ಕನಸಿನ ರಾಣಿ – ಬೆಳ್ಳೂರು ಗದಾಧರ್ ಅವರ ಕವನ

ಕವನದ ಪರಿಚಯ ಬೆಳ್ಳೂರು ಗದಾಧರ್ ಅವರದೇ ಮಾತುಗಳಲ್ಲಿ –

ವಯಸ್ಸಿಗೆ ಬಂದ  ಹುಡುಗರು ತಮ್ಮ ಜೀವನ ಸಂಗಾತಿ ಹೇಗಿರಬೇಕು ಎಂಬುದರ  ಬಗ್ಗೆ ಏನೇನೋ ಕನಸು ಕಾಣುತ್ತಿರುತ್ತಾರೆ.

ಭರ್ತೃಹರಿ ಬರೆದಂತೆ

‘ಕಾರ್ಯೇಷು ದಾಸಿ, ಕರಣೇಷು ಮಂತ್ರಿ 

ಪೂಜ್ಯೇಷು ಮಾತಾ, ರೂಪೇಷು ಲಕ್ಷ್ಮೀ

ಕ್ಷಮಯಾ ಧರಿತ್ರೀ, ಶಯನೇಷು ರಂಭಾ’

ಈ ಆರು ಗುಣಗಳಿರುವ ideal ಸಂಗಾತಿ  ಸಿಗುವುದಿಲ್ಲವೆಂದು ಗೊತ್ತಿದ್ದರೂ ಅಂತಹವಳ ಬಗ್ಗೆ ಕನಸು ಕಾಣುತ್ತಿರಬಹುದು.

ದಿನಗಳು ಕಳೆದಂತೆ ವಾಸ್ತವ್ಯದ ಅರಿವಾಗಿ  ಈ dreamer ಗಳ ಕನಸುಗಳೂ ಬದಲಾಗುತ್ತವೆ.

ಅದಕ್ಕಾಗಿ ನನ್ನ ಈ ಕವನದಲ್ಲಿ  ಕನಸಿನ ರಾಣಿಯನ್ನು ಹುಡುಕುವುದರ ಪ್ರಯತ್ನವೇ ಹೊರತು ಆ ರಾಣಿಯ ವರ್ಣನೆಯಿಲ್ಲ.

ಕಾವ್ಯದ ಸ್ವರೂಪ, ಸ್ವಭಾವ, ಛಂದಸ್ಸು ಪ್ರಾಸ ಇವುಗಳ ಬಗ್ಗೆ ಹೆಚ್ಚು ಯೋಚಿಸದೆ ಮನಸ್ಸಿಗೆ ಬಂದ  ಒಂದು ಕಲ್ಪನೆ  ಈ ಕವನ

 

kanasina rani

“ಕನಸಿನ ರಾಣಿ “

ಎಲ್ಲೋ ದೂರದ ಬೆಟ್ಟಗಳಾಚೆ

ಎಲ್ಲೋ ಕಾಮನ ಬಿಲ್ಲಿನ ಕೆಳಗೆ

ಎಲ್ಲೋ ಸಾಗರ ದಾಟಿದಮೇಲೆ

ಇರುವಳು ನನ್ನ ಕನಸಿನ ರಾಣಿ

 

ಎಲ್ಲೋ ಹುಣ್ಣಿಮೆ ಚಂದ್ರನ ಬೆಳಕಲಿ

ಎಲ್ಲೋ ಫಲಭರಿತ ಮರದಡಿ

ಎಲ್ಲೋ ಇಂದಿನ ತುಂಬಿದ ಜಗದಲಿ

ಇರುವಳು ನನ್ನ ಕನಸಿನ ರಾಣಿ

 

ಎಲ್ಲೋ ಗಜಿಬಿಜಿ ನಗರಗಳಾಚೆ

ಎಲ್ಲೋ ತಂಪಿನ ನದಿ ತೀರದಲಿ

ಎಲ್ಲೋ ಕಂಪಿನ ಹೂಗಳ ಮಧ್ಯೆ

ಇರುವಳು ನನ್ನ ಕನಸಿನ ರಾಣಿ

 

ನಡೆಯುವೆ ನಾನು ಮುಳ್ಳಿನ ಹಾದಿ

ಏರುವೆ ಪರ್ವತ ಶಿಖರ ಶ್ರೇಣಿ

ಹುಡುಕುವೆ ನಾನು ಹಗಲೂ ಇರುಳೂ

ಸಿಗುವವರೆಗೂ ನನ್ನ ಕನಸಿನ ರಾಣಿ

 

ಬೆಳ್ಳೊರು ಗದಾಧರ

7 thoughts on “ಕನಸಿನ ರಾಣಿ – ಬೆಳ್ಳೂರು ಗದಾಧರ್ ಅವರ ಕವನ

  1. ನಿಮ್ಮ ಕನಸಿನ ರಾಣಿ ಬಹಳ ಚೆಂದವಾಗಿದ್ದಾಳೆ

    Like

  2. ಪ್ರೇಮಲತಾ, ಶ್ರೀವತ್ಸ ದೇಸಾಯಿ ಮತ್ತು ಸರೋಜಿನಿ ಪಡಸಲಾಗಿ ಅವರೆ
    ನಿಮ್ಮ ಅನಿಸಿಕೆಗಳಿಗೆ ಬಹಳ ಧನ್ಯವಾದಗಳು. ಅನ್ವೇಷಣದಿಂದ ಗುರಿ ತಲುಪಿದರೆ ಅದರ ಸ್ವಾರಸ್ಯವೂ ಹೋಗುವುದಲ್ಲದೆ ಅದರಿಂದ ನಿರಾಶೆ, ಕೆಲವು ಬಾರಿ ಹೆದರಿಕೆಯೂ ಆಗುವ ಸಾಧ್ಯತೆ ಇದೆ . ಕೆಲವು ವಿಷಯಗಳಲ್ಲಿ ಕನಸು ನನಸಾಗದೆ ಕನಸಾಗೇ ಉಳಿಯುವುದು ಒಳಿತಲ್ಲವೇ?

    Liked by 1 person

  3. ವಾವ್!! ಕನಸಿನ ರಾಣಿಯ ಅನ್ವೇಷಣೆ ಅದ್ಭುತ ವಾಗಿದೆ.ಸಿಕ್ಕಾಳು ಎಲ್ಲಿಯಾದರೂ, ಎಂದಾದರೂ.ಈ ಹುಡುಕುವಿಕೆ, ಕನಸಿನ ಸೊಗಸು, ಸೊಗಡು ಕನಸಿಗೇ ಸೀಮೀತವೋ ಏನೋ!! ಕನಸಿಗಾವ ಬಂಧನವೂ ಇಲ್ಲ.ಕರೆದಾಗ ರೆಡಿ.ಅವಕೆ ಸಮಯದ ಬಂಧನವೂ ಇಲ್ಲ.ಅದಕೇ ಅವು ಅಷ್ಟು ಸವಿ.ಕನಸುಗಾರರ ಕನಸುಗಳ ಸವಿ ಹೆಚ್ಚಿಸುವ ಸುಂದರ ಕವನ.
    ಸರೋಜಿನಿ ಪಡಸಲಗಿ.

    Liked by 1 person

  4. ಗುರಿ ಮುಟ್ಟುವದಕ್ಕಿಂತ ಅನ್ವೇಷಣೆ ಮುಖ್ಯವಲ್ಲವೆ? ಕನಸಿನ ರಾಣಿಯ ಅನ್ವೇಷಣೆ ನಡೆದೇ ಇರಲಿ. ಆ ಮುದ ಉಳಿದೀತೇ ಆಕೆ ಸಿಕ್ಕುಬಿಟ್ಟರೆ? ಹೇಗಿರುವಳೋ! ಕನಸೆಂದ ಮೇಲೆ ದಿನಕ್ಕೊಂದು ರೂಪ ಬೇರೆ, ಅರಸುವ ಜಾಗ ಬೇರೆ! ಈ ಕವನದಲ್ಲಿಯ ಮುಗ್ಧತೆಯನ್ನ ಸಿಡಿಯ ಧ್ವನಿಯಲ್ಲಿ, ರಾಗದಲ್ಲಿ ಚೆನ್ನಾಗಿ ತಂದ ಸಂಗೀತಗಾರರಿಗೂ ನಿಮಗೂ ಅಭಿನಂದನೆಗಳು!

    Like

  5. ನಿಮ್ಮಂತೆಯೇ ನನ್ನ ಕನಸಿನ ಹುಡುಗನ ಹುಡುಗಾಟವೂ ನಡೆದಿದೆ ಎಂದ್ರೆ ತಪ್ಪಾಗಲಾರದು.ನಮ್ಮ ಕಲ್ಪನೆಗಳಲ್ಲಿ ಮಾತ್ರವೇ ಇದೆಲ್ಲ ಸಾದ್ಯ ಎನ್ನುವ ಅರಿವು ಬಹುತೇಕರಂತೆ ನನಗೂ ಇದೆ!
    ಉತ್ತಮ ಕವನ. ಧ್ವನಿಮುದ್ರಿಕೆಯಲ್ಲಿ ಇನ್ನೂ ಮಧುರವಾಗಿ ಕೇಳಿಬಂದಿದೆ. ಅಭಿನಂದನೆಗಳು.

    Like

Leave a Reply to Gadadhara Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.