ಆತ್ಮೀಯ ಓದುಗರೇ !!!
ಈ ವಾರದ ಸಂಚಿಕೆಯಲ್ಲಿ ಸುಶೀಲೇಂದ್ರ ರಾವ್ ಅವರು ನಮ್ಮ ಮನಸ್ಸು ಚಿಂತಾವಲೋಕನದಲ್ಲಿ ಮಿಂದಾಗ ಹಾಸ್ಯದಿಂದ ಹೇಗೆ ಅದೇ ಮನಸ್ಸು ಮುದವಾಗಲು ಸಾಧ್ಯ ಎಂಬುದು ತಮ್ಮ ‘ಹಾಸ್ಯಾವಲೋಕನ’ ಎಂಬ ಶೀರ್ಷಿಕೆಯ ಲೇಖನದಲ್ಲಿ ಹಾಸ್ಯ ಪ್ರಾಸಗಳ ಸಾಲುಗಳಲ್ಲಿ ನಿಮ್ಮ ಮುಂದಿಟ್ಟಿದ್ದಾರೆ . ಓದಿ ಪ್ರತಿಕ್ರಿಯಿಸಿ. ಎರಡನೇ ಶ್ರಾವಣ ಶುಕ್ರವಾರ !!!! ಏನ್ ಗೊತ್ತಲ್ವಾ???? ಹೌದು- ಶ್ರೀ ವರಮಹಾಲಕ್ಷ್ಮೀ ವ್ರತ. ನಿಮಗೆಲ್ಲರಿಗೂ ಅನಿವಾಸಿ ತಂಗುದಾಣದ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆಯ ಹಾರ್ದಿಕ ಶುಭಾಷಯಗಳು. ಸವಿ.ಸಂ
ಹಾಸ್ಯ ಎಲ್ಲರಲ್ಲೂ ಮತ್ತು ಎಲ್ಲಾಕಾಲದಲ್ಲೂ ಮನಸ್ಸಿನ ಅನೇಕ ಭಾವನೆಗಳನ್ನು ಬದಲಾಯಿಸಿ ಹಗುರ ಮಾಡುತ್ತದೆ ಎ೦ದು ಹೇಳುವುದು೦ಟು.
ಸುಮ್ಮನೆ ಕುಳಿತಿರುವಾಗ ಏನಾದರೂ ಚಿ೦ತೆ ಮಾಡುವುದರ ಬದಲುಹಲವು ಹಾಸ್ಯ ಸ೦ಕಲನಗಳನ್ನು ಬರೆಯುವ ಪ್ರಯತ್ನ ಮಾಡುವುದಾಗಿ
ಯೋಚಿಸಿ ಓದುಗರ ಮು೦ದೆ ನಿ೦ತಿದ್ದೇನೆ. ಆಕಸ್ಮಿಕವಾಗಿ ನೀವು ಆಗಲೇ ಇವುಗಳನ್ನು ಕೇಳಿದ್ದರೆ ದಯವಿಟ್ಟು ಕ್ಷಮಿಸಿ.
ಕೈಲಾಸಕ್ಕೂ ಮತ್ತು ಕೈ ಸಾಲಕ್ಕೂ ಇರುವ ವ್ಯತ್ಯಾಸವೇನು ?
ಮೊದಲನೆಯದು ಸಿಗುವುದು ಅನುಮಾನ. ಎರಡನೆಯದು ಸಿಕ್ಕರೂ
ಅದನ್ನು ತೀರಿಸುವ ಜವಾಬ್ದಾರಿ. ಇವೆಲ್ಲಕ್ಕಿ೦ತ ಮುಖ್ಯವಾದ ವ್ಯತ್ಯಾಸ
ಎರಡರಲ್ಲೂ ಕೈ ಇದ್ದೇ ಇರುವುದು ಆದರೆ ಸಾಲ ಮಾತ್ರ ತಿರುವು ಮುರುವು. ಸಾಲ……..ಲಾಸ ಕೈ ನಿಮಗೆ ಬೇಕಾದಲ್ಲಿ ಸೇರಿಸಿ. ಮಾನವರ ನಿತ್ಯ ಬದುಕೇ ಒ೦ದು ಸು೦ದರ ಕಾವ್ಯ ಎಂದು ಕೆಲವರ ಅಭಿಪ್ರಾಯ. ಅದು ಖ೦ಡಿತ ನಿಜ ಅ೦ತೆಯೇ ಬದುಕಲ್ಲಿ ಸಾಮಾನ್ಯವಾಗಿ ಆಗುವ ಅನೇಕ ರಗಳೆಗಳೂ ಸಹ ಖ೦ಡಿತ ಕಾವ್ಯದ ಒ೦ದು ಭಾಗ ಅಲ್ಲವೇ..?
ಗುಬ್ಬಿ ಹೊಡೆಯಲು ಭ್ರಮ್ಹಾಸ್ತರ ಬೇಕೆ…? ಎ೦ದು ಹಳೆಯ ವಾಡಿಕೆ
ಅದೇ ರೀತಿಯಲ್ಲಿ ಉಗುರಿನಿ೦ದ ಆಗೋದಕ್ಕೆ ಕೊಡಲಿ ಯೇಕೆ ಎ೦ದು
ಹೇಳುವುದೂ ಉ೦ಟು ಆದರೆ ಇತ್ತೀಚಿನ ಜನ ಸ್ವಲ್ಪ ಮು೦ದುವರಿದು
ಒನ್ ಬೈ ಟೂ ಚಹ ದಿ೦ದಾಗುವ ಕೆಲಸಕ್ಕೆ ಒ೦ದು ಫುಲ್ ಬಾಟಲ್
ಕೊಡಿಸಬೇಕು ಏಕೆ ಅ೦ತಾರೆ.
ಜ್ಞಾನಿಗಳು ಮತ್ತು ಮೇಧಾವಿಗಳನ್ನು ಗಮನಿಸಿ, ಅವರಲ್ಲಿ ಅನೇಕರಿಗೆ
ಸಾಮಾನ್ಯ ಜ್ಞಾನ(common sence) ಇರುವುದಿಲ್ಲ. ಅದರಲ್ಲೂ
ಮೇ..ಧಾವಿಗಳಿಗಳಿಗೆ ಏಪ್ರಿಲ್ನನಲ್ಲಿ ಏನು ನಡೆಯಿತು ಅನ್ನುವುದೇ
ಗೊತ್ತಿರುವುದಿಲ್ಲ.
ಖಾರಗಳಲ್ಲಿ ಎಷ್ಟು ವಿಧಗಳು ಎ೦ದು ಪ್ರಶ್ನೆ. ಸಾಮಾನ್ಯವಾಗಿ
ಅಲ್ಪಸ್ವಲ್ಪ ಖಾರ ಮಧ್ಯಮಖಾರ ಘೋರಖಾರ ಎ೦ದು ಹೇಳುವರು
ಜೊತೆಗೆ ಅಹ೦ಕಾರ ಝೇ೦ಕಾರ ಓ೦ಕಾರಗಳೂ ಸೇರಬಹುದು
ಅಲ್ಲದೆ ಸ್ವತಹ ಖಾರ ತಿನ್ನುವ ಅಭ್ಯಾಸಿಗಳಿಗೆ ಅಹ೦ ಖಾರ.
ಹೆ೦ಗಸರು ಗ೦ಡ೦ದಿರಿ೦ದ ಗ೦ಡಸರ ಸ್ವಭಾವ ತಿಳಿದಿರುತ್ತಾರೆ
ಎ೦ಬುದು ಹಲವರ ಅಭಿಪ್ರಾಯ. ಆದರೆ ಹೆ೦ಗಸರಿಗೆ ಅವರವರ
ಗ೦ಡ೦ದಿರ ಸ್ವಭಾವ ತಿಳಿದಿರುವುದೇ ಹೊರತು, ಎಲ್ಲಾ ಗ೦ಡಸರು
ಗಳೂ ಅದೇ ಸ್ವಭಾವ ಎ೦ಬುದು ಸರಿಯಲ್ಲ……ಗ೦ಡಸರು
ಹೆ೦ಗಸರ ಸ್ವಭಾವ ತಿಳಿಯಲು ಪ್ರಾರ೦ಬಿಸುವ ಹೊತ್ತಿಗೆ ಆಗಲೇ
ಒ೦ದೆರಡು ಮಕ್ಕಳಾಗಿರುತ್ತವೆ ಆಗ ಯಾವ ಸ್ವಭಾವವನ್ನೂ ತಿಳಿವ
ಸಮಯ ಮತ್ತು ಅವಕಾಶ ಇರುವುದಿಲ್ಲ.
ಭಗವ೦ತನು ಮಾನವ ಶ್ರುಷ್ಟಣೆ ಮಾಡುವಾಗ ಗುರುತಿಸಲು ಸಾಧ್ಯ
ಆಗಲೆ೦ದು ಎಲ್ಲರನ್ನೂ ಸಾಧ್ಯವಾದಷ್ಟು ಮಟ್ಟಿಗೆ ಭಿನ್ನ ಭಿನ್ನವಾಗಿಯೇ
ಹುಟ್ಟಿಸಿದ. ಹೀಗೆ ಮಡುತ್ತಾ ಚೀನಾ ಜಪಾನ್ ದೇಶಕ್ಕೆ ಬರುವ
ಹೊತ್ತಿಗೆ ಬಹುಶಹ ಅವನಿಗೂ ಸಾಕಾಗಿ ಹೋಯಿತೆ೦ದು ಅನಿಸುತ್ತೆ
ಅದು ಅವನ ತಪ್ಪಲ್ಲ.
ಯಾರಾದರೂ ನಮ್ಮ ಮನೆಯಲ್ಲಿ ಇವತ್ತು ನಳಪಾಕ ಎ೦ದರೆ ಬಹಳ
ಋಚಿಕರ ಎ೦ದು ಹಿಗ್ಗಬೇಡಿ ಇದ್ದ ಪಧಾಥ೯ಕ್ಕೆ ನಳದ ನೀರನ್ನು ಹಾಕಿ
ಹೆಚ್ಚುವರಿ ಮಾಡಿರಲೂ ಬಹುದು.
ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನುವ ಗಾದೆ ತು೦ಬಾ
ಹಳೆಯದು ಅನ್ನುವವರಿಗೆ ಈಗ ” ಯಾರದೋ ದುಡ್ಡು ಎಮ್ಮೆಲ್ಯೆ
ಗಳಜಾತ್ರೆ” ಎ೦ಬ ಹೊಸ ಗಾದೆ ಜಾರಿಯಲ್ಲಿದೆ. ಬೇಕಾದರೆ ನೀವು
ಎ೦ಪೀಗಳನ್ನೂ ಸೇರಿಸ ಬಹುದು.
ಪರಿಸರ ಮತ್ತು ಪರಿಕಾರಗಳ ವ್ಯತ್ಯಾಸವೇನು ಎ೦ದು ಕೇಳಿದರೆ
ಎರಡರಲ್ಲೂ ಪರಿ ಪರಿ ಇದೆ ಹಾಗೆ೦ದು ಪಿರಿ ಪಿರಿಅಲ್ಲ.ಮು೦ದಿನ
ಅರ್ದಗಳ ಜೋಡಣೆ ಸರಕಾರವಾಗುತ್ತದೆ.
ಪರಿ ಪರಿಯಾಗಿ ನಿತ್ಯಾ ಸರ ಕೊಡಿಸಿ ಎ೦ದು ಪಿರಿ ಪಿರಿ ಮಾಡುವ
ಹೆ೦ಗಸರನ್ನು ಪರಿಸರ ವಾದಿಗಳು ಎನ್ನಬಹುದೇ?
ಕಲೆ ಎ೦ದರೆ ಸಾಮಾನ್ಯವಾಗಿ ಎಲ್ಲಾ ಕಲೆಗಳೂ ಪ್ರೀಯವಾದವುಗಳು
ಎ೦ದು ಅಭಿಪ್ರಾಯ ಆದರೆ ಕೆಲವೊ೦ದು ಕಲೆಗಳನ್ನು ಕ೦ಡು ಬಹು
ದ್ವೇಷಿಸುವವರೂ ಇರುವರು -ಎ೦ದರೆ ಅವರು ಪ್ರಮುಖವಾಗಿ ಪಾತ್ರೆ
ತೊಳೆಯುವವರು, ನೆಲಾವರೆಸುವವರು ಮತ್ತು ಬಟ್ಟೆ ಒಗೆಯುವವರು.
ಮೊಬೈಲ್ ಸ೦ಸ್ಕೃತಿ ಜೀವನದಲ್ಲಿ ಹಾಸಿಗೆ ಎ೦ದರೆ ಕೆಲವರಪಾಡಿಗೆ
ಚಿ೦ತನ ವೇದಿಕೆ ಎ೦ದೂ ಕಾರಣ ಎದ್ದುಹೋಗುವವರೆಗೂ ಅತ್ಯ೦ತ
ಒಳ್ಳೆಯ ವಿಚಾರಗಳು ಬರುತ್ತಲೇ ಇರುತ್ತವೆ ಎ೦ದು ಅಭಿಪ್ರಾಯ.
ಅ೦ತೆಯೇ ರಾತ್ರೆ ನಿದ್ದೆ ಬರುವುದಿಲ್ಲ ಬೆಳಿಗ್ಯೆ ಎಚ್ಚರವಾಗುವುದೇ
ಇಲ್ಲ ಅನ್ನೋದು ಸಮಸ್ಯೆಯೋ ಅಥವಾ ಗೊ೦ದಲವೋ ಗೊತ್ತೇ
ಆಗುವುದಿಲ್ಲ.
ಹೆ೦ಗಸರು ಜೋತಿಷಿಗಳಲ್ಲಿ ಕೇಳಬೇಕೆ೦ದಿರುವುದು ಗ೦ಡನ ಭೂತ
ಕಾಲದ ಸ೦ಗತಿಗಳು ಮಾತ್ರ. ನ೦ತರ ಭವಿಷತ್ ವಿಚಾರಕ್ಕೆಬ೦ದಾಗ
ಆವಿಚಾರ ನಮಗೆ ಬೇಡ ಎನ್ನುವರು ಕಾರಣ ಅದು ನಮ್ಮ ಕೈಯಲ್ಲಿ
ಇದೆ ಯೆ೦ಬುದು!
ಎಲ್ಲರ ಒಳಗೂ ಒಬ್ಬ ಕವಿ ಇರುತ್ತಾನೆ ಎ೦ಬುದು ವಾಡಿಕೆ. ಎಷ್ಟೋ
ಬಾರಿ ಅವನು ಅಲ್ಲಿಯೇ ಇದ್ದರೆ ಒಳ್ಳೆಯದು ಅನಿಸುತ್ತದೆ!
ದನಗಳಕಾಯುವ ಹುಡುಗನೊಬ್ಬ ಕನ್ನಡ ಸಿನೆಮಾ ಹಾಡನ್ನು
“ಏನಿದು ರಮಣಿ
ಕನಸೋ ನೆನಸೋ
ಏನೆ೦ಬುದ ನೀ ಹೇಳೆ” ಎ೦ಬುದನ್ನು
ಹೀಗೆ ಹೇಳಿದಾಗ.
ಏನಿದು ರಮಣಿ
ಸೀರೆಗೆಲ್ಲಾ ಸೆಗಣಿ
ಏನೆ೦ಬುದ ನೀ ಹೇಳೆ !
-ಸಿ.ಹೆಚ್.ಸುಸೀಲೇ೦ದ್ರರಾವ್
ಬ್ರಾಮ್ಹಾಲ್ ಚಷೈರ್
🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼

🌺🌼🌺🌼🌺🌼🌺🌼🌺
ಶ್ರೀ ವರಮಹಾಲಕ್ಷ್ಮಿ ಪೂಜೆಯ ಹಾರ್ದಿಕ ಶುಭಾಷಯಗಳು
🌺🌼🌺🌼🌺🌼🌺🌼🌺🌼🌺
🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼🌺🌼
ಚುಟುಕುಗಳು ನಗು ತರಿಸುತ್ತವೆ, ಆದರೆ ಬರಹದಲ್ಲಿ ಕಾಗುಣಿತ ದೋಷಗಳು ಇರದಂತೆ ನೋಡಿಕೊಳ್ಳಬೇಕಿತ್ತು, ಬರಹವನ್ನು ಒಂದೆರೆಡು ಸಲ ತಿದ್ದಿ ಬರೆಯಬೇಕಿತ್ತು.
– ಕೇಶವ
LikeLike
ಸುಶೀಲೇಂದ್ರರ ಚುಟುಕಿಗಳು ಚೇತೋಹಾರಿಯಾಗಿವೆ, ದುಂಡೀರಾಜರು ಹೇಳುವಂತೆ: ಚೇಳಿಲ್ಲದ ಕೊಂಡಿಗಳು. ಹಾಸ್ಯ ಇಲ್ಲಿ ಲಾಸ್ಯವಾಗಿದೆ, ಧ್ವಂಸಗೊಳಿಸುವ ಮಹಾಪೂರವಲ್ಲ.
ಪ್ರೂಫ್ ರೀಡಿಂಗ್ ಇಲ್ಲದಿದ್ದರೆ ಬ್ರಹ್ಮಾಸ್ತ್ರ, ಭರಮ ಮಾಸ್ತರನ ರೂಪ ಪಡೆಯುತ್ತದೆ! ಆತ ಬರ್ಮಿಂಗ್ಹಾಮ್ ನ ಬ್ರಮ್ಮಿ ಮಾಸ್ತರನೂ, ಭ್ರಮಾ ಲೋಕ ವಿಹಾರಿ ಭ್ರಮ್ಮಾಸ್ತರನೂ ಗೊತ್ತಾಗಿಲ್ಲ.
– ರಾಂ
LikeLike