ವಿಜಯನರಸಿ೦ಹರವರ ಕವನ

ನಮ್ಮಅನಿವಾಸಿ ಬಳಗದ ಕವಿ ವಿಜಯನರಸಿ೦ಹರವರ ಪರಿಚಯ ನಿಮಗಾಗಲೆ ಆಗಿದೆ.
ಅವರ ಈ ’ಬಿಟ್ಟುಬಿಡಿ ನನ್ನ’ ಕವನದ ಸ೦ದೇಶ ಎ೦ದಿಗಿ೦ತಲೂ ಈಗ ಪ್ರಸ್ತುತ. ಧರ್ಮದ ಹೆಸರಿನಲ್ಲಿ ಪ್ರಪ೦ಚದಾದ್ಯ೦ತ ನಡೆಯುವ,ಸುಲಿಗೆ, ಮೋಸ, ಶೋಷಣೆ ಮತ್ತು ದುರ೦ತಗಳು ನಮಗೆಲ್ಲರಿಗೂ ತಿಳಿದಿದ್ದೆ. ಧರ್ಮದ ಹೆಸರಿನಲ್ಲಿ ನಮ್ಮನ್ನು ಬ೦ಧಿಸಿದ ಸ೦ಕಲೆಗಳನ್ನು ಕಳಚಿ, ಮಾನವ ಧರ್ಮ, ಮಾನವತಾ ಭಾವವನ್ನು ಜೀವನದಲ್ಲಿ ಅಡವಳಿಸಿಕೊಳ್ಳುವ ಹ೦ಬಲ ನಮ್ಮೆಲ್ಲರಲ್ಲಿ ಬೆಳೆಯಲಿ – ಸ೦

ಬಿಟ್ಟು ಬಿಡಿ

ಬಿಟ್ಟುಬಿಡಿ ನನ್ನ ಪಾಡಿಗೆ ನನ್ನ
ಹಸಿವು ಇಹುದೆನಗೆ
ನಿಮ್ಮ ಮರುಕ ಬೇಡ,
ದುಃಖಗಳೆನಗಿಹವು
ನಿಮ್ಮ ಸ್ವಾ೦ತನ ಬೇಡ,
ಆಸೆಗಳೆನಗಿಹವು
ನಿಮ್ಮ ನೆರವು ಬೇಡ,
ಅ೦ಧಕಾರದಲ್ಲಿಹೆನು
ನಿಮ್ಮ ಬೆಳಕು ಬೇಡ,
ಬ೦ಧನದಲ್ಲಿಹೆನು
ನಿಮ್ಮ ಮುಕ್ತಿಮಾರ್ಗ ಬೇಡ.

ನನಗೂ ನಿಮಗೂ ಸಲ್ಲದ ಸ೦ಬ೦ಧ
ನನ್ನದು ಏಕಮಾತ್ರ ಮನುಜ ಧರ್ಮ,
ನಿಮ್ಮದು ಅಗಣಿತ ಧರ್ಮಗಳು.
ದೇವನಿಲ್ಲ, ಎಲ್ಲೂ ಹುಡಕಬೇಡಿ,

ನನ್ನ ಕುಲವೇ ಸತ್ಯ ಎನುವವ ನಾನು,
ಕಾಣದ ದೇವರುಗಳನು ಸೃಷ್ಟಿಸಿ,

ಕಣ್ಣೆದುರಿಗಿರುವರನು ಕೊಲ್ವರು ನೀವು.
ಬಿಟ್ಟುಬಿಡಿ ನನ್ನ ಪಾಲಿಗೆ ನನ್ನ.

                     ವಿಜಯನರಸಿ೦ಹ

3 thoughts on “ವಿಜಯನರಸಿ೦ಹರವರ ಕವನ

  1. ಹುತಾತ್ಮನ ಆತ್ಮ್ದ ಆರ್ತನಾದ ಮರ್ಮಭೇದಕವಾಗಿ ಈ ಚಿಕ್ಕ ಕವನದಲ್ಲಿವರೆದಿದ್ದಾರೆ.ವಿಜಯನರಸಿಂಹ ಅವರು. ಮೂರ್ಸಾಲುಗಳಲ್ಲೂ ಎಷ್ಟೊಂದುರ್ಥ ಝಿಪ್ ಮಾಡುವ ಕಲೆ ಅವರಿಗಿದೆ ಎಂದು ಅನಿವಾಸಿ ವಾಟ್ಸಪ್ಪಿನಲ್ಲಿ ತೋರಿಸಿ ಕೊಟ್ಟಿದ್ದಾರೆ. ಇಲ್ಲಿ ಸತ್ತರೂ ಮುಕ್ತಿ ಇರದೆ ಪರದಾಡುವ ‘ಜೀವ‘ದ ಚಿತ್ರಣವಿದೆ? ಅಥವಾ ಅದು ಇನ್ನೂ ಬಂಧಿಯೇ? ್

    Like

  2. ಪ್ರಸಕ್ತದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಎಂಥವರನ್ನೂ ಧರ್ಮ ಮತ್ತು ದೇವರುಗಳ ಬಗ್ಗೆ ಮತ್ತೊಮ್ಮೆ ಆಲೋಚಿಸುವಂತೆ ಮಾಡುತ್ತಿವೆ. ಅನಿವಾಸಿ ಬಳಗದ ವಿಜಯನರಸಿಂಹ ಅವರ ಲೇಖನಿಯಿಂದ, ಇಂತಹ ಕವನವೊಂದು ಹೊರಬಿದ್ದಿರುವುದು ಸಮಯೋಚಿತವೆನ್ನಬಹುದು. ಧರ್ಮ ಮತ್ತು ದೇವರುಗಳ ಹೆಸರಿನಲ್ಲಿ ಮನುಜರು ನಡೆಸುತ್ತಿರುವ ಅಮಾನುಷ ಕೃತ್ಯಗಳು ಅನ್ಯಾಯಗಳನ್ನು ನೋಡಿದರೆ, ದೇವನಿಲ್ಲ, ಅವನನ್ನು ಎಲ್ಲಿಯೂ ಹುಡುಕುವ ಗೋಜಿಗೆ ಹೋಗಬೇಡಿ ಎಂದು ಸಲೀಸಾಗಿ ಹೇಳಬಹುದು. ಸಧ್ಯ ಕೇವಲ ಮಾನವ ಧರ್ಮವೊಂದನ್ನು ಪರಿಪಾಲಿಸಿ, ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ ಎನ್ನುವಂತಹ ಪರಿಸ್ಥಿತಿ ಒದಗಿರುವುದು ಆಶ್ಚರ್ಯವಲ್ಲ. ಗಾಂಧಿಯ ಅಮೃತವಾಣಿ ಇಲ್ಲಿ ಯಾರನ್ನೂ ತಲುಪಿದಂತೆ ಕಾಣುವುದಿಲ್ಲ!
    ಉಮಾ ವೆಂಕಟೇಶ್

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.