ಅನುರಕ್ತ! -ಪ್ರೇಮಲತ ಬಿ ಅವರ ಕವನ

ಈ ವೇದಿಕೆಯ ಓದುಗರಿಗೆ ಚಿರಪರಿಚಿತ ಡಾ. ಪ್ರೇಮಲತ ಬಿ. ಅವರ ಹೊಸ ಕವನವಿದು.

ಅನುರಕ್ತ!

142894498183502760-song-yearning-painting

ಹಾಡು ಹಕ್ಕಿ ಹಾಡನಾಡಿದಾಗ

ನಿನ್ನ ನೋವಾಗಿ ಕಾಡಿದೆನೇನು?

ಬೀಳು ಬೆಳಕ ಪ್ರಕಾಶದಲಿ ನಿನ್ನ

ಬಳಲಿಸಿದೆನೇನು ಹುಡುಗಾ?

ಸವಿಯೂಟದಲಿ ರುಚಿ ಕಳೆದು

ಬೆಂದಕ್ಕಿಯಲಿ ಕಲ್ಲಾದೆನೇನು ಕಾಡಿ?

ಅಸ್ಪಶ್ಟ ಕಲ್ಪನೆಯಲಿ ಬೆವರಾಗಿ

ಮುಟ್ಟಿದರೆ, ಹೊಗೆಯಾದೆನೇನು ಹುಡುಗಾ?

ಮಂದೆಯಲಿ ನೀ ಮೈಮರೆತು

ದಿಗಂತದಲಿ ದೃಷ್ಟಿಯಿಟ್ಟು ಕಳೆದು

ಮಾತ ಮರೆಸಿ ,ಮಂಕನನ್ನಾಗಿಸಿ

ಪಿಸುನುಡಿಯಾದೆನೇನು ಹುಡುಗಾ?

ನವಿರು, ನವಿರಾದ ಭಾವಗಳಲಿ

ಅರ್ಥ ಕಳೆದು, ಹುಡುಕಾಡಿ, ಹೃದಯದ

ಹಂದರವ ಮೀಟಿ, ನಾದತರಂಗವ

ನುಡಿಸಿ,ನಿನ್ನ ಕಳೆದೆನೇನು ಹುಡುಗಾ?

ಕಲ್ಪನೆಗಳ ಕೋಡಿ ಹರಿಸಿLove-struck8

ನಿನ್ನ ನೆಮ್ಮದಿಯ ಬದುಕ ಕೆಡಿಸಿ

ಮೈ ಹಿಂಡಿ ತೆಗೆದು, ತೊಡೆಯಲಾಗದ

ತಲೆನೋವಾದೆನೇನು ಗೆಳೆಯಾ?

                                                                                                                       ಪ್ರೇಮಲತ ಬಿ.

4 thoughts on “ಅನುರಕ್ತ! -ಪ್ರೇಮಲತ ಬಿ ಅವರ ಕವನ

 1. ಆಹಾ! ಸೂಪರ್ ಕವಿತೆ. ಹೊಸ ಪ್ರತಿಮೆಗಳು! ಬಹಳ ದಿನಗಳಾದ ಮೇಲೆ ಹೊಸ ಪ್ರತಿಮೆಗಳನ್ನು ಓದಿದೆ. ಬೆಂದಕ್ಕಿಯಲ್ಲಿ ಕಲ್ಲಾಗುವ ಪರಿ, ತುಂಬ ಖುಷಿಕೊಟ್ಟ ಪ್ರತಿಮೆ.

  Like

 2. ಹುಡುಗನನ್ನೇನೋ ಪ್ರೇಮದ ಬಲೆಯಲ್ಲಿ ಸಿಲುಕಿಸಿ ಜಯಿಸಿದ್ದಾಯಿತು, ಅದಾದಮೇಲೆ ಅವನ ಅಸಹಾಯಕತೆಯನ್ನು ನೋಡಿ ಪರಿತಪಿಸಿ ಮೊಸಳೆಯ ಕಣ್ಣೀರಿಟ್ಟು ಅಪಹಾಸ್ಯಮಾಡುತ್ತಿರುವ ಆ ಹುಡುಗಿಯನ್ನು ನೋಡಿದರೆ, “Weaker sex is the stronger sex because of the weakness of the stronger sex for the weaker sex” ಎಂಬ ಹೇಳಿಕೆಯು ನೆನಪಿಗೆ ಬರುವುದು.

  Like

 3. ಹುಡುಗನೊಬ್ಬ ಪ್ರೇಮದ ಬಲೆಯಲ್ಲಿ ಬಿದ್ದ ನಂತರ ಅವನನ್ನು ಕೆಣಕುವ ಹುಡುಗಿಯ ಚೇಷ್ಟೆಯ ಮಾತುಗಳನ್ನು ಕವನರೂಪದಲ್ಲಿ ಇಳಿಸಿದ ಪ್ರೇಮಲತಾರ ಕವನ ಹೊಸ ಶೈಲಿಯದು. ಪ್ರಿಯಕರನ ಹೃದಯವನ್ನು ಗೆದ್ದ ನಂತರ ಅವನನ್ನು ಪೀಡಿಸುವ ಹುಡುಗಿಯರಿಗೇನೂ ಕಡಿಮೆಯಿಲ್ಲ. ಅವನ ಹೃದಯ ವೀಣೆಯನ್ನು ಮೀಟಿ ನಾದತರಂಗಗಳನ್ನೆಬ್ಬಿಸಿದ ನಂತರ ಹುಡುಗಿ ಅವನೊಬ್ಬನೇ ಅನುರಕ್ತ ಎನ್ನುವ ಭಾವನೆಯನ್ನು ವ್ಯಕ್ತಪಡಿಸುವ ಈ ಪದ್ಯವೂ ಸೊಗಸಾಗೇ ಇದೆ.
  ಉಮಾ ವೆಂಕಟೇಶ್

  Like

 4. ಇಪ್ಪತ್ತೊಂದನೆಯ ಶತಮಾನದ ಯುವಕರ (ಹುಡಿಗಿ-ಹುಡುಗರ, ಯಾರು ಮೊದಲು ನೋಡಿರಿ) ಅನುರಾಗದ ಹೊಸ ಆಯಾಮವನ್ನು ಇಲ್ಲಿ ನೋಡಿದಂತಿದೆ. ಅವಳದೇ ಮೇಲುಗೈ. ‘ಬಾಯ್ ಮೀಟ್ಸ್ ಗರ್ಲ್-ಬಾಯ್ ಫಾಲ್ಸ್ ಇನ್ ಲವ್’, ಇತ್ಯಾದಿ, ಹಳೆಯ ಮಾತಾಯಿತು. ಯಾಕೆ ‘ಬೀಳ’ ಬೇಕು? ಇಲ್ಲಿ ನಾಯಕಿ ಹುಡುಗನನ್ನು ಪ್ರೇಮದಲ್ಲಿ ಸಿಲುಕಿಸಿ, ಎತ್ತಿ, ಕೊಡುತ್ತಿರುವದು, ಎಷ್ಟೆಲ್ಲಾ ರೀತಿಯಿಂದ ಕೀಟಲೆ? ಬೆಂದಕ್ಕಿಯಲ್ಲಿ ಕಲ್ಲಾಗಿ, ಹೊಗೆಯಾಗಿ, ಪಿಸುನುಡಿಯಾಗಿ, ಹೃದಯದ ಹಂದರವ (ತಂತುಗಳನ್ನಲ್ಲ) ಮೀಟಿ, ನಾದ ತರಂಗವನೆಬ್ಬಿಸಿ ಕೊನೆಗೆ ಆತನಿಂದ ತೊಡೆಯಲಾಗದ ತಲೆನೋವಾಗುತ್ತಾಳೆ. ಕಲ್ಪನೆಯ ಕನಸುಗಳನ್ನು ಕಟ್ಟಿಕೊಂಡ ಆತ ಆಟದ ಬೊಂಬೆಯೇ? ಇಬ್ಬರೂ ಅನುರಕ್ತರೆ ಅಲ್ಲವೇ? ಪ್ರೀತಿ ಇನ್ನೂ ಜೀವಂತವಿದೆ ಎಂದು ಆಶಾವಾದ ಉಂಟು ಅಲ್ಲವೇ? ವಿವಿಧ ಅರ್ಥಗಳನ್ನು ಎಬ್ಬಿಸುವ, ಪ್ರಶ್ನೆಗಳನ್ನು ಕೇಳುತ್ತ ಹೋರಟ ಹೊಸ ಶೈಲಿಯ ‘ಪ್ರೇಮ(?) ಕವನ.’ ಸೈ ಅಂದೆ!

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.