ಪ್ರಿಯ ಓದುಗರೇ ,
‘ಸಿನೆಮಾ ನೋಡಿ’ ಸರಣಿಯ ಈ ವಾರದ ಸಂಚಿಕೆಯಲ್ಲಿ ರಾಧಿಕಾ ಜೋಶಿ ಅವರು ೧೯೮೩ ಯಲ್ಲಿ ತೆರೆಕಂಡ ಬಾಲಿವುಡ್ ಖ್ಯಾತಿಯ “ಮಾಸೂಮ್” ಸಿನೆಮಾದ ಚಿತ್ರಕಥೆ, ಸಂಗೀತ ಮತ್ತು ಮುಗ್ಧ ಭಾವನೆಗಳ ವೈಯಕ್ತಿಕ ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. ಓದಿ ಪ್ರತಿಕ್ರಿಯಿಸಿ. 🙏 -ಸವಿ.ಸಂ

ನಮ್ಮ ದೇಶ ವಿಶ್ವದಲ್ಲೇ ಅತಿ ಹೆಚ್ಚು ಚಲನಚಿತ್ರ ನಿರ್ಮಿಸಿ ಹಾಗು ಪ್ರದರ್ಶಿಸುವ ದೇಶ. ಹೀಗಾಗಿ ಎಲ್ಲರು ಸಿನಿಮಾ
ಪ್ರಿಯರೆ. ನಾನು ಕೂಡ. ನಮ್ಮ ಮನೆಯಲ್ಲಿ ಹಿಂದಿ ಸಿನಿಮಾ ಹಾಗು ಹಿಂದಿ ಸಿನಿಮಾ ಹಾಡುಗಳು ಕೇಳುವುದು ಹೆಚ್ಚು. ನನಗೆ ರೇಡಿಯೋದಲ್ಲಿ ಹಾಡು ಬರುವ ರೀತಿ ಹಾಗು ಆ ಕಾಲದಲ್ಲಿ ಆಯ್ದ ಹಾಡುಗಳನ್ನು ಅಂಗಡಿಗೆ ಹೋಗಿ ಕ್ಯಾಸೆಟ್ಗಳನಲ್ಲಿ ರೆಕಾರ್ಡ್ ಮಾಡಿ ಅವುಗಳನ್ನು ಟೇಪ್ ರೆಕಾರ್ಡರ್ನಲ್ಲಿ ಒಂದು ಆಶ್ಚರ್ಯವೆನಿಸುತಿತ್ತು.ನನ್ನ ತಂದೆ ಮುಕೇಶ್ ಹಾಗು ಮುಹಮ್ಮದ್ ರಫಿ ಹಾಡುಗಳ ಕ್ಯಾಸೆಟಗಳನ್ನು ಬಹಳಷ್ಟು ಕಲೆ ಹಾಕಿದ್ದರು, ಈಗಲೂ ಇವೆ ,ಕಳಕಲ್ಲೇ ಧೂಳು ಒರೆಸಿ ಅದನ್ನು ಟೇಪ್ ರೆಕಾಡ್ರ್ನಲ್ಲಿ ಹಚ್ಚುತ್ತಾರೆ.
ರಾತ್ರಿ ಮಲಗುವ ಮುನ್ನ ವಿವಿದ್ ಭಾರ್ತಿ, ಸಿಲೋನ್ ರೇಡಿಯೋ ಸ್ಟೇಷನ್ ಹಚ್ಚಿ ನನ್ನ ತಂದೆ ತಾಯಿ ಅಲ್ಲಿ ಪ್ರಸಾರವಾಗುವ ಹಾಡು ಕೇಳಿ ಗುನುಗುತ್ತಾ ,ಅವುಗಳ ಬಗ್ಗೆ ಮಾತಾಡುತ್ತಾ ದಿನ ದಣಿಗೆ ಕಳೆವ ಪದ್ಧತಿ. ಹಾಗೆ ಕೇಳುತ್ತಿದಾಗ ಒಂದು ಹಾಡಿಗೆ ನನ್ನ ತಾಯಿ ಭಾವುಕಳಾಗುತ್ತಿದ್ದಳು. ನನ್ನ ತಂದೆಗೆ ಅವಳು ಎಂಥ ಅರ್ಥಪೂರ್ಣ ಹಾಡು, ಆ ಸಿನಿಮಾದಲ್ಲಿ ನಟಿಸಿದ್ದ ಪುಟ್ಟ ಹುಡುಗನ ಅಭಿನಯ ಪ್ರಭುದ್ದತೆ ಮೆಚ್ಚುತ್ತಾ ಮಮತೆಯ ಒಂದು ಒಳ್ಳೆಯ ಸಿನಿಮಾ ಅಂತಿದ್ಲು. ಸುಮಾರು ನನಗೆ ೪-೫ ವರ್ಷಗಳಿರಬಹುದು. ಆಗ ಕಪ್ಪು ಬಿಳುಪು ಟಿವಿ ನಮ್ಮನೇಲಿ. ಆ ಹಾಡು ಟಿವಿಲಿ ಬಂದಾಗ ನನ್ನ ತಾಯಿ ಕಣ್ಣು ಮಂಜಾಗುತ್ತಿತ್ತು. ಯಾಕಮ್ಮ ಅಳ್ತಿದೀಯಾ ಅಂತ ನಾವು ಕೇಳಿದ್ರೆ ನಿಮಗೆ ಈಗ ತಿಳಿಯುದಿಲ್ಲ ಅಂತ ಹೇಳಿ ಸುಮ್ಮನಾಗ್ತಿದ್ಲು. ನನ್ನ ಹುಟ್ಟು ವರ್ಷದಲ್ಲಿ 1983 ಬಿಡಿಗಡೆಯಾದ ಸಿನಿಮಾ ”ಮಾಸೂಮ್ ”. ಅದೇ ವರ್ಷ ಸಿನಿಮಾ ಮಂದಿರಕ್ಕೆ ಹೋಗಿ ನೋಡಿದ್ರಂತೆ. ನೋಡಿ, ಆ ಕಾಲದಲ್ಲಿ ನಮ್ಮ ಅಮ್ಮ , ಮೌಶಿ, ಮಾಮಿ , ಕಾಕುಗಳೆಲ್ಲಾ ಕೂಸುಗಳನ್ನು ಕಟ್ಕೊಂಡೋ ಅಥವಾ ಅವುಗಳನ್ನು ಮನೇಲಿ ಬಿಟ್ಟೋ ಸಿನಿಮಾ ನೋಡಲು ಹೋಗ್ತಿದ್ರಂತೆ. ಈಗ ನಾವು ನಮ್ಮ ಪುಟ್ಟ ಮಕ್ಕಳನ್ನು ಸಿನಿಮಾಕ್ಕೆ ಕರ್ಕೊಂಡು ಹೋಗ್ಬೇಕು ಅಂದ್ರೆ ಎಷ್ಟು ಯೋಚನೆ ಮಾಡ್ತೀವಿ.
1983 ಬಿಡಿಗಡೆಯಾದ ಸಿನಿಮಾ ”ಮಾಸೂಮ್ ” ಸಿನಿಮಾ ನೋಡಲು ಮಂದಿರದಲ್ಲೂ ಅತ್ಳಂತೆ ನಮ್ಮ ಅಮ್ಮ. ಆ ಸಿನಿಮಾದ ಪ್ರಭಾವವೋ ಅಥವಾ ಬಾಣಂತಿಯ ಹಾರ್ಮೋನುಗಳೋ ಗೊತ್ತಿಲ್ಲ. ಯಾಕೆಂದರೆ ಆ ಸಿನಿಮಾ ನಾನು ಚಿಕ್ಕವಳಿದ್ದಾಗ ನೋಡಿದ್ದೇ ನನಗೆ ಹಿಂದಿನೂ ತಿಳಿತಿರ್ಲಿಲ್ಲ ಆ ಮುಗ್ಧ ಭಾವನೆ , ಸಂಕೀರ್ಣ ಸಂಭಂಧಗಳೂ ಅರ್ಥವಾಗುತ್ತಿರಲಿಲ್ಲ. ಆ ಸಿನಿಮಾ ಸುಮಾರು ಬಾರಿ ನೋಡಿದ್ದೀನಿ. ಆ ಹಾಡು ”ತುಝಸೆ ನಾರಾಜ್ ನಹಿ ಜಿಂದಗಿ ಹೈರಾನ್ ಹೂ ಮೈ” ಲತಾ ಮಂಗೇಶ್ಕರ್ ಹಾಗು ಅನೂಪ್ ಘೋಷಾಲ್ ಇಬ್ಬರ ದನಿಯಲ್ಲಿದ್ದು , ನನಗೆ ತುಂಬಾ ಇಷ್ಟವಾಗಿದ್ದು ಅನೂಪ್ ಅವರ ಗಾಯನ. ಸುಮಾರು ವರ್ಷಗಳ ನಂತರ ಇತ್ತೀಚೆಗಷ್ಟೇ ಮತ್ತೊಮ್ಮೆ ನೋಡಿದಾಗ ನನ್ನ ಅಮ್ಮ ಏಕೆ ಭಾವುಕಳಾಗುತ್ತಿದ್ದಳು ಅಂತ ಅರ್ಥವಾಗುತ್ತದೆ. ಆ ಹಾಡಿನ ಸಾಹಿತ್ಯವನ್ನು ಹುಡುಕಿ ಓದಿದಾಗ ಗುಲ್ಜಾರ್ ಸಾಬ್ ಎಂಥಹ ಕವಿ , ಸೂಕ್ಷ್ಮ ಭಾವನೆಗಳನ್ನು ಅತಿ ಸೂಕ್ಷ್ಮವಾದ ಸರಳ ಸೂಕ್ತ ಪದಗಳಿಂದ ಎಷ್ಟು ಮನಃ ಮುಟ್ಟುವಂತೆ ಬರಿದ್ದಾರೆ ಎಂದು ಮತ್ತೆ ಮತ್ತೆ ಆ ಹಾಡನ್ನು ಕೇಳಿದೆ. ಆ ಹಾಡಿನ ತಕ್ಕಂತೆ ಸಿನೆಮಾದಲ್ಲೂ ಅನನುಕರಣೀಯ ಅಭಿನಯ ಮಾಂತ್ರಿಕ ನಸೀರುದ್ದೀನ್ ಶಾಹ್, ವಿಷಣ್ಣತೆ ನಡುವಳಿಕೆಯ ಪುಟ್ಟ ಜುಗಲ್ ಹಾಗು ಅತೃಪ್ತಿ , ದುಮ್ಮಾನದ ವರ್ತನೆ ಕಣ್ಣಿನಿಂದಲೇ ತೋರಿಸುವ ಶಬಾನಾ ಆಜ್ಮಿ. ಒಬ್ಬರಿಗಿಂತ ಮತ್ತೊಬ್ಬರು ತಮ್ಮ ನಿಜ ಜೀವನದಲ್ಲೇ ನಡೆದಿರುವ ರೀತಿ ಅಭಿನಯ ಮಾಡಿದ್ದೂ ನನಗೆ ಮರೆಯಲಾಗದ ಒಂದು ಅದ್ಭುತ ಚಲನ ಚಿತ್ರ. ಚಿತ್ರ ನಿರ್ದೇಶಕನಾಗಿ ಪ್ರಥಮ ಸಿನಿಮಾ ಮಾಡಿದ ಮತ್ತೊಬ್ಬ ಶ್ರೇಷ್ಠ ನಿರ್ದೇಶಕ ಶೇಖರ್ ಕಪೂರ್ ನೋಡುಗರನ್ನು ಭಾವನಾತೀತ ಹಾಗು ಮಂತ್ರಮುಗ್ಧ ಮಾಡುವ ತಂತ್ರ ಇರಬಹುದು.
ಇದೆ ಸಿನಿಮಾ, ಈಗಿನ ಕಾಲಕ್ಕೆ ಮಾಡಿದ್ದಿದ್ದರೆ ಅದು ಬೇರೆ ರೀತಿನೇ ಇರ್ತಿತ್ತು. ಪರಿವಾರಕ್ಕಿಂತ ವೈಯಕ್ತಿಕ ನೀತಿ ನ್ಯಾಯಗಳ ಬಗ್ಗೆ ಚರ್ಚೆ ಆಗುತ್ತಿತ್ತು. ತಮ್ಮತಮ್ಮ ವರ್ತನೆ, ತಪ್ಪುಗಳನ್ನು ಸಮರ್ಥಿಸಿಕೊಂಡು ಬೇರೆಯಾಗಿ ಸಂಸಾರ ಒಡೆದು ,ಅವರವರ ದಾರಿ ಹುಡುಕಿಕೊಂಡು ಹೋಗುತ್ತಿದ್ದರು. ಬಹುಶಃ ಈಗಿನ ಪೀಳಿಗೆಯ ಲಿಂಗ ಬೇಧವಿಲ್ಲದ ಸಮಾನತೆಯ ಒಂದು ಆಲೋಚನ.
– ರಾಧಿಕಾ ಜೋಶಿ
ಆತ್ಮೀಯ ರಾಧಿಕಾ!!!
ಬಾಲಿವುಡ್ ಚಿತ್ರಗಳ ಪಟ್ಟಿಯಲ್ಲಿ ಈ ಸಿನಿಮಾ ನನ್ನ ಅಚ್ಚುಮೆಚ್ಚು. ಏಕೆಂದರೆ ಈ ಸಿನಿಮಾ ನನ್ನ ಬಾಲ್ಯದ ಅನೇಕ ದಿನಗಳು ನೆನಪಿಗೆ ಬರುತ್ತವೆ.
ನಮ್ಮ ಬೀದಿಯ ಎಲ್ಲಾ ಸ್ನೇಹಿತರು ಜೊತೆಗೂಡಿ ನೋಡಿದಂತ ಸಿನಿಮಾ.
ನಮ್ಮ ಮನೆಗೆ ಬಂದ B/W Dayonara TV, ಬುಧವಾರ ರಾತ್ರಿ 8.00 ಗಂಟೆಗೆ ಪ್ರಸಾರವಾಗುತಿದ್ದ ಚಿತ್ರಹಾರ್ ಕಾರ್ಯಕ್ರಮ ಹಲವಾರು.
ಆ ಸವಿದಿನಗಳನ್ನು ಈ ಲೇಖನದಲ್ಲಿ ನೆನಪು ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು.
Saವಿ
LikeLike
ನಾನು ಮಾಸೂಮ್ ನೋಡಿಲ್ಲ. ನಿಮ್ಮ, ತಾಯಿಯ ಮತ್ತು ಇತರ ಹೆಣ್ಣುಮಕ್ಕಳು. ಸುರಿಸಿದ ಕಣ್ಣೀರಿನ ಜೊತೆಹೀ ನನ್ನದೂ ಒಂದೆರಡನ್ನು ಟಪಕಿಸುವೆ! ಸಿನಿಮಾವೇ ಆಗಲಿ ಟೆಲಿವಿಜನ್ ಆಗಲಿ ಎರಡೂ ನನಗೂ ಸಹ ವಾಚಿಂಗ್ ಟೈಮ್ ಜೊತೆಗೆ tissue ಟೈಮ್ ಅಂದರೆ ಏನೇನೋ ಅಣ್ಣ ಬೇಡಿ. ಬರಿ ಹೆಣ್ಣುಗರುಳು ಅನ್ನಲು ಯಾವ ಹಕ್ಕು? ಬಗೆದು ನೋಡಿದ್ದೇನೆ, ಸರ್ಜನ್ ಅಂತ, ಕರುಳಿನಲ್ಲಿ ಲಿಂಗಭೇದವಿಲ್ಲ! ಇಬ್ಬರಲ್ಲೂ ಒಂದೇ ತರ ಕಾಣುತ್ತದೆ! Let go, let it flow, whoever you are! ನಿಮ್ಮ ಬರಹ ಓದಿ ಸಿನಿಮಾ ನೋಡಬೇಕೆನಿಸಿದೆ, ಟಿಶ್ಶೂ ಹುಡುಕುತ್ತಾ ಇದ್ದೇನೆ, ಮೊದಲು! ರಾಧಿಕಾಲಅವರೇ, ಬರಹ ಚೆನ್ನಾಗಿದೆ, ಹರಿದು ಬಂದಿದೆ! ಅದು ನನ್ನ ಕಾಲದ ಸಿನಿಮಾ ಸಹ. ತಪ್ಪಿಸಿ ಕೊಂಡಿತ್ತು! ಶ್ರೀವತ್ಸ ದೇಸಾಯಿ
LikeLike
Beautifully written!! I could relate to most of the incidents from my childhood.
LikeLike
ರಾಧಿಕಾ ಅವರು ‘ಮಾಸೂಮ್‘ ಸಿನೆಮಾದ ಹೆಸರಿನಲ್ಲಿ ತಮ್ಮ ‘ಮಾಸೂಮ್‘ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ವಿವಿಧ ಭಾರತಿಯ ಸಿಮೆಮಾ ಹಾಡುಗಳು ಮತ್ತು ಸಿಲೋನ್‍ನ ಬಿನಾಕಾ ಗೀತ್ ಮಾಲಾ ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮಗಳಾಗಿದ್ದವು.
ಅರ್ಥವಾಗದ ಪದಗಳನ್ನು ನನ್ನ ನೆರೆಮನೆಯ ರಶೀದ್‍ಗೆ ಕೇಳುತ್ತಿದ್ದೆ.
ನಮ್ಮಿಷ್ಟವಾದ ಹಾಡುಗಳ ಪಟ್ಟಿ ಮಾಡಿ ಅದನ್ನು 90 ಮಿನೀಟ್ ಕ್ಯಾಸೆಟ್ಟುಗಳಲ್ಲಿ ರೆಕಾರ್ಡ್ ಮಾಡಿಕೊಂಡು ಕೇಳುತ್ತಲೇ ಇರುವುದು ನನ್ನ ಹಾಸ್ಟೇಲ್ ದಿನಗಳು. ಲತಾ, ರಫಿ, ಕಿಶೋರ್, ಮನ್ನಾಡೆ, ಹೇಮಂತ್‍ಕುಮಾರ್, ಜೇಸುದಾಸ್, ಭೂಪೆಂದರ್…ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕನ್ನಡ ಹಾಡುಗಳಿಗಿಂತೆ ಹಿಂದಿ ಹಾಡುಗಳೆಂದರೆ ಅದೇನೋ ವಿಚಿತ್ರ ವ್ಯಾಮೋಹ.
ಮಾಸೂಮ ಸಿನೆಮಾದ ‘ನಾರಾಜ್‘ ಹಾಡಿನ ಮೋಡಿಗೆ ಒಳಗಾಗದವರಾರು? ಅದರಲ್ಲೂ ಹಿಂದಿಯಲ್ಲಿ ಅಷ್ಟಾಗಿ ಹಾಡಿರದ ಅನೂಪ್ ಘೋಷಾಲ್‍ನ ಧ್ವನಿಗೆ ಮ್ರುಳಾಗದವರಾರು?
ತುಂಬ ಸುಂದರ ಲೇಖನಒಲಿಂಪಿಕ್ಸ್ಅಭ್ಯಾಸದಲ್ಲಿ
– ಕೇಶವ
LikeLike
Radhika this is one of the movies which touched my heart. It is based on an english book “The man woman and a child”. I think in this movie Shekhar Kapoor has addressed a few issues in a very subtle way. Its star-studded cast and music has made it one of the all time hindi favourite films. Your write up warmed up my memories and my husband eyes becomes wet every time he listens to Tujhse naaraj nahi song. I also liked this song in Anup Ghoshal’s voice better than Lata Mangeshkar. Gulzar’s lyrics is very sweet. I think filming during that song in Anup’s voice is more effective which shows the delicate relationship of father and son. A wonderful film. Thanks for writing a nice memory about this beautiful film.
Uma Venkatesh
LikeLike
ಬಾಲ್ಯದಲ್ಲಿ ಮಾಸೂಮ್ ಚಲನಚಿತ್ರವನ್ನು ನೋಡಿದಾಗ ಹೆಚ್ಚೇನೂ ಅರ್ಥವಾಗಿರಲಿಲ್ಲ. ಒಂದೇ ಸಮ ಗೋಳು, ನಾಯಕ-ನಾಯಕಿಯರ ಜೋತುಬಿದ್ದ ಮುಖ ಭಾವನೆಗಳು, ಮಲತಾಯಿ ಕಥೆ ಎಂದೆಲ್ಲ ಅನ್ನಿಸಿತ್ತು. ಜೀವನಾನುಭವಗಳು ಪಕ್ವವಾಗುವ ಕಾಲದಲ್ಲಿ ಚಿತ್ರವನ್ನು ಟಿವಿ ಪರದೆಯಲ್ಲಿ, ಒಬ್ಬಳೇ ಕೂತು ವೀಕ್ಷಿಸಿದಾಗ ಮನಸ್ಸು ಮುದುಡಿತ್ತು. ನಾಯಕ-ನಾಯಕಿಯರ ಅದ್ಭುತ ನಟನೆಯ ಜೊತೆಗೆ ಆ ಹುಡುಗ ನೆನಪಿನಲ್ಲಿ ಬಂದು ನಿಂತು ತನ್ನದೇ ಅಚ್ಚೊತ್ತಿದ್ದ. ಸಿನಿಮಾ ನಿರ್ದೇಶನದ ಸೂಕ್ಷ್ಮ touch ಗಳು ವಾಹ್ ಎನ್ನುವಂತಿದ್ದವು. ಚಿತ್ರಕ್ಕೆ ಅದರದ್ದೇ ವಿಶೇಷ ತೂಕವಿತ್ತು. ಹಾಡುಗಳ ಸಾಹಿತ್ಯಕ್ಕೆ ತಲೆ ತೂಗಿತ್ತು.
ಮಾಸೂಮ್ ಚಿತ್ರದ ಬಗ್ಗೆ ಈ ಲೇಖನವನ್ನು ಬರೆದು ಆ ದಿನಗಳ ನೆನಪಿನ ಲೋಕಕ್ಕೆ ಕರೆದೊಯ್ದ ರಾಧಿಕಾ ಜೋಶಿಯವರಿಗೆ ವಂದನೆಗಳು.
ವಿನತೆ ಶರ್ಮ
LikeLike
ಕನ್ನಡದ ಪ್ರಮುಖ ಕವಿಗಳು ಸಿನಿಮಾಕ್ಕೋಸ್ಕರ ಕವಿತೆ ಬರೆಯಲಿಲ್ಲ ಅವರ ಕೆಲವು ಕವಿತೆ ಗಳನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಆ ಮಡಿವಂತಿಕೆ ಹಿಂದಿ ಭಾಷೆಯಲ್ಲಿ ಕಂಡುಬಂದಿಲ್ಲ. ಹಿಂದಿ ಭಾಷೆಯಲ್ಲಿ ಸಾಹಿತ್ಯಕ್ಕೂ ಸಿನಿಮಾ ಸಾಹಿತ್ಯಕ್ಕೂ ಹೆಚ್ಚಿನ ಅಂತರವಿಲ್ಲ ಎಂಬುದು ನನ್ನ ಅನಿಸಿಕೆ . ಹೀಗಾಗಿ ಕವಿ ಗುಲ್ ಜಾರ್ ಅವರು ಸಾಹಿತ್ಯಕ್ಕೂ ಮತ್ತು ಸಿನಿಮಾಗೀತೆಗಳಿಗೂ ಸೇತುವೆಯಾಗಿ ಉಳಿದು ಪದ್ಮವಿಭೂಷಣ, ಫಿಲಂ ಫೇರ್ ಅವಾರ್ಡ್ ಹಾಗು ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಗಳಿಸಿ ಕೊಂಡಿದ್ದಾರೆ. ಉತ್ತಮ ಸಾಹಿತ್ಯ ಅದು ಎಲ್ಲೇ ಇರಲಿ ಜನರ ಹೃದಯವನ್ನು ಕಲುಕುವ ಶಕ್ತಿ ಅದರಲ್ಲಿ ಅಡಗಿರುತ್ತದೆ. ಹಾಗೆ ಅದು ಕಾಲಾತೀತವಾಗಿರುತ್ತದೆ. ಗುಲ್ ಜಾರ್ ಅವರ ಕವನದ ಮೇಲೆ ಉರ್ದು ಸಾಹಿತ್ಯ ಬಹಳಷ್ಟು ಪರಿಣಾಮ ಬೀರಿದೆ ಎಂದು ಕೇಳಿದ್ದೇನೆ. ರಾಧಿಕಾ ಅವರ ಅನಿವಾಸಿಯಲ್ಲಿನ ಬರವಣಿಗೆಗೆ ನನ್ನ ಅನಿಸಿಕೆಗಳನ್ನು ತಿಳಿಪಡಿಸುತ್ತಿದೇನೆ.
LikeLike