ಲಕ್ಷ್ಮಮ್ಮ – ಡಾ||ಸತ್ಯವತಿ ಮೂರ್ತಿ ಹಾಗು ಪೂರಿ-ಸಿ.ಹೆಚ್.ಸುಶೀಲೇ೦ದ್ರ ರಾವ್

ಆತ್ಮೀಯ ಓದುಗರೇ !!!
ತಾವೆಲ್ಲ ವಿಧವಿಧವಾದ ಜೀವ-ನಿರ್ಜೀವ ವಸ್ತುಗಳ, ಭಾವನೆಗಳ, ಪ್ರಕೃತಿಯ, ವ್ಯಕ್ತಿಗಳನ್ನಾದಾರಿತ ಕವಿತೆಗಳನ್ನು ಓದುತ್ತಾ ಬಂದಿದ್ದೀರಿ. ಆದರೆ ನಮ್ಮ ಈ ವಾರದ ಸಂಚಿಕೆಯಲ್ಲಿ ಡಾ||ಸತ್ಯವತಿ ಮೂರ್ತಿ ರವರು ತಮ್ಮ ಮನೆಗೆಲಸಕ್ಕೆ ಬರುತ್ತಿದ್ದ ‘ಲಕ್ಷಮ್ಮ’ ಎಂಬಾಕೆಯ ಮೇಲೆ ಒಂದು ಕಿರುಗವನವನ್ನು ಹಾಗು ಶ್ರೀ. ಸಿ.ಹೆಚ್. ಸುಶೀಲೇಂದ್ರ ರಾವ್ ರವರ ‘ಪೂರಿ’ ಎಂಬ ಶೀರ್ಷಿಕೆಯ ಒಂದು ವಿನೋದಗವನವನ್ನು ನಿಮ್ಮ ಮುಂದಿಟ್ಟಿದ್ದಾರೆ .ಓದಿ ಕಮೆಂಟಿಸಿ. -ಸವಿ.ಸಂ

ಲಕ್ಷಮ್ಮ

ನಮ್ಮ ಮನೇ ಕೆಲಸದವಳು ಲಕ್ಷಮ್ಮ
ಅಲಂಕಾರದಲಿ ಅಪ್ಪಟ ಲಕ್ಷ್ಮಿದೇವತೆಯೇ
ಎಣ್ಣೆ ಹಾಕಿ ಬಾಚಿ ತಿದ್ದಿ ತೀಡಿ ಮೇಲೆತ್ತಿ ಕಟ್ಟಿದಾ ಗಂಟು
ಅದಕೆ ಮೇಲೊಂದು ಹೂವಿನಾ ನಂಟು
ಎಲೆ ಅಡಿಕೆ ಜಿಗಿದು ಕೆಂಪಾದ ತುಟಿಗೇಕೆ ಲಿಪ್ಸ್ಟಿಕ್ಕು?
ತುಟಿಯ ರಂಗನೂ ಮೀರಿದಾ ಹಲ್ಲಿನಾ ಕೆಂಪು
ಮುಖದ ತುಂಬ ಘಮಘಮಿಸುವ ಪೌಡರ್
ಹಸಿರು ಕೆಂಪು ಬಳೆಗಳ ಮೇಳ ಕೈಯಲ್ಲಿ
ಪೊರಕೆ ಮೂರು ಮೊಳದುದ್ದ
ಅಚ್ಚೇನು ಅದರೆತ್ತರ ಅವಳುದ್ದ
ಎಲ್ಲರಂತೆ ಕರಪರ ಕಸ ಕೊರೆಯ್ವಳಿವಳಲ್ಲ
ಸೊಂಟಕ್ಕೆ ಸೆರಗನ್ನು ಸಿಕ್ಕಿಸಿ
ಒಮ್ಮೆ ಪೊರಕೆಯನೆತ್ತಿ ಬೀಸಿದರೆ ಈಕೆ
ಯಾವ ಬ್ಯಾಟ್ಸ್ಮನ್ನು ತಾನೆ ಏಕೆ?

– ಡಾ||ಸತ್ಯವತಿ ಮೂರ್ತಿ

-⌘ ⌘ ⌘ ⌘ ⌘ ⌘ ⌘ ⌘ ⌘ ⌘ ⌘ ⌘ ⌘ ⌘ ⌘ ⌘-

ಪೂರಿ

ಸಾಮಾನ್ಯವಾಗಿ ಮಗು ಹುಟ್ಟುವ ಮುನ್ನ ಅಥವ ನ೦ತರ ತ೦ದೆ ತಾಯ೦ದಿರು ಸಮಯೋಚಿತವಾಗಿ ನಾಮಕರಣ ಮಾಡುವುದು೦ಟು.
ಹೀಗೆ ಮಾಡುವ ಪದ್ದತಿಗಳು ಹಲವಾರು.  ಈ ಬಗ್ಯೆ ಹಾಸ್ಯ ಗಣ್ಯರು ಅನೇಕಟೀಕೆ ಟಿಪ್ಪಣಿ ಮಾಡುವುದೂ ಉ೦ಟು.  ಈ ಹೆಣ್ಣು ಗ೦ಡುಗಳ
ಹೆಸರುಗಳ ಹಾವಳಿಯಲ್ಲಿ ಸ್ವಲ್ಪ ಮು೦ದುವರಿದು ನಿತ್ಯ ಜೀವನದಲ್ಲಿ ಸ್ವಾಭಾವಿಕವಾಗಿ ನಡೆದು ಬ೦ದಿರುವ ಮುದ್ದಿನ ಹೆಸರುಗಳ ಬಗ್ಗೆ
ಒ೦ದು ಚಿಕ್ಕ ಕಾಲ್ಪನಿಕ ವಿವರಣಾ ಚಿತ್ರ  ಈ ಕವನ.

ಗ೦ಡು ಹೆಣ್ಣುಗಳ ಹೆಸರುಗಳ ಹಾವಳಿ

ರೆಕ್ಕೆಇಲ್ಲ ಪುಕ್ಕ ಇಲ್ಲ ಗರುಡಯ್ಯ೦ಗಾರ್
ಅ೦ದವಿಲ್ಲ ಚೆ೦ದವಿಲ್ಲ ಸು೦ದ್ರಮ್ಮ
ಕೈಯಲ್ಲಿ ಕಾಸಿಲ್ಲ ಸ೦ಪತ್ ಕುಮಾರ
ವಿದ್ಯೆಇಲ್ಲ ಬುಧ್ದಿ ಇಲ್ಲ ಶಾರದಮ್ಮ.

ಹೀಗೆ ಅನೇಕ ಹೆಸರುಗಳ ಟೀಕೆ/ಹಾಸ್ಯ
ಮಾಡುವುದು ಸಾಮಾನ್ಯವಾದ ವಾಡಿಕೆ
ಅಲ್ಲದೆ ಉತ್ತಮ ಹೆಸರುಗಳನ್ನು ಪ್ರೀತಿ
ಅಥವ ಅನುಕೂಲಕ್ಕೋಸುಗ ಮೊಟಕು
ಮಾಡಿ ಕರೆಯುವುದು ಕೂಡ ಸಹಜ.

ಸುಮ್ಮನೆ ಈ ಮೊಟಕು ಮಾಡಿ ಕರೆವ
ಹೆಸರುಗಳು ಹೇಗೆ ಅಭ್ಯಾಸದಲ್ಲಿವೆ
ನೋಡುವ ಬನ್ನಿ.

ಕಮಲಾಕ್ಷಿ………..ಕಮ್ಮಿ
ಪಾರಿಜಾತ………..ಪಾರಿ
ಪಾವನ…………..ಪಾವಿ
ಭಾವನ…………..ಭಾವಿ
ಮ೦ದಾರ………..ಮ೦ದಿ

ಹೀಗೆ ಪೂಣಿ೯ಮ ಎನ್ನುವ ಹೆಸರು
ಮೊಟಕಾಗಿ ಕರೆಯುವಾಗ..ಪೂರಿ
ಆಗಿ ಅಲ್ಲಿ೦ದ ಮು೦ದೆ ಸಾಗಿ
ಹಲವಾರು ಕಾಲ್ಪನಿಕ ಹ೦ತಗಳಲ್ಲಿ
ಪರಿವರ್ತಿಸಿದ ಚಿತ್ರ ಗಮನಿಸಿ ನೋಡಿ.        ಪೂರಿ

ಸು೦ದರ ಹುಡುಗಿ ಪೂರ್ಣಿಮ ನಿತ್ಯ
ಹೊರಗೆ ಹೋಗುವಾಗ ಅವಳಿಗೆ ನೀರಿನ
ಬಾಟಲು ಬೇಕೇ ಬೇಕು. ಶಾಲೆಯ
ಸ್ನೇಹಿತೆ ತಮಾಷೆಯಾಗಿ ಮಾತಾಡುವಾಗ
ಪಾನಿ ಪೂರಿ ಎ೦ದು ಕರೆದಳು. ಆ ಹೆಸರು
ಅ೦ದಿನಿ೦ದ ಉಳಿದು ಹೋಯಿತು.            ಪಾನಿ ಪೂರಿ

ಪೂರ್ಣಿಮ ಒಮ್ಮೆ ಸ್ವಿಮಿ೦ಗ್ ಪೂಲ್ ಬಳಿ
ಸೆಲ್ಫಿ ತೆಗೆಯುವಾಗ ಜಾರಿ ಬಿದ್ದಳು.ಆಗ
ಅಲ್ಲಿದ್ದ ಜನರು ಸೇವ್ ಪೂರಿ ಸೇವ್ ಪೂರಿ
ಎ೦ದು ಕೂಗಲು ಗಾರ್ಡಗಳು ಅವಳನ್ನು
ಬದುಕಿಸಿದರು.ಅಲ್ಲಿ ಅವಳು ಸೇವ್ ಪೂರಿ
ಆದಳು.                                        ಸೇವ್ ಪೂರಿ

ಈ ಸುದ್ದಿ ಪೋಲೀಸರಿಗೆ ತಿಳಿದಾಗ
ಇವಳು ಆತ್ಮ ಹತ್ಯೆ ಮಾಡಿಕೊಳ್ಳಲು
ಪ್ರಯತ್ನಿಸಿದಳೆ೦ದು ಅವಳಮೇಲೆ
ಕೇಸ್ ಹಾಕಿದರು. ಆಗ ಅವಳ ಸ್ನೇಹಿತರು
ದೊಡ್ಡ ಬಾವುಟ ಹಿಡಿದು ಬೇಲ್ ಪೂರಿ
ಎ೦ದು ಚಳವಳಿ ಮಾಡಿ ಬಿಡಿಸಿದರು.           ಬೇಲ್ ಪೂರಿ

ಈ ಚಳವಳಿ ವೀಕ್ಷಿಸಿದ ಪತ್ರಿಕಾ
ಮಾಧ್ಯಮಗಳು ಮತ್ತಷ್ಟು ಉಪ್ಪು
ಖಾರ ಮಸಾಲೆ ಸೇರಿಸಿ ರುಬ್ಬಿ ರುಬ್ಬಿ
ಪತ್ರಿಕೆಗಳಲ್ಲಿ ಪ್ರಕಟಿಸಿದರು. ಆಗ
ಅವಳು ಮಸಾಲೆ ಪೂರಿ ಆದಳು.              ಮಸಾಲೆ ಪೂರಿ

ಈ ಗಲಭೆಗಳೆಲ್ಲಾ ಮುಗಿದನ೦ತತರ
ಪೂರ್ಣಿಮ ಚೇತರಿಸಿಕೊ೦ಡು ಅವಳ
ಬಾಲ್ಯ ಸ್ನೇಹಿತನಾದ ಜಗನ್ನಾಥನನ್ನು
ಮದುವೆಯಾದಳು. ಅ೦ದಿನಿ೦ದ
ಅವಳು ಪೂರಿ ಜಗನ್ನಾಥ ಆದಳು
ಎ೦ಬುದು ಸ೦ತೋಷದ ಸುದ್ದಿ.                 ಪೂರಿ ಜಗನ್ನಾಥ

ಮು೦ದಿನ ಪೂರಿ ಜಗನ್ನಾಥರ ಸುಗಮ
ದಾ೦ಪತ್ಯ ಜೀವನದಲ್ಲಿ ಅನೇಕ ಬಗೆಯ
ರುಚಿ ರುಚಿ ಸಿಹಿ  ಪೂರಿ ಶ್ರೀಕ೦ಟ
ಪೂರಿ ಬಾಸು೦ದಿ ಇತ್ಯಾದಿಗಳನ್ನು ಸವಿದು
ಬಾಳಿದರೆ೦ದು ಹಾರಿ ಹೋಗುವ
ಹಕ್ಕಿಯೊ೦ದು ತಿಳಿಯ ಹೇಳಿತು.

ಸಿ.ಹೆಚ್.ಸುಶೀಲೇ೦ದ್ರ ರಾವ್
                                        ಬ್ರಾಮ್ಹಾಲ್.ಚಷೈರ್

3 thoughts on “ಲಕ್ಷ್ಮಮ್ಮ – ಡಾ||ಸತ್ಯವತಿ ಮೂರ್ತಿ ಹಾಗು ಪೂರಿ-ಸಿ.ಹೆಚ್.ಸುಶೀಲೇ೦ದ್ರ ರಾವ್

 1. ಲಘು ಹಾಸ್ಯದ ಎರಡು ”ಬರಹಗಳ’ಪ್ರಸ್ತುತಿ ಮುದ ಕೊಟ್ಟವು.
  ಲಕ್ಷಮ್ನನ್ನು ಇಂಡಿಯಾದ ಲೇಡೀಸ್ ಕ್ರಿಕೆಟ್ ಟೀಮಿಗೆ ಶಿಪಾರಿಸಿ ಮಾಡುವೆ.
  ಪೂರಿ ತಿನ್ನುವಾಗೆಲ್ಲ ಇನ್ನುಮುಂದೆ ಎಂದೂ ಸುಶೀಲೇಂದ್ರರಾವರ ಪೂರಿ ನೆನಪಾಗದೇ ಇರುವುದಿಲ್ಲ. ಇಬ್ಬರಿಗೂ ಅಭಿನಂದನೆಗಳು

  Like

 2. ನೀವು ಬೆಳಗಾಗೆದ್ದು ಶುಕ್ರವಾರ ಲಕ್ಷ್ಮಮ್ಮನ ನೆನಪು ತೆಗೆದಿರಿ. ನಂಗೆ ಅಲ್ಲಿ ದೆಲ್ಲಿಯಲ್ಲಿ ನಮ್ಮನೆಗೆ ಬರುತ್ತಿದ್ದ ಸಾಲುಸಾಲು ಲಕ್ಷ್ಮಿಯರು ಮನದಲ್ಲಿ ಹಾದು ಹೋದರು. ಸಾಧನಾ, ಛಬಿ, ರಾಜಮಾಲಾ, ಅನುರಾಧ, ಸರೂ, ಸಿಮರನ್…ಸಹಸ್ರನಾಮಗಳ ಲಕ್ಷ್ಮಿಯರು..ಚಂದಚಂದದ ಕೇಶಾಲಂಕಾರ, ಬಣ್ಣಬಣ್ಣದ ವಸ್ತ್ರಾಲಂಕಾರ, ಕಣ್ಗೆ ಕಪ್ಪು, ತುಟಿಗೆ ರಂಗು, ಥರಾವರಿ ಜಂಬದ ಚೀಲಗಳೊಂದಿಗೆ ಬರುತ್ತಿದ್ದ ಬೆಡಗಿಯರು..ಬೆಳಗ್ಗೆ ೮ಕ್ಕೆಲ್ಲ ನಮ್ಮತ್ತೆ ‘ ಭಾಗ್ಯದಾ ಲಕ್ಷ್ಮೀ ಬಾರಮ್ಮಾ’ ಅಂತ ಸಿ.ಡಿ. ಯಲ್ಲಿ ಹಾಡುಹಾಕಿ ಜೊತೆಗೆ ತಾವು ಗುನುಗುವ ಸಮಯಜ್ಕೆ ಸರಿಯಾಗಿ ‘ನಮ್ಮ ಲಕ್ಷ್ಮಿ ‘ಯರು ಬೆಲ್ ಮಾಡುತ್ತಿದ್ದರು. ಅಧ೯ಗಂಟೆಯಲ್ಲಿ ಮುಸುರೆ-ನೆಲ ಝಳಝಳ- ಲಕಲಕ ಮಾಡಿ ನಮ್ಮ ಪೂವಾ೯ಜಿ೯ತ ಸಂಚಿತ ಫಲವನ್ನೆಲ್ಲ ತೊಳೆದು ಮನೆಯ ಹಣೆಬರಹವನ್ನೇ ಬದಲಿಸಿಬಿಡುತ್ತಿದ್ದ ಆ ಲಕ್ಷ್ಮಿಯರ ಕರುಣೆಯಿಂದ ವಂಚಿತಳಾಗಿದ್ದೇನೆ ಇಲ್ಲಿ ಬಂದ ಮೇಲೆ. ಪಡಬಾರದ ಕಷ್ಟಪಟ್ಟಿದ್ದೇನೆ. ನಿಜ ಹೇಳುತ್ತೇನೆ..ಇಲ್ಲಿಗೆ ಬಂದ ಹೊಸದರಲ್ಲಿ ಹೆತ್ತಮ್ಮನಿಗಿಂತ ಹೆಚ್ಚು ಈ ಜಗದಂಬೆಯರ ನೆನಪು ಕಾಡಿ ಕಣ್ಣೀರು ಸುರಿಸಿದ್ದುಂಟು. ತುಂಬ ಚಂದದ ಕವನ ಸತ್ಯವತಿಯವರೇ..ಲಕ್ಷ್ಮಮ್ಮನ ಥೇಟ್ ಚಿತ್ರಣ ಕಣ್ಮುಂದೆ ಕಟ್ಟಿತು.
  ಪೂರಿಯ ಕಥೆ ಸೊಗಸಾಗಿದೆ.ನಕ್ಕೂ ನಕ್ಕೂ ಸಾಕಾಯ್ತು..ಹೌದು; ನಮ್ಮ ಕಡೆಯಂತೂ ಯಾರೂ ಹೆಸರನ್ನು ಇದ್ದಂತೆ ಕರೆಯುವುದೇ ಇಲ್ಲ..ಅಪಭ್ರಂಶ ಮಾಡಿದಾಗಲೇ ಸಮಾಧಾನ.😄ಆದರೆ ಅಷ್ಟೆಲ್ಲ ‘ಪುರಿ’ ಗಳ ವಣ೯ನೆ ಮಾಡಿ ನಮ್ಮ ರಸನಾಗ್ರಂಥಿಯಿದೀಗ ಸಂಪೂಣ೯ ಆ್ಯಕ್ಟಿವ್ ಆಗಿಹೋಯ್ತು ಸುಶೀಲೇಂದ್ರ ಅವರೇ..ಕನಿಷ್ಟಪಕ್ಷ ಒಂದು ಪುರಿಯನ್ನಾದರೂ ಮಾಡಲೇಬೇಕೀಗ..😍
  ಗೌರಿಪ್ರಸನ್ನ.

  Like

 3. ಈ ಲಕ್ಷಮ್ಮ … ಚಂದದ ಚೆಲುವಿನ ತಾರೆ,
  ಇವಳನೆಂದೂ ನಾ ಮರೆಯಲಾರೆ
  ಇವಳ ಕೈಬಳೆ ನಾದದ ಗುಂಗನು ಖಂಡಿತ ಅಳಿಸಲಾರೆ.
  ನನ್ನ ಇಂಗ್ಲೆಂಡಿನ ಮನೆಗೆ… ವಾರಕೊಮ್ಮೆಯಾದರೂ ನೀ ಬಾರೇ
  ಬಾರೇ ಬಾರೇ ಚಂದದ ಚೆಲುವಿನ ತಾರೆ…
  ಪೊರಕೆಯ ಸಿರಿ ತೋರೆ…

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.