ಚಿತ್ರ- ಕಾವ್ಯ- ಡಾ.ಶ್ರೀವತ್ಸ ದೇಸಾಯಿ

♥ ಅನಿವಾಸಿಗೆ ಐದು ವರ್ಷದ ಹರ್ಷ

ಛಾಯಾ ಚಿತ್ರಗ್ರಹಣ ಒಂದು ಅದ್ಭುತ ಕಲೆ. ಯಾವುದೋ ಒಂದು  ಸಂದರ್ಭ ಒಬ್ಬ ಕವಿ/ಸಾಹಿತಿಯನ್ನು ಹೇಗೆ ಬರೆಯಲು ಪ್ರೇ್ರೇಪಿಸುತ್ತದೆಯೋ ಹಾಗೆಯೇ ಕೆಲವು ದೃಶ್ಯಗಳು ಕ್ಯಾಮೆರಾ ಹಿಂದಿನ ಮನವನ್ನು ಪ್ರಲೋಭಿಸಿ ಕ್ಯಾಮೆರಾ ಕಣ್ಣನ್ನು ಮಿಟುಕಿಸುವಂತೆ ಪ್ರಚೋದನೆ ನೀಡಿ ಬಿಡುತ್ತವೆ.ಆಗ ಮೂಡುವುದು ಒಂದು ಚಿತ್ರ ಮಾತ್ರವಲ್ಲ.

 ಹಾಗೆಂತಲೇ ಆಂಗ್ಲ ಭಾಷಾಕಾರ ಪ್ರಿಂಟರ್ಸ್ ಇಂಕ್ ಎನ್ನುವ ಜರ್ನಲ್ ನ ಜಾಹೀರಾತು ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದ  ಫ್ರೆಡ್ ಆರ್. ಬರ್ನಾರ್ಡ್ ಎಂಬಾತ ’ಒಂದು ಚಿತ್ರ-ಸಾವಿರ ಪದ’ ಎನ್ನುವ ನುಡಿಗಟ್ಟನ್ನು ಜಾರಿಗೆ ತಂದ. ಆಸಕ್ತಿದಾಯಕ ವಿಚಾರ ಎಂದರೆ ಇದೊಂದು ಚೈನೀಸ್ ನುಡಿಗಟ್ಟು ಎನ್ನುವ ಗಾಳಿ ಮಾತನ್ನೂ ಆತನೆ ಹರಿಬಿಟ್ಟದ್ದು! ಜೊತೆಯಲ್ಲಿ ಈ ಹೇಳಿಕೆ  ಹತ್ತು ಸಾವಿರ ಪದ ಎಂದಿರಬೇಕಿತ್ತು ಆದರೆ ತಪ್ಪಾಗಿ ಅನುವಾದಿಸಲಾಗಿದೆ ಎನ್ನುವ ಚರ್ಚೆಯನ್ನೂ ಮಾಡಲಾಯಿತು. ಯಾಕೆಂದು ಊಹಿಸಬಲ್ಲಿರಾ? ಸರಳ ಉತ್ತರ -ಮಾರ್ಕೆಟಿಂಗ್! ಜಾಹೀರಾತುಗಳಲ್ಲಿ ಚಿತ್ರಗಳನ್ನು ಬಳಸುವುದನ್ನು ಜನಪ್ರಿಯಗೊಳಿಸಲು “One Look is Worth A Thousand Words” ಎನ್ನುವುದನ್ನೇ ಆತ “One Picture is Worth Ten Thousand Words “ ಎಂದು ತಿರುಚಿ ಕಾರುಗಳ ಮೇಲೆ ಬರೆಸಿ ಅರ್ಥಪೂರ್ಣವಾದ ನುಡಿಗಟ್ಟೊಂದನ್ನು ಅಧಿಕೃತಗೊಳಿಸಿದ.  ಆ ಕಾಲದಲ್ಲಿ  ’ಚೈನೀಸ್ ’ ಎಂದ ಕೂಡಲೆ ಜನರಲ್ಲಿ ಕೆರಳುತ್ತಿದ್ದ ಆಸಕ್ತಿಯನ್ನು ಆತ ಉಪಯೋಗಿಸಿಕೊಂಡ. ಆದರೆ ನಿಜದಲ್ಲಿ “ಒಂದು ಚಿತ್ರ -ಎಷ್ಟು ಬೇಕಾದರೂ ಪದ  “ ಎನ್ನಬಹುದೇನೋ.ಒಂದೇ ಚಿತ್ರವನ್ನು ನೂರು ಜನ ಕವಿಗಳ ಮುಂದಿಟ್ಟರೆ ಅವರಿಂದ ಹೊರಡುವ ಉದ್ಗಾರಗಳು ನೂರು ಬಗೆಯವಾಗುತ್ತವೆ. ಅನಿವಾಸಿಯ ಅಂಗಳದಲ್ಲಿ  ಛಾಯಾಚಿತ್ರಕಾರ ಕವಿಯಾಗಬಲ್ಲ. ಕವಿ ಛಾಯಾಚಿತ್ರಕಾರನಾಗಬಲ್ಲ.ಇಬ್ಬರೂ ಒತ್ತಟ್ಟಿಗೆ ಸೇರಿ ನಡೆಸಿದ ಜುಗಲ್ಬಂದಿಯ ರೀತಿಯ ಪ್ರಯೋಗ ಈ ವಾರದ ವಿಶೇಷ.

ಈ ಚಿತ್ರಗಳನ್ನು ನೋಡಿ ನಿಮ್ಮ ಮನಸ್ಸಿನಲ್ಲಿ ಪದಗಳು ಸ್ಪುರಿಸಿದರೆ ಚಿತ್ರದ ಹೆಸರು/ ನಂಬರನ್ನು ಹಾಕಿ ಕಮೆಂಟು ಬಾಕ್ಸಿನಲ್ಲಿ  ಅದನ್ನು ಲಗತ್ತಿಸಿಬಿಡಿ.ಚಿತ್ರದ ಎಲ್ಲ ಶೀರ್ಷಿಕೆಗಳು ಮತ್ತು ಅಡಿಟಿಪ್ಪಣಿ ಚಿತ್ರಕಾರರದು. ಚಿತ್ರದ ಕೆಳಗೆ ಛಾಯಾಚಿತ್ರಕಾರನ ಟಿಪ್ಪಣಿಗಳನ್ನು ಅವರು ಕಳಿಸಿದಂತೆಯೇ ಪ್ರಕಟಿಸಿದ್ದೇನೆ. ಇವರ ಮೆಚ್ಚಿನದ್ದು ಕಪ್ಪು ಬಿಳುಪಿನ ಮೊದಲ ಚಿತ್ರ. ಆತ್ಮೀಯರೊಬ್ಬರೊಂದಿಗೆ ಹಂಚಿಕೊಂಡ ಪತ್ರದಲ್ಲಿ  ಸಹೋದರನೋರ್ವನನ್ನು ಕಳೆದುಕೊಂಡಾಗ ಈ ಚಿತ್ರ ಅವರ ಮನದಲ್ಲಿ ಹಾದು ಹೋದದನ್ನು ಇವರು ನೆನೆದಿದ್ದಾರೆ.ಅನಿವಾಸಿಯ ಅಂಗಳದಲ್ಲಿ ಈ ವಾರ ಕಣ್ಣಿನ ವೈದ್ಯ, ಬರಹಗಾರ,ಛಾಯಾಚಿತ್ರಕಾರ ಡಾ.ಶ್ರೀವತ್ಸ ದೇಸಾಯಿಯವರ  ಚಿತ್ರಗಳನ್ನು ಸಂಭ್ರಮಿಸೋಣ-ಸಂ )

ಬೆಳಕು-ಮುಸುಕಿನತ್ತ ಸೈಕಲ್ ಸವಾರ

ಮರುಳ ಮಾಯೆಯ ಮಬ್ಬಿನಲಿ

ಬೆಳಕಿಂಡಿಯ ದಿಕ್ಕಿನಲಿ

ತ್ವರಿತ ಚಲಿಸೆ ಭೂಮಿ ಕನಲಿದೆ

ಪೊರೆದ ಬದುಕಿಗೆ ಬೆನ್ನ ತಿರುಗಿಸೆ

ಗಮ್ಯವೆಲ್ಲಿಗೆ ಪಯಣಿಗ?     

(The smoke is often misinterpreted as a mist or fog. The sunrays make people think it to be very early morning but from the angle of the incident rays, you can guess that it was mid-morning. Your eyes are drawn to the origin of the ‘mist’ at the bottom right-hand corner and then they wander up the tree. After reaching the top they trace the shafts of rays downwards and reach the floor. After seeing the shadow of the cyclist they come to rest on the cyclist himself, now object of our full focus. The cyclist is well balanced. His face is turned away from you. You want to see his face and catch his expression. Where is he going? Where is he coming from? Is he in a rush? Is there happy news he is taking? Perhaps the birth of a son in the family? Or perhaps a piece of sad news? Or is he on one of his mundane daily routines?   I might modestly say that I liked it very much and it has been a favorite of mine)                    

Poppies


ಮರಳಿ ಬಂದನಿವ ಮತ್ತೆ ವಸಂತ
ಮುಗಿಲ ಚದುರಿಸುತ ಬೆತ್ತಲಾಗಿಪ ಬಾನ
ರೇಷ್ಮ ಕದಪಿನ ಪ್ರಫುಲ್ಲ ಕುಸುಮಿತ
ಹಚ್ಚಿಪ ಹಸಿರ ಇಳೆಗೆ ಹರಿಶಿನ, ಕುಂಕುಮ!

(red poppies make an attractive picture, against the blue sky. slightly enhanced on a software, I admit )

Rain Drops


ಭರದಿ ಸುರಿವ ಭರಣಿ ಮಳೆಗೆ
ತೂಗಿ ನಲಿವ ಚಿಗುರ ತುದಿಗೆ
ಬಾಗಿ ಸುರಿದು ತಣಿವ ಹನಿಗೆ
ಇಳೆಗೆನ್ನೆಯ ಕೆಂಪನಳೆಯುವ  ಆನಂದ
ಭುವಿಯ ತಬ್ಬಿ ಸೇರುವ ಉನ್ಮಾದ!


(An everyday picture. A twig, a few berries and rain. drops. One has to capture it in the camera, that’s all. Red is photographer’s delight. Always look for red colour. It is always impressive. That water drop tantalisingly hanging there on the well focused berry.  You keep watching to see if it going to drip in a minute, even in a still picture! I keep watching!  The slow shutter speed makes you see the rain drops produce streaks. It makes it dynamic! I haven’t got the technical details nor the ‘f’ number of the aperture)

Reflections

ಕಾದು ಕುಳಿತ ಕಾರ್ಮೋಡವೋ

ಬಸವಳಿಸಿ ಸರಿವ ನಿಗೂಢತೆಯೋ

ಶಾಂತ ಇಂದು ಮನೆ ಮನವು

ಬಿಂಬ ಮುತ್ತಿಕ್ಕಿದ ಪ್ರತಿಬಿಂಬವು!

(On an early autumn evening, clear air, dark clouds, blue water reflecting blue sky, but not the ominous dark clouds and the colourfully painted canal-side boats, which also act as the abode of the boatmen –all these make it a picture-perfect view and idyllic Engish countryside)

Refections 2

ನೀ ಹಾದು ಹೋದ ಹಾದಿ ನಿಚ್ಚಳ

ಉಳಿಸಿ ತೆರಳಿದ ನೆನಪುಗಳ ಚಿತ್ತಾರ

ಕರಗಿ ಮುಳುಗಿಹ ಕರಿಯ ನೆರಳ

-ಮೇಲೆ ಉದಯಿಸುತಿಹನು ಹೊಸತು ಸೂರ್ಯ!

(Reflections’ is one of my favourite subjects as it instantly doubles the image, as if there are two pictures in one! This was taken at the lakeside one morning after a few aeroplanes had left their jet stream trail in the sky. The ripples on the water make the picture even more interesting)

Reflections 3

ಒಂದರ ಮೇಲೊಂದು ಪೇರಿಸಿಟ್ಟ ಮನೆಗಳಿವು

ತಲೆಕೆಳಗಾಗಿವೆ ನಿಂತ ನೀರಿನೊಳಗೆ!

ಜೊತೆ ಜೊತೆಯೇ ನಾವು ಮೇಲ್ನೋಟಕೆ

 ಬಾಗಿ ನೋಡಲೆ ಒಮ್ಮೆ

ಇದ್ದರೆ ಆಳದಲಿ ಇನ್ನೊಂದು ಮಗ್ಗಲು?

——————————————————ಎಲ್ಲ ಪುಟ್ಟ ಪದ್ಯಗಳು– ಡಾ. ಪ್ರೇಮಲತ ಬಿ.

(ಮುಂದಿನ ವಾರ- ಅತಿಥಿ ಲೇಖನ)

12 thoughts on “ಚಿತ್ರ- ಕಾವ್ಯ- ಡಾ.ಶ್ರೀವತ್ಸ ದೇಸಾಯಿ

  1. ದೇಸಾಯಿಯವರ ಛಾಯಾಚಿತ್ರಗಳಲ್ಲಿ ನೂರಾರು ಕವಿತೆಗಳಿವೆ. ಪ್ರೇಮಲತಾರ ಚುಟುಕು ಪದ್ಯಗಳಲ್ಲಿ ಛಾಯಾಚಿತ್ರಗಳಿವೆ. ಚೆನ್ನಾಗಿದೆ ಈ ಪ್ರಯತ್ನ. ಮುಂದುವರೆಯಲಿ! ವಿನತೆ ಶರ್ಮ

    Like

  2. ತುಂಬ ಚೆಂದದ ಚಿತ್ರಗಳು ನೂರು ಭಾವಗಳ ಸ್ಫುರಿಸುವ ಭಾವಪೂರ್ಣ ಚಿತ್ರಗಳವು ಅಂದರೆ ಅತಿಶಯೋಕ್ತಿ ಅಲ್ಲ.ಅಂತೆಯೇ ಪುಟ್ಟ ಪುಟ್ಟದಾದ , ಅರ್ಥಪೂರ್ಣ ಪದ್ಯಗಳು.ಶ್ರೀವತ್ಸ ದೇಸಾಯಿ ಯವರಿಗೂ , ಪ್ರೇಮ ಲತಾ ಅವರಿಗೂ ಅಭಿನಂದನೆಗಳು.ಸುಂದರ ಪ್ರಯೋಗಕ್ಕೆ ಅನಿವಾಸಿ ಗೆ ಧನ್ಯವಾದಗಳು.ಆ ಚಿತ್ರಗಳನ್ನು ನೋಡಿ, ಹೊಮ್ಮಿದ ನನ್ನ ಭಾವಗೊಂಚಲು ಕೆಳಗಿದೆ.
    ಚಿತ್ರ 1- ಬೆಳಕು ಮುಸುಕಿನತ್ತ ಸೈಕಲ್ ಸವಾರಿ
    ಕಾಲನ ಓಟದ ಮಾಟ ಅದರ
    ಗುಟ್ಟು ಬಲ್ಲರಾರು
    ಇಟ್ಟ ಹೆಜ್ಜೆಯ ಈ ಕ್ಷಣದ ನೆಲೆ
    ಮಾತ್ರ ಬಲ್ಲೆ ನೀನು
    ಹೆಜ್ಜೆ ಕಿತ್ತು ಇಡಲು ಎತ್ತಿದ ಆ ಹೆಜ್ಜೆಯ
    ನೆಲೆಯ ಅರಿವಿಲ್ಲದ ಜೀವ
    ತಿಮಿರದೆಡೆಯಿಂದ ಮೊಗದಿರುವಿ ಬರುವ
    ಸಂಭ್ರಮದ ಭರಾಟೆಯಲ್ಲಿ
    ನಾಳೆಯ ಎದುರು ನೋಡುತ್ತಿದೆ
    ಮುಂದಿನ ನಡೆ ಏನು ತಿಳಿಯದೇ
    ಇದೆಂಥ ಮರುಳೋ ಹುಚ್ಚೋ ಕನಸೋ
    ಗೊಂದಲದ ಗೂಡಿನಲ್ಲಿ ನರಳಿ
    ಚಿತ್ರ -2 Poppies
    ನೀಲಿ ಮುಗಿಲ ಒಡಲಲಿ
    ಬೆಳ್ಳಿ ಮೋಡ ಸುರುಳಿ
    ಹಸಿರು ಹಾಸಿನ ಮೇಲೊಂದು
    ಸುಳಿ ನೆರಳಿನಲಿ ಮಂದಗಾಳಿ ಸುಳಿದು
    ಮನದಲೇನೋ ಕಚಗುಳಿ
    ಆ ಪುಟ್ಟ ಕೆಂದಳದ ಹೂವಿನೆದೆಯಲಿ
    ಗುಲಾಬಿ ಮತ್ತು
    ಆ ಕಡೆ ಈಕಡೆ ವಾಲಿ ಕುಣಿದು
    ಮಿಂಚಿ
    ಮನದಲೊಂದು ಮೃದು ಮಧುರ
    ಗಾನದಲೆ ಸುಳಿದು
    ಆ ಹೂವಿನೆದೆಯಲಿ ಹುದುಗಿ ಕರಗಲೊಂದು
    ಆಸೆ
    ಎದೆಯ ಗೂಡಲಿ ಆ ಹೂವ ಹುದುಗಿಸಲೊಂದು
    ಆಸೆ
    ಚಿತ್ರ -3-Rain drops
    ಸೃಷ್ಟಿಯ ಪ್ರತಿ ಅಣುವ ಚಲನೆಯೊಳ್
    ಒಂದು ಲಯವಿದೆ
    ಶ್ರುತಿಯ ಮೇಳವಿದೆ
    ಧೋ ಎಂದು ಸುರಿವ ಅಬ್ಬರದ ಮಳೆಯಲಿ
    ಸಣ್ಣಗೆ ಜಿನುಗೋ ಸೋನೆ ಧಾರೆಯಲಿ
    ಮಂದಗೆ ಸುಳಿಯೋ ಸುಳಿಗಾಳಿಯಲಿ
    ಬೀಸಿ ಹೊಡೆಯೋ ಬಿರುಗಾಳಿಯಲಿ
    ಆಲಿಸು ಸಂಗೀತದ ಸುಳಿಯಿದೆ
    ಆ ನಾದದ ಮೋಡಿಗೆ ಸಿಲುಕಿದ
    ಮನ ನಿಬ್ಬೆರಗಾಗಿ ಕಣ್ಣು ಮುಚ್ಚಿ ತೆರೆದಿದೆ
    Reflections-3
    ಪ್ರತೀ ಬಿಂಬಕೊಂದು ಪ್ರತಿಬಿಂಬ
    ಅಂಕುಡೊಂಕು ಅಂಚು
    ಚಿತ್ರ ವಿಚಿತ್ರ ರೂಪ
    ಆಳ ಆಳಕಿಳಿದು ಅಸಂಖ್ಯ ಆಕಾರ
    ತೋರಿ
    ಹೊಸ ಲೋಕ ಸೃಷ್ಟಿಸಿದ ಭ್ರಮೆಯೋ
    ಈ ಲೋಕದ ಪ್ರತಿಬಿಂಬವದು ಎಂಬುದ
    ಮರೆತು
    ಅದೇನೋ ವಿಭ್ರಮೆಯಲಿ ಗೊಂದಲದ
    ಗೂಡಿನಲ್ಲಿ ತಡಕಾಡುತಿದೆ ಜೀವ.
    ಸರೋಜಿನಿ ಪಡಸಲಗಿ

    Like

    • ಅದ್ಭುತವಾದ ಸಾಲುಗಳು ಸರೋಜಿನಿ ಅವರೆ. ನಿಮ್ಮ ಕವಿ ಮನಸ್ಸು ನಿಮ್ಮ ಹೃದಯಷ್ಟೇ ದೊಡ್ಡದು.
      ಛಾಯಾಚಿತ್ರಕಾರನ ಪ್ರಯತ್ನ ನಿಜಕ್ಕೂ ಸಾರ್ಥಕವಾಯಿತು.
      ನಿಮಗೂ ಮತ್ತು ಸ್ಪಂದಿಸಿದ ಇತರರಿಗೂ ಧನ್ಯವಾದಗಳು.

      Like

      • ಧನ್ಯವಾದಗಳು ಪ್ರೇಮಲತಾ ಅವರೇ.ಆ ಚಿತ್ರಗಳು ತುಂಬಾ ಅರ್ಥಪೂರ್ಣ . ನೋಡಿದಷ್ಟೂ ಹೊಸ ಅರ್ಥ ಭಾವದ ಹೊಳವು.ನಿಮ್ಮ ಪದ್ಯಗಳೂ ಅಷ್ಟೇ.ಗಾಗರ್ ಮೇ ಸಾಗರ ಕಾ ಪಾನಿ…….
        ಇನ್ನೊಮ್ಮೆ ನಿಮಗೂ , ಶ್ರೀವತ್ಸ ದೇಸಾಯಿ ಅವರಿಗೂ ಅಭಿನಂದನೆಗಳೊಂದಿಗೆ ಧನ್ಯವಾದಗಳು.ಅನಿವಾಸಿ ಬಳಗಕ್ಕೂ ಧನ್ಯವಾದಗಳು
        ಸರೋಜಿನಿ ಪಡಸಲಗಿ

        Like

    • ಅಲೆ ಅಲೆಯಾಗಿ ಬಂದ ಓದುಗರ ಪ್ರತಿಕ್ರಿಯೆಗಳು, ಬಿಂಬಕ್ಕೆ ಪ್ರಿಬಿಂಬವಾಗಿ ಬಂದಿವೆ, ಕವನ ಹೊತ್ತು ತಂದಿವೆ! ಆದರೆ ನಿಮ್ಮ ಕವನದಲ್ಲಿಯಂತೆ ಅಂಚುಗಳೇನೋ ಡೊಂಕಾಗಿಲ್ಲ!
      ಆದರೂ “ಆಳ ಆಳಕಿಳಿದು ಅಸಂಖ್ಯ ಆಕಾರ
      ತೋರಿ
      ಹೊಸ ಲೋಕ ಸೃಷ್ಟಿಸಿ’ವೆ!
      ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು. ಈ ಸರಣಿಯನ್ನು ಮುಂದುವರಿಸಿಕೊಂಡು ಹೋಗಲು ಸಂಪಾದಕಿಗೆ ಬಿನ್ನವಿಸುವೆ. ( ಈ ಮೊದಲೂ ಇಂಥ ಪ್ರಯೋಗವಾಗಿದ್ದರೂ ಓದುಗರ ಸ್ಪಂದನಗಳ ವೈಪುಲ್ಯವಿರಲಿಲ್ಲ. ಇನ್ಕು ಮುಂದಾದರೂ ಅದನ್ನ ಅಪೇಕ್ಷಿಸೋಣವೇ? ) ಶ್ರೀವತ್ಸ ದೇಸಾಯಿ

      Like

      • ಧನ್ಯವಾದಗಳು ಶ್ರೀವತ್ಸ ದೇಸಾಯಿ ಅವರೇ.ನಿಮ್ಮ ಈ ಸ್ಕಬ್ಧಛಾಯಾ ಚಿತ್ರದಲ್ಲಿ ಅಂಚು ಅಂಕು ಡೊಂಕು ಆಗಿರಲಾರದು.ಆದರೆ ನೀರೊಳಗಿನ ಪ್ರತಿಬಿಂಬ, ಹೊಯ್ದಾಡೋ ಮನದೊಳಿರುವ ಪ್ರತಿಬಿಂಬ ಹೊಯ್ದಾಡಿ ಅಂಚು ಅಂಕು ಡೊಂಕೇ.😊 ಆದರೆ ಆ ಚಿತ್ರ ಹೊತ್ತು ತಂದ ,ತರುವ ಕವನಗಳ ಅಂಚು ಕುಸುರು, ಕುಸುರು.ಅಂಕು ಡೊಂಕಲ್ಲ.ಅಲ್ವಾ?ನಿಮ್ಮ ಸೂಕ್ಷ್ಮ ಅವಲೋಕನ ಶ್ಲಾಘನೀಯ ನಿಮ್ಮ ಚಿತ್ರಗಳಂತೆಯೇ.ಅಭಿನಂದನೆಗಳು.
        ಸರೋಜಿನಿ ಪಡಸಲಗಿ

        Like

  3. ಸೊಗಸಾದ ಪ್ರಯೋಗವಿದು. ದೇಸಾಯಿ ಅವರ ಛಾಯಾಚಿತ್ರಗಳು ಅವರ ಪರಿಣಿತಿಯನ್ನು ಪ್ರತಿಬಿಂಬಿಸಿದರೆ, ಕವನಗಳು ಕವಿಯತ್ರಿಯ ಪ್ರತಿಭೆಯನ್ನು ತೋರಿಸುತ್ತಿವೆ. ದೇಸಾಯಿಯವರ ವಿಡಿಯೋಗಳನ್ನು ನಾವು ಈಗಾಗಲೇ ಅನೇಕ ಬಾರಿ ನೋಡಿ ಆನಂದಿಸಿದ್ದೇವೆ. ಈ ಸರಣಿಯನ್ನು ಮುಂದುವರೆಸಿದರೆ ಚೆನ್ನಾಗಿರುತ್ತೆ. ಇಬ್ಬರಿಗೂ ಧನ್ಯವಾದಗಳು.
    ಉಮಾ ವೆಂಕಟೇಶ್.

    Liked by 1 person

  4. ರಾಮಮೂರ್ತಿ ಮತ್ತು ಅಮಿತ ಅವರಿಗೆ ಧನ್ಯವಾದಗಳು. Both discerning critics and hence their comments are that much more precious. ಅದರಲ್ಲೂ ಒಬ್ಬರು ಸ್ವತಃ ಶ್ರೇಷ್ಠ ಫೋಟೋಗ್ರಾಫರ್, ಸಹ! ಆದರೆ ಸಂಪಾದಕಿ ಪ್ರೇಮಲತಾ ಅವರ ಒಪ್ಪುವ ಪೀಠಿಕೆ ಮತ್ತು ಚಿತ್ರಗಳ ಚಲುವನ್ನು ನೂರ್ಮಡಿಗೊಳಿಸುವ ಕವನಗಳ ಮೆರಗು ಕೊಟ್ಟ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಶ್ರೀವತ್ಸ ದೇಸಾಯಿ

    Like

  5. ಫೋಟೋಸ್ ತುಂಬಾ ಚೆನ್ನಾಗಿದೆ ಮತ್ತು ಇಂಗ್ಲಿಷ್, ಕನ್ನಡದ ಅನುವಾದ ಸಹ. ನೀವು ಕನ್ನಡ ಬಳಗದಲ್ಲಿ ತೆಗದ ಚಿತ್ರಗಳನ್ನು ಒಂದು ಆಲ್ಬಮ್ ಮಾಡಿ

    Like

  6. ಅಬ್ಬಾ!!! ಎಷ್ಟು ಚಂದದ ಚಿತ್ರಗಳು, ಒಂದೇ ಗುಕ್ಕಿಗೆ ಓದಿಸಿ ಕೊಂಡು ಮತ್ತೆ ಮತ್ತೆ ಓದಬೇಕೆನ್ನುವ ಪದ್ಯಗಳು. ಧನ್ಯವಾದಗಳು

    Liked by 1 person

Leave a comment

This site uses Akismet to reduce spam. Learn how your comment data is processed.