ರಾಸಾಯನ ಸ೦ಶೋಧನೆ-ಸಿ.ಹೆಚ್.ಸುಶೀಲೇ೦ದ್ರ ರಾವ್

ನಾವುಗಳೆಲ್ಲ ಬಹಳಷ್ಟು ಬಾರಿ, ವಾಟ್ಸ್ಪ್ ಸಂದೇಶಗಳಲ್ಲಿ, ಹಾಸ್ಯಕ್ಕಾಗಿ ಬರೆದ ಪದ್ಯಗಳಲ್ಲಿ ಮತ್ತು ಹಾಸ್ಯಗಾರರ ಬಹಳಷ್ಟು ಕಾರ್ಯಕ್ರಮಗಳಲ್ಲಿ ಹೆಂಡತಿಯನ್ನು ಮುಖ್ಯ ಪಾತ್ರವಾಗಿಟ್ಟುಕೊಂಡು ಗೇಲಿ ಅಥವಾ ಲೇವಡಿ ಮಾಡುವುದನ್ನು ಬಹು ಸಾಮಾನ್ಯವಾಗಿ ಕಾಣುತ್ತಿರುತ್ತೇವೆ. ಈ ವಾರದ ಅನಿವಾಸಿಯಲ್ಲಿ ಕವಿ ಪಿ. ಸುಶೀಲೇಂದ್ರರಾವ್ ಅವರು ಗಂಡನ ಪಾತ್ರವನ್ನು ಆಧರಿಸಿ ಈ ಹಾಸ್ಯ ಕವಿತೆಯನ್ನು ರಚಿಸಿದ್ದಾರೆ. ಈ ಗಂ( ಗಂಡ) ಅನ್ನುವ ಹೊಸ ಲೋಹದ ಸಾಮಾನ್ಯ ಗುಣಗಳನ್ನು ಅರಿತಿದ್ದರೂ, ಅದರ ಸ್ವಭಾವನ್ನು ಅಲ್ಲೆಗೆಳೆಯದೆ, ಮೃದುವಾಗಿ, ಹದವಾಗಿ ಅ(ತ)ದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬದುಕುವ ಶ್ರೀಮತಿಯರಿಗೆ ಜಯವೆಂದಿದ್ದಾರೆ -ಸಂ
(ಶ್ರೀಯುತರೆ, ಹಾಸ್ಯದ ಮುಖ್ಯಪಾತ್ರ ಅಪರೂಪಕ್ಕೆ ಈ ಕವನದಲ್ಲಿ ನಿಮ್ಮದಾಗಿದೆ)

Courtesy – Getty Images

ರಾಸಾಯನ ಸoಶೋಧಕರು ಒoದು ಹೊಸ
ಲೋಹವನ್ನ ಕoಡು ಹಿಡಿದ ಸುದ್ದಿ ಮನುಜ
ಕುಲದಲ್ಲಿ ಅಚ್ಚರಿಯ ಹಾಗು ಕುತೂಹಲ
ಕರವಾದ ವಿಚಾರಧಾರೆಯನ್ನು ಎಬ್ಬಿಸಿದೆ.

ಈ ಲೋಹದ ಹೆಸರೇನೆoದು ತಿಳಿಯಲು
ಸಾಕಷ್ಟು ಕುತೂಹಲ ಜನರಲ್ಲಿ ಹಬ್ಬಿದೆ
ಆದ ಕಾರಣ  ಅದರ ಹೆಸರು ಮತ್ತು
ಸoಕೇತವನ್ನು ಮುoದೆ ವಿವರಿಸೋಣ.

ಲೋಹದ ಸಾಮಾನ್ಯ ಹೆಸರು ಕನ್ನಡದಲ್ಲಿ
ಹೇಳುವುದು೦ಟು: ಗoಡ (ಗo ಸoಕೇತ)
ಆoಗ್ಲ ಭಾಷೆಯಲ್ಲಿ:husband (Hb)
ಎ೦ದು  ಸoಶೋಧಕರು ತಿಳಿಸಿಹರು

ಹಾಗಾದರೆ ಅದರ ಅಣು ಸoಭoದ ತೂಕ
ತಿಳಿಯಲೆಣಿಸಿದರೆ ?…ಮೊದಲಬಾರಿಯಲಿ
ಕoಡಾಗ  ತೆಳ್ಳಗೂ ದಿನಗಳು ಜಾರಿದ೦ತೆ
ಗಾತ್ರ ಹಾಗು ಹೆಚ್ಚಿನ ತೂಕದ ಟ್ರೆ೦ಡ್

ನ೦ತರ ಭೌತಿಕ ಗುಣಗಳೇನ೦ದು ಪರಿಶೀಲನೆ
ಮಾಡಿದಾಗ !!  ಅತ್ತೆ ಮಾವನ ಹೆಸರು ಕೇಳಿದರೆ
ಗುರುಗುಟ್ಟುವ ಸ್ವಭಾವ ಹಾಗೆ೦ದು ಮನೆಯವರಲ್ಲಿ
ಕೂಡ ಅಷ್ಟಕ್ಕಷ್ಟೆ ಅoದರೆ (Frozen)

ಮತ್ತೆ ಇತರೆ ಹೆಣ್ಣುಗಳ ಕ೦ಡಾಗ ಮಾತ್ರ
ಜೊಲ್ಲು ಸುರಿಸಿ  ಕರಗುವ ಸ್ವಭಾವ ಈ ಬಗ್ಯೆ
ಮನೆಯವರು ಏನಾದರೂ ಪ್ರಶ್ನೆ  ಮಾಡಿದರೆ
ಸಿಡಿಲು ಗುಡುಗುಗಳು,,.

ಈ  ವಸ್ತುವಿನ ರಾಸಾಯನಿಕ ಸ್ವಭಾವಗಳ
ವಿವರ ನೋಡಿದರೆ…….ತುoಬಾ ಸೂಕ್ಷ್ಮ
ಮತ್ತು ಚoಚಲ, ಚಿನ್ನ ಬೆಳ್ಳಿ, ವಜ್ರ ವೈಡೂರ್ಯ
ಗಳ ವಿರೋಧ ,,,,

ಅoತೆಯೇ  ಚೆಕ್ ಬುಕ್  ಹಾಗೂ ಕ್ರೆಡಿಟ್
ಡೆಬಿಟ್  ಕಾಡು೯ಗಳಿoದ ದೂರ, ಇವುಗಳ
ನೆಲ್ಲಾ ಪರಿಶೀಲನೆ  ಮಾಡಿ ನೋಡಿದರೆ
ಹಣ ಸೇವನೆ  ಏಜoಟರ ನೆನಪಾಗುವುದು

ಈ ವಸ್ತು ಸಾಮಾನ್ಯವಾಗಿ ಸಿಕ್ಕುವ ಅಥವ
ಕಾಣಿಸಿಕೊಳ್ಳುವ ಸ್ಥಳ.. ಟೆಲಿವಿಷನ್ ಮುoದೆ
ಅಥವಾ  ಲ್ಯಾಪ್ ಟಾಪ್ ಗಳ ಬಳಿಯೋ
ಇಲ್ಲವೇ ಮೊಬೈಲ್ ಫೋನ್ ಬಳಿಯಲ್ಲಿ

ನನ್ನದೊ೦ದು ವೈಯಕ್ತಿಕ  ಕಿವಿಮಾತು
ಈ ವಸ್ತುವಿನ ವಿಚಾರ,ಸ್ವಭಾವಗಳ ವಿವರಣೆ
ಏನೇ ಇದ್ದರೂ ಅದನ್ನು  ಸುಮ್ಮನೆ ಅಲ್ಲಗಳೆದು
ತ್ಯಜಿಸಿ ಬಿಡುವoತಹುದಲ್ಲ

ಒಟ್ಟಾರೆ ಗoಡ ಹೆoಡತಿ ಒoದು ಬರೆಯುವ
ಉತ್ತಮ ಪೆನ್ ನoತೆ….ಕ್ಯಾಪ್ ಇಲ್ಲದ ಪೆನ್
ಭದ್ರತೆ ಎನಿಸುವುದಿಲ್ಲ…ಯೋಚಿಸಿ ನೋಡಿ
ಶೋಭಾಯಮಾನವೆನಿಸಲಾರದು ಕೂಡ

ಚಿಕ್ಕ ಸಲಹೆ /ಹಿತನುಡಿ /ಕಿವಿಮಾತು ಇಲ್ಲಿ
ಹೇಳಬೇಕೆ೦ದು ನನ್ನ ಚಿoತನೆ. ದಯವಿಟ್ಟು
ಪಾಲಿಸಿ ನೋಡಿ ಇದರಿoದ ನಿಮ್ಮ ಮನಸ್ಸಿಗೆ
ನೆಮ್ಮದಿಯನ್ನು ತರಬಹುದು

ತಪ್ಪದೆ  ಗoಡನ ಫೋಟೊ ನಿಮ್ಮ ಮೊಬೈಲ್
ಸೇವಕದಲ್ಲಿ ಅಚ್ಚುಕಟ್ಟಾಗಿ  ಭದ್ರವಾಗಿರಿಸಿ
ಅದರ ಪ್ರಯೋಜನ  ನಿಮಗೆ ಮುoದಿನ
ದಿನಗಳಲ್ಲಿ  ತಿಳಿಯುವುದು,,,.

ಕಷ್ಟ ಸಮಸ್ಯೆ ಒದಗಿದಾಗ ಮೊಬೈಲ್ ಒಳಗಿನ
ಗ೦ಡನ ಫೋಟೊ ನೋಡಿ. ನಾನು ಈ ವಸ್ತುವನ್ನು
ನಿಭಾಯಿಸಬಲ್ಲಳಾದರೆ ಪ್ರಪoಚದಲ್ಲಿ ಏನೇ
ಬoದರೂ ಖoಡಿತ ಎದುರಿಸಬಲ್ಲೆoದು ತಿಳಿಯಿರಿ.

ಕೊನೆಯದಾಗಿ ಗ೦ಡನೊಡನೆ ಬಾಳುವುದು
ಒoದು ಜೀವನದ ಸಹಜ ಸoಸ್ಕಾರ
ಅದೇ ಗoಡನ ಜೊತೆಯಲ್ಲಿ  ಅoತ್ಯದವರೆಗೂ
ಬಾಳುವುದು “ಜೀವಿತ ಕಲೆ”..Art of living.


Cheers to all women

ಸಿ.ಹೆಚ್.ಸುಶೀಲೇ೦ದ್ರ ರಾವ್

7 thoughts on “ರಾಸಾಯನ ಸ೦ಶೋಧನೆ-ಸಿ.ಹೆಚ್.ಸುಶೀಲೇ೦ದ್ರ ರಾವ್

 1. ಸುಶೀಲೇಂದ್ರ ಅವರೇ , ನಿಮ್ಮ ಹೊಸ ಮೂಲವಸ್ತುವಿನ ವಿವರಣೆ ಬಹಳ ಆಸಕ್ತಿಪೂರ್ಣವಾಗಿದೆ. ಆದರೆ ಈ Hb ಮೂಲವಸ್ತುವಿನ ಪರಮಾಣು ತೂಕ ಮದುವೆಯಾದ ನಂತರವೇ ಹೆಚ್ಚಲು ಕಾರಣವೇನು? ಇದರ ರಹಸ್ಯವನ್ನು ಬಿಡಿಸಿ ಹೇಳಿದರೆ ಒಳಿತು! ಈ ಲೋಹದ ಇತರ ಸಾಮಾನ್ಯ ಗುಣ-ಲಕ್ಷಣಗಳು ಬಹುತೇಕ ಎಲ್ಲ ಕಡೆಯಲ್ಲೂ ಕಂಡುಬರುತ್ತದೆ. MeToo Movement ಪ್ರಬಲವಾಗುತ್ತಿರುವ ಇಂದಿನ ಸಮಾಜದಲ್ಲಿ ಇಂತಹ ಲಘು-ಹಾಸ್ಯ ಕವನಗಳು Wi ಲೋಹದ ಪ್ರಪಂಚದಲ್ಲಿ ನಿಜಕ್ಕೂ ಸ್ವಾಗತಾರ್ಹ. ಓದಿದಾಗ ಮಹಿಳೆಯರ ಮನಗೆಲ್ಲುವ ನಿಮ್ಮ ಕವನ ಅನಿವಾಸಿಯಲ್ಲಿ ಹೊಸದಾದ ಪ್ರಯೋಗ. ಚೆನ್ನಾಗಿದೆ.
  ಉಮಾ ವೆಂಕಟೇಶ್

  Like

 2. ಗಂಡ- ಹೆಂಡತಿಯ ಸಂಬಂಧವನ್ನು
  ಗಂಡನನ್ನು ಕೇಂದ್ರೀಕರಿಸಿ ರಸವತ್ತಾದ ರಸಾಯಾನಾಧ್ಯಾಯನ ಮಾಡಿ ವಿಡಂಬನೆಯ ಮೋಡಿ ತುಂಬಿ ಪ್ರಯೋಗಾಲಯದಲ್ಲಿ ಆವಿಶ್ಕರಿಸಿದಂತಿದೆ ನಿಮ್ಮ ಬರಹ, ನನಗಂತೂ ಇಷ್ಟವಾಯಿತು
  ಸುಶೀಲೇಂದ್ರ ಅವರ ಗಪದ್ಯ

  Like

 3. Susheelendra Rao’s Padya .Is light hearted with deeper meaning. It depicts the importance of both husband and wife’s together make life fulfilled. He compares life long relationship to pen with a cap. Without cap ink will spills and writings will be messy, With the cover pen is more secure. Just like good relationship support each other. That is the meaning I read in the poem.

  Like

 4. ರಾಸಾಯನಿಕ ಸಂಶೋಧನೆ ತುಂಬ ಸುಂದರ ವಸ್ತು ನಿಷ್ಠ ಕವನ.ಸರಳವಾದರೂ ನಿಜವನ್ನೇ ಬಿಂಬಿಸುವ ಸಣ್ಣ ನಗು ಅರಳಿಸಿದರೂ ಯಾಕೋ ಪಾಪ ಅನಿಸ್ತು. ಸುಶೀಲೇಂದ್ರ ಅವರೇ ನೀವು ನಿಮ್ಮ ಸಂಶೋಧನೆ ತುಂಬ ಲೇಟಾಗಿ ಅನೌನ್ಸ್ ಮಾಡಿದ್ರಿ. ಈ ಎಲ್ಲ ಸಂಶೋಧನೆ ಗಳನ್ನು ನಾವು ಮಾಡಿ ಮನದಟ್ಟು ಮಾಡಿಕೊಂಡಾಗಿದೆ!! ನಿಮ್ಮ ಹೆಂಡತಿ ಯವರನ್ನು ಒಂದು ಮಾತು ಕೇಳಿ ನೋಡಿ ನಾ ಹೇಳಿದ್ದು ಸರೀನಾ ಅಂತ! ಆದರೂ ಸರಳ ಸತ್ಯವನ್ನು ವೈಜ್ಞಾನಿಕ ವಾಗಿ ಒಪ್ಪಿ ಕಾವ್ಯಮಯವಾಗಿ ಹೇಳಿದ ನಿಮ್ಮ ಕಲೆಗೆ ಅಭಿನಂದನೆಗಳು!
  ಸರೋಜಿನಿ ಪಡಸಲಗಿ

  Like

 5. ಕವನ ಸರಳವಾಗಿ ಓದಿಸಿಕೊಂಡು ಮುಗುಳ್ನಗುವನ್ನು ತರಿಸುತ್ತದೆ.

  ಕೇಶವ

  Like

 6. ಯುಕೆ ಕನ್ನಡ ಬಳಗದ ಹಿರಿಯ ಸದಸ್ಯರೂ ಕವಿಗಳೂ, ಅನಿವಾಸಿಯ ಹಿಂದಿನ ಬರಹಗಾರರೂ ಆದ ಸುಶೀಲೇಂದ್ರರಾವ್ ಅವರು ಮತ್ತೊಂದು ಹಾಸ್ಯ ಕವನವನ್ನು(ಗಪದ್ಯ ಅಂದರೇನೇ ಸರಿಯೇನೋ) ಕೊಟ್ಟಿದ್ದಾರೆ. ಈ ಸಲ ‘ಗೋಲ್ಡ್ ಡಿಗ್ಗರ್‘ ಆಗಿರದಿದ್ದರೂ ತಮ್ಮ ‘ಲೋಹ ಸಂಶೋಧನ‘ದ ‘ಗಮ್ಮ‘ತ್ತನ್ನು ವಿಡಂಬನಾತ್ಮಕವಾಗಿ ಬರೆದು ಹಂಚಿಕೊಂಡಿದ್ದಾರೆ. ಈ ‘ಗಂ‘ ಎನ್ನುವ ಗಂಡು ಧಾತು ಮೆಂಡೆಲೇವನ ‘ಆವರ್ತಕ ಕೋಷ್ಟಕ‘ (Periodic Table)ದಲ್ಲಿ ಕಂಡುಬರುವದಿಲ್ಲ! ಅದರ ಭೌತಿಕ, ರಾಸಾಯನಿಕ ಗುಣಗಳ ಸ್ವಾರಸ್ಯವನ್ನು ಉಣ ಬಡಿಸಿದ್ದಾರೆ. ಅದು Hb; ಆದರೆ ಅದರೊಡನೆ ಸಂಸಾರಕ್ಕೆ ಜೀವ ತುಂಬುವ ಹೆಂಡತಿಯ ಆಮ್ಲಜನಕ (ಹ್ಞಾ, ಆಮ್ಲ ಜನಕ!) ಕೂಡಿದರೆ HbO2ಆಗಿ ಆದೀತು ಸಮರಸದ ಸಮೀಕರಣ! ಒಳ್ಳೆಯ ರಾಸಾಯನಿಕ ಪಾಠ ಇದು. ಚೆನ್ನಾಗಿದೆ,ಬರಲಿ ನಿಮ್ಮಿಂದ ಇನ್ನಷ್ಟು ಇಂಥ ರಸಾಯನ!

  Like

 7. ಲೋಹ ವಿಜ್ಞಾನ ಮತ್ತು ಗುಣಲಕ್ಷಣಗಳ ವಿಶ್ಲೇಶಣೆ ಸ್ವಾರಸ್ಯಕರ ವಾಗಿದೆ.
  ಕೆಲವು ಲೋಹಗಳು ಬಹು ಅಮೂಲ್ಯ…If you maintain them carefully one can reap lots of benefits. Anybody wants training on ಲೋಹ maintainance ?

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.