ಇವರ ಮಾತೃಭಾಷೆ ಕನ್ನಡ ಅಲ್ಲ ಆದರೆ ಇವರು ಕನ್ನಡನಾಡಿನ ಧ್ರುವ ತಾರೆಗಳು – ಬೇಸಿಂಗ್ ಸ್ಟೋಕ್ ರಾಮಮೂರ್ತಿ

ಇವರ ಮಾತೃಭಾಷೆ  ಕನ್ನಡ ಅಲ್ಲ ಆದರೆ ಇವರು ಕನ್ನಡನಾಡಿನ ಧ್ರುವ ತಾರೆಗಳು 

ಕರ್ನಾಟಕದಲ್ಲಿ ಮಾತ್ರವೋ ಅಥವಾ ಹೊರಗೂ ಈ ವಿಚಾರ ಬಹಳ ಸಾಮಾನ್ಯವೋ ಗೊತ್ತಿಲ್ಲ.  ಉದಾಹರಣೆಗೆ,  ತಮಿಳು ನಾಡಿನಲ್ಲಿ  ನೆಲಸಿರುವ  ಕನ್ನಡ ದವರು  ತಮಿಳಿನಲ್ಲಿನಲ್ಲಿ ಬರೆಯುವ ಪ್ರಸಿದ್ಧ ಲೇಖಕರು ಇದ್ದಾರೆಯೆ ನನಗೆ ಗೊತ್ತಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಈ  ವಿಚಾರ ನಮ್ಮ ಮನಸ್ಸಿಗೂ  ಬರುವುದಿಲ್ಲ,  ಅಲ್ಲವೇ?  ಇಲ್ಲಿ ಇಂತಹ ಕೆಲವರನ್ನು  ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.

ಕನ್ನಡಕ್ಕೆ ಒಬ್ಬರೇ ಕೈಲಾಸಂ  ಮತ್ತು ಪ್ರಹಸನ ಪಿತಾಮಹ (೧೮೮೪೧೯೪೬)

Figure 1T.P.Kailasam

 

“ಕಾರಣವಿರಲಿ ಇಲ್ಲದೇ ಇರಲಿ ನಗಿ , ಆಗ ನಿಮ್ಮನ್ನು ನೋಡಿ ಇತರರೂ ನಗುತ್ತಾರೆ“

“ನಾವಿರುವ White House ನಲ್ಲಿ ನಾನು Black Sheep“

“ಹನುಮಂತ ಹೇಗೆ ಲಂಕೆಗೆ ಹಾರಿದ ಸರ್ ?  ಉತ್ತರ , ಅವನು ಹಾರ್ಲಿಕ್ಸ್ (ಹಾರ್ ಲಿಕ್ಸ್ ( ಕುಡೀತಾನೆ!

ಇಂತಹ ಅನೇಕ ಹಾಸ್ಯದ ತುಂಡುಗಳನ್ನು ನಮಗೆ ಪರಿಚಯ ಮಾಡಿದವರು ಕೈಲಾಸಂ ನೂರು ವರ್ಷದ ಹಿಂದೆ. ತಂಜಾವೂರು ಪರಮಶಿವ ಕೈಲಾಸಂ ತಮಿಳು ಭಾಷೆ ಮಾತನಾಡುವ ಮನೆತನೆದವರು. ಅವರ ತಂದೆ ಪರಮಶಿವ ಐಯ್ಯರ್.  ಆಗಿನ ಮೈಸೂರು ಪ್ರಾಂತ್ಯದಲ್ಲಿ ಮುನಿಸೀಫ್ ರಾಗಿ ಸೇರಿ ಕೊನೆಗೆ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತಿ ಆದರು. ಕೈಲಾಸಂ ೧೮೮೪,  ಜುಲೈ ೨೯  ರ೦ದು ಬೆ೦ಗಳೂರಿನಲ್ಲಿ ಜನಿಸಿದರು

ಇವರ  ವಿಧ್ಯಾಭ್ಯಾಸ   ಡಿಗ್ರೀ ವರಗೆ  ಮದ್ರಾಸ್ ನಗರದಲ್ಲಿ ನಡೆಯಿತು . ಇವರ ಹೈಸ್ಕೂಲ್  ಮುಖ್ಯೋಪಾಧ್ಯಯರು ಪ್ರಸಿದ್ಧ Rt. Hon ಶ್ರೀನಿವಾಸ ಶಾಸ್ತ್ರಿಗಳು. ಕೈಲಾಸಂ ಪ್ರಕಾರ  ಆಗ ಅವರು Rt Hon ಆಗಿರಲಿಲ್ಲ  Honourable ಲೆಫ್ಟ್ ಔಟ್ !)   ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ  ಇವರು ಬಿ ಎ ಪದವಿ ಯಲ್ಲಿ ಮೊದಲನೆ  ಸ್ಥಾನ ಗಳಿಸಿದ್ದರಿಂದ  ಆಗಿನ ಮೈಸೂರು ಮಹಾರಾಜರು ಇವರನ್ನ ಲಂಡನ್ ನಲ್ಲಿ ಇರುವ  Royal  School of Mines ನಲ್ಲಿ ಭೂವಿಜ್ಞಾನ )Geology )  ಓದಲು ವಿದ್ಯಾರ್ಥಿವೇತನ ಕೊಟ್ಟು ೧೯೦೯ ನಲ್ಲಿ ಕಳಿಸಿದರು.ಅಲ್ಲಿ ಓದುವುದು ಒಂದೇ ಅಲ್ಲ ಲಂಡನ್ ನ ಪ್ರಸಿದ್ಧ ರಂಗಮಂದಿರ ಮತ್ತು Music Hall ಗಳ ಪರಿಚಯ ಮಾಡಿಕೊಂಡು  ಆರು  ವರ್ಷದ ನಂತರ,  ಮೂರು ವರ್ಷದ  ಪದವಿ ಇದು ಆದರೆ ಇವರು ಇವರು ಅಲ್ಲೇ ಇರುವುದಕ್ಕೆ ಇಷ್ಟವಾಗಿ ಆರು ವರ್ಷ ಆಯಿತು) ೧೯೧೫ )ಇಂಡಿಯಾ ಗೆ ವಾಪಸ್ಸು ಬಂದು ಮೈಸೂರು ಗಣಿಗಳ  ಸಂಸ್ಥೆಯಲ್ಲಿ  ಕೆಲಸಕ್ಕೆ ಸೇರಿದರು. ಇನ್ನೂಇಂಗ್ಲೆಂಡಿನಲ್ಲಿ  ಇರುವುದಕ್ಕೆ  ಬಹಳ ಪ್ರಯತ್ನ ಪಟ್ಟರಂತೆ, ಆದರೆ ಮೊದಲನೆಯ ಮಹಾ ಯುದ್ಧ ಶುರುವಾದಾಗ ಭಾರತ ಪ್ರಜೆಗಳನ್ನು ಸರ್ಕಾರ ವಾಪಸ್ಸು ಕಳಿಸಿಬಿಟ್ಟತು. ಇವರ ಕೆಲಸ ಕೋಲಾರದಲ್ಲಿ KGF ನಲ್ಲಿ ಇತ್ತು ಆದರೆ ಇವರು ಕೆಲಸದಮೇಲೆ ಅಷ್ಟೇನು ಗಮನ ಕೊಟ್ಟಿದ್ದಹಾಗೆ ಇಲ್ಲ. ಸಾಯಂಕಾಲ ಕೆಲವು ಕೆಲಸದವರನ್ನು ಸೇರಿಸಿ ನಾಟಕ ಮತ್ತು ಸಂಗೀತ ಸಭೆಗಳನ್ನೂ ನಡೆಸುತ್ತಿದ್ದರಂತೆ. ಇಂತಹ ನಡವಳಿಕೆ ಮೇಲಿನ ಅಧಿಕಾರಿಗಳಿಗೆ ಹಿಡಸಲಿಲ್ಲ. ಒಬ್ಬ ಹಿರಿಯ ಅಧಿಕಾರಿ ಸಾಮಾನ್ಯ ಜನರೊಂದಿಗೆ ಸೇರಿ ನಾಟಕ ಮಾಡುವುದು ಎಲ್ಲಾದರೂ ಉಂಟೆ ! ನಂತರ ಈ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೆಂಗಳೂರಿಗೆ  ಬಂದು ನೆಲಸಿದರು,  ಮುಂದೆ ಅವರ ಜೀವಮಾನ ಪೂರ್ತಿ ” unemployed ಅಂಡ್ unemployable ” ಅಂತ ಅವರೇ ಹೇಳಿಕೊಂಡರು. ಇವರ ತಂದೆ ತುಂಬಾ ದೊಡ್ಡ ಕೆಲಸದಲ್ಲಿ ಇದ್ದರೂ ಅಪ್ಪ ಮಗನ ಮನಸ್ತಾಪ ಇದ್ದೇ  ಇತ್ತು. ಮಗ ಅಷ್ಟೆಲ್ಲ ವಿದೇಶದಲ್ಲಿ ಓದಿ ಕೆಲಸ ಇಲ್ಲದೆ  ಮನೇಲಿ ಕೂತಿರುವುದು  ತಂದೆ ಪರಮಶಿವ ಐಯ್ಯರ್  ಅವರಿಗೆ ಸಹಜವಾಗಿ  ಹಿಡಿಸಲಿಲ್ಲ . ಸರಿಯಾಗಿ ಮನೆಯಲ್ಲೇ  ಇರುವುದೂ  ಕಷ್ಟ ಆಯಿತು. ಆದರೆ ಬೇರೆ ಆದಾಯ ಇಲ್ಲ ಹೊರಗೆ ಬಾಡಿಗೆ ಮನೆಯಲ್ಲಿ ಇರುವುದಕ್ಕೆ. ಆದ್ದರಿಂದ ಅವರ ತಂದೆ ಮನೆಯ ಗ್ಯಾರೇಜ್ ನಲ್ಲಿ ವಾಸ ಪ್ರಾರಂಭ. ಈ ಮನೆ ಹೆಸರು white House ಇದು ಈಗಿನ ಬೆಂಗಳೂರಿನ ಮಿಂಟೋ ಆಸ್ಪತ್ರೆ ಎದುರಿಗೆ ಇತ್ತು. ಇವರಿಗೆ ಕಮಲ ಅನ್ನುವರ ಜೊತೆ ಮದುವೆ  ಆಗಿತ್ತು ಆದರೆ ಒಟ್ಟಿಗೆ ಸಂಸಾರ ಮಾಡಿದ್ದಹಾಗೆ ಏನೂ ಇಲ್ಲ .   ವಾಸವಾಗಿದ್ದ ಬಹಳ ಗಲೀಜಾಗಿ ಇದ್ದ ಕೊಠಡಿಗೆ Nook ಅಂತ ಹೆಸರು ಕೊಟ್ಟಿದ್ದರು. ಬರೀ  ಸಿಗರೇಟ್ ತುಂಡುಗಳು , ಖಾಲಿ ಬೀರ್ ಬಾಟಲ್ ಗಳು ಮತ್ತು ಅರ್ದ ತಿಂದ ಊಟ ಮುಂತಾದವು ಇಲ್ಲಿ ಸಾಮಾನ್ಯ. ಇವರ “ದಿನ” ಶುರು ಆಗುವುದು ಸುಮಾರು ರಾತ್ರಿ ಹತ್ತು ಗಂಟೆ ಮೇಲೆ. ಬಂದ  ಸ್ನೇಹಿತರನ್ನು ಸೇರಿಸಿ ಹರಟೆ, ನಾಟಕಗಳನ್ನ ಕೈಲಾಸಂ dictate ಮಾಡಿದಾಗ, ಬಿ ಸ್ ರಾಮರಾಯರು, ಈ. ರ್. ಸೇತುರಾಂ ಇಂತಹ ಸ್ನೇಹಿತರು ಬರೆಯುತ್ತಿದ್ದರು. ಅವರೇ ಯಾವತ್ತೂ ಕೂತು ಏನೂ ಬರೆಯಲ್ಲಿಲ್ಲ ಅಂತ ಪ್ರತೀತಿ.  ೧೯೧೮ ರಲ್ಲಿ ಇವರ ಮೊದಲನೆಯ ಕನ್ನಡ ನಾಟಕ ಟೊಳ್ಳು-ಗಟ್ಟಿ. ಇಲ್ಲಿಯವರೆಗೆ ಕನ್ನಡದಲ್ಲಿ ನಾಟಕಗಳು ಬರಿ ಇತಿಹಾಸ ಅಥವಾ ಪೌರಾಣಿಕ ಸಂಭಂದಿಸಿದ್ದು. ಆಧುನಿಕ ಸಮಾಜದ ಸಮಸ್ಯೆಗಳ ಬಗ್ಗೆ ಯಾರೂ ಬರದಿರಲಿಲ್ಲ.  ಕೈಲಾಸಂ ಮೊದಲನೆಯವರು, ಇದಲ್ಲದೆ ಸಂಭಾಷಣೆ ಸಹ, ಕನ್ನಡ ಮತ್ತು ಇಂಗ್ಲಿಷ್ ಮಿಶ್ರಣ. ಇದು ಕೆಲವರಿಗೆ ಬಹಳ ವಿಚಿತ್ರವಾಗಿ ಕಾಣಿಸಿತು ಆದರೆ ಈ ನಾಟಕಗಳು ಪ್ರದರ್ಶನ ಆದಮೇಲೆ ಕೈಲಾಸಂ ಹೆಸರು ನಾಡಿನಲ್ಲಿ ಹರಡಿತು. ಇವರಿಗೆ ರಂಗಭೂಮಿಯಲ್ಲಿ ಆಸಕ್ತಿ ಇದ್ದರಿಂದ ೧೯೨೮ ವಸಂತಸೇನ ಅನ್ನುವ ಮೊಟ್ಟ  ಮೊದಲನೆಯ ಕನ್ನಡ ಚಲನಚಿತ್ರದಲ್ಲಿ )silent ) ನಟಿಸಿದರು. ನಂತರ ೧೯೩೮ರಲ್ಲಿ ವೀರ ಜಗದೀಶ ಅನ್ನುವ ತಮಿಳು ಚಿತ್ರದ ನಿರ್ದೇಶನ. ಇದರ ಮಧ್ಯೆ ಕೈಲಾಸಂ ಇಂಗ್ಲಿಷ್ ನಲ್ಲಿ The Burden (೧೯೩೩( Fulfilment (೧೯೩೩( ಮತ್ತು Purpose  ಮುಂತಾದವು ಇವರು ಬರೆದ ಪೌರಾಣಿಕ ನಾಟಕಗಳು ಮತ್ತು ಕನ್ನಡದಲ್ಲಿ ಬರೆದ ನಾಟಕಗಳು ೨೦ ಇದಲ್ಲದೆ ೧೭ ಇಂಗ್ಲಿಷ್ ಕವನಗಳು ಮತ್ತು ಹಾಸ್ಯದ  ಪದಗಳು ಇವರಿ೦ದ ರಚಿತ.

ಲಂಡನ್ ನಲ್ಲಿ ಕೈಲಾಸಂ ತಪ್ಪದೆ ಮ್ಯೂಸಿಕ್ ಹಾಲ್ ಗಳಿಗೆ ಹೋಗುತಿದ್ದರು. “ಇಟ್ ಐಸ್ ಏ  ಲಾಂಗ್ ವೆ ಟು ತಿಪ್ಪೆರಾರಿ )it is a long way to Tipperary ) ಅನ್ನುವ ಇಂಗ್ಲಿಷ್ ಪದ್ಯಕ್ಕೆ ಇವರು ಕನ್ನಡದಲ್ಲಿ “ನಮ್ಮ ತಿಪ್ಪಾರಹಳ್ಳಿ ಬಲೂ ದೂರ ” ಅಂತ ಅಲ್ಲೇ ಕಟ್ಟಿ ಹಾಡಿ ಒಂದು ಪೌಂಡ್ ಸಂಭಾವನೆ ಪಡೆದರಂತೆ.  ಕೈಲಾಸಂ ಹಾಸ್ಯ ಮಾತ್ರವಲ್ಲ, ಗಂಭೀರವಾದ ಅಂದರೆ serious ನಾಟಕಗಳನ್ನೂ ಸಹ ಬರೆದಿದ್ದಾರೆ.  ಸೂಳೆ ಮತ್ತು ಬಹಿಷ್ಕಾರ ನಾಟಕಗಳು ಸಮಾಜದ ಸಮಸ್ಯೆಗಳ ಬಗ್ಗೆ. ಆಗಿನ ಕಾಲದ ರಂಗಭೂಮಿಯ ಅನೇಕ ನಾಟಕಗಳಲ್ಲಿ ಏನೂ ತಿರುಳಿಲ್ಲ ಅಂತ ತೋರಿಸುವುದಕ್ಕೆ “ನಮ್ಕಂಪಿನಿ ” ನಾಟಕದಲ್ಲಿ ಗೇಲಿ ಮಾಡಿದ್ದಾರೆ . ಇದೆ ರೀತಿ “ನಮ್ ಬ್ರಾಹ್ಮಣಿಕೆ ” ಯಲ್ಲಿ  ಸಿಗರೇಟು ಸೇದುವುದು ಹೇಗೆ ಅನ್ನುವುದನ್ನು ಮಂತ್ರದಲ್ಲಿ  ರೂಪಿಸಿದ್ದು ಆನೇಕರಿಗೆ ಇದು ಅನಾವೃಷ್ಟಿ ಅನ್ನಿಸರಬೇಕು. ಆದರೆ ಕೈಲಾಸಂ ತಮ್ಮನ್ನೇ ತಮಾಷಿ ಮಾಡಿಕೊಂಡು I am a “typical ass” ಅಂತ ಗೇಲಿ ಮಾಡುಕೊಳ್ಳುತ್ತಿದ್ದರು.   ಇವರ ನಾಟಕದಲ್ಲಿ ರಚಿಸಿರುವ ಪಾತ್ರಗಳು ಅನೇಕ, ಪಾತು , ಸಾತು ನಾಗತ್ತೆ ಇತ್ಯಾದಿ.

ಶ್ರೀ M G ಶ್ರೀನಿವಾಸ್ ಅವರ ಚಿತ್ರ Simply kailawesome(https://youtu.be/oH8hVrBwbS8) ದಲ್ಲಿ ಇವರೆಲ್ಲ ಬಂದು ಕೈಲಾಸಂ ಅವರನ್ನು ಅವರವರ  ಪಾತ್ರದ ಬಗ್ಗೆ ಪ್ರಶ್ನೆ ಮಾಡುವ ಸನ್ನಿವೇಶಗಳು  ಬಹಳ ಚೆನ್ನಾಗಿದೆ. ಇದರಲ್ಲಿ ಶ್ರೀನಿವಾಸ್ ಅವರೇ ಕೈಲಾಸಂ ಮತ್ತು ಸುಜನಾ ಸಿಂಗ್  ಮಹಿಳೆಯರ ಪಾತ್ರಗಳು. ಕೈಲಾಸಂ ಅವರ ಒಂದು ಸಾಲಿನ ಚುಟಕಗಳು ಅನೇಕ. ಇವರ ವಿಶೇಷತೆ ತಕ್ಷಣ ಹೇಳುವ ಚಾತುರ್ಯ, ಇಲ್ಲಿ ಹಲವು ಉದಾಹರಣೆಗಳು,

ಮಹಾತ್ಮಾ ಗಾಂಧಿಯವರು   ೧೯೩೬ರಲ್ಲಿ ವಿಶ್ರಾಂತಿ ಗೆ ನಂದಿಬೆಟ್ಟದಲ್ಲಿ  ತಂಗಿದ್ದರು. ಪ್ರಸಿದ್ಧ ಸಂಗಸಂಗೀತಗಾರ ಚೌಡಯ್ಯ ನವರು ಅವರ ಮುಂದೆ ಪಿಟೀಲು ನುಡಿಸಿದರು. ಮಹಾತ್ಮರು ಪಕ್ಕದಲ್ಲಿ ಕೂತಿದ್ದ ಕೈಲಾಸಂ ಅವರನ್ನು ಈ ಸಂಗೀತಗಾರ ಯಾರು ಅಂತ ಕೇಳಿದರು, ಕೈಲಾಸಂ ಹೇಳಿದರು ” Gandhiji you are a non violinist (nonviolence ) but Chowdaiah is a violinist ”

ಜೇನುತುಪ್ಪ ದಲ್ಲಿ ಏನು ವಿಟಮಿನ್ ಇರುತ್ತೆ ? ಕೈಲಾಸಂ ಹೇಳಿದರು “ಇದರಲ್ಲಿ ವಿಟಮಿನ್ ಬಿ , ತಿಂದರೆ ಸಿ, ಹಾಗೆ ಬಿಟ್ಟಿದ್ದಾರೆ ವಿಟಮಿನ್ ಇ  ಬರತ್ತೆ )ಈ ಅಂದರೆ ತಮಿಳ್ ನಲ್ಲಿ ನೊಣ).

ಹಾಸ್ಯ ಲೇಖಕ  ನಾ ಕಸ್ತೂರಿ ಇವರ ಮುಂದೆ ಬಂದಾಗ ಕೈಲಾಸಂ ಇವರನ್ನ ಗಮನಸಿಲಿಲ್ಲ, ಆಗ ಕಸ್ತೂರಿ “ನಾನು ಯಾರೋ ಅಂತ ಗೊತ್ತಾಗಲಿಲ್ಲವೇ” ಅಂದರಂತೆ ಕೈಲಾಸಂ ಅವರಕಡೆ ನೋಡಿ “ಹೌದು ಹೌದು ವಾಸನೆ ಬಂತು !!

ಮನೆ ಹೆಸರು ಜ್ಞಾನ Villa ವಂತೆ, ಅದು ಸರಿ ಎಲ್ಲರಿಗೂ ಇವರಿಗೆ ಜ್ಞಾನ ಇಲ್ಲ ಅಂತ  ಏಕೆ ಗೊತ್ತಾಗಬೇಕು !

…. ಇತ್ಯಾದಿ ಅನೇಕ ಚುಟಕಗಳು

ಇವರುಕನ್ನಡ  ಹಾಸ್ಯ ಸಾಹಿತ್ಯಕ್ಕೆ ಒಂದು ಘನತೆ ಕೊಟ್ಟಿದ್ದಾರೆ ಅಂದರೆ ಏನೂ ಉತ್ಪ್ರೇಕ್ಷೆ ಇಲ್ಲ. ಕೈಲಾಸಂ ಬರೆಹದಲ್ಲಿ ಹಾಸ್ಯ ವಿದ್ದರೂ ಇದರ ಹಿನ್ನಲೆ ಆಗಿನ ಸಮಾಜ ಮತ್ತು ಸಂಸಾರಗಳ ಅನೇಕ ಸಮಸ್ಯೆಗಳ ಬಗೆಗಿನ ಕಾಳಜಿ. ಟೊಳ್ಳು ಗಟ್ಟಿ, ಹೋಮ್ ರೂಲ್ , ಅಮ್ಮವರ ಗಂಡ. ಪೋಲಿಕಿಟ್ಟಿ ಮುಂತಾದ ನಾಟಕಗಳ್ಳನ್ನ ಇಂದಿಗೂ ನೋಡಬಹುದು. ಇವರ ನೈತಿಕ ಸಂದೇಶ  ಸಮಾಜದ ಕೆಲವು ಬಿರಕುಗಳನ್ನು ಗಮನಕ್ಕೆ ತರುವುದು ಎ೦ದು ಹೇಳಬಹುದು.

ಅವರ ಕಾಲದಲ್ಲಿ ಪ್ರಶಸ್ತಿ ಗಳೇನೂ ಇರಲಿಲ್ಲ. ೧೯೪೫ ರಲ್ಲಿ ಮದ್ರಾಸ್ ನಲ್ಲಿ ನಡೆದ ಕನ್ನಡ ಸಮ್ಮೇಳನ ಅಧ್ಯಕ್ಯರಾಗಿ ಚಿಕ್ಕದಾದ ಆದರೆ ಬಹಳ ಪರಿಣಾಮಕಾರಿ ಭಾಷಣ ಮಾಡಿದರು

ಇವರ ನಿಧನದ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ.  ಎರಡು ದಿನಗಳ ಹಿಂದೆ ಡಾ. ರಾ.ಶಿ.  ಶಿವರಾಂ ಕೈಲಾಸಂ ಅವರನ್ನು ತಮ್ಮ  ಮನೆಯಲ್ಲಿ  ಕೆಲವು ದಿನ ಇರಿ ಎಂದು ಕರೆದಿದ್ದರು. ಆಗ ಕೈಲಾಸಂ ಇವರ ಹತ್ತಿರ ಸಂಭಂದಿಕರಾದ ವಿ. ಟಿ. ಶ್ರೀನಿವಾಸನ್ ಮನೆಯಲ್ಲಿ ಇದ್ದರು, ಬೆಳಗ್ಗೆ ಶ್ರೀನಿವಾಸನ್ ಕಾಫಿ ಕೊಡುವುದಕ್ಕೆ ಹೋದರೆ ಕೈಲಾಸಂ ನಿಧನರಾಗಿದ್ದರು. ೧೯೪೬ ನಲ್ಲಿ ನಿಧನರಾದಾಗ ಇವರಿಗೆ ಯಾವ ಖಾಯಿಲೆಯೂ ಇರಲಿಲ್ಲ.

ಈ ಮಹಾನುಭಾವ ಕನ್ನಡ ನಾಡಿನಲ್ಲಿ ರಂಗಭೂಮಿಯ ಕ್ರಾಂತಿಯನ್ನೇ ಆರಂಭಿಸಿದರು ಎನ್ನುವುದರಲ್ಲಿ ಏನೂ ಸಂಶಯವಿಲ್ಲ.

**********

 

*

 

(//೧೮೯೧//೧೯೮೬).

 ಇವರ ಮಾತ್ರ ಭಾಷೆ ತಮಿಳು ಶ್ರೀ ವೈಷ್ಣವ ಮನೆತನದವರು. ಕೋಲಾರ್ ತಾಲೋಕ್ ಹುಂಗೇನಹಳ್ಳಿ ಯಲ್ಲಿ ಹುಟ್ಟಿದರೂ ಹತ್ತಿರಿದ ಮಾಸ್ತಿ ಎಂಬ ಹಳ್ಳಿಯಲ್ಲಿ ತಮ್ಮ ಬಾಲ್ಯವನ್ನು ಕಳೆದರು.

ಆಗಿನ ಕಾಲದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಹೋಗಬೇಕಾಗಿತ್ತು. ಅಲ್ಲಿ ಮಾಸ್ತಿ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ M. A. ಪದವಿಯನ್ನು ಪಡೆದು ಮೈಸೂರ್ ಸಿವಿಲ್ ಸೆರ್ವಿಸ್ ನಲ್ಲಿ ಅನೇಕ ದೊಡ್ಡ  ಹುದ್ದೆಗಳಲಿದ್ದು ೧೯೪೩ ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಕಾರಣ, ಇವರಿಗಿಂತ ಬಹಳ ಕೆಳದರ್ಜೆಯಲ್ಲಿ ಇದ್ದವರಿಗೆ  ಮೇಲಕ್ಕೆ ತಂದಿದಕ್ಕೆ.

ಇವರ ಮೊಟ್ಟಮೊದಲನೆಯ ಬರಹ ರಂಗಣ್ಣನ ಮಾದುವೆ ಇದು ೧೯೧೦ ರಲ್ಲಿ. ಒಟ್ಟು ೧೨೩ ಕನ್ನಡದಲ್ಲಿ ಮತ್ತು ೧೭ ಇಂಗ್ಲಿಷಿನಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಕೊನೆ ಪುಸ್ತಕ ೧೯೮೬ರಲ್ಲಿ ಮಾತುಗಾರ ರಾಮಣ್ಣ. 

ಇವರ ಸಣ್ಣ ಕಥೆಗಳು ನಾಲಕ್ಕು ಸಂಪುಟದಲ್ಲಿ ಪ್ರಕಟವಾದಾಗ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು.  ಕಾಕನಕೋಟೆ ಮುಂತಾದ ನಾಟಕಗಳು, ಇವರ ಆತ್ಮ ಚರಿತ್ರೆ ಭಾವ ಇತ್ಯಾದಿ ಅನೇಕ ಪ್ರಕಟಣೆಗಳು.  ಬಹಳ ವರ್ಷ ಇವರು ಜೀವನ ಅನ್ನುವ ಮಾಸಪತ್ರಿಕೆಯ ಸಂಪಾದಿಕರಾಗಿದ್ದರು. ಇವರ ಕಾವ್ಯನಾಮ  ಶ್ರೀನಿವಾಸ .

೧೯೮೩ರಲ್ಲಿ ಜ್ಞಾನಪೀಠ ಪ್ರಶಸ್ತಿ ಕೊಡಗಿನ ಕೊನೆಯ ರಾಜರಾಗಿದ್ದ ಚಿಕ್ಕವೀರ ರಾಜೇಂದ್ರರ ಮೇಲೆ ಬರೆದ ಕಾದಂಬರಿಗೆ.  ಇದು ಪ್ರಕಟವಾದಾಗ ಮಾಸ್ತಿಯವರ ಮೇಲೆ ಒಂದು  ಮತದ ಕೆಲವು ರಾಜಕಾರಣಿಗಳು ತಮ್ಮ ಮತಕ್ಕೆ ಅವಮಾನ ಆಯಿತು ಅಂತ   ಆರೋಪಣೆ ತಂದು ಇದನ್ನು ಭಾರತದ ಲೋಕಸಭೆಯಲ್ಲೂ ಚರ್ಚಿಸುವುದಕ್ಕೆ ಪ್ರಯತ್ನ ಪಟ್ಟರು. ಆದರೆ ರಾಷ್ಟ್ರಕವಿ ಶಿವರುದ್ರಪ್ಪ ನವರ ನೇತೃತ್ರದಲ್ಲಿ ಅನೇಕರು ಮಾಸ್ತಿ ಅವರಿಗೆ ಬೆಂಬಲನೀಡಿ ಪ್ರೋತ್ಸಾಹಿಸದರು.

ಮಾಸ್ತಿ ಅವರ  ಕಾಲದಲ್ಲಿ ನಡೆದ ಅನೇಕ ಪ್ರಸಂಗಗಳು ಇವರ ಸಣ್ಣ ಕಥೆಗಳ ವಿಶೇಷ. ಉದಾಹರಣೆಗೆ, ರಂಗೇನಹಳ್ಳಿ ರಾಮ ಅನ್ನುವ ಕಥೆಯಲ್ಲಿ ನಿರಾಳವಾಗಿ ಕನ್ನಡ ಮಾತನಾಡುವ  ಒಬ್ಬಆಂಗ್ಲ ಅಧಿಕಾರಿ ಕೋಲಾಟದ ಹಾಡು ಕೇಳಿ ಸಂಶಯ ಬಂದು ಮರಳಿನಲ್ಲಿ ಮುಳಗಿದ್ದ ಒಂದು ಹಳ್ಳಿಯ ದೇವಸ್ಥಾನವನ್ನು ಹೇಗೆ ಪುನರ್ರಚಿಸಿದ ಅನ್ನುವುದನ್ನು ಬಹಳ ಸ್ವಾರಸ್ಯ ವಾಗಿ ವರ್ಣಿಸಿದ್ದಾರೆ. ಇದು  ನಿಜವಾಗಿ ನಡೆದಿದ್ದೋ ಅಥವಾ ಕಲ್ಪನೆಯೋ ಗೊತ್ತಿಲ್ಲ. ಆದರೆ ಇದು ಸೊಗಸಾದ ಕಥೆ.   ೨ ನೇ ಸಂಪುಟದಲ್ಲಿ  ಪ್ರಕಟಕಾಗಿರುವ ನಿಜಗಲ್ಲಿನ ರಾಣಿ ಒಂದು ಇತಿಹಾಸದ ಕಥೆ.   ಇದೆ ರೀತಿ ೪ ಸಂಪುಟದಲ್ಲಿ ಪ್ರಕಟಣೆ ಆಗಿರುವ ಸಣ್ಣ ಕಥೆಗಳು ನೂರಾರು.

ಮಾಸ್ತಿ ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಜ್ಞಾನಪೀಠ ಪ್ರಶಸ್ತಿ, ಮೈಸೂರ್ ಸರ್ಕಾರದಿಂದ ರಾಜಸೇವಾಪ್ರಸ್ತಕ, ಸಾಹಿತ್ಯ ಅಕಾಡಮಿ ಗೌರವ

ಮಾಸ್ತಿಯವರು ಕಣ್ಮರೆ ಆದಮೇಲೆ ಜೀವನ ಕಾರ್ಯಾಲಯ ಟ್ರಸ್ಟ್ ಮುಖಾಂತರ ಮಾಸ್ತಿಯವರು  ಬರೆದ ಎಲ್ಲಾ ಪುಸ್ತಕಗಳನ್ನೂ ಪುನಃ ಕಂಪ್ಯೂಟರ್ ನಲ್ಲಿ ಜೋಡಿಸಿ ಪ್ರಕಟಿಸಿದ್ದಾರೆ. ಇದಕ್ಕೆ ಮಾಸ್ತಿ ಅವರ ಮೊಮ್ಮಗಳು ಮತ್ತು  ನಮ್ಮ ಕನ್ನಡಬಳಗದ ಆಜೀವ ಸದಸ್ಯರಾದ ಡಾ. ವಸಂತಶ್ರೀ ಬಹಳ ಶ್ರಮ ಪಟ್ಟಿದಾರೆ, ಈಗ ಮಾಸ್ತಿ ಅವರ ಮನೆ  (ಬಸವನಗುಡಿ( ಗ್ರಂಥಾಲಯ ಮತ್ತು ಮ್ಯೂಸಿಯಂ ಆಗಿದೆ. ಇದಲ್ಲದೇ  ಕರ್ನಾಟಕ ಸರ್ಕಾರ ಮಾಸ್ತಿ ಹಳ್ಳಿಯಲ್ಲಿ ಒಂದು ಲೈಬ್ರರಿ ಸಹ ನಡೆಸುತ್ತಿದ್ದಾರೆ

ಪ್ರತಿವರ್ಷ ಮಾಸ್ತಿ ಪ್ರಶಸ್ತಿ ಕನ್ನಡದ ಹೆಸರಾಂತ ಸಾಹಿತಿ ಅಥವಾ ಕವಿಗಳಿಗೆ ಕೊಡಲಾಗುತ್ತೆ. ಇತ್ತೀಚಿನ ಪುರಸ್ಕಾರರು ನಮ್ಮ ಮೆಚ್ಚಿನ ಕವಿ ಪ್ರೊ. ನಿಸಾರ್ ಅಹ್ಮದ್.

ಮಾಸ್ತಿ ನಮ್ಮ ಆಸ್ತಿ ಖಂಡಿತ ಹೌದು.

**********

ಜಿ. ಪಿ ರಾಜರತ್ನಂ (೧೯೦೯೧೯೭೯).

ಕರ್ನಾಟಕದಲ್ಲಿ ಹುಟ್ಟಿದ ಈಗಿನ ಮಕ್ಕಳು  ರಾಜರತ್ನಂ ಅವರ “ನಾಯಿ ಮರಿ ಮರಿ ತಿಂಡಿ ಬೇಕಾ … ಅಥವಾ ಬಣ್ಣದ ತಗಡಿನ ತುತ್ತೂರಿ  ಇತ್ಯಾದಿ   ಹಾಡನ್ನು ಕೇಳದೆ ಇರಬಹುದು ಆದರೆ  ರತ್ನನ ಪದಗಳನ್ನು ಕೇಳದೇ  ಇರುವರು ಯಾರು?

ರಾಜರತ್ನಂ  ಪೂರ್ವಿಕರು ೧೯೦೬ ನಲ್ಲಿ ತಮಿಳ್ನಾಡಿನಿಂದ ಬಂದು ಚಾಮರಾಜನಗರದ ತಾಲೂಕು ಗುಂಡ್ಲ್ ಪೇಟೆ ಯಲ್ಲಿ ನೆಲಸಿದರು. ಕಡು ಬಡತನದಲ್ಲಿ ಬೆಳೆದು ವಿದ್ಯಾಭ್ಯಾಸಕ್ಕೆ ಪಡಬಾರದ ಕಷ್ಟ ಪಟ್ಟು B.A ಮತ್ತು M.A. ಪದವಿ ಪಡೆದರು. ಆದರೂ ಆ ಕಾಲದಲ್ಲಿ ಇವರಿಗೆ ಸರಿಯಾದ ಕೆಲಸ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಕೆಲವು ಪದ್ಯಗಳು ಮತ್ತು ಕಥೆಗಳನ್ನು ಬರೆಯುವುದಕ್ಕೆ ಆಗತಾನೆ ಶುರು ಮಾಡಿದ್ದರು ಆದರೆ ಆದಾಯ ಏನೂ ಇರಲಿಲ್ಲ. ಸಣ್ಣ ವಯಸ್ಸಿಗೆ ಮಾಡುವೆ ಬೇರೆ ಆಗಿತ್ತು .ಒಂದು ಇಲಾಖೆ ಯಲ್ಲಿ ತಿಂಗಳಿಗೆ ೨೫ ರೂಪಾಯಿ ಕೊಡುವ ಕೆಲಸಕ್ಕೆ ಹೋದಾಗ, ಆ ಸಂಸ್ಥೆಯ ಮುಖ್ಯಸ್ಥ ಇನ್ನಾರು ಅಲ್ಲದೆ ಮಾಸ್ತಿ ಅವರೇ ! ಈ ಸಂಬಳ ನಾನೇ ಕೊಡುತ್ತೇನೆ ನಿನಗೆ ಈ ಕೆಲಸ ಬೇಡ ಅದರ ಬದಲು ಕನ್ನಡದಲ್ಲಿ ಬರಿ ಅಂತ ಮಾಸ್ತಿ  ಹೇಳಿದರಂತೆ. ಆಗ ಚೈನಾ ದೇಶದ ಭೌದ್ದ ಯಾತ್ರಿಕರು ಅನ್ನುವ  ಗ್ರಂಥ ೧೯೩೨ನಲ್ಲಿ ಬರೆಯುಲು ಸಾಧ್ಯವಾಯಿತು.  ೧೯೩೩ ರಲ್ಲಿ  ಈ ಬರಹಕ್ಕೆ ದೇವರಾಜ್ ಬಹದ್ದೂರ್ ಪ್ರಸ್ಥಿ ದೊರಕಿತು .  ಗಂಡುಕೊಡಲಿ ಎನ್ನುವ ನಾಟಕ, ಮಕ್ಕಳಿಗೆ  ಬರೆದ ಪದ್ಯ ತುತ್ತೂರಿ ಮತ್ತು  ರತ್ನನ ಪದಗಳು  ಮುಂತಾದ ರಚನೆಗಳು ಹೊರಗೆ ಬಂತು ಮತ್ತು ೧೯೩೫ ರಲ್ಲಿ ಎರಡನೆಯ ದೇವರಾಜ್ ಬಹದ್ದೂರ್ ಪ್ರಶಸ್ಥಿ  ಅದೇ ವರ್ಷ ಬುದ್ಧ ವಚನ ಪರಿಚಯ ಪುಸ್ತಕ ಪ್ರಕವಾದಾಗ  ದೇವರಾಜ್ ಬಹದ್ದೂರ್ ಪ್ರಶಸ್ಥಿಯ ಹ್ಯಾಟ್ರಿಕ್ ಹೊಡೆದರು.  ಕೆಲವರ ಪ್ರಕಾರ ಕೈಲಾಸಂ ಪ್ರಭಾವದಿಂದ ರತ್ನನ ಪದ ಗಳನ್ನು ಬರೆದರು.

 

ರಾಷ್ಟ್ರಕವಿ ಶಿವರುದ್ರಪ್ಪನವರು ೧೯೪೩ ರಲ್ಲಿ ತುಮಕೂರಿನಲ್ಲಿ ವಿದ್ಯಾರ್ಥಿ ಆಗಿದ್ದಾಗ ಅಲ್ಲಿ  ರಾಜರತ್ನಂ ಇವರ ಕನ್ನಡ ಉಪಾಧ್ಯಾಯರು, ಈ ಮೇಸ್ಟ್ರು  ಖಾದಿ ಪಂಚೆಯ ಮೇಲೆ ಒಳ ಅಂಗಿ ಮಾತ್ರ ಧರಿಸಿ ಕಾಲೇಜಿಗೆ ಬರುವುದು ಮೇಲಿನ ಅಧಿಕಾರಿಗಳಿಗೆ ಹಿಡಸಲಿಲ್ಲವಾದ್ದರಿಂದ ಸರಿಯಾಗಿ ಉಡುಪು ಧರಿಸುವುದಕ್ಕೆ ಆದೇಶ ಕೊಟ್ಟರಅಂತೆ , ಇದಕ್ಕೆ ಪ್ರತಿಭಟನೆಗೆ ಇರಬೇಕು, ಉದ್ದದ ಕೋಟ್ ನ ಧರಿಸಿ ಬರುತ್ತಿದ್ದರು.  ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಉಪಾಧ್ಯಾಯರಾಗಿ ಸೇರಿ  ಕೊನೆಗೆ ಬೆಂಗಳೂರು ಸೆಂಟ್ರಲ್ ಕಾಲೇಜ್ ನಲ್ಲಿ  ಕನ್ನಡ ಉಪನ್ಯಾಸಕರಾಗಿದ್ದರು.  ಆದರೆ  ಅಷ್ಟು ಪ್ರತಿಭೆ ಇದ್ದರೂ  ಪ್ರೊಫೆಸ್ಸರ್ ಅಗಲಿಲ್ಲ, ಸರಿಯಾದ ಶಿಫಾರ್ಸು ಇರಲಿಲ್ಲ ವೇನೋ !   ಕಾಲೇಜಿನ ಕನ್ನಡ ಸಂಘದ  ಮೂಲಕ ಅನೇಕ ವಿದ್ಯಾರ್ಥಿಗಳು ಇವರ ಪ್ರಭಾವದಿಂದ ಮುಂದೆ ಬಂದರು.  ಪ್ರೊಫ್. ನಿಸಾರ್ ಅಹ್ಮದ್ , ಸಿ ರ್ ಸಿಂಹ,  ಲಂಕೇಶ್ ಮುಂತಾದವರು.

ಪಾಳಿ ಮತ್ತು ಪ್ರಾಕೃತಿ ಭಾಷೆಗಳನ್ನು ಕಲಿತು  ಭೌದ್ಧ ,ಜೈನ ಮತ್ತು ಇಸ್ಲಾಂ ಮತಗಳ ಮೇಲೆ ಕೆಲವು ಪುಸ್ತಕಗಳನ್ನು ಬರೆದ್ದಿದ್ದಾರೆ.

ಹನಿಗಳು ಎನ್ನುವ ಪುಸ್ತಕದಲ್ಲಿ ರಾಜರತ್ನಂ ಮಾಸ್ತಿ  ಮತ್ತು ಕೈಲಾಸಂ ಬಗ್ಗೆ ತಮ್ಮ ಉಪಾಖ್ಯಾನಗಳು )anecdotes) ಬಹಳ ಚೆನ್ನಾಗಿ ವಿವರಿಸಿದ್ದಾರೆ. ಇವರ ಕೊನೆ ದಿನಗಳಲ್ಲಿ ಸತ್ಯ ಸಾಯಿಬಾಬ ಅವರ ಮೇಲೆ ತುಂಬಾ ಭಕ್ತಿ ಉಂಟಾಯಿತು, ಕಾರಣ, ರಾಜರತ್ನಂ ಕಾಲಿಗೆ ಗಾಜಿನ ಚೂರಿನಿಂದ ಪೆಟ್ಟಾಗಿ gangrene ಆಗಿ  ವೈದ್ಯರು ಕಾಲನ್ನು amputate ಮಾಡಬೇಕೆಂದರು, ಆದರೆ ರಾಜರತ್ನಂ ಪ್ರಕಾರ ಅವತ್ತಿನ ರಾತ್ರಿ ಕನಸಿನಲ್ಲಿ ಸತ್ಯ ಸಾಯಿಬಾಬ ಕಾಣಿಸಕೊಂಡರಂತೆ, ಎರಡು ಮೂರು ದಿನದಲ್ಲಿ ಕಾಲು ತುಂಬಾ ವಾಸಿ ಆಗಿ amputation ಬೇಕಾಗಲಿಲ್ಲ, ಇದಾದ ನಂತರ ಇವರಿಗೆ ಸಾಯಿ ಬಾಬಾ ಮೇಲೆ ತುಂಬಾ ಭಕ್ತಿ ಬಂತು . ಪ್ರಸಿದ್ಧ ಹಾಸ್ಯಗಾರ ಬೀಚಿ ತಮ್ಮ ಆತ್ಮ ಚರಿತ್ರೆ  ಭಯಾಗ್ರಫಿ )Bgraphy)  ನಲ್ಲಿ ರಾಜರತ್ನಂ ಗೆ ಮೂಢ ನಂಬಿಕೆ ಅಂತ ಟೀಕೆ ಮಾಡಿದ್ದು  ಇವರಿಗೆ ಅಸಮಾಧಾನವಾಯಿತು. ನಂತರ ತಮ್ಮ ಆತ್ಮ ಚರಿತ್ರೆ ನಿರ್ಭಯಾಗ್ರಫಿ ಆರು ಸಂಪುಟದಲ್ಲಿ ಪ್ರಕಟವಾಸಿ ತಮ್ಮ ಪ್ರತಿಕ್ರಿಯನ್ನು ವ್ಯಕ್ತ ಪಡಿಸಿದರು.

ಕನ್ನಡಿಗರು ಪುಸ್ತಕ ಕೊಂಡುಕೊಳ್ಳುವುದಕ್ಕೆ ರಾಜರತ್ನಂ ತುಂಬಾ ಪ್ರಯತ್ನಪಟ್ಟಿದ್ದಾರೆ. ಇವರನ್ನು ಭಾಷಣಕ್ಕೆ ಕರೆದರೆ ನಾನು ಪುಸ್ತಕಗಳನ್ನ  ಮಾರುವುದಕ್ಕೆ ತರುತ್ತೇನೆ  ಅಂತ ಹೇಳುತ್ತಿದ್ದರು

ಇವರ ರತ್ನನ ಮತ್ತು ನಾಗನ ಪದಗಳು ಬಹಳ ವರ್ಷದಿಂದ ಕನ್ನಡಿಗರಿಗೆ ಪರಿಚಯ ಆಗಿದೆ. “ಬ್ರಹ್ಮ ನಿ೦ಗೆ ಜೋಡಿಸ್ತೀನಿ, ಎಂಡ  ಮುಟ್ಟಿದ ಕೈನ“  ಮತ್ತು “ಮಡಿಕೇರಿ ಮೇಲೆ ಮಂಜು“ ಇಂತಹ ಅದ್ಭುತವಾದ  ಹಾಡುಗಳನ್ನ  ಪ್ರಸಿದ್ಧ ಗಾಯಕ ಮೈಸೂರು ಅನಂತ ಸ್ವಾಮಿಯವರು ಹಾಡಿ, ರಾಜರತ್ನಂ ಅವರನ್ನ ಮರೆಯದಹಾಗೆ ಮಾಡಿದರು

ಇವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ

೧೯೩೧ ನಲ್ಲಿ ಬಿ,ಮ್. ಶ್ರೀ ಅವರ ಸ್ವರ್ಣ ಪದಕ

೧೯೩೫-೧೯೩೭ ದೇವರಾಜ ಬಹದ್ದೂರ್ ಸನ್ಮಾನ, ಮೂರು ಸಲಿ

ರಾಜ್ಯ ಸಾಹಿತ್ಯ ಪ್ರಶಸ್ತಿ ೧೯೬೯

ರಾಜ್ಯೋತ್ಸವ ಪ್ರಶಸ್ತಿ ೧೯೭೦.

**********

ಪ್ರೊಫೆಸ್ಸರ್ ಕೊಕ್ಕರೆ ಹೊಸಹಳ್ಳಿ ಶೇಖರ್ ನಿಸಾರ್ ಅಹ್ಮದ್ (//೧೯೩೬(

 

ಜೋಗಿನಸಿರಿ ಬೆಳಕಿನಲ್ಲಿ ….. ಹಾಡನ್ನು ನಾವೇಲ್ಲರೂ  ಕೇಳಿದ್ದೇವೆ ಮತ್ತು ಹಾಡಲೂ ಪ್ರಯತ್ನ ಪಟ್ಟಿರಬೇಕು ಅಲ್ಲವೇ ?

ಕನ್ನಡಿಗರಿಗೆ ನಿಸಾರ್ ಅಹ್ಮದ್ ಅವರನ್ನು  ಪರಿಚಯ ಮಾಡಿಕೊಡುವ ಅಗತ್ಯವಿಲ್ಲ  ೨೦೦೮ ನಲ್ಲಿ ನಡೆದ ಯು.ಕೆ. ಕನ್ನಡ ಬಳಗದ ರಜತಮಹೋತ್ಸವದ  ಮುಖ್ಯ ಅಥಿತಿಗಳಾಗಿ ಬಂದು ನಮ್ಮಗಳ ಜೊತೆ ಸುಮಾರು ಒಂದು ತಿಂಗಳು ಕಳೆದಿದ್ದು ನಮ್ಮ ಭಾಗ್ಯವೇ ಸರಿ.  ಹುಟ್ಟಿದ ಊರು ದೇವನಹಳ್ಳಿ, ತಂದೆ ಹೈದರ್ ಸ್ಯಾನಿಟರಿ ಇನ್ಸ್ಪಪೆಕ್ಟರ್. ನಿಸಾರ್ ಅಹ್ಮದ್ ಅವರು ಭೂವಿಜ್ಞಾನದಲ್ಲಿ ಪದವಿ ಪಡೆದು ಗುಲ್ಬರ್ಗ ದಲ್ಲಿ ಕೆಲಸ ಶುರುಮಾಡಿದರು. ಆಗಲೇ ಇವರು  ಪದ್ಯಗಳನ್ನು ಬರೆದು ಕುವೆಂಪು ಅವರ ಗಮನಕ್ಕೆ ಬಂದಿದ್ದರು .   ೧೯೫೯ ರಲ್ಲಿ ನಡೆದ ಮೈಸೂರು ದಸರಾ ಹಬ್ಬದ ಕವಿ ಸಮ್ಮೇಳನಕ್ಕೆಭಾಗವಾಸಿಸುವುದಕ್ಕೆ  ಕುವೆಂಪು ಅವರಿಂದ ಅಹ್ವಾನ ಸಹ ಬಂತು.

ನಂತರ ಬೆಂಗಳೂರು ಸೆಂಟ್ರಲ್ ಕಾಲೇಜ್ ಮತ್ತು ಚಿತ್ರದುರ್ಗ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸಮಾಡಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ೧೯೬೭-೧೯೭೮ ಭೂವಿಜ್ಞಾನದ ಪ್ರಾಧ್ಯಾಪಕ ರಾದರು. ಅವರ ಪ್ರಸಿದ್ದವಾದ ಪದ್ಯ ಸಂಕಲನನಿತ್ಯೋತ್ಸವ  ರಚನೆ ಇಲ್ಲೇ ಮತ್ತು ನಿತ್ಯೋತ್ಸವ ಕವಿ ಅಂತಲೇ ಹೆಸರುಬಂತು. ೧೯೭೮ ನಲ್ಲಿ ಅನಂತಸ್ವಾಮಿ ಅವರು ಈ ಹಾಡುಗಳ ಕಸ್ಸೆಟ್ ತಂದ ಮೇಲೆ  ಇವರ ಹೆಸರು  ಇಡೀ  ಕರ್ನಾಟಕದ ದಲ್ಲಿ ಹರಡಿತು

ನಿಸಾರ್ ಬರೆದಿರುವ ಪದ್ಯಗಳು ಅನೇಕ. “ಬರೀ ಮರ್ಯಾದಸ್ಥರೇ ” ಕವನ ಚಿಲಿ ದೇಶದ ಕವಿ ಪ್ಯಾಬ್ಲೋ ನೆರೂಡ ಬರೆದರ ಅನುವಾದ. “ಕುರಿಗಳು ಸಾರ್ ಕುರಿಗಳು” ರಾಜಕಾರಣಿ ಮೇಲೆ ಮಾಡಿದ ಹಾಸ್ಯ, ಕವಿ ಇಕ್ಬಾಲ್ ಅವರ  saare jahaan se achha “ಭಾರತವು ನಮ್ಮ ದೇಶ” , “ಬೆಣ್ಣೆ ಕದ್ದ ನಮ್ಮ ಕೃಷ್ಣ” ಮುಂತಾದವು ಇವರ ಬಹುಮುಖ ಪ್ರತಿಭೆ. ಇವರು ಅನೇಕ ಷೇಕ್ಸ್ ಪಿಯರ್ ನಾಟಕಗಳನ್ನ ಕನ್ನಡಕ್ಕೆ ಅನುವಾದ ಮಾಡಿದ್ದಾರೆ

ನಿಮ್ಮೊಡನಿದ್ದೂ ನಿಮ್ಮಂತಾಗದೆ ಎಂಬ ಕಾವ್ಯ ತಮ್ಮ ಜಾತ್ಯಾತೀಯ ಮೂಲವನ್ನು ಉಳಿಸಿಕೊಳ್ಳುವ ಉಭಯಸಂಕಟ ಮತ್ತು ಸ್ವಲ್ಪ ನೋವಿನಿಂದಲೇ ಬರೆದಿದ್ದು ಅಂತ ಕೆಲವು ವಿಮರ್ಶಕರ ಅಭಿಪ್ರಾಯ.

ಇವರ ರಾಮಾಯಣ, ಮಹಾಭಾರತ ಮತ್ತು ಗೀತೆ ಮೇಲೆ ಅನೇಕ ವ್ಯಾಖ್ಯಾನಗಳನ್ನೂ ಮಾಡಿದ್ದಾರೆ ಆದರೆ ಇವರು ನಿಷ್ಟ ಮುಸಲಮಾನರೂ  ಹೌದು. ಬೆಂಗಳೂರಿನ ಗಾಂಧಿ ಬಜಾರ್ ಇವರ ನೆಚ್ಚಿನ ರಸ್ತೆ. ಅಲ್ಲಿರುವ ವಿದ್ಯಾರ್ಥಿ ಭವನ್  ಇವರ ಅಚ್ಚುಮೆಚ್ಚಿನ ದೋಸೆ ತಿನ್ನುವ ಸ್ಥಳ. ನೀವು ಮುಂದಿನ ಜನ್ಮದಲ್ಲಿ ಎಲ್ಲಿ ಹುಟ್ಟಬೇಕು ಅನ್ನುವ ಪ್ರಶ್ನೆಗೆ, ನಿಸಾರ್, ಭಾರತದಲ್ಲಿ, ಬೆಂಗಳೂರಿನಲ್ಲಿ ಮತ್ತು ಗಾಂಧಿ ಬಜಾರ್ ಹತ್ತಿರ ಅಂತ ಹೇಳಿದರಂತೆ !!

ಶಿವಮೊಗ್ಗ ದಲ್ಲಿ ನಡೆದ ೭೩ ರನೇ  ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಬಹಳ ಯೆಶಸ್ವಿಯಾಗಿ ನಡೆಸಿ ಕೊಟ್ಟರು. ಈ ಸಮಯದಲ್ಲಿ ದೊಡ್ಡ ರಂಗೇಗೌಡರ ಸಂಪಾದಕೀಯದಲ್ಲಿ ಹೊರತಂದ  ಸರಸ್ವತಿ ಸಿರಿ ಯಲ್ಲಿ ಅನೇಕರು ನಿಸಾರ್ ಅವರ ಬರಹದ ಮೇಲೆ ಪ್ರಸ್ತಾವನೆ ಮಾಡಿದ್ದಾರೆ. ನಾನು ಕನ್ನಡಕ್ಕೆ ಮಾಡಿರುವುದು ಅಳಿಲ ಸೇವೆ ಆದರೆ ಕನ್ನಡಿಗರು  ನನಗೆ ತೋರಿಸುವ ಪ್ರೇಮ ಅಪಾರ ಎಂದು ಹೇಳಿದ್ದಾರೆ,

 

ಇವರಿಗೆ ಬ೦ದ ಪ್ರಶಸ್ತಿಗಳು ಅನೇಕ, ೨೦೧೭ ದಸರ ಹಬ್ಬದ ಉದ್ಘಾಟನೆ ಇವರು ನೆರವೇರಿಸಿದರು, ೨೦೦೩ ನಲ್ಲಿ ನಾಡೋಜ, ೨೦೦೮ ನಲ್ಲಿ ಪದ್ಮಶ್ರೀ ಮತ್ತು ಪಂಪ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲನದ ಡಾಕ್ಟ್ರೇಟ್ ಪದವಿ ಬಂದಿದೆ

ಚಳಿ ಇರಲಿ ಬಿಸಿಲು ಇರಲಿ ಯಾವಾಗಲೂ ಸೂಟ್ ಮತ್ತು ಟೈ ಧರಿಸುವ  ನಿಸಾರ್ ಅಹಮದ್ ನಮ್ಮೆಲ್ಲರ ನೆಚ್ಚಿನ ಕವಿಗಳು ಎನ್ನುವುದರಲ್ಲಿ ಸಂದೇಹ ಇಲ್ಲ.

Writer Ramamurthy with poet Nissar Ahamad

Figure 2KSN IN STRATFORD UPON AVON 2008

Figure 3KSN visiting Stonehenge

 

*********

 

ನಾ. ಕಸ್ತೂರಿ (ನಾರಾಯಣ ಕಸ್ತೂರಿ  ೨೫/೧೨/೧೭೯೭೧೪/೦೮/೧೯೮೭)

 

Figure 4N KASTURI AROUND 1930 IN MYSORE

ನಿಮಗೆ ಆಲ್ ಇಂಡಿಯ ರೇಡಿಯೊ ಗೆ )A I R )   ಆಕಾಶವಾಣಿ ಅಂತ ಹೆಸರಿಟ್ಟವರು ನಾ ಕಸ್ತೂರಿ ಅನ್ನುವುದು ಗೊತ್ತಿತ್ತಾ? ಇದರ ವಿಚಾರ ಮುಂದೆ

ಕಸ್ತೂರಿ ಅವರ ಹುಟ್ಟಿದ್ದು ಈಗಿನ ಕೇರಳ, ಆಗ ಇದು ಟ್ರಾವಾಂಕೂರ್  ಪ್ರಾಂತ್ಯ, ಮಾತೃ ಭಾಷೆ ಮಲಯಾಳಮ್ಅಲ್ಲೇ ಕಾನೂನು ಪದವಿ  ನಂತರ M A  ಪಡೆದು ಕೆಲಸಕ್ಕೆ ಹುಡುಕುತ್ತಿದ್ದಾಗ ಅಕಸ್ಮಾತು ಮೈಸೂರಿನಲ್ಲಿ ಕೆಲಸ ಖಾಲಿ ಇದೆ ಅಂತ ಒಂದು ಪ್ರತ್ರಿಕೆಯ ಜಾಹೀರಾತಿನಿಂದ ತಿಳಿದು, ಬನುಮಯ್ಯ ಹೈಸ್ಕೂಲ್ ನಲ್ಲಿ ಉಪಾಧ್ಯಾಯರಾದರು . ನಂತರ, ೧೯೨೮ ರಲ್ಲಿ  ಮೈಸೂರು ಮಹಾರಾಜಾ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ಸೇರಿ ಕನ್ನಡ ಭಾಷೆಯನ್ನು ಕಲಿತು ಮಲಯಾಸ್ವಪ್ನಳಿ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಹೆಸರು ಸಂಪಾದಿಸಿಬಿಟ್ಟರು.

೧೯೪೯ರಲ್ಲಿ ದಾವಣಗೆರೆ ಫಸ್ಟ್ ಗ್ರೇಡ್ ಕಾಲೇಜ್ ಪ್ರಿನ್ಸಿಪಾಲ್ ಆಗಿ ೧೯೫೪ ರಲ್ಲಿ ನಿವೃತ್ತಿ ಪಡೆದು ಧಾರ್ಮಿಕ ಸಂಸ್ಥೆಗಳ ಆಡಳಿತಕ್ಕೆ ಸಹಾಯ ಮಾಡಿದರು. ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ ಕಾರ್ಯದರ್ಶಿ ಮತ್ತು ಸತ್ಯ ಸಾಯಿಬಾಬಾ ಅವರ ಸಂಸ್ಥೆಗೆ ದುಡಿದರು.

ಕನ್ನಡ  ಹಾಸ್ಯ ಸಾಹಿತ್ಯದಲ್ಲಿ ಹೊಸದೊಂದು ಪರಂಪರೆಯನ್ನು ಹಾಕಿದವರಲ್ಲಿ ಕಸ್ತೂರಿ ಒಬ್ಬರು.   ಆ ಕಾಲ, ಅಂದರೆ ೧೯೨೦ ರಿಂದ ಆಧುನಿಕ ಕನ್ನಡ ಸಾಹಿತ್ಯದ ಸುವರ್ಣ ಯುಗ ಅನ್ನಬಹುದು. ೧೯೪೨ ರಲ್ಲಿ ಡಾಕ್ಟರ್ ಶಿವರಾಂ )ರಾ ಶಿ) ಅವರ ಜೊತೆಯಲ್ಲಿ ಸೇರಿ ಕನ್ನಡದ ಮೊದಲನೆಯ  ಹಾಸ್ಯ ಮಾಸಿಕ ಪತ್ರಿಕೆ ಕೊರವಂಜಿ ಆರಂಬಿಸಿವುದಕ್ಕೆ ಸಹಾಯ ಇವರಿಂದಲೇ. ಮೈಸೂರಿನಲ್ಲಿ ಆಗತಾನೆ ಮೈಸೂರಿನಲ್ಲಿ ಅರ್. ಕೆ.  ಲಕ್ಷ್ಮಣ್   ವ್ಯಂಗ ಚಿತ್ರಗಾರನಾಗಿ ಹೆಸರುಮಾಡಿದ್ದರು. ಇವರು ಪ್ರಸಿದ್ಧ ಸಾಹಿತಿ ಅರ್. ಕೆ ನಾರಾಯಣ್ ರವರ ತಮ್ಮ.  ಲಕ್ಷ್ಮಣ್ ಅವರನ್ನು ಕೊರವಂಜಿಯಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಿಸಿ ಮುಂದೆ ಬರುವುದಕ್ಕೆ ಕಸ್ತೂರಿ ಅವರೇ  ಕಾರಣ.

ಕಸ್ತೂರಿ ಅನೇಕ  ಕಾದಂಬರಿಗಳು, ನಾಟಕಗಳು , ಅನುವಾದಗಳು, ಜೀವನಚರಿತ್ರೆ, ಕಥೆಗಳು ಮತ್ತು ಹಾಸ್ಯ ಪ್ರಬಂಧಗಳನ್ನೂ ರಚಿಸಿದ್ದಾರೆ. ಇಂಗ್ಲಿಷ್ ನಲ್ಲಿ ಬರೆದ History of the British Occupation of  India  ಮುನ್ನೂರು ವರ್ಷದ ಇತಿಹಾಸದ ದಾಖಲೆ.

ಕಾದಂಬರಿಗಳಲ್ಲಿ ಅಲ್ಲೋಲ ಕಲ್ಲೋಲ, ಉಪಾಯ ವೇದಾಂತ, ಡೊಂಕುಬಾಲ ಮುಂತಾದವು. ನಾಟಕದಲ್ಲಿ ಗಗ್ಗಯ್ಯನ ಗಡಿಬಿಡಿ, ಕಾಡಾನೆ ಮತ್ತು ವರಪರೀಕ್ಷೆ ಇತ್ಯಾದಿ.

ನಿವೃತಿ ಆದಮೇಲೆ ಸಾಯಿಬಾಬ ಭಕ್ತರಾಗಿ ಪುಟ್ಟಪರ್ತಿ ಯಲ್ಲಿ ಅವರ ಪತ್ರಿಕೆಯ ಸಂಪಾದಕರಾಗಿ ಬಹಳ ವರ್ಷ ದುಡಿದರು. ಬಾಬಾ ಅವರ ಜೀವನಚರಿತ್ರೆಯನ್ನು ಬರೆದರು.

ಈಗ ಕೆಲವು ವರ್ಷದ ಕೆಳಗೆ ಸ್ವಪ್ನ ಪುಸ್ತಕ ಪ್ರಕಾಶಕರು ಕಸ್ತೂರಿ ಬರೆದಿದ್ದ ಸುಮಾರು ನೂರು ಹಾಸ್ಯ ಪ್ರಭಂದಗಳನ್ನು ಸಮಗ್ರ ಹಾಸ್ಯ ಸಾಹಿತ್ಯ ಎ೦ದು ಪ್ರಕಟಿಸಿದ್ದಾರೆ.

ನೋಡಿ,  ಕಸ್ತೂರಿ ಅಂಥವರು ಕನ್ನಡನಾಡಿಗೆ ಬಂದು ಕನ್ನಡ ಕಲಿತು ನಮ್ಮೊಂದಿಗೆ ಬೆಳದಿದ್ದು ನಮ್ಮ ಭಾಗ್ಯ ಅಲ್ಲವೇ ?

ಆಕಾಶವಾಣಿ ಗೆ ಹೆಸರು ಕೊಟ್ಟವರು ಇವರೇ ಅಂತ ಹೇಳಿದ್ದೆ.  ಡಾಕ್ಟರ್ ಗೋವಿಂದಸ್ವಾಮಿ ಮನೋವಿಜ್ಞಾನ ತಜ್ಞ. ೧೯೩೬ ನಲ್ಲಿ ಇವರು ಇಂಗ್ಲೆಂಡ್ ನಿಂದ ರೇಡಿಯೋ ಮೈಸೂರಿಗೆ ತಂದರು. ಇಡೀ ಮೈಸೂರಿನಲ್ಲಿ ಮೊದಲನೆ ರೇಡಿಯೋ ಇವರ ಮನೆಯಲ್ಲಿ. ಕಸ್ತೂರಿ ರೇಡಿಯೋ ಪ್ರಚಾರ ಕೇಳಿ ಇದು ಆಕಾಶವಾಣಿ ಅಂದರಂತೆ. ಆಗಿನಿಂದ ಈ ಹೆಸರು ಶಾಶ್ವತ  ಆಯಿತು. ಕಸ್ತೂರಿ ಅವರು ಬೆಂಗಳೂರಿನ ಆಕಾಶವಾಣಿ ಕೇಂದ್ರದಲ್ಲಿ Producer ಆಗಿ ಕೆಲವು ವರ್ಷ ಕೆಲಸವೂ ಮಾಡಿದರು,

೧೯೮೧ರಲ್ಲಿ ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿ ಕಸ್ತೂರಿಯವರನ್ನು ಪುರಸ್ಕರಿಸಿತು.

ನಾ ಕಸ್ತೂರಿ ಕನ್ನಡದ ಕಸ್ತೂರಿ ಮತ್ತು ಇವರ ಸೇವೆ ನಮ್ಮ ಸಾಹಿತ್ಯಕ್ಕೆ ಅಪಾರ

 

ರಾಮಮೂರ್ತಿ 

ಬೇಸಿಂಗ್ ಸ್ಟೋಕ್ 

 

 

 

 

 

 

 

10 thoughts on “ಇವರ ಮಾತೃಭಾಷೆ ಕನ್ನಡ ಅಲ್ಲ ಆದರೆ ಇವರು ಕನ್ನಡನಾಡಿನ ಧ್ರುವ ತಾರೆಗಳು – ಬೇಸಿಂಗ್ ಸ್ಟೋಕ್ ರಾಮಮೂರ್ತಿ

 1. ಅತ್ಯುತ್ತಮ, ಅಪರೂಪದ ಲೇಖನ. ಈ ಹಿರಿಯ ಬರಹಗಾರರ ಲೇಖನಗಳನ್ನು ಓದಿದ್ದರೂ ಅವರುಗಳ ಹಿನ್ನಲೆಯ ಬಗ್ಗೆ ತಿಳಿದಿರಲಿಲ್ಲ. ಬಹಳ ಧನ್ಯವಾದಗಳು ರಾಮಮೂರ್ತಿಯವರೆ.
  ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಭಾಷೆ ನಮ್ಮದಾಗಿ ಉಳಿದು ಬಿಡುತ್ತದೆoದು ನನ್ನ ಭಾವನೆ.

  ದಾಕ್ಷಾಯಿನಿ

  Liked by 1 person

 2. ಕನ್ನಡ ಹಿರಿಯ ಲೇಖಕರನ್ನು ಪರಿಚಯಿಸಿದ ರೀತಿ ಅನನ್ಯ.

  ಎಂಡ ಓಗ್ಲಿ, ಎಡ್ತಿ ಓಗ್ಲಿ, ಎಲ್ಲಾ ಕೊಚ್ಕೊಂಡ್ ಓಗ್ಲಿ;
  ಪರಪಂಚ್ ಇರೋ ತನ್ಕ ಮುಂದೆ ಕನ್ನಡ ಪದಗೋಳ್ ನುಗ್ಲಿ

  ಮಾಸ್ತಿಯವರ ಎಲ್ಲ ಕತೆಗಳನ್ನು ಓದುವ ಆಸೆ ಮೂಡಿಸಿದ್ದೀರಿ.

  – ಕೇಶವ ಕುಲಕರ್ಣಿ

  Like

 3. ರಾಮಮೂರ್ತಿ ಅವರೇ, ಬಹಳ ಸಮಯೋಚಿತವಾದ ಲೇಖನ. ಮನೆ ಭಾಷೆ ತಮಿಳು, ತೆಲಗು ಅಥವಾ ಮರಾಠಿ ಆದರೇನು. ಕನ್ನಡನಾಡಿನಲ್ಲಿ ನೆಲಸಿದ ಅನೇಕ ಪ್ರತಿಭಾವಂತ ಲೇಖಕರು ಕನ್ನಡದಲ್ಲಿ ಸಾಹಿತ್ಯ ಸೃಷ್ಟಿಸಿ ನಮ್ಮ ಮನಗಳಲ್ಲಿ ಮನೆಮಾಡಿದ್ದಾರೆ. ಕೈಲಾಸಂ, ನಿಸಾರ್ ಅಹಮದ್, ರಾಜರತ್ನಂ, ಪು.ತಿ. ನರಸಿಂಹಾಚಾರ್ ಹೀಗೆ ಹಲವು ಹತ್ತು ಗಣ್ಯರು ಕನ್ನಡಕ್ಕೆ ಘನವಾದ ಕೊಡುಗೆ ನೀಡಿ, ಭಾಷೆಗೆ ಗಡಿ ಅಥವಾ ಮತ್ತಿತರ ಎಲ್ಲೆಕಟ್ಟಿಲ್ಲ ಎನ್ನುವ ಮಾತನ್ನು ಎತ್ತಿಹಿಡಿದಿದ್ದಾರೆ. ರಾಜರತ್ನಂ ಅವರು ಕನ್ನಡ ಪ್ರಾದ್ಯಾಪಕರೇ ಆಗಿದ್ದರು. ನನ್ನ ತಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ.ಸಿ ಮಾಡುತ್ತಿದ್ದಾಗ, ರಾಜರತ್ನಂ ಅವರ ಕನ್ನಡ ಉಪನ್ಯಾಸ ಕೇಳಲು, ಇತರ ಕಾಲೇಜಿನಿಂದ ವಿದ್ಯಾರ್ಥಿಗಳು ಕಿಕ್ಕಿರಿದು ನೆರೆಯುತ್ತಿದ್ದರೆಂದು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. ಇಂದಿನ ತರುಣ ಪೀಳಿಗೆಯವರಿಗೆ ಈ ವಿಷಯ ತಿಳಿಸುವ ಉತ್ತಮ ಪ್ರಯತ್ನವಿದು. ಹೀಗೆ ಮಾಹಿತಿಪೂರ್ಣ ಮತ್ತು ಅರ್ಥಪೂರ್ಣವಾದ ಲೇಖನಗಳು ನಿಮ್ಮಿಂದ ಬರುತ್ತಿರಲಿ.
  ಉಮಾ ವೆಂಕಟೇಶ್

  Like

 4. ನಿಮ್ಮ ಬಹುದಿನಗಳ ಕನಸಿನ ಕೂಸಿಗೆ ಇಂದು ಕಿರೀಟ! ಚೆನ್ನಾಗಿದೆ. ಹೀಗೆಯೇ ಬರೆಯುತ್ತಿರಿ!

  Like

 5. ರಾಮಮೂರ್ತಿ ಅವರೇ
  ನೀವು ಬರೆದ ಲೇಖನ ನನಗೆ ಈ ವರುಷದ ಕ್ರಿಸ್ಮಸ್ ಹಬ್ಬದಲ್ಲಿ ಮಕ್ಕಳು ನೀಡಿದ ಕಾಣಿಕೆಗಳಿಂತ ಮೇಲಾಗಿ ಕಾಣಿಕೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.
  ಎಲ್ಲ ಮಹಾ ಕವಿಗಳು,ಸಾಹಿತ್ಯಕಾರರ ಬಗ್ಗೆ ವಿವರವಾಗಿ ತಿಳಿಸಿರುವಿರಿ. ಅವರೆಲ್ಲರ ಜೀವನಗಳಿಂದ ನಾವು ಭಹಳಸ್ಟು ಕಲಿಯುವದಿದೆ.
  ಧನ್ಯವಾದಗಳು.

  ಅರವಿಂದ ಕುಲ್ಕರ್ಣಿ

  Like

  • ಅರವಿಂದ್ ಅವರೆ,
   ನನ್ನ ಲೇಖನ ನಿಮಗೆ ಇಷ್ಟವಾಗಿದೆ ಅಂತ ಕೇಳಿ ತುಂಬಾ ಸಂತೋಷ ಆಯಿತು.
   ಹೊಸ ವರ್ಷದ ಶುಭಾಶಗಳು. ಸ್ನೇಹ ಅವರಿಗೆ ನನ್ನ ವಂದನೆಗಳು

   Like

 6. ಅತ್ಯುತ್ತಮ ಲೇಖನ. ಇಂತವರನ್ನು ನೋಡಿದಾಗ HSV ಯವರು ಭಾಷೆಯ ಬಗ್ಗೆ ಹೇಳಿದ್ದು ನೆನಪಾಯಿತು. ಹೀಗೆಯೇ ಕನ್ನಡಿಗರು ಪರನಾಡಿಗೆ ಕೊಟ್ಟ ಬಳುವಳಿಗೆಗಳೂ ಇರಬಹುದೇನೋ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.