ವಚನ, ದಾಸ ಮತ್ತು ಭಕ್ತಿ ಸಾಹಿತ್ಯದ ಪರಂಪರೆ- ಭಾಗ 2, ರಾಮಮೂರ್ತಿ

 ♥ ಅನಿವಾಸಿ ಗೆ ಐದು ವರ್ಷದ ಹರ್ಷ ♥〉

( ವಚನ, ದಾಸ ಮತ್ತು ಭಕ್ತಿ ಸಾಹಿತ್ಯದ ಪರಂಪರೆಯ ಬಗ್ಗೆ ಬೇಸಿಂಗ್ ಸ್ಟೋಕ್ ನ  ರಾಮಮೂರ್ತಿಯವರು ವಿಶದವಾಗಿ ಬರೆದ ಲೇಖನದ ಎರಡನೆಯ ಭಾಗವಿದು. ಮೊದಲ ಭಾಗವನ್ನು ಈ  ಕೆಳಗಿನ ಲಿಂಕನ್ನು ಒತ್ತುವ ಮೂಲಕ ಮತ್ತೆ ಓದಬಹುದು -ಸಂ)  https://kssvv.wordpress.com/?p=8653&preview=true


ದಾಸ ಸಾಹಿತ್ಯ

ವಚನ ಸಾಹಿತ್ಯ ಶಿವನ ಮೇಲೆ ಬರೆದ ಹಾಗೆ ದಾಸ ಸಾಹಿತ್ಯ ವಿಷ್ಣುವಿ್ನ ಮೇಲೆ ಬರೆದಿದ್ದು . ಇವರನ್ನು ಹರಿದಾಸರು  ಎನ್ನುತ್ತಾರೆ. ಈ ಸಾಹಿತ್ಯ ೧೨/೧೩ ನೇ ಶತಮಾನದಿಂದ ಶುರುವಾಗಿ ೧೬ನೇ ಶತಮಾನದ ಪುರಂದರ ದಾಸರಿಂದ ಬಹಳ ಪ್ರಾಮುಖ್ಯತೆಗೆ ಬಂತು. ಹೆಚ್ಚಾಗಿ ಬ್ರಾಹ್ಮಣರ ಮಾಧ್ವ ಸಂಪ್ರದಾಯದರಿಂದ ಈ ಸಾಹಿತ್ಯದ ಪ್ರಾರಂಭ. ಮಧ್ವಾಚಾರ್ಯರ ಶಿಷ್ಯ ನರಸಿಂಹತೀರ್ಥರಿಂದ, (ಅಂದರೆ ಸುಮಾರು ಕ್ರಿಸ್ತ ಶಕ ೧೩೦೦) ಶುರುವಾಗಿ ನಂತರ ಅವರ ಶಿಷ್ಯ ಪರಂಪರೆಯವರು ಮುಂದೆ ವರಿಸಿದರು.  ವಚನಗಳ ರೀತಿ ದಾಸ ಸಾಹಿತ್ಯವೂ ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿದೆ. ಉದಾರಣೆಗೆ ಪುರಂದರದಾಸರ ಯಾವದೇ ಸಂಯೋಜನೆಯನ್ನು ಓದಿದರೆ ಅಥವಾ ಕೇಳಿದರೆ ಆ ಭಾಷೆಯ ಶೈಲಿ  ಇವತ್ತಿಗೂ ಬಳಿಕೆಯಲ್ಲಿದೆ ಎನ್ನುವುದು ಸ್ಪಷ್ಟ ವಾಗುತ್ತೆ

ಪುರಂದರ ದಾಸರ  ಸಮಕಾಲೀನ ಕನಕ ದಾಸರು (೧೫೦೯-೧೬೦೦). ಈತ ಬ್ರಾಹ್ಮಣ ಪಂಗಡದವನಲ್ಲ ನಾಯಕ ಪಂಗಡಕ್ಕೆ ಸೇರಿದವರು.

ಪುರಂದರ ದಾಸರು (೧೪೮೪-೧೫೬೪)

ಇವರ ಪೂರ್ವಿಕ ಹೆಸರು  ಶ್ರೀನಿವಾಸ ನಾಯಕ ದೇಶಸ್ಥ ಮಾಧ್ವ ಬ್ರಾಹ್ಮಣ ವಜ್ರದ ವ್ಯಾಪಾರಿ ಮತ್ತು ಕೋಟ್ಯಧಿಪತಿ. ಹುಟ್ಟಿದ ಸ್ಥಳ ತೀರ್ಥಹಳ್ಳಿ ಹತ್ತಿರ ಕ್ಷೇಮಪುರ . ತಂದೆ ವರದಪ್ಪ ತಾಯಿ ಲೀಲಾವತಿ. ಮನೆಯ ಸಂಪ್ರದಾಯದಂತೆ ಇವರಿಗೆ ಸಂಸ್ಕೃತ ,ಕನ್ನಡ ಮತ್ತು ಸಂಗೀತ ವಿದ್ಯಾಭ್ಯಾಸ ನಂತರ ತಂದೆಯಿಂದ ವ್ಯಾಪಾರ ಕಲಿತರು. ಹದಿನಾರನೇ ವಯಸ್ಸಿನಲ್ಲಿ ಸರಸ್ವತಿ ಬಾಯಿ ಜೊತೆ ಮದುವೆ. ಇವರ ೨೦ನೇ ವಯಸ್ಸಿನಲ್ಲಿ ತಂದೆ ಮತ್ತು ತಾಯಿ ಯನ್ನು ಕಳೆದುಕೊಂಡು ಮನೆತನದ ವ್ಯಾಪಾರ ಇವರ ಜವಾಬ್ದಾರಿ ಆಯಿತು.

ಆದರೆ ಅಷ್ಟು ಶ್ರೀಮಂತನಾಗಿದ್ದರೂ ತುಂಬಾ ಜಿಪಣ ಒಬ್ಬರಿಗೂ ಸಹಾಯ ಮಾಡುವ ಬುದ್ದಿ ಇರಲಿಲ್ಲ. ಇವರ ಪತ್ನಿ ಸರಸ್ವತಿ ಹಾಗಿರಲಿಲ್ಲ ಬಹಳ ಧಾರಾಳವಂತಳು.ಇದರಿಂದ ಗಂಡ ಹೆಂಡತಿ ನಡುವೆ ಅನೇಕ ಮನಸ್ತಾಪಗಳು ಇದ್ದವು.    ಇವರ ಜೀವನದಲ್ಲಿ  ನಡೆದ ಒಂದು ವಿಚಿತ್ರ  ಸನ್ನಿವೇಶದಿಂದ  ಶ್ರೀನಿವಾಸ ನಾಯಕನಿಗೆ ನಾಚಿಗೆ ಆಗಿ  ಅವರ ೩೦ ನೇ ವರ್ಷದಲ್ಲಿ  ಜೀವನ ಬದಲಾಗಿ  ಭಕ್ತಿ ಸಾಹಿತ್ಯಕ್ಕೆ ಹೊಸ ದಾರಿಯನ್ನೇ ತೋರಿಸಿದರು. ತಮ್ಮ ಪಾಲಿನ ಅಪಾರ ಐಶ್ವರ್ಯ ವನ್ನು ದಾನ ಮಾಡಿ  ಉಡುಪಿಯ ಕೃಷ್ಣನ ಮೇಲೆ ಸಾವಿರರರು ಭಕ್ತಿ ಗೀತೆಗಳನ್ನು ರಚಿಸಿತ್ತಾ  ಊರಿಂದ ಊರಿಗೆ ಅಲೆದು ಜನಪ್ರಿಯರಾದರು.

ಈ ದಾರಿ ತೋರಿದ ಪತ್ನಿ ಸರಸ್ವತಿ ಅವರಿಗೆ ಇವರ ಕೃತಜ್ಞತೆ ತೋರಿಸಿ ಒಂದು ಕೀರ್ತನೆ ರಚಿಸಿದರು.

ಆದದ್ದಲ್ಲ ಒಳಿತೆ  ಆಯಿತು, ನಮ್ಮ ಶ್ರೀಧರನ ಸೇವೆ ಮಾಡಲು ಸಾಧ್ಯ ಸಂಪತ್ತಾಯಿತು ….. ಎಂದು ಕೊಂಡಾಡಿದ್ದಾರೆ

ಹೀಗೆ ದಾಸರು ತಮ್ಮ ಭಕ್ತಿ ಯನ್ನು ಎಲ್ಲ ಕಡೆ ಹರಡತ್ತಿರುವಾಗ ವಿಜಯನಗರದ ರಾಜ್ಯದ ರಾಜ ಗುರುಗಳು ವ್ಯಾಸತೀರ್ಥರು ಇವರಿಗೆ ದೀಕ್ಷೆ ಕೊಟ್ಟು ಪುರಂದರ ವಿಠ್ಠಲ ಎಂದು ನಾಮಕರ್ಣಮಾಡಿದರು ಅನ್ನುವ ವಿಷಯ ಪ್ರೊ. ಸಾಂಬಮೂರ್ತಿ ಅವರು ಪ್ರಸ್ತಾಪಿಸಿದ್ದಾರೆ. ಇದು ೧೫೨೫ ರಲ್ಲಿ ದಾಸರಿಗೆ ಸುಮಾರು ೪೦ ವರ್ಷ .  ವಿಜಯನಗರ ರಾಜ್ಯ ದ ಮೂಲೆ ಮೂಲೆಗೂ ಓಡಾಡಿ  ಸಾಮಾನ್ಯ ಜನರೊಂದಿಗೆ ಈ ಭಕ್ತಿ ಭಂಡಾರವನ್ನು ಹಂಚಿಕೊಂಡರು.  ಹಂಪಿಯಲ್ಲಿ ಕೃಷ್ಣದೇವರಾಯನ ಪರಿಚವು ಇತ್ತು. ಅರಸರು ಒಮ್ಮೆ ದಾಸರನ್ನು ಕೋಟ್ಯಧಿಪತಿ ಆಗಿದ್ದವರು ಹೀಗೇಕಾದಿರಿ ಎಂದು ಪ್ರಶ್ನೆ ಮಾಡಿದಾಗ ದಾಸರು

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ ….. ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು ನಮ್ಮ ನಿಮ್ಮ ಭಾಗ್ಯದೊಡಯ ಪುರಂದರವಿಠಲನು” ಎಂಬ ಕೃತಿಯನ್ನು ಅರಸನ ಮುಂದೆ ಹಾಡಿದರಂತೆ

ಈಗಿರುವ ಪುರಂದರ ಮಂಟಪದಲ್ಲಿ   ಇವರ ಕೊನೆಯ ವರ್ಷಗಳು ಹಂಪೆಯಲ್ಲಿ ಕಳೆದರು. ತೀರಿದಾಗ ೮೦ ವರ್ಷಗಳಾಗಿದ್ದವಂತೆ.

ಇವರ ಪದಗಳು ಮುಂದೆ ಕರ್ನಾಟಕದ ಸಂಗೀತ ಪದ್ದತಿಯ ಮೂಲವಾಯಿತು.  ಕರ್ನಾಟಕ ಸಂಗೀತದ ಒಬ್ಬ ತ್ರಿಮೂರ್ತಿ ಆದ ತ್ಯಾಗರಾಜರು ಬರೆದ “ಪ್ರಹ್ಲಾದ ಭಕ್ತಿ ವಿಜಯಂ ” ನಲ್ಲಿ ಪುರಂದರ ದಾಸರೇ  ತಮ್ಮ ಗುರುಗಳೆಂದು ಹೇಳಿಕೊಂಡಿದ್ದಾರೆ.  ದಾಸರೆಂದರೆ ಪುರಂದರದಾಸರಯ್ಯ   ಎಂದು ವ್ಯಾಸತೀರ್ಥರೇ ಹೇಳಿದ್ದಾರೆ ದಾಸರು   ಎಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ ಅನ್ನುವುದ ಬಗ್ಗೆ ಸರಿಯಾದ ಆಧಾರ  ಸಿಕ್ಕಿಲ್ಲ. ಕೆಲವರ ಪ್ರಕಾರ ಇವು ಹತ್ತು ಸಾವಿರದ   ಮೇಲೆ  ಆದರೆ ಇವತ್ತು ೬೦೦ ಕೀರ್ತನೆಗಳ ಮಾತ್ರ ದಾಖಲೆಯಲ್ಲಿ ಇದೆ.  ಚಾಮರಾಜ ಒಡೆಯರ ಕಾಲದಲ್ಲಿ  ಆಸ್ಥಾನ ವಿದ್ವಾಂಸರಾಗಿದ್ದ  ಮೈಸೂರು ಕರಗಿರಿ ರಾವ್ (೧೮೫೩-೧೯೨೭)  ಅನೇಕ ಹಳ್ಳಿಗಳ ಪ್ರವಾಸ ಮಾಡಿ ಅಲ್ಲಿನ ಹರಿದಾಸರು ಮತ್ತು ಇತರರಿಂದ  ತಲೆತಲಾಂತರದಿಂದ ಹಾಡಿದ್ದನ್ನು ಕೇಳಿ  ದಾಸರ  ೨೦೦ ಕೀರ್ತನೆಗಳನ್ನು ಮೊದಲಬಾರಿಗೆ ಸಂಕಲಿಸಿದರು. ಇತ್ತೀಚಿಗೆ madhwafestivals.world press ಅನ್ನುವ ಅಂತರ ಜಾಲದಲ್ಲಿ ಪುರಂದರ ದಾಸರ ಮತ್ತು  ಅನೇಕ ಹರಿದಾಸರು ರಚನೆ ಮಾಡಿದ  ೬೦೦ ಕೀರ್ತನೆಗಳನ್ನು ಪ್ರಕಟಿಸಿದ್ದಾರೆ . ಕನ್ನಡ ಮತ್ತು ಇಂಗ್ಲಿಷ್ನ ಲಿಪಿ ಯಲ್ಲಿ ಇದೆ

ಇವತ್ತಿಗೂ ನಾಡಿನಲ್ಲಿ ಪುರಂದರ ಆರಾಧನೆ ವಿಜೃಂಭಣೆ ಇಂದ ನಡೆಸುತ್ತಾರೆ. ಇವರ ಕೀರ್ತನೆಗಳಲ್ಲಿ  ಸಮಾಜದಲ್ಲಿ ಜನರು ಅನುಭವಿಸುವ ಅಸಹಾಯಕತೆ ಮತ್ತು ಅನ್ಯಾಯಗಳ  ಬಗ್ಗೆ  ಸರಳವಾದ ಕನ್ನಡದಲ್ಲಿ ನಿರೂಪಿಸಿದ್ದಾರೆ.

ಕನಕ ದಾಸರು (೧೫೦೯-೧೬೦೯) 

ಸುಮಾರು ೨೦೦ ಹರಿದಾಸರಲ್ಲಿ ಇವರು ಪ್ರಮುಖರು. ಮೊಟ್ಟಮೊದಲನೆಯ ಬ್ರಾಹ್ಮಣವರ್ಗಕ್ಕೆ ಸೇರಿಲ್ಲದವರು. ಈತನ ಪೂರ್ವಿಕ ಹೆಸರು ತಿಮ್ಮಪ್ಪ ನಾಯಕ. ತಂದೆ ಬೈರಪ್ಪ ಮತ್ತು ತಾಯಿ ಬಚ್ಚಮ್ಮ. ಊರು ಹಾವೇರಿ ಜಿಲ್ಲೆಯ ಬಂಕಾಪುರದ ಹತ್ತಿರ ಬಾದ  ಗ್ರಾಮ. ಭೈರಪ್ಪ ಅಲ್ಲಿನ ಕೋಟೆ ಯ ನಾಯಕನಾಗಿದ್ದ. ೧೧ ನೇ ಶತಮಾನದ  ಶ್ರೀವೈಷ್ಣುವ ಗುರುಗಳಾಗಿದ್ದ ರಾಮಾನುಜಾಚಾರ್ಯರ  ಅನುಯಾಯಿಗಳು. ತಿರುಪತಿ ತಿಮ್ಮಪ್ಪನ ಭಕ್ತರು ಆದ್ದರಿಂದ ಮಗನಿಗೆ ತಿಮ್ಮಪ್ಪ ಎಂದು ನಾಮಕರಣ. ಚಿಕ್ಕ ವಯಸ್ಸನಲ್ಲಿ ಕನ್ನಡ ಮತ್ತು ಸಂಸ್ಕೃತ ವಿದ್ಯಾಭ್ಯಾಸ ಅಲ್ಲದೆ ಕತ್ತಿ ವರಸೆ ಮತ್ತು ಕುದರೆ ಸವಾರಿ ಶಿಕ್ಷಣವು ಸಿಕ್ಕಿತ್ತು.  ತಂದೆ ತೀರಿದಾಗ ತಿಮ್ಮಪ್ಪ ನಾಯಕ ಆ ಕೋಟೆಯ ಆಡಳಿತವನ್ನು ವಹಿಸಿಕೊಂಡು ಒಂದು ಯುದ್ಧದಲ್ಲಿ ತೀವ್ರ ಗಾಯಗೊಂಡರೂ ಹೇಗೊ ಬದಕಿ ಬಂದ  ಮೇಲೆ ತಿಮ್ಮಪ್ಪನಿಗೆ ಜ್ಞಾನೋದಯ ಬಂದು ಭಕ್ತಿ ಮಾರ್ಗವನ್ನು ಹಿಡಿದ.  ಸ್ಥಳೀಯ ಕಥೆಯ ಪ್ರಕಾರ  ಈತನಿಗೆ ಈ ಕೋಟೆಯ ಅವಧಿಯಲ್ಲಿ ಚಿನ್ನದ ನಾಣ್ಯಗಳ ನಿಧಿ ಸಿಕ್ಕಿತಂತೆ. ಇದನ್ನು ತಿಮ್ಮಪ್ಪ ಆ ಪ್ರದೇಶದ ಬಡವರಿಗೆ ಹಂಚಿದನಂತೆ. ಆವತ್ತಿನಿಂದ ತಿಮ್ಮಪ್ಪ ನಾಯಕ ಕನಕ ದಾಸನಾದ. ಇದು ಕಥೆ ಇರಬಹುದು ಗೊತ್ತಿಲ್ಲ. ಮನೆದೇವರು ಕಾಗಿನೆಲೆ ಆದಿಕೇಶವ, ಇದು ಕನಕದಾಸರ ಅಂಕಿತ ನಾಮವೂ ಆಯಿತು. ಈತನ ಪತ್ನಿ ಮುಕುತಿ ಆದರೆ ಈಕೆಯ ಬಗ್ಗೆ ಸಿಕ್ಕಿರುವ ಮಾಹಿತಿ ಅತಿ ಕಡಿಮೆ.

   〈♥ ಅನಿವಾಸಿ ಗೆ ಐದು ವರ್ಷದ ಹರ್ಷ ♥〉

ಈತ ನರಸಿಂಹ ಸ್ತ್ರೋತ್ರ, ರಾಮಧ್ಯಾನ ಮಂತ್ರ ಮತ್ತು ಮೋಹನತರಂಗಿಣಿ ಅನ್ನುವ ಕೃತಿಗಳನ್ನು ಬರದಿದ್ದ.   ನಂತರ ವಿಜಯನಗರದ ರಾಜಗುರುಗಳಾಗಿದ್ದ ವ್ಯಾಸ ತೀರ್ಥರಿಂದ ಪ್ರೇರಣೆಗೊಂಡು ಪುರಂದರ ದಾಸರ ಮಾದರಿಯಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿ ರಾಜ್ಯದ ಎಲ್ಲಕಡೆ ಓಡಾಡಿದರು.  ಇವರಿಂದ ಸುಮಾರು ೩೦೦ ಕೀರ್ತನೆಗಳನ್ನು ರಚಿಸಿದ್ದಾರೆ  ಮತ್ತು  ಇತರ ಕೃತಿಗಳು ನಳಚರಿತ್ರೆ ಮತ್ತು ಹರಿಭಕ್ತಿಸಾರ.

ರಾಮಧ್ಯಾನ ಮಂತ್ರದಲ್ಲಿ  ಅಕ್ಕಿ (ಅಥವಾ ಅನ್ನ)  ಮತ್ತು ರಾಗಿ ಉತ್ತಮ ಎನ್ನುವ ವಿವಾದವನ್ನು ರಾಮನ ವರೆಗೂ ಹೋಗಿ ಅವನ ತೀರ್ಪು ಕೇಳಿದರಂತೆ. ರಾಮ ರಾಗಿ ಉತ್ತಮ ಎಂದ. ಇದರ ಅರ್ಥ ಬಡವರ ಆಹಾರ ರಾಗಿ ಅದ್ದರಿಂದ ಇದು ಉತ್ತಮ ಎನ್ನುವುದು ಇದರ ಸಂದೇಶ ಇರಬಹುದು.

ಇವರು ಕೃಷ್ಣನ ಭಕ್ತರಾಗಿದ್ದರಿಂದ ವ್ಯಾಸರಾಯ ಮಠದ  ಸ್ವಾಮಿಗಳಿಂದ  ಉಡುಪಿಗೆ  ಬರುವಂತೆ ಆಹ್ವಾನ ಬಂತು ಆದರೆ ದೇವಸ್ಥಾನದ ಬಾಗಿಲಲ್ಲೇ ಅಲ್ಲಿನ ಕೆಲವು ಅರ್ಚಕರು ಇವರನ್ನು ಒಳಗೆ ಬಿಡಲಿಲ್ಲ. ಕನಕ ದಾಸರು ಆಗ ಕೃಷ್ಣನ ಮೇಲೆ ಒಂದು ಹಾಡನ್ನು ಹೇಳಿದಾಗ ಕೃಷ್ಣ ಇವರ ಭಕ್ತಿಗೆ ಮೆಚ್ಚಿ ಅವನ ವಿಗ್ರಹ ದಾಸರ ಕಡೆ ತಿರಿಗಿ ಗೋಡೆಯಲ್ಲಿ ಬಿರಕು ಬಿಟ್ಟಿತು, ಇವತ್ತಿಗೂ ಕನಕನ ಕಿಂಡಿಯನ್ನು ನೋಡಬಹುದು.

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ, ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ……. ಸಮಯಾಸ ಸಮಯಉಂಟೆ ಭಕ್ತ ವತ್ಸಲಾ ನಿನಗೆ ಕಮಲಾಕ್ಷ ಕಾಗಿನಾಲೆಯಾದಿಕೇಶವನೆ  “

ಕರ್ನಾಟಕ ಸರ್ಕಾರದವರು ಇತ್ತೀಚೆಗೆ ತಿಮ್ಮಪ್ಪ ನಾಯಕನ ಕೋಟೆಯನ್ನು ಅಭಿವೃದ್ಧಿ ಮಾಡಿದ್ದಾರೆ.  ದಾಸರು ಅವರ ಊರಿನ ಬಾದ ಗ್ರಾಮದಲ್ಲಿ ಆದಿಕೇಶವನ ಪೂಜೆ ಸಲ್ಲಿಸುತ್ತಿದ್ದರು, ಬಳಿಕ ಆ ವಿಗ್ರಹ ವನ್ನು ಬ್ಯಾಳಾಗಿ ತಾಲೂಕ್ ನಲ್ಲಿರುವ ಕಾಗಿನೆಲೆ ಬಂದು ಅಲ್ಲಿ ಸಣ್ಣ ದೇವಸ್ಥಾನವನ್ನಿ ಕಟ್ಟಿ ಈ ವಿಗ್ರಹವನ್ನು ಪ್ರತಿಷ್ಠೆ ಮಾಡಿದರು. ಸ್ವಲ್ಪ ದೂರದಲ್ಲಿ ಅವರ ಸಮಾಧಿ ಇದೆ ಮತ್ತು ಅವರ ಪ್ರತಿಮೆ ಮತ್ತು ಅವರು ಉಪಯೋಗಿಸುತ್ತಿದ್ದ ಶಂಖ ಮತ್ತು ಬಿಕ್ಷಾಯ ಪಾತ್ರೆ ಇದೆ.

ಶಿಶುನಾಳ ಶರೀಫ (೧೮೧೯-೧೮೮೯)   

ಕೊನೆಯದಾಗಿ ಇಲ್ಲಿ ಸಂತ ಶಿಶುನಾಳ ಷರೀಫ್ ನವರ ಪರಿಚಯ ಮಾಡುವುದು ಸೂಕ್ತ. ಕರ್ನಾಟಕದ ಮೊದಲನೆಯ ಮುಸ್ಲಿಂ ಪಂಗಡದ ಸಂತರು ಮತ್ತು ಸಾಮಾಜಿಕ ಸುಧಾರಕರು ಕನ್ನಡದ ಕವಿಗಳು  ಕನ್ನಡದ ಕಬೀರ್.  ಸೂಫೀ ಸಂಪ್ರದಾಯದಲ್ಲಿ ಕಾಣಿಸುವ ಅತ್ಯಂತ ಉತ್ತಮವಾದ ಉದಾಹರಣೆ ಇವರಲ್ಲಿ ಕಾಣಬಹುದು   ಹುಟ್ಟಿದ್ದು ಹಾವೇರಿ ಜಿಲ್ಲೆಯ ಶಿಶುನಾಳಹಳ, ತಂದೆ ಇಮಾಮ ಸಾಹೇಬ್,  ಖಾದ್ರಿ ಅನ್ನುವರ ಶಿಷ್ಯರು. ಖಾದ್ರಿ ಅವರ ಕನಸು ಹಿಂದೂ ಮುಸ್ಲಿಂ ಸಂಘಟನೆ. ಇಮಾಮ ಸಾಹೇಬರು  ರಾಮಾಯಣ ಮತ್ತು ಮಹಾಭಾರತದ  ಕಥೆಗಳನ್ನು  ಚಿಕ್ಕ ವಯಸಿನ್ನಲ್ಲಿ ಷರೀಫ್ಅವರಿಗೆ ಹೇಳುತ್ತಿದ್ದರು ಆದ್ದರಿಂದ ಇವರಿಗೆ ಹಿಂದೂ ಮತ್ತು ಮುಸಲಮಾನ ಧರ್ಮದ ಬಗ್ಗೆ ತುಂಬಾ ತಿಳುವಳಿಕೆ ಇತ್ತು. ಹಳ್ಳಿಯ ಕನ್ನಡ ಪ್ರಾಥಮಿಕದಲ್ಲಿ ೭ನೇ ಕ್ಲಾಸ್ನ ವರೆಗೆ ವಿದ್ಯಾಭ್ಯಾಸ. ಮರಾಠಿ ಮತ್ತು ಉರ್ದು ಭಾಷೆಗಳಲ್ಲೂ ಪದ್ಯಗಳನ್ನು ರಚಿಸಿದ್ದಾರೆ. ಸ್ವಲ್ಪ ಕಾಲ ಹತ್ತಿರದ ಶಾಲೆಯಲ್ಲಿ ಕೆಲಸಮಾಡಿ ನಂತರ ಧಾರ್ಮಿಕ ದಾರಿ ಯನ್ನು ಹಿಡಿಯುವ ಆಸೆ ಪ್ರಬಲವಾಯಿತು. ಅದೇ ಸಮಯದಲ್ಲಿ ಗೋವಿಂದ ಭಟ್ಟ ಅನ್ನುವ ಗುರುಗಳ ಪರಿಚಯವಾಗಿ ಅವರ   ಶಿಷ್ಯ ರಾದರು. ೪೦೦ ವರ್ಷಗಳ ಹಿಂದೆ  ಕವಿ ಕಬೀರ್ ವಾರಣಾಸಿ ಯಲ್ಲಿ ರಾಮನಂದ ಗುರು ಗಳ  ಶಿಷ್ಯ ರಾಗಿದ್ದು ಇಲ್ಲಿ ನೆನಸಬಹುದು.

ಬಸವಣ್ಣನವರ ಮತ್ತು ಸರ್ವಜ್ಞರ ವಚನಗಳ ಹಾಗೆ ಶರೀಫ ರ ಸಂಯೋಜನೆಗಳು ಸಾರ್ವತ್ರಿಕ ಮನವಿ ಪಡದಿದೆ.

೧೯೯೦ನಲ್ಲಿ ಶ್ರೀಯುತ ನಾಗಾಭರಣರು ಸಂತ ಶಿಶುನಾಳ ಶರೀಫ ಅನ್ನುವ ಚಲನಚಿತ್ರವನ್ನು ಮಾಡಿದ್ದಾರೆ. ಷರೀಫ್ ರ ಹಾಡುಗಳನ್ನು ಶ್ರೀ ಸಿ ಅಶ್ವಥ್ , ಶಿವಮೊಗ್ಗ ಸುಬ್ಬಣ್ಣ ಮತ್ತು ರಘು ದೀಕ್ಷಿತ್ ಮುಂತಾವರು ಹಾಡಿ  ಜನಪ್ರಿಯ ಮಾಡಿದ್ದಾರೆ.

ಅವರ ಜನ್ಮದಿನದವೇ ಶರೀಫ್ರರು, ೭/೩/೧೮೮೯ ತೀರಿಕೊಂಡರು. ಇವರ ಅಂತ್ಯಕ್ರಮಗಳು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಊರಿನ ಜನಗಳು ನೆರವೇರಿಸಿದರು.

ಇಂದಿಗೂ ಈ ಸಮಾಧಿ ಗೆ  ಎರಡು ಧರ್ಮದವರು ತಮ್ಮ ಗೌರವನ್ನು ಸಲ್ಲಿಸುತ್ತಾರೆ.

ಪ್ರಪಂಚದ ನಾನಾ ಕಡೆ ನಡೆಯುವ  ಜಾತಿ ಅಥವಾ ಧರ್ಮ ಯುದ್ಧ ಮಾಡುವರು ಹಾವೇರಿ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಇರುವ ಧಾರ್ಮಿಕ ಸಹಿಷ್ಣುತೆ  ನೋಡಿ ಕಲಿಯುದು ಇದೆ.

ಶರೀಫರ ಒಂದು ಪದ್ಯ

ಗುಡಿಯ ನೋಡಿರಣ್ಣಾ ದೇಹದ 

ಗುಡಿಯ ನೋಡಿರಣ್ಣಾ 
ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ

ಗುಡಿಯ ನೋಡಿರಣ್ಣಾ   

  ಸಾಗುತಿಹವು ದಿವಸ ಬಹುದಿನ

ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ   

ಇಂತಹ ಮಹಾನುಭಾವರು ಕನ್ನಡನಾಡಿನಲ್ಲಿ ಹುಟ್ಟಿ ನಮ್ಮ ಸಮಾಜದ  ಸುಧಾರಣೆಯನ್ನು ಸಾವಿರ ವರ್ಷದ ಹಿಂದೆಯೇ ಪ್ರಾರಂಭಿಸಿದರು. ಬಸವಣ್ಣ ನವರು  ಪ್ರಜಾಪ್ರಭುತ್ವದ  ಪರಿಕಲ್ಪನೆಯನ್ನು  ೧೨ ನೇ ಶತಮಾನದಲ್ಲೇ ಅಡಿಪಾಯ ಹಾಕಿದ್ದರು

ವಚನಗಾರರು ಮತ್ತು ಹರಿದಾಸರು   ಸರಳ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿ ಸಾಮಾನ್ಯ ಜನಗಳಿಗೆ ಅನೇಕ ಸಮಸ್ಯೆಗಳ ಬಗ್ಗೆ ಅರಿವು ಮಾಡಿಸಿದರು.   ಇದು ನಮ್ಮ ಭಾಗ್ಯ.

 ರಾಮಮೂರ್ತಿ, ಬೇಸಿಂಗ್ ಸ್ಟೋಕ್

 ಚಿತ್ರಗಳು-ಗೂಗಲ್ ಕೃಪೆ

                      ( ಮುಂದಿನ ವಾರಹೊಸ ಪ್ರಯೋಗ!)

 

4 thoughts on “ವಚನ, ದಾಸ ಮತ್ತು ಭಕ್ತಿ ಸಾಹಿತ್ಯದ ಪರಂಪರೆ- ಭಾಗ 2, ರಾಮಮೂರ್ತಿ

  1. ನೀ್ವು ಶ್ರಮ ಪಟ್ಟು ಓದಿ ವಚನ ಹಾಗೂ ದಾಸ ಸಾಹಿತ್ಯದ ಬಗ್ಗೆ ಬರೆಯದಿದ್ದರೆ, ನಾನು ಆ ಬಗ್ಗೆ ಮತ್ತೆ ಓದುತ್ತಿರಲಿಲ್ಲವೇನೋ. ಮತ್ತೆ ಮತ್ತೆ ಓದಿ ನಮ್ಮ ಸಾಹಿತ್ಯ ನಡೆದುಬಂದ ಹಾದಿಯನ್ನು ಪರಾಮರ್ಶಿಸಿ ನೋಡದಿದ್ದರೆ ಸಾಹಿತ್ಯದ ಬೇರುಗಳು ಜಾನಪದದಿಂದ ಶುರುವಾದ ಸುಂದರ ವಿಚಾರ ಅರಿವನ್ನು ತಟ್ಟುತ್ತಿರಲಿಲ್ಲ.ಅದಕ್ಕೆ ಅವಕಾಶ ಮಾಡಿಕೊಟ್ಟ ನಿಮಗೆ ನಾವೆಲ್ಲ ಆಭಾರಿಗಳು. ಹೀಗೇ ಬರೆಯುತ್ತಿರಿ.

    Like

  2. Again well researched article to match Part 1. Compliments to the author. We need to remind ourselves of our past, history and tradition from time to time, especially, if ind is Anivaasi. Shrivatsa Desai

    Like

  3. ಪ್ರಿಯ ರಾಮಮೂರ್ತಿ ಅವರೇ,
    ನಿಮ್ಮ ಎರಡೂ ವಚನ ಹಾಗು ದಾಸ ಸಾಹಿತ್ಯದ ಲೇಖನಗಳು ತುಂಬಾ ಚೆನ್ನಾಗಿವೆ . ಎಲ್ಲ ವಚನಕಾರರ ಹಾಗು ದಾಸರ ಬಗ್ಗೆ ಅಮೂಲ್ಯ ಮಾಹಿತಿಗಳೊಂದಿಗೆ ಬರೆದ ನಿಮ್ಮ ಲೇಖನಗಳಿಗೆ ಅಭಿನಂದನೆಗಳು.
    ಅರವಿಂದ ಕುಲ್ಕರ್ಣಿ

    Like

  4. ದಾಸ ಸಾಹಿತ್ಯದ ಸಂಕ್ಷಿಪ್ತ ಮಾಹಿತಿಗಾಗಿ
    ವಂದನೆಗಳು

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.