‘ತೋಟಗಾರಿಕೆ ಮತ್ತು ಟ್ಯೂಲಿಪ್ ಚರಿತ್ರೆ’ – ರಾಮಮೂರ್ತಿ(ಬೆಸಿಂಗ್ ಸ್ಟೋಕ್) ಅವರ ಬರಹ

ಪೀಠಿಕೆ: ಮನೆಗೊಂದು ಕೈತೋಟವಿದ್ದು ಬಗೆ ಬಗೆಯ ಸುಂದರ ಹೂಗಳನ್ನು ಬೆಳೆಸಿ ಪ್ರತಿ ಮುಂಜಾನೆ, ಸಂಜೆಯಲ್ಲಿ ಅವುಗಳ ಅಂದವನ್ನು ಕಣ್ ತುಂಬಿಕೊಂಡು, ಮನಸಿಗೆ ಮುದ ನೀಡುವ ಸುಮಗಳನ್ನು ಮನೆಗೆ ಬಂದ ಅತಿಥಿಗಳಿಗೆ ತೋರಿಸಿ ಹೆಮ್ಮೆ ಪಡುವ ಒಂದು ಅನುಭವ ವಿಶೇಷವಾದದ್ದು. ಬರಿ ಪುಷ್ಪಗಳಲ್ಲದೆ ಕೆಲವು ಕಾಯಿಪಲ್ಲೆ (ತರಕಾರಿ)ಗಳನ್ನೂ ಬೆಳೆದು ಅದರಲ್ಲೇ ಅಡುಗೆ ಮಾಡಿ ಸವಿಯುವ ರುಚಿ ಹೊರಗೆ ಅಂಗಡಿಗಳಿಂದ ತಂದು ಮಾಡಿದ ಅಡುಗೆಯಲ್ಲಿ ಸಿಗುವುದಿಲ್ಲ. ಇನ್ನೂ ಕೆಲವರು ಮಕ್ಕಳನ್ನು ಬೆಳೆಸಿದ ಹಾಗೆ ಹೂಗಳನ್ನು ಬಹಳ ಮುತುವರ್ಜಿಯಿಂದ ಬೆಳೆಸುವುದನ್ನು ನೋಡಿದ್ದೇವೆ.ಅದು ಪ್ರಕೃತಿ-ಮನುಷ್ಯರೊಡನೆ ಇರುವ ಅವಿನಾಭಾವ ಸಂಬಂಧದ ಸಂಕೇತ.
ಬೆಸಿಂಗ್ ಸ್ಟೋಕ್ ನಿವಾಸಿಯಾದ ರಾಮಮೂರ್ತಿ ಮತ್ತು ಅವರ ಪತ್ನಿ ಸೀತಾ ಅವರ ತೋಟಗಾರಿಕೆಯ ಅನುಭವವನ್ನು ಒಂದು ಬರಹದಿಂದ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಟುಲಿಪ್ ಪುಷ್ಪದ ಚರಿತ್ರೆಯನ್ನು ತಿಳಿಸಿದ್ದಾರೆ. ನೀವೂ ಓದಿ, ನಿಮಗೂ ಕೈತೋಟ ಮಾಡುವ ಆಸೆ ಇದ್ದರೆ ಇಂದೇ ಆಗಲಿ.

 

ramamurthy7

ನಮ್ಮ ಸ್ನೇಹಿತರಿಗೆ ತಿಳಿದಹಾಗೆ ನನ್ನ ಪತ್ನಿ ಸೀತೆ ಯ ಅತ್ಯಂತ ಪ್ರೀತಿಯ ಹವ್ಯಾಸ ತೊಟಗಾರಿಕೆ. ಇಲ್ಲಿ ಅನೇಕ ತರಕಾರಿ ಮತ್ತು ಹೂವುಗಳ ವ್ಯವಸಾಯದಲ್ಲಿ ದಿನಕ್ಕೆ ಹಲವಾರು ಗಂಟೆ ನಮ್ಮ ತೋಟದಲ್ಲಿ ಕಾಲ ಕಳೆಯುವುದು ಅವಳ ವಾಡಿಕೆ. ಆಗಾಗ್ಗೆ green house ನಲ್ಲಿ ಗಿಡಗಳನ್ನು “ಮಾತನಾಡಿಸಿವುದನ್ನ” ನಾನು ಕಂಡಿದ್ದೇನೆ ಅಲ್ಲದೆ ನಾವು ಎರಡು ಮೂರು ದಿನ ಮನೆಯಲ್ಲಿ ಇಲ್ಲದೆ ಇದ್ದಾಗ ” ಅಯ್ಯೋ ಪಾಪ ಗಿಡಗಳಿಗೆ ನೀರು ಇಲ್ಲ” ಅಂತ ಸಂಕಟ ಪಡುವಳು . ಗಾರ್ಡನ್ ಸೆಂಟರ್ ಗೆ ಹೋದಾಗ ಮಕ್ಕಳು ಆಟದ ಸಾಮಾನುಗಳ ಅಂಗಡಿಗೆ ಹೋದಹಾಗೆ ಇರುವ ಎಲ್ಲಾ ಗಿಡಗಳನ್ನು ಖರೀದಿ ಮಾಡುವ ಅಸೆ. ಬೇಸಿಗೆಯಲ್ಲಿ ನಾವು ಬೆಳಯುವ ತರಕಾರಿಗಳು , ಕೊತ್ತಂಬರಿ ಸೊಪ್ಪು, ನವಿಲು ಕೋಸು, ಬದನೆಕಾಯಿ ಕುಂಬಳಕಾಯಿ ಇತ್ಯಾದಿ ಇಂದ ನಾವು self sufficient ಅಂತ ಹೇಳಬಹುದು.
ನನ್ನ ಕೆಲಸ ಏನು ಅಂತ ಕೇಳಿದಿರಾ ? ಮಾಲಿ ಅನ್ನುವ ಪದ ಕೇಳಿದ್ದೀರಾ ? ನೀವು ನಗರದಲ್ಲಿ ಬೆಳದಿದ್ದರೆ ನಿಮಗೆ ಈ ಪದ ಗೊತ್ತಿರುವುದಿಲ್ಲ. ಮಾಲಿ ಕೆಲಸ ಅಗೆಯುವುದು, ನೀರು ಹಾಕುವುದು lawn cut ಮಾಡುವುದು ಇತ್ಯಾದಿ labour intensive ಕೆಲಸಗಳು. ಇದು ನನ್ನ ಕೆಲಸ, Management ಕೆಲಸ ಅಲ್ಲ. ಕೆಲವರು ಹೇಳಿದರು ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ತರಕಾರಿ ಬೆಳೆಯುವುದಕ್ಕಿಂತ ಕೊಂಡು ಬರುವುದು ಚೀಪರ್, ಆದರೆ ಅವರಿಗೇನು ಗೊತ್ತು ಇದರ ಮಜಾ.

ramamurthy1
ಸೀತಾ ರಮಮೂರ್ತಿಯವರ ತೋಟಗಾರಿಕೆಯ ’ಫಲ’ ಈ ತರಕಾರಿ ಮತ್ತು ಹೂವುಗಳು

ramamurthy5

 

 

ramamurthy8

ನಮಗೆ ಬಹಳ ವರ್ಷದಿಂದ ಹಾಲೆಂಡ್ ನಲ್ಲಿ ನಡೆಯುವ ಟ್ಯೂಲಿಪ್ ಹಬ್ಬಕೆ ಹೋಗುವ ಅಸೆ ಇತ್ತು ಅದು ಈ ವರ್ಷ ಸಾಧ್ಯವಾಯಿತು. ಕುಕಿಂಹಾಫ್ (Keukenhof ) ಆಮ್ ಸ್ಟರ್ ಡ್ಯಾಮ್ ನಿಂದ ೫೦ ಕಿಮ್ ದೂರದಲ್ಲಿ ಇರುವ ಊರು ಲಿಸ್ಸ್ (Lisse ). ಈ ತೋಟದ ಅರ್ಥ Kitchen ಗಾರ್ಡನ್. ಕಾರಣ ಇದರ ಹತ್ತಿರುವ ದೊಡ್ಡ ಕೋಟೆಮನೆ (castle) ಗೆ ಬೇಕಾದ್ದ ಮೂಲಿಕೆಗಳು (herbs ) ಈ ತೋಟದಿಂದ ಬರುತಿತ್ತು . ೧೯೪೯ ರಲ್ಲಿ ಆ ಊರಿನ ಪುರಸಭಾಧ್ಯಕ್ಷ (ಮೇಯರ್) ತೋಟವನ್ನು ಶುರುಮಾಡಿ ಹೂವಿನ ಮಾರಾಟ ಆರಂಭ ವಾಯಿತು ನಂತರ ಬೇರೆ ದೇಶಗಳಿಗೆ ರಫ್ತು ಮಾಡಿ ಈ ದೇಶ ಪ್ರಪಂಚದಲ್ಲಿ ಆಗ್ರ ಸ್ಥಾನವನ್ನು ಪಡೆಯಿತು.
ಆದರೆ ಈ ಟ್ಯೂಲಿಪ್ ( Tulipa, botanical name ) ಹೂವು ಹಾಲೆಂಡ್ ದೇಶಕ್ಕೆ ಸೇರಿದ್ದಲ್ಲ. ಇದರ ಮೂಲ ಈಗಿನ ಟರ್ಕಿ, ಹಿಂದಿನ ಆಟೋಮನ್ ರಾಷ್ಟ್ರ ಟ್ಯೂಲಿಪ್ ಹೆಸರು ಪರ್ಷಿಯನ್ ಭಾಷೆಯ ಪೇಟ (ರುಮಾಲು ) ದಿಂದ ಬಂದಿದೆ ಅಂತ ಕೆಲವರ ಅಭಿಪ್ರಾಯ. ಹದಿನಾರನೇ ಶತಮಾನದಲ್ಲಿ ಇದರ ಗಡ್ಡೆಯನ್ನು ತಂದು ಹಾಲಂಡ್ ನಲ್ಲಿ ಬೆಳಸಿದರು ನಂತರ ೧೫೯೨ ರಲ್ಲಿ ಇದರ ಬಗ್ಗೆ ಒಂದು ಪುಸ್ತಕ ಪ್ರಕಟವಾದಾಗ ಈ ಹೂವು ಪ್ರಚಾರಕ್ಕೆ ಬಂತು. ಹದಿನೇಳನೆ ಶತಮಾನದಲ್ಲಿ ಟ್ಯೂಲಿಪ್ ಉನ್ಮಾದ ( Tulip mania) ಶುರುವಾಗಿ ಇದು ಚಲಾವಣೆಯ ನಾಣ್ಯವೂ ಆಗಿ ಈ ದೇಶದಲ್ಲಿ ಹಣಕಾಸಿನ ಪರಿಸ್ಥಿತಿ ಕೆಟ್ಟು ಒಂದು ಕ್ರಾಂತಿಯೇ ಆರಂಭವಾಯಿತು. ಇದಕ್ಕೆ ಕಾರಣ ಈ ಗಡ್ಡೆ ಗಳನ್ನು ಕೊಳ್ಳುವರು ಜಾಸ್ತಿ ಆಗಿ ಇದರ ಬೆಲೆಯೂ ಹೆಚ್ಚಾಯಿತು ೧೬೨೪ನಲ್ಲಿ ಕೆಂಪು ಮತ್ತು ಬಿಳಿ ಹೂವಿನ ಕೆಲವು ಗಡ್ಡೆಗಳ ಬೆಲೆ ೧೨೦೦ ಫ್ಲ್ಯಾರಿನ್ , ಇದು ಒಂದು ಗಡ್ಡೆಯ ಬೆಲೆ !! ಆಗ ವರ್ಷದ ವರಮಾನ ಒಬ್ಬನಿಗೆ ೧೫೦ ಫ್ಲ್ಯಾರಿನ್ ಮಾತ್ರ. ೧೬೩೭ ನಲ್ಲಿ ಸಿಕ್ಕಿದ ದಾಖಲೆ ಪ್ರಕಾರ ಒಂದು ಗಡ್ಡೆ ಮೌಲ್ಯಕ್ಕೆ ಒಂದು ಮನೆಯನ್ನೆ ಖರೀದಿ ಮಾಡಬಹುದಾಗಿತ್ತು ಈ ಪರಿಸ್ಥಿತಿಯಿಂದ ಕೊನೆಗೆ ಆರ್ಥಿಕ ಕುಸಿತವೂ ಆಯಿತು (Market crash ).
ಮೊಘಲ್ ಸಾಮ್ರಾಜ್ಯ ವನ್ನು ಸ್ಥಾಪಿಸಿದ ಬಾಬರ್ ಈ ಹೂವನ್ನು ಭಾರತಕ್ಕೆ ತಂದ ಅಂತ ದಾಖಲೆ ಇದೆ.

 ಕುಕಿಂಹಾಫ್ ತೋಟದಲ್ಲಿ ಸುಮಾರು ೭ ಮಿಲಿಯಾನ್ ಗಡ್ಡೆ ಗಳನ್ನ ಆಕ್ಟೋಬರ್/ನವಂಬರ್ ತಿಂಗಳಲ್ಲಿ ನೆಲದಲ್ಲಿ ಹೂಳಿದರೆ  ಮಾರ್ಚ್ ತಿಂಗಳಿಗೆ ಹೂವು ಬಿಡುವುದಕ್ಕೆ ಶುರುವಾಗಿ ಮೇ ನಲ್ಲಿ ಚೆನ್ನಾಗಿ ಅರಳುತ್ತೆ, ಈ ತೋಟವನ್ನು ನೋಡುವ  ಸಮಯ ಏಪ್ರಿಲ್ ಕೊನೆ ಅಥವಾ ಮೇ ತಿಂಗಳ ಮೊದಲನೇ ವಾರ.  ಟ್ಯೂಲಿಪ್ ತೋಟ ಸುಮಾರು ೮೦ ಎಕ್ಕರೆ ವಿಸ್ತರಣ.  ಮಾರ್ಚ್ ನಿಂದ ಮೇ ತಿಂಗಳು ಇಲ್ಲಿ ಅರಳಿರುವ  ಟ್ಯೂಲಿಪ್ ನೋಡುವುದಕ್ಕೆ ಕೋಟ್ಯಂತರ ಜನಗಳು ಬರುತ್ತಾರೆ. ಈ ತೋಟದಲ್ಲಿ ಸುಮಾರು ೭೫ ವಿವಿಧ ಟ್ಯೂಲಿಪ್ ಗಳನ್ನು ಬೆಳಸುತ್ತಾರೆ

ನಿಮಗೆ ತೋಟಗಾರಿಕೆಯಲ್ಲಿ ಆಸಕ್ತಿ ಇದ್ದರೆ ಈ ವರ್ಷ ಅಕ್ಟೊಬರ್ ಅಥವಾ ನವೆಂಬರ್ ತಿಂಗಳಲ್ಲಿ ಗಡ್ಡೆಗಳನ್ನು  ತಂದು ನೆಡಿ ಮುಂದಿನ ವರ್ಷ ಮಾರ್ಚ್ ನಲ್ಲಿ ಸೊಗಸಾದ ಹೂವುಗಳನ್ನು ನೋಡಿ ಆನಂದ ಪಡಬಹುದು.

 

ಲೇಖನ:  ಬೇಸಿಂಗ್ ಸ್ಟೋಕ್  ರಾಮಮೂರ್ತಿ 

 

    ಚಿತ್ರಕೃಪೆ: ರಾಮಮೂರ್ತಿ(attributed) , ಗೂಗಲ್

6 thoughts on “‘ತೋಟಗಾರಿಕೆ ಮತ್ತು ಟ್ಯೂಲಿಪ್ ಚರಿತ್ರೆ’ – ರಾಮಮೂರ್ತಿ(ಬೆಸಿಂಗ್ ಸ್ಟೋಕ್) ಅವರ ಬರಹ

 1. ಚಿಕ್ಕದಾದರೂ ಚೊಕ್ಕದಾದ ಲೇಖನ. ಉನ್ಮಾದ, ಕೋಟೆಮನೆ ಪದಗಳನ್ನು ಹೊಸ ರೀತಿಯಲ್ಲಿ ಸಮಂಜಸವಾಗಿ ಉಪಯೋಗಿಸಿದ್ದು ಸಾರ್ಥಕವಾಗಿದೆ. ನಿಮ್ಮ ಲೇಖನಿಯಿಂದ ಶಾಯಿ ಹರಿಯುತ್ತಿರಲಿ.

  Like

 2. ರಾಮಮೂರ್ತಿ ಅವರೇ, ಹಾಲೆಂಡಿನ ಟುಲಿಪ್ ಪುಷ್ಪದ ಸೌಂಧರ್ಯವನ್ನು ಎದುರಿನಲ್ಲಿ, ಸಿನಿಮಾಗಳಲ್ಲಿ ನೋಡಿ ಆನಂದಿಸಿದ್ದೇನೆ. ಆದರೆ ನಿಮ್ಮ ಲೇಖನದಲ್ಲಿ ಆ ಪುಷ್ಪದ ಸೌಂಧರ್ಯಕ್ಕೆ ಮತ್ತಷ್ಟು ಮೆರಗು ನೀಡಿದ್ದೀರಿ. ಅಚ್ಚರಿಯ ಸಂಗತಿ ಎಂದರೆ, ಈ ಪುಷ್ಪದ ಮೂಲ ಹಾಲೆಂಡ್ ಅಲ್ಲದಿದ್ದರೂ, ಡಚ್ ಮಂದಿ ಈ ಹೂವಿನ ಮೇಲೆ ತಮ್ಮ ಸಂಪೂರ್ಣ ಸ್ವಾಮ್ಯವನ್ನೇ ಸ್ಥಾಪಿಸಿದ್ದಾರೆ ಅಲ್ಲವೇ? ಅವರು ಪ್ರಯೋಗ ನಡೆಸಿ ಬೆಳೆಸಿರುವ ನೂರಾರು ತಳಿಗಳು ಇಂದು ಪ್ರಪಂಚದ ನಾನಾ ಉದ್ಯಾನವನಗಳಲ್ಲಿ ನಳನಳಿಸುತ್ತಿವೆ. ನಮ್ಮ ಮನೆಯ ಸಣ್ಣ ಹೂದೋಟಗಳಲ್ಲೂ ಇವುಗಳ ಸೌಂಧರ್ಯವನ್ನು ಸವಿಯುವ ಸುಯೋಗ ನಮಗೆ ದೊರೆತಿದೆ. ಉತ್ತಮವಾದ ಲೇಖನ. ನಿಮ್ಮ ಪತ್ನಿ ಸೀತ ಮತ್ತು ನಿಮ್ಮ ತೋಟಗಾರಿಕೆಯ ಕಲೆ ಮತ್ತು ಪರಿಶ್ರಮವನ್ನು ನಾನೆ ಹಲವಾರು ಬರಿ ಕಂಡಿದ್ದೇನೆ. ಹಾಗಾಗಿ ನಿಮ್ಮ ಲೇಖನ ವಸ್ತು ಟುಲಿಪ್ ಬಗ್ಗೆ ಇರುವುದು ಸಾಧುವೇ ಆಗಿದೆ.
  ಉಮಾ ವೆಂಕಟೇಶ್

  Liked by 1 person

 3. ” ಹಸಿರು ತುಂಬಿದ ಬಯಲಲ್ಲೊಂದು ಪುಟ್ಟ ಮನೆ, ಮನೆಯ ಮುಂದೊಂದು ಚೆಂದದ ಹೂದೋಟ ಇದ್ದರೆ ಯಾಕೆ ಬೇಕು ಆ ಸ್ವರ್ಗ” ಅನ್ನೋದು ಸತ್ಯ ಅನಿಸದೇ ಇರಲಾರದು ರಾಮಮೂರ್ತಿ ಯವರ ಈ ಲೇಖನ ಓದಿದಾಗ.ಮನೆಯಂಗಳದ ತೋಟದ ತರಕಾರಿ ರುಚಿ ಬೇರೆನೇ ಆದರೂ ಅಂಗಳದಲ್ಲರಳಿದ ಹೂವಿನ ಛಂದಕ್ಕೆ ಸಾಟಿಯಿಲ್ಲ.ಹೂ ಗಿಡಗಳಿಗೆ ನೀರೆರೆದು ಪೋಷಿಸಲು ದಣಿವಿಲ್ಲ, ಆ ಹೂವು ಬಿಡಿಸಿ ಪೋಣಿಸಲು ಬೇಜಾರಿಲ್ಲ, ಮುಡಿಯಲಿರುವ ಹರುಷ ಇನ್ನೆಲ್ಲೂ ಇಲ್ಲ.ರಾಮಮೂರ್ತಿಯವರ ಲೇಖನ ನನ್ನನ್ನು ನನ್ನೂರಿನ ಮನೆಗೆ ಕರೆದೊಯ್ದು ನೆನಪು ಗಳಲ್ಲಿ ತೇಲಿಸಿತು.ತುಂಬ ಸುಂದರ , ನಾ ನೋಡದ ಟ್ಯೂಲಿಪ್ ಹೂಗಳ ಮಾಹಿತಿ ನೀಡುವ ಬರಹ.ಬಹುಶ: ನಮ್ಮಲ್ಲಿರುವ ಡೇರೆ ಹೂಗಳನ್ನ ಹೋಲುತ್ತದೆಯೋ ಏನೋ.ಧನ್ಯವಾದಗಳು ಅಂದದ ಬರಹಕ್ಕೆ ರಾಮಮೂರ್ತಿ ಯವರೇ.
  ಸರೋಜಿನಿ ಪಡಸಲಗಿ.

  Like

 4. ಹೊರಗಿನಿಂದ ತರಿಸಿ ತಿನ್ನುವುದಕ್ಕಿಂತ ಮನೆಯಲ್ಲಿ ಅಡುಗೆ ಮಾಡಿ‌ ತಿನ್ನುವುದು ಮೇಲು, ಅದಕ್ಕಿಂತ ಮನೆಯಲ್ಲಿ ಬೆಳೆದ ತರಕಾರಿಯಿಂದ ಅಡುಗೆ ಮಾಡಿ ತಿನ್ನುವುದೇ ಮೇಲು’, ಅಹುದು ಅಹುದು. ಆದರೆ ಅದಕ್ಕೆ ಸಮಯ ಮಾಡಿಕೊಳ್ಳಬೇಕು, ಸಹನೆ ಬೇಕು, ಪ್ರೀತಿ ಬೇಕು.

  ಕುಕಿಂಹಾಫ್-ಗೆ ಮೂರು ವರ್ಷದ ಹಿಂದೆ ಹೋಗಿ ಸಾವಿರಾರು ಫೋಟೊ ಕ್ಲಿಕ್ಲಿಸಿ ಅದರ ಸೌಂದರ್ಯವನ್ನು ಹಿಡಿದಿಕೊಂಡು ಬಂದಿದ್ದೇನೆ. ಆದರೆ ಅದರ ಹಿಂದಿನ ಚರಿತ್ರೆ ಗೊತ್ತಿರಲಿಲ್ಲ.

  ಕೇಶವ

  Like

 5. ರಾಮಮೂರ್ತಿ ಅವರು ಬೇಸಿಂಗ ಸ್ಟೋಕ್ ನ್ ಕಿಚನ್ ಗಾರ್ಡನ್ನಲ್ಲಿ ಶುರು ಮಾಡಿ ಹಾಲಂಡಿನ ಕಿಚನ್ ಗಾರ್ಡನ್ ಅರ್ಥ ಬರುವ ಕುಕೆನ್ ಹಾಫ್ ವರೆಗೆ ಕರೆದೊಯ್ದು ಮಾಹಿತಿ ಪೂರ್ಣ ಸ್ವಾರಸ್ಯಕರ ಲೇಖನ ಬರೆದಿದ್ದಾರೆ.ಅದೇನೇ ಅನ್ನಿ, ಮನೆಯಲ್ಲಿ ನಾವೇ ಬೆಳೆದು ತಾಜಾ ಕಿತ್ಕೊಂಡು ಬಂದು ಅಡಿಗೆ ಮಾಡಿದ ತರಕಾರ ರುಚಿ ಸೂಪರ್ ಮಾರ್ಕೆಟ್ ವೆಜಿಟಬಲ್ ಗೆ ಬರುವದಿಲ್ಲ. ಸ್ವಾನುಭವದಿಂದ ಹೇಳುತ್ತೇನೆ. ಪರಿಶ್ರಮವೇನೋ ಉಂಟು, ಆದರೆ al fresco experience ಅನುಭವಸಿದವರಿಗೇ ಗೊತ್ತು.ಇತ್ತೀಚಿನ ಅಖಂಡ ಸುದೀರ್ಘ ಬಿಸಿಲಿನ ಕೆಲವಾರಗಳಲ್ಲಿ ಪಾಪ ಅವರ ಶ್ರೀಮತಿಯವರು ನೀರೆರೆಯಲಾರದೆ ಒದ್ದಾಡಿರಬೇಕು! ಆದ್ರೆ ಅವುಗಳು ಈಡಾಗಿ ಬೆಳೆದಿರಬಹುದು. ಇನ್ನೂ Will go places and will write ಎಂದು ಇನ್ನಷ್ಟು ಅಪೇಕ್ಷಿಸೋಣವೇ ಬೇಸಿಂಗ್ ಸ್ಟೋಕ್ ದವರಿಂದ?

  Like

 6. A good and informative article. It is interesting to know that Tulip is not the original plant from Holland. It also reminded me of a book’Black Tulip” which I read a few decades ago. If my memory serves me right it is by Alexander Dumas.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.