ನಮ್ಮ ತಾಯಿ ಮನೆ

ಅನಿವಾಸಿ ಜಾಲ ಜಗುಲಿಯಲ್ಲಿ ಹಿಂದೆ ಹಲವಾರು ಹಾಸ್ಯ ಮತ್ತು ಲಘು ಬರಹಗಳನ್ನು ಕೊಟ್ಟು ನಮ್ಮನ್ನು ಮನೋರಂಜಿಸಿದ ಡಾ. ವತ್ಸಲಾ ರಾಮಮೂರ್ತಿ ಅವರು ಈಗ ಒಂದು ಆತ್ಮೀಯ ಹೃದಯಸ್ಪರ್ಶಿ ಕವನವನ್ನು ನೀಡಿದ್ದಾರೆ. ಹೊಸತು ಹಳೆಯದನ್ನು ಕಬಳಿಸಿದಾಗ ಅಲ್ಲಿ ಉಂಟಾಗುವ ಸಂಘರ್ಷ ಮತ್ತು ಯಾತನೆ ಈ ಕವನದಲ್ಲಿ ಅಡಗಿದೆ. ಹಳೆ ಸವಿನೆನಪುಗಳು ಕೆರಳಿ ಈ ಆತ್ಮೀಯ ಕವನ ರೂಪುಗೊಂಡಿರಬಹುದು. ಕವನದ ಹಿನ್ನೆಲೆಯನ್ನು ಮತ್ತು ಹಳೆ ನೆನಪುಗಳನ್ನು ಕವಿಯಿತ್ರಿಯಿಂದಲೇ ಕೇಳೋಣ ಬನ್ನಿ

 

ನಮ್ಮ ತಾಯಿ ಮನೆ

ಡಾ. ವತ್ಸಲಾ ರಾಮಮೂರ್ತಿ

ಒಂದು ದಿನ ಸಂಜೆ ವಾತಾವರಣ ತುಂಬ ಚೆನ್ನಾಗಿ ಇತ್ತು. ಹಿತಕರವಾದ ಗಾಳಿ ಲ್ಯಾವೆಂಡರ್ ಸುವಾಸನೆಯನ್ನು ಹೊತ್ತುತರುತಿತ್ತು. ಆಕಾಶದಲ್ಲಿ ಸೂರ್ಯ ಮುಳುಗುತ್ತಿದ್ದ . ಕೆಂಪು ಹಳದಿ ಹಸಿರು ಬಣ್ಣದ ಓಕುಳಿ ಆಡುತ್ತಿದ್ದ
ಚಂದಾಮಾಮ ಬೆಳ್ಳಿ ತಟ್ಟೆಯಂತೆ ಹೊಳೆಯುತ್ತ ಮೇಲೇರುತ್ತಿದ್ದ. ಒಂದು ಕಡೆ ಸೂರ್ಯ ಮುಳುಗುತ್ತಿದ್ದ ಮಾತ್ತೊಂದು ಕಡೆ ಚಂದ್ರ ಮೇಲೇರುತ್ತಿದ್ದ .ಸುತ್ತಲೂ ಬೆಟ್ಟಗಳ ಸಾಲು , ಅದರಮೇಲೆ ತೇಲಾಡುವ ಬಿಳಿ ಕಪ್ಪು ಮೋಡಗಳು ನಾನಾ ತರಹದ ಆಕಾರಗಳ ವೇಷ ತೊಟ್ಟ ವನಿತೆಯರಂತೆ ಮೆರದಾಡುತ್ತಿದ್ದವು. ನಕ್ಷತ್ರಗಳು ಮಿನುಗು ದೀಪದಂತೆ ಬಾನಿನಲ್ಲಿ ಹೊಳೆಯುತ್ತಿತ್ತು. ಪಕ್ಷಿಗಳು ಚಿಲಿ ಪಿಲಿ ಗುಟ್ಟುತ್ತಾ ಮರಿಗಳನ್ನು ಗೂಡಿಗೆ ಕರೆಯುತ್ತಿದ್ದವು. ಸುಂದರವಾದ ಪರಿಸರವನ್ನು ಆಸ್ವಾದಿಸುತ್ತ ಕುಳಿತ್ತಿದ್ದೆ. ಎಲ್ಲಿಂದಲೋ ನನ್ನ ಮೊಮ್ಮಕ್ಕಳಾದ ಅನೀಕ , ಅನ್ಯ ಓಡಿ ಬಂದರು. ಅಜ್ಜಿ!ಅಜ್ಜಿ! ನೀನು ಹುಡುಗಿಯಾಗಿದ್ದಾಗ ನಿನ್ನ ಮನೆ ಹೇಗಿತ್ತು? ಏನೇನು ನಡಿಯುತ್ತಿತ್ತು ಅಂತ ಕೇಳಿದರು. ನಾನು ಅಯ್ಯೋ ಮಕ್ಕಳೇ ಈ ಅನಿವಾಸಿಗೆ ೪೫ ವರುಷಗಳ ಹಿಂದೆ ನಡೆದದ್ದೆಲ್ಲಾ ಮರೆತುಹೋಗಿದೆ ಹೋಗ್ರೆ ! ಹೋಗ್ರೆ ! ಅಜ್ಜಿನ ಕಾಡಬೇಡಿ ಅಂದೆ. ಅವರು ಹಾಗೆ ಅಂದ ಮಾತ್ರಕ್ಕೆ ಬಿಡುತ್ತಾರೆಯೇ ?
ನೆನೆಪಿನ ಸುರಳಿ ಬಿಚ್ಚಿತ್ತು. ಅದೇ ಈ ಪದ್ಯ

 

ಫೋಟೊ  ಕೃಪೆ ಗೂಗಲ್

 

 

 

ನಮ್ಮ ತಾಯಿ ಮನೆ

ಬದಲಾಗಿದೆ ನನ್ನ ತಾಯಿಮನೆ, ಗಂಟೆನಾದ ಕೇಳುತ್ತಿಲ್ಲ
ದೇವರ ಮನೆಯಲ್ಲಿ ಮುಂಜಾನೆಯ ವೇದ ಮಂತ್ರ ಘೋಷವಿಲ್ಲಾ
ಬೆಳಗು ಸಂಜೆಯ ಹಕ್ಕಿಗಳಿಂಚರವಿಲ್ಲ
ಕೇಳುತಿದೆ ಕರ್ಕಶ ಸಿನಿಮಾ ಹಾಡು ಟಿ.ವಿ. ಯಲ್ಲೆಲ್ಲಾ

ಬಾವಿ ಕಟ್ಟೆ ಹಗ್ಗ ಕೊಡಗಳಿದ್ದ ಹಿತ್ತಲು
ಈಗ ಸಿಟ್ ಔಟು
ಹಳೆಮನೆಗಳ ಕೆಡವಿ ಕಟ್ಟಿದ್ದಾರೆ
ಸುತ್ತ ಹೊಸ ಲೇ ಔಟು !

ಕಡಪಕಲ್ಲಿನ ಹರಟೆ ಕಟ್ಟೆ ಈಗಿಲ್ಲ
ಅಟ್ಟದಲ್ಲಿ ಇಲಿಮರಿಗಳ ಸದ್ದಿಲ್ಲ
ಅಕ್ಕಿ ಭತ್ತ ಕಾಳುಗಳ ನೆಲಮಾಳಿಗೆ ಇಲ್ಲ .
ಕಟ್ಟಿಗೆ ಒಲೆಯಲ್ಲಿ ಹೋರಾಡುವ ಅಮ್ಮನಿಲ್ಲ.

ಈಗ ಬಂದಿದೆ;
ದೊಡ್ಡ ದೊಡ್ಡ ಹೊಳೆಯುವ ಊಟದ ಟೇಬಲುಗಳು
ಚಿತ್ರ ವಿಚಿತ್ರ ಪಿಂಗಾಣಿ ತಟ್ಟೆ ಲೋಟಗಳು
ಮಾಯಾವಾಗಿದೆ ನಮ್ಮೂರ ಸಂತೆ ಚಾಪೆಗಳು
ತುಂಬಿವೆ, ಬುಟ್ಟಿ ತುಂಬ ಕೀವಿ ಚೆರ್ರಿ ಹಣ್ಣುಗಳು

ಉಪಹಾರಕ್ಕೆ ರಾಗಿರೊಟ್ಟಿ ಈರುಳ್ಳಿ ಚಟ್ನಿ ಗಳಿಲ್ಲ
ಮಕ್ಕಳಿವೆ ಕೈತುತ್ತು ನೀಡುವವರು ಯಾರೂ ಇಲ್ಲ
ಶ್ವಾನಗಳೇ ನಮ್ಮ ಪ್ರೀತಿಯ ಕುಸುಗಳಾಗಿವೆಯಲ್ಲ
ಉಳಿದಿರುವುದು ಬರಿ ನೆನಪುಗಳೇ ಎಲ್ಲಾ

11 thoughts on “ನಮ್ಮ ತಾಯಿ ಮನೆ

 1. Vathsala avare,
  Lively and lovely poem. You have got a knack for punch. Enjoyed it very much. Please share more!
  Vinathe Sharma

  Like

 2. ನಮ್ಮ ಹಳ್ಳಯ ಮನೆಯಲ್ಲಿ ಇದೆಲ್ಲ ಇನ್ನೂ ಇದೆ. ನಮ್ಮೂರು ನೆನಪಾಯಿತು. ಅದ್ಭುತವಾಗಿ ಬರೆದಿದ್ದೀರ.

  Like

 3. ತುಂಬಾ ಸುಂದರ ನೆನಪುಗಳ ಹಿಂಡು, ಅವುಗಳ ಮೆಲುಕು ವತ್ಸಲಾ ಅವರೇ.ಆದರೆ ಒಂದು ಮಾತು ಅಷ್ಟೇ ನಿಜ- ಬದಲಾವಣೆ ಆಗಿದ್ದಕ್ಕೇ ನಮಗೆ ಆ ದಿನಗಳು ಅಮೂಲ್ಯ, ಸುಂದರ ಅನ್ನಿಸೋದು.ಹಾಗೇ ಇದ್ದಿದ್ದರೆ ಅವುಗಳ ಬೆಲೆನೇ ಗೊತ್ತಾಗ್ತಿರಲಿಲ್ಲವೋ ಏನೋ.ಯಾವಾಗಲೂ ನೆನಪುಗಳಲ್ಲಿ ಅನುಭವದ ಉತ್ಕಟತೆ ಹೆಚ್ಚು ಎಂಬನಿಸಿಕೆ.ಬಾರದ ದಿನಗಳ ಹಂಬಲಿಕೆನೂ ಹೆಚ್ಚು.ಮತ್ತೆ ಮತ್ತೆ ಸಿಗುವ ಸಾಧ್ಯತೆ ಇದ್ರೆ ಆಸೆಯ ತೀವ್ರತೆ ನೂ ಕಡಿಮೆ.ಅದಕ್ಕೇ ಅಲ್ವಾ ನೆನಪು ಉತ್ತಮ, ಅಪರೂಪದ ಜೊತೆಗಾರ, ನಮ್ಮನೆರಳು ಅದು. ಅಂತೆಯೇ ಬದಲಾವಣೆ ಜೀವನದ ನಿಯಮ, ಅವಿಭಾಜ್ಯ ಅಂಗ.ಸುಂದರ ನೆನಪುಗಳು ,ನಮ್ಮನ್ನೂ ಆ ದಿನಗಳಿಗೆ ಕೊಂಡೊಯ್ದು ನೆನಪುಗಳಲ್ಲಿ ತೇಲಿಸಿದ್ವು.ಧನ್ಯವಾದಗಳೊಂದಿಗೆ ಅಭಿನಂದನೆಗಳು ವತ್ಸಲಾ ಅವರೇ ‌
  ಸರೋಜಿನಿ ಪಡಸಲಗಿ

  Like

 4. ‘ಎಲ್ಲರ ಮನೆಯ ದೋಸೆಗೂ ತೂತೇ‘ ಅಂದಂತೆ, ನಮ್ಮ ಪೀಳಿಗೆಯವರ ಎಲ್ಲರ ಮನೆಯ ಹಾಡುಇದು!
  ಚೆನ್ನಾಗಿ ವರ್ಣಿಸಿದ್ದೀರಿ, ವತ್ಸಲಾ ಅವರೆ. ಆಗ ಹೇಗಿತ್ತು ಎಂದು ಕೇಳುವ ಕುತೂಹಲವಾದರೂ ಇದೆಯಲ್, ಮಕ್ಕಳಿಗೆ, ಅದೂ ಸಂತೋಷದ ವಿಷಯವೇ!
  ಉಳಿದಿರುವುದು ಬರಿ ನೆನಪುಗಳೇ ಎಲ್ಲಾ! Same here!

  Like

 5. Oh ! how sweet this poem is ! Some of us carry such wonderful and precious memories of environmentally friendly beautiful Karnataka … the love and warmth of its simple people, their sustainable lifestyles connecting with nature….sunshine everyday, flowing , rivers and amazing temples…..yes we all miss this grand civilisation ..

  Like

 6. ಈಗ ನಿಮ್ಮಟರ್ನ್. ನಿಮ್ಮಮೊಮ್ಮಗಳಿಗೆ ರೊಟ್ಟಿ ಮಾಡಿಕೊಡಿ ಮತ್ತು ಕೈತುತ್ತು ಹಾಕಿ.
  ಆಗ ನೀವು ಹೇಗೆ ಬೆಳದರಿ ಅನ್ನವುದು ಜ್ಞಾಪಕ ಬರುತ್ತೆ
  ನಮ್ಮ ಮನೆಯಲ್ಲಿ ಈ ಪದ್ಧತಿ ಇದೆ

  Like

 7. ಉಪಹಾರಕ್ಕೆ ರಾಗಿರೊಟ್ಟಿ ಈರುಳ್ಳಿ ಚಟ್ನಿ ಗಳಿಲ್ಲ
  ಮಕ್ಕಳಿವೆ ಕೈತುತ್ತು ನೀಡುವವರು ಯಾರೂ ಇಲ್ಲ
  ಶ್ವಾನಗಳೇ ನಮ್ಮ ಪ್ರೀತಿಯ ಕುಸುಗಳಾಗಿವೆಯಲ್ಲ
  ಉಳಿದಿರುವುದು ಬರಿ ನೆನಪುಗಳೇ ಎಲ್ಲಾ

  ಈಗ ನಿಮ್ಮಟರ್ನ್. ನಿಮ್ಮಮೊಮ್ಮಗಳಿಗೆ ರೊಟ್ಟಿ ಮಾಡಿಕೊಡಿ ಮತ್ತು ಕೈತುತ್ತು ಹಾಕಿ.
  ಆಗ ನೀವು ಹೇಗೆ ಬೆಳದರಿ ಅನ್ನವುದು ಜ್ಞಾಪಕ ಬರುತ್ತೆ
  ನಮ್ಮ ಮನೆಯಲ್ಲಿ ಈ ಪದ್ಧತಿ ಇದೆ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.