ಬದುಕಲ್ಲಿ ಕೆಲವೊಂದು ಘಳಿಗೆಗಳು ಬರುತ್ತವೆ. ಆಗ ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಬದಲಾವಣೆಯನ್ನಷ್ಟೇ ತರದೆ ನಮ್ಮ ಬದುಕಿನ ಭವಿಷ್ಯವನ್ನೇ ಬದಲಾಯಿಸಿಬಿಡುತ್ತವೆ. ಅಲ್ಲಿಂದ ಮುಂದಕ್ಕೆ ಆ ನಿರ್ಧಾರಗಳಿಗೆ ಬದ್ದರಾಗಿ ಬದುಕನ್ನು ಕಟ್ಟಿಕೊಳ್ಳುವುದು, ಕಂಡುಕೊಳ್ಳುವುದು ಮಾತ್ರವೇ ನಮ್ಮ ಪ್ರಯತ್ನದ ಮಿತಿಯಲ್ಲಿ ಉಳಿಯುತ್ತದೆ.
ಹಾಗೊಂದು ಘಳಿಗೆಯಲ್ಲೇ ನಾವೆಲ್ಲ ಈ ಪರದೇಶಕ್ಕೆ ಕಾಲಿಟ್ಟಿರುವುದು.
ಕನ್ನಡದ ಒಬ್ಬ ಬುದ್ದಿವಂತ, ರೂಪವಂತ, ವಿದ್ಯಾವಂತ ಯುವಕನೊಬ್ಬ ತುಂಬಾ ವರ್ಷಗಳ ಹಿಂದೆ ಈ ನಿರ್ಧಾರವನ್ನು ತೆಗೆದುಕೊಂಡಾಗ ಕಾಲ ಬಹಳ ಭಿನ್ನ ಬಣ್ಣವನ್ನು ಹೊಂದಿತ್ತು. ತಾಯ್ನಾಡಿನ ಸಂಬಂಧಗಳ ಸೆಳೆತ ತೀವ್ರವಾಗಿತ್ತು.ಪರನಾಡಿನ ಈ ನೆಲದಲ್ಲಿ ವರ್ಣೀಯರ ಬಗೆಗಿನ ಧೋರಣೆಗಳು ’ಮುಕ್ತ ’ವಾಗಿ ವ್ಯಕ್ತವಾಗುತ್ತಿದ್ದ ಕಾಲವದು! ನಮ್ಮಲ್ಲಿ ಬಹುತೇಕರು ಇನ್ನೂ ಹುಟ್ಟೇ ಇರಲಿಲ್ಲ.
1965 ರಲ್ಲಿ ರಾಮಮೂರ್ತಿಯವರು ಇಂಗ್ಲೆಂಡಿಗೆ ಬಂದಾಗ ಅವರು ಇಲ್ಲಿ ಕಂಡ ಬದುಕು, ಸಮಾಜ, ಜನರ ಧೋರಣೆಗಳು, ರಾಜಕೀಯ ಬದಲಾವಣೆಗಳು, ಅನುಭವಿಸಿದ ಒಂಟಿತನ ಅಸದಳವಾದ್ದು. ಆ ವಾತವರಣದಲ್ಲಿ ಅವರಂತೆಯೇ ಇಲ್ಲಿಗೆ ಬಂದಿದ್ದ ಕರ್ನಾಟಕ ಮೂಲದ ಬೆರಳೆಣಿಕೆಯಷ್ಟು ಜನರನ್ನು ಹುಡುಕಲು ನಡೆಸಿದ ಯತ್ನ, ಆ ಮೂಲಕ ಈ ದೇಶದ ಅತ್ಯಂತ ಹಿರಿಯ ಕನ್ನಡ ಸಂಘ ಹುಟ್ಟಿದ ವಿಚಾರಗಳ ಬಗ್ಗೆ ಇವರು ಮಹತ್ತರವಾದ ಲೇಖನವನ್ನು ಬರೆದಿದ್ದಾರೆ. ಅಂದಿನವರ ಬದುಕಿನ ಬಗ್ಗೆ ಮತ್ತು ಅವರಿದ್ದ ಅಂದಿನ ವಾತಾವರಣದ ಬಗ್ಗೆ ಅರಿಯದಿದ್ದಲ್ಲಿ, ಎಂತಹ ದಿನಗಳಲ್ಲಿ ಕೆಲವರು ಕನ್ನಡ ಸಂಘವೊಂದನ್ನು ಕಟ್ಟಲು ಪ್ರಯತ್ನ ಪಟ್ಟರೆಂಬುದು ನಮಗೆ ಅರಿವಾಗುವುದು ಕಷ್ಟ.
ಈ ತಲೆಮಾರಿನವರ ಬದುಕಿನ ಬಗ್ಗೆ ಕೇಳಿದರೆ, ದೀರ್ಘಕಾಲದ ನೆನಪುಗಳ ಸರಣಿಯನ್ನು ಹೊತ್ತ ಇಂತವರು ಭಾವೋದ್ವೇಗಗಳಿಲ್ಲದ ಚುಟುಕು ಉತ್ತರಗಳನ್ನು ಕೊಡುತ್ತಲೇ ಯಾವುದನ್ನ ಹೇಳಲಿ ಎನ್ನುವ ಯೋಚನೆಯಲ್ಲಿ ಮೌನವಾಗುತ್ತಾರೆ. ಆದರೆ ಅವರು ನೀಡುವ ಯಾಧೃಚ್ಛಿಕ ಮಾಹಿತಿಗಳಲ್ಲಿನ ಭಾವತೀವ್ರತೆಯನ್ನು ಅರಿಯುವುದು ಕಷ್ಟವೇನಲ್ಲ. ಇದೇ ತಿಂಗಳು 8 ನೇ ತಾರೀಖು, ಬ್ರಿಟಿಷ್ ಬರಹಗಾರ್ತಿ, ಪತ್ರಿಕೋದ್ಯಮಿ, ಭಾರತದ ಪಂಜಾಬ್ ಮೂಲದ ಅನಿತಾ ಆನಂದ್ ರೇಡಿಯೋ 4 ನಲ್ಲಿ ರಿಸರ್ವ್ ಬ್ಯಾಂಕಿನ ಮೂಲಕ £3 ಪಡೆದು ಈ ರೀತಿ ಬಂದ ಏಶಿಯನ್ನರ ಬಗ್ಗೆ ಅತ್ಯಂತ ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹಲವರನ್ನು ಸಂದರ್ಶಿಸಿದರು.ಆ ವೇಳೆಗಾಗಲೇ ರಾಮಮೂರ್ತಿಯವರು ತಮ್ಮ ನೆನಪಿನ ಬುತ್ತಿಯನ್ನು ಅನಿವಾಸಿಗಾಗಿ ಬಿಚ್ಚಿಟ್ಟಿದ್ದರು.
ಶ್ರೀಯುತ ರಾಮಮೂರ್ತಿಯವರು ಕನ್ನಡ ಬಳಗ ಹುಟ್ಟಿದ ಮತ್ತು ಬೆಳೆದು ಬಂದ ಬಗ್ಗೆ ಮಹತ್ತರವಾದ ಬರಹ- ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಲೇಖನ ಸಂದೇಶ ಎನ್ನುವ ಸ್ಮರಣ ಸಂಚಿಕೆಯಲ್ಲಿ ಮುಂದಿನ ವರ್ಷ ಪ್ರಕಟವಾಗುವ ಮುನ್ನವೇ ಅನಿವಾಸಿಯ ಓದುಗರನ್ನು ತಲುಪಲಿದೆ. ಅವರ ಉದ್ದೇಶ ಮುಖ್ಯವಾಗಿ ಕನ್ನಡ ಬಳಗದ ಬಗ್ಗೆ ಬರೆಯುವುದೇ ಆಗಿತ್ತಾದರೂ ನನ್ನಂತವರ ಆಸಕ್ತಿ ಅವರ ಕಾಲದ ಬದುಕಿನ ಬಗ್ಗೆ ಅರಿಯುವುರಲ್ಲೇ ಹೆಚ್ಚಿನ ಉಮೇದನ್ನು ತೋರಿಸಿತ್ತು.ಒಂದನ್ನು ಅರ್ಥಮಾಡಿಕೊಂಡರೆ ಇನ್ನೊಂದರ ಮಹತ್ವವೂ ನಿಚ್ಚಳವಾಗಿ ಕಾಣಿಸುತ್ತದೆ ಎನ್ನುವ ಕಾರಣ ಕೂಡ.
ಐವತ್ತು ದಶಕಗಳ ಹಿಂದೆ ಈ ನೆಲದಲ್ಲಿ ಅವರು ಕಂಡುಕೊಂಡ ಹೊಸ ಬದುಕಿನ ಬಗೆಗಿನ ಅತ್ಯಂತ ಆಸಕ್ತಿದಾಯಕ ಬರಹವಿದು. ಇದನ್ನು ಓದಿದ ನಂತರ, ಕಾಲ ತರುವ ಬದಲಾವಣೆಗಳ ಬಗ್ಗೆ, ನಮ್ಮ ಹಿರಿಯರಾದ ಕನ್ನಡಿಗರ ಬದುಕಿನ ಬಗ್ಗೆ, ನಿಮಗನ್ನಿಸಿದ್ದನ್ನು ಅಗತ್ಯವಾಗಿ ಬರೆದು ತಿಳಿಸಿ- ಡಾ.ಪ್ರೇಮಲತ ಬಿ.
ಹಿಂದಿನ ಒಂದು ಕಥೆ……
ನಾನು 1965 ರಲ್ಲಿ ಇಂಗ್ಲೆಂಡ್ ಗೆ ಬಂದಾಗ ಇಲ್ಲಿ ಎಷ್ಟು ಜನ ಕನ್ನಡದವರಿದ್ದಾರೆ ಎನ್ನುವ ಪ್ರಶ್ನೆ ಬರಲಿಲ್ಲ ಮತ್ತು ಯೋಚನೆ ಸಹ ಮಾಡಲಿಲ್ಲವೇನೋ. ಕಾರಣ, ಬರುವುದಕ್ಕೆ ಮುಂಚೆ ನನಗೆ ಇಲ್ಲಿ ನೆಲಸಿರುವ ಯಾರದೇ ಮನೆಯವರ ಪರಿಚಯವೂ ಇರಲಿಲ್ಲ. ನಾನು ಇಂಜಿನಿಯರ್ ಆಗಿ ಮಾಡುತಿದ್ದ LRDE ಎಂಬ ಸಂಸ್ಥೆ ಯಿಂದ ಇಲ್ಲಿಗೆ ಕೆಲವು ತಿಂಗಳ ತರಬೇತಿಗೆ ಬಂದಿದ್ದ ಇಬ್ಬರು ಇಂಗ್ಲೆಂಡ್ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿದ್ದರು. ಆದರೆ ಇಲ್ಲಿಗೆ ಬಂದು ನೆಲಸುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಮತ್ತು ಯೋಚನೆಯೂ ಬಂದಿರಲಿಲ್ಲ.
ಇಲ್ಲಿಗೆ ಬರಬೇಕಾದರೆ U.K Home Office ನಿಂದ Employment Voucher ಪಡೆಯಬೇಕಾಗಿತ್ತು. ನನಗೆ ಯಾರೋ ಈ ವಿಚಾರ ಹೇಳಿದ್ದರು. ಅಂಚೆಯ ವಿಳಾಸ ಸಂಪಾದಿಸಿ ಒಂದು ಪತ್ರವನ್ನು ಟೈಪ್ ಮಾಡಿಸಿ ಪೋಸ್ಟ್ ಮಾಡಿ ಅದರ ಬಗ್ಗೆ ಮರತೆ . ಈ ಹೋಮ್ ಆಫೀಸ್ ಒಂದು ಸರಕಾರಿ ಕಚೇರಿ ಅಲ್ಲವೇ? ಇಂತಹ ಕಾಗದಗಳು ಎಷ್ಟೋ ಆದ್ದರಿಂದ ಅವರಿಂದ ಉತ್ತರ ಬರುವುದಿಲ್ಲ ಅಂತ ಭಾವಿಸಿ ಸುಮ್ಮನಾಗಿದ್ದೆ. ಆದರೆ ಸುಮಾರು 5-6 ತಿಂಗಳ ನಂತರ “On Her Majesty’s Service ” ಲಕೋಟೆ ಯಲ್ಲಿ Employment Voucher ಕೊಟ್ಟಿದ್ದೇವೆ ಇದರ ಅವಧಿ 6 ತಿಂಗಳು ಮಾತ್ರ ಎನ್ನುವ ಸಂದೇಶವು ಇತ್ತು. ಸರಿ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸ್ವಲ್ಪ ದುಡ್ಡು ಏರ್ಪಾರ್ಟ್ ಮಾಡಿ ಏರ್ ಇಂಡಿಯ ನಲ್ಲಿ one way ಟಿಕೆಟ್ ಬುಕ್ ಮಾಡಲಾಯಿತು, ನನ್ನ ಅಜ್ಜಿ, ಒಳ್ಳೆ ಸರಕಾರಿ ಕೆಲಸ ಬಿಟ್ಟು ಯಾವುದೋ ದೇಶಕ್ಕೆ ಹೋಗುವುದಕ್ಕೆ ನಿನಗೆ ಹುಚ್ಚು ಎಂದರು. ಮುಂದಿನ ವರ್ಷ ಮಾದುವೆ ಮಾಡಿಕೊಳ್ಳುವ ಪ್ಲಾನ್ ಇತ್ತು ಆದರೆ ಅದನ್ನು ಪ್ರೀಪೋನ್ ಮಾಡಿ ಆಗಸ್ಟ್ 1965 ರಲ್ಲಿ ಮದುವೆಯೂ ಸರಳವಾಗಿ ನಡೆದು ಹೋಯಿತು! ಸಾಯಂಕಾಲ ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಮೈಸೂರ್ ಅನಂತಸ್ವಾಮಿ ಅವರ ಸುಶ್ರಾವ್ಯ ಸಂಗೀತ ಕಛೇರಿ ನಡೆದ ಸುಂದರ ನೆನಪು .
ರಿಸರ್ವ್ ಬ್ಯಾಂಕ್ ನಿಂದ £3 ಪೌಂಡ್ ಪಡೆದು ಮುಂಬೈ ತಲುಪಿದಾಗ ಭಾರತ ಪಾಕಿಸ್ತಾನ್ ಯುದ್ಧ ಶುರುವಾಗಿ ವಿಮಾನ ಹೊರುಡುವದೇ ಸಂದೇಹವಿತ್ತು. ಆದರೆ ಎಲ್ಲವೂ ಸರಾಗವಾಗಿ ಆಗಿ ಲಂಡನ್ ಸೇರಿದೆ.
ಇಂಗ್ಲೆಂಡಿನಲ್ಲಿ 50 ವರ್ಷದ ಹಿಂದೆ ನೆಲಸಿದ್ದ ಕನ್ನಡದವರ ಬಗ್ಗೆ ಏನೂ ಮಾಹಿತಿ ನನ್ನಲ್ಲಿ ಇರಲಿಲ್ಲ . ನಾನು ಬಂದ ಕೆಲವೇ ತಿಂಗಳ ನಂತರ ನನ್ನ 3-4 ಸ್ನೇಹಿತರು Employment Voucher ನಿಂದ ಬಂದರು, ಇವರೇ ನಮ್ಮ ಕನ್ನಡ ಸಂಗಾತಿಗಳು ಅಷ್ಟೇ. ಒಂದು ಸಲ ಸ್ಥಳೀಯ ಟೆಲಿಫೋನ್ ಡೈರೆಕ್ಟರಿ ನಲ್ಲಿ ರಾಮಸ್ವಾಮಿ ಅನ್ನುವ ಹೆಸರು ನೋಡಿ ಇವರು ಕನ್ನಡದವರು ಇರಬಹುದೆಂದು 4 ಪೆನ್ನಿ (ಹಳೆ ಪೆನ್ನಿ) ಗಳನ್ನೂ ಹಾಕಿ ಪೋಬ್ಲಿಕ್ ಫೋನ್ ಬಾಕ್ಸ್ ನಿಂದ ಕರೆ ಮಾಡಿದೆ. ಆದರೆ ಆ ಮನುಷ್ಯ ” Not interested ” ಅಂತ ಹೇಳಿ ಫೋನ್ ಇಟ್ಟ! ಕನ್ನಡದವರನ್ನು ಹುಡುಕುವ ಪ್ರಯತ್ನ ಪುನಃ ಮಾಡಲಿಲ್ಲ.

1960 ಕೊನೆಯಲ್ಲಿ ಸುಮಾರಾಗಿ ವೈದ್ಯರು ಬರುವುದಕ್ಕೆ ಶುರುವಾಯಿತು. ಹೀಗೆ ನಮ್ಮ ಗೆಳೆಯ ದಿ : ರಾಜಾರಾಮ್ ಕಾವಳೆ ಅವರ ಪರಿಚಯು ಆಯಿತು. ಆದರೆ ಭೇಟಿಯಾಗುವುದು ಸಮಸ್ಯೆ. ಕಾರು ಇರಲಿಲ್ಲ. ರೈಲ್ ನಲ್ಲಿ ಪ್ರಯಾಣಕ್ಕೆ ಖರ್ಚು. ಟೆಲಿಫೋನ್ ಸಂಪರ್ಕ ಕಷ್ಟ.ಇನ್ನು ಮೊಬೈಲ್, ಇಂಟರ್ನೆಟ್ ಇವೆಲ್ಲ ಇಲ್ಲದ ಕಾಲವದು.
ಕ್ಷಮಿಸಿ, ನಿಮ್ಮಲ್ಲಿ ಕೆಲವರಿಗೆ ನಾನು ಯಾವಾಗ ಬಂದೆ, ಏನು ಮಾಡಿದೆ ಅನ್ನೋ ವಿಷಯ ಕೇಳುವ ಆಸಕ್ತಿ ಅಥವಾ ಕುತೂಹಲ ಇಲ್ಲವೇನೋ. ಆದರೆ, ನಮ್ಮ ಸಂಪಾದಕರು ಐವತ್ತು ವರ್ಷದ ಹಿಂದೆ ನಮ್ಮ ಪೀಳೆಗೆಯವರು ಎದುರಿಸದ ಸಮಸ್ಯೆಗಳು ಮತ್ತು ಆಗಿನ ಸಮಾಜದ ಪರಿಸ್ಥಿತಿ ಬಗ್ಗೆ ಬರೆಯಿರಿ ಅಂತ ಹೇಳಿದ್ದಾರೆ, ಆದ್ದರಿಂದ ಇಲ್ಲಿ ಕೆಲವು ಮಾತುಗಳು.
ಇದು ಸುಮಾರು 1966-7 ರ ಸಮಯ. ಎರಡನೇ ಮಹಾಯುದ್ಧ ಮುಗಿದು ಕೇವಲ ಇಪ್ಪತ್ತು ವರ್ಷಗಳಾಗಿದ್ದರಿಂದ ಈ ದೇಶದ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಿಲಿಲ್ಲ. ಹೊಸ ಮನೆಗಳು ಕಟ್ಟುವುದಕ್ಕೆ ಶುರು ಮಾಡಿದ್ದರು. ನಮಗೆ ಬಾಡಿಗೆ ಮನೆ ಸಿಕ್ಕುವುದು ಸುಲಭವಾಗಿರಲಿಲ್ಲ. ನಮ್ಮ ವರ್ಣ ನೋಡಿ ಮನೆ ಬಾಡಿಗೆಗೆ ಇಲ್ಲ ಅಂತ ಸುಳ್ಳು ಹೇಳುವುದು ಸಾಮಾನ್ಯವಾಗಿತ್ತು. Race Relations Act ಅವಾಗ ಜಾರಿಯಲ್ಲಿ ಇರಲಿಲ್ಲ, ಐರಿಶ್ ಪ್ರಜೆಗಳಿಗೂ ಇದೇ ಗತಿ, ಕೆಲಸ ಸಿಗುವುದೇ ಕೆಲವರಿಗೆ ಕಷ್ಟವಾಗಿತ್ತು.
ಆದರೆ ನನಗೆ ಒಂದು ವಾರದಲ್ಲೇ ಕೆಲಸ ಸಿಕ್ಕಿತ್ತು. ವರ್ಷಕ್ಕೆ ಸಂಬಳ £850 ಅಂದರು.ಇಲ್ಲ £1000 ಕೊಡಿ ಅಂತ ಕೇಳಿ ಒಪ್ಪಿಸಿ ಸೇರಿದೆ.ಹತ್ತಿರದಲ್ಲೇ one bed ಫ್ಲಾಟ್ ಸಹ ವಾರಕ್ಕೆ £7 ರಂತೆ ಬಾಡಿಗೆಗೆ ಸುಲಭವಾಗಿ ಸಿಕ್ಕಿತ್ತು. ನನ್ನ ಪತ್ನಿ ಸೀತ ಈಗ ಬಂದಿದ್ದಳು, ನಮ್ಮ ಸಂಸಾರ Hounslow ನಲ್ಲಿ ಪ್ರಾರಂಭವಾಯಿತು.
ಒಂದು ತಮಾಷಿ ವಿಚಾರ. ಸೀತ ಬರುವುದಕ್ಕೆ ಒಂದು ವಾರದ ಮುಂಚೆ ಹತ್ತಿರದಲ್ಲೇ ಇದ್ದ ಈಗಿನ Boots ನಲ್ಲಿ ಹೋಗಿ ಒಂದು ಬಾಟಲ್” ಸ್ನೋ” (Snow ) ಕೊಡಿ ಅಂತ ಕೇಳಿದೆ ಇದು 1966 ಬೇಸಿಗೆ ಕಾಲ ಪಾಪ ಆಕೆ ಕಕ್ಕಾಬಿಕ್ಕಿ ಯಾಗಿ ” you get snow only in winter dear, you can’t buy it in a bottle ” ಅಂದಳು, ನಾನು, ಇಲ್ಲ ನೋಡಿ ಇದು ಬಾಟಲ್ ನಲ್ಲಿ ಬರುತ್ತೆ ಹೆಂಗಸರು ಮಖಕ್ಕೆ ಹಚ್ಚಿಕೊಳ್ಳುತ್ತಾರೆ ಅಂದೆ. ” Oh you mean face cream ” ಅಂದಳು. ನಗಬೇಡಿ, ನನಗೆ ಇಂಡಿಯಾ ದಲ್ಲಿ Afghan Snow ನೋಡಿದ್ದೆ , ಇಲ್ಲೋ ಇದು ಸಿಗಬಹುದು ಅಂತ ಕೇಳಿದೆ ಅಷ್ಟೇ !! 25 ವರ್ಷದ ಹುಡಗನಿಗೆ ಇವೆಲ್ಲ ಹೊಸದು ಅಲ್ಲವೇ ?
ಆಗ ದೊಡ್ಡ ಸಮಸ್ಯೆ ನಮಗೆ ಬೇಕಾಗಿದ್ದ ದಿನಸಿ ಮತ್ತು ತರಕಾರಿಗಳು. ನಮ್ಮ ಮನೆ, sorry flat ಹತ್ತಿರ ಒಂದು ಸಣ್ಣ ಪಂಜಾಬಿ ಅಂಗಡಿ ಮಾತ್ರ ಇತ್ತು ಅಲ್ಲಿ ಅಕ್ಕಿ ಬೇಳೆ ಇತ್ಯಾದಿ ಇತ್ತು ಆದರೆ ತರಕಾರಿ ಇಲ್ಲ. ಇಲ್ಲಿ ಜನಕ್ಕೆ ಆಲೂಗೆಡ್ಡೆ ಈರುಳ್ಳಿ ಮತ್ತು ಕೋಸುಗೆಡ್ಡೆ ಮಾತ್ರ ಗೊತ್ತಿತ್ತು. ದೊಡ್ಡ Supermarket ಇರಲಿಲ್ಲ. ಹತ್ತಿರದಲ್ಲಿ sainsbury’s ಇತ್ತು. ಸುಮಾರು 30 ಅಡಿ ಉದ್ದ, 15 ಅಡಿ ಅಗಲದ ಅಂಗಡಿ. self Service ಇಲ್ಲ. ಅರ್ಧ ಪೌಂಡ್ (Metric ಇನ್ನೂ ಇರಲಿಲ್ಲ )ಬೆಣ್ಣೆ ಅಥವಾ ಸಕ್ಕರೆ ಕೊಡಿ ಅಂತ ಕೇಳಬೇಕು. ಹೊರಗೆ ಹೋಗಿ ತಿನ್ನುವುದು ದೊಡ್ಡ ಸಮಸ್ಯೆ ನಮ್ಮಂಥಹ ಸಸ್ಯಾಹಾರಿಗಳಿಗೆ. ಎಲ್ಲೊ ಒಂದು Indian Restaurant ಇತ್ತು.ಇಲ್ಲಿ ನಮ್ಮಂತ ಗಿರಾಕಿಗಳು ಅವರಿಗೆ ಬೇಕಾಗಿರಲಿಲ್ಲ, ಇಲ್ಲಿಯ ಬಿಳಿಯವರು ಮಾತ್ರ!
ನ್ಯಾಷನಲ್ ಫ್ರಂಟ್ ಅಂತ ಸಂಸ್ಥೆ ಆಗ ಪ್ರಭಲವಾಗಿತ್ತು. ಇವರು Non white ಜನಗಳು ಈ ದೇಶಕ್ಕೆ ಬರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಏಪ್ರಿಲ್ 1968 ನಲ್ಲಿ Enoch Powell ಅನ್ನುವ ರಾಜಕಾರಣಿ “Rivers of Blood ” ಅನ್ನುವ ಭಾಷಣ ಮಾಡಿದ . ಈತ Conservative ಸರಕಾರದ ಮಂತ್ರಿ ಮತ್ತು ತುಂಬಾ ದೊಡ್ಡ ವಿದ್ಯಾವಂತ ಆದರೂ ಇಂತಹ ಭಾಷಣ ಕೇಳಿ ಪ್ರಧಾನ ಮಂತ್ರಿ ಎಡ್ವರ್ಡ್ ಹೀತ್ ಇವರನ್ನು ಖಂಡಿಸಿ ಮಂತ್ರಿಗಿರಿಯಿಂದ ತೆಗೆದರು. ಇದರಿಂದ ಈ ದೇಶದ ಜನರಿಗೆ ವರ್ಣ ಭೇದದ ಸಮಸ್ಯೆ ಅರಿವಾಗಿ ಮುಂದಿನ Race Relations Act ನ್ನು ಜಾರಿಗೆ ತರುವ ಪ್ರಯತ್ನ ಪ್ರಾರಂಭವಾಯಿತು ಅನ್ನುವುದರಲ್ಲಿ ಏನೂ ಸಂದೇಹವಿಲ್ಲ.
1972-3 ನಲ್ಲಿ ಪೂರ್ವ ಆಫ್ರಿಕಾದ ಸಾವಿರಾರು ಭಾರತೀಯರನ್ನು ಅಲ್ಲಿಂದ ಓಡಿಸಿದಾಗ ಅವರೆಲ್ಲಾ ಬಂದಿದ್ದು ಈ ದೇಶಕ್ಕೆ . ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಎಡ್ವರ್ಡ್ ಹೀತ್, ಜನಗಳು ಪ್ರತಿಭಟಿಸಿದರೂ, ಈ ನಿರ್ಧಾರವನ್ನು ಮಾನವೀಯ ಕಾರಣದಿಂದ ಮಾಡಿದ್ದನ್ನು ನಾವು ಯಾರೂ ಮರೆಯಬಾರದು. ಈ ಜನಾಂಗದಿಂದ ಈ ದೇಶದಲ್ಲಿ ಒಂದು shopping revolution ಶುರು ಆಯಿತು ಎನ್ನುವುದು ಸತ್ಯ,.
English Premier League ಫುಟ್ ಬಾಲ್ ನಲ್ಲಿ ಆ ಕಾಲದಲ್ಲಿ ಒಬ್ಬನೂ Afro Caribbean ಅಥವಾ Asian ಮೂಲದವರ ಆಟಗಾರರು ಇರಲಿಲ್ಲ, ಇದ್ದರೂ ಅವರನ್ನು ದೂರ ಮಾಡಿದ್ದರು. ಈಗ ನೋಡಿ ಇಂಗ್ಲೆಂಡ್ ಟೀಮ್ ನಲ್ಲಿ ಎಷ್ಟು ಜನ ಇಂಥವರು ಇದ್ದಾರೆ.
ಮೊಟ್ಟಮೊದಲನೆಯ ಆಫ್ರೋ ಕಾರಿಯಾಬೀನ್ ಮೂಲದ Member of Parliament 1987 ರಲ್ಲಿ, ಲೇಬರ್ ಪಾರ್ಟಿ ಯ Dianne Abbott. ( ಆದರೆ ಇದಕ್ಕೆ ನೂರು ವರ್ಷದ ಹಿಂದೆ ಇಬ್ಬರು ಭಾರತೀಯರು Conservative ಮತ್ತು Liberal ಪಾರ್ಟಿ ಇಂದ ಇಲ್ಲಿಯ ಪಾರ್ಲಿಮೆಂಟಿಗೆ ಚುನಾಯಿತರಾಗಿದ್ದರು )
ಲಂಡನ್ನಲ್ಲಿ 1993 ನಲ್ಲಿ Stephen Lawrence ಎಂಬ 17 ವರ್ಷದ Afro Caribbean ಹುಡುಗನ ಕೊಲೆ ಜನರ ಮನ ತಟ್ಟಿತು. ಪೊಲೀಸ್ ಇಲಾಖೆ ಇದರಲ್ಲಿ ಅಷ್ಟೇನು ಆಸಕ್ತಿ ತೋರಿಸಿ ತನಿಖೆ ಮಾಡಲಿಲ್ಲ. ಆದರೆ ಮೂರು ವರ್ಷದ ನಂತರ ಆಗಿನ ಸರಕಾರ ಹೈಕೋರ್ಟಿನ ನಿವೃತ ನ್ಯಾಯಾಧೀಶ Sir William McPherson ಅನ್ನುವರನ್ನು ಇದರ ಬಗ್ಗೆ ವಿಚಾರಣೆ ಮಾಡಲು ನೇಮಿಸಿದರು. ಇವರ ವರದಿ ಈ ದೇಶದ ಜನರ ಹೃದಯವನ್ನು ಮುಟ್ಟಿತು. ಪೊಲೀಸ್ ಇಲಾಖೆ “Institutionally Racist ” ಅಂತ ತೀವ್ರ ವಾಗಿ ಖಂಡಿಸಿದರು, ಇಲ್ಲಿಂದ ಅನೇಕ ಸುಧಾರಣೆಗಳು ಜಾರಿಗೆ ಬಂದು ವರ್ಣ ಭೇದದ ಹಾವಳಿ ತುಂಬಾ ಕಡಿಮೆ ಆಯಿತು
ಟೆಲಿವಿಷನ್ ನಲ್ಲಿ ವರದಿಗಾರರು ಬಿಳಿ ಮಖಗಳು ಮಾತ್ರ . ಆದರೆ 1973 ನಲ್ಲಿ ಟ್ರಿನಿಡಾಡ್ ಮೂಲದವರಾಗಿದ್ದ Sir Trevor McDonald ಮೊದಲೆನೆಯ ಆಫ್ರೋ Caribbean ವರದಿಗಾರ ನಂತರ News ರೀಡರ್.
ಒಂದು ಹೇಳಬಲ್ಲೆ, ಈಗಿನ ಯುನೈಟೆಡ್ ಕಿಂಗ್ಡಮ್ ಮತ್ತು 20/30 ವರ್ಷದ ಹಿಂದಿನ ಯು.ಕೆ. ಬೇರೆ ಬೇರೆ ದೇಶಗಳು ಅನ್ನಬಹುದು.
ನನ್ನ ವೈಯಕ್ತಿಕ ಅನುಭವದಿಂದ ಒಂದು ಹೇಳಬಲ್ಲೆ, ಬಹುಷಃ ನಾನು ಅದೃಷ್ಟವಂತ.ಮೇಲೆ ಹೇಳಿದ ಸಮಸ್ಯೆಗಳು ನಮಗೆ ಬರಲಿಲ್ಲ. ನಾನು ಕೆಲಸ ಮಾಡಿದ ಕಡೆ ನನ್ನನ್ನು ಎಲ್ಲರೂ ತುಂಬಾ ಗೌರವದಿಂದ ಕಾಣುತ್ತಿದ್ದರು, Positive Discrimination ಅನ್ನುವುದು ನನಗೆ ಅನ್ವಯಿಸಿತ್ತು ಅಂದರೆ ತಪ್ಪಿಲ್ಲ.
ಈ ಸಮಸ್ಯೆಗಳನ್ನು ಎದುರಿಸಿ ನಮ್ಮ career ಮುಂದೆವರಿಸಿ ಮಕ್ಕಳನ್ನು ಬೆಳೆಸಿ ಅವರಿಗೆ ನಮ್ಮ ಸಂಸ್ಕೃತಿ ಮತ್ತು ಭಾಷೆ ಪರಿಚಯ ಮಾಡುವುದು ದೊಡ್ಡ ಕೆಲಸವಾಗಿತ್ತು. ಇದಕ್ಕೆ 1983 ರಲ್ಲಿ ಪ್ರಾರಂಭವಾದ ಕನ್ನಡ ಬಳಗ ಇಲ್ಲಿ ನೆರವಾಗಿದ್ದು ನಮ್ಮ ಅಧೃಷ್ಠ.
ನಿಮಗೆ ಈ ಪುರಾಣ ಕೇಳಿ ಸಾಕಾಗಿರಬಹುದು, ಈಗ ನಮ್ಮ ಬಳಗದ ವಿಚಾರ .
Sriramulu avare
We all have had such better and bitter experiences in life. Suggest you share yours also
LikeLike
ರಾಮಮೂರ್ತಿಅವರೇ, ನಿಮ್ಮ ಲೇಖನ ಬಹಳ ಆಸಕ್ತಿ ಮತ್ತು ಕುತೂಹಲವಾಗಿತ್ತು. ಹೇಳಬೇಕುಅಂದರೆ ನಿಮ್ಮ ಅನುಭವ ನನ್ನನ್ನು ಮತ್ತೊಮ್ಮೆ ಬೇವುಬೆಲ್ಲದ ದಾರಿಗೆ ಕರೆದುಹೊಯ್ಯಿತು. ಇದು ಬೇರೆಯಅವರಿಗೆ ಬರೆಯಲು ಉತ್ತೇಜಕ. ಧನ್ಯವಾದಗಳು. Probably they can share their better and bitter experiences.
LikeLike
ರಾಮಮೂರ್ತಿಅವರೇ, ನಿಮ್ಮ ಲೇಖನ ಬಹಳ ಆಸಕ್ತಿ ಮತ್ತು ಕುತೂಹಲವಾಗಿತ್ತು. ಹೇಳಬೇಕುಅಂದರೆ ನಿಮ್ಮ ಅನುಭವ ನನ್ನನ್ನು ಮತ್ತೊಮ್ಮೆ ಬೇವುಬೆಲ್ಲದ ದಾರಿಗೆ ಕರೆದುಹೊಯ್ಯಿತು. ಇದು ಬೇರೆಯಅವರಿಗೆ ಬರೆಯಲು ಉತ್ತೇಜಕ. ಧನ್ಯವಾದಗಳು.
Sent from my iPad
LikeLike
Arvind kulakarni says,
Dear Ramamurthy,
I thoroughly enjoyed reading Mr.Ramamurthy’s article, came to UK with ,£3 in the pocket. I too arrived with just £3 in 1968. I will narrate my story in near future as I am in India at present.
It would be quite interesting, hilarious, inspirational to think of good old days. Our children,grand children need to know the reality of hard days when we came to an unknown country.
Aravind Kulkarni
LikeLike
Enjoyed reading your experiences
Thank you.
Bharathy.
Sent from my iPhone
>
LikeLike
60-70ರ ದಶಕದಲ್ಲಿ ಬಂದು ಪಾಡು ಪಟ್ಟವರ ಕಥೆಯನ್ನು ಸುಂದರವಾಗಿ ನಿರೂಪಿಸಿದ್ದೀರಿ ಧನ್ಯವಾದಗಳು. 20 ನೇ ಶತಮಾನದ ಕೊನೆಯಲ್ಲಿ ಬಂದಾಗಲೂ ಇದ್ದ ವರ್ಣ ಭೇದ ನಮ್ಮಂಥವರನ್ನು ಕಾಡಿದೆ ಆದರೆ ನಿಮ್ಮಷ್ಟಟಲ್ಲ! ಹೆಚ್ಚಿನ dicrimination ಇದ್ದದ್ದು ‘ತೆಂಗಿನಕಾಯಿ’ ಗಳಿಂದ. ಆದರೂ ನಿಮ್ಮ ಅನುಭವದಂತೆ ವೈಯಕ್ತಿಕವಾಗಿ ಮಾನವೀಯತೆಯನ್ನು ಮೆರೆದ ಮಹಾನುಭಾವರೇ ವಿಪುಲವಾಗಿ ಸಂಪರ್ಕಕ್ಕೆ ಬಂದಿದ್ದಾರೆ. ಹಿಂದಿನ ವರ್ಣಭೇದ ಇಂದು ಮತಭೇದವಾಗಿ ಮಾರ್ಪಾಡಾಗುತ್ತಿರುವುದು ದುಃಖದ ವಿಚಾರ.
LikeLike
Gowri prasanna says,
ಪ್ರೇಮಲತಾ ಅವರೇ,ನಿಮ್ಮ ಸಂಪಾದಕೀಯ ಬರಹ ಎಂದಿನಂತೆಯೇ ಅಥ೯ಪೂಣ೯.
LikeLike
Gouri Prasanna says,
ನಮಸ್ಕಾರ ಸರ್.ತುಂಬ ಸರಳ ಹಾಗೂ ಆಪ್ತ ಬರಹ.ನಿಮ್ಮೊಡನೆ ನಾನೂ ಆ ಕಾಲದಲ್ಲಿ ಅಡ್ಡಾಡಿ ಬಂದೆನೆನ್ನಿ.ನಿಮ್ಮ snow ದ ಕಥೆ ತುಟಿಯಂಚಿನಲ್ಲಿ ನಗುವರಳಿಸಿತಾದರೂ…ಭಾಷೆ,ನೆಲ,ಅಲ್ಲಿನ ಆಚಾರ-ವಿಚಾರಗಳು,ಹವಾಮಾನ ಎಲ್ಲವುಗಳಿಗೂ ಪರಕೀಯರಾದ ,ಹೊಸಬರಾದ ನಾವು ಹೊಂದಿಕೊಳ್ಳುವುದು ,ಬದುಕು ಕಟ್ಟಿಕೊಳ್ಳುವುದು ಈಗಲೂ ಕಷ್ಟವೇ ಎನಿಸುತ್ತದೆಯಾದರೂ ಆಗಿನ ೬೦–೭೦ ರ ದಶಕದಲ್ಲಿ ಇಂಟರನೆಟ್ ಇರದ ಯುಗದಲ್ಲಿ ಎಷ್ಟು ಚಾಲೆಂಜಿಂಗ್ ,ಕಷ್ಟಸಾಧ್ಯ ಆಗಿರಬಹುದು ಎಂಬುದನ್ನು ಮನಗಾಣಿಸಿತು ನಿಮ್ಮ ಬರಹ.ನಿಮ್ಮ ಮುಂದಿದ್ದ ಸವಾಲುಗಳಿಗೆಲ್ಲ ಜವಾಬು ನೀಡಿ ನಮ್ಮಂಥ ಹೊಸಬರಿಗೆ ದಾರಿ ಹಸನು ಮಾಡಿದ ನಿಮ್ಮ ತಲೆಮಾರಿನವರಿಗೆಲ್ಲ ನನ್ನ ನಮನಗಳು.🙏🙏
LikeLike
Bellur Gadhadhar says,
Just for the record, when Enoch Powell was sacked labour party was in power. Powell was a shadow minister and was sacked by Ted Heath who was the leader of the Tory party.
LikeLike
Ramamurthy says,
Gadadhar
i stsnd correctef regarding Enoch
LikeLike
Sorry,for the typos
I meant to say “ I stand corrected regarding Enoch”
LikeLike
ರಾಮಮೂರ್ತಿಯವರ ಲೇಖನ ಸ್ವಾರಸ್ಯಕರವಾಗಿದೆ, ಬೋಧಕವಾಗಿದೆ, ಮತ್ತು ಮೈನವಿರೇಳಿಸುತ್ತದೆ! ಅದನ್ನು ಓದಿದ ಈ ನಾಡಿಗೆ ಇತ್ತೀಚೆಗೆ ಬಂದ ಕನ್ನಡದ ಯುವಪೀಳಿಗೆ ತಾವೆಷ್ಟು ಅದೃಷ್ಟವಂತರು, ತಮ್ಮ ಜೀವನ ಇಷ್ಟೊಂದು ಹಗುರು ಅಂತ ಅನಿಸಿದರೆ ಆಶ್ಚರ್ಯವಿಲ್ಲ. ರಾಮಮೂರ್ತಿ ಅವರು ಬಂದ ಒಂದು ದಶಕದ ನಂತರ ಬಂದ ನನಗೆ, ‘್ಈನೋಕ್ ಪಾವೆಲ್ಲ’ನ ರಕ್ತ ಕುದಿಸುವಂಥ ‘ ‘ರಕ್ತದ ಹೊಳೆ‘ (Rivers of Blood) ಭಾಷಣದ ನೆನಪು್ ಹಸಿಯಾಗಿತ್ತು. ಅಂಥ ಕಷ್ಟ ಕಾರ್ಪಣ್ಯ ಅನುಭವಿಸಿದ ’ಮೂರು ಪೌಂಡುಗಳ ಕ್ಲಬ್’ಸದಸ್ಯರಿಗೆ * ಕನ್ನಡ ಸಂಘ ಕಟ್ಟುವ ಅದಮ್ಯ ಉತ್ಸಾಹ ಹುಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಮುಂದಿನ ಕಂತನ್ನು ಆತುರತೆಯಿಂದ ಕಾಯುವೆ. ಅಭಿನಂದನೆಗಳು ರಾಮಮೂರ್ತಿಅವರೆ, ಮತ್ತು ನಿಮ್ಮ ನೆನಪಿನ ಸುರಿಳಿಯನ್ನು ಬಿಚ್ಚಿದ್ದಕ್ಕೆ ಧನ್ಯವಾದಗಳು
*ಈ ಮೂರು ಪೌಂಡುಗಳ ವಿಷಯದ ಬಗ್ಗೆ ಗದಾಧರ ಬೆಳ್ಳೂರು ಬರೆದ ಲೇಖನವನ್ನು ( https://wp.me/p4jn5J-249) ಸಹ ಓದ ಬಹುದು. ಶ್ರೀವತ್ಸ ದೇಸಾಯಿ
LikeLike
ಹೌದು. ಆಗ ಗದಾಧರ ಅವರನ್ನು ಇನ್ನೂ ಹೆಚ್ಚು ಬರೆಯಬಾರದಿತ್ತೇ ಎಂದು ಕೇಳಿದ ನೆನಪು. ಈಗ ನನಸಾಗಿದೆ. ಇತರರೂ ಆ ಕಾಲದ ನೆನಪುಗಳನ್ನು ಹಂಚಿಕೊಳ್ಳಬಹುದು 😊
LikeLike
ನೂರೊಂದು ನೆನಪು ಎದೆಯಾಳದಿಂದ .. ಧನ್ಯವಾದಗಳು .
LikeLike
ಮೂರು ಪೌಂಡು ಕ್ಲಬ್ಬಿನ ಇನ್ನೊಬ್ಬ ಸದಸ್ಯ ಹೇಳಿದ ಕಥೆಯಿದು:
“ನಾನು ೧೯೭೨ ರಲ್ಲಿ ಹುಚ್ಚು ಧೈರ್ಯದಿಂದ ಹೀಥ್ರುದಲ್ಲಿ ಬಂದಿಳಿದಾಗ ಕಿಸೆಯಲ್ಲಿ ೩ ಪೌಂಡುಗಳು ಮಾತ್ರ. ನ್ಯೂಕಾಸಲ್ಗೆ ರೈಲು ಟಿಕೀಟು ತೆಗೆಸಿ ಬಂದಿಳಿದೆ. ಆಗ ಗೊತ್ತಾಯಿತು ಗೇಟ್ಸ್ ಹೆಡ್ ಗೆ ಹೋಗಬೇಕಿತ್ತು ಅಂತ. ಅಲ್ಲಿದ್ದಾಗ ನಮ್ಮ ಭೂಗೋಲದ ಜ್ಞಾನ ಅಷ್ಟೇ ತಾನೇ, ಲಂಡನ್ನಿಗೂ ಇಂಗ್ಲೆಂಡಿಗೂ ವ್ಯತ್ಯಾಸವಿರಲಿಲ್ಲವಲ್ಲ. ಆಗಲೇ ಎರಡು ಪೌಂಡು ಚಿಲ್ಲರೆ ಖರ್ಚಾಗಿತ್ತು. ಗೇಟ್ಸ್ ಹೆಡ್ ತಲುಪಿ ಟ್ಯಾಕ್ಸಿ ಹತ್ತಿ ಆಸ್ಪತ್ರೆ ಬಾಗಿಲಿಗೆ ಬಂದಿಳಿದಾಗ ಡ್ರೈವರನು ಕೇಳಿದಷ್ಟು ಹಣ ಇರಲಿಲ್ಲ. ಎಲ್ಲ ಕಿಸೆ ಖಾಲಿ ಮಾಡಿದರೂ! ನನ್ನ ಪೆಚ್ಚು ಮೋರೆ ನೋಡಿ ಆತನೇ ಇರಲಿ ಬಿಡಿ, ನೀವು ಡಾಕ್ಟರಲ್ಲ, ನಿಮ್ಮ ಮೇಲೆ ಗೌರವವಿದೆ ಅಂತ ಬಿಟ್ಟು ಕೊಡಬೇಕೇ? ಎಂಥ ಹುಚ್ಚು ಅಂದುಕೊಂಡೆ.” ಅವರು ಈಗ ಇರುವ ಊರು ಕಾವೆಂಟ್ರಿ!
LikeLike
Very nice & interesting article by Rama murthy.please continue to share your experiences in the UK .
LikeLike
ರಾಮಮೂರ್ತಿಯವರ ಬರಹ ಓದಿ ಅಂದಿನ ದಿನಗಳ ಚಿತ್ರ ಕಣ್ಣಿಗೆ ಕಟ್ಟುವಂತಿದೆ.
ಜನಾಂಗೀಯ ಮತ್ತು ವರ್ಣಭೇದಗಳು ಎದ್ದುಕಾಣುವಂತಿರುವ ಕಾಲದಲ್ಲಿ ಕೈಯಲ್ಲಿ ಪುಡಿಗಾಸನ್ನಿಟ್ಟುಕೊಂಡು ಈಗಿನ ಕಾಲದಂತೆ ಸಂಪರ್ಕವಿಲ್ಲದ ಕಾಲದಲ್ಲಿ ಇಂಗ್ಲಂಡಿನಲ್ಲಿ ಜೀವನ ಮಾಡಿದ ನಿಮ್ಮ ವಿವರಗಳು ಚರಿತ್ರೆಯ ದಾಖಲೆಯೇ ಸರಿ.
ಇನ್ನೂ ಹೆಚ್ಚಿನ ಚಿತ್ರಗಳು ಮೂಡಿಬರಲಿ.
ಪ್ರೇಮಲರಾ ಅವರ ಮುನ್ನುಡಿ ಇಡೀ ಲೇಖನಕ್ಕೆ ಹೆಚ್ಚಿನ ಮೆರುಗನ್ನು ತಂದಿದೆ.
ಕೇಶವ
LikeLiked by 1 person