ಶಿವಪ್ರಸಾದ್ ಮತ್ತು ಅರವಿoದ ಕುಲ್ಕರ್ಣಿಯವರ ಹನಿಗವನಗಳು.

ಓದುಗರೆ, ಹನಿಗವನಗಳ ಹೆಜ್ಜೆಯ, ಗೆಜ್ಜೆಯ ನಾದದ ಇ೦ಪು ಕೇಳಿದಷ್ಟೂ ಚೆ೦ದ.
ಈ ವಾರ ಈ ಕ೦ಪನ್ನು ಅರವಿ೦ದ ಕುಲ್ಕರ್ಣಿ ಮತ್ತು ಪ್ರಸಾದ್ ರವರು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ. ಪ್ರತಿಯೊ೦ದು ಕವನದ ಹಾದಿ ಬೇರೆ, ನಾದ ಬೇರೆ ಆದರೆ ಗುರಿ ಒ೦ದೆ, ಅದೇನೆ೦ದರೆ ನಾಲ್ಕು ಸಾಲುಗಳಲ್ಲಿ ಅರ್ಥ ತು೦ಬಿ ನಿಮ್ಮನ್ನು ರ೦ಜಿಸುವುದು-ಸ೦

ಪ್ರಸಾದ್ ಹನಿಗವಿತೆಗಳು:

 ಜಮುನ

ಜೋಡಿ ಜಡೆ ಜಮುನ

ಕೊಡು ಇತ್ತ ಕಡೆ ಗಮನ.

ನನ್ನ ಮೊಬೈಲ್ ನಂಬರ್ ಕೇಳಿದ್ದಾಳೆ

ಆಚೆ ಮನೆ ನಯನ

ಕಂಡಾಗಲೆಲ್ಲ ಕಣ್ಣರಳಿಸಿ ಹಾಯ್

ಎನ್ನುತ್ತಾಳೆ ಈಚೆ ಮನೆ ಸುಮನ

***

Image result for cartoon images of krishna and radha

ರಾಧೆ ಕೃಷ್ಣರ ಸಲ್ಲಾಪ

ಕೃಷ್ಣ ನೀ ಬೇಗನೆ ಬಾರೋ ಎಂದಳು ರಾಧ

ಎಲ್ಲಿಗೆ ಎಂದ ಕೃಷ್ಣ

ಮತ್ತೆಲ್ಲಿಗೆ ಪಕ್ಕದ ಪಾರ್ಕಿಗೆ ಎಂದಳು ರಾಧೆ

ಕೊಳಲನ್ನು ತರಲೆ ಎಂದ ಕೃಷ್ಣ

‘ಯು ಟ್ಯೂಬ್’ ಇರುವಾಗ ಆ ಟ್ಯೂಬ್ ಏಕೆ

ಎಂದಳು ರಾಧೆ!

***

Image result for bottled water cartoon images

ಕುರುಕ್ಷೇತ್ರದಲ್ಲಿ ದಾಹ

ಶರಶಯ್ಯಯಲ್ಲಿ ಮಲಗಿದ ಭೀಷ್ಮರೆಂದರು

ಬಿಸಿಲೇರಿ ಬಾಯಾರಿದೆ.

ಬಾಣ ಹೂಡದ ಅರ್ಜುನನೆಂದ

ಗುರುಗಳೇ

ಮಳೆಯಿಲ್ಲದೆ ನೆಲವಾರಿದೆ.

ಇಗೋ ಕೊಳ್ಳಿ ಬಿಸಿಲೆರಿ ಬಾಟಲ್

ಇದು ಕೂಡ ಮಿನರಲ್ ವಾಟರ್!

***

ಕವಿ ಜಿ. ಎಸ್. ಎಸ್. ಮತ್ತು ಪೂಜಾರಿ

‘ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ’

ಎಂದರು ಕವಿ ಜಿ. ಎಸ್. ಎಸ್

ಕನ್ನಡಕ ಹಾಕಿಕೊಂಡು

ಸರಿಯಾಗಿ ಮತ್ತೆ ಹುಡುಕಿ ಸಾರ್

ಎಂದ

ಗಾಬರಿಯಿಂದ,  ಒಳಗಿದ್ದ ಪೂಜಾರಿ!

***

ನನ್ನ ಅಪ್ಪ ಅಮ್ಮ

 

‘ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ’

ಎಂದರು ನನ್ನ ಅಪ್ಪ

ಬಿಕ್ಕಿ ಬಿಕ್ಕಿ ಅತ್ತಳು ನನ್ನಮ್ಮ!!

***

ದಶಾವತಾರ

ಧರ್ಮ ಸಂರಕ್ಷಿಸಲು

ಭಗವಂತ ಎತ್ತಿದ್ದಾನೆ ದಶಾವತಾರ

ಈಗ ‘ಹಿಂದೂವಾದಿ’ ಅವತಾರ

ಧರ್ಮದ ಹೆಸರಿನಲ್ಲಿ

ಏಕೆ ದ್ವೇಷ ತಿರಸ್ಕಾರ?

ಇರಲಿ ಧರ್ಮ ಮತ್ತು ರಾಜಕೀಯಗಳ

ನಡುವೆ ಅಂತರ.

***

ದೀಪಾವಳಿ

ದೀಪಾವಳಿ ಬಂತು ದೀಪಾವಳಿ

ಪಟಾಕಿ ಸದ್ದು ಗದ್ದಲಗಳ ಹಾವಳಿ

ಹಣತೆ ಹಣತೆಗಳು ಸೇರಿ ಬೆಳಗಲಿ

ಅಜ್ಞಾನದ ಅಂಧಕಾರವು ಕಳೆಯಲಿ

ಪ್ರೀತಿ ವಿಶ್ವಾಸಗಳು ಬೆಳಗಲಿ.

 

 ಡಾ// ಶಿವಪ್ರಸಾದ್ 

***********************************************************************

ಅರವಿ೦ದ ಕುಲ್ಕರ್ಣಿಯವರ ಹನಿಗವನಗಳು:

ಅoದು-ಇoದು

Image result for gilli danda game images

ಕಡಬು ಕಡಲೆ ಸವಿದು ಬೆಳೆದೆ ಹಳ್ಯಾಗ
ಜಿಗಳಿ ಚೀಪಿ , ಲಗಳಿ ಹಾಕ್ಕೊಂಡು
ಜಿಗೀತಿದ್ದೆ  ಮಂಗ್ಯಾನ್ಹಾಂಗ
ಗಾಳಿಪಟ, ಕುಸ್ತಿ, ಗಿಲ್ಲಿದಾಂಡು, ಬೈಲಾಗ!
ಅಭ್ಯಾಸ? ನಾಳೆ ಯಾತಕ್ಕಿದೆ ?
ಅಪ್ಪ ಮಾಡಿಟ್ಟ ಗಂಟು ದಕ್ಕಿದೆ
ಜನ್ಮಭೂಮಿ ತೊರೆದೆ ಮೂವತ್ತರಾಗ
ಈ ಕರ್ಮಭೂಮ್ಯಾಗ ಕೂತೇನಿ ಎಪ್ಪತ್ತರಾಗ
ಏನು ಕರ್ಮ ಅಂತ ದಿನಾ ಅದೇ ರಾಗ!

ಕಾಲ‌!

ಹಾಯ್ ಡಾರ್ಲಿಂಗ್:  ಡೇಟಿಂಗ್ ಕಾಲ
ಹಾಯ್  ಹನಿ:  ವೆಡ್ಡಿಂಗ್ ಸಮಯ
ನೀವೇ ನನ್ನ ಪ್ರಾಣ, ನನ್ನ ದೇವರು: ಹನಿಮೂನ ಕಾಲ
” ಸಾಕಾಗ್ಯೇದ ಈ ಗೋಳು, ಈ ಸಂಸಾರ”: ವಿರಕ್ತಿ  ಕಾಲ
” ನಾ ಹೊರಟೆ, ನೀವೇ ಸಂಭಾಳಿಸಿ ಮಕ್ಕಳನ್ನ”:  ಪ್ರಿ- ಡಿವೋರ್ಸ್  ಕಾಲ!

                ಡಾ//ಅರವಿoದ ಕುಲ್ಕರ್ಣಿ

 

 

4 thoughts on “ಶಿವಪ್ರಸಾದ್ ಮತ್ತು ಅರವಿoದ ಕುಲ್ಕರ್ಣಿಯವರ ಹನಿಗವನಗಳು.

 1. ಅರವಿಂದ್ ಅವರೇ
  ಕಾಲನ ಮಹಿಮೆಯ ಪರಿಣಾಮ ಪ್ರೇಮದಿಂದ ಹಿಡಿದು ಡಿವೋರ್ಸ್ ವರೆಗೆ ತಲುಪಿರುವ ಚಿತ್ರಣ ಸೊಗಸಾಗಿದೆ
  ಅದೇ ಕಾಲನ ಮಹಿಮೆಯಿಂದೆ ನಮ್ಮೆಲ್ಲರ ಅಂದು-ಇಂದು ನೆನಪುಗಳು ಕೂಡ ರೂಪುಗೊಂಡಿವೆ
  ಎಪ್ಪತ್ತರಲ್ಲಿ ತಾವು ಅದೇ ರಾಗವನ್ನು ಹಾಡದೆ ಇನ್ನು ಮುಂದಕ್ಕೆ ಹನಿಗವನದ ಹೊಸ ರಾಗವನ್ನು ಹಾಡುವಿರೆಂದು ಆಶಿಸುತ್ತಾ
  ನಿಮ್ಮಿಂದ ಇನ್ನು ಹೆಚ್ಚಿನ ಹನಿಗವನದ ನಿರೀಕ್ಷಣೆಯಲ್ಲಿ…. ತಮ್ಮ ವಿಶ್ವಾಸಿ ಶಿವಪ್ರಸಾದ್

  Liked by 1 person

 2. ಶಿವಪ್ರಸಾದ್ ಮತ್ತು ಅರವಿಂದ ಕುಲಕರ್ಣಿ ಅವರ ಕವನಗಳು ನಿಜಕ್ಕೂ ಕಚುಗುಳಿಯಿಟ್ಟು ನಗಿಸುವಂತಿವೆ. ಕೃಷ್ಣನ ಕೊಳಲಿನ ಕರೆಯನ್ನು ಯುಟ್ಯೂಬಿಗೆ ಹೋಲಿಸಿರುವ ವೈಖರಿ ನಿಜಕ್ಕೂ ಮೆಚ್ಚಬೇಕಾದ್ದೇ!
  ಉಮಾ ವೆಂಕಟೇಶ್

  Liked by 1 person

 3. ಸಭೆಯಲ್ಲಿ ಕೇಳಿ ನಕ್ಕಿದ್ದೆವು ಈ ಹನಿಗವನಗವಳನ್ನು. ಇನ್ನೂ ಕಚಕುಳಿಯಿಡುತ್ತಿವೆ! ಯೂಟ್ಯೂಬಿನಲ್ಲಿ ಎಷ್ಟೋ ಚಾನೆಲ್ಲುಗಳಲ್ಲಿ ಎಂಥ ಮಹಾಪೂರ ಹರಿದರೂ ಕೃಷ್ಣನ ವೇಣುವಿನ ಆ ಎರಡು ಸ್ವರಕ್ಕೆ ಸರಿಸಾಟಿಯೇ? ಇನ್ನೊಂದು ದೊಡ್ಡ ‘ಹನಿ’ಯಲ್ಲಿ ಯೂ ಬಾಲ್ಯದ ‘ಕೃಷ್ಣ ಲೀಲೆ’ಯ ವರ್ಣನೆ!

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.