ಯು ಕೆ ಕನ್ನಡ ಬಳಗ – ಬ ರಾ ಸುರೇಂದ್ರ ಅವರ ಕವನ

Poem presentation2 enhanced
ಗೌ ಜಯರಾಂ, ಸುರೇಂದ್ರ, ಸತ್ಯನಾರಾಯಣ್ Photo: R Cavale

ಕನ್ನಡ ಬಳಗ ಯು ಕೆ, ಇದೇ ಅಕ್ಟೋಬರ್ ೩೧, ೨೦೧೫ ರಂದು ಚೆಲ್ಟನಂ ದಲ್ಲಿ ದೀಪಾವಳಿ  ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸುತು.  ನ್ಯೂಜರ್ಸಿಯಿಂದ ಬಂದ ಕಲಾತರಂಗ ತಂಡದ ವತಿಯಿಂದ ಅದರ ಸದಸ್ಯರಾದ ಕವಿ-ನಟ-ನಾಟಕಕಾರರಾದ ಬ. ರಾ. ಸುರೇಂದ್ರ ಅವರು ಈ ಸಮಾರಂಭಕ್ಕೆಂದೇ ರಚಿಸಿದ ತಮ್ಮ ಕವನವನ್ನುಓದಿ ಬಳಗಕ್ಕೆ ಸಮರ್ಪಿಸಿದರು. ಜೊತೆಗೆ ಕಟ್ಟು ಹಾಕಿಸಿದ ಅದರ ನಕಲನ್ನು ಅಧ್ಯಕ್ಷರಿಗೆ ಕೊಟ್ಟರು. ಅದನ್ನು ಈ ವೇದಿಕೆಯ ಓದುಗರಿಗೆ ಮುಂದೆ ಇಡುತ್ತಿದ್ದೇವೆ:

”ಯು.ಕೆ. ಕನ್ನಡ ಬಳಗ”

ಸಹಸ್ರಾರು ವರುಷಗಳ ಹಿಂದಿನಿಂದ

ಮೈವೆತ್ತಿ ನಿಂದು ಮೆರೆದ ಭವ್ಯತೆಯ ಮೆರುಗಿನಿಂದ

ಇಂದು ಶತ ಯೋಜನೆಗಳ ದೂರವೂ ಬಾಧ್ಯವಾಗದೆ

ಮಿಂಚಿನ ವೇಗದಲ್ಲಿ ಓಡುವ ಕಾಲವೂ ಬಾಧಿಸದೆ

ನಾಗರೀಕತೆಯ ಅಡಿಪಾಯದ ಮೇಲೇರಿರುವಲ್ಲಿ

ಭವ್ಯ ಸಂಸ್ಕೃತಿಯ ಅರಮನೆಯ ಕಟ್ಟಿರುವಲ್ಲಿ

ನಮ್ಮನ್ನು ನಾವು ಮರೆತು ಮೆರೆಯಲಿಚ್ಛಿಸುವಾಗ

ನಮ್ಮತನದ ಕರೆ ಅಲೆ ಅಲೆಯಾಗಿ ತೇಲಿ ಬಂದಾಗ

ಹೆಪ್ಪುಗಟ್ಟಿದ ಮನಗಳಲ್ಲಿ ಹೊಂಬಿಸಿಲು ಬೀಸಲು

ಕನ್ನಡದ ಹೃದಯ ಕಮಲಗಳು ಅರಳಿರಲು

ಭಾಷೆ, ಭಾಷೆಗಳ ಹಂದರದಲ್ಲಿ ಕೋಟಿ ಕೋಟಿ ಕನ್ನಡಿಗರು ನಲಿದಿರುವಾಗ

ಕಲೆಗಳ ಸುಂದರ ರಂಗವಲ್ಲಿ ಬಿಡಿಸಿ ವಿಶ್ವದೆಲ್ಲೆಡೆ ಪಸರಿರುವಾಗ

ಕಡಲಾಚೆಯ ಯು.ಕೆ.ಯಲ್ಲೂ ನೆಲೆ ಕಂಡು ಮೊಳಕೆಯೊಡೆದಾಗ

ಲಂಡನ್ನಿಗರ ಶುಭ ಹಾರೈಕೆಯಲ್ಲಿ ಹಸನಾಗಿ ಬೆಳೆದು ಮೊಗ್ಗಾದಾಗ

ನಾಡನ್ನೂ ನಾಡವರನ್ನೂ ಸ್ಮರಿಸುತ್ತಾ

ನವ್ಯತೆಯ ಮೆರುಗಲ್ಲಿ ಮರೆಯಾಗುತ್ತರುವ ಸಂಸ್ಕೃತಿಯ ಎತ್ತಿ ತೋರಿಸುತ್ತಾ

ಇಂದು ಸುಂದರ ಮಲ್ಲಿಗೆಯ ಹೂವಾಗಿ ಅರಳಿ ಪರಿಮಳ ನಾಡ ಸೇರುವಾಗ

ಹೃದಯ ತುಂಬಿಬಂದ ತಾಯಿ ಭುವನೇಶ್ವರಿಯು ನಲಿದಿರುವಾಗ

ನಸುನಕ್ಕು “ಜೈ ಕರ್ನಾಟಕ” ಎಂದು ಮಂತ್ರ ಪುಷ್ಪಗಳ ಉದುರಿಸಿದಂತಾಯ್ತು

ಧನ್ಯೆ ನಾನು ಎಂದು ಯು.ಕೆ.ಕನ್ನಡಿಗರ ಹರಸಿದಂತಾಯ್ತು.

framed BaraSuPoem
Photo: Suresh Ramayya

ಬ ರಾ ಸುರೇಂದ್ರ (USA)

5 thoughts on “ಯು ಕೆ ಕನ್ನಡ ಬಳಗ – ಬ ರಾ ಸುರೇಂದ್ರ ಅವರ ಕವನ

 1. ನಿಮ್ಮ ಕನ್ನಡದ ಬಗೆಗಿನ ಅಭಿಮಾನ ಕನ್ನಡಿಗರೆಲ್ಲರಿಗೂ ಮಾದರಿ.
  ಜಯ ಕರ್ನಾಟಕ ಮಾತೆ

  Like

 2. ಆಮೆರಿಕೆಯ ಕಲಾತರಂಗದ ಕನ್ನಡ ಕಲಾವಿದರು ಕನ್ನಡಕ್ಕೊಬ್ಬನೆ ಕೈಲಾಸಮ್ ವಿರಚಿತ “ನಮ್ ಕಂಪ್ನಿ ಮತ್ತು ಬಂಡವಾಳವಿಲ್ಲದ ಬಡಾಯಿ“ ನಾಟಕಗಳನ್ನು ಯು.ಕೆ ಕನ್ನಡ ಬಳಗದ ಸಮಾರಂಭದಲ್ಲಿ ಪ್ರದರ್ಶಿಸಿ ನಮ್ಮೆಲ್ಲರ ಮನಗಳನ್ನು ಸೂರೆಗೊಂಡರು. ಅದಕ್ಕೂ ಹೆಚ್ಚಾಗಿ ಕಲಾತರಂಗದವರ ಆತ್ಮೀಯತೆ ಮತ್ತು ಅಭಿಮಾನಗಳು ನಮ್ಮ ಮನಗಳನ್ನು ಮತ್ತಷ್ಟು ಅಪಹರಿಸಿದವು. ಅವರಲ್ಲಿ ಒಬ್ಬರಾದ ಬ.ರಾ.ಸುರೇಂದ್ರ ಅವರು ರಚಿಸಿದ ಈ ಮೇಲಿನ ಕವನ ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯವನ್ನು ಬೆಳೆಸಿದೆ ಎನ್ನಬಹುದು. ತಮ್ಮ ಸುಂದರ ಪದಗಳಲ್ಲಿ ಸುರೇಂದ್ರ, ಕನ್ನಡವೆನ್ನುವುದು ಒಂದು ಶಕ್ತಿ, ಒಂದು ಜೀವ ಎನ್ನುವ ನಂಬಿಕೆಯನ್ನು ನಮ್ಮಲ್ಲಿ ಬಿತ್ತಿದ್ದಾರೆ. ಅವರ ಈ ಭೇಟಿ ಮತ್ತು ಪ್ರದರ್ಶನ ಈ ಎರಡೂ ದೇಶಗಳ ನಡುವಿನ ಕನ್ನಡಿಗರ ನಡುವಿನ ಸಂಬಂಧಕ್ಕೆ ಇನ್ನೂ ಹೆಚ್ಚಿನ ಮಧುರತೆ ನೀಡಲಿ ಎಂದು ಆಶಿಸುವೆ.
  ಉಮಾ ವೆಂಕಟೇಶ್

  Like

 3. ಅಮೇರಿಕದ ನ್ಯೂ ಜರ್ಸಿ ಯಲ್ಲಿ ನೆಲಸಿರುವ ಪ್ರತಿಭಾವಂತ ಕಾಲವಿದರಾದ ಬಾ ರ ಸುರೇಂದ್ರ, ಸತ್ಯ ನಾರಾಯಣ ಮತ್ತಿತರರು ಬಂದು ಯು.ಕೆ . ಕನ್ನಡ ಬಳಗದಲ್ಲಿ ನಮಗೆಲ್ಲ ಅತ್ಯುತ್ತಮ ನಾಟಕ ಪ್ರದರ್ಶನ ನೀಡಿ ರಂಜಿಸಿರುವುದಲ್ಲದೆ ಕೊನೆಗೆ ಒಂದು ಸುಂದರ ಕಾವ್ಯ ನಮನ ಅಥವ ಕಾಣಿಕೆಯನ್ನು ಕೂಡ ಕೊಟ್ಟು ಅವರ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸಿ ಕೊಂಡಿದ್ದಾರೆ. ಯು.ಕೆ ಹಾಗು ಯು ಎಸ ಏ ಕನ್ನಡ ಸಂಘಗಳ ಒಂದು ಭಾಂಧವ್ಯಕ್ಕೆ ಅವರ ಭೇಟಿ ನಾಂದಿಯಾಗಿದೆ. ಈ ಸಂಭಂದವನ್ನು ಪೋಷಿಸಿ ಉಳಿಸಿಕೊಳ್ಳುವ ಬಗ್ಗೆ ನಾವೆಲ್ಲ ಶ್ರಮವಹಿಸಬೇಕು. ಈ ಒಂದು ಸಂಭಂದ ಹೀಗೆ ಬೆಳೆಯಲಿ ಎಂದು ಆಶಿಸುತ್ತೇನೆ
  This transatlantic alliance is mutually beneficial and we wish it grows further

  Like

 4. ಕನ್ನಡ ಬಳಗದ ಕನ್ನಡಿಗರ ಕನ್ನಡ ಸೇವೆಯ ಬಗ್ಗೆ ಬಹಳಷ್ಟು ಆಶಾವದವನ್ನು ವ್ಯಕ್ತ ಪಡಿಸಿರುವ ಕವಿತೆ. ಅದು ಕನ್ನಡ ಸಂಸ್ಕ್ರುತಿ, ಸಾಹಿತ್ಯ ಮತ್ತು ವಿಚಾರ ವೇದಿಕೆಯಲ್ಲಿ ಪ್ರಕಟವಾಗಿರುವುದು ಸ್ವಾಗತಾರ್ಹ.
  ಇಡೀ ಕವಿತೆಯಲ್ಲಿನ ಆಶಾವಾದ ಚೇತೋಹಾರಿ. ಸುರೇಂದ್ರ ಅವರ ಪರಿಚಯದಲ್ಲಿ ದೇಸಾಯಿಯವರು ಹೇಳಿರುವ ಹಾಗೆ ಕನ್ನಡದ ಬಗ್ಗೆ ಅಪಾರ ಕಾಳಜಿಯಿರುವ ,ಕ್ರುಷಿ ಮಾಡಿರುವ ,ನಾಟಕಗಳಿನ್ನು ಬರೆದು ನಟಿಸಿರುವ ನೀವು ನಮಗೆಲ್ಲ ಮಾದರಿ. ನಿಮ್ಮ ಹೊಸ ಕವನಗಳು ನಮ್ಮ ವೇದಿಕೆಯಲ್ಲಿ ಮತ್ತಷ್ಟು ಕಾಣಿಸಲಿ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.