ಯು ಕೆ ಕನ್ನಡ ಬಳಗದ ತುಂಬ ಹುರ್ರೇ ಹೆನ್ರಿಗಳು? ಅವರಲ್ಲಿ ಐಶ್ವರ್ಯ ಬಂದರೆ? …
ಯುಗಾದಿ ಹಾಸ್ಯಕವನ ಗೋಷ್ಠಿಯಲ್ಲಿ ಇವು ಕೇಳಿ ಬಂದವು.
1) ಮೊದಲು ಹಂಪಾಪುರ ಗಿರಿಧರ ಬರೆದ ಮೂರು ಹನಿಗವನಗಳು
೧. ತಿರುಚಿದ ಗಾದೆ
ಅರ್ಧ ರಾತ್ರಿಯಲ್ಲಿ
ಐಶ್ವರ್ಯ ಬಂದರೆ…
ಐಶ್ವರ್ಯ ಬಂದರೆ…
ಕೊಡೆ ಹಿಡಿಯುವ ಬದಲು
ಒಂದು ಹನಿ ಮುತ್ತು ಕೊಡೆ
ಎಂದನಂತೆ, ಛತ್ರಿ
೨. ಬಾಬ
ಯೋಗ ಕಲಿಯಲು ಹೋದ
ಮಲ್ಲಿಕೆಯ ಶೆರೆ ಹೊತ್ತಾದ
ಮೇಲೆ ಗೊತ್ತಾಯಿತು, ಬಾಬಾ
ಮುಚ್ಚಿದ ಕಣ್ಣೋoದನ್ನು
ಇನ್ನು ಬಿಚ್ಚಲಾಗುತ್ತಿಲ್ಲ
೩. ಪ್ರೇಮ ಪತ್ರ
ನಾನು ಕಾಲೇಜಿನಲ್ಲಿದ್ದಾಗ ಅಗ್ದಿ ಚಲೋ
ಪ್ರೇಮ ಪತ್ರ ಬರೆಯುತ್ತಿದೆ.
ಎಲ್ಲ ಹುಡುಗರದ್ದು ಒಂದೇ ರಿಕ್ವೆಸ್ಟು
ನನಗೊಂದು ಪತ್ರ ಬರೆದು ಕೊಡು ಎಂದು.
ಪ್ರೇಮ ಪತ್ರಗಳಿಗೆ ಎರಡು ಅಂತ್ಯಗಳು
ಒಂದು ಮದುವೆ
ಇನ್ನೊಂದು ಏಟು
ಆದರೆ, ಪರಿಣಾಮ ಒಂದೇ
— ಹಂಪಾಪುರ ಗಿರಿಧರ
2) ಎರಡನೆಯದಾಗಿ ಶ್ರೀವತ್ಸ ದೇಸಾಯಿ ಹೆಸರಿಟ್ಟ ಹೆನ್ರೀಕರಣ!
ಏನ್ರೀ,
ಬೇರೆ ಹೆಸರೇ ತೋಚುವದಿಲ್ಲವೆ?
ರಾಮ-ಕೃಷ್ಣ-ಮೂರ್ತಿ-ರಾಜ
ಶಿವ-ಬಸವ-ಶಂಕರ-ಗೌಡ
ಬಳಗದ ಕೈಪಿಡಿ ಪೂರ್ತಿ
ಈ ಹೆಸರುಗಳದೇ ಭರ್ತಿ!
ಕ.ಬ. ಯುಗಾದಿ ಸಂಭ್ರಮ
ವಿಭಿನ್ನ ಉಡುಪು-ತೊಡುಪುಗಳ ಸಡಗರ
ಹೆಂಡಂದಿರು ತಮ್ಮ ಗಂಡಂದಿರನ್ನು ಕರೆದಾಗ
ಅರ್ಧಂಬರ್ಧ ಕೇಳಿಸಿಕೊಂಡ ಆಂಗ್ಲ ಮಿತ್ರನಿಗೆ ವಿಸ್ಮಯ
ಕೂಡಿದ ಗಂಡುಗಲಿಗಳ ಹೆಸರೆಲ್ಲ Henry ಏಕೆ?
—ಶ್ರೀವತ್ಸ ದೇಸಾಯಿ
ಗಿರಿಧರ್ ಅವರು ಪ್ರೇಮಪತ್ರದ ಕವನವನ್ನು ಸಮಾರಂಭದಲ್ಲಿ ಪಠಿಸುವ ಮುನ್ನವೇ ಕವನ ತಮ್ಮ ಸ್ವಂತ ಅನುಭವವನ್ನು ಆಧಾರಿಸಿ ಬರೆದದ್ದಲ್ಲ ಎಂದು ನಿರಾಕರಣೆಯ ನೋಟೀಸ್ ನೀಡಿಬಿಟ್ಟರು. ಇಲ್ಲದಿದ್ದಲ್ಲಿ ಹನಿಗವನದ ಎರಡನೆಯ ಅಂತ್ಯವನ್ನು ನಾವು ಊಹಿಸಿಕೊಳ್ಳಬೇಕಾಗಿತ್ತು. ಇನ್ನು ದೇಸಾಯಿ ಅವರ ಹೆನ್ರೀಕರಣದ ಗೊಂದಲ ನಮಗೆ ಇಲ್ಲಿ ಪರಿಚಿತವಾದ ಸನ್ನಿವೇಶ. ಆದರೂ ಅವರಂತೆ ಅದನ್ನು ಕವನರೂಪಕ್ಕಿಳೀಸಲು ನಮಗಾಗಲಿಲ್ಲ. ಭೇಷ್ ಗಿರಿಧರ್ ಮತ್ತು ದೇಸಾಯಿ ಅವರೆ.
ಉಮಾ ವೆಂಕಟೇಶ್
LikeLike
I second sarojini !!! Good ones. Nice humour.
LikeLike
ಎಷ್ಟೇ ಚನ್ನಾಗಿ ಪ್ರೇಮಪತ್ರ ಬರದ್ರೂ ,ಮದುವೆಯಾದರೂ ಪರಿಣಾಮ ಒಂದೇ ಅಂತ ಗೊತ್ತಿದ್ರೂ ,ಪಾಪ ಮುಚ್ಚಿದ ಕಣ್ಣೊಂದ ಬಿಚ್ಚೋಕಾಗ್ದೇ ಹೋದ್ರೂ ಅರ್ಧ ರಾತ್ರೀಲಿ ಐಶ್ವರ್ಯ ಬಂದ್ರೆ ಹನಿಮುತ್ತ ಹಂಬಲ ಯಾಕೇ?ಅಲ್ಪೇ ಗಿರಿಧರ ಹಂಪಾಪುರ ಅವರೇ?
ಹೆಸರು ಏನಾದ್ರೇನು ಹೆಂಡತಿ ಮರು ನಾಮಕ,ರಣ ಮಾಡೇ ಮಾಡ್ತಾಳೆ –‘ಏನ್ರೀ’ಅಂತ .ಒಮ್ಮೆ ಮಂದ್ರದಲ್ಲಿ ,ಒಮ್ಮೆ ತಾರಕದಲ್ಲಿ ,ಒಮ್ಮೆ ಕರ್ಕಶವಾಗಿ ,ಮಗದೊಮ್ಮೆ ಮಂಜುಳವಾಗಿ ಮನದಲ್ಲಿ ರಿಂಗಣಿಸುತ್ತಲೇ ಇರುತ್ತದೆ.ಅಲ್ವೇನ್ರೀ ಶ್ರೀವತ್ಸ ದೇಸಾಯಿಯವರೇ? ಪಾಪ!ನಿಮ್ಮ ಆಂಗ್ಲ ಮಿತ್ರರ ಗೊಂದಲ ನಿವಾರಣೆಯಾಗಬೇಕಲ್ಲ ಎಲ್ಲ ಗಂಡುಗಲಿಗಳು ಹೆನ್ರಿಗಳಲ್ಲ ಏನ್ರೀ ಗಳು ಅಂತ!!
ನಿಜಕ್ಕೂ ತಿಳಿ ಹಾಸ್ಯ ಭರಿತ ನಾಲ್ಕೂ ಹನಿಗವನಗಳು ಅರಿಯದೇ ಸುಳಿನಗುವೊಂದು ಸುಳಿವಂತೆ ಮಾಡುತ್ತವೆ,ಮತ್ತೆ ಮತ್ತೆ.ಅಭಿನಂದನೆಗಳು ,ಗಿರಿಧರ ಅವರೇ ,ಶ್ರೀ ವತ್ಸ ಅವರೇ.
ಸರೋಜಿನಿ ಪಡಸಲಗಿ
LikeLiked by 2 people
Chennaagive.
LikeLike