ಪರಿಚಯ: ಡಾ.ಗುರುಪ್ರಸಾದ್ ಅವರು ತಮ್ಮ ಪರಿಚಯವನ್ನು ನಮ್ಮೊಂದಿಗೆ ಮಾಡಿಕೊಂಡಿದ್ದಾರೆ.
ನಾನು, ಡಾ. ಗುರುಪ್ರಸಾದ್ ಪಟ್ವಾಲ್, ಮೂಲತಃ ಕರಾವಳಿಯ ಬೈಂದೂರಿನವನು. ಕಡಲ ತೀರದ ತಂಗಾಳಿ, ಮನೆಯ ತಂಪಿನ ಅಂಗಳಕೆ ಸೂರ್ಯಾಸ್ತದ ಕೆಂಪು ರಂಗೋಲಿ, ಅಡುಗೆ ಮನೆಯಿಂದ ದಿನಾಲು ಮೀನೂಟದ ಸವಿ ಗಾಳಿ. ಅದನ್ನೆಲ್ಲ ಬಿಟ್ಟು, ಈ ಇಂಗ್ಲೆಂಡ್ ಎಂಬ ಶೀತ ದ್ವೀಪಕ್ಕೆ ಏಕೆ ಬಂದ ಎಂದು ನಿಮಗೆ ಈಗ ಬಂದ ಆಲೋಚನೆ ನನಗೆ ದಿನಾಲು ಸುಪ್ರಭಾತ. ಬಂದು ಹದಿನೈದು ವರ್ಷ ಕಳೆದು, ವೈದ್ಯ ವೃತ್ತಿಯಲ್ಲಿ ತೊಡಗಿಸಿ ಕೊಂಡರೂ, ಕನ್ನಡ ಮಾಧ್ಯಮದ ಶಾಲೆಯಲ್ಲಿ ಓದಿದ ಕಾಲದಲ್ಲಿ ಮೈಗೂಡಿದ ಓದುವ ಹಾಗೂ ಬರೆಯುವ ಅಭ್ಯಾಸ, ಹವ್ಯಾಸಕ್ಕಾಗಿ ವೇಷ ಕಟ್ಟಿ ಯಕ್ಷಗಾನದಲ್ಲಿ ಕುಣಿಯುತ್ತಿದ್ದ ಆ ಬಣ್ಣದ ಗೀಳು, ಇಲ್ಲಿ ಸಿಕ್ಕ ಸ್ನೇಹಿತರ ಪ್ರೋತ್ಸಾಹದಿಂದ ಪುನಃ ಚೇತರಿಸಿ ಕೊಂಡಿದೆ. ನಿಮ್ಮ ರಚನಾತ್ಮಕ ಹಿನ್ನುಣಿಕೆಗೆ ನಾನು ಚಿರ ಋಣಿ.
1)ಅಮ್ಮ
ನಿರಾಕಾರ ದೇವರ ಆಕಾರ ನೀನು
ನಿರಾಧಾರ ಮನಸಿನ ಆಧಾರ ನೀನು
ನಿಸ್ವಾರ್ಥ ಜೀವನ ಮಾತೆಲ್ಲಾ ಜೇನು
ನೀನೇ ನನ್ನಮ್ಮ ನೀ ನನ್ನ ಹಾಲು ಜೇನು
ಮಗುವ ಮೊಗದ ಮುಗುಳು ನಗೆಯ
ಮುಗಿಲ ಮೊದಲ ಮಳೆಯ ಹನಿಯ
ಮುದವ ಕೊಡುವ ಮನದಿ ನೆಲೆವ
ಸಿಹಿಯ ಸವಿಯ ಕೊಡುವ ಮಕರಂದ
ಅಮ್ಮಾ ಅನ್ನೋ ಪದದ ಅಂದ
ಅಮ್ಮಾ ನಿನ್ನ ನಗೆಯ ಚಂದ
2)ನೀನೇನಾ
ನೀನೇನಾ ಕದ್ದು ನನ್ನ ನೋಡಿ ನಕ್ಕವಳು
ನೀನೇನಾ ಬಳುಕುತ ಬಲೆಯ ಬೀಸಿದವಳು
ನೀನೇನಾ ಅಧರದ ಮಧುರವ ಕೊಟ್ಟವಳು
ನೀನೇನಾ ಅಳಿಸದ ಚಿತ್ತಾರ ಹೃದಯದಿ ಬರೆದವಳು
ನೀನೇನಾ… ಅಂದು ಮರೆತು ತಿರುಗದೆ ನಡೆದವಳು..
3)ಏನು ಹೇಳಲಿ
ನಾ ಬರೆದೆ ನಿನ್ನ ಹೆಸರಲಿ
ನನ್ನ ಹೃದಯದ ಮಿಡಿತವ
ನಾ ಏನು ಹೇಳಲಿ ಈ ಬಡಿತಕೆ
ನೀ ಬರದಿರೂ ನಿನ್ನ ಹೆಸರಲಿ
ಮಿಡಿಯುವ ಹುಚ್ಚು ಹೃದಯಕೆ
4) ಕಳ್ಳಿ
ನಾ ಹತ್ತಿರ ಬಂದರೆ ನಾಚುತ ಓಡಿದೆ
ರಟ್ಟೆಯ ಹಿಡಿದರೆ ಹುಸಿನಗು ಬೀರಿದೆ
ಮುತ್ತನು ಕೊಡದಿದ್ದರೂ ಕೆಂದುಟಿ ಕಂಪಿದೆ
ಮುಸ್ಸಂಜೆಯ ಮುಗುಳ್ನಗೆ ಮುನ್ನೂರು ನುಡಿದಿದೆ
5) ನಿನ್ನ ಕೈಸೆರೆ
ಬಯಸದೆ ಸನಿಹದಿ ಸುಳಿದಿಹ ನೈದಿಲೆ
ಕನಸಲಿ ಸೊಗಸಲಿ ನುಡಿದಿಹ ಕೋಗಿಲೆ
ಅರಿಯದ ಮನದಲಿ ಅರಳಿದ ತಾವರೆ
ತಿಳಿಯದೆ ಮುದದಲಿ ಆದೆನಾ ಕೈಸೆರೆ
-ಡಾ. ಗುರುಪ್ರಸಾದ್ ಪಟ್ವಾಲ್
(ಚಿತ್ರಕೃಪೆ : ಲಕ್ಷ್ಮಿನಾರಾಯಣ್ ಗುಡೂರ್)
ಸ್ವಾಗತ ಅನಿವಾಸಿ ಬಳಗಕ್ಕೆ ಗುರುಪ್ರಸಾದ್. ಕವನಗಳು ಸರಳವಾಗಿ ಮಧುರವಾದ ಕದಳಿ ಬಾಳೆ ಹಣ್ಣಿನಂತಿವೆ.
LikeLike
ಸುಂದರವಾದ ಚಿತ್ರಕೃಪೆ ಮಾಡಿದ ಶ್ರೀ ಲಕ್ಷ್ಮಿನಾರಾಯಣ್ ಗುಡೂರ್ ಅವರಿಗೆ ನನ್ನ ಹೃದ್ಪೂರ್ವಕ ನಮನಗಳು.
LikeLike
ಧನ್ಯವಾದಗಳು.
LikeLike
Sundaravada kavanagalu.
Uma Venkatesh
LikeLiked by 1 person
ಕಿರು ಪ್ರಯತ್ನದ ಮೆಚ್ಚುಗೆಗೆ ಧನ್ಯವಾದಗಳು.
LikeLike
ಅನಿವಾಸಿ ಬಳಗದ ಹೊಸ ಬರಹಗಾರರಿಗೆ ಹೃತ್ಪೂರ್ವಕ ಸ್ವಾಗತ. ಚುಟುಕಗಳು ಸುಂದರಾಗಿವೆ. ಮತ್ತೆ ಬರೆಯಿರಿ. ಮತ್ತೆ ಮತ್ತೆ ಬರೆಯಿರಿ!
LikeLiked by 1 person
ನಿಮ್ಮ ಪ್ರೋತ್ಸಾಹಕ್ಕೆ ಚಿರ ಋಣಿ
LikeLike
ಸರಳವಾಗಿ ಹರಿದು ಬಂದ ಕವನಗಳು. ಮೆತ್ತಗೆ ಅಮ್ಮನ ಮಡಿಲಿನಿಂದ ಜಾರಿ ನಲ್ಲೆಯ ಕಂಗಳಲ್ಲಿ ಸೇರಿ ಬದುಕಿನ ಮುಂದಿನ ಮೆಟ್ಟಿಲು ಹತ್ತಿರುವಂತಿದೆ.ಅಭಿನಂದನೆಗಳು.
ಸರೋಜಿನಿ ಪಡಸಲಗಿ
LikeLiked by 2 people
ನನ್ನ ಕವನಕ್ಕಿಂತಲೂ ಸುಂದರವಾಗಿ ಬರೆದು ಉತ್ತೇಜಿಸಿದ್ದಕ್ಕೆ ಧನ್ಯವಾದಗಳು.
LikeLiked by 1 person
ಸರಳ ಸುಂದರ ಸುಲಲಿತ. ಇನ್ನೂ ಹೆಚ್ಚು ಹೆಚ್ಚು ಬರಲಿ – ಕೇಶವ
LikeLiked by 1 person
ಕೇಶವ್, ಹೆಚ್ಚು ಬರೆಯುವ ಹುಚ್ಚು ಹಿಡಿಸಿದ್ದಕ್ಕೆ ಧನ್ಯವಾದಗಳು.
LikeLiked by 1 person
Welcome to Anivaasi.
Please keep writing. Many of us have persued our interests after a long gap (agnatha vaasa)!!
LikeLiked by 2 people
Thank you.
LikeLike