
ನಲ್ಲನ ಪ್ರೀತಿಯ ‘ಹನಿ ಹನಿ’ ಗಳಲ್ಲಿ ಕಳೆದುಹೋಗಿರುವ ಕವಿಯತ್ರಿ, ಬದುಕಿನ ಪಯಣದ ಮುಂದಿನ ಹೆಜ್ಜೆಗಳಿಗೆ ತನ್ನತನದ ಚಪ್ಪಲಿಯ ‘ಹುಡುಕಾಟ’ ದಲ್ಲಿ ಗಂಭೀರವಾಗಿದ್ದಾರೆ.
.
ಹನಿ ಹನಿ.. .
ನಿನ್ನ ಕಣ್ಣುಗಳ ಬಗ್ಗೆ ಸಿಕ್ಕಾಪಟ್ಟೆ ಹಮ್ಮು ನಿನಗೆ
ಅವುಗಳ ಗುಂಗು ನನಗೆ,
ಅಷ್ಟು ನಂಬಬೇಡ ಅವನ್ನು
ನಿನ್ನ ಮನಸ್ಸನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸುತ್ತಿವೆ
ನೀನು ನನಗೀಗ ಇನ್ನೂ ನಿಚ್ಚಳ
– ೨-
ಎಲ್ಲಿ ಹೆಚ್ಚು ಎಲ್ಲಿ ಕಡಿಮೆ?
ಪ್ರೀತಿಯ ಈ ಉನ್ಮಾದದಲ್ಲಿ
ನೀ ಕೇಳುತ್ತೀಯ?
ನನ್ನ ಪಾಲು ಕೊಡು ಎಂದು..
ಹಿಸ್ಸೆ ಮಾಡುವ ಮನಸು ನನಗೂ ಇಲ್ಲ
-೩-
ನೀ ಹೊರಟುಹೋದ ನಂತರ
ಹಾಸಿಗೆಯ ಮಡತೆಗಳನ್ನು ಎಣಿಸುತ್ತ ಕೂರುತ್ತೇನೆ
ಲೆಕ್ಕ ಮುಗಿಯುವಷ್ಟರಲ್ಲಿ ಮತ್ತೆ ಸಂಜೆ
ಮತ್ತೆ ನೀನು,
-೪-
ಈಜು ಹೇಳಿಕೊಡು ನನಗೆ,
ನಿನ್ನ ಪ್ರೀತಿಯಲ್ಲಿ ಮುಳುಗಿ
ಉಸಿರುಗಟ್ಟಿ ಸಾಯುವ ಮುನ್ನ ..
-೫-
ನೀ ಮದಿರೆಯಂಥವನು
ನಶೆಯಾಗುತ್ತಿದ್ದಿ ನನ್ನ ಮನಿಷೆಗಳಿಗೆ
ಸ್ವಲ್ಪ ಎಂದು ಶುರುವಾದವನು ಚೂರು ಚೂರೆ ರಂಗೇರುತ್ತಿದ್ದಿ
ನೀ ನನಗೆ ಅಭ್ಯಾಸ ಆಗುತ್ತಿದ್ದಿ,
ಚಟವಾಗದಿರು ದೊರೆ, ನಾ ಈ ಹೊರಜಗತ್ತಿಗೂ ಮುಖ ತೋರಿಸಬೇಕು ಅಪರೂಪಕ್ಕೊಮ್ಮೆ.
ಹುಡುಕಾಟ
ಸಿಟ್ಟು ಬಂದಿತ್ತು
ಅದ್ಯಾರದೋ ಮೇಲೆ
ಕೂಗುತ್ತಿದ್ದೆ ಚೀರುತ್ತಿದ್ದೆ
ಅದೇನೋ ಸಿಟ್ಟು ಅದೇನೋ ಅಸಹನೆ
ನನ್ನ ಆರ್ಭಟ ,ಆಟಾಟೋಪ ನೋಡಿ
ಅಪ್ಪ ಹೇಳಿದರೊಂದು ಬುದ್ಧಿ ಮಾತ,
ಮಗಳೇ
ಅವರಿವರು ನಿನಗಿಷ್ಟ ಬಂದಂತೆ ಇರಬೇಕೆಂದರೆ,
ಅದು ಆಗದ ಮಾತು
ಏನಿವೆಯೋ ಅವರ ಕಷ್ಟಗಳು ,
ಹಂಚಿಕೊಳ್ಳಲಾಗದ ದುಃಖ ದುಮ್ಮಾನಗಳು
ಸಾಧ್ಯವಾದರೆ ಯೋಚಿಸು ,
ಅವರ ಸ್ಥಾನದಲ್ಲಿ ನಿನ್ನರಿಸಿ ನೋಡು ,
ಒಮ್ಮೆ ಅವರ ಚಪ್ಪಲಿಯಲ್ಲಿ ಕಾಲಿಟ್ಟು ನಡೆ
ಅವರ ಹಾದಿಯ ಕಲ್ಲು ಮುಳ್ಳು ನಿನಗೂ ಕಂಡಾವು ,
ಅವರ ಅಸಮಾಧಾನಕ್ಕೆ ಕಾರಣ ಹೊಳೆದೀತು,
ಓಹ್ ಹೌದಲ್ಲ ,
ಆ ಗಳಿಗೆಯಿಂದ ನಾ ಹಾಗೆ ಮಾಡತೊಡಗಿದೆ
ನನಗೆ ನೋವಾದಾಗೆಲ್ಲ ,
ನೋಯಿಸಿದವರ ಮನಸ್ಥಿತಿಯ ಬಗ್ಗೆ ಆಲೋಚಿಸಿದೆ
ಸಿಟ್ಟಿನ ಬದಲು ನಿಟ್ಟುಸಿರು
ಅಸಮಾಧಾನ ಅನುಕಂಪವಾಗಿ
ಚಿಂತೆ ಚಿಂತನೆಯಾಯಿತು
ಈಗ ನನಗೆ ಮತ್ತೆ ಮರಳಬೇಕಿದೆ
ಅವರಿವರ ಚಪ್ಪಲಿಯಲ್ಲಿ ಕಾಲು ತೂರಿಸಿ
ನೋವು ನುಂಗುತ್ತ
ಅದೆಷ್ಟು ದೂರ ಬಂದಿದ್ದೇನೆಂದರೆ
ನನಗೀಗ ನನ್ನ ಚಪ್ಪಲಿ ಸಿಗುತ್ತಲೇ ಇಲ್ಲ ,
ಅದೆಲ್ಲಿ ಬಿಟ್ಟೆ
ಮರೆತೇ ಹೋಗಿದೆ …
ಹುಡುಕುತ್ತಿರುವೆ
ಹುಡುಕುತ್ತಲೇ ಇದ್ದೇನೆ
ಸುಂದರ ಭಾವನೆಗಳ ಬಿಂಬಿಕೆ. ಕನಸು, ಕನಲಿಕೆಗಳು ನೈಜವಾಗಿಯೇ ಅಚ್ಚಾದಂತಿವೆ. ನಿಮ್ಮ ಬರವಣಿಗೆಯ ಶೈಲಿ ಮನ ಸೆಳೆಯಿತು.
LikeLike
Very Nice poems Amitha !
Loved the first one ! very nice lines. Share more and more…
I too liked the following lines
`ನೀ ಮದಿರೆಯಂಥವನು
ನಶೆಯಾಗುತ್ತಿದ್ದಿ ನನ್ನ ಮನಿಷೆಗಳಿಗೆ
ಸ್ವಲ್ಪ ಎಂದು ಶುರುವಾದವನು ಚೂರು ಚೂರೆ ರಂಗೇರುತ್ತಿದ್ದಿ
ನೀ ನನಗೆ ಅಭ್ಯಾಸ ಆಗುತ್ತಿದ್ದಿ,
ಚಟವಾಗದಿರು ದೊರೆ, ನಾ ಈ ಹೊರಜಗತ್ತಿಗೂ ಮುಖ ತೋರಿಸಬೇಕು ಅಪರೂಪಕ್ಕೊಮ್ಮೆ.`!! Very meaningful .
LikeLike
ಅಮಿತಾ ಅವರ ಕವನಗಳು, ಗಾಲಿಬನ ಶೇರುಗಳಂತೆ ಅಮಲೇರಿಸುವಂತಿವೆ.
`ನೀ ಮದಿರೆಯಂಥವನು
ನಶೆಯಾಗುತ್ತಿದ್ದಿ ನನ್ನ ಮನಿಷೆಗಳಿಗೆ
ಸ್ವಲ್ಪ ಎಂದು ಶುರುವಾದವನು ಚೂರು ಚೂರೆ ರಂಗೇರುತ್ತಿದ್ದಿ
ನೀ ನನಗೆ ಅಭ್ಯಾಸ ಆಗುತ್ತಿದ್ದಿ,
ಚಟವಾಗದಿರು ದೊರೆ, ನಾ ಈ ಹೊರಜಗತ್ತಿಗೂ ಮುಖ ತೋರಿಸಬೇಕು ಅಪರೂಪಕ್ಕೊಮ್ಮೆ.`
ಅಬ್ಬಾ!!
– ಕೇಶವ
LikeLiked by 1 person
ಅವನ ಕಣ್ಣು ಗಳು ತೋರಿದ ಭಾಷೆಯಲ್ಲಿ ಜಾರಿ ಮನದಾಳದೊಳು ಮುಳುಗಿ ಪ್ರೀತಿಯಲೆಯಲಿ ಕೊಚ್ಚಿ ಹೋಗಿ ಈಗ ಈಜು ಕಲಿಯುವ ಆಸೆ ಯಾಕೆ ? ಉಸಿರು ಕಟ್ಟದೇ ಮತ್ತೇರಿಸುವ ಕನಸು ಗಳಲಿ ತೇಲುವಾಗ ಹೊರಜಗತ್ತಿಗೆ ಮುಖ ತೋರಿಸಲೇನಿದೆ ಅಲ್ಲಿ ಅವನ ಬಿಟ್ಟು? ಅಲ್ವಾ ?
ಸುಂದರ ಭಾವಯಾನಕೆ ಕರೆದೊಯ್ಯುವ ಸುಂದರ ಕವನ ಅಮಿತಾ.
ನಿಜ ಅಮಿತಾ ಇನ್ನೊಬ್ಬರ ಚಪ್ಪಲಿ ಯಲ್ಲಿ ಕಾಲಿಟ್ಟು ನಡೆದು ನಡೆದು ದಣಿದು ತನ್ನಿರುವ ಮರೆತು ಹೋದ ಜೀವ ಎಲ್ಲೀದೀನಿ ಎಂದರಸುವುದೇ ಜೀವನವೋ ಏನೋ.
ನಿತ್ಯ ಬದುಕಿನ ಎರಡು ಮುಖ ತೋರಿಸುವ ಕವನಗಳು.ಅಭಿನಂದನೆಗಳು .
ಸರೋಜಿನಿ ಪಡಸಲಗಿ
LikeLiked by 1 person
ತುಂಬಾ ಸುಂದರ ಕವನ ಗಳು.
ಸರೋಜಿನಿ ಪಡಸಲಗಿ
LikeLike
ಅಮಿತ ಹರ್ಷವನ್ನು ಉಣಿಸಿದ್ದೀರಿ ಈ ಶುಕ್ರವಾರ ಅಮಿತಾ ಅವರೆ. ಒಂದೊಂದು ಹನಿಯಲ್ಲೂ ತೊಟಕುವಸಿಹಿ, ಪ್ರೀತಿ …! ಆ ಉನ್ಮಾದ! ಭಲೇ!. ಎರಡನೆಯ ಹನಿ (ಅಸಂಗತವಾದರೂ) ನೆನಪಿಸಿದ್ದು , ಡಿವೋರ್ಸಿಗೆ ನಿಂತ ಪಾರ್ಟ್ನರ್ ತನ್ನವ(ಳಿ)ನಿಗೆ, ನನ್ನಿಂದ ಕದ್ದ ಮುತ್ತುಗಳನ್ನು ವಾಪಸು ಮಾಡಲು ಕೇಳಿದ್ದು
2) ಬರೀ ಮೆಟ್ಟುವ ಚಪ್ಪಲಿ ಇಂಥ ಅದ್ಭುತ ಕವಿತೆ ಬರೆಸಿದೆಯಲ್ಲ.ಬಳಲಿ ಬಹಳ ದೂರ ಹೋಗಿ ಬರೆದಿದ್ದೀರಿ. ಆ ಚಪ್ಪಲಿಗಳಿಗೆ ಎರಡಲ್ಲ ಮೂರು ಚಪ್ಪಾಳೆ!
LikeLike
ಚೆನ್ನಾಗಿವೆ…👌
LikeLike
ಅಮಿತಾ ಅವರೇ ಕವನಗಳು ತುಂಬಾ ಸೊಗಸಾಗಿವೆ
LikeLike
ಅನಿತಾ ಅವರೇ ಕವನಗಳು ತುಂಬಾ ಸೊಗಸಾಗಿವೆ
LikeLike
ಅನಿತಾ ಅವರೇ ಕವನಗಳು ತುಂಬಾ ಸೊಗಸಾಗಿವೆ
LikeLike