ಚಿಣ್ಣರು ಬರೆದ ಇಂಗ್ಲೀಷ್ ಕವಿತೆಗಳು ಮತ್ತು ಅವುಗಳ ಕನ್ನಡ ಅನುವಾದ 

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|
ಹೊಸ ಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ|
ಜಸವು ಜನ ಜೀವನಕೆ-ಮಂಕುತಿಮ್ಮ||

ಆಳವಾಗಿ ಬೇರೂರಿರುವ ಮರದಲ್ಲಿ ಹೊಸಚಿಗುರಿನ ಸೊಬಗು , ಜನರ ಮನಸ್ಸಿಗೆ ಸಂತೋಷ ತರುತ್ತದೆ ಎನ್ನುವ ಸಾರ್ವಕಾಲಿಕ ಸತ್ಯವನ್ನು  ಮಂಕುತಿಮ್ಮನ ಕಗ್ಗದಲ್ಲಿ ನಮ್ಮ ಡಿ.ವಿ.ಜಿ. ರವರು ಸೆರೆಹಿಡಿದಿದ್ದಾರೆ. ಇತ್ತೀಚೆಗಷ್ಟೇ ಐದು ವರ್ಷಗಳನ್ನು ಪೂರೈಸಿ, ತನ್ನ ಬೇರುಗಳನ್ನು ಬಲಿಸಿಕೊಂಡಿರುವ ‘ಅನಿವಾಸಿ’ ತಾಣಕ್ಕೀಗ ಹೊಸ ಚಿಗುರಿನ ಸಮಯ. ಹೌದು ನಮ್ಮ ‘ಅನಿವಾಸಿ’ ತಾಣದಲ್ಲಿ ಈ ವಾರ ತಾರ ಪ್ರೇಮ ಮತ್ತು ಪೂರ್ಣಿಮಾ ಹೆಗ್ಡೆ ಎಂಬ ಹತ್ತು ವರ್ಷ ವಯಸ್ಸಿನ ಪುಟಾಣಿಗಳಿಬ್ಬರು ಬರೆದಿರುವ ಇಂಗ್ಲೀಷ್ ಕವನಗಳನ್ನು ಪ್ರಕಟಿಸುತ್ತಿದ್ದೇವೆ.

ಈ ಕವನಗಳ ಜೊತೆಗೆ ಅವುಗಳ ಕನ್ನಡ ಅನುವಾದವನ್ನೇಕೆ ಪ್ರಕಟಿಸಬಾರದೆಂಬ ಪ್ರಶ್ನೆ ಮೂಡಿ, ಮಕ್ಕಳ ಪೋಷಕರಿಗೆ ಅದರ ಜವಾಬ್ದಾರಿಯನ್ನು ವಹಿಸಲಾಯಿತು. ಪುಟಾಣಿ ಪೂರ್ಣಿಮಾ ಹೆಗ್ಡೆ ಯ ತಂದೆ ಗೋಪಾಲಕೃಷ್ಣ ಹೆಗ್ಡೆ ರವರು ಮತ್ತು ಪುಟಾಣಿ ತಾರ ಪ್ರೇಮ ಳ ತಾಯಿಯಾದ ಪ್ರೇಮಲತಾ ರವರು ಈ ಕವಿತೆಗಳಿಗೆ ಭಾವಾನುವಾದವನ್ನು ಅಚ್ಚುಕಟ್ಟಾಗಿ ಬರೆದಿದ್ದಾರೆ.

ಕಗ್ಗದ ಸಾರದಂತೆ, ಮಕ್ಕಳ ಈ ಕವಿತೆಗಳು ‘ಅನಿವಾಸಿ’ ತಾಣದ ಓದುಗರೆಲ್ಲರ ಮನಸ್ಸಿಗೂ ಮುದ ತರುತ್ತವೆ ಎಂದು ನಂಬಿದ್ದೇನೆ.

1. My Magic Friend

ಬರೆದವರು: ಪೂರ್ಣಿಮಾ ಹೆಗ್ಡೆ (೧೦ ವರ್ಷ )

ಕನ್ನಡ ಅನುವಾದ: ಗೋಪಾಲಕೃಷ್ಣ ಹೆಗ್ಡೆ (ತಂದೆ )

fairy

The night stars sparkle so bright,
They glitter and shimmer and shine all night.
At midnight when the clock chimes,
Little, dainty fairies hop out from the flowers.
They all sing together and skip in the sky,
Merrily for hours and hours.

I dream that I would meet a fairy so beautiful and
elegant,
And call my new friend Sparkle!
Her eyes so twinkling in the bright night sky,
Her white dress dazzles as she flies so high.
I wish that one day my dream will come true,
And I will say hello and play with
my beautiful friend all night through.

PoornimaHegde_Photo

ಪೂರ್ಣಿಮಾ ತನ್ನ ಆರನೇ ವಯಸ್ಸಿಗೆ ಇಂಗ್ಲಿಷ್ ನಲ್ಲಿ ಕವಿತೆಗಳನ್ನು ಬರೆಯುವುದರ ಕಡೆಗೆ ಒಲವು ತೋರಿಸುತ್ತಿದ್ದಳು. “My Magic Friend” ಎಂಬ ಈ ಕವಿತೆಯನ್ನು ಅವಳು ತನ್ನ ಏಳನೇ  ವಯಸ್ಸಿನಲ್ಲಿ ಬರೆದಿದ್ದು, ಅದು 2017 ರಲ್ಲಿ ಜೆನ್ನಿ ಹ್ಯಾರಿಸನ್ ರವರು ಸಂಪಾದಿಸಿದ  “Once upon a dream” ಎಂಬ ನಾರ್ತ್ ಲಂಡನ್ ನ ಚಿಣ್ಣರ ಕವನ ಸಂಕಲನದಲ್ಲಿ  ಪ್ರಕಟವಾಗಿತ್ತು.  ಈಗ ಪೂರ್ಣಿಮಾ 10 ವರ್ಷದವಳಾಗಿದ್ದು 6 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇತ್ತೀಚಿಗೆ ಕಥೆಗಳನ್ನು ಬರೆಯುವುದು ಅವಳ ಹವ್ಯಾಸಗಳಲ್ಲೊಂದಾಗಿದೆ.

ರಾತ್ರಿ ಅಂಗಳದಲಿ ಪಸರಿಸಿದೆ ರಾಶಿ ನಕ್ಷತ್ರ ಬೆಳಕು
ಹೊಳೆಯುತಿದೆ,ರಾತ್ರಿಯುದ್ದಕೂ ಬೆಳಗುತಿದೆ ಅದರ ಚೆಂದ
ಮಧ್ಯರಾತ್ರಿಯಲಿ ಬಂದ ಗಂಟೆಯ ಸದ್ದು ಕೇಳಿ
ಜಿಗಿ-ಜಿಗಿದು ಬರುತಿಹರು ಕಿನ್ನರಿಯರು ಎಲ್ಲ
ಬಾನಂಗಳದಿ ಅರಳಿದ ಪುಷ್ಪಗಳಿಂದ ಇಳಿದು
ದೂರದಿಗಂತದಲಿ ನಕ್ಕು-ನಲಿದಾಡಿಹರು
ಸಮಯಕ್ಕೆ ಅಂತ್ಯವೇ ಇಲ್ಲ ಎನ್ನುವ ಪರಿ.

ಈ ಕಿನ್ನರಿ-ಸುಂದರಿಯ ಕಾಣಲು ಕನವರಿಸಿರುವೆ ನಾನು
ಕರೆವೆ ನನ್ನ ಹೊಸ ಸಖಿಯನ್ನು   ‘ಮಿನುಗುತಾರೆ’!
ಕಂಗೊಳಿಸುತಿವೆ ಸಖಿಯ ಕಣ್ಗಳು, ಬಾನಿನಂಗಳದಿ ಇಂದು
ಹಾರುತಿಹಳು ನನ್ನ ಸಖಿ ಗಗನದೆತ್ತರ ಏರಿ
ಉಟ್ಟಿಹಳು ಬಿಳಿಯ ಚೆಂದದ ಬಟ್ಟೆಯನು, ಈ ಸುಂದರ ಬಾಲೆ
ಕಾದಿಹೆನು ಕನಸಿನಲಿ ಈ ನನ್ನ ಸಖಿಗಾಗಿ ,
ಆಟವಾಡೋಣ ಆನಂದದಿ ರಾತ್ರಿಯೆಲ್ಲ,
ಇಳಿದು ಬಾರೆ  ಮಾಟದ ಸಖಿ, ನನ್ನ ಜೊತೆಗಾಗಿ ಈಗ !

2. Night Time

ಬರೆದವರು: ತಾರ ಪ್ರೇಮ (೧೦ ವರ್ಷ )

ಕನ್ನಡ ಅನುವಾದ: ಪ್ರೇಮಲತ ಬಿ (ತಾಯಿ )

Silhouette of little girl holding a flower

Stars bright sparkling and shining
Galaxies and other worlds yet to be discovered
Aliens and UFOs spying at night
I sit in my bed dreaming
Of all the possibilities
Suspicions and conspiracies yet to be uncovered
Area 51 to be raided in America
This is what happens at night!

t1 2018 (2)
ತಾರ ಇದನ್ನು ಬರೆದದ್ದು 2 ವರ್ಷಗಳ ಹಿಂದೆ. ಲಿಂಕನ್ ನಗರದ Grantham ಎನ್ನುವ ಜಾಗದಲ್ಲಿ ಐದನೇ ತರಗತಿ ಓದುತ್ತಿರುವ ತಾರಾಳಿಗೆ ಮುಖ್ಯವಾಗಿ ಜಿಮ್ನಾಸ್ಟಿಕ್ಸ್ ನಲ್ಲಿ ಆಸಕ್ತಿ. ಭರತನಾಟ್ಯಂ ನ ನಾಲ್ಕನೇ ಹಂತದಲ್ಲಿ ಕಲಿಕೆ. ಸಾಹಿತ್ಯ ಎನ್ನುವುದು ಆಗೀಗ ನಡೆಯುತ್ತಿರುತ್ತದೆ.4-5 ಕಥೆಗಳನ್ನೂ ಬರೆದಿದ್ದಾಳೆ. ಎಲ್ಲವೂ ಸಧ್ಯಕ್ಕೆ ನೋಟ್ ಪುಸ್ತಕದಲ್ಲಿ ಶೇಖರವಾಗುತ್ತಿವೆ

ಮಿನುಗುತಲಿ ಹೊಳೆಯುತಲಿ ಬೆಳಗುವ ತಾರೆಗಳು
ನಕ್ಷತ್ರ ಪುಂಜಗಳು ಹಾಗೂ ಹಲವು ಅಜ್ಞಾತ ಜಗತ್ತುಗಳು
ಏಲಿಯನ್ನುಗಳು ಮತ್ತು ಗುಪ್ತಚಾರಿ ಹಾರುವ ತಟ್ಟೆಗಳು.
ನನ್ನ ಹಾಸಿಗೆಯಲ್ಲಿ ಕೂತು ಆಲೋಚಿಸುತ್ತಿದ್ದೇನೆ
ಎಲ್ಲ ಸಾಧ್ಯತೆಗಳನ್ನು,
ಸಂದೇಹಗಳನ್ನು ಮತ್ತು ಬಿಡಿಸಲಾಗದ ಪಿತೂರಿಗಳನ್ನು
ಏರಿಯಾ 51ರ ಮೇಲಿನ ಧಾಳಿಯ ಒಳಸಂಚನ್ನು
ನನ್ನ ರಾತ್ರಿಗಳೆಂದರೆ ಹೀಗೆ!

ಏರಿಯಾ 51 ಎನ್ನುವುದು ಅಮೆರಿಕಾದ ನೆವಾಡಾ ಪ್ರಾಂತ್ಯದ ದಕ್ಷಿಣ ಭಾಗದಲ್ಲಿದೆ. ಇದೊಂದು ರಹಸ್ಯಗಳ  ತಾಣ.ಇಲ್ಲಿಗೆ ಜನಸಾಮಾನ್ಯರನ್ನು ಅಮೆರಿಕಾ ಸರ್ಕಾರ ಬಿಟ್ಟುಕೊಳ್ಳುವುದಿಲ್ಲ.Freedom of information act  ಗೆ ಮಣಿದು ಜೂನ್ 25, 2013 ರಲ್ಲಿ  ಸರ್ಕಾರ ತಾವಿಲ್ಲಿ ರಹಸ್ಯ ಕಾರ್ಯಾಚರಣೆ ಮಾಡತ್ತಿದ್ದೇವೆಂದು ಒಪ್ಪಿಕೊಂಡಿತಾದರೂ, TC/SCI  (Top secret/sensitive compartmented information) ಕಾಯ್ದೆಗಳ ಪ್ರಕಾರ ಏನು ನಡೆಯುತ್ತಿದೆ ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಇಲ್ಲಿ ಪರಗ್ರಹ ಜೀವಿಗಳನ್ನು ಅಮೆರಿಕಾ ಸರ್ಕಾರ ಹಿಡಿದಿಟ್ಟುಕೊಂಡಿದೆ ಎಂಬ ವದಂತಿ ಹರಡಿದೆ . ಮೇ 15, 2015 ರಲ್ಲಿ ’ಪರ್ಜ್ ’ ಖ್ಯಾತಿಯ ನಿರ್ದೇಶಕ ಈ ಕುರಿತು “ ಏರಿಯಾ 51 “ ಎನ್ನುವ ಪುಟ್ಟ ಸಿನಿಮಾವನ್ನು ಕೂಡ ಮಾಡಿದ್ದಾನೆ.

ಕಳೆದ ವರ್ಷ ಜುಲೈ 20 ರಂದು, ಈ ಜಾಗಕ್ಕೆ ಸೆಪ್ಟೆಂಬರ್ 20 ರ ದಿನ  ಮುತ್ತಿಗೆ ಹಾಕಲು  ಜೋಕಿನ ರೂಪದಲ್ಲಿ ಕರೆಹೋಯ್ತು. 20 ಲಕ್ಷ ಜನರು ಈ ಜೋಕಿಗೆ ಸ್ಪಂದಿಸಿದರು. ಮತ್ತೂ 15 ಲಕ್ಷ ಜನರು ತಾವೂ ಬರುತ್ತೇವೆಂದರು. ಇದನ್ನು ಅರಿತ ವಾಯುಸೇನೆ ಜನರನ್ನು ಬರದಿರುವಂತೆ  ಅಧಿಕೃತವಾಗಿ ಕರೆಕೊಟ್ಟಿತು. ಆದರೆ ಪರಗ್ರಹ ಜೀವಿಗಳಲ್ಲಿ ನಂಬಿಕೆ ಇಟ್ಟ ಜನ ಕೇಳಲಿಲ್ಲ. ಈ ಜಾಗದ ಸುತ್ತಲೂ  3000 ಜನ ಸೇರಿ ಏಲಿಯನ್ ಗಳ ಕುರಿತಾದ ಹಬ್ಬಗಳನ್ನು ನಡೆಸಿದರು. 150 ಜನ  ಗೇಟನ್ನೂ ತಲುಪಿದರು. ಒಳ ಹೋಗಲು ಸಫಲರಾಗದಿದ್ದರೂ ಅವರ ಹಳೆಯ ನಂಬಿಕೆಗಳು ಮತ್ತೂ ಬಲವಾಗಿವೆ ಮತ್ತು ಹೊಸ ಕನಸುಗಳು ಮೂಡುತ್ತಿವೆ.

19 thoughts on “ಚಿಣ್ಣರು ಬರೆದ ಇಂಗ್ಲೀಷ್ ಕವಿತೆಗಳು ಮತ್ತು ಅವುಗಳ ಕನ್ನಡ ಅನುವಾದ 

 1. Apologies for the belated response, two beautiful poems. One is reflective on the kids curiosity and the other one is about child hood fantasies. Both curiosity and fantasies are very integral part of childhood and growing up, which we parents need to nurture. They are going to grow out of all these soon, let us hear more from them in due course.

  Like

 2. ಪುಟ್ಟ ಮಕ್ಕಳಾದ ಪೂರ್ಣಿಮಾ ಮತ್ತು ತಾರ
  ಬರೆದ ಎರಡು ಕವಿತೆಗಳೂ ಅವರ ವಯಸ್ಸಿಗೆ ಮೀರದ ಚಿಂತನೆಗಳು

  ‘ಬೆಳೆಯುವ ಸಿರಿ ಮೊಳಕೆಯಲ್ಲೇ’

  – ವಿಜಯನರಸಿಂಹ

  Like

 3. ಮೊದಲು ಎಳೆಯರ ಸಲುವಾಗಿ ಇಂಗ್ಲಿಷ್ನಲ್ಲೇ ಪ್ರತಿಕ್ರಿಯಿಸುವೆ:
  Two beautiful poems by two eight year olds (at the time of writing). Both deal with ‘stars bright, shining and sparkling (Tara) and those that ‘glitter and shimmer all night'(Purnima). Both write about mysteries-but of different kind in each. Tara suspects aliens and UFOs (we all dreamed of them, too in our childhood!) spying from undiscovered galaxies and other world. She is also curious and suspicious of conspiracies, showing her mature mind, perhaps influenced by the world we live in. Area 15 has caught her imagination.
  Purnima dreams of the magic when the midnight clock chimes, meeting a fairy friend, ‘hopping out of a flower’ and calls her ‘Sparkle’. Her description is as vivid as rich her imagination is. Congratulations to both poets and their parents, the latter for their encouragement and the Kannada translations which grasp the essence of the original and express clearly and beautifully.
  Both youngsters have a bright future, as bright as the sparkling stars of the night!
  Shrivatsa Desai

  Like

 4. ಇಬ್ಬರು ಎಂಟು ವರ್ಷದ ಯುವ ಕವಯಿತ್ರಿಗಳ ಸಮೃದ್ಧ ಕಲ್ಪನವಿಲಾಸ ಮೂಡಿಸಿದ ಸುಂದರ ಚಿತ್ರಗಳನ್ನು ಈ ವಾರ ಕಾಣುತ್ತಿದ್ದೇವೆ. ಅವರಿಬ್ಬರೂ ತಮ್ಮ Area 8ರ ವಿಸ್ತಾರವನ್ನು (51 ರಂತೆ) ಗೌಪ್ಯವಾಗಿಡದೆ ತೆರೆದಿಟ್ಟಿದ್ದಾರೆ. ವಿಜ್ಞಾನಿಗಳ ಪ್ರಕಾರ ಮೆದುಳಿನ ಎಡಭಾಗದ ಬ್ರೋಕಾಸ್ ಏರಿಯಾ (8) ಮಾತು-ಶಬ್ದಗಳ ಸ್ಥಾನವಂತೆ! ಮಿನುಗುವ ತಾರೆಗಳನ್ನು ನೋಡಿ ತಾರಾ ಅವುಗಳಾಚೆಯ ವ್ಯೋಮದ’ಗರ್ಭ’ದಲ್ಲಿ (ನೆವಾಡಾದಲ್ಲಿ ಸಹ) ಅಡಗಿರಬಹುದಾದ ಗೂಢತೆಯ ಯೋಚನೆ ಮಾಡಿದರೆ, ಪೂರ್ಣಿಮಾನದು ಪೂರ್ತಿ ಮಾಂತ್ರಿಕ ಲೋಕದ ಸುಂದರ ಕಲ್ಪನೆ. ತನ್ನ ’ಸ್ಪಾರ್ಕಲ್’ ಗೆಳತಿಯೊಡನೆ ರಾತ್ರಿಯಿಡೀ ಆಟವಾಡುವ ಕನಸುಕಾಣುತ್ತಾಳೆ. ನಮಗೂ ನಮ್ಮ ಬಾಲ್ಯದ ಸುಂದರ ಕನಸುಗಳನ್ನು ನೆನಪಿಸಿಕೊಡುತ್ತಿದ್ದಾರೆ. ಅವರನ್ನು ಮತ್ತು ಅವರನ್ನು ಪ್ರೋತ್ಸಾಹಿಸಿ, ಕನ್ನಡಕ್ಕೆ ಕವನಗಳನ್ನು ಅಂದವಾಗಿ, ಅನುವಾದಿಸಿದ ಪೋಷಕರನ್ನೂ ಅಭಿನಂದಿಸಲೇ ಬೇಕು ಇಬ್ಬರೂ- bright sparks! ಅವರ ಕಾವ್ಯ ಕೃಷಿ ಮುಂದುವರೆಯಲಿ. ಶ್ರೀವತ್ಸ ದೇಸಾಯಿ

  Like

  • ದೇಸಾಯಿಯವರೆ, ತುಂಬಾ ಧನ್ಯವಾದಗಳು .ಈ ಪ್ರಯತ್ನದಲ್ಲಿ ಗಿಡದ ಮರೆಯಲ್ಲಿಯ ಹೂವಿನಂತ ಸಹಾಯ ನಿಮ್ಮದು ಮತ್ತು ಈ ಅನುವಾದ ಮಾಡುವ ಪ್ರಯಾಣದಲ್ಲಿ ನೀವು ನಿಸ್ವಾರ್ಥತೆಯಿಂದ ಕೊಟ್ಟ ನಿಮ್ಮ ಸಮಯ ಎಲ್ಲಾ ಇಲ್ಲಿ ಅಡಗಿವೆ 🙏.
   ನನ್ನ ಈ ಚೊಚ್ಚಲ ಭಾಷಾಂತರ ಪ್ರಯತ್ನದಲ್ಲಿ ,ನಿಮ್ಮ -ನನ್ನ ನಡುವೆ ನಡೆದ ವಿಚಾರ -ವಿನಿಮಯಗಳಿಂದ, ಮಕ್ಕಳ ಲೋಕದ ಭಾಷೆ , ಭಾವ ಎಲ್ಲದರ ಸೂಕ್ಷ್ಮತೆಗಳನ್ನು , ನಾನು ಆತಂಕದಿಂದ ಅನುಭವಿಸಿದರೂ , ಕೊನೆಗೆ ಇದು ಪ್ರಕಾಶನ ಕಾಣುವ ಮಟ್ಟಕ್ಜೆ ತಲುಪಿದಾಗ, ಸಮಾಧಾನ , ನಿಮಗೆ ಕೃತಜ್ಞತೆಯ ಭಾವ ಮತ್ತೆ ಈ ‘ಅನಿವಾಸಿ ತಂಗುದಾಣ ‘/ಅಂಗಳದ ಬಗ್ಗೆ ಆತ್ಮೀಯತೆ ಮತ್ತು ಹೆಮ್ಮೆ ಎಲ್ಲಾ ನನ್ನ ಮಗಳ ಮನೋಭಾವದಂತೆ ಮುಗ್ಧನಾಗಿ ಕಂಡುಕೊಂಡೆ 🙏🙏

   ಈ ಜಗತ್ತಿಗೆ ಈಗ ತಾನೇ ಕೋಮಲ ಕಣ್ಣುಗಳನ್ನು ತೆರೆಯಿತ್ತಿರುವ,ಈ ನಮ್ಮ ಆಶಾಕಿರಣಗಳು,ಬರೆಯಲೇ ಬೇಕೆಂಬ ಯಾವ ಭಾರವಿಲ್ಲದೆ, ಅನಿಸಿದ್ದನ್ನು,ಭಾವಿಸಿದ್ದನ್ನು,ಅನುಭವಿಸಿದ್ದನ್ನು, ಸ್ವಾತಂತ್ರತೆಯಿಂದ ಬರೆಯುತ್ತ , ಹಾಡುತ್ತ , ಕುಣಿಯುತ್ತ ಪೂರ್ಣಿಮೆಯ ಚಂದ್ರನಂತೆ ಅವರವರ ಆಶಾಲೋಕದಲ್ಲಿ ತಾರೆಗಳಾಗಿ ಬೆಳಗಲಿ ಎಂದು ನನ್ನ ಬಯಕೆ ಕೂಡ 🙏🙏🙏😊

   Like

 5. Congratulations to both Poornima and Thara. Very nice poems 👏👏
  We want to read more of your poems in the future.
  You Both started so well and so early but seemed to have given up?? ( only 1 poem in 2 years?)
  Hope today’s publication by our editor Shrinivasa Mahendrakar should encourage you to continue your interest in literature. Please keep writing ✍️

  Like

 6. ಮಕ್ಕಳ ಮುಗ್ಧ ಮನಸ್ಸಿನ ಕಲ್ಪನೆಗಳು ಬಹಳ ಸುಂದರವಾಗಿ ಮೂಡಿಬಂದಿದೆ ಅದರ ಅನುವಾದವೂ ಸೊಗಸಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಎರಡು ಪುಟಾಣಿಗಳ ಈ ಪ್ರತಿಭೆಯನ್ನು ಪೋಷಿಸಿ ಪ್ರೋತ್ಸಾಹಿಸುತ್ತಿರುವ ಪೋಷಕರಿಗೆ ಅಭಿನಂದನೆಗಳು. ಇದು ಬೆಳೆದು ಹೆಮ್ಮರವಾಗಲಿ ಎಂಬುವುದೇ ನನ್ನ ಹಾರೈಕೆ. ರಮ್ಯ ಭಾದ್ರಿ

  Like

  • ರಮ್ಯಾ ಅವರೆ , ನೀವು ಹಿಂದಿನ ವಾರ ಬರೆದ ಕವನದ ಸಿಹಿಯಂತೆ , ನನ್ನ ಮಗಳ ಮತ್ತು ನಮ್ಮ ಈ ಚಿಕ್ಕ ಪ್ರಯತ್ನಕ್ಕೆ ತುಂಬಾ ಅನುಕಂಪ ಮತ್ತು ಪ್ರೋತ್ಸಾಹ ಕೊಟ್ಟು ಆಶಿಸಿದ್ದೀರಿ . ಧನ್ಯವಾದಗಳು🙏💐

   Like

 7. ಎಳೆಯ ಮನಸುಗಳ ಸೊಗಸಾದ ಪ್ರತಿಫಲನ. ಕಾವ್ಯ ನಿಯಮಗಳ ಸ್ತೂಲ ಪರಿಚಯ ಆದರೆ ಮತ್ತಷ್ಟು ಉತ್ತಮ ಕವನಗಳನ್ನು ಬರೆಯಬಲ್ಲರು. ಅನುವಾದಾಗಳೂ ಉತ್ತಮ. ಮಕ್ಕಳ ಮತ್ತಷ್ಟು ಕವನಗಳು ಪ್ರಕಟವಾಗಲಿ

  Like

  • Vandanegalu🙏
   Thank you for your appreciation and blessings.
   Listening ( I had to translate in English 😂) to your and all the other comments, my daughter this morning jumped out of her bed in such delight, I wanted to share this😊🙏
   Thanks to Anivaasi flat form and the exposure and to the editorial efforts so creative🙏

   Like

  • Big thank you to the editor for bringing new and young talent to the platform. I liked the intro and kagga. Was it a deliberate attempt to bring two poems on the stellar theme together?
   I think these two kids have immense talent. It is refreshing to see diverse views of similar aged children on the same subject. Use of words, ideas and rhyming in Purnima’s poem are simply great. It is difficult to write science fiction themed poems and Tara has attempted this with aplomb. You can see the flow of genes in her writing.
   Thank you to parents attempting the translation. Premalata as usual excels in the flow. I thought may be last few lines could have gone on a similar lines to give extra dimension. Gopalkrishna’s use of word ‘ಪರಿ’ becomes a great pun in Purnima’s poem on fairies.

   Like

 8. ಪೂರ್ಣಿಮಾ ಮತ್ತು ತಾರಾ: ಅನಿವಾಸಿಯ ಆಗಸದ ಎರಡು ಹೊಸ ತಾರೆಗಳು!
  ಮನದಂಗಳ ಹೊಳೆಸುವ ಕವನಗಳು. 
  ಹೊಸತನದ ಪಯಣವನ್ನ ಮುಂದುವರೆಸಿದ್ದಕ್ಕೆ ಸಂಪಾದಕರಿಗೆ ಶರಣು. 

  Murali

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.