ಶ್ರೀವತ್ಸ ದೇಸಾಯಿ ಮತ್ತು ರಾಮಶರಣರ ಹನಿಗವನಗಳು

ಶ್ರೀವತ್ಸ ದೇಸಾಯಿ ಮತ್ತು ರಾಮಶರಣರ ಹನಿಗವನಗಳು

ಪ್ರಿಯ ಓದುಗರೆ, ನಮ್ಮ ಈ ಹನಿಗವನದ ಮಾಸದಲ್ಲಿ ಶ್ರೀವತ್ಸ ದೇಸಾಯಿ ಮತ್ತು ರಾಮಶರಣರವರು ಬರೆದು, ಹನಿಗವನ ಗೋಷ್ಠಿ’ಯಲ್ಲಿ ವಾಚಿಸಿದ ಕವನಗಳನ್ನು ಓದುವ ಅವಕಾಶ ನಮ್ಮೆಲ್ಲರಿಗೆ. ದೇಸಾಯಿಯವರ ಹನಿಗವನ ”ಬ್ರೆಕ್ಸಿಟ್” ನಲ್ಲಿ  ಪ್ರಸ್ತುತ ರಾಜಕೀಯದ ವ್ಯ೦ಗ್ಯ ಚಿತ್ರಣವಿದೆ ಮತ್ತು ಬಿ೦ದುಗವನ ಸ೦ಸ್ಕೃತ ಶ್ಲೋಕವನ್ನು ಆಧರಿಸಿದೆ.
ರಾಮಶರಣರವರ ತಮ್ಮ ಕೊನೆಯ ಮೂರು ಕವನಗಳಲ್ಲಿ ತ೦ದೆಯು ಮೋದದಿ೦ದ ಈಗಿನ ಮಕ್ಕಳನ್ನು ನೋಡುವ ಚಿತ್ರಣವಿದೆ. “ ಇಷ್ಟೆಲ್ಲ ತಲೆಬಿಸಿ ಕೈಕು ?“ ಎ೦ದ ಹಾಗೆ ಪ್ರತಿ ಹನಿಗವನವನ್ನು ತಲೆಬಿಸಿ ಮಾಡಿಕೊಳ್ಳದೆ ನಿಮ್ಮದೇ ರೀತಿಯಲ್ಲಿ ಆನ೦ದಿಸಿ – ಸ೦

1)ಬ್ರೆಕ್ಸಿಟ್-ಯೂರೋ ನಿರ್ಗಮನ!

ಕೃಪೆ: ಲಕ್ಷ್ಮಿನಾರಾಯಣ ಗುಡೂರ್

( ಮುದ್ದಣ -ಮನೋರಮೆ ಸಂವಾದದಲ್ಲಿ)
ಮುದ್ದಣ: ಬ್ರೆಕ್ಸಿಟ್ಟಿಗೂ ಬಿಸ್ಕೀಟ್ಟಿಗೂ ಏನು ಸಂಬಂಧ?
(ಮನೋರ)ಮೇ (Mrs May) ಅಂದಳು:
ಬ್ರೆಕ್ಸಿಟ್ ಮೊದಲು ನಿಮಗೆ
ಬಿಸ್ಕೀಟು-ಚಹ ಉಂಟು (Bisuit with tea )
ಬ್ರೆಕ್ಸಿಟ್ ನಂತರದ ದುಬಾರಿ ಯುಗದಲ್ಲಿ
ಬಿಸ್ಕತ್ತೂ ಇಲ್ಲ, ಟೀ-ಕಾಫಿನೂ ಇಲ್ಲ,
ದಿನಕ್ಕೈದು ಕಪ್, ನಲ್ಲ
ನಿನ್ನ ಸಪ್ತಾಕ್ಷರಿ ಮಂತ್ರ ಮಾತ್ರ ಉಂಟು!

 

 

 

2) ಬಿಂದುಗವನ

ಬಿಂದುವಿನ ಅಂತರ ಮಾತ್ರ ಚಿತೆಗೂ ಚಿಂತೆಗೂ
ಸುಡುವುದು ಚಿತೆ ಸತ್ತ ನಂತರ
ನನ್ನಾಕೆ ಬಿಂದುವಿನ ಉರಿಗಣ್ಣು

ನನ್ನನ್ನು ಸುಡುತ್ತಿದೆ ನಿರಂತರ!

3) ಲಿಮರಿಕ್ಕೂ ಒಂದು ಹನಿಗವನ

ಚೊಕ್ಕ ಲಿಮರಿಕ್ಕೂ ಒಂದು ಹನಿಗವನ
ಅದರ ನಿಯಮಗಳತ್ತ ಇರಲಿ ಗಮನ
ಐದು ಸಾಲುಗಳ ಅ-ಅ-ಬ-ಬ-ಅ ಪ್ರಾಸ
ಓದಿ ”ಅಬ್ಬಾ!” ಎಂದರೆ ನೀ ಪಾಸ್
ಅವರು ನಕ್ಕರಂತೂ ಆಯಿತು ಹಾಸ್ಯಕವನ!

               ಶ್ರೀವತ್ಸ ದೇಸಾಯಿ

ಹನಿಗವನಗಳು

. ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್
ಹಾಗೆಂದೇ ಬರೆದಿರುವೆ ಇಂದು ಹನಿಗವಿತೆಗಳ್
ಇದರೊಳಗೇನೂ ಇಲ್ಲ ಹೂರಣಗಳ್
ನಗಬೇಡಿ ದಯಮಾಡಿ ಗೊಳ್

. ಸರ್ವಜ್ಞ ಬರೆದ ತ್ರಿಪದಿ
ದಿನಕರನ ಕಾಲದಲ್ಲಿ ಚೌಪದಿ
ಡುಂಡೀರಾಜ್ ಕೈಯಲ್ಲಿ some ಪದಿ
ನಮ್ಮ ಸಾಮರ್ಥ್ಯ no ಪದಿ

. ಸಾನೆಟ್ಟಿನಲ್ಲಿದೆ ಸಾಲು ಹದಿನಾಕು
ಏಳರಿಂದ ಹನ್ನೊಂದಿದ್ದರೆ ಹೈಕು
ಇಷ್ಟೆಲ್ಲಾ ತಲೆಬಿಸಿ ಕೈಕು?
ಹನಿಗವಿತೆಯಲ್ಲಿರುವುದೇ ಮೂರರಿಂದ ನಾಕು

೪. ತೊಟ್ಟು ತೊಟ್ಟಾಗಿ ಬಿದ್ದಂತೇ ಹನಿಗವನ
Honey-honey ಆಯಿತೆನ್ನ ಮನ
ತೊಟ್ಟುತ್ತಲೇ ಇತ್ತು ನಿರಂತರ ನೀಳ್ಗವನ
ಆದೆನಾ ಮಳ್ಳ ಹನಿ ಬಿದ್ದು ಶಿರದ ಮೇಲೆನ್ನ

. ನಮ್ಮಪ್ಪನ ಕಾಲದ ತಂದೆತನ
ಹೊರಗಡೆ ಕರ್ಮ ಮನೇಲಿ ಆರಾಮ
ನಮ್ಮ ಕಾಲದಲ್ಲಿ ತಂದೆತನ
ಹೊರಗೂ ದನ ಮನೇಲೂ ದನ.

 

 

. ನಮ್ಮನೆ ಮಕ್ಕಳಿಗೆ ಕಂಡರೆ ಪಿಜ್ಜಾ
ಎರಡೂ ಕೈತುಂಬ ತಿನ್ನೋದೇ ಮಜಾ
ಪದರು ಪದರಾಗಿ ಹರಡಿದ್ದು ಚೀಜಾ?
ನೋಡೋದೇ ನನಗೆ ಸಜಾ

೭. ಬರುತಿದೆ ಅವನಿಗೆ ಚಿಗುರು ಮೀಸೆ
ಮಗನಿರುವುದೀಗ ಯೌವ್ವನದ ಮೂಸೆ
ಜೊತೆಯಲ್ಲೇ ಇರುವ ಆಸೆ
ಬೀಳಲೇ ಅದರಲ್ಲೀಗ ಎಂಬುದೇ ಜಿಜ್ಞಾಸೆ

ರಾಮಶರಣ

7 thoughts on “ಶ್ರೀವತ್ಸ ದೇಸಾಯಿ ಮತ್ತು ರಾಮಶರಣರ ಹನಿಗವನಗಳು

  1. ಈ ಹನಿಗವನಗಳ ಪ್ರಭಾವ ಹೇಗಿದೆಯೆ0ದರೆ ನಮ್ಮ ಓದುಗರ ಸ0ವಾದ ಕವನ ರೂಪ ತಾಳಿಬಿಟ್ಟಿದೆ.
    ಈ ಹೊಸಬಗೆಯ ಸ0ಭಾಷಣೆ ನಿಮ್ಮಗಳ ಪ್ರತಿಭೆಗೆ ಸಾಕ್ಷಿ ಮತ್ತು ಓದಲು ಬಹಳ ಸ0ತೋಷವಾಗುತ್ತದೆ.

    Like

  2. ಅನಿವಾಸಿ ಕವಿ-ಬಳಗದ ಮೇಲೆ ಡುಂಡಿರಾಜರು ಅಪರಿಮಿತವಾದ ಪ್ರಭಾವ ಬೀರಿದ್ದಾರೆ ಎಂದು ತಿಳಿಯುತ್ತಿದೆ. ಇಲ್ಲಿ ಪ್ರಕಟವಾಗುತ್ತಿರುವ ಪ್ರತಿ ಕವನದಲ್ಲೂ ಕವಿಗಳು ತಮ್ಮದೇ ಆದ ಒಂದು ಛಾಪು ಮೂಡಿಸಿ, ವೈವಿಧ್ಯತೆಯನ್ನು ತುಂಬಿದ್ದಾರೆ. ಇದೇ ಪ್ರಕಾರ ಮುಂದುವರೆಯಲಿ ಅನಿವಾಸಿ ಕವನ ಪರಂಪರೆ!
    ಉಮಾ ವೆಂಕಟೇಶ್

    Like

  3. ಕೀಬೋರ್ಡ್ದ ಕಾರು ಭಾರಿನಿಂದ ರಾಮ ಶರಣ ಹೋಗಿ ರಾಮ ರಾತ್ರಿ ಆಗಿದೆ.ಕ್ಷಮಿಸಿ.ತಿದ್ದಿಕೊಂಡು ಓದಿ
    ಸರೋಜಿನಿ ಪಡಸಲಗಿ

    Like

  4. ತುಂಬಾ ಸುಂದರ ಹನಿ ಗವನಗಳು.ಶ್ರೀವತ್ಸದೇಸಾಯಿಯವರ ರಾಜಕೀಯ ಹನಿ ಗವನ ಚಿಂತನೆ ಗೆ ಹಚ್ಚುತ್ತಿದೆ ಆದರೆ,
    ರಾಜ್ಯ ರಾಜಕಾರಣಕೂ ನನಗೂ ಅಜಗಜಾಂತರ
    ಮನೆರಾಜಕಾರಣಕೂ ಅದಕೂ ಒಂದೇ ಅಂತರ
    ಅಲ್ಲಿಹುದು ಅಡಿಗಡಿಗೂ ಸ್ಥಳಾಂತರ
    ಇಲ್ಲಿ ಹುದು ಒಬ್ಬರದೆ ಸಾಮ್ರಾಜ್ಯ ನಿರಂತರ
    ಬಿಂದುಗವನದಿ ಜೀವನದ ಸತ್ಯ.ಚಿತೆಗೂ ಚಿಂತನೆಗೂ ಬಿಂದುವಿಂತರ.ಅಲ್ಲಿ ಚಿತೆಬರುವುದು ಶೂನ್ಯದ ನಂತರ.
    ರಾಮ ರಾತ್ರಿ ದಿನ ನಿತ್ಯದ ಆಗುಹೋಗುಗಳ ಹನಿಗವನಗಳು ಮುದವೀಯ್ತವೆ.
    ಯೌವನದ ಮಕ್ಕಳಿಗೆ ಬೇಕು ಜೊತೆ
    ಜೋರು ಅಮ್ಮ ಅಪ್ಪನ ಮಾತು ಕತೆ
    ನೀನು ಹುಟ್ಟಿರುವುದು ಅದೇ ಮೂಸಿ
    ಬೇಕೆ ಹೇಳು ಇನ್ನು ಜಿಜ್ಞಾಸೆ
    ನಿಜವಾಗಲೂ ಹನಿ ಸವಿ ನೀಡೋ ಹನಿಗವನ ನೀಡಿದ ಶ್ರೀವತ್ಸ ದೇಸಾಯಿಯವರಿಗೂ,ರಾಮಶರಣರಿಗೂ ಅಭಿನಂದನೆಗಳು.
    ಸರೋಜಿನಿ ಪಡಸಲಗಿ

    Liked by 2 people

  5. ಹೊರಗೂ ದನ ಒಳಗೂ ದನ
    ರಾಮಶರಣ ಹಾಗಂದನ
    ಬೀದೀಲಿ ಹುಲಿ ಮನೇಲಿ ಇಲಿ
    ಅನ್ನುವದು ಮರೆತು ಹೋದನ?

    – Keshav

    Liked by 2 people

    • ಹೊರಗೂ ದನ ಒಳಗೂ ಧನ?
      ಆದರೂ ಕೂಡಲಿಲ್ಲ ಧನ
      ಅದೇ ಕದನಕ್ಕೆ ಇಂಧನ!
      ಎಣಿಸದೆ, ಗುಣುಗುಣಿಸು ಸ ರಿ ಗ ಮ ಪ ದ ನ!

      Liked by 1 person

      • ‘ಕುರಿತೋದದೆಯಂ’ ಕುರಿತುಂ ಬರೆದಂ ರಾಮಶರಣಂ
        ಒಳಗೆ ತುಂಬಿದಂ ಬರೀ ಹೂರಣಂ
        ಇದಂ ಬರೆದ ಕಾರಣಂ
        ನಿಮ್ಮ ಚಿಂತಾಹರಣಂ

        Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.