ಎಲ್ಲರನ್ನೂ ತಲುಪಿದ ‘ದೀಪಾವಳಿ ೨೦೧೬’; KB UK Deepavali 2016 – Something for everyone!

ಕಳೆದ ವಾರ ನಾವು ಹೇಳಿದ್ವು – ಕನ್ನಡ ಬಳಗ ಯು. ಕೆ. ನಡೆಸಿದ ‘ದೀಪಾವಳಿ ೨೦೧೬’ ದಿನದ ಕಾರ್ಯಕ್ರಮಗಳ ವರದಿಗಳನ್ನ ಈ ವಾರ ಪ್ರಕಟಿಸುತ್ತೀವಿ ಅಂತ. ಬರೀ ವರದೀನಾ?! ಛೆ, ಇಲ್ಲ. ಹಿರಿಯರಿಗೆ ನಮನ, ಸುಮಧುರ ಹಳೆ ನೆನಪು, ಒಳನೋಟ, ಕಿರುನೋಟ, ಇಣುಕುನೋಟ, ಮೆಚ್ಚುಗೆ, ಹೀಗಿತ್ತು ಅನ್ನೋ ನಿರೂಪಣೆ, ಹೌದು ಹಾಗಿತ್ತು, ನಿಜ ಎಂಬ ಖಾತ್ರಿ ಮಾತು… ಏನೆಲ್ಲಾ ಇದೆ ಇವತ್ತಿನ ಈ ಪ್ರಕಟಣೆಯಲ್ಲಿ. ಎಷ್ಟೆಲ್ಲಾ ಜನರು ಒಟ್ಟುಗೂಡಿ ತರುತ್ತಿರುವ ಈ ಪ್ರಕಟಣೆ ಕನ್ನಡ ಬಳಗದ ಎಲ್ಲರಿಗೂ ಸೇರಿದ್ದು. ಜೊತೆಗೆ ವಿಡಿಯೋಗಳು ಸಹ ಇವೆ! ತಪ್ಪದೆ ಓದಿ, ನೋಡಿ, ಹಂಚಿಕೊಳ್ಳಿ. – ಸಂ.

ವಿಡಿಯೋ ನೋಡಿ; Please watch this video

ಇದೆಲ್ಲಾ ಇದೆ ಇಲ್ಲಿ!

 • “ಬಲು ವಿಶೇಷ, ಡಾ. ಅಭಯಾಂಬಾ ಆರ್ಯ ಮೂರ್ತಿಯವರ ಸನ್ಮಾನ” ಎಂದಿದ್ದಾರೆ, ಅರವಿಂದ ಕುಲಕರ್ಣಿ
 • ಡಾ.ಅಭಯಾಂಬಾ ಆರ್ಯ ಮೂರ್ತಿ ಕೊಟ್ಟ ಕನ್ನಡ ಬಳಗ ಬ್ಯಾಡ್ಜ್ – ಶ್ರೀವತ್ಸ ದೇಸಾಯಿ ನೆನಪಿಸಿಕೊಂಡಿದ್ದಾರೆ
 • ‘ಮನದಾಳದ ನುಡಿ’ಗಳ ಹಂಚಿಕೊಡಿದ್ದಾರೆ, ಸೌಭಾಗ್ಯ ಜಯಂತ್ ಮೇರ್ವೆ
 • “ಎಂಥಹ ಸುಂದರವಾದ ದೀಪಾವಳಿ ಸಮಾರಂಭ” ಎನ್ನುತ್ತಾರೆ, ಸರಸ್ವತಿ ಮಧು
 • ದೀಪಾವಳಿ ಹಬ್ಬದ ಸಂಭ್ರಮದ ಚಿಕ್ಕ ನಿರೂಪಣೆಯನ್ನ ಕೊಟ್ಟಿದ್ದಾರೆ, ಸವಿತ ಸುರೇಶ್

And…

*Deepavali KB UK 2016 – Fun Kannad-Eng Youth Programme – By Navya Anand
*Deepavali Event KB UK 2016: Something for everyone – By Rajath Satyaprakash     *Reflections on Children/Youth Programme – By Varuna & Surya

thumbnail_img-20161120-wa0006
ಚಿತ್ರ ಕೃಪೆ: ಸುರೇಶ್, ಬ್ರಾಡ್ಫೊರ್ಡ್

 

ವಿಡಿಯೋ ನೋಡಿ; Please watch this video

“ಬಲು ವಿಶೇಷ, ಡಾ. ಅಭಯಾಂಬಾ ಆರ್ಯ ಮೂರ್ತಿಯವರ ಸನ್ಮಾನ” – ಅರವಿಂದ ಕುಲಕರ್ಣಿ

೫ನೇ ನವೆಂಬರ್ ೨೦೧೬ರಂದು ಈ ವರುಷದ ದೀಪಾವಳಿ ಹಬ್ಬವನ್ನು ಕನ್ನಡ ಬಳಗ ಯು. ಕೆ. ಯ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರು ಡಾರ್ಬಿ ಊರಲ್ಲಿ ಬಲು ಯಶಸ್ವಿಯಾಗಿ ನೆರವೇರಿಸಿದರು. ಈ ಸಮಾರಂಭದಲ್ಲಿ ಒಂದು ವಿಶೇಷ ಹೊಸ ಕಾರ್ಯಕ್ರಮವನ್ನು ಮಾಡಲಾಯಿತು. ಡಾ.ಅಭಯಾಂಬಾ ಆರ್ಯ ಮೂರ್ತಿಯವರು ಕನ್ನಡ ಬಳಗ ಯು. ಕೆ. ಗೆ ಅಪಾರ ನಿಸ್ವಾರ್ಥ ಸೇವೆ ಸಲ್ಲಿಸಿದ್ದನ್ನ ಸ್ಮರಿಸಿಕೊಂಡು ಅವರನ್ನು ಗೌರವಿಸಿದ್ದು, ಅವರಿಗೆಂದು ಒಂದು ವಿಶೇಷ ಸಮಾರಂಭ ಮಾಡಿದ್ದು ಶ್ಲಾಘನೀಯ. ಈ ಹೊಸ ಕಾರ್ಯಕ್ರಮವನ್ನು ಅಂದು ನೆರೆದಿದ್ದ ಎಲ್ಲಾ ಕನ್ನಡಿಗರು ಹೆಮ್ಮೆಯಿಂದ ವೀಕ್ಷಿಸಿ ಆನಂದದಿಂದ ಪಾಲ್ಗೊಂಡರು.

ಡಾ. ಅಭಯಾಂಬಾ ಆರ್ಯ ಮೂರ್ತಿಯವರು ಮೂಲತಃ ಕರ್ನಾಟಕದ ಚೆನ್ನಪಟ್ಟಣ ಎಂಬ ಊರಿನವರು. ತಮ್ಮ ವ್ಯೆದ್ಯಕೀಯ ಪದವಿಯನ್ನು ಮೈಸೂರಲ್ಲಿ ಮುಗಿಸಿಕೊಂಡು ೧೯೬೦ರಲ್ಲಿ ಇಂಗ್ಲೆಂಡಿಗೆ ಬಂದರು. ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಹಲವಾರು ವರುಷ ಆಸ್ಪತ್ರೆಗಳಲ್ಲಿ, ಜನರಲ್ ಪ್ರಾಕ್ಟಿಸ್ ಗಳಲ್ಲಿ ಕಳೆದು, ಕೆಲಸ ಮಾಡಿದರು. ಕೊನೆಗೆ ೧೯೭೮ರಲ್ಲಿ ಮಕ್ಕಳ ಆರೋಗ್ಯದ ವೃತ್ತಿಯನ್ನು ಕೈಗೆತ್ತಿಕೊಂಡು ನೊಟಿಂಗ್ಹ್ಯಾಮ್ ನಲ್ಲಿ ಮುಂದುವರೆದರು. ಈಗ ಅವರು ನಿವೃತ್ತರಾಗಿ ನಮ್ಮ ಕನ್ನಡ ಬಳಗದ ಸೇವೆ ಹಾಗೂ ಧರ್ಮದಾಯಕ (ಚಾರಿಟಬಲ್) ಸಂಸ್ಥೆಗಳಿಗೆ ಸಹಾಯ ಸಲ್ಲಿಸುತ್ತಿದ್ದಾರೆ.

ಅವರು ಕನ್ನಡ ಬಳಗದ ಸ್ಥಾಪನೆಯಿಂದ ಹಿಡಿದು ಇಲ್ಲಿಯವರಗೆ ಪ್ರತಿಯೊಂದು ಬಳಗದ ಕಾರ್ಯಕ್ರಮಗಳಿಗೆ ಕನ್ನಡದ ಅಭಿಮಾನ, ಉತ್ಸಾಹ, ಹೆಮ್ಮೆಗಳಿಂದ ಬಂದು ಚಿಕ್ಕ ಮಕ್ಕಳು, ಹಿರಿಯರು, ಎಲ್ಲಾ ಸದಸ್ಯರೊಂದಿಗೆ ಬೆರೆತು, ನಕ್ಕು, ನಲಿದದ್ದನ್ನ ನಾನು ಕಣ್ಣಾರೆ ಕಂಡಿರುವೆ.

ಡಾ. ಅಭಯಾಂಬಾ ಅವರು ಸದಾ ಹಿನ್ನಲೆಯಲ್ಲೇ ಇದ್ದುಕೊಂಡು ಹಲವಾರು ಮುಖ್ಯ ಕರ್ತವ್ಯಗಳಾದ ಬಳಗದ ಕಾರ್ಯದರ್ಶಿ, ಕನ್ನಡ ಕೈಪಿಡಿಯ ಸಹಾಯ ಕಾರ್ಯಕರ್ತರಾಗಿ ನಿಸ್ವಾರ್ಥತೆಯಿಂದ ದುಡಿದ್ದಾರೆ. ತಮಗೆ ಹೆಸರು, ಪ್ರಶಂಸೆ, ಹೊಗಳಿಕೆ ಬರಲಿ ಎಂದು ಯಾವತ್ತೂ ಬಯಸಲಿಲ್ಲ. ಈ ಎಲ್ಲಾ ವಿಷಯಗಳು ನಮ್ಮ ಕನ್ನಡ ಬಳಗದ ಸದಸ್ಯರಿಗೆಲ್ಲಾ ಗೊತ್ತಿರಲಿ ಎಂದು ಅವರ ಬಗ್ಗೆ ಈ ವರದಿಯಲ್ಲಿ ತಿಳಿಸಲು ನನಗೆ ಅಪಾರ ಹೆಮ್ಮೆ ಎನಿಸುತ್ತದೆ.

 – ಅರವಿಂದ ಕುಲಕರ್ಣಿ

ಡಾ. ಅಭಯಾಂಬಾ ಆರ್ಯ ಮೂರ್ತಿ ಕೊಟ್ಟ ಬ್ಯಾಡ್ಜ್ – ಶ್ರೀವತ್ಸ ದೇಸಾಯಿ

ಏನಿದು ಈ ಪುಟ್ಟ ಕನ್ನಡ ಬಳಗದ ಬ್ಯಾಡ್ಜ್ ? ಇದು ಅಭಯಾಂಬಾ ಆರ್ಯ ಮೂರ್ತಿ ಅವರು ಕನ್ನಡ ಬಳಗದ ಮೊದಲ ೧೫ ಆಜೀವ ಸದಸ್ಯರಿಗೆ ಕೊಟ್ಟದ್ದು. ೫ ಪೆನ್ಸ್ ನಾಣ್ಯಕ್ಕಿಂತಲೂ ಚಿಕ್ಕದಾದ ಬಹು ಸುಂದರವಾದ ಬಟನ್ ಬ್ಯಾಡ್ಜ್ ಅದು.fullsizerender ನಾನು ಅದನ್ನು ಜತನದಿಂದ ಕಾಪಾಡಿಕೊಂಡು ಹೆಮ್ಮೆಯಿಂದ ಇಟ್ಟುಕೊಂಡಿದ್ದೀನಿ (ಚಿತ್ರದಲ್ಲಿರುವುದು ವಾಣಿಯದು, ಕೆಂಪು). ಆಗ 1980ರ ದಶಕ. ಆ ಕಾಲದಲ್ಲಿ ಪುಟ್ಟ ಗಿಡವಾಗಿ ಬೆಳೆಯುತ್ತಿದ್ದ ಕನ್ನಡ ಬಳಗದಲ್ಲಿ ಕೆಲವೇ ಕೆಲವು ಸದಸ್ಯರು. ಯಾವುದೇ ಕಾರ್ಯಕ್ರಮ ಮಾಡುವಾಗಲೂ ಎಲ್ಲರೂ ತಮ್ಮ ತಮ್ಮ ಕೈಯಿಂದಲೇ ಹಣ, ಸೇವೆ, ಹೊಂದಾಣಿಕೆ ಮಾಡಬೇಕಿತ್ತು. ಪತ್ರ ವ್ಯವಹಾರ, ನೋಂದಣಿ, ಸ್ವಯಂಸೇವಕರ ಬಿಲ್ಲೆ – ಇವುಗಳಿಂದ ಹಿಡಿದು ಅಡಿಗೆಯವರೆಗೆ ಎಲ್ಲಕ್ಕೂ ನಾವೇ ನಾವು ಕೆಲವರು, ನಮ್ಮದೇ ಎಲ್ಲಾ ಕೆಲಸ. ಠೇವಣಿ ಹಣದ ವ್ಯವಸ್ಥೆ ಕೂಡ ಆಗ ಇದ್ದಿಲ್ಲ. ಇವೆಲ್ಲ ಸಮಯದಲ್ಲೂ, ಪ್ರತಿಯೊಂದು ವಿಭಾಗದಲ್ಲಿ ನಿಸ್ಪೃಹತೆಯಿಂದ ಮೈಮುರಿದು ದುಡಿದವರು ನಮ್ಮ ಅಭಯಾಂಬಾ ಅವರು.

ಎಲೆಯ ಮರೆಯ ಕಾಯಿಯಂತೆ ( ಹಣ್ಣಿನಂತೆ ಕೂಡ) ಕರ್ಮಣ್ಯೇ ವಾಧಿಕಾರಸ್ತೇ ಅನ್ನುತ್ತಿದ್ದ ಅಪರೂಪದ ಆ ವರ್ಗ ಅವರದು! ಈ ವಾರ ನಾನು ಅವರಿಗೆ ಫೋನಾಯಿಸಿ ನನ್ನ ಸಂತೋಷವನ್ನ ತಿಳಿಸಿದಾಗ ಸನ್ಮಾನ ಮಾಡಿಸಿಕೊಂಡಾಗಿನಿಂದ ತಾವೆಷ್ಟು  uncomfortable ಆಗಿದ್ದೀನಿ ಎಂದು ಅವರು ಹೇಳಿದರು. ಎಂಥಾ ಸರಳ ಜೀವಿ!

ಶ್ರೀವತ್ಸ ದೇಸಾಯಿ

 

ವಿಡಿಯೋ ನೋಡಿ; Please watch this video

ಮನದಾಳದ ನುಡಿಗಳ ಹಂಚಿಕೊಡಿದ್ದಾರೆ, ಸೌಭಾಗ್ಯ ಜಯಂತ್ ಮೇರ್ವೆ

ವಿದೇಶದಲ್ಲಿದ್ದು

ವಿವಿಧ ವೃತ್ತಿಯಲ್ಲಿದ್ದು

ವಿಧ ವಿಧ  ಆಸಕ್ತಿಯಿದ್ದು

ವಿಪರೀತ ಒತ್ತಡಗಳಿದ್ದು

ವಿಧ ವಿಧ ಬಾಷೆಯ ಅರಿವು ಅಂತರವಿದ್ದು

ವಿಚಾರ ವಿನಿಮಯಕೆ

ವಿಷಯ ಮಂಡಿಸಲಿಕೆ

ನನ್ನ ಅನಿಸಿಕೆಗಳು

ನಾನು ನನ್ನ ಮಗ ಡಾ|| ಆಶೀರ್ವಾದ್ ಮೇರ್ವೆ ಮನೆಗೆ ಮೊಮ್ಮಗಳ ಜೊತೆ ರಜೆ ಕಳೆಯಲು ಬಂದಿದ್ದೆ. ಈ ಸಂದರ್ಭದಲ್ಲಿ ನವೆಂಬರ್ 5, 2016 ರಂದು ನಡೆದ ಯು.ಕೆ ಕನ್ನಡ ಬಳಗ ಸಮಾರಂಭ ನೋಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.

 ಸಮಾರಂಭವನ್ನ ಡಾರ್ಬಿ ರಿವರ್ ಸೈಡ್ ಸಭಾಂಗಣದಲ್ಲಿ ಏರ್ಪಡಿಸಿದ್ದರು. ಸಭಾಂಗಣ ಸುಂದರವಾಗಿತ್ತು, ತುಂಬಿ ತುಳುಕುತ್ತಿತ್ತು.  ಮಕ್ಕಳು, ಮಹಿಳೆಯರು ಅಲಂಕಾರ ಭೂಷಿತರಾಗಿದ್ದರು. ಎಲ್ಲಾ ವಯೋಮಾನದವರಲ್ಲಿನ ಉತ್ಸಾಹ ನೋಡಿ ಆನಂದವಾಯ್ತು.  ಬಿಸಿ ಬಿಸಿ ಕಾಫಿಯೊಂದಿಗೆ ಆಹ್ವಾನವಿತ್ತರು. ಲಕ್ಷ್ಮೀ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಸ್ವಚ್ಛ ಕನ್ನಡದ ನಿರೂಪಣೆಯೊಂದಿಗೆ ಮುಂದುವರೆದು, ವೇದಿಕೆ ಅಲಂಕರಿಸಿದ ಎಲ್ಲರ ಭಾಷಣಗಳು ಚಿಕ್ಕದಾಗಿ ಚೊಕ್ಕವಾಗಿತ್ತು. ನಂತರ ಮಕ್ಕಳ ಕಾರ್ಯಕ್ರಮ ಸೊಗಸಾಗಿತ್ತೆಂದು ತಿಳಿದುಬಂತು. ನಾನು ಅದೇ ಸಮಯದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದ ಕವನ ವಾಚನ ಕೇಳಲು ಹೋಗಿದ್ದೆ.  ಕವನಗಳು ಚೆನ್ನಾಗಿ ಮೂಡಿಬಂದಿತ್ತು.  ಅಲ್ಲಿ ನಮ್ಮ ನಾಡಿನ ಶ್ರೇಷ್ಠ ಕವಿ ಜಿ.ಎಸ್.ಶಿವರುದ್ರಪ್ಪ ಅವರ ಮಗ ಡಾ|| ಶಿವಪ್ರಸಾದ್ ಅವರನ್ನು ಭೇಟಿಯಾಗಿದ್ದು ನನ್ನ ಪಾಲಿಗೆ ವಿಶೇಷವಾಯ್ತು.  ಸಾಹಿತ್ಯ ಕಾರ್ಯಕ್ರಮದ ಮುಖ್ಯ ಅತಿಥಿ ನೀಡಿದ ಟಿಪ್ಪಣಿಗಳು ಕವಿಗಳಿಗೆ ಸಹಾಯವಾಗುವಂತಿತ್ತು.

 ನಂತರ ರುಚಿಯಾದ ಊಟದಿಂದ ಹೊಟ್ಟೆ ತುಂಬಿ ಹೋಯ್ತು.  ಹಾಡು ನೃತ್ಯಗಳು ಚೆನ್ನಾಗಿದ್ದು, ಹಳ್ಳಿಯ ಜೀವನದ ಬಗ್ಗೆ ಅಭಿನಯದಲ್ಲಿ ತುಂಬಾ ನೈಜತೆಯಿತ್ತು. “ಕರ್ನಾಟಕ ದರ್ಶನ”, ಅದರಲ್ಲೂ ದಸರಾ ಮೆರವಣಿಗೆ ಬಹಳ ಸುಂದರವಾಗಿ ಮೂಡಿ ಬಂತು.

 ಸೃಜನ್ ಲೋಕೇಶ್ ಆಗಮನದಿಂದ ಸಭೆ ನಗೆ ಕಡಲಲ್ಲಿ ತೇಲಿತು. ಬಿ.ಆರ್. ಛಾಯ ಅವರ ಸುಶ್ರಾವ್ಯ ಕಂಠದ ಕನ್ನಡ ಹಾಡುಗಳು ಕಿವಿಗೆ ಇಂಪಾಗಿತ್ತು. ಇದೆಲ್ಲದರ ಹಿಂದಿರುವ ಎಲ್ಲರ ಕಷ್ಠ ನಿಷ್ಠೆಗಳ ಉತ್ತರವಾಗಿ ಕಾರ್ಯಕ್ರಮ ಸಂಪೂರ್ಣ ಸಂಪನ್ನವಾಗಿತ್ತು.

Hats off to you!      ಧನ್ಯವಾದಗಳೊಂದಿಗೆ,  ಸೌಭಾಗ್ಯ ಜಯಂತ್ ಮೇರ್ವೆ

Deepavali 2016: Fun Kannad-Eng Youth Programme  -Navya Anand

Having been elected as the Youth Representative on the Executive Committee of Kannada Balaga UK in April this year, I worked over the months towards my first event at the Deepavali function in Derby.

 With the help of 5 wonderful friends (who came up with ideas before the event, and acted as guides for the children during it), I was able to aid children aged 7 – 14 in developing their Kannada skills, as well as encouraging a participatory atmosphere. We played pictionary and charades with simple Kannada words (nouns and verbs) — the children were allowed to make guesses in English, but the final answer had to be in Kannada.

 I had also prepared the first 5 stories from Vishnu’s Dashavatara. The children were split into 5 groups, and were given a story each. The stories were in English, with 5 blank spaces each; the children filled in these blanks with the corresponding Kannada words.

 We also made tomato masala and pani puri together, and each child received a goodie bag with traditional Indian sweets as well as 5 conversation cards, with easy conversational Kannada phrases to use with their families.

 I was pleasantly surprised by the large number of children who participated in my event; their knowledge of Kannada vocabulary was much greater than I expected, and also greater than they believed! This shows that, by incorporating just a little Kannada into our daily family lives, we can pass on the language to future generations.

 I will run a similar event at the Ugadi function in 2017, targeted for children aged 10 and above; I hope that many of them are able to attend and contribute. It will consist of different games, and with the remaining 4 Dashavatara stories — I hope that the children who attend both events will feel a sense of continuity, and engage better with the material and with the youth programme as a result.

 I must end with a note of thanks to Harsha, Pramath, Rajath, Pranathi, and Vidyarani, who helped me run the event, and without whom it would not have been the success that it was 🙂

 – Navya Anand

Deepavali Event KB UK 2016: Something for everyone – Rajath Satyaprakash

The ‘festival of lights’ illuminates our day at a time when natural light is rather diminutive in the UK. This is why it is so appropriate that Kannadigas can come together during such a time to celebrate the occasion together. This year, as always, the joyous atmosphere in Derby made me feel great to be one among the crowd. It was a pleasure to be a part of a range of cultural and youth events.

The highlight of the morning was the “East Meets West” literature session, which was chaired by an accomplished local poet, Cathy Grindgod. I always believed that poetry is a gift that one is born with. But, to hear Cathy speak about it as an art form that one can develop and perhaps succeed in was inspiring. Maybe I should pick up a book and read more often! Furthermore, I was impressed by how easily Cathy related to the context of the poems that were recited during the session, especially those that were so deep rooted to our culture. It reaffirmed the old cliché that art knows no language or nation, and that we can all appreciate one’s creativity and ideas if we have an open mind. This message is so relevant in today’s social atmosphere, when many of us fear being confronted with the words written in one of the poems discussed during the session (a poem which described the experiences of an immigrant moving to Britain from India): “Who are you? Who called you?”

Indeed, it was a very busy afternoon as we marshaled youngsters into the youth program, rather lazily as we were spoiled by Kannada Balaga with a heavy (but delicious) lunch. Navya, the chair of the youth committee, did a great job in organizing the activities, which included standard games like Charades and Pictionary, but the contexts and words being in Kannada. The responsibility of guiding people who were alien to Kannada was passed on to those of us who were slightly competent. I do hope this continues in the future, as it allows everyone to participate. The session also included reading and completing unwritten words of a mythological Indian story. It was not like these stories garnered as much interest and attention amongst kids as might be witnessed inside the cinema during the screening of Harry Potter. But, it was still encouraging to see them willing to participate. Of course, some were highly enthusiastic, which gives me hope! We concluded the session with a round of Pani Puri, which was prepared by three of the older youths (including myself) in front of the whole group. So, there was something in it for everyone: Language, mythology and most importantly (in my opinion) food.

-Rajath Satyaprakash

Reflections…

They were fun. We played lots of games, had interesting food. The balloon guy made us balloons, I played with them. I liked the programmes because people were enthusiastic. They didn’t sob when they didn’t get something right. I liked the Hindu religion mythology stories, they were different. The three games ‘guessing words for incarnation of Vishnu, Pictionary, charades’ were offered to us; but instead, we could also open an envelope and mime out the word given in the envelope. – Varuna
The youth programme was fun. It was enjoyable. I met new friends, quite different too. I learnt some more mythology about Hindu gods and goddesses. We had loads of fun, more than I thought. Although I loved all the food there it was far too much khaara, so I couldn’t eat much. Yeah, I think I will go for the next event too. – Surya

ವಿಡಿಯೋ ನೋಡಿ; Please watch this video

ಎಂಥಹ ಸುಂದರವಾದ ದೀಪಾವಳಿ ಸಮಾರಂಭ ಎನ್ನುತ್ತಾರೆ, ಸರಸ್ವತಿ ಮಧು

“ನಮಸ್ಕಾರ ಬನ್ನಿ “, ಬಣ್ಣದ ರೇಷ್ಮೆ ಲಂಗ ಉಟ್ಟ ೧೦ ವರ್ಷ ವಯಸ್ಸಿನ ಹುಡುಗಿಯೊಬ್ಬಳು ನಮ್ಮನ್ನು ಬರಮಾಡಿಕೊಂಡಳು. ಎಂಥಹ ಸುಂದರವಾದ ಸ್ವಾಗತ ! ಸಂಧರ್ಭ: ನವೆಂಬರ್ ೫ ನೇ ತಾರೀಖು ಡಾರ್ಬಿಯಲ್ಲಿ ನಡೆದ ಕನ್ನಡ ಬಳಗ ದೀಪಾವಳಿ ಸಮಾರಂಭ. ದೊಡ್ಡ ಹಾಲಿನ ತುಂಬ ಬಣ್ಣ ಬಣ್ಣದ ಸೀರೆ ಉಟ್ಟು ಝಗಮಗಿಸುವ ಒಡವೆ ತೊಟ್ಟ ಲಲನಾಮಣಿಗಳು ಸಡಗರದಿಂದ ಓಡಾಡುತ್ತಿದ್ದುದನ್ನು ನೋಡಿ ಮದುವೆಮನೆಗೆ ಹೋದಂತೆ ಆಯಿತು. ಮಹಾಗಣಪತಿ ಮತ್ತು ಲಕ್ಷ್ಮಿಯ ಪೂಜೆ, ಮಂಗಳಾರತಿಯೊಂದಿಗೆ ಕಾರ್ಯಕ್ರಮದ ಆರಂಭ.

 ಅಂದವಾಗಿ ಅಲಂಕರಿಸಿಕೊಂಡ ಪುಟ್ಟ ಮಕ್ಕಳ ಮುಗ್ಧ  ಹಾಡು  ಮತ್ತು  ನೃತ್ಯಗಳು ನಮ್ಮೆಲ್ಲರನ್ನೂ ಮುದಗೊಳಿಸಿತು .ಆ ಮಕ್ಕಳು ಹಾಡಿದ ‘ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು’ ಹಾಡನ್ನು ಕೇಳಿ ಆ ದಿನದ ಮುಖ್ಯ ಕಲಾವಿದೆ ಛಾಯಾರವರಿಗೆ ಅವರ ಚೊಚ್ಚಲ ಕನ್ನಡ ಸಿನಿಮಾ ಗೀತೆಯ ನೆನಪು ಮೂಡಿಸಿರಬೇಕು. ಇಂಟರ್ನ್ಯಾಷನಲ್ ಯೋಗ ಚಾಂಪಿಯನ್ ಈಶ್ವರ್ ಶರ್ಮನ ಯೋಗ ಪ್ರದರ್ಶನವನ್ನು ನೋಡಲು ತುಂಬಾ ಉತ್ಸುಕತೆ ಇತ್ತು. ಆದರೆ ಸ್ಟೇಜ್ ತುಂಬ ತಗ್ಗು ಇದ್ದಿದ್ದರಿಂದ ಸರಿಯಾಗಿ ಕಾಣಲಿಲ್ಲ.

 ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕೊಡುವ  ಪ್ರಸಾದ ಅಕ್ಕಿ ಕಡಲೆಬೇಳೆ ಪಾಯಸವನ್ನ ಅಲ್ಲಿಗೆ ಹೋದವರು ಯಾರೂ ಮರೆಯುವುದಿಲ್ಲ. ಅದೇ ರೀತಿ ಡಾರ್ಬಿಯಲ್ಲಿ ಮಧ್ಯಾನ್ಹ ಬಿಸಿಬೇಳೆ ಭಾತ್, ಬೆಂಡೆಕಾಯಿ ಹುಳಿ, ಮೊಸರನ್ನ ಇತ್ಯಾದಿ ಮತ್ತು ಕಡಲೆಬೇಳೆ ಪಾಯಸದ ರಸ ಕವಳ ! ಸೂರ್ಯನಾರಾಯಣರ ಕೃಪೆಯಿಂದ.

 ರಂಗದ ಮೇಲೆ ಒಂದು ಹಳ್ಳಿಯನ್ನೇ ಪುನರ್ರಚಿಸಿ ಹಳ್ಳಿಯ ಜೀವನ ವ್ಯವಿಧ್ಯವನ್ನು ತೋರಿಸಿದ ಡಾರ್ಬಿ ತಂಡದವರು ನಮ್ಮನ್ನು ಮತ್ತೊಂದು ಲೋಕಕ್ಕೆ ಒಯ್ದರು. ರಂಗದ ಮೇಲೆ ಗುಡಿಸಲು, ಎತ್ತಿನ ಗಾಡಿ, ಹಸುಗಳು, ಹೊಲ ಉಳೋದು -ಇಂಥಹುದನ್ನೆಲ್ಲ ತೋರಿಸಿ ನೃತ್ಯ ರೂಪಕವನ್ನು ಹೀಗೂ ಮಾಡಬಹುದೇ? ಎಂದು ನಮ್ಮನ್ನು ಸ್ಪೂರ್ತಿಸಿದರು.  ‘ಕರ್ನಾಟಕ ವೈಭವ’ ದರ್ಶನದಲ್ಲಿ ಬೆಂಗಳೂರಿನ ಕರಗ, ಮಂಗಳೂರಿನ ಮೀನುಗಾರರ ನೃತ್ಯ, ಕೊಡವರ ಧೀಮಂತತೆ, ಚಿತ್ರದುರ್ಗದ ಓಬವ್ವನ ಕಥೆ, ಕಿತ್ತೂರಿನ ಚೆನ್ನಮ್ಮನ ಕಥೆ, ಬೇಲೂರು ಹಳೇಬೀಡಿನ ಶಿಲಾಬಾಲಿಕಾ ನೃತ್ಯ, ಮಹಿಷಾಸುರಮರ್ದಿನಿಯ ಕಥೆ ಇತ್ಯಾದಿ ಇತ್ಯಾದಿ ತೋರಿಸಿ ನಮ್ಮ ನಾಡಿನ ಬಹುಮುಖ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದರು.

 ಕಾಫಿ, ಸಮೋಸ, ಭೇಲ್ ಪುರಿಯ ಮುಂಚೆ, ‘ಮಜಾ ಟಾಕಿಸ್’ ಖ್ಯಾತಿಯ ಸೃಜನ್ ಲೋಕೇಶ್ ತಮ್ಮ ಚುರುಕುತನ, ವಿನಮ್ರತೆ, ಹಾಸ್ಯ ಪ್ರಜ್ಞೆ ಒಳಗೊಂಡ ಪ್ರಶ್ನೆ ಮತ್ತು ಉತ್ತರ  ಸಂವಾದ ಕಾರ್ಯಕ್ರಮವನ್ನು ಕೊಟ್ಟು ರಂಜಿಸಿದರು. ಅವರ ಜೀವನದ ಏಳು ಬೀಳುಗಳನ್ನು ಹಿಂಜರಿಕೆ ಇಲ್ಲದೆ ನಮ್ಮ ಜೊತೆ ಹಂಚಿಕೊಂಡರು .

ಡಾರ್ಬಿ ತಂಡದವರು  ‘ಮೈಸೂರು ದಸರಾ’ ಮೆರವಣಿಗೆಯನ್ನು ರಂಗದ ಮೇಲೆ ಜೀವತಳಿಸಿದಾಗ ‘ನ ಭೂತೋ ನ ಭವಿಷ್ಯತಿ’ ಎಂಬ ಉಧ್ಗಾರ ಪ್ರೇಕ್ಷಕರಿಂದ  ಬಂತು. ೬೪ ಜನ ಮತ್ತು ಒಂದು ಅಂಬಾರಿ ಆನೆ ರಂಗದ ಮೇಲೆ ಬಂದಾಗ ಹಿಂದೆ ಚೇಷ್ಟೆ ಮಾಡುತಿದ್ದ ಮಕ್ಕಳು, ಹರಟೆ ಹೊಡೆಯುತಿದ್ದ ದೊಡ್ಡವರು ಎಲ್ಲರೂ ಬೆರಗಾಗಿ ದಂಗಾದರು…

 ಗಾನ ಕೋಗಿಲೆ ಛಾಯಾ ತಮ್ಮ ಸುಶ್ರಾವ್ಯ ಗಾಯನದಿಂದ ಎರಡು ಘಂಟೆಗೂ ಹೆಚ್ಚು ಕಾಲ ರಂಜಿಸಿದರು. ಅವರು  ‘ಯಾರಿವನು ಈ ಮನ್ಮಥನು’ ಹಾಡಿದಾಗ ಹಾಲಿನಲ್ಲಿ ಇದ್ದ  ಎಲ್ಲಾ ಮನ್ಮಥರೂ ಮೇಲೆದ್ದು ಕ್ಯಾಟ್ ವಾಕ್ ಮಾಡಿದ್ದೂ ಮಾಡಿದ್ದೆ!!!

ಗಗನವು ಎಲ್ಲೋ ಭೂಮಿಯು ಎಲ್ಲೋ…, ದೂರದಿಂದ ಬಂದಂಥ ಸುಂದರಾಂಗ ಜಾಣ…. ಈ ರೀತಿಯ ಜನಪ್ರಿಯ ಹಾಡುಗಳನ್ನು ಕೇಳ್ತಾ ಕೇಳ್ತಾ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಮಧ್ಯೆ ಮಧ್ಯೆ ಪದ್ಮಪಾಣಿಯವರಿಂದ ಹಾಸ್ಯದ ತುಣಕುಗಳು….

 ಬಿ. ಆರ್. ಛಾಯಾ ಕಡೆಯಲ್ಲಿ ಟೈಟಾನಿಕ್ ಇಂಗ್ಲಿಷ್ ಹಾಡನ್ನ ಹಾಡಿದಾಗ, ಇಂಗ್ಲೆಂಡ್ ನಲ್ಲೆ ಹುಟ್ಟಿ ಬೆಳೆದ ಪ್ರಶಾಂತ್ ಸಾಯೀಶ್ವರ್ ‘ನಿನ್ನಿಂದಲೇ ನಿನ್ನಿಂದಲೇ’ ಕನ್ನಡ ಹಾಡನ್ನು ಮುಂಚೆ ಹಾಡಿದ್ದು ಜ್ಞಾಪಕಕ್ಕೆ ಬಂದು, ಕಲೆಗೆ ಗಡಿಯೆಲ್ಲಿದೆ ಎಂತನಿಸಿತು.

 – ಸರಸ್ವತಿ  ಮಧು (ಸಾಥ್ ಕೊಟ್ಟದ್ದು ವಿಶ್ವನಾಥ್ ಮಂದಗೆರೆ)

thumbnail_20161105_210525
ಚಿತ್ರ: ಜಿ. ಶಿವ ಪ್ರಸಾದ್ ಕಡೆಯವರದ್ದು

ದೀಪಾವಳಿ ಹಬ್ಬದ ಸಂಭ್ರಮದ ಚಿಕ್ಕ ನಿರೂಪಣೆಯನ್ನ ಕೊಟ್ಟಿದ್ದಾರೆ, ಸವಿತ ಸುರೇಶ್

ಕನ್ನಡ ಬಳಗ ಯು.ಕೆ  2016 ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಡಾರ್ಬಿಯಲ್ಲಿ ಆಚರಿಸಲಾಯಿತು. ಬೆಳಿಗ್ಗೆ  11.00 ಗಂಟೆಗೆ ಕಾರ್ಯಕ್ರಮವನ್ನ ಶ್ರೀ ಮಹಾಲಕ್ಷ್ಮಿ ಪೂಜೆಯ ಮೂಲಕ ಪ್ರಾರಂಭಿಸಿ ಉದ್ಘಾಟಿಸಿಲಾಯಿತು. ನಂತರ ಸಮೂಹ ಗಾಯನ, ನಾಡ ಗೀತೆ, ಡಾ|. ಅಭಯಾಂಬ ಮೂರ್ತಿಯವರನ್ನ ಸನ್ಮಾನಿಸಲಾಯಿತು.

ತದನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನರಂಜನೆಯ ನೃತ್ಯ, ಹಾಡು ಮತ್ತು ಸಾಮೂಹಿಕ ನೃತ್ಯ ಮೂಡಿ ಬಂದವು. ಅದೇ ಸಮಯದಲ್ಲಿ KSSVV ಕಾರ್ಯಕ್ರಮ ಬ್ರಿಡ್ಜ್ ಹೌಸ್ ನಲ್ಲಿ  ಸ್ಥಳೀಯ ಕವಿಯಿತ್ರಿ ಲಾರೆಟ್  ಕ್ಯಾಥಿ ಗ್ರಿನ್ಡ್ ರೊಡ್ ಅವರ ನೇತೃತ್ವದಲ್ಲಿ ನಡೆಯಿತು.

ನಂತರ ಶಿವಳ್ಳಿ  ಅವರಿಂದ ಕರ್ನಾಟಕ ಶೈಲಿಯ ಭೋಜನ. ಆಮೇಲೆ ಮೂಡಿ ಬಂತು ಹಿರಿಯರು ಕೊಟ್ಟ ಮನರಂಜನಾ ಕಾರ್ಯಕ್ರಮ. ಸ್ಥಳೀಯ ಪ್ರತಿಭೆಗಳ ಮಿಂಚು. ಮುಖ್ಯವಾಗಿ ಕರ್ನಾಟಕ ದರ್ಶನ, ಅಲ್ಲಿ -ಇಲ್ಲಿ, ಚಿತ್ರಗೀತೆ, ಎಲ್ಲಕ್ಕೂ ಹೆಚ್ಚಾಗಿ ಕಣ್ಮನ ಸೆಳೆದ “ಮೈಸೂರು ದಸರಾ” ಗಳು ಡಾರ್ಬಿ ಕನ್ನಡಿಗರ ತಂಡದಿಂದ ಮೂಡಿ ಬಂದಿತು.

COLOURS ಕನ್ನಡ ದೂರದರ್ಶನ ವಾಹಿನಿಯ ಹೆಸರಾಂತ “ಮಜಾ ಟಾಕೀಸ್” ಕಾರ್ಯಕ್ರಮದ ಸೃಜನ್ ಲೋಕೇಶ್ ಅವರಿಂದ ನಮ್ಮೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವನ್ನು ಗಿರಿಧರ್ ನಡೆಸಿದರು. ನಿರ್ದೇಶಕ ತೇಜಸ್ವಿ ಸಹ ಪಾಲ್ಗೊಂಡರು.

 ಅದೇ ಸಮಯದಲ್ಲಿ ಮಕ್ಕಳಿಗೆ ಮನರಂಜನೆ, ಯುವ ಪೀಳಿಗೆಗೆ “Meet and Greet” ಕಾರ್ಯಕ್ರಮಗಳನ್ನ ಮಹಡಿ ಮೇಲಿನ ಎರಡು ಕೊಠಡಿಗಳಲ್ಲಿ ಏರ್ಪಡಿಸಲಾಗಿತ್ತು.  ಕಾಫಿ ವಿರಾಮದ ನಂತರ ಮೂಡಿ ಬಂದ ಕಾರ್ಯಕ್ರಮ ಶ್ರೀ. ಪದ್ಮಪಾಣಿ ಅವರ ನಿರೂಪಣೆಯ, ಕರ್ನಾಟಕದ “ಗಾನ ಕೋಗಿಲೆ, ಶ್ರೀಮತಿ ಬಿ.ಆರ್.ಛಾಯಾ ಅವರ ಸುಮಧುರ ಚಿತ್ರ ಗೀತೆ, ಭಾವಗೀತೆ, ಜನಪದಗೀತೆಗಳ ಗಾನ ಲಹರಿ.

ನಂತರ ಮತ್ತೆ ರಾತ್ರಿ ಭೋಜನ. Disco ನಂತರ ಸುಮಾರು ರಾತ್ರಿ 10.00 ಗಂಟೆಗೆ ದಿನದ ಕಾರ್ಯಕ್ರಮ ಅಂತ್ಯಗೊಂಡಿತು.

 -ಸವಿತ ಸುರೇಶ್

5 thoughts on “ಎಲ್ಲರನ್ನೂ ತಲುಪಿದ ‘ದೀಪಾವಳಿ ೨೦೧೬’; KB UK Deepavali 2016 – Something for everyone!

 1. ವರದಿ ಸುಂದರವಾಗಿದೆ.ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದನೆಗಳು

  Liked by 1 person

 2. ನಮ್ಮ ಕೋರಿಕೆಯಂತೆ ಬರೆದುಕೊಟ್ಟ ಎಲ್ಲಾ ಲೇಖಕರಿಗೂ ಕೃತಜ್ಞತೆಗಳು. Our special thanks to Navya & Rajath, and their mothers! Keep it going, guys! Thank you to Surya & Varuna for their reflections.

  Like

 3. ಕನ್ನಡ ಬಳಗ UK ಈ ಸಲ ಆಚರಿಸಿದ ಭರ್ಜರಿ ದೀಪಾವಳಿಯ ಬಗ್ಗೆ ಈ ತರದ ಕಣ್ಣುಕಟ್ಟುವ ಚಿತ್ರ ಸಿದ್ಧವಾಗಲು ವರದಿ ಮಾಡಿದ ಬರಹಗಾರರಿಗೂ ಅವುಗಳನ್ನು ದೊರಕಿಸಿ ಸಂಪಾದಿಸಿದ ವಿನತೆ ಶರ್ಮಾರಿಗೂ ಶ್ರೇಯಸ್ಸು ತಲುಪ ಬೇಕು. ಈ ಹೊಸ ತರದ ಪ್ರಸ್ತುತಿ ಅನಿವಾಸಿಗೆ ಕಳೆ ಕೊಟ್ಟಿದೆ.

  Liked by 1 person

 4. ಈ ವರ್ಷದ ಕನ್ನಡ ಬಳಗದಲ್ಲಿ ದೀಪಾವಳಿ ಸಮಾರಂಭ ಬಹಳ ಯಶಸ್ವಿಯಾಗಿ ನಡೆದಿದೆ ಎಂದು ಈ ಭರ್ಜರಿ ವರದಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಮಾತುಗಳನ್ನು ಓದಿದರೆ ತಿಳಿಯುತ್ತದೆ. ಬಹಳ ಸಂತೋಷವಾಯಿತು. ನಾನು ಅಲ್ಲಿ ಇಲ್ಲದಿದ್ದರೂ ಕೂಡಾ, ವರದಿ ಓದಿದಾಗ ಅಲ್ಲಿನ ಪ್ರತಿಯೊಂದು ದೃಶ್ಯವನ್ನೂ ಸರಾಗವಾಗಿ ಕಲ್ಪಿಸಿಕೊಂಡೆ. ಭೇಷ್! ವಿವೇಕ್ ನಾಯಕತ್ವದಲ್ಲಿ ಬಳಗದ ಚಟುವಟಿಕೆಗಳು ಸಲೀಸಾಗಿ ಮುಂದುವರೆದಿದೆ. ಇದು ನಿಜಕ್ಕೂ ಸಮಾಧಾನ ಮತ್ತು ಸಂತೋಷದ ವಿಷಯ. ಮುಂದಿನ ಸಮಾರಂಭವೂ ಹೀಗೆ ನಡೆಯಲಿ. ಈ ವರದಿಗಳನ್ನು ಇಷ್ಟೊಂದು ಸುಂದರವಾಗಿ ಅಳವಡಿಸಿರುವ ಅನಿವಾಸಿ ಜಾಲ-ಜಗುಲಿಯ ಸಂಪಾದಕರಾದ ಡಾ ವಿನುತೆ ಶರ್ಮ ಮತ್ತು ಡಾ ದೇಸಾಯಿ ಅವರಿಗೆ ಮತ್ತೊಮ್ಮೆ ನನ್ನ ಅಭಿನಂದನೆಗಳು. ಸಮಾರಂಭದ ಬಗ್ಗೆ ವರದಿ ಬರೆದು, ಜಾಲ-ಜಗುಲಿಯ ಕಳೆಯೇರಿಸಿರುವ ಸದಸ್ಯರು, ಅದರಲ್ಲೂ ನಮ್ಮ ಕಿರಿಯ ತರುಣರಿಗೆ ಮತ್ತಷ್ಟು ಹಾರ್ದಿಕ ಅಭಿನಂದನೆಗಳು. ಈ ಕಾರ್ಯ ಹೀಗೆ ಮುಂದುವರೆಯಲಿ!
  ಉಮಾ ವೆಂಕಟೇಶ್

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.