ಹುಟ್ಟಿದ ದೇಶದಿಂದ ವೃತ್ತಿಯ ಸಲುವಾಗಿ UKಗೆ ಬಂದು ಇಲ್ಲೇ ನೆಲೆಸಿ ಇಲ್ಲಿನ ಪೌರತ್ವವನ್ನು ಪಡೆದು, ಇಲ್ಲಿನ ಭಾಷೆ, ಇಲ್ಲಿನ ಊಟ-ತಿಂಡಿ, ಇಲ್ಲಿನ ಜೀವನ ಶೈಲಿಯನ್ನು ಕೊಂಚಮಟ್ಟಿಗೆ ಮೈಗೂಡಿಸಿಕೊಂಡರೂ ನಮ್ಮ ಮಾತೃ ಭಾಷೆ,ನಮ್ಮ ಧರ್ಮ, ನಮ್ಮ ಹಬ್ಬ-ಹರಿದಿನಗಳು, ನಮ್ಮ ಉಡುಗೆ ತೊಡುಗೆಗಳು, ನಮ್ಮ ತಿನಿಸುಗಳು ನಮ್ಮನ್ನು ಎಂದೂ ಬಿಟ್ಟಿರಲಾರವು. ಹಾಗೆಯೇ ನಮ್ಮ ಮನರಂಜನೆಯ ಆಸಕ್ತಿಗಳು, ಆಯ್ಕೆಗಳು ನಮ್ಮ ಮಾತೃಭಾಷೆಯಲ್ಲೇ ಇದ್ದರೆ ಎಷ್ಟು ಚಂದ ಅಲ್ವಾ?ತಂತ್ರಜ್ಞಾನ ಮುಂದುವರೆದಿರುವ ಈ ದಿನಗಳಲ್ಲಿ ಕುಳಿತಲ್ಲೇ ಕನ್ನಡ ಭಾಷೆಯ TV ಕಾರ್ಯಕ್ರಮಗಳನ್ನು ನೋಡಿ ಆನಂದಿಸುವ ಬಗ್ಗೆ ನಮ್ಮ ಸಂಘದ (KBUK) ಹಿರಿಯ ಸದಸ್ಯರಲ್ಲೊಬ್ಬರಾದ ರಾಮಮೂರ್ತಿಯವರ ಕಿರುಲೇಖನ ಇಲ್ಲಿದೆ.
ಸುಮಾರು 5-6 ವರ್ಷಗಳಿಂದ ಕನ್ನಡ ಚಾನೆಲ್ ಗಳು ಇಲ್ಲಿ ಪ್ರಸಾರವಾಗುತ್ತಿರುವುದಾದರೂ ನಮ್ಮ ಮನೆಯಲ್ಲಿ ಇದರ ಮೇಲೆ ಅಷ್ಟೇನು ಆಸಕ್ತಿ ಇರಲಿಲ್ಲ. ಆದರೆ ಕೆಲವು ತಿಂಗಳ ಹಿಂದೆ ನಮ್ಮ ಒಬ್ಬ ಸ್ನೇಹಿತರು ನೀವು ಇಲ್ಲಿಯ ಟಿವಿ ನೋಡುವುದು ಇದ್ದೇ ಇದೆ ಕನ್ನಡ ಟಿವಿ ನೋಡಿ ಅಂತ ಸಲಹೆ ಕೊಟ್ಟರು. Yupp TV ನವರನ್ನ ಸಂಪರ್ಕ ಮಾಡಿದರೆ ಇದು ಸಾಧ್ಯ ಅಂತ ಸಲಹೆ ಕೊಟ್ಟರು. ಸರಿ ಈಗ ಆರು ತಿಂಗಳಿಂದ ನಾವು ಚಂದಾದಾರರಾಗಿದ್ದೇವೆ. ಸುಮಾರು 20 ಚಾನಲ್ ಗಳಲ್ಲಿ Live ಮತ್ತು Recorded ಪ್ರೋಗ್ರಾಮ್ ಗಳನ್ನೂ ನೋಡಬಹುದು. Smart TV ಇದ್ದರೆ Yupp TV download ಮಾಡಬಹುದು ಇಲ್ಲದೆ ಇದ್ದರೆ Amazon Fire Stick ಅಥವ Now TV ಇತ್ಯಾದಿ ಗ್ಯಾಡ್ಜೆಟ್ ಗಳಿಂದ download ಮಾಡಬಹುದು. ಇದರ ಖರ್ಚು ವರ್ಷಕ್ಕೆ ಸುಮಾರು £80
ನಿಮಗೆಲ್ಲಾ ಇದು ಗೊತ್ತಿರುವ ವಿಚಾರ ಇರಬಹುದು ಆದರೆ , ನಮ್ಮ ಪೀಳಿಗೆಯ ಕೆಲವರಿಗೆ ಇದು ಗೊತ್ತಿಲ್ಲದೆ ಇರಬಹುದು ಅಂಥವರಿಗೆ ಇದು ಉಪಯುಕ್ತ ಅಂತ ಭಾವಿಸಿದ್ದೀನಿ.ಈ 20 ಚಾನಲ್ ಗಳು ಸುವರ್ಣ,ಉದಯ, ಕಲರ್ಸ್ ಮತ್ತು Zee ಇತ್ಯಾದಿ ಇಲ್ಲಿ ಯಾವಾಗಲೂ ಧಾರಾವಾಹಿಗಳು,ಸುದ್ದಿ ಪ್ರಸಾರ ಮಾಡುವ Public TV, ಸುದ್ದಿ TV, ಜನಶ್ರೀ ಅನ್ನುವ ಚಾನೆಲ್ಗಳಿವೆ. ಆದರೆ ಇದು ಏನು ಅಂತ ತಿಳಿಯುವುದು ಕಷ್ಟ ! ನಮಗೆ ಇಲ್ಲಿನ ಬಿಬಿಸಿ ವಾರ್ತೆಗಳನ್ನು ನೋಡಿ ಅಭ್ಯಾಸ ಆದರೆ ಕನ್ನಡ ವಾರ್ತೆಗಳನ್ನು ಅಥವಾ ರಾಜಕೀಯದ ಸಂಭಾಷಣೆಗಳು ಅರ್ಥವಾಗುವುದು ಕಷ್ಟವೇ. ಅದೂ ಅಲ್ಲದೆ ಐದು ಆರು ಜನಗಳು ಒಟ್ಟಿಗೆ ಕೂಗಾಡುವುದು ನಮಗೆ ತಮಾಷೆಯಾಗಿ ಕಾಣಿಸುತ್ತೆ. ನಮ್ಮ ಕನ್ನಡ ಚಾನೆಲ್ ಒಂದೇ ಅಲ್ಲ ಭಾರತದ ಅನೇಕ ಚಾನಲ್ ಗಳಲ್ಲೂ ಇದೇ ಪರಿಸ್ಥಿತಿ. ಅಲ್ಲಿಯ ರಾಜಕಾರಣಿಗಳು ಲೋಕ ಸಭಾ ನಲ್ಲೂ ಇದೇ ರೀತಿ ವರ್ತಿಸುತ್ತಾರೆ, ಇದ್ದಿದ್ದರಲ್ಲಿ ಪಬ್ಲಿಕ್ ಟಿವಿ ವಾಸಿ. ಅದರ ಪ್ರಮುಖರಾದ ಶ್ರೀ ರಂಗನಾಥ್ ಸಂದರ್ಶನ ಚೆನ್ನಾಗಿ ನಡೆಸುತ್ತಾರೆ.
ಸುಮಾರು ಎಲ್ಲ ಚಾನೆಲ್ ನಲ್ಲೂ ಯಾವಾಗಲೂ ಧಾರಾವಾಹಿಗಳು , ಆದರೆ ಈ ಕಥೆಗಳು ಬಹಳ ವರ್ಷಗಳಿಂದ ನಡೆಯುತ್ತಿದೆ ಆದ್ದರಿಂದ ಮಧ್ಯೆ ಸೇರಿದರೆ ಕಥೆ ಅರ್ಥವಾಗುವುದಿಲ್ಲ, ಈ ಎಲ್ಲಾ ಕಥೆಗಳು ಬೆಂಗಳೂರು ಅಥವ ಬೇರೆ ಪಟ್ಟಣದಲ್ಲಿ ನಡೆಯುವ ಮಧ್ಯಮ ವರ್ಗದವರ ಜೀವನದ ಮೇಲೆ ಮಾತ್ರ ಆಧಾರವಾಗಿರುತ್ತವೆ. ಆದರೆ ಹಳ್ಳಿಯವರ ಅಥವಾ ಬಡವರ ಬದಕಿನ ತಂಟೆಗೆ ಇನ್ನೂ ಬಂದಿಲ್ಲ . ಬೆಳಗ್ಗೆ ಇಂದ ಸಾಯಂಕಾಲದವರೆಗೆ ನಟಿಯರು ಯಾವಾಗಲೂ ತುಂಬಾ ಅಲಂಕಾರ ಮಾಡಿಕೊಂಡಿರುತ್ತಾರೆ. ಬೆಳಗ್ಗೆ ಹಾಸಿಗೆಯಿಂದ ಎದ್ದು ಕಾಫಿ ಮಾಡುತ್ತಿರುವಾಗಲೂ ಮೇಕ್ ಅಪ್ ಇರುತ್ತೆ ಬಹಳ ಒಳ್ಳೆ ಸೀರೆ ಉಟ್ಟಿರುತ್ತಾರೆ ಮೈತುಂಬ ಒಡವೆ ಮತ್ತು ಕೈಯಲ್ಲಿ ಮೊಬೈಲ್. ಆದರೆ ಈಗ ಸಂಭಾಷಣೆ ಮತ್ತು ಛಾಯಾಗ್ರಹಣ ಇತ್ಯಾದಿ ವಿಷಯಗಳಲ್ಲಿ ತುಂಬಾ ಬದಲಾವಣೆ ಆಗಿದೆ.
Zee ಟಿವಿ ನಲ್ಲಿ ಸರಿಗಮಪ Little champs ಅನ್ನುವ ಸಂಗೀತ ಕಾರ್ಯಕ್ರಮ ಬಹಳ ಚೆನ್ನಾಗಿ ಮಾಡುತ್ತಾರೆ. ಐದರಿಂದ ಹದಿನೈದು ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸುತ್ತಾರೆ.
ಒಂದು ವಿಶೇಷ ಅಂದರೆ ಈ ಮಕ್ಕಳು ಎಲ್ಲಾ ವರ್ಗಕ್ಕೆ ಸೇರಿದವರು. ಕೆಲವರಿಗೆ ಸಂಗೀತ ಪ್ರತಿಭೆ ಇದೆ ಆದರೆ ಹಣಕಾಸಿನ ತೊಂದರೆಯಿಂದ ಮುಂದೆವರೆಯುವುದು ಅಸಾಧ್ಯವಾಗಿತ್ತು. ಇಂಥವರಿಗೆ ಇಲ್ಲಿ ಒಂದು ಅವಕಾಶ ಸಿಕ್ಕೆದೆ. ಕೆಲವು ವಾರದ ಹಿಂದೆ ಪಟೇಲ ಅನ್ನುವ ಸುಮಾರು ಹತ್ತು ವರ್ಷದ ಹಳ್ಳಿ ಹುಡುಗನ ಕಥೆ ಕೇಳಿ ಬಹಳ ಬೇಜಾರಾಯಿತು.. ಬೆಂಗಳೂರಿಗೆ ಬರಲು ಇವರಲ್ಲಿ ದುಡ್ಡು ಇರಲಿಲ್ಲ . ಆದ್ದರಿಂದ ಇವನ ತಂದೆ ಮನೆಯಲ್ಲಿ ಇದ್ದ ಕರುವನ್ನು ಇಷ್ಟವಿಲ್ಲದೇ ಇದ್ದರೂ ಮಾರಿ ಬಂದ ಹಣದಲ್ಲಿ ಮಗನನ್ನು ಸ್ಪರ್ಧೆಗೆ ಕಳಿಸಿದರು. ಈ ವಿಚಾರವನ್ನು ಕಾರ್ಯಕ್ರಮದ ಮುಖ್ಯ ತೀರ್ಪುಗಾರ ಮತ್ತು ಸಂಗೀತ ನಿರ್ದೇಶಕರು ಅದ ಹಂಸಲೇಖ ಅವರು ಕೇಳಿ ಈ ಕರುವನ್ನು ತಾವೇ ಪುನಃ ಖರೀದಿ ಮಾಡಿ ಈ ಹುಡುಗನಿಗೆ ವಾಪಸ್ಸು ಕೊಟ್ಟರು. ಈ ಪಟೇಲ ಇನ್ನೂ ಸ್ಫರ್ಧೆಯಲ್ಲಿ ಇದ್ದಾನೆ. ಇದೇ ರೀತಿ ಲಕ್ಷ್ಮಿ ಅನ್ನುವ ಉತ್ತರ ಕರ್ನಾಟಕದ ತುಂಬಾ ಬಡವರ ಮನೆಯ ಹುಡಗಿ ಸಹ ಈ ಸರ್ಧೆಯಲ್ಲಿ ಇದ್ದಾಳೆ . ಇವಳ ತಂದೆ ಮತ್ತು ತಾಯಿ ಕೂಲಿ ಮಾಡಿ ಜೀವನ ಮಾಡುತ್ತಾರೆ. ಇವರೆಲ್ಲ ಒಟ್ಟಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಿ ನಮ್ಮ ಸಂಗೀತ ಮತ್ತು ಕಲೆಯ ಭವಿಷ್ಯ ಭದ್ರವಾಗಿದೆ ಅನ್ನುವ ಭರವಸೆ ಈ ಮಕ್ಕಳಿಗೆ ಹಂಸಲೇಖ ಸಂಗೀತ ಶಾಲೆಯಲ್ಲಿ ಬೇಕಾದ ತರಬೇತಿ ಕೊಡುತ್ತಾರೆ. ಒಟ್ಟಿನಲ್ಲಿ ಈ ಕಾರ್ಯಕ್ರಮ, ನನ್ನ ಅಭಿಪ್ರಾಯದಲ್ಲಿ Britain Has Got Talent ಗಿಂತ ಚೆನ್ನಾಗಿದೆ.
ಕಲರ್ಸ್ ಕನ್ನಡ ಚಾನಲ್ ನಲ್ಲಿ ಶನಿವಾರ ಮತ್ತು ಭಾನುವಾರ ಫ್ಯಾಮಿಲಿ ಪವರ್ ( Family Power) ಅನ್ನುವ ಒಳ್ಳೆ ಕಾರ್ಯಕ್ರಮ ಪುನೀತ್ ರಾಜ್ ಕುಮಾರ್ ಮಾಡುತ್ತಾರೆ. ಈತ ತುಂಬಾ ದೊಡ್ಡ ಸ್ಟಾರ್ ಆದರೂ ತುಂಬಾ ವಿನಯತೆ ಇದೆ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಇಂದ ಮಾತನಾಡಿಸುತ್ತಾರೆ .
ಮೂರು ಪೀಳೆಗೆಯ ಎರಡು ಕುಟುಂಬವರು ಇದರಲ್ಲಿ ಭಾಗವಹಿಸುತ್ತಾರೆ, ಚಿಕ್ಕವರು ಮತ್ತು ದೊಡ್ಡವರಿಗೆ ತಕ್ಕಂತೆ ಪ್ರೆಶ್ನೆಗಳನ್ನ ಕೇಳುತ್ತಾರೆ ಮತ್ತು ಆಟಗಳನ್ನೂ ಆಡಿಸಿ ಗೆದ್ದವರಿಗೆ 10 ಲಕ್ಷ ರೂ. ಬಹುಮಾನ ಗೆಲ್ಲುವ ಅವಕಾಶ ಇದೆ. ಪ್ರಾರಂಭದಲ್ಲಿ ಪುನೀತ್ ಎರಡು ನಿಮಿಷ ಮಾತನಾಡಿ ನಮ್ಮ ಜೀವನದಲ್ಲಿ ನಮ್ಮ ಕುಟುಂಬ ಮತ್ತು ಸಂಸಾರಗಳು ಎಷ್ಟು ಪ್ರಾಮುಖ್ಯ ಅಂತ ಬಹಳ ಚೆನ್ನಾಗಿ ಹೇಳುತ್ತಾರೆ. ಕಾರ್ಯಕ್ರಮದ ಕೊನೆಯ ಆಟ ಬಹಳ ತಿಳುವಳಿಕೆ ಯಾಗಿದೆ. ಇದರಲ್ಲಿ ಕನ್ನಡದ ಗಾದೆಗಳು , ಊರುಗಳು ಅಥವಾ ಸಿನೆಮಾ ಮೇಲೆ ಒಂದು ಸುಳಿವು ಮೇಲೆ ಉತ್ತರವನ್ನು ಮೂಕಾಭಿನಯದಿಂದ ನಟಿಸಿ ಹೇಳಬೇಕು. ಅನೇಕ ಗಾದೆಗಳು ನಮಗೆ ಗೊತ್ತಿರಲಿಲ್ಲ . ಇದರಲ್ಲಿ ಗೆದ್ದವರು ಹಣವನ್ನು ಗೆಲ್ಲುತ್ತಾರೆ. ಇದರಲ್ಲಿ ಭಾಗವಹಿಸುವ ಕೆಲವರು ಅಷ್ಟೇ ಬಂದ ಬಹುಮಾನದಲ್ಲಿ ಇತರಿಗೆ ಸಹಾಯ ಮಾಡುವ ಉದ್ದೇಶ ಇಟ್ಟುಕೊಂಡಿರುತ್ತಾರೆ. ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಒಂದು ಕುಟುಂಬದ ಮಗುವಿನ ಚಿಕಿತ್ಸಗೆ ಕೆಲವು ಲಕ್ಷ ಹಣ ಬೇಕಾಗಿತ್ತು . ಇವರ ಜೊತೆಯಲ್ಲಿ ಭಾಗವಹಿಸಿದ ಒಂದು ಮುಸ್ಲಿಂ ಕುಟುಂಬ ಮೂರು ಲಕ್ಷ ಗೆದ್ದು ಈ ಮಗುವಿಗೆ ಕೊಟ್ಟರು. ಈ ರೀತಿಯ ಸಹಕಾರ ಮತ್ತು ಸಮಾಜ ಸೇವೆ ಪುನೀತ್ ಪ್ರೋತ್ಸಾಹಿಸುತ್ತಾರೆ ಈ ಕಾರ್ಯಕ್ರಮ ಹೋದ ವಾರ ಕೊನೆಯ ಕಾರ್ಯಕ್ರಮದಲ್ಲಿ colors ಧಾರಾವಾಹಿಯ ಹಲವಾರು ತಾರೆಗಳು ಇದರರಲ್ಲಿ ಭಾಗವಹಿಸಿ ಒಂದು ಕಿವುಡು ಮತ್ತು ಮೂಕ ಮಗುವಿನ ಚಿಕಿತ್ಸೆಗೆ ಬೇಕಾಗಿದ್ದ 14 ಲಕ್ಷ ವನ್ನು ಸಂಗ್ರಹಿಸುವ ಸಾಧ್ಯತೆ ಈ ತಂಡತವರಿಗೆ ಇತ್ತು. ಕೊನೆಗೆ 9 ಲಕ್ಷ ಗೆದ್ದು ಈ ಮಗುವಿನ ಮನೆಯವರಿಗೆ ಕೊಟ್ಟರು . ಈ ಕಾರ್ಯಕ್ರಮ ಇಂಗ್ಲಿಷ್ ನಲ್ಲಿ ಹೇಳುವುದಾದರೆ “Real family entertainment”
ನಾವು ಈಚೆಗೆ ಅಗ್ನಿಸಾಕ್ಷಿ ಅನ್ನುವ ಧಾರಾವಾಹಿ ನೋಡುವುದಕ್ಕೆ ಶುರುಮಾಡಿದ್ದೇವೆ. ಈ ಕುಟುಂಬದ ಯಜಮಾನರು ನಮ್ಮ ಪ್ರೀತಿಯ ನಟ ಮುಖ್ಯ ಮಂತ್ರಿ ಚಂದ್ರು. ಬಹಳ ದೊಡ್ಡಮನೆ ಯಲ್ಲಿ ಒಟ್ಟು 6-7 ಜನ ಇದ್ದಾರೆ.ಹಿಂದೆ ಏನಾಯಿತು ಅಂತ ಗೊತ್ತಿಲ್ಲ ಆದರೆ ನಾವು ನೋಡುವುದಕ್ಕೆ ಶುರು ಮಾಡಿದಾಗ ಕಿಶೋರ್ ಅನ್ನುವನ್ನು ಅಪಹರಿಸಿ ಈ ಮನೆಯ ಇಬ್ಬರು ಅವನನ್ನು ಊರಾಚೆ ಒಂದು ತೋಟದಲ್ಲಿ ಬಚ್ಚಿಟ್ಟಿದ್ದಾರೆ . ಕಿಶೋರ್ ಇಲ್ಲಿಂದ ತಪ್ಪಿಸಿಕೊಂಡು ಈ ಮನೆಯ ಸೊಸೆ ಸನ್ನಿಧಿ ಯನ್ನು ಅಪಹರಿಸಿ ಒಂದು Timber Yard ನಲ್ಲಿ ಅವಳನ್ನ ಇಡುತ್ತಾನೆ To cut the long story short, ಸನ್ನಿಧಿ ಗಂಡ ಇವರನ್ನ ಹುಡಿಕಿದ . ಇಬ್ಬರ ಹತ್ತಿರವೂ ಗನ್ ಇದೆ ಮತ್ತು ಜಗಳವೂ ನಡೆಯಿತು ಮತ್ತು ಕಿಶೋರ್ ನ ತಮ್ಮ (ಇವನು ಇಲ್ಲಿ ಹೇಗೆ ಬ೦ದ ಅಂತ ಕೇಳಬೇಡಿ ದೊಡ್ಡ ಕಥೆ ಅದು ) ಈ ಜಗಳವನ್ನು ನೋಡಿ ಅವನ ಗನ್ನಿಂದ ಶೂಟ್ ಮಾಡಿದಾಗ ಕಿಶೋರ್ ಗೆ ಪೆಟ್ಟು ಬಿದ್ದು ಸಾಯಿತ್ತಾನೆ ಪೊಲೀಸ್ ನವರು ಬಂದು ತನಿಖೆ ಶುರುಮಾಡುತ್ತಾರೆ. ಈಗ ಶೂಟ್ ಮಾಡಿದ್ದವನ್ನೇ ಅರೆಸ್ಟ್ ಮಾಡಬೇಕಲ್ಲವಾ ? ಇಲ್ಲ ಕಿಶೋರನಿಗೆ ಹೊಡ್ದಿದ್ದು ಸರಿಯಾಗಿದೆ ಅಂತ ಸನ್ನಿಧಿ ಪೊಲೀಸ್ ಗೆ ಹೇಳಿದಾಗ ಅವನ್ನ ಅರೆಸ್ಟ್ ಮಾಡೋಲ್ಲ . ಇದಕ್ಕಿಂತ ಹುಚ್ಚು ನಿರ್ದೇಶನ ಎಲ್ಲಾದರೂ ನೋಡಿದ್ದೀರಾ?. ಪೊಲೀಸರು ಇನ್ನೂ ಕೈ ಬಿಟ್ಟಿಲ್ಲ ಹಲವಾರು ವಾರ ಆದಮೇಲೆ ಈ ಕಥೆ ಎಲ್ಲಿಗೆ ಬಂತು ಅಂತ ತಿಳಿಯುತ್ತೆ . ಇಂತಹ ಶ್ರೀಮಂತ ಕುಟುಂಬಗಳಲ್ಲಿ ಮನೆ ಮನೆಯವರಿಗೆ ಅಸೂಯೆ , ದ್ವೇಷ, ಅಹಂಕಾರ ಮತ್ತು ಜಗಳ ಇದ್ದರೆ ಹೇಗೆ ಸಂಸಾರ ಮಾಡುವುದಕ್ಕೆ ಸಾಧ್ಯವೆ ಅಂತ ಯೋಚನೆ ಬರುತ್ತೆ. ಆದರೆ ಈ ಕಾರ್ಯಕ್ರಮಗಳನ್ನು ತುಂಬಾ ಸೂಕ್ಷ್ಮ ದೃಷ್ಟಿ ಇಂದ ನೋಡಬಾರದು. ಈ ಸಮಸ್ಯೆಗಳು ಇರುವುದು ಸಹಜ ಅಂತ ಸುಮ್ಮನಿರಬೇಕು .
30 ನಿಮಿಷದಲ್ಲಿ 10 ನಿಮಿಷ ಕಥೆ, 10 ನಿಮಿಷ ಜಾಹಿರಾತುಗಳು ಮತ್ತು 10 ನಿಮಿಷ ಜೋರಾಗಿ ಮ್ಯೂಸಿಕ್ ನಿಂದ ನಟ ಮತ್ತು ನಟಿ ಯರ Still ಫೋಟೋಗಳು!!!. ನಾವೇನು ನೋಡುವುದು ಬಿಟ್ಟಿಲ್ಲ ಈ ತಮಾಷೆ ಚೆನ್ನಾಗಿದೆ. ಅನೇಕ ಚಾನಲ್ ಗಳಲ್ಲಿ ಕನ್ನಡ ಸಿನಿಮಾ ಗಳೂ ಬರುತ್ತೆ.ಆದರೆ ಒಂದು ವಿಷಯವೇನೆಂದರೆ, ಈಚೆಗೆ ಬರುವ ಚಲನಚಿತ್ರ ವಾಗಲಿ ಅಥವಾ ಟಿವಿ ನಲ್ಲಿ ಬರುವ ಕಥೆಗಳಾಗಿರಲಿ technical production ಚೆನ್ನಾಗಿರುತ್ತೆ. ಮಹಿಳೆಯರು ಚೆನ್ನಾಗಿ ಅಲಂಕಾರ ಮಾಡಿಕೊಂಡು ಕೈಯಲ್ಲಿ ಮೊಬೈಲ್, ಬಡತನ ಇದ್ದಹಾಗೆ ಕಾಣಿಸುವುದಿಲ್ಲ!
ಈ ಟಿವಿ ನಲ್ಲಿ ಬರುವ ಜಾಹೀರಾತು ಗಳ ಬಗ್ಗೆ ಎರಡು ಮಾತು. ನೀವು ನೋಡಿ, ಅನೇಕ ಕ್ರೀಮ್ ಗಳು ನಿಮ್ಮ ಚರ್ಮನ ಬಿಳಿ ಮಾಡುವುದು. ಇದಕ್ಕೆ ಬರುವ ಮಹಿಳೆಯರು ಬೆಳ್ಳಗೆ ಇರುತ್ತಾರೆ ಇವರು ಈ ಕ್ರೀಮ್ ಉಪಯೋಗಿಸುತ್ತಾರೆ ಅದೇ ಕಾರಣವಂತೆ. ಮಕ್ಕಳು ಸಹ ಬೆಳ್ಳಗೆ ಸಿಟಿ ನಲ್ಲಿ ಬೆಳೆದವರು.. ಈ ಮಕ್ಕಳು ಭಾರತದೇಶದಲ್ಲಿ ಹುಟ್ಟಿದ್ದಾರಾ ಅಂತ ಸಂಶಯ ಬಂದರೆ ಏನು ಆಶ್ಚರ್ಯ ಇಲ್ಲ. ಇವರು ಮಾತನಾಡುವ ಕನ್ನಡ ಅದು ಎಷ್ಟು ಸ್ಪಷ್ಟ ವಾಗಿದೆ ಅಂತೀರಾ.ಅಂದಹಾಗೆ ನಿಮಗೆ ತುಪ್ಪ ಹೇಗಿರಬೇಕು ಅಂತ ಗೊತ್ತ ? ಜಾಹಿರಾತು ಪ್ರಕಾರ “ಪರಿಶುದ್ಧವಾದ ತುಪ್ಪ ಮರಳು ಮರಳು ಆಗಿರಬೇಕು” ಮುಂತಾದ ಅನೇಕ ಸಂಗತಿಗಳು.
ಅಮಿತಾಭ್ ಬಚ್ಚನ್ , ಯಸ್. ಆರ್.ಕೆ, ವಿರಾಟ್ ಕೋಹ್ಲಿ ಸಹ ಶುದ್ಧ ಕನ್ನಡದಲ್ಲಿ ಮಾತನಾಡುವುದನ್ನ ಕಲಿತಿದ್ದಾರೆ!! ಈ ದೇಶದಲ್ಲಿ ಬೆಳ್ಳಗಿರೋರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿಳಿ ಕಡಿಮೆ ಆಗಿ ಸ್ವಲ್ಪ tan ಬರಲಿ ಅಂತ ಪ್ರಯತ್ನಿಸುತ್ತಾರೆ ಆದರೆ ಭಾರತದಲ್ಲಿ ಇದಕ್ಕೆ opposite. ಕೆಲವು ಜಾಹಿರಾತುಗಳು ಈ ದೇಶದ Trade Description Act ಗೆ ಬಲಿಯಾಗಬಹುದು! ಉದಾಹರಣೆಗೆ, ನಿಮಗೆ ಹಣ ಕಾಸಿನ ಅಥವಾ ಅರೋಗ್ಯ ಸಮಸ್ಯೆಗಳಿದ್ದರೆ ಒಂದು ಯಂತ್ರವನ್ನು ಕೊಂಡು ಇದಕ್ಕೆ ಪೂಜೆ ಮಾಡಿ ನಿಮ್ಮ ಕತ್ತಿಗೆ ಕಟ್ಟಿ , ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರವಾಗತ್ತೆ! ಇನ್ನೊಂದು ಮಾತ್ರೆ ಅಥವಾ ಓಷಧಿ ಮರೆವುರೋಗಕ್ಕೆ, ಇದು ನಿಮ್ಮ ಮಕ್ಕಳಿಗೆ ಕೊಟ್ಟರೆ ಅವರ ಜ್ಞಾಪಕ ಶಕ್ತಿ ಹೆಚ್ಚಾಗಿ ಪರೀಕ್ಷೆಗಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಾರೆ, ಇತ್ಯಾದಿ.
ನನ್ನ ಈ ಮಾತುಗಳನ್ನ ಕೇಳಿ ತಪ್ಪು ತಿಳಕೋಬೇಡಿ. ನನ್ನ ವಾರೆ ನೋಟ ದಿಂದ ನೋಡಿದ ಈ ಸಂಗತಿಗಳು. ಕನ್ನಡ ಚಾನಲ್ ಇಲ್ಲದೆ ಇದ್ದರೆ ಖಂಡಿತ subscribe ಮಾಡಿ. ಇಲ್ಲಿ 200 ಚಾನಲ್ ಇದ್ದರೂ ಕೆಲವು ಸಾರಿ ಟಿವಿ ನಲ್ಲಿ ಏನೂ ಇಲ್ಲ ಅಂತ ಕಾಮೆಂಟ್ ಕೇಳಿರುತ್ತೀರ ಅಲ್ಲವೇ ಅಂತ ಸಮಯದಲ್ಲಿ ನಮ್ಮ ಮೆಚ್ಚಿನ ಕನ್ನಡ ಚಾನಲ್ ನಿಮ್ಮ ನೆರವಿಗೆ ಬರುತ್ತೆ
ರಾಮಮೂರ್ತಿ
ಬೇಸಿಂಗ್ ಸ್ಟೋಕ್
(Picture credits to Google)
There are some distinctive often boring features and characteristics of Kannada soaps. Some of them are highlighted by Mr.Ramamurthy. Here are some more.
1…The producers think nothing of stretching a thin story line to 500 or even 1000 episodes.Funny thing is children become adults but their parents remain as ever fresh from full beauty parlour and they never age.
2. They take pride in in bringing super natural powers to help the good characters in distress. Most of the times the background music is very jarring. The music director thinks nothing of pairing very incompatible musical instruments such as a veena/sitar with chandey/maddalay, a flute with a nagari,violin with huge drums,a morsing with a thamte or all of them at the same time!
3….All undesirable male characters are dark colured,with very long hair, wearing a leather jerkin and always calling the leader ” boss “.
4… There is always a male character who is a do gooder and has superhuman physical strength who thinks nothing of bashing ten armed goons.His wife is a very good lady where as her mother-in-law is a termagont always scheming,denigrating the d-in-law where as her husband is a weak hen pecked fellow who is completely cowed down.
LikeLike
ಮಾಹಿತಿಯಿಂದ ಕೂಡಿದ conversation styleದ ಸ್ವಾರಸ್ಯಪೂರ್ಣ ಲೇಖನ ರಾಮಮೂರ್ತಿಯವರೆ!
LikeLike
ತುಂಬ ಚೆನ್ನಾಗಿದೆ ನಿಮ್ಮ ಹರಟೆ ತರಹದ ಬರಹ.
ನಿಮ್ಮ ಹಾಸ್ಯಪ್ರಜ್ಞೆ ತುಂಬ ಚೆನ್ನಾಗಿದೆ.
ಇನ್ನೂ ಹೆಚ್ಚು ಜನ ಕನ್ಮಡ ಟಿವಿ ನೋಡಲಿ. ಕನ್ನಡ ಹೀಗೇ ಮುಂದುವರಿಯಲಿ.
ಕೇಶವ
LikeLike