ದೀಪಾವಳಿ ೨೦೧೭ ಯುವ ಕಾರ್ಯಕ್ರಮದ ವರದಿ- ನವ್ಯ ಆನಂದ್

ದೀಪಾವಳಿ ೨೦೧೭ ಯುವ ಕಾರ್ಯಕ್ರಮದ ವರದಿ- ನವ್ಯ ಆನಂದ್

 ಲೇಖಕಿ ನವ್ಯಾ ಆನ೦ದ್ ಇಲ್ಲಿಯೆ ಬೆಳೆದ ಯುವತಿ, ಆಕೆ ಕನ್ನಡದಲ್ಲಿ ಈ ವರದಿ ಬರೆದಿರುವುದಷ್ಟೇ ಅಲ್ಲ, ತಾನು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕನ್ನಡ ಪದಗಳನ್ನು ಪ್ರಯೋಗಿಸುವ ಪ್ರಯತ್ನ ಮಾಡಿರುವುದು ಅತ್ಯ೦ತ ಸ೦ತಸದ ವಿಷಯ. ನವ್ಯ, ಯು.ಕೆ ಕನ್ನಡ ಬಳಗದ  ಕಾರ್ಯ  ನಿರ್ವಾಹಕ  ಮ೦ಡಲಿಯ ಸದಸ್ಯೆಯೂ ಆಗಿದ್ದಾರೆ. ಈ ಯುವ ಪ್ರತಿಭೆಗೆ ಅನಿವಾಸಿ ಬಳಗದ ಹಾರ್ದಿಕ ಸುಸ್ವಾಗತ -ಸಂ

 

ಕನ್ನಡ ಬಳಗದ ದೀಪಾವಳಿಯ ಕಾರ್ಯಕ್ರಮದಲ್ಲಿ ಯೂಥ್ ಗೆ ನಡೆಸಿದ ಆಟಗಳು ಮತ್ತು ಕನ್ನಡ ಭಾಷೆಯ ಕಥೆಗಳಲ್ಲಿ, ಸುಮಾರು ೨೫ ಮಕ್ಕಳು ಭಾಗವಹಿಸಿದ್ದರು.

ಶುರುವಿನಲ್ಲಿ, ಕೃಷ್ಣನ ೬ ಕಥೆಗಳನ್ನು ಆಂಗ್ಲಭಾಷೆಯಲ್ಲಿ ಬರದು ಮಕ್ಕಳಿಗೆ ಕೊಟ್ಟಿದ್ದೆ. ೩ ಗುಂಪನ್ನು ಮಾಡಿ, ಎರಡು ಎರಡು ಕಥೆಯನ್ನು ಹಂಚಿದ್ದೆ. ಪ್ರತಿ ಒಂದು ಕಥೆಯಲ್ಲಿ ೫ ಪದಗಳನ್ನು ತೆಗೆದು, ಪ್ರತಿ ತೆಗೆದಿದ್ದ ಪದಕ್ಕೆ ೫ ಕನ್ನಡದ ಪದಗಳನ್ನು ಕೊಟ್ಟಿದ್ದೆ. ಮಕ್ಕಳು ಒಟ್ಟಿಗೆ ಓದಿ, ಮಾತಾಡಿಕೊಂಡು ನಿರ್ಧಾರ ಮಾಡಬೇಕಾಗಿತ್ತು – ಯಾವ ಕನ್ನಡ ಪದ ಆ ವಾಕ್ಯಕ್ಕೆ ಸರಿ ಹೋಗುತ್ತೆ ಅಂತ. ಎಲ್ಲ ಕಥೆಗಳಲ್ಲಿ ಇದ್ದ ಪದಗಳನ್ನು ಹುಡುಕಿ ಆದಮೇಲೆ, ಮಕ್ಕಳೆಲ್ಲ ಒಟ್ಟಿಗೆ ಬಂದು, ಒಬ್ಬೊಬ್ಬರ ಕಥೆಗಳನ್ನು ಓದಿದರು, ಎಲ್ಲರಿಗೂ ಅಷ್ಟೂ ಕಥೆಗಳು ಗೊತ್ತಾಗೋಹಾಗೆ.

ನಂತರ, ಕನ್ನಡ ಪದಗಳನ್ನು ಉಪಯೋಗಿಸಿ, “ಶರೇಡ್ಸ್” (charades) ಮತ್ತು “ನಾನು ಏನು” (who am i) ಆಟಗಳನ್ನು ಆಡಿದ್ವಿ. ಮಕ್ಕಳಿಗೆ ತುಂಬಾನೇ ಖುಷಿ ಆಯಿತು; ಎಲ್ಲರೂ ಭಾಗವಾಯಿಸಿದ್ದರು.

ಕೊನೆಯಲ್ಲಿ, ಕನ್ನಡದ ಅಕ್ಷರಗಳನ್ನು ಮಕ್ಕಳಿಗೆ ಕೊಟ್ಟು, ಪ್ರತಿ ಒಬ್ಬರಿಗೂ ಅವರ ಹೆಸರನ್ನು ಬರೆಯಕ್ಕೆ ಹೇಳಿಕೊಟ್ಟೆ.  ಕಾಗದಲ್ಲಿ ಅವರವರ ಹೆಸರನ್ನು ಬರ್ಕೊಂಡು, ಚಂಚನಾಗಿರೋ ಅಲಹಂಕಾರ ಮಾಡಿಕೊಂಡರು. ಈ ಭಾಗಕ್ಕೆ ಬೇರೆ ಮಕ್ಕಳು, ಅವರ ಸ್ನೇಹಿತರು ಅಥವಾ ಅಪ್ಪ ಅಮ್ಮ ಜೊತೆ ಬಂದು ಭಾಗವಯಸಿದ್ದರು.

ಹಿಂದಿನ ಕನ್ನಡ ಬಳಗ ಯುಕೆ ಕಾರ್ಯಕ್ರಮಕ್ಕೆ ಬಂದಿದ್ದ ಮಕ್ಕಳು ಈ ಸರತಿನೂ ಬಂದಿದ್ದರಿಂದ ತುಂಬಾ ಖುಷಿ ಆಯಿತು. ಮುಂದೇನೂ ಬರ್ತಾ ಇರಲಿ ಅಂತ ಆಶಿಸ್ತೀನಿ.

ನವ್ಯ ಆನ೦ದ್

 

ಯು.ಕೆ. ಯುವಜನಾ೦ಗ ಮತ್ತು ಕನ್ನಡ ಭಾಷೆ.

ಯು.ಕೆ ಕನ್ನಡ ಬಳಗ ಏರ್ಪಡಿಸುವ ಕಾರ್ಯಕ್ರಮಕ್ಕೆ ಹೋದಾಗಲೆಲ್ಲ, ಎಲ್ಲರೂ ಕನ್ನಡದಲ್ಲಿ ಮಾತನಾಡುವುದನ್ನು ಕೇಳುವುದು ಕಿವಿಗಳಿಗೆ ಹಬ್ಬ. ಅದರಲ್ಲೂ ತಾಯಿತಂದೆಯರು ಮಕ್ಕಳನ್ನು ಕನ್ನಡದಲ್ಲಿ ಮಾತನಾಡಿಸುವುದನ್ನು ಕೇಳಿದಾಗ ಬಹಳ ಆನ೦ದವಾಗುತ್ತದೆ. ಮಕ್ಕಳು ಕನ್ನಡದ ಪ್ರಶ್ನೆಗಳಿಗೆ ಉತ್ತರವನ್ನು ಇ೦ಗ್ಲಿಷ್ ಭಾಷೆಯಲ್ಲಿ ಕೊಟ್ಟರೂ, ಸಮರ್ಪಕವಾದ ಉತ್ತರ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತಾರೆ೦ದು ಮನವರಿಕೆ ಮಾಡಿಕೊಡುತ್ತದೆ. ಬಹಳಷ್ಟು ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುತ್ತಿರುವುದು ಶ್ಲಾಘನೀಯ. ಕನ್ನಡದ ಹಾಡುಗಳನ್ನು ಹಾಡುವುದು, ಕನ್ನಡದ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ನಾವು ನೋಡುತ್ತಲೆ ಇರುತ್ತೇವೆ. ಕವನ ಕವಿತೆಗಳನ್ನು, ಬಾಯಿಪಾಠ ಮಾಡಿ, ಹಾಡಿ ನಮ್ಮನ್ನು ರ೦ಜಿಸುವ ಮಕ್ಕಳ ಸ೦ಖ್ಯೆ ಕಳೆದ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಬೇರೆ, ಬೇರೆ ಕನ್ನಡ ಸ೦ಘಗಳು ಹುಟ್ಟಿ, ಪ್ರಾ೦ತೀಯ ಕಾರ್ಯಕ್ರಮಗಳನ್ನು ಆಚರಿಸುತ್ತಿರುವುದು, ಇ೦ತಹ ಚಟುವಟಿಕೆಗಳಿಗೆ ಮತ್ತು ಕನ್ನಡದ ಬೆಳವಣಿಗೆಗೆ ಕಾರಣವಾಗಿದೆ. “ ಕನ್ನಡ ಕಲಿ“ ಎನ್ನುವ೦ತಹ ಭಾಷಾಕಲಿಕೆಯ ಕಾರ್ಯಕ್ರಮಗಳನ್ನು ಸಹ ನಾವೀಗ ನೋಡುತ್ತಿದ್ದೇವೆ. ಇದಕ್ಕೆಲ್ಲ ಮುಖ್ಯ ಕಾರಣ ಈ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಕನ್ನಡಿಗರ ಸ೦ಖ್ಯೆ.

ಮಾತೃ ಭಾಷೆಯ ಮಹತ್ವ, ಮತ್ತೊ೦ದು ಭಾಷೆಯನ್ನು ಕಲಿತಿರುವ ಪರಿಣಿತಿಯ ಉಪಯೋಗ ಇದನ್ನೆಲ್ಲ ಮಕ್ಕಳಿಗೆ ಹೇಳಿ ತಿಳಿಸುವುದು ಪೋಷಕರುಗಳ ಕರ್ತವ್ಯ. ” ಕರ್ನಾಟಕದಲ್ಲೆ ಕನ್ನಡ ಕಲಿಸುತ್ತಿಲ್ಲ, ನಾವೇಕೆ ಕಲಿಸಬೇಕು ?“ ಎ೦ದು ವಾದಮಾಡುವವರೂ ಇದ್ದಾರೆ.  ಆದರೆ ಅವರುಗಳ ಸoಖ್ಯೆ ಬಹಳ ಕಡಿಮೆಯೆ೦ದು ಹೇಳಬಹುದು. ನಾನು ನನ್ನ ಮಗಳು ಮೂರು ವರ್ಷದವಳಿದ್ದಾಗ, ಕನ್ನಡದ ಅಕ್ಷರ, ಕಾಗುಣಿತ ಇದನ್ನೆಲ್ಲ ಕಲಿಸಿದ್ದೆ, ಆದರೆ ಈಗ ಅವಳಿಗೆ ಬರುವುದು ತನ್ನ ಹೆಸರು ಬರೆಯಲು ಮಾತ್ರ. ೨೦ ವರ್ಷಗಳ ಹಿ೦ದೆ ನಾವು ಈ ದೇಶಕ್ಕೆ ಬ೦ದಾಗ ಕನ್ನಡಿಗರ ಸ೦ಖ್ಯೆ ಬಹಳ ಕಡಿಮೆಯಿದ್ದು, ಮಕ್ಕಳಿಗೆ ಕನ್ನಡ ಆಡುವ, ಕೇಳುವ ಅವಕಾಶ ಬಹಳ ಕಡಿಮೆಯಿತ್ತು. ಈ ಪರಿಸ್ಥಿತಿ ಬದಲಾಗಿ, ಕನ್ನಡಿಗರ ಸ೦ಖ್ಯೆ ವೇಗದಲ್ಲಿ ಬೆಳೆಯುತ್ತಿರುವುದು ಬಹಳ ಸ೦ತಸದ ವಿಷಯ. ಈ ಹೊಸ ಪರಿಸರ, ಅವಕಾಶಗಳು ಮಕ್ಕಳಲ್ಲಿ ಕನ್ನಡಭಾಷೆಯ ಅರಿವು ಮೂಡಿಸಿ, ಕಲಿಕೆಯನ್ನು ಪ್ರೇರಿಪಿಸಬಹುದು.

ಈ ಚಿ೦ತನೆಗೆ ಪ್ರೇರಪಣೆ, ಈ ವಾರದ ಯುವ ಲೇಖಕಿ. ಇಲ್ಲಿ ಬೆಳೆದ ಮಕ್ಕಳು ಕನ್ನಡ ಓದಿ, ಬರೆಯುವುದು ಅಪರೂಪದ ಸ೦ಗತಿ. ಹೊರದೇಶದಲ್ಲಿದ್ದು, ತಮ್ಮ ಕೆಲಸಗಳ ಒತ್ತಡದ ನಡುವೆಯೂ ಮಕ್ಕಳಿಗೆ ಕನ್ನಡ ಭಾಷೆಯನ್ನು, ಆಡಲಷ್ಟೇ ಅಲ್ಲ, ಒದಿ ಬರೆಯಲು ಸಹ ಕಲಿಸಿದ ನವ್ಯಳ ತ೦ದೆ, ತಾಯಿಯನ್ನು ಅಭಿನ೦ದಿಸಲೆ ಬೇಕು. ಇ೦ತಹ ಪೋಷಕರ ಸ೦ಖ್ಯೆ ಬೆಳೆಯಲಿ ಮತ್ತು ಕನ್ನಡ ಭಾಷೆ ಅ೦ಗ್ಲನಾಡಿನಲ್ಲೂ ಉಳಿಯಲಿ ಎ೦ದು ಆಶಿಸೋಣ.

ದಾಕ್ಷಾಯಿನಿ

 

 

 

 

 

 

6 thoughts on “ದೀಪಾವಳಿ ೨೦೧೭ ಯುವ ಕಾರ್ಯಕ್ರಮದ ವರದಿ- ನವ್ಯ ಆನಂದ್

  1. ಯು ಕೆ ಯ ಅಪೂರ್ವ ಕನ್ನಡತಿ ನವ್ಯಾ ಅರಳು ಹುರಿದಂತೆ ಕನ್ನಡ ಮಾತಾಡುವುದಷ್ಟೇ ಅಲ್ಲ, ಸುಲಿದ ಬಾಳೆ ಹಣ್ಣಿನಂದದಿ ಕನ್ನಡ ಬರೆಯುತ್ತಾರೆ ಕೂಡ. ನೀನು ಇಲ್ಲಿಯ ಕನ್ನಡಿಗರೆ ಸ್ಪೂರ್ತಿ. – ಕೇಶವ

    Liked by 1 person

  2. ದೂರದ ಇಂಗ್ಲೆಂಡಿನಲ್ಲಿ ಬೆಳೆಯುತ್ತಿರುವ ಕನ್ನಡ ಸಮುದಾಯದ ಎರಡನೇ ಪೀಳಿಗೆಯ ಯುವಜನತೆಗೆ ಕನ್ನಡ ಭಾಷೆ ಕಲಿಯಲು ಹೆಚ್ಚಿನ ಪ್ರೇರಣೆ, ಅವಶ್ಯಕತೆ ಮತ್ತು ಅವಕಾಶಗಳು ಇಲ್ಲದಿರುವ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯನ್ನು ಮಾತನಾಡುವುದಲ್ಲದೆ ಕನ್ನಡದಲ್ಲಿ ಓದುವ ಬರೆಯುವ ಸಾಮರ್ಥ್ಯವನ್ನು ಗಳಿಸಿಕೊಂಡ ನವ್ಯ ಅಪೂರ್ವ ಕಿರಿಯ ಕನ್ನಡತಿ. ಅಷ್ಟೇ ಅಲ್ಲದೆ ಇಲ್ಲಿಯ ಕನ್ನಡ ಬಳಗದ ಕಾರ್ಯ ನಿರ್ವಾಹಣಾ ಸಮಿತಿಯಲ್ಲಿ ಯುವಜನರ ಪ್ರತಿನಿಧಿಯಾಗಿ ನವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವುದು ಹೆಮ್ಮೆಯ ವಿಷಯ. ಆಕೆ ಇತರ ಎರಡನೇ ಪೀಳಿಗೆಯ ಯುವಜನತೆಗೆ ಆದರ್ಶರೂಪಿ ಎನ್ನಬಹುದು.
    ಇಂತಹ ಮಗಳನ್ನು ಹೆತ್ತು ಅವಳಲ್ಲಿ ಮಾತೃಭಾಷೆ ಮತ್ತು ಸಾಂಸ್ಕೃತಿಕ ಅರಿವನ್ನು ಮೂಡಿಸಿ, ಪೋಷಿಸಿ ಬೆಳೆಸಿದ ಅವಳ ತಂದೆ ಆನಂದ್ ಮತ್ತು ತಾಯಿ ಅನ್ನಪೂರ್ಣ ಅವರ ಸಾಧನೆ ಶ್ಲಾಘನೀಯ. ಅನಿವಾಸಿಯಲ್ಲಿ ಬರೆಯುವ ಪ್ರಯತ್ನ ಮಾಡಿದ ನವ್ಯಳಿಗೆ ಅಭಿನಂದನೆಗಳು.

    Liked by 1 person

  3. ಮನಸ್ಸಿದ್ದರೆ ಮಾರ್ಗ. ಭೇಷ್ ನವ್ಯ ಹೀಗೆ ಮುಂದುವರೆಸು. ನಿನ್ನನ್ನು ನೋಡಿ ಇತರರು ಕನ್ನಡ ಭಾಷೆ ಕಲಿಯಲು ಪ್ರೇರಣೆಗೊಳ್ಳಲಿ.
    ಉಮಾ ವೆಂಕಟೇಶ್

    Like

  4. Well done Navya (and her parents!). I know it is hard but you have shown it can be done!
    ನವ್ಯ ಮತ್ತು ಆಕೆಯ ತಾಯಿ-ತಂದೆಗಳಿಗೆ ಅಭಿನಂದನೆಗಳು! ಮಾತೃಭಾಷೆ ಅಂದ ಮೇಲೆ ತಾಯಿ ಮೊದಲೋ? ಯೂಥ್ ಕಾರ್ಯಕ್ರಮಗಳನ್ನು ಸತತವಾಗಿ ನಡೆಸಿಕೊಡುತ್ತಿರುವದೂ ಸ್ತುತ್ಯ ಕಾರ್ಯ. ಮುಂದಿನ ಸಲಕ್ಕೆ ಈಗಲೇ ಇನ್ನೂ ಒಬ್ಬರ ಸಹಾಯವನ್ನು ನೋಂದಾಯಿಸಿಕೊಳ್ಳ ಬೇಕೇನೋ! Keep it up!

    Liked by 1 person

  5. ನವ್ಯ,
    ನೀವು ನಡೆಸಿಕೊಟ್ಟ ಯೂಥ್ ಕಾರ್ಯಕ್ರಮದ ಬಗೆಗಿನ ಪುಟ್ಟ ವರದಿಗೆ Good marks for effort ಅಂತ ಹೇಳ್ಬೇಕು. ನೀವು ಕನ್ನಡ ಭಾಷೆಯಲ್ಲಿ ಯೋಚಿಸಿ, ಕಷ್ಟಪಟ್ಟು ಕನ್ನಡ ಅಕ್ಷರಗಳನ್ನ ಬಳಸಿ, ಟೈಪ್ ಮಾಡಿ ವರದಿಯನ್ನ ತಯಾರಿಸಿದ್ದೀರಿ. ಇನ್ನಷ್ಟು ಪುಟ್ಟ ಲೇಖನಗಳನ್ನ ಬರೀರಿ ಅಂತ ನನ್ನ ಕೋರಿಕೆ. ಉದಾಹರಣೆಗೆ, ನೀವು ಓದುತ್ತಿರುವ ಮತ್ತು ಅಭ್ಯಾಸ ಮಾಡುತ್ತಿರುವ ಸೈಕಾಲಜಿ ವಿಷಯದ ಬಗ್ಗೆ ಚಿಕ್ಕದಾಗಿ ಬರೀರಿ. ಅಥವಾ ನಿಮ್ಮ ತಾಯಿ ಮಾಡುವ ಚಾರಣಗಳ ಬಗ್ಗೆ ಬರೆಯಿರಿ. ನಿಮ್ಮಗಳ Generation Young ಪಡೆಯಿಂದ (ಕನ್ನಡ ಬಳಗ) ಇಂತಹ ಕನ್ನಡ ಭಾಷೆಯ ಬರಹಗಳು ಬರುವ Good Efforts ಜಾಸ್ತಿ ಆಗಲಿ.
    ವಿನತೆ ಶರ್ಮ

    Liked by 1 person

Leave a comment

This site uses Akismet to reduce spam. Learn how your comment data is processed.