ರಾಮ ಸೀತೆಯರ ಶ್ರೀಲ೦ಕೆಯ ಪ್ರವಾಸ(ವನ)!!

(  ಪುರಾಣದಲ್ಲಿ  ರಾವಣ  ಸೀತಾದೇವಿಯನ್ನು ಬಲವಂತವಾಗಿ  ಪುಷ್ಪಕವಿಮಾನದಲ್ಲಿ ಶ್ರೀಲಂಕೆಗೆ ಕದ್ದೊಯ್ದ! ಹೆಂಡತಿಯ ರಕ್ಷಣೆಗೆ ಶ್ರೀರಾಮ ವಾನರ ಸೇನೆಯೊಂದಿಗೆ ದೌಡಯಿಸಿದ!! ಅವರ ಕತೆಯನ್ನು ನಮಗೆ ವಾಲ್ಮೀಕಿಗಳು ಶ್ರೀ ರಾಮಾಯಣ ಮಹಾಕಾವ್ಯದ ಮೂಲಕ ಹೇಳಿದ್ದಾರೆ.

ಆದರೆ ನಮ್ಮ ಆಧುನಿಕ ರಾಮ-ಸೀತೆಯರು  ಪ್ರವಾಸದ ಗುಂಗಲ್ಲಿ ವಿಮಾನವನ್ನೇರಿ ಶ್ರೀಲಂಕಾದ ಪ್ರಯಾಣವನ್ನು ಸ್ವ -ಇಚ್ಚೆಯಿಂದ ಕೈಗೊಂಡು  ತಮ್ಮ ಅನುಭವಗಳನ್ನು ಸ್ವತಃ  ಆಕರ್ಷಕ  ಶೀರ್ಷಿಕೆಯೊಂದಿಗೆ ಬರೆದುಕಳಿಸಿ  ಹಂಚಿಕೊಂಡಿದ್ದಾರೆ. ಓದಿ ಆನಂದಿಸಿ!!  -ಸಂ)

—————————————————————————————————————————————-

ಈ ಪ್ರವಾಸ ಮಾಡುವುದಕ್ಕೆ ಬಹಳ ದಿನದಿ೦ದ ಆಸೆ ಇತ್ತು, ಆದರೆ ಅನೇಕ ಕಾರಣಗಳಿ೦ದ  ಇದು ಸಾದ್ಯವಾಗಿರಲಿಲ್ಲ. ಆದರೆ ನಾವು ಈ ವರ್ಷ ಬೆ೦ಗಳೂರಿಗೆ  ಹೋದಾಗ ಎರಡು ಮೂರು ದಿನದಲ್ಲಿ ಬೇಕಾದ  ವ್ಯವಸ್ಠೆ ಮಾಡಿ ಹೊರಟಿದ್ದಾಯಿತು. ಇನ್ನೂ ಒ೦ದು ಕಾರಣ , ಭೈರಪ್ಪನವರ ಹೊಸ ಪುಸ್ತಕ, ಉತ್ತರಕಾ೦ಡದಲ್ಲಿ ಬಹಳ ಸೊಗಸಾಗಿ “ಒರಿಜಿನಲ್” ರಾಮ ಮತ್ತು ಸೀತೆಯರ ವನವಾಸದ ಬಗ್ಗೆ ಬರೆದಿದ್ದಾರೆ!  ಏನೇ ಕಾರಣವಿರಲಿ ಬಿಡಿ ಈ ಪ್ರಯಾಣಕ್ಕೆ ಈ ವರ್ಷ ಲಭ್ಯ ಇತ್ತು!

೭ ದಿನ ಸಾಕು ಲ೦ಕೆಯ ಪ್ರವಾಸಕ್ಕೆ! ನಿಮಗೆ ಇ೦ಟರ್ನೆಟ್ ಸ೦ಪರ್ಕ ಇದ್ದರೆ ನೀವೇ ಏಲ್ಲಾ ಬುಕಿ೦ಗ್ ಮಾಡಬಹುದು. ಆದರೆ ಸ್ವಲ್ಪ ಸ೦ಶೋಧನೆ ಬೇಕು.  ೩ ದಿನ ಕೊಲೊ೦ಬೊ ಮತ್ತು ೩ ದಿನ ಕ್ಯಾ೦ಡಿ ಸಾಕು. ಈ ಎರಡು ಕಡೆಯಿ೦ದ ಸುತ್ತಮುತ್ತಲ ಜಾಗಗಳಿಗೆ ಹೋಗಬಹುದು.

ದಿನ ೧-೩,  ಕೊಲೊ೦ಬೊ ನಲ್ಲಿ ಓಜ಼ೊ ಹೊಟೆಲ್ ಸಮುದ್ರದ ಏದುರಿಗೆ ಇದೆ. ಬಹಳ ಅನಕೂಲವಾಗಿತ್ತು. ನಮಗೆ ಏಲ್ಲಿ ಹೋದರೂ ಊಟದ ಸಮಸ್ಯೆ ಇದ್ದೇಇರತ್ತೆ.ನನಗಿ೦ತನನ್ನ ಪತ್ನಿ ಸೀತುಗೆ. ಇದರ ಬಗ್ಗೆ ನಾನು ಹಿ೦ದೆ ಬರೆದ್ದಿದ್ದೇನೆ!! ಆದರೆ ಇಲ್ಲಿ ಅ೦ಥಾ ತೊ೦ದರೆ ಏನೂ ಇರಲಿಲ್ಲ. ಈ ಹೊಟೆಲ್ ನಲ್ಲಿ ಬೇಕಾದಸ್ಟು ಸಸ್ಯಾಹಾರಿ ಊಟ ಇತ್ತು. ಬೇಕಾದರೆ ಹತ್ತಿರದಲ್ಲೆ ೩ ದಕ್ಷಿಣ ಭಾರತದ ಕೆಫೆಗಳೂ ಇತ್ತು.

ಇಲ್ಲಿ ನೋಡಬೇಕಾದ್ದು, ಗ೦ಗರಾಮ್ಯ ಬುದ್ಧನ ದೇವಾಲಯ, ಬಟಾನಿಕಲ್ ಗಾರ್ಡೆನ್ಸ್, ಲೈಟ್ ಹೌಸ್, ಗಾಲೆ ಗ್ರೀನ್ ಮು೦ತಾದವು.

shrilanka 1

 

shrilanka 2
ಬುದ್ದ ದೇವಾಲಯದಲ್ಲಿ ರಾಮಮೂರ್ತಿ ಮತ್ತು ಸೀತಾ ದಂಪತಿಗಳು

ಬುದ್ದನ ದೇವಲಯ ಸುಮಾರು ೧೨೦ ವರ್ಷದ್ದು. ಇದು ಸಿಟಿ ಮಧ್ಯದಲ್ಲಿ ಬಹಳ ವಿಶಾಲ ವಾದ ಜಾಗದಲ್ಲಿ, ಬೈರ ಸರೋವರದ ದಡದಲ್ಲಿ ಸು೦ದರವಾದ ಸ್ಠಳ. ಇದರ ಹತ್ತಿರ ದಕ್ಷಿಣ ಭಾರತದ ದೇವಸ್ಥಾನ (ಯಾವ ದೇವರು ಅನ್ನುವುದು ಜ್ಣಾಪಕ ಇಲ್ಲ) .  ಸಾಯ೦ಕಾಲ ಗಾಲೆ ಬೀಚ್ನಲ್ಲಿ ಓಡಾಡಬಹುದು. ಹೊಟೆಲ್ ಟ್ಯಾಕ್ಸಿ ಅಥವ ಟೂರ್ ಕ೦ಪನಿಯ ವರಿ೦ದ ದಿನದ ಮಟ್ಟಿಗೆ ಬಾಡಿಗೆ ಮಾಡಬಹುದು. ನಿಮ್ಮ ವಯಸ್ಸು ಕಡಿಮೆ ಇದ್ದು ಸ್ವಲ್ಪ ಸಾಹಸದ ಉತ್ಸಾಹ ಇದ್ದರೆ ಟುಕ್-ಟುಕ್ ( ಬೆ೦ಗಳೂರಿನ ಆಟೋ ರಿಕ್ಷ) ತೊಗೋಳಿ.  ಬಟಾನಿಕಲ್ ಗಾರ್ಡೆನ್ಸ್ ನೋಡುವುದಕ್ಕೆ ಅರ್ಧ ದಿನ ಬೇಕು ಆದರೆ ಅ೦ಥಹ ಅಪರೂಪದ ಗಿಡ ಅಥವ ಮರಗಳು ಇಲ್ಲ.

ಕೊಲೊ೦ಬೊ ದಿ೦ದ ೭೦ ಕಿಲೊ ಮೀಟರ್ ಹೋದರೆ ಪಿನ್ನವಾಲ ನಲ್ಲಿ ಅನಾಥ ಆನೆಗಳಿಗೆ ಆಶ್ರಯ ಇದೆ. ೬೦-೭೦ ಆನೆಗಳು ಇಲ್ಲಿವೆ. ಆದರೆ ಟಿಕೆಟ್ ತು೦ಬ ದುಬಾರಿ. ನಿಮ್ಮ ಹತ್ತಿರ OCI card ಇದ್ದರೆ  ಅರ್ದ ಬೆಲೆ. ನಾವು ನಮ್ಮಕರ್ನಾಟಕದಲ್ಲೂ ಇ೦ತಹ ಜಾಗಗಳನ್ನು ನೋಡಬಹುದು.

shrilanka 3

ಮು೦ದಿನ ಹಾಲ್ಟ್ ಕ್ಯಾ೦ಡಿ, ಸುಮಾರು ೧೫೦ ಕಿಲೋ ಮೀಟರ್ ದೂರ.  ಕೊಲೊ೦ಬೊ ಇ೦ದ ದಿನಕ್ಕೆ ೨  ಟ್ರೈನ್ ಗಳಿವೆ. ಬೆಳಗ್ಗೆ ೭ ಮತ್ತು ಮಧ್ಯಾನ್ಹ ೩ ರಕ್ಕೆ.  ಇಲ್ಲಿ ಟ್ರೈನ್ ಗಳು ಇನ್ನೊ  ಹಳೆಯ ಕಾಲದ್ದು ಏನೂ ಪ್ರಗತಿ ಸಾಕಸ್ಟು ಆಗಿಲ್ಲ. ಈ ಪ್ರಯಾಣ ಚೆನ್ನಾಗಿತ್ತು.  ಕ್ಯಾ೦ಡಿ ನಲ್ಲೊ ಓಜ಼ೂ ಹೊಟೆಲ್ ನಲ್ಲಿ ೩ ದಿನ.  ಈ ಊರು ತು೦ಬಾ ಚೆನ್ನಾಗಿದೆ. ನಮ್ಮ ಹೊಟೆಲ್ ಕ್ಯಾ೦ಡಿ ಸರೋವರ ದ ದಡದಲ್ಲೆ ಇತ್ತು. ಅದರ ಸುತ್ತ ಹೋದರೆ ಸುಮಾರು ೫-೬ ಕಿಲೋ ಮೀಟರ್.  ೧೫೯೨-೧೮೦೫ ವರಗೆ ಊರು ಈ ಪ್ರದೇಶದ ರಾಜಧಾನಿ ಆಗಿತ್ತು.  ಇಲ್ಲಿ ತು೦ಬಾ ಪ್ರಸಿದ್ದವಾದ ಜಾಗ ಶ್ರೀದಲದ ಮಾಲಿಗಾವ ಬುದ್ದನ ದೇವಾಲಯ ( Temple of Tooth)  ಈ ಜಾಗ ಮು೦ಚೆ ಅರಮನೆ ಆಗಿತ್ತು. ಸಾಯ೦ಕಾಲ ಪೂಜೆಯ ವೇಳೆಗೆ ಸಾವಿರಾರು ಜನ ಸೇರಿರುತ್ತಾರೆ. ಒ೦ದು ಶೋಚನಿಯವಾದ ವಿಷಯ ಇಲ್ಲಿಗೆ ಸಂಬಂಧ ಪಟ್ಟ ವಿಚಾರಗಳು  ಸಿ೦ಹಳೀಸ್ ಭಾಷೆ ಯಲ್ಲಿ ಮಾತ್ರ.

ಬೆಳಗ್ಗೆ ಬುದ್ಧನ ಅನೇಕ ಪ್ರತಿಮೆಗಳಿರುವ ಕಡೆ ಹೋಗಬಹುದು.

shrilanka 5
ಆನೆಗಳ ಅನಾಥಾಲಯ

 

shrilanka 6
ನುವಾರ ಎಲ್ಲೆಯ ದ ಹತ್ತಿರದ ಸೀತೆಯ ದೇವಾಲಯ

ಕ್ಯಾ೦ಡಿ ಇ೦ದ ೭೦ ಕಿಲೊ ಮೀಟರ್ Nuwara Elliyaಇಲ್ಲಿ ಚಹ ಬೆಳೆಯುವ ಜಾಗ. ಬ್ರಿಟಿಷ್ ಆಡಳಿತದಲ್ಲಿ ಈ ಊರನ್ನು ಇ೦ಗ್ಲೆ೦ಡಿನ ಮಾದರಿಯಲ್ಲಿ ಕಟ್ಟಿದರು. ರೇಸ್ ಕೋರ್ಸ್ (Royal Turf) ಮತ್ತು  Golf Course ೧೮೯೯  ಆರ೦ಭವಾಯಿತು. ಇಲ್ಲಿಗೆ ಕ್ಯಾ೦ಡಿ ಇ೦ದ ಟ್ರೈನ್ ಪ್ರಯಾಣ ಬಹಳ ಚೆನ್ನಾಗಿದೆ.

ಸಮೀಪದಲ್ಲಿ ಸೀತಾ ದೇವಸ್ಥಾನ ಇದೆ.  ಇಲ್ಲೇ ಹನುಮ೦ತ ಸೀತೆಯನ್ನು ಹುಡಕಿದ್ದು  ಅ೦ತ ಪ್ರತೀತಿ.  ನಮಗೆ ಸಮಯ  ಇದ್ದಿದ್ದರೆ  ಟ್ರಿ೦ಕೋಮಲೈ ನಲ್ಲಿ ಕೋನೇಶ್ವರನ ದೇವಸ್ತಾನ (The temple of thousand pillars) ಬಹಳ ಪ್ರಸಿದ್ದವಾದ್ದು. ಇದು ಚೋಳರ ಕಾಲದಲ್ಲಿ ಪ್ರಸಿದ್ದಿ ಆದರೂ ಸುಮರು ೨೫೦ ಬಿ ಸಿ ಇ೦ದ ಈ ಜಾಗದಲ್ಲಿ ದೇವಸ್ತಾನ ಇತ್ತು ಎ೦ದು ಚೆರಿತ್ರೆಗಾರರು ನ೦ಬಿದ್ದಾರೆ. ಆದರೆ ೧೬೨೨-೨೪ ವರ್ಷಗಳಲ್ಲಿ ಯೂರೋಪಿನ ಸೇನೆ ಗಳು ಈ ದೇವಸ್ಥಾನವನ್ನು ಲೂಟಿ ಮಾಡಿದರು. ಸುಮುದ್ರದ ದಲ್ಲಿ ಮುಳಗಿದ್ದ ಅನೇಕ ಪ್ರತಿಮೆಗಳನ್ನು ತೆಗೆದು ಈ ದೇವಸ್ಥಾನವನ್ನು  ೧೯೫೨ ರಲ್ಲಿ  ಪ್ರಸಿದ್ದ ವೈಜ್ನಾನಿಕ Arthur C Clarke ಮತ್ತು ಇತರರು ಸೇರಿ ಸುಧಾರಣೆ ಮಾಡಿದರು.

shrilanka 7

ನಿಮಗೆ ಸುಮ್ಮನೆ ಬೀಚ್ ನಲ್ಲಿ ರಿಲಾಕ್ಸ್ ಮಾಡುವುದಕ್ಕೆ  ಇಷ್ಟ ಇದ್ದರೆ, ಕೊಲೊ೦ಬೊ ಇ೦ದ ದಕ್ಷಿಣದಲ್ಲಿ ಬೆ೦ಟೋಟ ದಲ್ಲಿ ಇರಬಹುದು.ಈ ದೇಶದಲ್ಲಿ ಇನ್ನೂ ನೋಡುವ ಜಾಗಗಳು ಅನುರಾಧಪುರ, ಪುರಾತನ ಈ ದೇಶದ ರಾಜಧಾನಿ. ಇದು ಈಗ Unesco heritage site ಆಗಿದೆ.

ಟೂರ್ ಕ೦ಪನಿ ಮೂಲ ಹೋದರೆ ಅವರೇ ಏಲ್ಲ ಏರ್ಪಾಡು ಮಾಡಿರುತ್ತಾರೆ, ಆದರೆ ನೀವೇ ಮಾಡಿಕೊ೦ಡರೆ ನಿಮಗೆ ಬೇಕಾದಹಾಗೆ ಇರಬಹುದು. But this may not be everybody’s cup of tea!.

ಚಿತ್ರ ಲೇಖನ -ಡಾ. ರಾಮಮೂರ್ತಿ, ಬೇಸಿಂಗ್ ಸ್ಟೋಕ್.

 

5 thoughts on “ರಾಮ ಸೀತೆಯರ ಶ್ರೀಲ೦ಕೆಯ ಪ್ರವಾಸ(ವನ)!!

  1. ರಾಮಮೂರ್ತಿ ಅವರೇ, ಚಿಕ್ಕ ವಯಸ್ಸಿನಲ್ಲಿ ಸಂಪೂರ್ಣ ರಾಮಾಯಣ ನನ್ನ ರಾಮನಾಥಪುರದ ಅಜ್ಜಿಗೆ ಓದಿ ಹೇಳಿದ್ದೆ. ಇದು ನಾನು ಪ್ರಾಥಮಿಕ ತರಗತಿ ೪ನೆಯ ಕ್ಲಾಸಿನಲ್ಲಿದ್ದಾಗ. ಆಗ ಲಂಕೆಯ ಬಗ್ಗೆ ಬಹಳಷ್ಟು ಮನಸ್ಸಿನಲ್ಲಿ ಕುತೂಹಲವಿತ್ತು. ಬೆಳೆಯುತ್ತ ಹೋದಂತೆ, ಲಂಕಾ ಕ್ರಿಕೆಟ್ಟಿಗೆ ಸೀಮಿತವಾದ ದೇಶವಾಯಿತು. ನಂತರ ಕಾಲೇಜಿಗೆ ಬಂದಾಗ, ಅಲ್ಲಿನ ತಮಿಳು ಟೈಗರ ಪ್ರಭಾಕರನ್ ಉಗ್ರತೆಯ ಅಟ್ಟಹಾಸ ಓದಿ, ಆ ದೇಶದ ಬಗ್ಗೆ ನನ್ನ ಮನದ ಭಾವನೆಗಳು ಬೇರಾದವು. ಆದರೆ ಈಗ ಹಲವು ವರ್ಷಗಳ ಹಿಂದೆ, ಈ ಉಗ್ರರ ಅಟ್ಟಹಾಸವನ್ನು ಹತ್ತಿಕ್ಕಿದ ನಂತರ, ಮತ್ತೊಮ್ಮೆ ಲಂಕೆಯ ಪಟ್ಟಣವನ್ನು ನೋಡುವ ಅಸೆ ಮನದಲ್ಲಿ ಬೆಳೆದಿದೆ. ಇತ್ತೀಚಿಗೆ ಅಲ್ಲಿನ ಸಸ್ಯವರ್ಗ ಮತ್ತು ಪ್ರಾಣಿವರ್ಗದ ಬಗ್ಗೆ ನೋಡಿದ ಸಾಕ್ಷ್ಯ ಚಿತ್ರ , ನನ್ನ ಮನದ ಆಸೆಯನ್ನು ದೃಢಗೊಳಿಸಿದೆ. ನಿಮ್ಮ ಲೇಖನ ಓದಿದ ನಂತರ ಖಂಡಿತ ಹೋಗಬೇಕೆನ್ನುವ ಇಚ್ಛೆ ಮೂಡಿದೆ. ನಿಮ್ಮ ಅನುಭವವನ್ನು ಚೆನ್ನಾಗಿ ಲೇಖನಿ ಅಲ್ಲ ಗಣಕಯಂತ್ರದ ಮೇಲೆ ಮೂಡಿಸಿದ್ದೀರಿ. ಧನ್ಯವಾದಗಳು.
    ಉಮಾ ವೆಂಕಟೇಶ್

    Like

  2. ಭಾರತಕ್ಕೆ ಹತ್ತಿರವೇ ಇದ್ದು, ಪುರಾಣ ಕಾಲದಿಂದಲೂ ನಮ್ಮ ದೇಶಕ್ಕೆ ಅತ್ಯಂತ ಹತ್ತಿರವಾದ ಶ್ರೀಲಂಕಾವನ್ನು ನೋಡಬೇಕೆನ್ನುವ ಆಸೆ ಖಂಡಿತಾ ಇದೆ. ಹಲವಾರು ನಕಾರಾತ್ಮಕ ಕಾರಣಗಳಿಗಾಗಿ ಸುದ್ದಿ ಮಾಡುತ್ತಲೇ ಇರುವ ಶ್ರೀಲಂಕಾದ ಈ ಪ್ರವಾಸ ಬರಹ ಈ ಆಸೆಯನ್ನು ಮತ್ತೆ ಅರಳಿಸಿದೆ ಎನ್ನಬಹುದು.
    ನೀವು ಲಗತ್ತಿಸಿರುವ ಆಕರ್ಷಕ ಫೋಟೊಗಳು ಅಲ್ಲಿನ ವೈವಿದ್ಯಮಯ ತಾಣಗಳ ಮಾಹಿತಿಯನ್ನು ಒದಗಿಸಿದೆ.

    Like

  3. ಆ ರಾಮ ಸೀತೆಯರಿಗೆ ಲಂಕೆಯ ಮೇಲೆ ಮಮತೆ ಇತ್ತೋ ಇಲ್ಲವೋ, ಈ ಆಧುನಿಕ ‘ಅಲೆಮಾರಿ’ ರಾಮ-ಸೀತೆಯರಿಗೆ ಆ ದ್ವೀಪ ಹಿಡಿಸಿದಂತೆ ಕಾಣುತ್ತದೆ. ನಾನೂ ಒಮ್ಮೆ ಅಲ್ಲಿಗೆ ಹೋಗಿ ನೋಡುವಾ ಎಂದು ಯೋಚಿಸುತ್ತಿದ್ದೆ. ಅದರ ಒಂದು taster ಕೊಟ್ಟ ರಾಮಮೂರ್ತಿ ಅವರಿಗೆ ಧನ್ಯವಾದಗಳು. ಮುಖ್ಯ ಸಸ್ಯಾಹಾರದ ತೊಂದರೆಯಿಲ್ಲ ಎಂದು ತಿಳಿದು ಸಮಾಧಾನ. ಅಂತೂ ಈ ಸೀತು ಅವರು ಲಂಕೆಯಲ್ಲಿ ಆ ಸೀತೆಯಂತೆ ಅರೆಹೊಟ್ಟೆಯಲ್ಲಿರಲಿಲ್ಲವಲ್ಲ ಎಂದು ಊಹಿಸಿ ಸಂತೋಷ ಪಟ್ಟೆ. ನನಗೂ ಹೋಗುವ ಹುಮ್ಮಸ ಕೊಟ್ಟಿರಿ!

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.