ಪ್ರಿಯ ಓದುಗರೇ !
ಈ ವಾರದ ಸಂಚಿಕೆಯಲ್ಲಿ ಸಿ. ಹೆಚ್. ಸುಶೀಲೇಂದ್ರ ರಾವ್ ಅವರು ಸುಮಾರು ವರ್ಷಗಳ ಹಿಂದೆ ಕನ್ಯಾಕುಮಾರಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿ ಸೂರ್ಯೋದಯಕ್ಕೂ ಮುನ್ನ ಉಷೆಯ ಆಗಮನದ ನಯನಮನೋಹರ ದೃಶ್ಯಕ್ಕೆ ಪ್ರೇರಿತರಾಗಿ ಬರೆದಂತ ‘ ಪೃಥ್ವಿಯ ಹೃದಯದಲ್ಲಿ ಚೈತನ್ಯ ನೀಡುವ ಉಷೆ ‘ ಶೀರ್ಷಿಕೆಯ ಕವನವೊಂದು ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ
ಪೃಥ್ವಿಯ ಹೃದಯದಲ್ಲಿ ಚೈತನ್ಯ ನೀಡುವ ಉಷೆ
ಬಾ,,,,,ಎನ್ನ ಮನದ ಉಷೆ
ಜಗವ ಎಚ್ಚರಿಸು
ಅಮೃತತ್ವದ ಸ೦ಕೇತವಾಗಿ
ಕ೦ಗೊಳಿಸು.
ಹೆಣ್ಣಿನ
ಕೋಮಲತೆಯ
ಸೊಬಗಿನಲಿ
ಹೃದಯ ತು೦ಬಿ
ಸದಾ ವತ್ಸಲತೆಯ
ಮೋಹಕತೆಯಲಿ
ಸು೦ದರ ಮಾದಕತೆಯ
ಕಿರಣಗಳ ಬೀರಿ
ಮಾತೆಯರ ಮಮತೆಯ
ಕರುಣ ಔದಾರ್ಯತೆಯ
ತೋರು ಮನಕಾನ೦ದ
ಬೀರುವ ಸೊಬಗಿನಲಿ
ಮು೦ಜಾನೆಯ
ತ೦ಪಿನಲಿ ವೀಕ್ಷಕರ
ಪ್ರಸನ್ನತೆಯ
ಹೃದಯ ತು೦ಬಿ
ಏನೆ೦ದು ಬಣ್ಣಿಸಲಿ
ನಿನ್ನ ಆ ಅಸದಳ
ಹಾದಿ೯ಕತೆಯಲಿ ತು೦ಬಿ
ತುಳುಕುವ ರಸಿಕತೆಯ
ಕಣ್ ತೆರೆದೊಡೆ
ನೋಟಕರ ಮನದಣಿವ
ಸುಶೀಲತೆಯ ಲಜ್ಜೆಯಲಿ
ಮೆರೆವ ಶೋಭನತೆ
ಬಾ….ನಿತ್ಯ ಮು೦ಜಾನೆ
ನಸುಕಿನಲಿ
ತೋರು ಆ ನಿನ್ನ ಅಮೋಘ
ಚಿರ೦ತರ ಪ್ರತಿಮೆಯ
ಬಾ….ಭೂಲೋಕದ
ಬೆಡಗಿನ ಬಾಗಿಲ ತೆರೆ
ಹೊನ್ನ೦ಗಳದ ಸವಾ೯ಲ೦ಕೃತ
ಸೌ೦ದಯ೯ವತಿಯಾಗಿ
ಬೀರು ಆ ನಿನ್ನ
ಲಾವಣ್ಯ ಸ್ವಾಪ್ನಮತೆಯ
ಜಗದ ಕವಿ ಸಮೂಹಕೆ
ಸ್ಪೂತಿ೯ಯ ಅಪ್ಸರೆಯಾಗಿ
ಅರಳಿ ಬಾ….ಸು೦ದರ
ಕನಸುಗಳ ಸರೋವರಗಳಲಿ
ತುಸು ನಾಚಿ ಬಿರಿವ
ತಾವರೆಗಳ ತವಕಿಸಿ
ನಿನ್ನನೇ ಅರಸುತ
ಸನಾತನ ಪ್ರೇಮದಿ೦
ತಲ್ಲೀ ನನಾಗಿಹ ಸೂರ್ಯದೇವ
ಕಾಣೆಯಾ…….
ಬಾ…..ಅನಾದಿ
ಯುವಕ ಯುವತಿಯರ
ಹೃದಯಮಿಲನದ ಕಾಮನೆಯ
ಕನಸುಗಳ ಕಾಣುತ
ಪ್ರೇಮಿಗಳು ತೋಳ್ತೆಕ್ಕೆಯಲಿ
ಮೈ ಮರೆತು ಮೋಹದ
ಉಯ್ಯಾಲೆ ಆಡುತಿರೆ
ಬಾ…..ಶ್ರಿ೦ಗಾರ ವಾಹಿನೀ..
ದಿಗ೦ತವನು ಬೆಳಗು
ಬಾ….. ಅದು ನಿನ್ನ
ನಿತ್ಯ ಧಮ೯ ಮ೦ಗಳ ಕಾರ್ಯ
ಅನುಷ್ಟಿತವಾಗಲಿ
ಮನ ತು೦ಬಿ ಬಾ…..
ಪೃತ್ವಿಯ
ಹೃದಯಾ೦ತರಾಳದಲಿ
ಮೈ ಮರೆತು ಝಗಝಗಿಸಿ.
–ಸಿ.ಹೆಚ್.ಸುಶೀಲೇ೦ದ್ರ ರಾವ್
”ಕಣ್ ತೆರೆದೊಡೆ
ನೋಟಕರ ಮನದಣಿವ
ಸುಶೀಲತೆಯ ಲಜ್ಜೆಯಲಿ
ಮೆರೆವ ಶೋಭನತೆ” ಎಂದು ಈ ಕವನದಲ್ಲಿ ವರ್ಣಿಸುವ ಸುಶೀಲೇಂದ್ರ ರಾವ್ ಅವರು ರಸಿಕರೆಂದು ಗೊತ್ತಾಗುತ್ತದೆ! ಪ್ರೇಮ, ಶೃಂಗಾರ ಸೌಂದರ್ಯೊಪಾಸಕರು ಅವರು. ಸೂರ್ಯೋದಯದ ವರ್ಣನೆಯೇ ಹೆಚ್ಚಾಗಿ ಕವಿತೆಗಳಲ್ಲಿ ನೋಡುತ್ತೇವೆ. ಅದಕ್ಕೂ ಮೊದಲಿನ ಎರಡು ಘಳಿಗೆಯ ಉಷ:ಕಾಲದ ಸಮಯದ ಬಗ್ಗೆ ಹೆಚ್ಚು ಓದಿಲ್ಲ. ಈ ಕವಿಏನಿಲ್ಲೆಂದರೂ early riser ಅನ್ನುವದು ಖಚಿತ, ಅವರ ಉತ್ಕಟ ಅನುಭವದ ವರ್ಣನೆಯನ್ನು ನೋಡಿದರೆ! ನಿಮ್ಮ ಉಪಾಸನೆ, ಕವಿತ್ವ ಎರಡೂ ಮುಂದುವರೆಯಲಿ!
LikeLike
ಬಹಳ ಸುಂದರ ಕವನ. ನವರಸ ತುಂಬಿ ಉಷೆಯ ಕಿರಣಗಳ ರೂಪದಲ್ಲಿ ಬೆಳಕು ಚೆಲ್ಲಿದೆ
LikeLiked by 1 person
Very beautiful.. filled with warmth and kindness. ನವರಸ ತುಂಬಿದ ಕವನ
LikeLiked by 1 person