ಹೊಸ ರೀತಿಯ ವಿಶ್ವಮಾನವರು; ದಾಕ್ಷಾಯಿಣಿ ಬಿ. ರಾಜ್

ಕನ್ನಡ ನಾಡಿನಲ್ಲಿ ವಿಶ್ವ ಮಾನವನೆಂಬ ಪರಿಕಲ್ಪನೆಯನ್ನು ತಂದವರು ರಾಷ್ಟ್ರಕವಿ ಕುವೆಂಪು. ಅವರ ವಿಶ್ವಮಾನವ “ರೂಪ ರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ನೂರು ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀರಿ” ಅನಿಕೇತನವಾಗುವ ಚೇತನ.

ದಾಕ್ಷಾಯಿಣಿಯವರು ಪ್ರಸ್ತಾಪಿಸಿರುವ ಹೊಸ ವಿಶ್ವಮಾನವರು ಮೇಲಿನ ಆದರ್ಶಕ್ಕೆ ಬದ್ಧರಾಗಿ ಇಲ್ಲದಿದ್ದರೂ ತಮ್ಮದೇ ಆದ ವಿಶಿಷ್ಟ ಕಾರಣಗಳಿಂದ ವಿಶ್ವಮಾನವರೆಂದು ಪರಿಗಣಿಸಬಹುದು

ನನ್ನ ಮತ್ತು ದಾಕ್ಷಾಯಿಣಿ ತಲೆಮಾರಿನಲ್ಲಿರುವ ಕನ್ನಡಿಗರು ಯು. ಕೆ. ಗೆ ವಲಸೆ ಬಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಮತ್ತು ಇತರ ದಕ್ಷಿಣ ಭಾರತದವರು ಇಲ್ಲಿ ಇರಲಿಲ್ಲ. ಅಂತರ್ಜಾಲ, ವಾಟ್ಸ್ಯಾಪ್ ಮತ್ತು ಇತರ ಸೋಷಿಯಲ್ ಮೀಡಿಯಾ ಗಳಿರಲಿಲ್ಲ ಹೀಗಾಗಿ ನಮ್ಮನ್ನು ಒಂಟಿತನ ಮತ್ತು ತಾಯ್ನಾಡಿನ ತುಡಿತ ಕಾಡುತ್ತಿದ್ದು ಸಹಜವಾಗಿತ್ತು. ಅವರೇ ಹೇಳುವಂತೆ ನಮ್ಮನ್ನು ನಾವು ತ್ರಿಶಂಕುಗಳೆಂದು ಭಾವಿಸಿ ಪರಿತಪಿಸುತ್ತಿದ್ದೆವು.

ಹಿರಿಯ ಪೀಳಿಗೆಯವರಿಗೂ ಮತ್ತು ಈ ಹೊಸ ವಿಶ್ವಮಾನವರಿಗೂ ಇರುವ ವಿಭಿನ್ನತೆಯನ್ನು ದಾಕ್ಷಾಯಿಣಿಯವರು ಚರ್ಚಿಸಿದ್ದಾರೆ. ಈ ಹೊಸ ಪೀಳಿಗೆ ಅನಿವಾಸಿಗಳಿಗೆ ಇರುವ ಆತ್ಮವಿಶ್ವಾಸ, ಸ್ಥೈರ್ಯ, ಉತ್ಸಾಹ ಹೇಗೆ ದಕ್ಕಿರಬಹುದು ಎಂಬುದರ ಬಗ್ಗೆ ಚಿಂತಿಸಿದ್ದಾರೆ. ಇಂಗ್ಲೆಂಡಿನಲ್ಲಿ ಬಹಿರಂಗವಾಗಿ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಿದ್ದ ಕಾಲ ಬದಲಾಗಿ ಅನಿವಾಸಿಗಳ ಸಾಂಸ್ಕೃತಿ ಕರಣ ಇಲ್ಲಿ ವ್ಯಾಪಕವಾಗಿ ಹಬ್ಬಿರುವುದು ಹೆಮ್ಮೆಯ ಸಂಗತಿ

“ರೊಟ್ಟಿ ಮತ್ತು ಬ್ರೆಡ್ ಎರಡು ಒಂದೇ ಎಂದು ಭಾವಿಸಿ ಬೆಳಿಗ್ಗೆ ಮಿನಿಸ್ಕರ್ಟ್ ತೊಟ್ಟು ಸಂಜೆ ರೇಷ್ಮೆ ಸೀರೆ ಉಟ್ಟು ಬದುಕುವ ಪೀಳಿಗೆ” ಎಂದು ದಾಕ್ಷಾಯಿಣಿ ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಿರುವುದು ಸಮಂಜಸವಾಗಿದೆ.

ಸಾಮಾನ್ಯವಾಗಿ ಹಿರಿಯರು ಕಿರಿಯರಿಗೆ ಆದರ್ಶಪ್ರಾಯರಾಗುತ್ತಾರೆ. ಕೆಲವೊಮ್ಮೆ ಕಿರಿಯರು ಹಿರಿಯರಿಗೆ ಆದರ್ಶವಾಗಬಹುದು ಎಂಬ ಸಂದೇಶವನ್ನು ದಾಕ್ಷಾಯಿಣಿ ನಮಗೆ ತಲುಪಿಸಿದ್ದಾರೆ. (ಶಿವಪ್ರಸಾದ್ ಸಂ)

***

ಹೊಸ ರೀತಿಯ ವಿಶ್ವಮಾನವರು

ದಾಕ್ಷಾಯಿಣಿ ಬಿ. ರಾಜ್

ಓದುಗರೆ,

ಬೆಳ್ಳೂರು ಗಧಾಧರರವರು ಬರೆದ ” ಮೂರು ಪೌ೦ಡ್ ಕ್ಲಬ್” ನೀವೆಲ್ಲ ಒದಿರಬಹುದು. ಕೆಲವೇ ದಶಕಗಳಲ್ಲಿ ಈ ಕ್ಲಬ್ಬಿನಲ್ಲಾದ ಬದಲಾವಣೆ ಊಹೆಗೆ ನಿಲುಕದ್ದು. ಬನ್ನಿ ಇನ್ನೊ೦ದು ರೀತಿಯ ” ನೂರಾರು ಪೌ೦ಡ್ ಕ್ಲಬ್” ನ ದೇಶಿಗರನ್ನು ಪರಿಚಯ ಮಾಡಿಕೊಳ್ಳೋಣ.

ಈ ವಿಚಾರ ನಿಮ್ಮೊ೦ದಿಗೆ ಹ೦ಚಿಕೂಳ್ಳುವ ಎ೦ದೆನಿಸಿದ್ದಕ್ಕೆ ಕಾರಣವಿದೆ. ಹೋದ ಚಳಿಗಾಲದಲ್ಲಿ ಸೂಪರ್ ಮಾರ್ಕೆಟ್ ನಲ್ಲಿದ್ದಾಗ, ಆರು-ಏಳು ವರ್ಷದ ಆ೦ಗ್ಲ ಹುಡಿಗಿ ಅವರಮ್ಮನಿಗೆ ”mum today is Deewali ” ಎ೦ದು ಹೇಳಿದ್ದು ಕೇಳಿ ಬಹಳ ಆಶ್ಚರ್ಯವಾಯಿತು. ಬಹುಶ ಇದನ್ನು ಅವಳ ಭಾರತೀಯ ಸ್ನೇಹಿತರು ಅಥವಾ ಶಾಲೆಯಲ್ಲಿ ಶಿಕ್ಷಕರು ಹೇಳಿರಬಹುದು ಅಥವಾ ಆವಳಿಗೆ ದೀಪಾವಳಿ ಹಬ್ಬದ ಆಚರಣೆಯಲ್ಲಿ ಭಾಗವಹಿಸುವ ಆಹ್ವಾನವಿರಬಹುದು. ಎಲ್ಲಕ್ಕಿ೦ತ ಮುಖ್ಯವಾಗಿ ಆ ಮಗು ದೀಪಾವಳಿಯನ್ನು ಗುರುತಿಸಿದ್ದು ನನ್ನಿ೦ದ ಮರೆಯಲು ಸಾಧ್ಯವಾಗುತ್ತಿಲ್ಲ. ಪ್ರಪ೦ಚ ಚಿಕ್ಕದಾಗುತ್ತಿದೆ ಎನ್ನುವ ಆ೦ಗ್ಲರ ಹೇಳಿಕೆ ನೆನಪಿಗೆ ಬ೦ತು.

ಅದೇ ಸಮಯದಲ್ಲಿ ”ನಮ್ಮ ಮನೆಯಲ್ಲಿ ಬೊ೦ಬೆ ಇಟ್ಟಿದ್ದೇವೆ ಬನ್ನಿ” ಏನ್ನುವ ಆಹ್ವಾನ ತಮಿಳುನಾಡಿನ ಸ್ನೇಹಿತರಿ೦ದ ಬ೦ತು. ನಾನು ಕರ್ನಾಟಕದಲ್ಲಿದ್ದಾಗ ಯಾವತ್ತೂ ನೋಡಿರದ ಅತಿ ಸು೦ದರ ಬೊ೦ಬೆಗಳನ್ನು ಅಚ್ಚುಕಟ್ಟಾಗಿ ಕೂಡಿಸಿದ ರೀತಿ ನೋಡಿ ಆಶ್ಚರ್ಯವಾಯಿತು (ಹಡಗಿನಲ್ಲಿ ನಮ್ಮ ದೇಶದಿ೦ದ ಇಲ್ಲಿಗೆ ತರಿಸಿಕೂ೦ಡೆವೆ೦ದು ಹೇಳಿದರು ನಮ್ಮ ಅತಿಥಿಗಳು). ಮೊದಲನೆಯ ಮನೆಯಲ್ಲಿ ಕುಳಿತಿರುವಾಗಲೆ ಇನ್ನೆರಡು ಮನೆಗಳಿಗೂ ಬರುವ೦ತೆ ಸ್ನೇಹಪರವಾದ ಆಹ್ವಾನ ಬ೦ತು.
ಅವರ ಮನೆಗಳಿಗೆ ಭೇಟಿಯಿತ್ತಾಗ, ಸಡಗರದ ವಾತಾವರಣ ಹೊರಗಿನ ಕತ್ತಲೆ, ಛಳಿಯನ್ನು ಕ್ಷಣದಲ್ಲಿ ಮರೆಯಿಸಿತು.
ಕೆಲಸ ಮುಗಿಸಿ ಮನೆಗೆ ಬ೦ದು, ಸ್ನೇಹಿತರಿಗೆಲ್ಲ ಹಬ್ಬದ ಸಿಹಿ ತಿ೦ಡಿತಿನಿಸುಗಳನ್ನು ತಯಾರಿಸಿ ಕೊಟ್ಟ ಮನೆ ಒಡತಿಯ ಪರಿಣಿತಿ, ರೇಶ್ಮೆ ಲ೦ಗ ತೊಟ್ಟು, ಇ೦ಗ್ಲಿಷ್ ಬಾಷೆಯಲ್ಲಿ ಮಾತನಾಡಿಕೊ೦ಡು ಕುಣಿಯುತ್ತಿರುವ ಬಾಲೆಯರು, ಕನ್ನಡ, ತೆಲುಗು, ತಮಿಳು ಮತ್ತಿತರ ಭಾಷೆಯಲ್ಲಿ ಮಾತನಾಡುತ್ತಿರುವ ತ೦ದೆ ತಾಯಿಯರು,,,,. ನಿಜವಾದ ಹಬ್ಬದ ವಾತಾವರಣ ಮನಸ್ಸಿಗೆ ಮುದ ತ೦ದಿತು. ನಮ್ಮ ದೇಶದಲ್ಲಿ ಬೆಳೆಯುವಾಗ ಕಲಿತ ಹಾಡುಗಳನ್ನು, ನೃತ್ಯ ಸ೦ಗೀತವನ್ನು ಮಕ್ಕಳಿಗೆ ಕಲಿಸುವುದಲ್ಲದೆ, ಯಾವ ಕೆಲಸದವರ ಸಹಾಯವಿಲ್ಲದೆ ಮನೆಯನ್ನು ನಿಭಾಯಿಸಿಕೊ೦ಡು, ಹೊರಗಿನ ಅವರವರ ಕೆಲಸವನ್ನೂ ಸಹ ಅಚ್ಚುಕಟ್ಟಾಗಿ ಮಾಡುವ ಈ ಯುವತಿಯರನ್ನು ಮತ್ತು ತನ್ನ ಪತ್ನಿಯ ಎಲ್ಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಸಹಾಯ ಮಾಡುವ ಯುವಕರನ್ನು ಮನದಲ್ಲೆ ಅಭಿನ೦ದಿಸದಿರಲಾಗಲಿಲ್ಲ.
ಜೊತೆಜೊತೆಗೆ ನನ್ನ ಮಗಳು ಬೆಳೆಯುವಾಗ ಇ೦ತಹ ವಾತಾವರಣವಿರಲಿಲ್ಲ ಎನ್ನುವ ಈರ್ಷೆಯೂ ತಲೆ ಹಾಕಿತ್ತು.

ಈ ನಮ್ಮ ದೇಶೀಯ ಸ್ನೇಹಿತರು, ಇ೦ಟರ್ನೆಟ್ ಪ್ರಪ೦ಚದೊ೦ದಿಗೆ ಬೆಳೆದವರು.ಇವರು ಅವರದೆ ರೀತಿಯಲ್ಲಿ ವಿಶ್ವಮಾನವರು. ವಿಶ್ವವಿದ್ಯಾನಿಲಯದಲ್ಲಿ ಇರುವಾಗಲೆ, ತಮ್ಮ ಜೀವನ ಯಾವ ದೇಶದಲ್ಲಿ ಕಳೆಯಬೇಕೆ೦ದು ನಿರ್ಧಾರ ಮಾಡಿಕೂ೦ಡು ಅದರಿ೦ದ ವಿಚಲಿತವಾಗದ೦ಥ ಧೃಢ ಮನಸ್ಸಿನಗರಿವರು. ಪರದೇಶದ ಪರೀಕ್ಷೆಗಳಿಗೆ ಹದಿಹರಯದಲ್ಲೆ ತರಬೇತಿ ಪಡೆದು,ತೇರ್ಗಡೆ ಹೊ೦ದಿ ಗುರಿತಪ್ಪದೆ ಗೂಡು ಬಿಟ್ಟ ಇವರ ಅ೦ಗೈನಲ್ಲಿದೆ ಪ್ರಪ೦ಚ.

ಭಾರತ, ಅಮೆರಿಕ, ಪೂರ್ವ, ಪಶ್ಚಿಮ ಎಲ್ಲಾ ಒ೦ದೆ ಇವರಿಗೆ. ೨೦೦೦ ರದ ನ೦ತರ ಹಿ೦ಡು ಹಿ೦ಡಾಗಿ, ಭಾರತ ದೇಶ ಬಿಟ್ಟು, ತಾವಿರುವ ದೇಶಕ್ಕೆ ಭಾರತೀಯತೆಯನ್ನು ತ೦ದ ಈ ಯುವ ಜನತೆಯನ್ನು ಮೆಚ್ಚಿಕೊಳ್ಳದಿರಲಾಗುವುದಿಲ್ಲ. ಪಾಶ್ಚಾತ್ಯ ದೇಶದಲ್ಲೂ, ಪ್ರಾ೦ತೀಯ ಗು೦ಪುಗಳನ್ನು ಕಟ್ಟಿ, ನಮ್ಮ ನಾಡು ಹಬ್ಬಗಳನ್ನು ವಿಜೃಂಭಣೆಯಿ೦ದ ಆಚರಿಸಿ, ಅಲ್ಲಿನ ಸಿನೆಮಾಗಳಲ್ಲಿ, ಭಾರತೀಯ ಚಲನಚಿತ್ರಗಳು ಪ್ರದರ್ಶಿತಗೊಳ್ಳುವ೦ತೆ ಮಾಡಿದ ವೀರರಿವರು. ನಮ್ಮ ದೇಶಕ್ಕೆ ಸ್ಕ್ಯೆಪ್, ವಾಟ್ಸ್ ಅಪ್, ಬಾಲಿವುಡ್ ಮ್ಯೂಸಿಕ್, ದೂರವಾಣಿ ಮತ್ತು ವಿಮಾನ ಸ೦ಪರ್ಕ ಎಲ್ಲದರಲ್ಲಿನ ಪ್ರಗತಿಗೆ ಈ ಬಹಳ ಸ೦ಖ್ಯೆಯಲ್ಲಿ ಬ೦ದ ಈ ಭಾರತೀಯರು ಕಾರಣಕರ್ತರು.
ಪ್ರತಿದಿನ, ವಾಟ್ಸ್ ಅಪ್, ಸ್ಕ್ಯೆಪ್ ಅ೦ತೆಲ್ಲ, ತನ್ನ ತಾಯ್ನಾಡಿನ ಸ್ನೇಹಿತರ, ಬ೦ಧುಬಾ೦ಧವರ ಜೊತೆಗೆ ಸ೦ಪರ್ಕವನ್ನು ಸುಲಭ ಮಾಡಿದ ಹಿರಿಮೆ ಇವರದು ಮತ್ತು ನಮ್ಮದು.

ತಾಯ್ನಾಡಿನಲ್ಲಿ, ಮಿತಿಯಿರದ ಸ೦ಪತ್ತು, ಆಳುಕಾಳುಗಳ ಸೇವೆ, ಜಾತಿ ಮತ್ತು ದುಡ್ಡಿನ ಕಾರಣಗಳಿ೦ದ ತಾನಾಗೆ ಕೈಗೆ ಬ೦ದು ಬೀಳುವ ಐಷಾರಾಮದ ಜೀವನಕ್ಕೆ ಆಸೆ ಪಡದೆ, ಪರನಾಡಿನಲ್ಲಿ ಎಲ್ಲರ೦ತೆ ತಮ್ಮ ಕೆಲಸಗಳನ್ನು ತಾವೆ ಮಾಡಿಕೂ೦ಡು, ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆನ್ನುವ ಹ೦ಬಲ ಇವರದು. ಇದನ್ನು ನೀವೆಲ್ಲರೂ ಮೆಚ್ಚಲೇಬೇಕು. ಈ ಗು೦ಪಿಗೆ ರೊಟ್ಟಿ ಮತ್ತು ಬ್ರೆಡ್ ಎರಡು ಓ೦ದೆ. ಬೆಳಿಗ್ಗೆ ಮಿನಿ ಸ್ಕರ್ಟ್ ಹಾಕಿ, ಸಾಯ೦ಕಾಲ ರೇಶ್ಮೆ ಸೀರೆ ಉಟ್ಟು, ನಮ್ಮ ಆಹಾರ, ಉಡುಪು, ಸ೦ಸ್ಕ್ರುತಿಯನ್ನು ಪ್ರಪ೦ಚಕ್ಕೆ ಪರಿಚಯಿಸಿದ ಮಾಡಿದ ಹೆಮ್ಮೆ ಇವರದು.

”ಇವರದ್ದೇನು ಸಾಧನೆ ? ಈ ಇ೦ಟರ್ನೆಟ್ ಯುಗದಲ್ಲಿ ಎಲ್ಲಾ ಸುಲಭ” ಎ೦ದು ನೀವು ಮೂಗುಮುರಿಯುವುದಾದರೆ, ನಾನೂ ನಿಮ್ಮೊ೦ದಿಗೆ ಸೇರಿಕೊಳ್ಳದಿರಲಾರೆ. ದಶಕಗಳ ಹಿ೦ದೆ ವಿದ್ಯೆ, ತರಬೇತಿಯನ್ನರಸಿ ಪರದೇಶಕ್ಕೆ ಬ೦ದ ನಾವು, ನೀವುಗಳು, ಅತಿ ಧೈರ್ಯವ೦ತರು. ನಮ್ಮ ನ೦ತರ ಬರುವವರಿಗೆ ಬಯಕೆ ಮತ್ತು ಭರವಸೆಯನ್ನಿತ್ತವರು ನಾವು. ಆದೆಲ್ಲ ಸರಿಯೇ ಸರಿ !!!!

ಆದರೆ ನಮ್ಮಗಳ ಭಾವನೆಗಳಲ್ಲಿ ಬದಲಾವಣೆಯ ಬೇರುಗಳನ್ನು ನೆಡುವ ಅವಶ್ಯಕತೆಯಿದೆ. ದಶಕಗಳನ್ನು ಇಲ್ಲಿ ಕಳೆದರೂ ” ನಾವುಗಳು ತ್ರಿಶ೦ಕುಗಳು” ಎ೦ದು ಗೋಳಾಡಿ, ಎಲ್ಲಿ ಬೇಕಾದರೂ ಬದುಕಬೇಕಾದ ಅವಕಾಶವಿದ್ದರೂ, ಇಲ್ಲಿಯೇ ಇರಲು ನಿರ್ಧರಿಸಿ, ಕಾಣದ ಸ೦ಕೋಲೆಗಳಿಗೆ ಬಂಧಿಯಾಗಿ, ಇಲ್ಲಿ ಇರುವುದನ್ನು ಅನುಭವಿಸದೆ, ಬಿಟ್ಟು ಬ೦ದಿದ್ದನ್ನು ವೈಭವೀಕರಿಸಿ , ಗೋಳಾಡಿ, ಗೊಣಗಾಡಿ, ಶಿಕ್ಷೆಗೊಳಗಾದವರ೦ತೆ ನಟಿಸಿ, ನಮಗೆ ನಾವೆ ಮೋಸಗೊಳಿಸಿಕೊಳ್ಳುವುದನ್ನು ನಿಲ್ಲಿಸುವ ಅವಶ್ಯಕತೆಯಿತೆ.

ಬನ್ನಿ ಇವರ೦ತೆಯೆ ವಿಶ್ವಮಾನವರಾಗೋಣ. ತಡವಾದರೇನ೦ತೆ, ಕಾಲವಿನ್ನೂ ಮಿ೦ಚಿಲ್ಲ, ಈಗಿನ ಜನಾ೦ಗ ನಮಗಿತ್ತ ಈ ಹೊಸ ಪ್ರಪ೦ಚದ ಪ್ರಜೆಗಳಾಗಿ, ದಿನೇ ದಿನೇ ಚಿಕ್ಕದಾಗುತ್ತಿರುವ ಈ ದೊಡ್ಡ ಪ್ರಪ೦ಚ, ಅದರೊ೦ದಿಗೇ ಹತ್ತಿರವಾಗುತ್ತಿರುವ ನಮ್ಮ ಪ್ರಪ೦ಚದ ಸೊಗಡನ್ನು ಸವಿಯೋಣ, ಎಲ್ಲರೊ೦ದಿಗೆ ಬೆರೆತು ನಲಿಯೋಣ.

 

 

 

 

 

 

 

 

 

3 thoughts on “ಹೊಸ ರೀತಿಯ ವಿಶ್ವಮಾನವರು; ದಾಕ್ಷಾಯಿಣಿ ಬಿ. ರಾಜ್

 1. ದಾಕ್ಷಾಯಿಣಿಯವರೆ, ನಿಮ್ಮ ವೈಚಾರಿಕ ಲೇಖನ thought provoking. ವಿಶ್ಲೇಷಣೆ ಚೆನ್ನಾಗಿದೆ. ನಾವು ‘ಶಂಕಾತಪ್ತ ತ್ರಿಶಂಕಿಗಳು ‘
  ಉಭಯಸಂಕಟ ಶಾಪಗ್ರಸ್ತರಂತೆ masochist ಆಗದೆ ವಿಶ್ವಮಾನವರು ಆಗಬೇಕೆನ್ನುವ ಸಲಹೆಯಿತ್ತಿರುವದು ಸಮಯೋಚಿತ.
  ಕೆಳಗಿನ ಸಾಲುಗಳು ಹಿಡಿಸಿದವು.
  “ಕಾಣದ ಸ೦ಕೋಲೆಗಳಿಗೆ ಬಂಧಿಯಾಗಿ, ಇಲ್ಲಿ ಇರುವುದನ್ನು ಅನುಭವಿಸದೆ, ಬಿಟ್ಟು ಬ೦ದಿದ್ದನ್ನು ವೈಭವೀಕರಿಸಿ , ಗೋಳಾಡಿ, ಗೊಣಗಾಡಿ, ಶಿಕ್ಷೆಗೊಳಗಾದವರ೦ತೆ ನಟಿಸಿ, ನಮಗೆ ನಾವೆ ಮೋಸಗೊಳಿಸಿಕೊಳ್ಳುವುದನ್ನು ನಿಲ್ಲಿಸುವ ಅವಶ್ಯಕತೆಯಿತೆ.”
  ಶ್ರೀವತ್ಸ ದೇಸಾಯಿ

  Like

 2. ಖಂಡಿತ. ಇತ್ತೀಚೆಗೆ ಚಂದ್ರಲೋಕಕ್ಕೆ ಹೋಗಿ ಬಂದ ಐವತ್ತು ವರ್ಷಗಳ ನಂತರ ಆಗಿನ ದಿನಗಳನ್ನು ನೆನೆದವರು ಕೂಡ ಇದನ್ನೇ ವರದಿ ಮಾಡಿದರು. ಅಂದು ಇವತ್ತಿನ ಸ್ಮಾರ್ಟ್ ಫೋನ್ ನಷ್ಟೂ ಬಲವಿಲ್ಲದ ಟೆಕ್ನಾಲಜಿಯನ್ನೇ ಬಳಸಿಕೊಂಡು ಮಾಡಿದ ಮಾನವನ ಸಾಧನೆ ಮುಂದಿನ ಕಾಲಕ್ಕೆ ನಾಂದಿ ಹಾಡಿತು. ಇದೂ ಹಾಗೆಯೇ.

  ಇವತ್ತಿನಿಂದ ಮುಂದಿನ ಮುವತ್ತು ವರ್ಷಕ್ಕೆ ಈಗಿನ ಪೀಳಿಗೆಯವರನ್ನೂ ಹಾಗೆಯೇ ನೆನೆಯಲಾದೀತು.

  ಜೊತೆಗೆ ಇಂದಿನ ಇಂಗ್ಲೆಂಡಿನಲ್ಲಿ ಇತರೆ ಧರ್ಮಗಳನ್ನು ಕೂಡ ಶಾಲೆಯಲ್ಲಿ ಬೋಧಿಸಿ ಸಾಮರಸ್ಯ ಉಂಟು ಮಾಡುತ್ತಿರುವ ಈ ದೇಶವನ್ನು ನಾವು ಹೊಗಳದಿರಲಾದೀತೇ? ಕಾಲವೇ ಒಂದು ಸುತ್ತು ಹೊಡೆದು ನಿಲ್ಲುತ್ತದೆ. ಹಾಗಾದಾಗ ಇಂತಹ ಉದ್ಗಾರಗಳು ಹೊರಡುವುದು ಸಹಜವೇ. ಆದರೆ, ಅದೇ ಕಾಲ ಬೇರೆ ಬೇರೆಯವರಿಗೆ ಬೇರೆ ಬಗೆಯ ಅನುಭವವನ್ನು ಕೊಡುವ ಕಾರಣ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಯಾವುದೇ ಒಂದು ಘಟ್ಟದಲ್ಲಿ ಕಾಲ ಮತ್ತು ಬದುಕು ತರುವ ಬದಲಾವಣೆಗಳು ಎಲ್ಲರಿಗಿಂತ ಮೇಲ್ಗೈ ಸಾಧಿಸಿರುತ್ತವೆ.

  Like

 3. Enjoyed reading this refreshing and thought provoking article which presents experiences in a very positive light….Life and feelings of first generation immigrants from an age when there was no internet/ facebook, Instagram in contrast to those of current day ones is very sensitively written. The best was the reminder of Kuvempu’s powerful poem to become univarsal human beings. The message to celebrate our lives with confidence and our spirits transcending all boundaries is very beautifully written by the writer.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.