ಹಸಿರು ಮತ್ತು ಸಂಗೀತ – ವಿದ್ವಾನ್. ಶ್ರೀ .ಪ್ರಮೋದ್ ಪ್ರಸನ್ನಕುಮಾರ್ ರುದ್ರಪಟ್ನ

ಸನ್ಮಿತ್ರ ಓದುಗರೇ !!
ನಾದಮಯ ಈ ಪ್ರಕೃತಿಯೆಲ್ಲಾ … ಪ್ರಾಕೃತಿಕ ಸಂಗೀತ ಎಷ್ಟು ಮುದ ನೀಡುವುದೋ ಓರ್ವ ಸಂಗೀತ ವಾದಕನಿಗೆ ಪ್ರಕೃತಿಯ ಮಡಿಲಲ್ಲಿ ನುಡಿಸುವ ಸಂಗೀತ, ಆಡೋ ನೃತ್ಯವು ಮಗದಷ್ಟು ಮನೋಲ್ಲಾಸ ನೀಡುವುದು. ನಮ್ಮ ಈ ವಾರದ ಸಂಚಿಕೆಯಲ್ಲಿ ಯುನೈಟೆಡ್ ಕಿಂಗ್ಡಮ್ ನ ಲಂಡನ್ ನಿವಾಸಿಯಾದ ಖ್ಯಾತ ವೈಣಿಕರಾದ ವಿದ್ವಾನ್. ಶ್ರೀ .ಪ್ರಮೋದ್ ಪ್ರಸನ್ನಕುಮಾರ್ ರುದ್ರಪಟ್ನ ‘ಹಸಿರು ಮತ್ತು ಸಂಗೀತ ‘ ಎಂಬ ಶೀರ್ಷಿಕೆಯ ಒಂದು ಸಂಕ್ಷೀಪ್ತ ಲೇಖನ ನಿಮ್ಮ ಮುಂದಿಟ್ಟಿದ್ದಾರೆ . ಓದಿ ಪ್ರತಿಕ್ರಿಯಿಸಿ . – ಸವಿ. ಸಂ

ಲೇಖಕರ ಪರಿಚಯ

ವಿದ್ವಾನ್. ಆರ್.ಪಿ.ಪ್ರಮೋದ್ ಅವರು ಯುನೈಟೆಡ್ ಕಿಂಗ್ಡಮ್ ನ ಲಂಡನ್ ನಿವಾಸಿಯಾಗಿದ್ದು ಯು.ಕೆಯ ಹೆಸರಾಂತ ವೈಣಿಕರು. ಇವರು ಬಿ.ಇ ಪದವಿದಾರರಾಗಿದ್ದು ಒಂದು ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್ವೇರ್ ಎಂಜಿನೀರ್ ಆಗಿ ಕೆಲಸ ಮಾಡುತಿದ್ದಾರೆ .
ರುದ್ರಪಟ್ಟಣದ ಸಂಗೀತದ ಮನೆತನದಿಂದ ಬಂದಿರುವ ವಿದ್ವಾನ್. ಆರ್.ಪಿ.ಪ್ರಮೋದ್ ರವರು ರುದ್ರಪಟ್ಟಣ ವೀಣಾ ಸಹೋದರರು ಎಂದೇ ಪ್ರಸಿದ್ದರಾಗಿದ್ದಾರೆ. ಈ ಸಹೋದರರು ಖ್ಯಾತ ಸಂಗೀತ ವಿದ್ವಾಂಸರಾದ ಕಂಚೀ ಕಾಮಕೋಟಿ ಪೀಠಂ ಆಸ್ಥಾನ ವಿದ್ವಾನ್ ಸುವರ್ಣ ಕರ್ನಾಟಕ ಚೇತನ R K ಪ್ರಸನ್ನ ಕುಮಾರ್ ರವರ ಸುಪುತ್ರರು.
ಈ ದ್ವಯರು – ಸಹೋದರರು ಖ್ಯಾತ ವೀಣಾ ವಾದಕರಾದ ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾಗಿದ್ದ “ವೈಣಿಕ ಪ್ರವೀಣ” ಶ್ರೀ. ಆರ್.ಎಸ್. ಕೇಶವ ಮೂರ್ತಿ ರವರ ಮೊಮ್ಮಕ್ಕಳು . ಇಬ್ಬರು 3 ಮತ್ತು 7 ನೇ ವಯಸ್ಸಿನಲ್ಲಿ ವೀಣೆ ನುಡಿಸಲು ಆರಂಭಿಸಿದರು.
ವಿದ್ವಾನ್. ಪ್ರಮೋದ್ 4 ನೇ ವಯಸ್ಸಿನಲ್ಲಿ ಕಿರುತೆರೆಯಲ್ಲಿ ಪಾದಾರ್ಪಣೆ ಮಾಡಿದರು.
ಸಹೋದರರು ತಮ್ಮ ವೀಣಾ ಯುಗಳ ವಾದನದ ಕಾರ್ಯಕ್ರಮವನ್ನು 2003 ರಲ್ಲಿ ಪ್ರಾರಂಭಿಸಿ, ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.
ಆಕಾಶವಾಣಿ, ಕನ್ನಡ ಸಂಸ್ಕೃತಿ ಇಲಾಖೆಯ ಯುವ ಸೌರಭ, ಹಲವು ಸಭೆಗಳು, ಟಿ.ವಿ ಚಾನೆಲ್‌ಗಳು, ಖಾಸಗಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ದ್ವಂದ್ವ ವೀಣಾ ವಾದನದ ಕಛೇರಿಗಳನ್ನು ಸಹೋದರರು ನೀಡಿದ್ದಾರೆ. ಅವರು ಪ್ರತಿಷ್ಠಿತ cleavland ತ್ಯಾಗರಾಜ ಆರಾಧನಾ ಉತ್ಸವ, US ಹಾಗೂ ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಂನ ಇತರ ಪ್ರಸಿದ್ಧ ವೇದಿಕೆಗಳ ಪ್ರದರ್ಶನ ನೀಡಿದ್ದಾರೆ.
ಸಹೋದರರು ತಮ್ಮ ವಿಶಿಷ್ಟ ಶೈಲಿಯ ಪ್ರದರ್ಶನಕ್ಕಾಗಿ ಉತ್ತಮ ಮೆಚ್ಚುಗೆಯನ್ನು ಗಳಿಸಿದ್ದಾರೆ.
ಸಹೋದರರು ಶುಭೋದಯ ಟ್ರಸ್ಟ್‌ನಿಂದ “ನವೋದಯ ಪ್ರಶಸ್ತಿ” ಗೆ ಭಾಜನರಾಗಿದ್ದಾರೆ.
ಇವರ ಮುಖ್ಯ ಗುರಿ ಕುಟುಂಬಕ್ಕೆ ಹಾಗೂ ರಾಷ್ಟ್ರಕ್ಕೆ ಶ್ರೇಣಿ ತರುವುದು. ಭಾರತೀಯ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡುವುದು.

🎼 🎼 🎼 🎼 🎼 🎼 🎼 🎼

ಹಸಿರು ಉಸಿರು !!
ಆಹಾ!! ಎಷ್ಟು ಸೊಗಸಾದ ಶೀರ್ಷಿಕೆ.ಈ ಭೂಮಿಯ ಸಕಲ ವಾಯು ಜೀವರಾಶಿಗಳ ಕಾರ್ಯ ಚಟುವಟಿಕೆಗಳ ಸುಲಲಿತ ಚಲನೆಗೆ, ಚಾಲನೆ ನೀಡುವ, ಉತ್ತೇಜನ ನೀಡುವ, ಅನರ್ಘ್ಯವಾದ ಅತ್ಯಮೂಲ್ಯವಾದ ಉಸಿರು ನೀಡುವ ಹಸಿರು ಸಿರಿಗೆ ನಮ್ಮ ಹೃದಯ ಪೂರ್ವಕ ಕೃತಜ್ಞತೆಗಳು. 
ಇಂತಹ ಸುಂದರ ಹಸಿರು ವನ ರಾಶಿಯಲ್ಲಿ ಸಂಗೀತ ಹಾಡುವುದಾಗಲಿ, ನುಡಿಸುವುದಾಗಲಿ, ಕೇಳುವುದಾಗಲಿ ಮಾಡಿದಾಗ ನಮ್ಮ ಮನಕೆ ಮುದ, ಮೋದ ಹಾಗೂ ಪ್ರಮೋದ ನೀಡುತ್ತದೆ. ಅಷ್ಟೇ ಅಲ್ಲದೆ ಈ ಪ್ರಶಾಂತವಾದ ಹಸಿರು ನೋಟ ಕಣ್ಮನ ಪ್ರಸನ್ನವಾಗಿಸುತ್ತದೆ. 


ಪರಿಸರ ಪ್ರೇಮಿಗಳಾದ ನಾವು, ಈ ಮನಮೋಹಕ ವಾತಾವರಣದಲ್ಲಿ ವೀಣಾವಾದನ ಮಾಡಿದಾಗ ವಿಶೇಷವಾದ ಅತಿಶಯವಾದ ಜ್ಞಾನ ಪಡೆಯಲು ಸಹಾಯ ಮಾಡುತ್ತದೆ. ದೈನಂದಿನ ತಾಪತ್ರಯಗಳ ನಡುವೆ, ಈ ರೀತಿಯ ಪ್ರಯೋಗಗಳು ನಮ್ಮೆಲ್ಲರ ಜೀವನದಲ್ಲಿ ಅತ್ಯವಶ್ಯಕ. 
ಇದರಲ್ಲಿ ಸಿಗುವ ಪರಿಪೂರ್ಣತೆ, ಸ್ವಚ್ಛವಾದ ಸ್ವಾತಿ ಮುತ್ತಿನ ಹಾಗೆ ನಮ್ಮ ಹೃನ್ಮನಗಳಿಗೆ ಧನ್ಯತಾ ಭಾವ ಉಂಟುಮಾಡುತ್ತದೆ. 


ನಮ್ಮೆಲ್ಲರ ಜೀವನಾಧಾರವಾಗಿರುವ ಹಸಿರಿನ ಜೊತೆಗೆ , ಅನಂತವಾದ ಸಂಗೀತವಾಗಲಿ, ನಾಟ್ಯವಾಗಲಿ ಅಥವಾ ಯಾವ ಕಲೆಯಾಗಲಿ ಆಸ್ವಾದಿಸಿದರೆ, ಕಷ್ಟ, ನೋವು, ಸಂಕಟ, ರೋಗ ರುಜಿನಗಳು ಗುಣವಾಗುತ್ತದೆ ಎಂಬುದು ಅನೇಕರ ಅನುಭವ. ಏಕೆಂದರೆ ಹಸಿರು ಮತ್ತು ಸಂಗೀತ , ರಸದೌತಣದೊಂದಿಗೆ ಚಿಕಿತ್ಸಕ ಶಕ್ತಿಯೂ ಹೌದು. ಈ ರಾಸಾನುಭವವನ್ನು ಸರಿಸೃಪಾದಿಯಾಗಿ ಎಲ್ಲಾ ಜೀವಿಗಳು ಆನಂದಿಸುತ್ತದೆ ಎಂಬ ಉಲ್ಲೇಖವಿದೆ.

 
‘ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನ ರಸಂಫಣೀ’ ಎನ್ನುತ್ತಾರೆ,  ಅಂದರೆ ಮಕ್ಕಳು, ಪ್ರಾಣಿಗಳೂ, ಸರೀಸೃಪವಾದ ಹಾವೂ ಸಹ ಸಂಗೀತರಸ ಮಾಧುರ್ಯವನ್ನು ಸವಿಯುತ್ತವೆ.  


ಹಸಿರಲ್ಲಿ ಸಂಗೀತ ಎಂಬ ಪರಿಕಲ್ಪನೆಯನ್ನು ಹೊತ್ತುತಂದ ಅನಿವಾಸಿ ತಂಗುದಾಣದ ಪ್ರಸ್ತುತ ಸಂಪಾದಕಿಯಾದ ಶ್ರೀಮತಿ. ಸವಿತಾ ಸುರೇಶ್ ರವರಿಗೆ ನನ್ನ ಧನ್ಯವಾದಗಳು. 
ಭೂ ಪ್ರದೇಶದಲ್ಲಿ ಸುಮಾರು 25% ಶೇಖಡ ಭಾಗ ಹಸಿರಿನಿಂದ ತುಂಬಿದೆ ಎನ್ನಬಹುದು. ಈ ಹಸಿರನ್ನು ಉಳಿಸಿ ಮುಂದಿನ ಸಾವಿರಾರು ಪೀಳಿಗೆಗೆ ಅನುಕೂಲ ಮಾಡಿಕೊಡುವ ಬೃಹತ್ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.. 


ಹಸಿರು ಬೆಳೆಸೋಣ !!

ಪರಿಸರ ಉಳಿಸೋಣ !!

ಸಂಗೀತರಸ ಸವಿಯೋಣ !!

🎼 🎼 🎼 🎼 🎼 🎼 🎼 🎼

ಹಸಿರ ಬಸಿರಲ್ಲಿ ಓರ್ವ ವೈಣಿಕನಾಗಿ ಇನ್ನೋರ್ವ ವೈಣಿಕ ನನ್ನ ಸಹೋದರನಾದ ವಿದ್ವಾನ್. ಶ್ರೀ .ಪ್ರಶಾಂತ್ ಪ್ರಸನ್ನಕುಮಾರ್ ರುದ್ರಪಟ್ನ ಸಂಗಡ ಕೂಡಿ ಸಂಗೀತ ನುಡಿಸುದ ನಾಗಮಂಡಲ ಚಿತ್ರದ, ಸಿ. ಅಶ್ವಥ್ ಅವರ ಸಂಗೀತ ನಿರ್ದೇಶನದ , ಶ್ರೀಮತಿ. ಸಂಗೀತ್ ಕಟ್ಟಿ ಅವರ ಮೂಲ ಗಾಯನದ , ‘ಈ ಹಸಿರು ಸಿರಿಯಲಿ ‘ ಎಂಬ ಹಾಡನ್ನು ನುಡಿಸಿದ್ದೇವೆ . ವೀಕ್ಷಣೆಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ .

ವಿಡಿಯೋ ಕೃಪೆ : ಧನ್ಯ ರಾಮನಾಥ್ ಹಾಗು ಸ್ವಾತಿ ಲಕ್ಷ್ಮೀಶ

-ವಿದ್ವಾನ್. ಶ್ರೀ .ಪ್ರಮೋದ್ ಪ್ರಸನ್ನಕುಮಾರ್ ರುದ್ರಪಟ್ನ

7 thoughts on “ಹಸಿರು ಮತ್ತು ಸಂಗೀತ – ವಿದ್ವಾನ್. ಶ್ರೀ .ಪ್ರಮೋದ್ ಪ್ರಸನ್ನಕುಮಾರ್ ರುದ್ರಪಟ್ನ

  1. ಸಂಪಾದಕಿ ಸವಿತಾ ಅವರಿಗೆ ಅಭಿನಂದನೆಗಳು. ನಮಗೆ ಗೊತ್ತಿಲ್ಲದ ಪ್ರತೊಭೆಗಳನ್ನು ಪರಿಚಯಾಡಿ ಕೊಡುತ್ತಿರುವುದಕ್ಕೆ.

    ರುದ್ರಪಟ್ನ ಅವರ ಪರಿಚಯ ಓದಿ ಅವರ ಅಗಾಧ ಪ್ರತಿಭೆಯ ದರ್ಶನವಾಯಿತು. ಹಸಿರಿನ ಜೊತೆ ಸಂಗೀತದ ಸಮ್ಮಿಲನ!

    ಜೊತೆ ಕಣ್ಕಿವಿ ತಣಿಸುವ ವೀಣಾವಾದನ.

    -ಕೇಶವ

    Like

  2. ಈ ವಾರದ ಲೇಖನ ಓದಿ ಮೈಸೂರಿನ ನನ್ನ ವಾಣಿ ವಿದ್ಯಾ ಮಂದಿರ ಶಾಲೆಯ ದಿನಗಳು ನೆನಪಾದವು. ಪ್ರಮೋದ್ ಅವರ ತಂದೆ ಪ್ರಸನ್ನ ಮತ್ತು ಚಿಕ್ಕಪ್ಪ ಪದ್ಮನಾಭ ಇಬ್ಬರು ಶಾಲೆಯಲ್ಲಿ ನನ್ನ ಹಿರಿಯ ಸಹಪಾಠಿಗಳಾಗಿದ್ದರು. ನಾವೆಲ್ಲ ಒಟ್ಟಿಗೆ ಶಾಲೆಯ ಬೆಳಗಿನ ಪ್ರಾರ್ಥನೆಯನ್ನು ಹಾಡುತ್ತಿದ್ದದ್ದು ಇನ್ನು ಹಸಿರಾಗಿದೆ. ಇಂದು ಪ್ರಮೋದ್ ಮತ್ತು ಪ್ರಶಾಂತ ಅವರನ್ನು ನೋಡಿದಾಗ, ಪ್ರಸನ್ನ ಮತ್ತು ಪದ್ಮನಾಭರು ಹೀಗೆ ಒಟ್ಟಿಗೆ ಕುಳಿತು ವೀಣೆ ನುಡಿಸುತ್ತಿದ್ದದ್ದು ನೆನಪಾಯಿತು. ಅವರ ಮನೆಯೇ ವೀಣಾವಾದನದ ಇನ್ನೊಂದು ಹೆಸರು. ಅಜ್ಜ, ಅರ. ಎಸ. ಕೇಶವಮೂರ್ತಿ, ದೊಡ್ಡಪ್ಪ ಆರ್ . ಕೆ. ಸೂರ್ಯನಾರಾಯಣ ಅಂತಹ ದಿಗ್ಗಜಗಳ ಪರಂಪರೆಯ ಕುಟುಂಬದಲ್ಲಿ ಜನಿಸಿರುವ ಪ್ರಮೋದ್ ಮತ್ತು ಪ್ರಶಾಂತ ಅವರಿಗೆ, ಜನ್ಮತಃ ಲಾಭವಾಗಿರುವ ಈ ಕಲೆ ಸಹಜವಾಗಿಯೇ ಇಷ್ಟೊಂದು ಮಧುರವಾಗಿ ಹೊರಹೊಮ್ಮಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅವರ ವೀಣೆಯ ಮಧುರನಾದವನ್ನು ನಮಗೆಲ್ಲ ಪರಿಚಯಿಸಿದ್ದಕ್ಕೆ ಸವಿತರಿಗೆ ಧನ್ಯವಾದಗಳು.
    ಉಮಾ ವೆಂಕಟೇಶ್

    Like

  3. ಇವರ ವೀಣಾವಾದನ ಕೇಳಿದ್ದೇನೆ. ಕೇಳಿ ಬೆರಗಾಗಿದ್ದೇನೆ.
    ಇಂತವರು ಇಲ್ಲಿರುವ ಕಾರಣ, ನಮಗೆ ತಾಯ್ನಾಡಿನ ನಾದಗಳು ಕಿವಿಗೆ ಬಿದ್ದು ತಂಪೆರೆಯುತ್ತವೆ. ಇದು ನಮ್ಮ ಅದ್ರೃಷ್ಟ..
    All the very best to you both Rudraptna brothers.

    Liked by 1 person

  4. ’ಹಸಿರು ಉಸಿರು’ ಸರಣಿಯ ಈ ವಾರದ ಲೇಖನ ಹೊಸ ಚೈತನ್ಯವನ್ನು ತಂದು ಕೊಟ್ಟಿದೆ. ರುದ್ರಪಟ್ಟಣಮ್ (ಪಟ್ನಮ್?) ಸಂಗೀತಕ್ಕೇ ಪರ್ಯಾಯ ಶಬ್ದವಾಗುವಂತೆ ಹೆಸರಾಂತ ವೈಣಿಕರು, ಗಮಕಿಗಳು, ಮತ್ತು ಗಾಯಕರ ಹೆಸರುಗಳನ್ನು ತನ್ನೊಡನೆ ಜೋಡಿಸಿಕೊಂಡಿದೆ! ಅಂದರೆ ಇದು ಆ ಮಣ್ಣಿನ ಪ್ರಭಾವವೋ ಅಥವಾ ಮನೆತನದ ಜೀನ್ಸ್ ಹಾಗಿದೆಯೋ? ಇದರ ಬಗ್ಗೆ ಸಾಕಷ್ಟು ವೈಜ್ಞಾನಿಕ ಲೇಖನಗಳನ್ನೂ ಬರೆದದ್ದಿದೆ. ಅದೇ ತರ ”ಸಂಗೀತದ ಪ್ರಭಾವದಿಂದ ಹಸಿರು ಉಸಿರಿನ ಸಸ್ಯಗಳು ಸಮೃದ್ಧವಾಗಿ ಬೆಳೆಯುತ್ತವೆ’ ಅಂತ ಒಂದು ಸುದ್ದಿ 1960ರ ದಶಕದಲ್ಲಿ ನಾನು ಕಾಲೇಜಿನಲ್ಲಿದ್ದಾಗ ಅಣ್ಣಾಮಲೈ ವಿಶ್ವವಿದ್ಯಾಲಯದ ಸಿಂಗ್ ಎನ್ನುವ ಸಸ್ಯಶಾಸ್ತ್ರಜ್ಞ (ಅದಕ್ಕೂ ಮೊದಲು ಜಗದೀಶ್ ಚಂದ್ರ ಬೋಸ್) ಸುದ್ದಿಮಾಡಿದ್ದರ ನೆನಪು ನನ್ನ ಸ್ಮೃತಿಪಟಲದಲ್ಲಿ ಹಸಿರಾಗಿ ಉಳಿದಿದೆ! ಆನಂತರ ’ಅದು ಸರಿಯಲ್ಲ’ ಅಂತ ಬೇರೆಯವರೂ ಈ ವಿವಾದದಲ್ಲಿ ಧುಮುಕಿದರು. ಅದೇನೇ ಇರಲಿ, ಹಸಿರಿನ ಸಿರಿ ಸಂಗೀತದ ಸಿರಿಯನ್ನು ವರ್ಧಿಸುತ್ತದೆ ಅನ್ನುವ ಈ ಸಹೋದರರ ಲೇಖನ ಮಾತ್ರ ಸ್ವಾಗತಾರ್ಹ! ಅವರು ಕೊಡುವ ಕಾರಣ ಮಾತ್ರ ನಿರ್ವಿವಾದ : ”ಈ ಮನಮೋಹಕ ವಾತಾವರಣದಲ್ಲಿ ವೀಣಾವಾದನ ಮಾಡಿದಾಗ ವಿಶೇಷವಾದ ಅತಿಶಯವಾದ ಜ್ಞಾನ ಪಡೆಯಲು ಸಹಾಯ ಮಾಡುತ್ತದೆ. ದೈನಂದಿನ ತಾಪತ್ರಯಗಳ ನಡುವೆ, ಈ ರೀತಿಯ ಪ್ರಯೋಗಗಳು ನಮ್ಮೆಲ್ಲರ ಜೀವನದಲ್ಲಿ ಅತ್ಯವಶ್ಯಕ” ಎಂದು ಇವರು ಅನ್ನುತ್ತಾರೆ. ನಾನು ಎರಡು ಸಲ ಅವರ ವೀಣಾವಾದನವನ್ನು ಕೇಳಿ ಇಷ್ಟಪಟ್ಟಿದ್ದೇನೆ, ವರ ಪ್ರತಿಭೆಗೆ ಬೆರಗಾಗಿದ್ದೇನೆ. ಹೊರಕಿವಿಗಳಿರದೇ ಬರೀ ಒಳಕಿವಿಗಳಿರುವ ಸರೀಸೃಪವೂ ತಲೆದೂಗುವದಕ್ಕೆ (” …ವೇತ್ತಿ ಗಾನ ರಸಂ ಫಣಿಃ) ಆಧಾರಗಳಿರುವಾಗ ಮನುಷ್ಯರಿಗೆ ’ನೋ ಎಕ್ಸ್ ಕ್ಯೂಸ್’! LP ಕಾಲಕ್ಕೂ ಮೊದಲೇ ಪ್ರಾರಂಭವಾದ ಈ ಮನೆತನದ ಸಂಗೀತವಾಹಿನಿ LP ನಿಂತುಹೋದರೂ RP ಶಾಶ್ವತವಾಗಿರುವದರಲ್ಲಿ ಸಂದೇಹವಿಲ್ಲ. ಲೇಖನ ಬರೆದ ಪ್ರಮೋದ, ಪ್ರಸನ್ನ ಕುಮಾರರಿಗೂ ಹೊಸ ಪ್ರಯತ್ನದ ಸಂಪಾದಕಿ ಸವಿತಾಗೂ ಅಬಿನಂನೆಗಳು!
    ಶ್ರೀವತ್ಸ ದೇಸಾಯಿ

    Liked by 1 person

    • ನಿಮ್ಮ ಪ್ರಶಂಸೆಯ, ಉತ್ತೇಜಿತ ನುಡಿಗಳಿಗೆ ಧನ್ಯವಾದಗಳು ದೇಸಾಯಿ ಅವರೆ 🙏🙏🙏🙏

      Like

  5. Watching the two talented brothers sitting amidst the green space all around them and listening to them play a famous Kannada song was a real treat today… ಕಣ್ಮನ ಪ್ರಸನ್ನವಾಯಿತು …Rudrapatna Brothers wish you all the best!

    Like

  6. Watching the two talented musician brothers sitting amidst the green space all around them and listening to them play a famous Kannada song was a real treat today…Rudrapatna Brothers wish you all the best!

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.