ಪ್ರಿಯ ಓದುಗರೇ ! ಈ ವಾರದ ಸಾಪ್ತಾಹಕ ಸಂಚಿಕೆಯಲ್ಲಿ ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿಯಾದ ಹಾಗು ನಮ್ಮ್ ರೇಡಿಯೋ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದ RJ ಗಿರೀಶ್ ಪ್ರಸಾದ್ ಅವರ ‘ಹಸಿರೇ ಉಸಿರು’ ಶೀರ್ಷಿಕೆಯಡಿಯಲ್ಲಿ ಒಂದು ಪುಟ್ಟ ಲೇಖನ. ಓದಿ ಪ್ರತಿಕ್ರಿಯಿಸಿ. -ಸವಿ. ಸಂ
ಲೇಖಕರ ನುಡಿಗಳು
ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಗಿರೀಶ್ ಪ್ರಸಾದ್, ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿ. Astra Zeneca ಎಂಬ ಸಂಸ್ಥೆಯಲ್ಲಿ ಕೋವಿಡ್-೧೯ ಲಸಿಕೆಯ ಪ್ರಯೋಗ ತಂಡದಲ್ಲಿ ವಿಜ್ಞಾನಿಯಾಗಿ ನನ್ನ ವೃತ್ತಿ. ‘ನಮ್ಮ್ ರೇಡಿಯೋ’ ಖ್ಯಾತಿಯ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದಲ್ಲಿ RJ ಗಿರೀಶ್ ಪ್ರಸಾದ್ ಧ್ವನಿ ತಮಗೆಲ್ಲ ಚಿರ ಪರಿಚಿತ. ನನ್ನ ಈ ಇತ್ತೀಚಿನ ವೃತ್ತಿಪರ ಪ್ರಯೋಗದ ಅನುಭವ ಪ್ರಕೃತಿಯ ಹಸಿರಿನ ಮೌಲ್ಯ ಎಷ್ಟು ಪ್ರಮುಖ ಎಂದು ಅರಿವಾಯಿತು. ನನ್ನ ಈ ಒಂದು ಚಿಕ್ಕ ಲೇಖನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ .
💚💚 ಹಸಿರೇ ಉಸಿರು 💚💚
ಕೆಲವಾರು ವರುಷಗಳಿಂದ ಎಲ್ಲಾ ದಿನ ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮದಲ್ಲಿ , ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಸದ್ದು ಮಾಡಿರುವ, ಮಾಡುತ್ತಿರುವ ಸುದ್ದಿಎಂದರೆ “ಕಾಂಕ್ರೀಟ್ ಕಾಡಿನಿಂದಾಗಿ ಮುಂದೊಂದು ದಿನ ಆಮ್ಲಜನಕ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು ” ಎಂದು ! ಈ ಸುದ್ದಿಗೂ , ನಮಗೂ , ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ಬುದ್ಧಿವಂತ ಮರೆವನ್ನು ಪ್ರದರ್ಶಿಸಿ, ಪ್ರಕೃತಿ ವಿನಾಶದ ಕಡೆ ಅಲಕ್ಷ್ಯ ಮಾಡಿದ ನಮಗೆಲ್ಲಾ ಕನಸಿನಲ್ಲೂ ಊಹಿಸದ ಆ ದಿನ ಇಷ್ಟು ಬೇಗ ಎದುರಾಗಿದ್ದು ದುರಂತವೇ ಸರಿ. ಯಾರ ಮಾತನ್ನೂ ಕೇಳದ ಅತಿಜಾಣ ಮಾನವನಿಗೆ ಒಂದು ಸಣ್ಣ ವೈರಾಣು ‘ಹಸಿರಿಂದಲೇ ಉಸಿರು. ಹಸಿರಿಲ್ಲದ ಕಡೆ ಉಸಿರೂ ಇಲ್ಲ ಎಂಬ ನಿತ್ಯ ಪಾಠ ಕಲಿಸಿದ್ದು ವಿಪರ್ಯಾಸವೇ ಸರಿ.



ಚಿತ್ರ ಕೃಪೆ : ಗಿರೀಶ್ ಪ್ರಸಾದ್
💚💚ಪಾಶ್ಚಿಮಾತ್ಯ ದೇಶಗಳನ್ನು ಎಲ್ಲಾ ವಿಷಯದಲ್ಲೂ ಅನುಸರಿಸೋ ನಾವುಗಳು. ಅದ್ಯಾಕೋ ಪರಿಸರ ಸಂರಕ್ಷಣೆ ವಿಚಾರದಲ್ಲಿ ಮಾತ್ರ ಕಡೆಗಣಿಸುತ್ತೇವೆ. ‘ವಿದೇಶದಲ್ಲಿ ರಸ್ತೆಗಳು ಬಹಳ ಸ್ವಚ್ಛವಾಗಿರುತ್ತವೆಯಂತೆ’ , ‘ ಮನೆ ಸುತ್ತ ಉದ್ಯಾನವನಗಳಿರುತ್ತವಂತೆ’ , ‘ವಿದೇಶದಲ್ಲಿ ಎಲ್ಲಿ ನೋಡಿದರೂ ಹಸಿರು ಕಂಗೊಳಿಸುತ್ತದೆಯಂತೆ’ ಎಂದು ಮಾತಾಡುತ್ತಲೇ ನಮ್ಮ ಮನೆ ಅಂಗಳದಲ್ಲಿರುವ ತಾತನ ಕಾಲದ ಮರಗಳನ್ನು ನೆಲ ಸಮ ಮಾಡಿ ಆ ಜಾಗದಲ್ಲಿ ಒಂದು ರೂಮ್ , ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡುವುದರಲ್ಲಿ ವ್ಯಸ್ಥವಾಗುತ್ತ ಇರೋದು ಸೋಜಿಗವೇ ಸರಿ. ಈ ಕರೋನ ಮಹಾಮಾರಿಯನ್ನು ಪಾಶ್ಚತ್ಯ ದೇಶಗಳು, ಅಲ್ಲಿನ ಜನರು ಎದುರಿಸಲು ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು ಈ “ಹಸಿರೇ “. ಇಂದಿಗೂ ತನ್ನನ್ನೇ ನಂಬಿರುವ ಜನರ ಕೈ ಬಿಡದೆ , ಶುದ್ಧ ಆಮ್ಲಜನಕವನ್ನು ‘ಉಸಿರಾಗಿ’ ಕೊಡುತ್ತಿರುವ , ಸಸ್ಯಶಾಮಲೆಗೆ ಸಮರಾರು ? ಒಂದು ಸಣ್ಣ ವೈರಾಣು ಕಲಿಸಿರುವ ಜೀವನ ಪಾಠವನ್ನು ಈ ಜನ್ಮದಲ್ಲಿ ಮರೆಯದೇ , ಹಸಿರೇ ಉಸಿರು ಎಂಬ ಮಂತ್ರವನ್ನು ನಿತ್ಯಮಂತ್ರವಾಗಿಸಿಕೊಂಡು ಇನ್ನು ಮುಂದಾದರೂ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸಿ, ಉಳಿಸೋಣ. ಬನ್ನಿ ಉಸಿರಾಡೋಣ …🌴🌱🌲🍀🌴🌳
– ಗಿರೀಶ್ ಪ್ರಸಾದ್
ಚಿಕ್ಕದಾಗಿದ್ದರೂ ಚೊಕ್ಕ ಲೇಖನ, ಯಾಕಂದ್ದರೆ ಕನ್ನಡದಲ್ಲಿ ಓದುವ ಮಜಾನೇ ಬೇರೆ! ‘ಅನಿವಾಸಿ’ಗೆ ಸ್ವಾಗತ ಆರ್ಜೆ ಗಿರೀಶ್ ಅವರೇ.
LikeLike
Nimma thumbu hrudayada abhimaanada nudigalige namana…
LikeLike
ನಮ್ ರೇಡಿಯೊ’ ದಲ್ಲಿ ಗಿರೀಶ್ ಅವರ ಫಿದಾ ಹೋಗುವ ದನಿಯಲ್ಲಿ “ಯಾಕಂದ್ರೆ ಕನ್ನಡ ಕೇಳೋ ಮಜಾನೇ ಬೇರೆ…” ಕೇಳುತ್ತಾ ಬಂದಿದ್ದೇನೆ! ಈಗ ಅವರ ಲೇಖನಿಯಿಂದ ಅವರ ಹಸಿರು ಉಸಿರಿನ ಮೌಲ್ಯದ ಬಗ್ಗೆ ಕಳಕಳಿಯಿಂದ ಚಂದವಾಗಿ ಬರೆದ ಲೇಖನವನ್ನು ಓದುವ ಮಜಾನೇ ಬೇರೆ! ನಮ್ ಬ್ಲಾಗಿಗೆ ಚೊಚ್ಚಲ ಬರಹಕ್ಕೆ ಅಭಿನಂದನೆಗಳು. ಅನಿವಾಸಿಗೆ ಸ್ವಾಗತ ಕೋರಿ ಹೀಗೆ ಬರೆಯುತ್ತಿರಿ ಎಂದು ಆಶಿಸುವೆ! ಶ್ರೀವತ್ಸ ದೇಸಾಯಿ
LikeLiked by 1 person
Nimma Protsaha haago abhimaanakke sadaa chiraruni.. Bareyalu avakaasha kotta Savitha Avarige Dhanyavaadagalu..
LikeLike