ಯು ಕೆ ಕನ್ನಡ ಬಳಗದ 2016 ಯುಗಾದಿ ಉತ್ಸವದ ಸಮಯದಲ್ಲಿ ನಡೆದ ಕಾವ್ಯ ಗೋಷ್ಠಿಯಲ್ಲಿ ಶಿವಪ್ರಸಾದ್ ಅವರು ತಾವೇ ಓದಿದ ಕವಿತೆ ಇದು.
ಸ್ಕಾಚ್ ವಿಸ್ಕಿ
ಸ್ಕಾಚ್ ವಿಸ್ಕಿ ಎಂದರೆ
ನನಗಿಲ್ಲ ತೊಂದರೆ
ಸ್ನೇಹಿತರು ಸೇರಿ ಒಂದಾದರೆ
ಜಾನಿವಾಕರ್, ಗ್ಲೆನ್ ಫಿಡಿಕ್ ನನ್ನ ಒಲವು
ವಿಸ್ಕಿ ಒಂದೆ ನಾಮ ಹಲವು
ಎರಡು ಪೆಗ್ ಇಳಿಸಿದಾಗ
ಕಂಡದ್ದೆಲ್ಲಾ ಚೆಲುವು !
ಒಂದು ಪೆಗ್ ವಿಸ್ಕಿ
ಅದಕೊಂದಿಷ್ಟು ಸೋಡ
ಕುರುಕಲು ಬೇಕು
ಬಿಸಿ ಬಜ್ಜಿ ಪಕೋಡ
ವಿಸ್ಕಿ ಕುಡಿದಾಗ ನಾನೊಬ್ಬ ದಿಲ್ದಾರ್ ರಾಜ
ಹೇಗೆ ವಿವರಿಸಲಿ ಇದರ ಮಜ
ಮಿತಿ ಮೀರಿದರೆ ಅನಾರೋಗ್ಯ ನಿಜ
ಮಲಗೆದ್ದ ಮೇಲೆ ಹ್ಯಾಂಗ್ ಓವರ್ ಸಹಜ!
ವಾರಾಂತ್ಯದಲಿ ವಿಸ್ಕಿಯ ಆರಾಧನೆ
ಇನ್ನಿಲ್ಲ ಬೇಸರ ಮನೋವೇದನೆ
ಮೈ ಮನಸ್ಸುಗಳಾಗಿವೆ ಹಗುರ
ಚಿಂತೆಗಳು ಸದ್ಯಕ್ಕೆ ದೂರ
ಡಾ. ಜಿಎಸ್ ಶಿವಪ್ರಸಾದ್
ಕುಡಿದು ಕುಣಿದು ನಲಿದಾಡೋ ಹೇ ಮನುಜ! ಎನ್ನುವ ಮದ್ಯಪಾನದ ಮತ್ತನ್ನು ಬಣ್ಣಿಸಿ ಹೇಳುವ ಹಾಡಿನಲ್ಲಿ ಶಿವಪ್ರಸಾದ ಅವರ ಸ್ಕಾಚ್-ವಿಸ್ಕಿಯ ಕವನದ ಭಾವನೆಗಳೇ ವ್ಯಕವಾಗುತ್ತವೆ. “ಕುಡಿತವನರಿತವ ನಿಜಕೂ ರಾಜ“ ಎನ್ನುತ್ತಾರೆ. “ದೇವಲೋಕದ ಸೋಮವೇ ಈ ಸೆರೆ, ಪಡೆದಿದೆ ಭುವಿಯಲಿ ಬಾಟಲಿನಾಸರೆ, ರಂಭೆ ಊರ್ವಷಿ, ಮೇನಕೆ ಅಪ್ಸರೆ, ಆಡುವರೇ ನಮ್ಮ ಕ್ಲಬ್ಬಿನ ಕ್ಯಾಬರೆ ಎಂದು ಮದ್ಯದ ವೈಭವವನ್ನು ದೇವಲೋಕಕ್ಕೂ ಕರೆದೊಯ್ಯುವ ಹಾಡಿನಂತೆ, ಶಿವಪ್ರಸಾದರು ವಿಸ್ಕಿ-ಸ್ಕಾಚ್ ಪಾನೀಯದ ವೈಭವವನ್ನು, ವಾರಾಂತ್ಯದ ಬಜ್ಜಿ-ಬೋಡಾ ಸೇವನೆಯ ಜೊತೆ ಸೇರಿಸಿ, ಕವನದ (ಮದ್ಯಪಾನಿಗಳ ಸ್ವರ್ಗ! ಸಮಾನ ಅನುಭವವನ್ನು) ರಂಗನ್ನು ಮತ್ತಷ್ಟು ಗಾಢವಾಗಿಸಿದ್ದಾರೆ. ಮದ್ಯಪಾನದ ಅನುಭವವಿಲ್ಲದ ನನ್ನಂತಹ ವ್ಯಕ್ತಿಗೂ, ಈ ಕವನ ಓದಿಯೇ ನಶೆಯೇರಿತು!
ಉಮಾ ವೆಂಕಟೇಶ್
LikeLike
ಈ ವಾರಾಂತ್ಯದ ಕಂತು-ಸ್ಕಾಚ್-ಒಂದು ದಿನ ಮೊದಲೇ ’ಏರಿದೆ” ಎಂದು ಕೆಲ ನಿಕಟವರ್ತಿಗಳಿಂದಲೂ ದೂರು! ಈ ಚಂದದ (ನಾನಿನ್ನೂ ಮುಟ್ಟಿಲ್ಲ, ಇಂದು!) ಹಾಸ್ಯಕವನಕ್ಕೆ ಚಂದವಾದ ಪ್ರಶಂಸೆಯ ಹೂ ಏರಿಸಿದ , ಬರೆದ ಚಂದದವರಿಗೆ ಪ್ರಸಾದರ ಪರವಾಗಿ ಧನ್ಯವಾದಗಳು. ಎಲ್ಲ ರಸಿಕರಿಗೆ ಅಭಿನಂದನೆಗಳು. I’m enjoying it. Pass me a peg, please, waiter!
LikeLiked by 1 person
ಡಾ ಶಿವಪ್ರಸಾದ ಹಾಗೂ ಎಲ್ಲ ವಿಸ್ಕಿಪ್ರಿಯರ ಕ್ಷಮೆ ಕೋರಿ ,
ಎರಡು ಪೆಗ್ ಇಳಿಸಿದರೆ ಮಜವೋ ಮಜಾ
ಮನೇಲಾದೀತು ಆಗ ಸಜವೋ ಸಜಾ
ಹ್ಯಾಂಗೋವರ ಆದೀತು ಆಗ ಮಟಾ ಮಾಯ
ಅಂದೀರಿ ಅರಸಿ ನೀನಲ್ಲವೇ ನನ್ನ ಜೀವಾ
ವಿಸ್ಕಿ ಅಂದರೆ ನಿಮಗಿಲ್ಲ ತೊಂದರೆ
ಗೊತ್ತು ನೀವೆಲ್ಲಾ ವಿಸ್ಕಿಯಾ ಸೆರೆ
ಬದಲಾದೀತು ವಿಷಯ ಗೂಡು ಸೇರಿದರೆ
ಹೇಳುವಿರಿ ನೀವು ನಲ್ಲೆ ನಾ ನಿನ್ನ ಕೈಸೆರೆ
ರಂಜನೀಯ ಕವನ ಡಾ.ಶಿವ ಪ್ರಸಾದ್ ಅವರೇ
ಸರೋಜಿನಿ ಪಡಸಲಗಿ
LikeLiked by 2 people
ಆಹಾ…… ಎಂತಹ ಆರಾಧನೆ……ವಿವರಣೆ……ವಿಡಂಬನೆ!!! ವಿಸ್ಕಿಯ ಬಗ್ಗೆ ಬರೆದ ಈ ಹಾಸ್ಯಮಯ ಕವನದಲ್ಲಿ ಎಚ್ಚರಿಕೆಯೂ ಸೇರಿದೆ!. ಸದ್ಯಕ್ಕೆ, ವಾರಾಂತ್ಯದ ಮಜಕ್ಕೆ ಬೊಂಡಾ, ಬಜ್ಜಿಗಳು ನನಗೆ ಸಾಕು!!
ಹಾಸ್ಯವೂ ಹೌದು, ನಿಜವೂ ಹೌದು ಎನ್ನುವಂತಹ ಕವನ. ತುಂಬ ಚೆನ್ನಾಗಿದೆ.
LikeLiked by 1 person