ಮೈಸೂರು ಒಡೆಯರ ರಾಜವಂಶ ಮತ್ತು ಅಲುಮೇಲಮ್ಮನ ಶಾಪ

 

ಮೈಸೂರನ್ನು ಆಳಿದ ದೊರೆಗಳ ಬಗ್ಗೆ, ಅವರ ವ೦ಶ ಬೆಳೆದು ಬ೦ದ ಬಗ್ಗೆ ಮತ್ತು ಯಾವ ದೊರೆಗಳ ಕಾಲದಲ್ಲಿ ಈ ಪ್ರಾ೦ತ ಯಾವ ರೀತಿಯ ಬದಲಾವಣೆಗಳನ್ನು ಕ೦ಡಿತು ಎನ್ನುವುದರ ಬಗ್ಗೆ ತಿಳಿದಿರುವುದು ಕಡಿಮೆ ಎ೦ದು ನನ್ನ ಅಭಿಪ್ರಾಯ. ಅನಿವಾಸಿ ತಾಣದ ನುರಿತ ಲೇಖಕ ರಾಮಮೂರ್ತಿಯವರು ಇದನ್ನು ಆಳವಾಗಿ ಅಭ್ಯಾಸ ಮಾಡಿ, ಸ೦ಕ್ಷಿಪ್ತವಾಗಿ ನಮ್ಮ ಮು೦ದಿಟ್ಟಿದ್ದಾರೆ. ಕರ್ನಾಟಕದ ಜನತೆಯೆಲ್ಲರೂ ತಿಳಿದುಕೊಳ್ಳಬೇಕಾಗಿರುವ ವಿಷಯ ಈ ಲೇಖನದಲ್ಲಿದೆ. ಅಲುಮೇಲಮ್ಮನ ಶಾಪದ ಬಗ್ಗೆ ಕೇಳಿರಬಹುದು, ಅದರ ಕಾರಣದ ಕತೆ ಮತ್ತು ಪರಿಣಾಮದ ವಿವರ ಈ ಲೇಖನಕ್ಕೆ ಪೂರಕವಾಗಿದೆ. ಓದಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ – ಸ೦

ಮೈಸೂರು ಒಡೆಯರ ರಾಜ್ಯವಂಶ ಮತ್ತು ಅಲುಮೇಲಮ್ಮನ ಶಾಪ

ಮೈಸೂರಿನ ಒಡೆಯರು ತಾಳಿಕೋಟೆ ಅಥವಾ ರಕ್ಕಸತಂಗಡಿ ಯುದ್ಧವಾದ ( ಜನವರಿ ೧೫೬೫ )ನಂತರ ವಿಜಯನಗರದ ಸಂಪ್ರದಾಯವನ್ನು  ನಡೆಸಿಕೊಂಡು ಬಂದರು. ೧೫ನೇ ಶತಮಾನದಲ್ಲಿ ಇವರ ಪೂರ್ವಜರು ದಕ್ಷಿಣ ಮೈಸೂರಿನಲ್ಲಿ ನೆಲೆಊರಿ   ಸುಮಾರು ೫೦೦ ವರ್ಷ ಆಳಿದರು. ೧೩೯೯ ರಲ್ಲಿ ಯಾದವ ವಂಶದ ಯದುರಾಯ  ಮತ್ತು ಕೃಷ್ಣರಾಯ ಎಂಬ ಸಹೋದರರು ಈ ವಂಶದ  ಮೂಲ ಪುರುಷರು ಅನ್ನುವುದುಕ್ಕೆ ಸಾಕಷ್ಟು ಮಾಹಿತಿ ಇದೆಯಂದು ಅನೇಕ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಸಣ್ಣ ಪಾಳೇಪಟ್ಟಿನಿಂದ ಶುರುವಾದದ್ದನ್ನು ಯದುರಾಯರು ತಮ್ಮ  ೨೪ ವರ್ಷದ ಆಡಳಿತದಲ್ಲಿ ರಾಜ್ಯವನ್ನಾಗಿ ವಿಸ್ತರಿಸಿದರು . ಇವರ ಕಾಲದಲ್ಲಿ  ಬೆಟ್ಟದ ಮೇಲೆ  ಯೋಗ ನರಸಿಂಹನ ದೇವಸ್ಥಾನದಲ್ಲಿ ನಾಲಕ್ಕು ಕೋಟೆಗಳನ್ನು ಕಟ್ಟಿ ಈ ಊರಿಗೆ “ಮೇಲುಕೋಟೆ” ಅಂತ ನಾಮಕರಣವಾಯಿತು. ಹಾಗೆಯೆ ಮೈಸೂರಿನ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೂ ಅನೇಕ  ಸುಧಾರಣೆಗಳನ್ನು ಮಾಡಿದರು.  ಯದುರಾಯರ  ನಂತರ ೧೫ ವರ್ಷದ ಹಿರಿಯಮಗ ಬೆಟ್ಟದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದು ೩೬ ವರ್ಷ  ರಾಜ್ಯಭಾರ ಮಾಡಿದರು . ಈ ಅರಸರು ಹಿಂದೂ ಧರ್ಮದ ವಿವಿಧ ಶಾಖೆಗಳನ್ನು ಬಹಳ ಉದಾರತೆಯಿ೦ದ ಬೆಳಸಿಕೊಂಡು ಬಂದರು.

 

Jayachamaraja Wadiyar

ತಿಮ್ಮರಾಜ ಒಡೆಯರು (೧೪೫೮-೧೪೭೮), ಎರಡನೇ ಚಾಮರಾಜ ಒಡೆಯರು (೧೪೭೮-೧೫೧೩),  ಮತ್ತು ಮೂರನೇ ಚಾಮರಾಜ ಒಡೆಯರು (೧೫೧೩-೧೫೫೩), ನಲವತ್ತು ವರ್ಷಗಳ ಕಾಲ ಈ ರಾಜ್ಯವನ್ನು ಆಳಿ ಅನೇಕ ಸುಧಾರಣೆಗಳನ್ನು ತಂದು ಜನರು ಶಾಂತಿಯಿಂದ ಬಾಳುವಂತೆ ಮಾಡಿದರು. ಚಾಮುಂಡಿ ಬೆಟ್ಟದಮೇಲೆ ಕೆರೆ ನಿರ್ಮಾಣ ಆದದ್ದು ಇವರಿಂದಲೇ. ಇವರ ಮಗ ತಿಮ್ಮರಾಜ ಒಡೆಯರ್ ೧೫೫೩ರಲ್ಲಿ ಪಟ್ಟಕ್ಕೆ ಬಂದು ನೆರೆಯ ಪಾಳೇಗಾರನ್ನು ಗೆದ್ದು “ಬಿರುದುಳ್ಳವರೆಗೆಲ್ಲಾ ಪ್ರಭು ” ಅನ್ನುವ ಬಿರುದನ್ನೂ ಪಡೆದರು. ಇವರ ಕೊನೆಯ ತಮ್ಮ “ಬೋಳ” ಚಾಮರಾಜ ಒಡೆಯರು (೧೫೭೨ -೧೫೭೬), ನಾಲಕ್ಕು ವರ್ಷ ಮಾತ್ರ ಇವರ ಆಡಳಿತ. ಇವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾಗ ಸಿಡಿಲು ಹೊಡೆದು ಇವರ ಕೂದಲ್ಲೆಲ್ಲಾ ಉದುರಿದ್ದರಿಂದ ಈ ಹೆಸರು ಬಂತಂತೆ!! ಇವರ ಮಗ ಬೆಟ್ಟದ ಚಾಮರಾಜ ಒಡೆಯರು ಎರಡು ವರ್ಷ ಮಾತ್ರ ಆಳಿದರು, ಕಾರಣ, ಅಸಾಮರ್ಥ್ಯತನ (sacked for being inefficient !!) ೧೫೭೮ ರಲ್ಲಿ ಇವರ ತಮ್ಮ ರಾಜ ಒಡೆಯರು ಪಟ್ಟಕ್ಕೆ ಬಂದರು.

ಮೈಸೂರಿನಲ್ಲಿ ಯಾದವ ವಂಶವನ್ನು ಸ್ಥಾಪಿಸುವ ಗೌರವ ಯದುರಾಯರದಾದರೆ, ಓ೦ದು ಸಣ್ಣ ಮೈಸೂರು ಪ್ರದೇಶವನ್ನು ದೊಡ್ಡ ರಾಜ್ಯವನ್ನಾಗಿ ಮಾಡಿದವರು ರಾಜ ಒಡೆಯರು. ಇವರು ಸುತ್ತ ಮತ್ತಲ ಪ್ರದೇಶಗಳನ್ನು ಆಕ್ರಮಿಸಿ ಬಲವಾದ ಕೋಟೆಯನ್ನು ಕಟ್ಟಿ ಪ್ರಭಲರಾದರು ಮತ್ತು ೧೬೦೮ ನಲ್ಲಿ ೨೫೦೦೦ ವರಹ ವರಮಾನವುಳ್ಳ ಮೂವತ್ತುಮೂರು ಗ್ರಾಮಗಳಿಗೆ ಅರಸರಾದರು.

ವಿಜಯನಗರದ ಅರಸ ಎರಡನೇ ವೆಂಕಟರಾಯನ  ಆಡಳಿಕೆಯಲ್ಲಿ ಅವನ ಸಬ೦ಧಿಕ  ತಿರುಮಲ ಶ್ರೀರಂಗಪಟ್ಟಣದಲ್ಲಿ ರಾಜಪ್ರತಿನಿಧಿಯಾಗಿದ್ದ. ಆದರೆ ಇವರಿಬ್ಬರಲ್ಲಿ ಸೌಹಾರ್ದತೆಯಿರಲಿಲ್ಲ. ಈ ಪರಿಸ್ಥಿತಿಯನ್ನು ರಾಜ ಒಡೆಯರು  ಉಪಯೋಗಿಸಿಕೊಂಡು ೧೬೧೦ ರಲ್ಲಿ ತಿರುಮಲನನ್ನು  ಹೊರಗೆ ಹಾಕುವ ಪ್ರಯತ್ನದಲ್ಲಿ ಯಶಸ್ವಿಯಾಗಿ,  ವಿಜಯನಗರದ ರಾಜಪ್ರತಿನಿಧಿಯಿಂದ  ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು  ಮೈಸೂರು ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯವನ್ನೆ ಪ್ರಾರಂಭಿಸಿದರು. ಇವರ ಆಡಳಿತದ ಕಾಲ ನಲವತ್ತು ವರ್ಷಗಳು. ಇವರ ಕಾಲದಲ್ಲಿ ಶ್ರೀರಂಗಪಟ್ಟಣ  ರಾಜಧಾನಿಯೂ ಆಯಿತು, ಈ ವರ್ಷದಲ್ಲಿ  ನವರಾತ್ರಿ ಹಬ್ಬದ ಆಚರಣೆ ಇವರಿಂದಲೇ ಶುರುವಾಗಿದ್ದು. 

ರಾಜಒಡೆಯರು ೧೬೧೭ ರಲ್ಲಿ  ತೀರಿದರು, ಇವರ ಗಂಡು ಮಕ್ಕಳು ಆಗಲೇ ತೀರಿದ್ದರಿಂದ ಅವರ ಮೊಮ್ಮಗ ೧೪ ವರ್ಷದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದಿದ್ದರೂ ಆಡಳಿತ  ದಳವಾಯಿ ಬೆಟ್ಟದ ಅರಸರದ್ದು . ಇವರು ಸುತ್ತ ಮುತ್ತಲಾದ ಪಾಳೆಯಪಟ್ಟುಗಳ ಮೇಲೆ ಧಾಳಿ ನಡೆಸಿ ರಾಜ್ಯವನ್ನು ವಿಸ್ತರಿಸಿದರು.  ಇಪ್ಪತ್ತು ವರ್ಷ ಚಾಮರಾಜ ಒಡೆಯರ ಆಳಿಕೆಯಲ್ಲಿ ಅನೇಕ ಸುಧಾರಣೆಗಳು ಬಂದವು. ಮೊದಲನೆಯ ಬಾರಿಗೆ ಸೈನ್ಯದ ಬೆನ್ನೆಲುಬಾಗಿ ಗಜದಳ ಸ್ಥಾಪಿತವಾಯಿತು. ಈಗ  ಮೈಸೂರು ರಾಜ್ಯ ವಿಸ್ತಾರವಾಗಿ ಹರಡಿತ್ತು. ಕಾವೇರಿ ನದಿಗೆ ನಾಲೆ, ಮೇಲುಕೋಟೆಯಲ್ಲಿ ಸ್ನಾನ ಘಟ್ಟ ಮತ್ತು ಕೆರೆಗಳ ನಿರ್ಮಾಣವಾಯಿತು. ಇವರು ಸಾಹಿತ್ಯ ಪ್ರಿಯ, ವಾಲ್ಮೀಕಿ ರಾಮಾಯಣದ ಕನ್ನಡ ರೂಪವಾದ ಚಾಮರಾಜೊಕ್ತಿ ವಿಲಾಸ ವನ್ನು ಸ್ವತಃ ರಚಿಸಿದರು.

Mysore Dasara Celebration

ಇವರು ನಿಧನವಾದ (೧೬೩೭) ನಂತರ ೨೫ ವರ್ಷದ ಎರಡನೇ ರಾಜ ಒಡೆಯರು ಪಟ್ಟಕ್ಕೆ ಬಂದರು. ಆದರೆ ೧೬೩೮ ರಲ್ಲಿ ಇವರು ನಿಧನವಾದರು. ಇವರ ಉತ್ತರಾಧಿಕಾರರು ಸುಪ್ರಸಿದ್ದ ರಣಧೀರ ಕಂಠೀರವ ನರಸರಾಜ ಒಡೆಯರು. ಇವರ ಕತ್ತಿವರಸೆ, ದೈಹಿಕ ಬಲ ಮತ್ತು ಶೌರ್ಯ ಇಂದಿಗೂ ಜನಪ್ರಿಯವಾಗಿದೆ.  ಇವರ ಆಡಳಿತದಲ್ಲಿ ಅನೇಕ ಕಷ್ಟಗಳು ಬಂದರೂ ಮೈಸೂರು ರಾಜ್ಯವನ್ನು, ಈಗಿನ ಕೊಡಗು ಪ್ರದೇಶದವರೆಗೂ ವಿಸ್ತರಿಸಿದರು. ಟಂಕಸಾಲೆಯನ್ನು ಸ್ಥಾಪಿಸಿ ತಮ್ಮ ಹೆಸರಿನ ನಾಣ್ಯಗಳನ್ನು ತಂದರು. ಇವರ ಆಡಳಿತದಲ್ಲಿ ರಚಿತವಾದ ಗ್ರಂಥಗಳು, ಚಕ್ರಬಡ್ಡಿ, ಚದರ ಮತ್ತು ಸರಪಣಿ ಅಳತೆ ಮತ್ತು ಮಾರ್ಕಂಡೇಯ ರಾಮಾಯಣ ಮುಂತಾದವು. ಇವರು ನಲವತೈದನೇ ವರ್ಷದಲ್ಲಿ (೧೬೫೯) ನಿಧನರಾದರು.

ಇವರ ನಂತರ ದೇವರಾಜ ಒಡೆಯರು, ಚಾಮುಂಡಿಬೆಟ್ಟಕ್ಕೆ ಸಾವಿರ ಮೆಟ್ಟಲು ಮತ್ತು ಮಧ್ಯದಲ್ಲಿ ಸುಂದರವಾದ ವೃಷಭದ ಶಿಲಾಮೂರ್ತಿ ನಿರ್ಮಾಣ ಇವರದ್ದೆ. ೧೬೭೧ ರಲ್ಲಿ ಐರೋಪ್ಯ ಮತ್ತು ಮೈಸೂರು ರಾಜ್ಯದ ವಾಣಿಜ್ಯ ಸಂಪರ್ಕ ನಡೆಯಿತೆಂದು ಚರಿತ್ರೆಕಾರ ಆಮ್ಲೆ ಎಂಬಾತ ಹೇಳಿದ್ದಾನೆ. ೧೬೭೩ ರಲ್ಲಿ ಇವರು ನಿಧನರಾದರು. ಇವರ ನಂತರ ೨೮ ವರ್ಷದ ಚಿಕ್ಕದೇವರಾಜ ಒಡೆಯರು ಪಟ್ಟಕ್ಕೆ ಬಂದು ಕೇವಲ ಐದು ದಿನಗಳಲ್ಲೇ ಮಧುರೆಯ ಚೊಕ್ಕನಾಥನ ಧಾಳಿಯನ್ನು ಎದುರಿಸಬೇಕಾಯಿತು , ನಂತರ ಇಕ್ಕೇರಿ ಮತ್ತು ಬಿಜಾಪುರ, ೧೬೭೭ ರಲ್ಲಿ ಮರಾಠದ ಪ್ರಬಲ ಶಿವಾಜಿಯನ್ನು ಎದುರಿಸಿ ವಿಜಯರಾದರು. ಇವರಿಗೆ ಅನೇಕ ಬಿರದುಗಳು ಬಂದು ಮೈಸೂರಿನ ಸಾರ್ವಭೌಮ ಪ್ರಭುಗಳೆಂದು ಪ್ರಸಿದ್ಧವಾದರು. ೧೬೮೭ರಲ್ಲಿ ಮೊಗಲ್ ಚಕ್ರವರ್ತಿಯ ಪ್ರತಿನಿಧಿ ಖಾಸಿಂಖಾನ್ ನಿಂದ ಬೆಂಗಳೂರನ್ನು ಮೂರು ಲಕ್ಷ ರೂಪಾಯಿಗಳಿಗೆ ಕ್ರಯಕ್ಕೆ ಪಡೆದರು. ಇವರ ಮಂತ್ರಿ ಸಂಪುಟ ಅನೇಕ ಸುಧಾರಣೆಗಳನ್ನು ಜಾರಿ ಮಾಡಿ ಕಂದಾಯ ವಸೂಲಿ ಮತ್ತು ಗ್ರಾಮಕಲ್ಯಾಣಕ್ಕಾಗಿ ಹದಿನೆಂಟು ಇಲಾಖೆಗಳನ್ನು ತೆರೆದರು, ಬೆಂಗಳೂರಿನಲ್ಲಿ ೧೨,೦೦೦ ನೇಯಿಗೆಯವರನ್ನು ತಂದು ಅವರು ತಯಾರಿಸಿದ್ದ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದುಇವರ ಕಾಲದಲ್ಲೇ. ಚಿಕ್ಕದೇವರಾಯ ಒಡೆಯರು ಮೂವತ್ತೆರಡು ವರ್ಷದ ಅಡಳಿಕೆಯ ನಂತರ ೧೭೦೪ರಲ್ಲಿ ನಿಧನರಾದರು.

ಮುಂದಿನ ೭೫ ವರ್ಷಗಳು ಒಡೆಯರ ಮನೆತದಲ್ಲಿ ಅನೇಕ ಏರು ಪೇರು ಗಳಾಗಿ ದಳವಾಯಿಗಳು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಈ ರಾಜ್ಯವನ್ನು ಆಳಿದರು. ೧೭೯೯ ರಲ್ಲಿ ಮೈಸೂರು ಮೂರನೇ ಯುದ್ಧದಲ್ಲಿ ಬ್ರಿಟಿಷ್ ಸೈನ್ಯ ಟಿಪ್ಪುಸುಲ್ತಾನ್ ಆಡಳಿತವನ್ನು ಕೊನೆ ಮಾಡಿ ಮೈಸೂರ್ ರಾಜ್ಯವನ್ನು ವಶಪಡಿಸಿಕೊಂಡರು. ನಂತರ ಆಗಿನ ರಾಜಮಾತೆ ಆಗಿದ್ದ ಮಹಾರಾಣಿ ಲಕ್ಷಿ ಅಮ್ಮಣ್ಣಿ ಮತ್ತು ಅರ್ಥರ್ ವೆಲ್ಲೆಸ್ಲಿ (ನಂತರ ಡ್ಯೂಕ್ ಆಫ್ ವೆಲ್ಲಿಂಗ್ಟನ್ ) ಜೊತೆ ಒಪ್ಪಂದ ಆಗಿ ಮೂರು ವರ್ಷದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟಕ್ಕೆ ತಂದರು.

Diwan Poornaiah

ದಿವಾನ್ ಪೂರ್ಣಯ್ಯನವರು ಇವರಿಗೆ ನೆರವಾಗಿ ರಾಜ್ಯದ ಅಡಿಳಿತಕ್ಕೆ ಮಾರ್ಗದರ್ಶಕರಾದರು. ಹತ್ತು ವರ್ಷಗಳ ನಂತರ ಮಹಾರಾಣಿ ಮತ್ತು ಪೂರ್ಣಯ್ಯ ನವರು ತೀರಿಕೊಂಡು ಮೈಸೂರು ಪ್ರದೇಶದಲ್ಲಿ ಅನೇಕ ಗಲಭೆಗಳು ನಡೆದು ಮೈಸೂರು ಸೈನ್ಯ ಬ್ರಿಟಿಷ್ ನೆರವು ಪಡೆದು ಈ ದಂಗೆಗಳನ್ನು ಅಡಗಿಸಿತು. ಗವರ್ನರ್ ಜನರಲ್ ವಿಲಿಯಂ ಬೆಂಟಿಂಗ್ ಮೈಸೂರು ರಾಜ್ಯವನ್ನು ಬ್ರಿಟಿಷ್ ರ ನೇರ ಅಡಳಿತಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕೆಂದು ನಿರ್ಧರಿಸಿ ೧೮೩೧ ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಡಳಿತವನ್ನು ಕೊನೆ ಮಾಡಿದ. ಹೀಗೆ ಬ್ರಿಟಿಷ್ ಅಧಿಕಾರಿಗಳು ೧೮೩೧-೧೮೮೧ ವರಗೆ ಮೈಸೂರು ರಾಜ್ಯವನ್ನು ಆಳಿದರು. ಈ ರಾಜರಿಗೆ ಮಕ್ಕಳಿರಲಿಲ್ಲವಾದ್ದರಿಂದ ಹತ್ತಿರದ ಸಭ೦ಧಿಕ ಚಾಮರಾಜ ಒಡೆಯರ್ ರವರನ್ನು ದತ್ತು ಪುತ್ರನಾಗಿ ಆರಿಸಿಕೊಂಡು, ಬ್ರಿಟಿಷ್ ಒಪ್ಪಂದದ  ನ೦ತರ ಒಡೆಯರ್ ರಾಜ್ಯ ವಂಶದವರು ಪುನಃ ಪಟ್ಟಕ್ಕೆ ಬಂದರು. ಆದರೆ ೧೮೯೪ ನಲ್ಲಿ ಇವರಿಗೆ ಕೇವಲ ೩೨ ವರ್ಷದ ವಯಸ್ಸಿನಲ್ಲಿ ಕಲಕತ್ತೆಗೆ ಭೇಟಿ ಇತ್ತಾಗ ರೋಗಕ್ಕೆ ತುತ್ತಾಗಿ ತೀರಿಕೊಂಡರು. ಇವರ ಮಗ ನಾಲ್ವಡಿಕೃಷ್ಣರಾಜಒಡೆಯರ್೧೯೦೨ ನಲ್ಲಿ ತನ್ನ ೧೮ ವರ್ಷ ತುಂಬಿದಾಗ ಪಟ್ಟಕ್ಕೆ ಬಂದರು. 

Nalvadi Krishnaraja Wadiyar

ಮೈಸೂರ್ ದೇಶ ಆ ಕಾಲದಲ್ಲಿ ಪ್ರಾಮುಖ್ಯತೆ ಪಡೆಯುವುದಕ್ಕೆ ಈ ನಾಲ್ವಡಿ ಮಹಾರಾಜರು ಕಾರಣ. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್, ಮೈಸೂರ್ ಬ್ಯಾಂಕ್, ಸಹಕಾರಿ ಸಂಘಗಳು ಮತ್ತು ಅನೇಕ ಕೈಗಾರಿಕೆಯ ಸಂಸ್ಥೆಗಳು ಇವರ ಪ್ರೇರಣೆಯಿಂದಲೇ ಪ್ರಾರಂಭವಾಗಿದ್ದು. ೧೯೪೦ ಆಗಸ್ಟ್ ನಲ್ಲಿ ಇವರು ನಿಧನರಾದರು. ತಮ್ಮನ ಮಗ ಜಯಚಾಮರಾಜ ಒಡೆಯರ್ ೨೩ ನೇ ವಯಸ್ಸಿನಲ್ಲಿ  ಮೈಸೂರು ರಾಜ್ಯದ ೨೫ನೇ ರಾಜರಾಗಿ ಸಿಂಹಾಸನಕ್ಕೆ  (೩/೮/೧೯೪೦) ಏರಿದರು .  ಭಾರತದ ಸ್ವತಂತ್ರ ಬಂದಮೇಲೆ ೨೬/೧/೧೯೫೦ ರಲ್ಲಿ ರಾಜಪ್ರಮುಖರಾದರು. ಜಯಚಾಮರಾಜ ಒಡೆಯರ್ ಬಹಳ ದೊಡ್ಡ ಮೇಧಾವಿ ಮತ್ತು ಸಂಗೀತ ಪ್ರೇಮಿ. ಲಂಡನ್ Philharmonica Concert Society ಯ ಮೊದಲನೇ ಅಧ್ಯಕ್ಷರು ಮತ್ತು Fellow of Trinity College of Music. ಇವರು ೨೩/೦೯/೧೯೭೪ ನಲ್ಲಿ ನಿಧನರಾದರು.  ಸುಮಾರು ೧೩೯೯ ನಲ್ಲಿ ಶುರುವಾದ ಮೈಸೂರು ರಾಜ್ಯ ಮನೆತನ ಇಲ್ಲಿ ಕೊನೆಯಾಯಿತು

ಮೈಸೂರು ಅರಸರ ಕುಟಂಬಕ್ಕೆ ಅಲುಮೇಲಮ್ಮನ ಶಾಪ

ಇದು ೧೬೧೨ ನಲ್ಲಿ ನಡೆದ ಸ್ವಾರಸ್ಯಕರವಾದ ಒ೦ದು ಪ್ರಸಂಗ, ದೊರೆತ ಮಾಹಿತಿಗಳ ಪ್ರಕಾರ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದ ತಿರುಮಲ ( ಶ್ರೀರಂಗರಾಯ ಅಂತಲೂ ಅವನ ಹೆಸರು ) ಅವರಿಗೆ ಬೆನ್ನುಪಣಿ ಅನ್ನುವ ರೋಗ ಬಂದು ಅದರ ನಿವಾರಣೆಗೆ ಅವನ ಎರಡನೇ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಾನೆ. ಇದನ್ನು ಕೇಳಿ ಮೈಸೂರಿನ ಅರಸ ರಾಜ ಒಡೆಯರ್ ಇದೇ ಸೂಕ್ತ ಸಮಯವೆಂದು ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಹೋಗಿ ವಶಪಡಿಸಿಕೊಳ್ಳುತ್ತಾರೆ. ಇದನ್ನು ಕೇಳಿಯೋ ಅಥವಾ ರೋಗದಿಂದಲೋ ತಿರುಮಲರಾಜ ತಲಕಾಡಿನಲ್ಲಿ ತೀರಿಕೊಂಡ ನ೦ತರ ಅಲುಮೇಲಮ್ಮ ಹತ್ತಿರದಲ್ಲೇ ಇರುವ ಮಾಲಂಗಿ ಗ್ರಾಮದಲ್ಲಿ ನೆಲಸುತ್ತಾಳೆ. ಅಮೂಲ್ಯವಾದ ವಜ್ರದ ಮೂಗುಬಟ್ಟು ಮತ್ತು ಅನೇಕ ಒಡೆವೆಗಳು ಈಕೆಯ ಹತ್ತಿರ ಇರುವ ವಿಚಾರ ರಾಜ ಒಡೆಯರಿಗೆ ತಿಳಿದು ಅವುಗಳನ್ನು ವಶಪಡಿಸಿಕೊಳ್ಳಲು ಕೆಲವು ಸೈನಿಕರನ್ನು ಕಳಿಸುತ್ತಾರೆ. ಅಲುಮೇಲಮ್ಮ ತನ್ನ ಒಡೆವೆಗಳ ಜೊತೆ ಮನೆಯಿಂದ ತಪ್ಪಿಸಿಕೊಂಡು ಕಾವೇರಿ ನದಿಯಲ್ಲಿ ಬೀಳುತ್ತಾಳೆ ಮತ್ತು ಬೀಳುವ ಮುಂಚೆ ಕೋಪದಿಂದ “ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಪಿಸುತ್ತಾಳೆ. ಈ ಮಾತುಗಳನ್ನು ಅಟ್ಟಿಸಿಕೊಂಡು ಬಂದ ಸೈನಿಕರು ಕೇಳಿ ರಾಜ ಒಡೆಯರಿಗೆ ತಿಳಿಸಿದಾಗ ಅವನಿಗೆ ತನ್ನ ದುರಾಸೆಯೇ ಇದಕ್ಕೆ ಕಾರಣ ಎಂದು ಅರಿವಾಗಿ,ಅರಮನೆಯ ಪುರೋಹಿತರ ಸಲಹೆಯ ಮೇಲೆ ಅಲುಮೇಲಮ್ಮನ ವಿಗ್ರಹವನ್ನು ಅರಮನೆಯ ಗುಡಿಯಲ್ಲಿ ಪ್ರತಿಷ್ಠೆ ಮಾಡಿದನು. ಮೈಸೂರು ರಾಜ್ಯವಂಶದವರು ಇಂದಿಗೂ ನವರಾತ್ರಿ ಹಬ್ಬದ ಪ್ರಾರಂಭ ಈ ಪೂಜೆಯಿಂದಲೇ ಪ್ರಾರಂಭಿಸುವುದು.

This image has an empty alt attribute; its file name is talakadu.jpg
Talakadu

ಮೈಸೂರು ಅರಸರ ಇತಿಹಾಸವನ್ನು ನೋಡಿದರೆ ರಾಜರ ದತ್ತು ಪಡೆದ ಮಗನಿಗೆ ಮಕ್ಕಳಾಗಿವೆ ಆದರೆ ಆತನಿಗೆ ಹುಟ್ಟುವ ಮಗನಿಗೆ ಮಕ್ಕಳಾಗದಿರುವುದನ್ನು ಕಾಣಬಹುದು. ಇತ್ತೀಚಿನ ಉದಾಹರಣೆಗೆ ಕೊನೆಯ ಮಹಾರಾಜರು ದತ್ತು ಪುತ್ರ ಜಯಚಾಮರಾಜ ಒಡೆಯರ್ ಗೆ ಶ್ರೀಕಂಠದತ್ತ ಜನಿಸಿದರೂ ಇವರಿಗೆ ಮಕ್ಕಳಿರಲಿಲ್ಲ. ಇವರ ದತ್ತು ಈಗಿನ ಯದುವೀರ್ ಒಡೆಯರ್ ಅವರಿಗೆ ಈಗ ಪುತ್ರ ಸಂತಾನವಾಗಿದೆ. ಕೊನೆಯದಾಗಿ ಈ ರಾಜ್ಯ ವಂಶದ ೫೦೦ ವರ್ಷದ ಚರಿತ್ರೆ ಎಲ್ಲ ಕನ್ನಡಿಗರಿಗೂ ಹೆಮ್ಮೆ ತರುವ ವಿಚಾರ. ಈ ರಾಜ್ಯದ ಅಭಿವೃದ್ಧಿಗೆ ಈ ವಂಶವದವರೇ ಕಾರಣ ಎಂದು ಹೇಳಬಹುದು.

ರಾಮಮೂರ್ತಿ, ಬೇಸಿಂಗ್ ಸ್ಟೋಕ್

 

30 June 1799. Coronation of Mummadi Krishnaraja Wodeyar. Dewan Purnaiah is seen standing on the right of the throne and Lt. Col. Wellesley seated on the left. (This picture was inadvertently left out from the earlier publication of this article. Apologies. Ed)

11 thoughts on “ಮೈಸೂರು ಒಡೆಯರ ರಾಜವಂಶ ಮತ್ತು ಅಲುಮೇಲಮ್ಮನ ಶಾಪ

  1. ನಿಮಗೆಲ್ಲ ನನ್ನ ಕೃತಜ್ಞತೆಗಳು, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ನಮ್ಮ ಕನ್ನಡ ನಾಡಿಗೆ ಮಾಡಿದ ಸೇವೆ ಬಗ್ಗೆ ಇನ್ನೂ ವಿಷಗಳನ್ನು ಬರೆಯಬಹುದು. ಆದರೆ ಈ ಲೇಖನದ ಉದ್ದೇಶ ಈ ವಂಶದ ಕಿರಿ ಪರಿಚಯ ಮಾಡುವುದು
    Ramamurthy

    Like

  2. Any thing that Rama Murthy puts his pen to (or uses the keyboard) produces a well researched, thoughtful article with appropriate humour in places. I am from Mysore and after reading this article, I have learned more than what I did during my educational years. Thank you Rama Murthy.

    Like

  3. ಈ ಚಾರಿತ್ರಿಕ ವಿಚಾರಪೂರಕವಾದ ಲೇಖನವನ್ನು ಬರೆದ ಶ್ರೀಯುತ ರಾಮಮೂರ್ತಿಯವರಿಗೆ ಹೃದಯಪೂರಕವಾದ ಧನ್ಯವಾದಗಳು. ಮೈಸೂರ್ ಮಹಾರಾಜರುಗಳ ಬಗ್ಗೆ ಅಲ್ಪ ಸ್ವಲ್ಪ ತಿಳದಿದ್ದರೂ ರಾಮಮೂರ್ತಿಯವರು ಈ ಬಗ್ಗೆ ಓದಿ ಮಾಹಿತಿ ಸಂಗ್ರಹಿಸಿ ಓದುಗರಿಗೆ ಮತ್ತು ಆಸಕ್ತಿ ಉಳ್ಳವರಿಗೆ ನಿಜಕ್ಕೂ ಮೈಸೂರು ವಡೆಯರವಂಶದ ಪರಿಚಯ ಮಾಡಿದ್ದಾರೆ.
    ಸುಮಾರು ಆರು ದಶಕಾಲಗಳ ಹಿಂದೆ ಸ್ಕೌಟ್ಆಗಿ ಬ್ಯಾಂಡ್ಸೆಟ್ ಸದಸ್ಯನಾಗಿ (ಮೂಲತಃ ಬೆಂಗಳೂರಿನವ )ದಸರಾ marchfast ನಲ್ಲಿ ಭಾಗವಹಿಸಲು ಕಲ್ಲದ್ದಿಲಿನ ರೈಲು ಪ್ರಯಾಣ ಹಸಿರಾಗೇ ಉಳದಿದೆ. ಮೈಸೂರು ಅರಮನೆಯಿಂದ ಬನ್ನಿ ಮಂಟಪಕ್ಕೆ ನಡೆದದ್ದು ಮರೆಯಲು ಸಾಧ್ಯವೇಇಲ್ಲ.
    ಮೆಡಿಕಲ್ ಕಾಲೇಜುನಲ್ಲಿಇದ್ದಾಗ ರೋಮಾಂಚಕ ತಲಕಾಡು ಮರಳಿನಲ್ಲಿ ನಡೆದ ಅನುಭವ ಇನ್ನು ಬಿಸಿಬಿಸಿ
    ತಲತಲಾಂತರ ಅಲುಮೇಲಮ್ಮನ ಶಾಪ shocking
    ಈ ಮನತಟ್ಟುವ ಬರಹದಿಂದ ಮತ್ತು ನನ್ನ ಹಳೆ ನೆನುಪುಗಳನ್ನು ಮರುಕಳಿಸಲು ಕಾರಣರಾದ ರಾಮಮೂರ್ತಿಅವರಿಗೆ ನನ್ನ ಮನಪೂರ್ವಕವಾದ ಧನ್ಯವಾದಗಳು. keep up the good work

    Like

  4. ಐತಿಹಾಸಿಕ ಲೇಖನಗಳನ್ನು ಬರೆಯುತ್ತ ನಮಗೆ ನಾವು ಓದಿರದೇ ಇದ್ದ ಬೆಂಗಳೂರಿನ ಮತ್ತು ಮೈಸೂರಿನ ಇತಿಹಾಸದ ಪುಟಗಳನ್ನು ಜೋಪಾನವಾಗಿ `ಅನಿವಾಸಿ`ಗೆ ತರುತ್ತಿರುವ ನಿಮಗೆ ಧನ್ಯವಾದಗಳು. ಉತ್ತರ ಕರ್ನಾಟಕದವನಾದ ನಾನು ಮೈಸುರಿನಲ್ಲಿ ಆರು ವರ್ಷ ಕಳೆದಿದ್ದೇನೆ. ಮೈಸೂರಿನ ಮಹಾರಾಜರ ಹೆಸರಿನ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದೇನೆ. ಮೈಸುರು ದಸರಾ, ಜಂಬೂಸವಾರಿ, ಬನ್ನಿಮಂಟಪವನ್ನು ಸವಿದಿದ್ದೇನೆ. ನಿಮ್ಮ ಲೇಖನ ತುಂಬ ಉಪಯುಕ್ತ ಮತ್ತು ಮಾಹಿತಿಪೂರ್ಣ.
    – ಕೇಶವ

    Like

  5. ರಾಮ ಮೂರ್ತಿ ಅವರೇ
    ನಮ್ಮ ಜಾಲ ಜಗುಲಿಯಲ್ಲಿ ಇದುವರೆವಿಗೂ ಪ್ರಕಟವಾಗಿರುವ ಐತಿಹಾಸಿಕ ಲೇಖನಗಳನ್ನು ನೀವು ಬರೆದಿದ್ದು , ನಮ್ಮ ಬಳಗದ ವಿಶೇಷ ಐತಿಹಾಸಿಕ ತಜ್ಞರಾಗಿದ್ದೀರ! ಮೈಸೂರು ನನ್ನ ಹುಟ್ಟೂರು. ನಾನು ಚಿಕ್ಕವನಾಗಿದ್ದಾಗ ಮೈಸೂರಿನಲ್ಲಿ ನಡೆದ ದಸರಾ ಉತ್ಸವದಲ್ಲಿ ಸ್ಕೌಟ್ ಆಗಿ ಮೆರವಣಿಗೆಯಲ್ಲಿ ಭಾಗವಹಿಸಿ ಕೃಷ್ಣರಾಜ ವಡೆಯರ್ ಅವರನ್ನು ದೂರದಿಂದ ಕಂಡಿದ್ದು ನೆನಪಿದೆ. ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ತಂದೆಯವರ ಜೊತೆ ಕೂತು ಮಹಾರಾಜರನ್ನು ಕಂಡಿದ್ದೇನೆ. ನಮ್ಮ ನಾಡಿಗೆ ಅವರ ಮತ್ತು ನಾಲ್ವಡಿ ಕೃಷ್ಣರಾಜೇಂದ್ರರ ಕೊಡುಗೆ ಅಪಾರವಾದದ್ದು. ಅವರನ್ನು ಮರು-ಪರಿಚಯಿಸಿದ ನಿಮಗೆ ಧನ್ಯವಾದಗಳು. ಇಂತಹ ಅರಸರನ್ನು ಕಂಡ ಕರ್ನಾಟಕದ ಜನತೆ ಅದೃಷ್ಟವಂತರು.

    Like

    • ಪ್ರಸಾದ್
      ನಾನು ನಂಜನಗೂಡಿನಲ್ಲಿ ಇದ್ದೆ ಹೈ ಸ್ಕ್ಸ್ಕೊಲ್ ನಲ್ಲಿ, ನನಗೂ ಮಹಾರಾಜರು ಅಂಬಾರಿ ಮೇಲಿ ಕೂತು ಬನ್ನಿ ಮಂಟಪಕ್ಕೆ ನೋಡಿದ ಜ್ಞಾಪಕ ಚೆನ್ನಾಗಿದೆ. ಈ ರಾಜಮನೆತನ ಮೈಸೂರಿಗೆ ಮಾಡಿದ ಸೇವೆ ನಾವು ಮರೆಯಬಾರದು. ಇಂದಿನ ಪೀಳೆಗೆ ಯವರಿಗೆ ಇದರ ಬಗ್ಗೆ ಸ್ವಲ್ಪ ಅರವಿರಲಿ ಎಂಬ ಉದ್ದೇಶದಿಂದ ಇದನ್ನು ಬರೆದಿದ್ದು. ನಾವು ಈ ದೇಶದಲ್ಲಿ ವಾಸವಾಗಿದ್ದೇವೆ ಆದ್ದರಿಂದ ಬ್ರಿಟಿಷ್ ಪಾರ್ಲಿಮೆಂಟ್ ಬಗ್ಗೆ ಹಿಂದೆ ಬರೆದಿದ್ದೆ. ಆದರೆ ಇಂತಹ ವಿಷಯಗಳನ್ನು ತಿಳಿಯುವ ಕುತೂಹಲ ಎಷ್ಟು ಜನಕ್ಕೆ ಇದೆಯೂ ಗೊತ್ತಿಲ್ಲ
      ಅಂದ ಹಾಗೆ, ನೀವು ಮರೆತಿರಬಹುದು, it was you who suggested that I write on this subject!!

      Like

  6. Well researched article. Your interest in history and deep study is evident! Kudos!
    Shri Anand Murthy’s interest in our Anivaasi blog is appreciated. Thanks for his interest and the information. I remember the book (by Sampath) release occasion in 2008.Shrivatsa Desai

    Like

    • ರಾಮಮೂರ್ತಿಯವರೇ

      ತಮ್ಮ ಆಳವಾದ ಸಂಶೋಧನಾ ಶಕ್ತಿಯನ್ನು ಎಷ್ಟು ಮೆಚ್ಚಿದರೂ ಸಾಲದು. ತಮ್ನ ಲೇಖನದಲ್ಲಿರುವ
      ಬಹಳ ವಿಷಯಗಳು ಕರ್ನಾಟಕದಿಂದ ಬಂದೂ ನನಗೆ ಅಳವಿರರಲಿಲ್ಲವೆಂದು ತಿಳಿಸಲು ಸಂಕೋಚವಾಗುತದೆ . ತಮ್ಮಲೇಖನ ಓದಿದ್ದಾಗ ನನಗೆ ಒಂದು ನಿಟ್ಟುಸಿರು ಬಂತು .- ಏಕೆಂದರೆ ದೇವರದಏಯಿಂದ ನಾವು ಯಾವ ಚರಿತ್ರೆ ಪರೀಕ್ಷೆ ಯನ್ನು ಕುಳಿತಿಕೊಳ್ಳಬೇಕಿಲ್ಲದಿರುವಿದರಿಂದ ನಮಗೆ ಯಾವ ಇಸವಿಯು ಜ್ಞಾಪಕದಲ್ಲಿರ ಬೇಕಿಲ್ಲವೆಂದು!

      ತಮ್ಮಿಂದ ನಾವು ಕಲಿಯುವುದು ಬಹಳವಿದೆ. ತಾವು ದಯವಿಟ್ಟು ಹೀಗೆ ಮುಂದುವರಿಸಿ

      ಭಾನುಮತಿ

      Sent from http://bit.ly/KIoyYL

      Like

  7. ಸಂತಾನದ ಸಂತಾಪಕ್ಕೆ -ಕಥೆಯಿಂದ ಒಂದುರೀತಿಯ ಆಧಾರವೇ ?; ನಮ್ಮ ಮೈಸೂರಿನ -ಇತಿಹಾಸದ ಮೇಲಿರುವ ನಿಮ್ಮ ವಿಶೇಷಕರವಾದ ವಿಚಾರಗಳಲ್ಲಿ , ಹಲವಾರು ಸಂಗತಿಗಳು, ಸುಂದರವಾದ ಚಿತ್ರಗಳೊಂದಿಗೆ ಮೂಡಿಬಂದಿವೆ , ರಾಮಮೂರ್ತಿಯವರೆ 🙏💐

    Like

  8. This article has made me realise how little I know about our own Karnataka history and heritage that too of Mysore kings and queens. Thank you for sharing the research.

    Like

  9. ತುಂಬಾ ಉಪಯುಕ್ತವಾದ ಮಾಹಿತಿ. ಚೆನ್ನಾಗಿ ತಿಳಿಸಿದ್ದೀರ.
    Those who are interested in Wondeyar and British India history can read ‘Untold story of Wodeyars’ by Vikram Sampath. An amazing book.

    Like

Leave a comment

This site uses Akismet to reduce spam. Learn how your comment data is processed.