ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ!-ಗಣಪತಿ ಭಟ್

           ಹೊಸ ಪರಿಚಯ

gana
ಗಣಪತಿ ಭಟ್ ತಮ್ಮ ಮಗುವಿನೊಂದಿಗೆ

ಗಣಪತಿ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೊಡಿ ಗ್ರಾಮದವರು. ಸದ್ಯ ಕಳೆದ ಹತ್ತು ವರ್ಷಗಳಿಂದ ಇಂಗ್ಲೆಂಡಲ್ಲಿ IT Consultant ಆಗಿ ಪತಿಷ್ಠಿತ ಬ್ರಿಟಿಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಉದ್ದಿಮೆಯ ಹೊರತು ಕನ್ನಡಿಗರು ಯು. ಕೆ. ಎಂಬ ಸಂಸ್ಥೆಯ ಕಾರ್ಯಕಾರಿ ಸಮಿತಿಯ  ಸದಸ್ಯರೂ, ಅಧ್ಯಕ್ಷರೂ ಆಗಿದ್ದು, ಅನೇಕ ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯಯವಾಗಿ ಪಾಲ್ಗೊಳ್ಳುತ್ತಿದ್ದಾರೆ. “ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ”  ಎನ್ನುವ ಇದೇ ಶೀರ್ಷಿಕೆಯಡಿ  ಯು.ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆಯ ಬಗ್ಗೆ  ವಿಶ್ವವಾಣಿ  ದಿನಪತ್ರಿಕೆಯಲ್ಲಿ ಲೇಖನವನ್ನು ಬರೆದಿದ್ದಾರೆ.  ಐದಾರು ವರ್ಷಗಳಿಂದ ಕೆ.ಯು.ಕೆ. ಟಾಕೀಸ್ ಎಂಬ ಸಂಸ್ಥೆಯ ಸ್ವಯಂ ಸೇವಕನಾಗಿ ಕನ್ನಡ ಚಲನಚಿತ್ರಗಳ ವಿತರಣೆಯಲ್ಲಿ ಅನುಭವ ಗಳಿಸಿದ್ದಾರೆ. ಕೆ.ಯು.ಕೆ ಟಾಕೀಸ್, ಕನ್ನಡಿಗರು ಯು. ಕೆ. ಸಮುದಾಯದ ಒಂದು ಅಂಗ. ಇಂಗ್ಲೆಂಡನಲ್ಲಿ ಕೆ.ಯು.ಕೆ. ಟಾಕೀಸ್ ಹೊರತುಪಡಿಸಿ ಇನ್ನು ಅನೇಕ ಕನ್ನಡ ಸಿನಿಮಾ ವಿತರಕರು ಹಲವಾರು ಕನ್ನಡ ಚಲನ ಚಿತ್ರಗಳನ್ನು ನಿರಂತರವಾಗಿ ಬಿಡುಗಡೆ ಮಾಡುತ್ತಿದ್ದಾರೆ.

ಸಿನಿಮಾ ವಿತರಣೆಯ ತಮ್ಮ ಅನುಭವವನ್ನು ಕನ್ನಡಿಗರ ಜೊತೆ ಹಂಚಿಕೊಳ್ಳಲು ಅನುಕೂಲ ಮಾಡಿಕೊಡುತ್ತಿರುವ ಅನಿವಾಸಿ ಕನ್ನಡ ತಂಡಕ್ಕೆ ವಂದನೆಗಳೊಂದಿಗೆ ಈ ಲೇಖನವನ್ನು ಕಳಿಸಿಕೊಟ್ಟಿದ್ದಾರೆ- ಸಂ

 


( ಪರದೇಶೀ ಸಿನಿಮಾ ಮಾರುಕಟ್ಟೆಯ ಬಗ್ಗೆ ಭಾರತದಲ್ಲಿ ಭಾರೀ ಹುಮ್ಮಸ್ಸಿನ ಭಾವವಿದೆ. ಕನ್ನಡ ಸಿನಿಮಾಗಳು ಕೂಡ ವಿದೇಶೀ ಮಾರುಕಟ್ಟೆಯ  ಭಾಗವನ್ನು ಇತ್ತೀಚೆಗೆ ಪರಿಗಣನೆಯಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾದ ದಿನವೇ ವಿದೇಶಗಳಲ್ಲಿ ಕೂಡ  ಚಲನಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ಚಿತ್ರಗಳ ವಿತರಣೆಗೆ ಕನ್ನಡ ಕೂಟಗಳು, ಸಂಘಗಳಿಗಿಂತ ಉತ್ತಮ ಮಧ್ಯಸ್ಥಿಕೆಯಿಲ್ಲ. ಕನ್ನಡ ಸಂಘ ಮತ್ತು ವಿತರಣೆ ಎರಡರಲ್ಲೂ ಅನುಭವವಿರುವ ಗಣಪತಿ ಭಟ್ ಈ ಬಗ್ಗೆ ಯು. ಕೆ. ಕನ್ನಡಿಗರಿಗೆ ಬರೆದಿರುವ  ಈ ಲೇಖನ ಯಾವುದೇ ಉತ್ಪ್ರೇಕ್ಷೆಯಿಲ್ಲದ, ವಸ್ತು ನಿಷ್ಟ ಬರಹ-ಸಂ)

edit cinema
ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ!

ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡ ಚಲನ ಚಿತ್ರಗಳ ಭರ್ಜರಿ ಪ್ರದರ್ಶನ ಕಾಣಬರುತ್ತಿದೆ! ಹತ್ತು ವರ್ಷಗಳ ಹಿಂದೆ ಕನ್ನಡ ಚಿತ್ರ ಕೇವಲ ಲಂಡನ್ ಹಾಗು ಸುತ್ತ ಮುತ್ತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ರೇಡಿಂಗ್ ನಲ್ಲಿ ಹಾಗೂ ಬರ್ಮಿಂಗ್ಹ್ಯಾಮ್ ನಲ್ಲಿ ಆಗಾಗ ಕನ್ನಡ ಚಿತ್ರ ಪ್ರದರ್ಶನ ಆಗ್ತಾ ಇತ್ತು. ಬ್ರಿಟಿಷ್ ಬೋರ್ಡ್ ಆಫ್ ಫಿಲಂ ಕ್ಲಾಸಿಫಿಕೇಶನ್ ವೆಬ್ ಸೈಟ್ ಪ್ರಕಾರ ಕಳೆದ ೧೦೦ ವರ್ಷಗಲ್ಲಿ ಕೇವಲ ಬೆರೆಳೆಣಿಸುವಷ್ಟು ಕನ್ನಡ ಚಿತ್ರಗಳು ಮಾತ್ರ BBFC ಸರ್ಟಿಫಿಕೇಟ್ ಪಡೆದುಕೊಂಡಿವೆ. ಆದರೆ ಇತ್ತೀಚಿಗೆ ಹಲವಾರು ಕನ್ನಡ ಚಲನ ಚಿತ್ರಗಳು BBFC ಸರ್ಟಿಫಿಕೇಟ್ ಪಡೆದುಕೊಂಡಿವೆ.

devara-nadalli

“ಮುಂಗಾರು ಮಳೆ ೨” ಬಿಡುಗಡೆ ಆಗುವ ಮುನ್ನ ಕಳೆದ ೧೦ ವರ್ಷಗಲ್ಲಿ ಯಾವುದೇ ಕನ್ನಡ ಚಲನ ಚಿತ್ರಗಳು ದೊಡ್ಡ ಪ್ರಮಾಣದಲ್ಲಿ ಏಕೈಕ ಕಾಲದಲ್ಲಿ ಸಿನಿ ವರ್ಲ್ಡ್ ಹಾಗು ಒಡಿಯೋನ್ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಇಂಗ್ಲೆಂಡ್ನಲ್ಲಿ ಸೂಪರ್ ಹಿಟ್ ಚಿತ್ರ ರಂಗಿತರಂಗ  ಕೂಡ ಕೇವಲ ಖಾಸಗಿ ಪ್ರದರ್ಶನಕ್ಕೆ ಸೀಮಿತವಾಗಿತ್ತು. ಆದರೆ ರಂಗಿತರಂಗ ಚಿತ್ರ ಅನೇಕ ಯು.ಕೆ. ಕನ್ನಡಿಗರನ್ನು ಚಿತ್ರ ಮಂದಿರಕ್ಕೆ ಸೆಳೆದಿದ್ದು ಒಂದು ವಿಶೇಷ ಸಾಧನೆ.

ಪುನೀತ್ ರಾಜಕುಮಾರ ನಟಿಸಿರುವ ಚಕ್ರವ್ಯೂಹ ಚಿತ್ರ ಕೆ. ಯು. ಕೆ. ಟಾಲ್ಕಿಸ್ ಮುಖಾಂತರ ಪ್ರಥಮ ಬಾರಿಗೆ ಎಂಟು ಯು. ಕೆ. ಕೇಂದ್ರಗಳಲ್ಲಿ ಮತ್ತು ಏಕೈಕ ದಿನ ನಾಲ್ಕು ಕಡೆ ಖಾಸಗಿ ಪ್ರದರ್ಶನವಾಗಿತ್ತು. ಅದಾದ ಮೇಲೆ ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಸುಮಾರು ಹದಿನಾಲ್ಕು ಪ್ರದೇಶಗಳಲ್ಲಿ ಖಾಸಗಿ ಪ್ರದರ್ಶನಗೊಂಡಿತ್ತು.

೨೦೧೬ ಸೆಪ್ಟೆಂಬರ್ ನಲ್ಲಿ “ಮುಂಗಾರು ಮಳೆ ೨” ಚಿತ್ರ ಯುನೈಟೆಡ್ ಕಿಂಗ್ಡಮ್ ಕನ್ನಡ ಚಲನ ಚಿತ್ರ ಮಾರುಕಟ್ಟೆಯ ದಿಕ್ಕು ದಿಶೆಯನ್ನೇ ಬದಲಾಯಿಸಿತು. ಮೊದಲು ಕೇವಲ ಬೆರಳು ಲೆಕ್ಕ ಪ್ರದೇಶಕ್ಕೆ ಸೀಮಿತವಾದ ಕನ್ನಡ ಚಿತ್ರ, “ಮುಂಗಾರು ಮಳೆ ೨” ಮೂಲಕ ೧೭ ವಿವಿಧ ಪ್ರಾಂತ್ಯಗಳಲ್ಲಿ ೨೫ಕ್ಕೂ ಹೆಚ್ಚು ಪ್ರದರ್ಶನವನ್ನು ಕಾಣಿತು. ಸಿನಿ ವರ್ಲ್ಡ್, VUE  ಸಿನಿಮಾ ಹಾಗು ಖಾಸಗಿ ಪ್ರದರ್ಶನದ ಮೂಲಕ ಹಲವಾರು ಇಂಗ್ಲೆಂಡ್, ಸ್ಕಾಟ್ಲೆಂಡ್ ಪಟ್ಟಣಗಳಲ್ಲಿ ಕನ್ನಡಿಗರಿಗೆ ತಮ್ಮ ಮನೆಯ ಪಕ್ಕದ ಸಿನೆಮಾಗಳಲ್ಲಿ ಕುಟುಂಬ ಸಮೇತ ಕನ್ನಡ ಚಿತ್ರವನ್ನು ವೀಕ್ಷಿಸುವ ಒಂದು ಅವಕಾಶವನ್ನು ತಂದು ಕೊಟ್ಟಿತು.

 

MM2-Locations-Cover-Page

ಕಳೆದ ದಶಕಗಳಲ್ಲಿ ಕನ್ನಡ ಚಲನ ಚಿತ್ರಗಳು ಯುನೈಟೆಡ್ ಕಿಂಗ್ಡಮ್ ನಲ್ಲಿ ವಿವಿಧ ರೀತಿಯ ಪ್ರದರ್ಶನಗಳನ್ನು ಕಂಡು ಸಧ್ಯದ ಪರಿಸ್ಥಿತಿಯಲ್ಲಿ ಒಂದು ವಿದೇಶಿ ಕಮರ್ಷಿಯಲ್ ಮಾರುಕಟ್ಟೆಯತ್ತ ಪಯಣ ನಡೆಸಿರುವದಂತೂ ನಿಜ. ಇದಕ್ಕೆ ಉದಾಹರಣೆ ಇತ್ತೀಚಿಗೆ ಕಿರಿಕ್ ಪಾರ್ಟಿ, ಅಲ್ಲಮ್ಮ, ಬ್ಯುಟಿಫುಲ್ ಮನಸುಗಳು, ಉರ್ವಿ, ಹೆಬ್ಬುಲಿ ಹಾಗು ರಾಜಕುಮಾರ ಚಲನ ಚಿತ್ರಗಳು ಒಂದರ ಹಿಂದೆ ಇನ್ನೊಂದು ಬಿಡುಗಡೆ ಆಗಿದ್ದು, ಯು. ಕೆ. ಕನ್ನಡಿಗರನ್ನು ದಿಗಿಲುಗೊಳಿಸಿದೆ.

Hebbuli2

ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕನ್ನಡ ಚಲನ ಚಿತ್ರಗಳು ಯು.ಕೆ. ಮಾರುಕಟ್ಟೆಯತ್ತ ತಮ್ಮ ಒಲವನ್ನು ತೋರಿಸುವದಂತೂ ನಿಜ ಆದರೆ ಗಮನಿಸಬೇಕಾದಂತಹ ವಿಷಯವೇನೆಂದರೆ ಈಗಾಗಲೇ ಖಾಸಗಿ ಪ್ರದರ್ಶನ ಸಾಕಷ್ಟು ಕಮ್ಮಿಯಾಗಿದ್ದು, ಮುಂದೆ ಬರುವ ಎಲ್ಲಾ ಚಿತ್ರಗಳನ್ನ ಸಿನಿ ವರ್ಲ್ಡ್ ಹಾಗು ಒಡಿಯೋನ್ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಬೇಕೆಂಬುದೇ ಇಲ್ಲಿಯ ಪ್ರೇಕ್ಷಕರ ಕೋರಿಕೆ.

ಇದಕ್ಕೆಲ್ಲ ಕಾರಣ ಹಲವಾರು ಉತ್ಸಾಹಿ ಯು. ಕೆ. ಕನ್ನಡಿಗರು, ಉತ್ತಮ ಪ್ರಮಾಣದ ಕನ್ನಡ ಚಲನ ಚಿತ್ರಗಳು ಹಾಗು ಸಹಾಯಕಾರಿ ಕನ್ನಡ ಚಲನ ಚಿತ್ರ ನಿರ್ಮಾಪಕರು. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಉತ್ತಮ ಕನ್ನಡ ಚಲನ ಚಿತ್ರಗಳು ಯು.ಕೆ. ಮಾರುಕಟ್ಟೆಯತ್ತ ತಮ್ಮ ಒಲವನ್ನು ತೋರಿಸುವದಂತೂ ನಿಜ ಆದರೆ ನಾವು ಕನ್ನಡಿಗರು ಸ್ವತಃ ಪ್ರಯತ್ನದಿಂದ ಮದ್ಯಂತಿಕೆಯನ್ನು ದೂರ ಮಾಡಿ ಸಿನಿಮಾ ನೆಟ್ವರ್ಕ್ ಮೂಲಕ ಯು. ಕೆ. ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರೆ ಇದಕ್ಕಿಂತ ಹೆಚ್ಚು ಸಾಧನೆ ಬೇಕೇ?

– ಗಣಪತಿ ಭಟ್

ಚಿತ್ರಗಳು- ಗೂಗಲ್ ಕೃಪೆ

4 thoughts on “ಯು. ಕೆ. ಕನ್ನಡ ಚಲನ ಚಿತ್ರ ಮಾರುಕಟ್ಟೆ!-ಗಣಪತಿ ಭಟ್

 1. ಕನ್ನಡ ಚಲನ ಚಿತ್ರಗಳ ವಿತರಣೆ, ಯು ಕೆ ಯಲ್ಲಿ ಅವುಗಳ ಮಾರುಕಟ್ಟೆ ಇದರ ಬಗ್ಗೆ ತಮ್ಮ ಸ್ವಾನುಭವದಿಂದ ಈ ಮಾಹಿತಿ ಒದಗಿಸಿದ ಗಣಪತಿ ಭಟ್ ಅವರಿಗೆ ಧನ್ಯವಾದಗಳು. ಈ ಲೇಖನದಿಂದ ಅನಿವಾಸಿಗೆ ಮೊದಲ ಪಾದಾರ್ಪಣೆಗೆ ಮಾಡುವ ಅವರಿಗೆ ಸುಸ್ವಾಗತ. ಯುಕೆಯಲ್ಲಿ ಅಲ್ಲಲ್ಲಿ ಚದುರಿಹೋಗಿರುವ ಕನ್ನಡಿಗರಿಗೆಲ್ಲ ಪ್ರಥಮ ’ಬ್ಲಾಗ್’ ಆದ ಈ ”ಅನಿವಾಸಿ” ಯಲ್ಲಿ ಸ್ವಾಗತವಿದೆ. ಬೇರೆ ಬೇರೆ ಬರಹಗಾರರ ಪರಿಚಯ ಮಾಡಿಸಿದ ಸಂಪಾದಕಿ ಪ್ರೇಮಲತಾ ಅವರಿಗೂ ಧನ್ಯವಾದಗಳು.

  Like

 2. ಅಮೆರಿಕಾ, ಜರ್ಮನಿ, ಕತಾರ್, ನ್ಯೂಝಿಲ್ಯಂಡ್, ಯು.ಕೆ. ಅಂತ ಇವತ್ತು ಕನ್ನಡ ಚಲನಚಿತ್ರಗಳು ಇವತ್ತು ತೆರೆ ಕಾಣುತ್ತಿದ್ದರೆ, ಕನ್ನಡಿಗರ ಸಂಪರ್ಕದಲ್ಲಿರುವ ಸಹೃದಯಿ ವಿರತಕರಿಂದ ಮಾತ್ರ ಸಾದ್ಯ!!
  ಇದೇನು ಸುಲಭದ ಕೆಲಸವಲ್ಲ. ಅದರಲ್ಲೂ ಸಂಘ ಗಳ ಮೂಲಕ ಮಾಡುವುದು ವ್ಯಕ್ಟಿಗತವಾಗಿ ಮಾಡುವುದಕ್ಕಿಂತ ಹೆಚ್ಚು ಕಷ್ಟ ಅಂತ ನನ್ನ ನಂಬಿಕೆ. ವಿದೇಶಗಳಲ್ಲಿ ಕನ್ನಡ ಸ್ಂಸ್ಕೃತಿಯನ್ನು ಉಳಿಸುವಲ್ಲಿ ಕನ್ನಡ ಸಿನಿಮಾಗಳ ಪಾತ್ರವೂ ಅತಿ ಮುಖ್ಯ. ಈ ಬಗ್ಗೆ ನಮ್ಮ ಕಮ್ಮಟದಲ್ಲಿ ವಿಚಾರವೂ ಮಂಡಿಸಲ್ಪಟ್ಟಿದೆ.
  ಈ ನಿಟ್ಟಿನಲ್ಲಿ ಸ್ವತಃ ಅನುಭವವಿರುವ ಗಣಪತಿಯವರ ಈ ಲೇಖನ ಅತ್ಯಂತ ಉಪಯುಕ್ತ.

  Like

 3. ಅನಿವಾಸಿ ಕನ್ನಡಿಗರಿಗೆ ಕನ್ನಡ ಸಿನಿಮಾ ನೋಡುವ ತವಕ ಮತ್ತು ಉತ್ಸಾಹ ಖಂಡಿತ ಇದೆ. ಅನಿವಾಸಿಗಳು ಕನ್ನಡ ಸಿನಿಮಾ ರಂಗಕ್ಕೆ ಹೊಸ ಮಾರುಕಟ್ಟೆ ಹಾಗು ಅಭಿಮಾನಿಗಳನ್ನು ಒದಗಿಸಿದ್ದಾರೆ. ಹಲವಾರು ನಿರ್ದೇಶಕರು ಅನಿವಾಸಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲವು ಸಿನಿಮಾಗಳನ್ನು ತಯಾರಿಸಿದ್ದಾರೆ. ಕೆ. ಎಂ. ಚೈತನ್ಯ ಅವರ ‘ಆಕೆ’ ಎಂಬ ಸಿನಿಮಾ ತಯಾರಿಸಲು ಯು.ಕೆ. ನಿರ್ಮಾಪಕರು ಹಣ ಹೂಡಿದ್ದಾರೆ, ಛಾಯಾಗ್ರಹಕರು ಇಲ್ಲಿಯವರೇ. ಇದು ಯು.ಕೆ ಕನ್ನಡಿಗರಿಗೆ ಸಂತೋಷದ ಸುದ್ದಿ. ಸಿನಿವರ್ಲ್ಡ್ ಹಾಗು ಇತರ ಸಿನಿಮಾ ಮಂದಿರದಲ್ಲಿ ಅನಿವಾಸಿಗಳಿಗೆ ಕನ್ನಡ ಚಿತ್ರಗಳು ಒದಗಲಿ ಎಂದು ಆಶಿಸುತ್ತೇನೆ. ಕನ್ನಡ ಸಂಘಗಳು ಸಿನಿಮಾ ವಿತರಣೆ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಸಾಧ್ಯವೇ ಎಂಬ ವಿಚಾರದ ಬಗ್ಗೆ ಅನುಮಾನವಿದೆ. ಗಣಪತಿ ಭಟ್ ಅವರೆ ನಿಮಗೆ ಅನಿವಾಸಿ ಅಂಗಳಕ್ಕೆ ಸ್ವಾಗತ.

  Like

 4. ನನ್ನ ಅನುಭವವನ್ನು ಕನ್ನಡಿಗರ ಜೊತೆ ಹಂಚಿಕೊಳ್ಳಲು ಅನುಕೂಲ ಮಾಡಿಕೊಟ್ಟಿರುವ ಅನಿವಾಸಿ ಕನ್ನಡ ತಂಡಕ್ಕೆ ನನ್ನ ಅನಂತ ವಂದನೆಗಳು !
  ವಿಶೇಷ ಧನ್ಯವಾದಗಳು ಪ್ರೇಮಲತಾ ಅವರಿಗೆ..

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.