆದ ವರ್ಷ ನಾನು
ಬೆಂಗಳೂರಿಗೆ ಭೇಟಿ ಕೊಟ್ಟಾಗ ನನ್ನ ಒಬ್ಬ ಮಿತ್ರನ ಹೆಸರನ್ನು ಆಲೂರು ವೆಂಕಟರಾವ್ ಪಕ್ಕದ ಅಡ್ಡರಸ್ತೆಗೆ (ಕೃ. ಪ್ರಭಾಕರ
ರೆಡ್ಡಿ ರಸ್ತೆ) ಕೊಟ್ಟದ್ದನ್ನು ನೋಡಿ ಅವರ್ಣನೀಯ ಆನಂದವಾಯಿತು.
ಕನ್ನಡ ಚಿತ್ರರಂಗದ ಉದಯ
1950 ರ ದಶಕದಲ್ಲಿ ತಮಿಳು ಮತ್ತು ಕೆಲವು ಮಟ್ಟಿಗೆ ತೆಲುಗು ಚಿತ್ರಗಳ ಪ್ರಭಾವ ಎಲ್ಲಕಡೆಗೆ ಪಸರಿಸಿತ್ತು. ಇದರಿಂದ
ಬಡವಾದದ್ದು ಕನ್ನಡ ಚಿತ್ರಗಳು. ಆಗಲೋ ಈಗಲೋ ಒಂದು ಕನ್ನಡ ಚಿತ್ರ ಬಿಡುಗಡೆ ಆಗುತಿತ್ತು. ಅವುಗಳಲ್ಲಿಯೂ ಖ್ಯಾತ
ರಂಗನಾಟಕ ನಟರೇ ಪಾತ್ರವಹಿಸುತ್ತಿದ್ದರು. ಅದರಲ್ಲಿ ಕೇಳಬರುತ್ತಿದ್ದ ಹೆಸರುಗಳಲ್ಲಿ ಒಬ್ಬರದು ಶ್ರೀ ಕೆಂಪರಾಜ್ ಅರಸು
ಅನ್ನುವವರು. ಅವರು ದಿವಂಗತ ಮುಖ್ಯ ಮಂತ್ರಿ ದೇವರಾಜ ಅರಸು ಅವರ ಸಹೋದರರಾಗಿದ್ದರು. ಅವರು ಒಂದು ಚಿತ್ರದಲ್ಲಿ
ಆಕಾಶದಲ್ಲಿ ಕುದುರೆ ಹಾರಿಸುವಂತೆ ತೋರಿಸಿಲು, ಒಂದು ಕುದುರೆಗೆ ಹಗ್ಗಳನ್ನು ಕಟ್ಟಿ ಮೇಲೆ ಏರಿಸಿ ಚಿತ್ರೀಕರಣ
ಮಾಡಿದರಂತೆ! ಆನಂತರ ಬಂದವರು ಆರ್ ನಾಗೇಂದ್ರ ರಾವ್, ಸುಬ್ಬಯ್ಯ ನಾಯ್ಡು (”ಭೂತಯ್ಯನ ಮಗ ಅಯ್ಯು ” ಖ್ಯಾ ತಿಯ
ಲೋಕೇಶ್ ಅವರ ತಂದೆಯವರು) ಮುಂತಾದವರು. ಈಗಿನವರಿಗೆ ಹೋಲಿಸಿದರೆ ಇವರಿಗೆ ದೊರೆಯುತ್ತಿದ್ದ ಸಂಭಾವನೆ
ಅತ್ಯಲ್ಪ. ತದನಂತರ ಬಂದ ಪ್ರಖ್ಯಾ ತ ಗುಬ್ಬಿ ವೀರಣ್ಣ ಮತ್ತು ಅವರ ಪತ್ನಿ ಬಿ ಜಯಮ್ಮ ಅವರಿಂದ ಕನ್ನಡ ನಾಟಕರಂಗಕ್ಕೆ
ಮತ್ತು ಚಿತ್ರರಂಗಕ್ಕೆ ಸಂದ ಕೊಡುಗೆ ಅಪಾರ.
ಉದಯೋನ್ಮುಖ ನಟ ರಾಜಕುಮಾರ್
ಅದು ಬಹುಶಃ 1954ನೆಯ ಇಸವಿ ಇರಬೇಕು. ರಾಜಕುಮಾರ್ ಅವರ ಬೇಡರ ಕಣ್ಣಪ್ಪ ಚಿತ್ರ ಬಿಡುಗಡೆಯಾಗಿ ಕನ್ನಡ
ಚಿತ್ರರಂಗದಲ್ಲೆಲ್ಲ ಜಯಭೇರಿ ಹೊಡೆಯಿತು. ಅದಕ್ಕೂ ಮೊದಲು ಶ್ರೀನಿವಾಸ ಕಲ್ಯಾ ಣ ಚಿತ್ರದಲ್ಲಿ ಒಬ್ಬ ಸಪ್ತಋಷಿಯಾಗಿ
ಪಾತ್ರವಹಿಸಿದ ರಾಜಕುಮಾರ್ ಅವರ ಧ್ವನಿಯನ್ನು ಹೀಯಾಳಿಸಿ ಅವರಿಗೆ ಬೇರೊಬ್ಬರು ಧ್ವನಿ ದಾನ ಮಾಡಿದದ್ದನ್ನು ಕೇಳಿದರೆ
ನಂಬಲೂ ಆಗುತ್ತಿಲ್ಲ. ಆ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಜನಗಳು ಈಗಲೂ ಗುನುಗುನಿಸುತ್ತಿರುತ್ತಾರೆ. ಆ
ಹಾಡುಗಳು ಮತ್ತು ರಾಜಕುಮಾರವರ ನಟನೆ ಚಿರಸ್ಮರಣೀಯ. ಅವುಗಳ ನೆನಪು ನನ್ನ ಮನದಲ್ಲಿ ಇಂದಿಗೂ ಉಳಿದಿದೆ.
ಅದೇ ಸಮಯದಲ್ಲಿ ಗಾಂಧಿನಗರದ ಗುಬ್ಬಿ ವೀರಣ್ಣ ಥೀಯೇಟರ್ನಲ್ಲಿ ’ಕನ್ನಡ ಕಲಾವಿದರು” ಎಂಬ ಹೊಸದಾಗಿ ಆರಂಭಿಸಿದ
ಗುಂಪು ಒಂದು ನಾಟಕವನ್ನು ಪ್ರದರ್ಶಿಸಿತು. ಅದರಲ್ಲಿ ಉದಯೋನ್ಮುಖ ನಟರಾಗಿದ್ದ ರಾಜಕುಮಾರ್, ಅದ್ವೀತಿಯ ಹಾಸ್ಯ
ನಟ ನರಸಿಂಹರಾಜು, ಖ್ಯಾತ ಬಾಲಕೃಷ್ಣ ಮತ್ತು ಜಿ ವಿ ಅಯ್ಯರ್ ಅವರು ಒಂದು ಕಂಪನಿಯನ್ನು ಸೃಷ್ಟಿಸಿ ನಾಲ್ಕು
ನಾಟಕಗಳನ್ನು ಪ್ರದರ್ಶಿಸಿದರು.
ಅದೇ ಕಾಲದಲ್ಲಿ ನಾನೊಬ್ಬ ಸ್ಕೌಟ್ ಸ್ವಯಂ ಸೇವಕನಾಗಿದ್ದೆ. ನಮ್ಮ ಶಾಲೆ ಫೋರ್ಟ್ ಹೈಸ್ಕೂಲ್ ಬಳಿ ಇರುವ
ಸ್ಕೌಟ್ ಹೆಡ್ಕ್ವಾ ರ್ಟರ್ಸ್ ನಿಂದ ಕೆಲವರನ್ನು ಆಯ್ಕೆ ಮಾಡಿದ್ದರು. ಅದೃಷ್ಟವಶಾತ್ ಅದರಲ್ಲಿ ನಾನೂ ಒಬ್ಬ. ನಮಗೆ ಆ
ಥಿಯೇಟರ್ ಉಸ್ತುವಾರಿಗೆ ಕಳುಹಿಸಿದ್ದರು. ಸುದೈವದಿಂದ ನನಗೆ ಸ್ಟೇಜ್ ನೋಡಿಕೊಳ್ಳಲು ಅವಕಾಶ ಸಿಕ್ಕಿತು. ನಿಜ ಹೇಳಬೇಕು ಅಂದರೆ ‘ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ‘ ಅನ್ನೋಹಾಗಿ ನಾಟಕ ಪ್ರಾರಂಭವಾಯಿತು. ಹೊರ ಬಾಗಿಲುಗಳನ್ನು ಮುಚ್ಚಿದ ಮೇಲೆ ನನಗೆ ವ್ಯತ್ಯಯವಿಲ್ಲದೆ ನಾಟಕಗಳನ್ನು ನೋಡುವ ಸದವಕಾಶ ಸಿಕ್ಕಿತು. ಆಗ ನನ್ನ ಸಂತೋಷಕ್ಕೆ ಪಾರವೇ ಇಲ್ಲ!
ನಟರಲ್ಲಿ ನಾಲ್ವರು ಬಿಳಿಯ ಪಂಚೆ ಮತ್ತು ಅಂಗಿ ತೊಟ್ಟು ವಿಜೃಂಭಿಸುತ್ತಿದ್ದರು. ಆದರೆ ನರಸಿಂಹರಾಜು ಬಂದಾಗ ತಮ್ಮ
ಬಲಗೈಗೆ ಬಿಳಿ ಡ್ರೆಸ್ಸಿಂಗ್ ಹಾಕಿಕೊಂಡಿದ್ದರು. ಅವರಿಗೆ ದೀಪಾವಳಿ ಪಟಾಕಿಯ ಅವಾಂತರದಿಂದ ಗಾಯವಾಗಿತ್ತೆಂದು ನಂತರ
ತಿಳಿಯಿತು. ಅವರೆಲ್ಲರ ಮಧ್ಯೆ ಶ್ವೇತಾಂಬರ ರಾಜಕುಮಾರವರು ತುಂಬಿದ ಕಳೆಯಿಂದ, ಧರೆಗೆ ಇಳಿದ ಗಂಧರ್ವನಂತೆ
ಕಾಣುತಿದ್ದರು. ಆ ನಾಟಕಗಳನ್ನು ನೋಡಿ ಅವರ ಮೇಲಿದ್ದ ಅಭಿಮಾನ ದ್ವಿಗುಣವಾಯಿತು ಅಂದರೆ ಆಶ್ಚರ್ಯ ವಲ್ಲ.
ಇದಾದ ಕೆಲವೇ ದಿನಗಳ ನಂತರ ರಾಜಕುಮಾರವರ ಇನ್ನೊ ಂದು ನಾಟಕವನ್ನು ನೋಡುವ ಅವಕಾಶ ಒದಗಿ ಬಂದಿತು. ಈ
ಬಾರಿ ’8 ಆಣೆ ತರಗತಿ’ಯಿಂದ ! ಅವರ ಸುಪ್ರಸಿದ್ಧ ”ವೀರ ಎಚ್ಚಮ ನಾಯಕ”ನ ನಾಟಕ ಅಂದು. ಅದರಲ್ಲಿ ಅವರದು
ಅದ್ವೀತಿಯ ಅಭಿನಯವಾಗಿತ್ತು ಎಂದರೆ ತಪ್ಪಾಗಲಾರದು. ವಿಶೇಷವಾಗಿ ಎಚ್ಚಮನಾಯಕ ಸಭಾಂಗಣಕ್ಕೆ ಪ್ರವೇಶಿಸುವ ದೃಶ್ಯ
ಚಿರಸ್ಮರಣೀಯ. ಕಣ್ಣುಗಳ್ಳನ್ನು ಕುಕ್ಕವ ವಿದ್ಯುತ್ ಶಕ್ತಿ ದೀಪಗಳು, ಭೋರ್ಗರೆವ ಪಕ್ಕ ವಾದ್ಯಗಳ ಧ್ವನಿಯಿಂದ,
ರಾಜಕುಮಾರವರು ಹೃದಯಾಳಾಂತರದಿಂದ, ಕೋಪಗರ್ಭಿತ ಮುಖ ಭಾವನೆಯಿಂದ ಆಕ್ರಮಣಕಾರರಿಂದ ಛಿನ್ನವಿಚ್ಛಿನ್ನವಾದ
ಉಗ್ರನರಸಿಂಹನನ್ನು ಸಂಬೋಧಿಸುವ ಮಾತುಗಳು ಪ್ರತಿ ಭಾರತೀಯನ ಎದೆಯನ್ನು ಛೇದಿಸಿ ನುಗ್ಗಿ ರಕ್ತವನ್ನು
ಬಿಸಿಮಾಡುತ್ತದೆ. ಈ ಪ್ರಕರಣಗಳು ಬಾಲ್ಯಾವಸ್ಥೆಯಲ್ಲಿದ್ದ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿದು ಹೋಗಿವೆ. ನಾನು ಅವರ
ಎಂತಹ ಕಟ್ಟಾ ಅಭಿಮಾನಿಯಾದೆ ಎನ್ನುವದರ ಸಾಕ್ಷಿಯೆಂದರೆ, ನಾನು ಈ ದೇಶಕ್ಕೆ ಬಂದಾಗ ನನ್ನ ಹತ್ತಿರ ಎರಡೇ
ಫೋಟೋಗಳು ಇದ್ದವು: ಒಂದು ನನ್ನ ಕುಟುಂಬದ್ದು, ಇನ್ನೊಂದು ಡಾಕ್ಟರ್ ರಾಜಕುಮಾರವರದು! He was an
institution. ಅವರಂಥ ಕಲಾವಿದರು ’ನ ಭೂತೋ ನ ಭವಿಷ್ಯತಿ!’ ಎನ್ನಬಹುದು.
– ಡಾ||ಶ್ರೀರಾಮುಲು
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಅಪ್ಪಾ ತೂಗು ನೀ ನನ್ನ

-ಡಾ||ವೀರೇಶ್ ಪಾಟೀಲ್
ದ್ವಾಪರ ಯುಗದಲ್ಲಿ ಭೀಮ ಹೆಜ್ಜೆ
ತ್ರೆತಾ ಯುಗದಲ್ಲಿ ಲಕ್ಷ್ಮಣ ತೀರ್ಥ.
ತಪ್ಪು, ಕ್ಶಮಿಸಿ.
LikeLike
ಮುರಳಿಯವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಚಾಮರಾಜಪೇಟೆ ಜೊತೆಗೆ ನಿಮಗೂ ಸಂಬಂಧ ಇದೆ ಅಂತ ತಿಳಿದು ಬಹಳ ನಿಕಟದವರು ಅನ್ನಿಸಿತು.
ಡಾಕ್ಟರ್ ವೀರೇಶ್ ಪಾಟೀಲ್ ತಮ್ಮ ಮನಮುಟ್ಟುವ ಕವನ ಚಿಕ್ಕ ಮತ್ತು ಚೊಕ್ಕ ವಾಗಿದೆ.
ಸವಿತಾವರ ಸಂಪಾದಕೀಯತೆ ಕೊನೆಮುಟ್ಟಿದೆಅಂದರೆ ನಂಬಲಾಗವುದಿಲ್ಲ. ನಿಮ್ಮಸಮಯಪ್ರಜ್ಞೇ ಬರುವ ಎಲ್ಲ ಬರಹಗಳ್ಳನ್ನು ವ್ಯವಹರಿಸುತ್ತಿದ ರೀತಿ ಶ್ಲಾಘನೀಯ
ರವಿಕಿರಣವರಿಗೆ ಸುಸ್ವಾಗತ.
Sriramulu
LikeLike
ರಾಮಮೂರ್ತಿ ಅವರೇ ನೀವು ಸ್ಮರಿಸಿದ ಕೈವಾರಕ್ಕೆ ಭೇಟಿ ಮಾಡುವ ಸೌಭಾಗ್ಯ ಒದಗಿ ಬಂದಿತ್ತು. ಭೀಮನ ಹೆಜ್ಜೆ, ಲಕ್ಷ್ಮಣ ತೀರ್ಥ , ಕೈವಾರ ನಾರಾಯಣಪ್ಪ ನವರ ಗುಡಿ, ಅವರು ಕೈವಾರ ತಾತ ಎಂದೇ ಅವರು ಪ್ರಖ್ಯಾತ. ದ್ವಾಪರನಾಗರದಲ್ಲಿ ಏಕಚಕ್ರಪುರ ಅಂತೆ, ಅಲ್ಲಿಯೇ ಭೀಮ ಬಕಾಸುರನನ್ನು ಕೊಂದಿದ್ದು ಅಂತ ಪುರಾಣಗಳಿಂದ ತಿಳಿದುಬರುತ್ತದೆ. ಲಕ್ಷ್ಮಣ ತೀರ್ಥ ಆದದ್ದು ಲಕ್ಷ್ಮಣನ ಬಾಣದಿಂದ ಅಂತೆ, ಸೀತಾದೇವಿಯಾ ಬಾಯಾರಿಕೆ ತೀರಿಸಲು ತನ್ನ ಬಾಣದಿಂದ ಹೊಂಡ ಮಾಡಿ ನೀರು ತರಿಸಿದ ಅಂತ ಕಥೆ.
ನೀವು ಮೂರನೇ ರಸ್ತೆಯನ್ನು ಪ್ರಸ್ಥಾಯಿಸಿದಿರಿ, ನಾವು ಒಂದನೇ ರಸ್ತೆ ಯಿಂದ ಮೂರನೇ ರಸ್ತೆಗೆ ಮನೆಗೆ ಬದಲಾಯಿಸಿದುವು, ಅಲ್ಲಿ ನನ್ನ ವ್ಯದ್ಯಕೀಯ ಪದವಿ ಪಡುಯುವವರಿಗೂ ಅಲ್ಲೇ ಇದ್ದುವು.
ನೀವು ಇಂಗ್ಲೆಂಡ್ ಬರುವ ಮುಂಚೆ LRDE ಯಲ್ಲಿ ಕೆಲಸ ಅಂತ ಗ್ರಹಿಸಿದೆ. ದೇಶದ ಸುಭದ್ರತೆಗೆ ಸುಪ್ರಸಿದ್ದ. ಆದರೆ ಅವರ ಫುಟ್ಬಾಲ್ಲ್ ಟೀಮ್ ಮರೆಯಲು ಸಾಧ್ಯವಿಲ್ಲ. ನಾವು ಪಂದ್ಯಗಳ್ಳನ್ನು ನೋಡಲು ಅಲಸೂರುಗೆ ಹೋಗುತ್ತಿದ್ದ ದಿನಗಳು ಇನ್ನು ನೆನಪಿನಲ್ಲಿದೆ. ನಿಮ್ಮ ಪ್ರತಿಕ್ರಿಯೆಗೆ ಮತ್ತು ಹಲವು ಹಳೆಯ ನೆನಪುಗಳ್ಳನ್ನು ಮರುಕಳಿಸಲು ಮಾಡಿದ್ದ ಸಹಾಯಕ್ಕೆ ನನ್ನ ಧನ್ಯವಾದಗಳು.
LikeLike
ಶ್ರೀಯುತ ದೇಸಾಯಿಯವರೇ, ಪ್ರಸಾದವರೇ ಮತ್ತು ನವೀನ್ಅವರೇ . ನಿಮ್ಮ ಉತ್ತೇಜಕ
ಪ್ರತಿಕ್ರಿಯೆಗೆ ಹೃದಯಪೂರ್ವಕ ಧನ್ಯವಾದಗಳು. ಪರಿವರ್ತನೆ ಜಗದ ನಿಯಮ ಎಂಬ ಹೇಳಿಕೆ ನೂರಕ್ಕೂ ನೂರುರಷ್ಟು ಸತ್ಯ.
ಡಾಕ್ಟರ್ ಪ್ರೇಮಲತಾಅವರೇ ಸುಂದರಸವಿ ಮಾತುಗಳಿಗೆ ಧನ್ಯವಾದಗಳು.
LikeLike
ಶ್ರೀ ರಾಮಲು ಅವರೇ , ನೀವು ಹೇಳಿರುವ ಎರಡು ಜಾಗಗಳು , ಚಿಂತಾಮಣಿ ಮತ್ತು ಚಾಮರಾಜಪೇಟೆ ನನಗೆ ಪರಿಚಯ, ನನ್ನ ಬಾಲ್ಯ ಚಿಂತಾಮಣಿ ಮತ್ತು ಹತ್ತಿರ ಇರುವ ಕೈವಾರದಲ್ಲಿ.. ಚಾಮರಾಜಪೇಟೆಗೆ I was a regular visitor . ಮೂರನೇ ಮೇನ್ ನಲ್ಲಿ ನನ್ನ ಸ್ನೇಹಿತ, ಕ್ರಿಕೆಟ್ ಅಂಪೈರ್ ಸತ್ಯಾಜಿ ರಾವ್(ಹೋದ ವಾರ ಇವರು ನಿಧಾನವಾದರು ) ಮತ್ತು ನಾಲಕ್ಕನೆ ಮೇನ್ ನಲ್ಲಿ ಸಂಬಂದಿಕರ ವಾಸ , ಸ್ವಲ್ಪ ಹತ್ತಿರದಲ್ಲಿ ಟಿ.ಪಿ. ಕೈಲಾಸಂ ಮನೆ White ಹೌಸ್ ಇತ್ತು ಆದರೆ ಸರ್ಕಾರ ಇದನ್ನು ಉಳಸಿಲಿಲ್ಲ ನೀವು ಹೇಳಿದ ಹಾಗೆ ಈ ಜಾಗಗಳು ತುಂಬಾ ಬದಲಾಯಿಸಿದೆ, ಹತ್ತಿರದಲ್ಲೇ ರಾಜಕುಮಾರ್ ಅವರನ್ನು ನೋಡಿದ್ದು ನಿಮ್ಮ ಪುಣ್ಯ ಅನ್ನಬಹುದು. ನಿಮ್ಮ ಉತ್ತಮ ಲೇಖನಕ್ಕೆ ವಂದನೆಗಳು
LikeLike
ಶ್ರೀರಾಮುಲು ಅವರ ಬಾಲ್ಯದ ನೆನಪುಗಳು ಸ್ವಾರಸ್ಯಕರವಾಗಿ ಆ ಕಾಲದ ಬೆಂಗಳೂರನ್ನು ಅದರಲ್ಲೂ ಅವರಿದ್ದ ಚಾಮರಾಜಪೇಟೆಯ ಕುರುಹುಗಳನ್ನು, ಸ್ವಲ್ಪಮಟ್ಟಿಗೆ ಇತಿಹಾಸವನ್ನು ನಮಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಅವರ ನೆಚ್ಚಿನ ನಟ ರಾಜ್ ಕುಮಾರ್ ಅವರ ಸಿನಿಮಾ ಮತ್ತು ನಾಟಕಗಳ ಕೆಲವು ಮೊದಲ ಹೆಜ್ಜೆ ಗುರುತುಗಳ ಪರಿಚಯವೂ ಇದೆ. ಶ್ರೀರಾಮುಲು ಅವರು ತಮ್ಮ ಹಳೆ ನೆನಪಿನ ಹೆಜ್ಜೆಗಳನ್ನು ಕಾಣಲು ಇಂದಿನ ಚಾಮರಾಜಪೇಟೆಗೆ ಹೋದಾಗ ಆ ಹಳೆ ಹೆಜ್ಜೆ ಗುರುತು ಹೊಸ ಪ್ರವಾಹದಲ್ಲಿ ಕಳೆದುಹೋಗಿರಬಹುದು. ಆದರೆ ಸವಿ ನೆನಪುಗಳು ಅವರ ಮನದಲ್ಲಿ ಶಾಶ್ವತವಾಗಿ ಸುರಕ್ಷಿತವಾಗಿದ್ದು ಅದನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಹಳೆಯದ್ದನ್ನು ಅರಸಿಕೊಂಡು ಹೋದಾಗ, ಕಾಲ ತರುವ ಅನಿವಾರ್ಯ ಬದಲಾವಣೆಗಳಿಂದ ನಮ್ಮ ನಿರೀಕ್ಷೆಗಳು ನಮಗೆ ನಿಲುಕದಿದ್ದಾಗ ನಿರಾಸೆ ಮೂಡುವುದು ಸಹಜ. ‘ಪರಿವರ್ತನೆಯೇ ಜಗದ ನಿಯಮ’ ಎಂದು ನಮ್ಮನ್ನು ನಾವು ಸಂತೈಸಿಕೊಳ್ಳಬೇಕು. ೬೦ರ ದಶಕದಿಂದ ಮುಂದಕ್ಕೆ ೩೫ ವರ್ಷಗಳ ಕಾಲ ಚಾಮರಾಜಪೇಟೆ ಬಳಿ ಇರುವ ರಾಮಕೃಷ್ಣ ಆಶ್ರಮ, ಗವಿಪುರದಲ್ಲಿ ವಾಸ, ಗಾಂಧಿ ಬಜಾರು, ಬಿಎಂಸಿಯಲ್ಲಿ ಸ್ನಾತಕೋತ್ತರ ಶಿಕ್ಷಣ, ಬನಶಂಕರಿ ವಾಸ ಮತ್ತು ಜಯನಗರದ ಒಡನಾಟ ಈ ಕಾರಣಗಳಿಂದ ದಕ್ಷಿಣ ಬೆಂಗಳೂರು ನನಗೆ ಅತ್ಯಂತ ಪ್ರಿಯವಾದ ಸ್ಥಳ.
ವೀರೆಶ್ ಪಾಟೀಲ್ ಅವರ ಸರಳ ಸುಂದರ ಕವನ ನನಗೆ ಇಷ್ಟವಾಯಿತು. ಅಪ್ಪ ತೂಗುವ ಉಯ್ಯಾಲೆಯಿಂದ ಆಕಾಶಕ್ಕೆ ಏರಿ ಚಂದ್ರನನ್ನು ಮಾತನಾಡಿಸಿ, ಹಕ್ಕಿಗಳೊಡನೆ ಹಾರಿ, ಮೋಡಗಳಲ್ಲಿ ಒಂದಾಗುವ ಮಗುವಿನ ಸಣ್ಣ ಸಣ್ಣ ಆಸೆಗಳು, ಆ ಮುಗ್ಧತೆ, ಸೊಗಸಾಗಿ ಮೂಡಿಬಂದಿದೆ. ಹೆಚ್ಚಿಗೆ ತೂರಲು ಹಿಂಜರಿಯುವ ಅಪ್ಪನಿಗೆ ಮಗು ಇಲ್ಲಿ ಮತ್ತೆ ಹಿಂಬರುವ ಆಶ್ವಾಸನೆ ನೀಡಿರುವುದು ಬದುಕಿನ ಹಲವಾರು ರೂಪಕಗಳನ್ನು ಅದು ತೆರೆದಿಟ್ಟಿದೆ. “Even Eagles need a push” how much we push and how hard? is the question. Children can give us a feed back how much is the right. No matter how high they go, they will come back to our fold. There are many metaphors hidden.
LikeLike
ಈ ವಾರ ಶ್ರೀರಾಮುಲು ಅವರು ಬೆಂಗಳೂರಿನ ಎಲ್ಲರಿಗೂ ಗೊತ್ತಿರಲಾರದ ಐತಿಹಾಸಿಕ ತುಣುಕುಗಳನ್ನು ಹೆಕ್ಕಿ ಅಣಿಗೊಳಿಸಿದ್ದಲ್ಲದೆ ‘ಅಣ್ಣಾ ಅವರನ್ನು’ ಅತಿ ಹತ್ತಿರದಿಂದ ನೋಡಿದ ಆನುಭವವನ್ನು ಭಕ್ತಿ-ಪುಳಕ ಮಿಶ್ರಿತ ಶೈಲಿಯಲ್ಲಿ ಆತ್ಮೀಯವಾಗಿ
ಹೃದ್ಯವಾಗಿ ಚಿತ್ರಿಸಿದ್ದಲ್ಲದೆ ಚಿತ್ರರಂಗದ ಉಗಮದ ಅಪರೂಪದ ಝಲಕ್ ಸಹ ಕೊಟ್ಟಿದ್ದಾರೆ. ಇಷ್ಟೆಲ್ಲ ರೋಚಕ ಮಾಹಿತಿ ಕೊಟ್ಟ ಅವರನ್ನು ಅಭಿನಂದಿಸುವೆ. ಇನ್ನಷ್ಟು ಬರಲಿ ಅವರ ಸ್ಮೃತಿಸಂಚಯದಿಂದ!
ವೀರೇಶ್ ಪಾಟೀಲ್ ಅವರ ಮುಗ್ಧ ಕವನ ಬಹಳ ಹಿಡಿಸಿತು ಮಗುವಿನ ಸಂತೋಷ ಮುಗಿಲೆತ್ತರಕ್ಕೆ ಹಾರುವ ಮಹತ್ವಾಕಾಂಕ್ಷೆ ಇವೆರಡರ ನಡುವೆ ತೋಗುವ ಕವಿತೆಯ ಸಾಲುಗಳು! ನಾನು ಚಿಕ್ಕವನಿದ್ದಾಗ ಮನಸ್ಸಿನಲ್ಲಿ ಉಳಿದ ಜೋಕಾಲಿ ಸಾಲುಗಳನ್ನು ನೆನಪಿಸಿತು: How do you like to go up ina swing/ Up in the sky so blue ಅಂತ!
ಚಿತ್ರ ಮತ್ತು ಅಕ್ಷರಗಳು ಬೇರೆ ಬೀಯಾಗಿರಬಹುದಿತ್ತೇನೋ ಅಂತ ಅನಿಸಿತು. ವೈಯಕ್ತಿಕ ಅಭಿಪ್ರಾಯ.
ಸಂಪಾದಕಿಯ ಪಾಟಿಂಗ್ ಶಾಟ್!
ಎರಡು ಒಳ್ಳೆಯ ಕೊಡುಗೆಗಳಿಂದ ಸಂಪಾದಕೀಯ ಮುಗಿಸುತ್ತರುವ ಸವಿತಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು . ಅವರ ಉತ್ಸಾಹ ಮತ್ತು ತಮ್ಮದೇ ವೈವಿಷ್ಠ್ಯತೆಯ ಛಾಪು ಅದರಲ್ಲಿ ಕಾಣುತ್ತಿತ್ತು. ಕೆಲವೊಂದು ಹೊಸ ಶೀರ್ಶಿಕೆಗಳಿಗೆ ಹೊಸ ಲೇಖಕರನ್ನು ಪರಿಚಯಿಸಿದ್ದಾರೆ. ಅವರು ಇನ್ನು ಮುಂದೂ ಅನಿವಾಸಿಯನ್ನು ಹಸಿರಾಗಿಡುವ ಶ್ರೀಮಂತಗೊಳಿಸುವ ಕೈಂಕರ್ಯದಲ್ಲಿ ಮುಂದುವರೆಸಿಯಾರು ಎಂದು ಆಶಿಸುವಾ.
LikeLike