ನಮ್ಮೂರು ಚಂದವೋ, ಈ ಊರು ಅಂದವೋ? ಆದರೆ ಈಗಾವುದಯ್ಯಾ ನನ್ನೂರು?–ರಾಮಮೂರ್ತಿಯವರು ಬರೆದ ಲೇಖನ

ಇತ್ತೀಚೆಗೆ ‘ನಮ್ಮ ಊರು ಯಾವುದು’ ಎಂಬ ವಿಚಾರದ ಬಗ್ಗೆ ರಾಜಾರಾಮ್ ಕಾವಳೆ, ವತ್ಸಲಾ ರಾಮ್, ಶ್ರೀವತ್ಸ Ramamurthy Portraitsದೇಸಾಯಿ, ಉಮಾ ವೆಂಕಟೇಶ್ ಮತ್ತು ಅರವಿಂದ ಕುಲಕರ್ಣಿ ಅವರು ರಸವತ್ತಾಗಿ ಬರೆದಿದ್ದಾರೆ. ಆದರೆ ನನ್ನ ಊರು ಯಾವುದು ಎಂಬ ಪ್ರಶ್ನೆ ನನ್ನನ್ನು ಬಹಳ ದಿನಗಳಿಂದ ಕಾಡಿಸುತ್ತಿದೆ, ಎನ್ನುತ್ತಾರೆ ಬೇಸಿಂಗಸ್ಟೋಕ್ ವಾ್ಸಿ ರಾಮಮೂರ್ತಿ.

ಈ ಲೇಖಕರ ಪರಿಚಯ (ಅದು ಅವಶ್ಯವೇ?):  ಯು ಕೆ ಕನ್ನಡ ಬಳಗದ ಆರಂಭದ ದಿನಗಳಿಂದಲೂ ವಿವಿಧ ರೀತಿಯಲ್ಲಿ ಸತತವಾಗಿ ಅದರ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಸ್ವಯಂ ಸೇವಕರಾಗಿ,  ಕಾರ್ಯಕಾರಿ ಮಂಡಲಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆನ್ನಿಗೆ ನಿಂತು ಕೆಲಸ ಮಾಡಿದ, ಮಾಡುತ್ತಿರುವ ಗಣ್ಯರ ಮುಂಚೂಣಿಯಲ್ಲಿ ಅವರ ಹೆಸರು ಯಾವಾಗಲೂ ಇದ್ದೇ ಇರುತ್ತದೆ ಎಂದರೆ ಅದೇನೂ ಅತಿಶಯೋಕ್ತಿಯಲ್ಲ. ಇದರಲ್ಲಿ ಯಾವ ಕನ್ಫ಼್ಯೂಶನ್ನೂ ಇಲ್ಲ. ಆದರೆ ”ನನ್ನ ಊರಿನ ಬಗ್ಗೆ ….?” ಅವರೇ ಬರೆದದ್ದನ್ನು ಮುಂದೆ ಓದಿ:

 ನನ್ನ ಪತ್ನಿ ಸೀತುಗೆ ಈ ಸಮಸ್ಯೆ ಇಲ್ಲ. ಬೆಳೆದಿದ್ದು ಬೆಂಗಳೂರು, ಸಂಸಾರ ಮಾಡುತ್ತಿರುವುದು ಇಂಗ್ಲೆಂಡ್. ಇಂಡಿಯಾಗೆ ಹೋದಾಗ ನನಗೆ ಕೆಲವರು ಎರಡು ಪ್ರಶ್ನೆಗಳನ್ನು ಕೇಳುತ್ತಾರೆ, “What is your good name?” ಮತ್ತು “ನಿಮ್ಮ ನೇಟಿವ್ ಪ್ಲೇಸ್?”.  ಗುಡ್ ನೇಮೂ ಬ್ಯಾಡ್ ನೇಮೂ ಗೊತ್ತು ಆದರೆ ನೇಟಿವ್ ಪ್ಲೇಸ್ ? ದೇವರಿಗೇ ಗೊತ್ತು. ಅದು ಯಾಕೆ ಅಂತ ಕೇಳ್ತೀರಾ?

ಕಾವೇರಿ ನದಿ ಮಧ್ಯ ಗೋವಿನ ಬಂಡೆ
ಕಾವೇರಿ ನದಿ ಮಧ್ಯ ಗೋವಿನ ಬಂಡೆ All Photos: Author’s

ನೋಡಿ, ನಮ್ಮ ತಂದೆಯ ಕಡೆಯವರು ತಮಿಳುನಾಡಿನಿಂದ ಬಂದವರು ಅಂತ ಕೇಳಿದ್ದೆ, ಬಹಳ ಹಿಂದೆ ಅಂತ ಇಟ್ಕೋಳಿ. ಇವರು ವಲಸೆ ಬಂದು ಕಾವೇರಿ ನದಿಯ ದಡದಲ್ಲಿ ಇರುವ ಹನಸೋಗೆಯಲ್ಲಿ (ಹಾಸನ ಡಿಸ್ಟ್ರಿಕ್ಟ್) ಬಂದು ಸೆಟ್ಲ್ ಆದರಂತೆ. ಯಾಕೆ ಅಂತ ಕೇಳಬೇಡಿ, ನನಗೆ ಗೊತ್ತಿಲ್ಲ. ನಮ್ಮ ಮನೆ ದೇವರು ಜೋಲಾರ ಪೇಟೆ ಹತ್ತಿರ ಘಟಕಾಚಲ. ಇದು ಇರುವುದು ತಮಿಳುನಾಡಿನಲ್ಲಿ.  ಅಜ್ಜಿ ಮನೆಯವರು ಮಹಾರಾಷ್ಟ್ರದವರು. ಇವರೆಲ್ಲಾ ಪೇಶ್ವೆಗಳ ಕಾಲದಲ್ಲಿ ಬಂದವರು, ಕಂದಾಯ ವಸೂಲಿ ಗಾರರು. ಕೊಣಸೋರು (ಮೈಸೂರು ಮತ್ತು  ಕೊಡಗು ಗಡಿಯಲ್ಲಿ) ನೆಲಸಿದ್ದವರು.  ನಮ್ಮ ಅಜ್ಜಿಗೆ 4 ಜನ  ಅಣ್ಣಂದಿರು.

ಮನೆಯಲ್ಲಿ ಅನುಕೂಲವಂತರು ಬೇಕಾದಷ್ಟು ತೋಟ ಗದ್ದೆ  ಇತ್ತು. ಒಬ್ಬ ಅಣ್ಣ ರಾಮರಾಯರು, ಮನೆ ಎದುರಲ್ಲೇ ಇದ್ದ ಪ್ರಾಥಮಿಕ ಶಾಲೆಯಲ್ಲಿ ಓದಿ, ಅಲ್ಲೇ ಮೇಷ್ಟ್ರು ಆಗಿ ರಿಟೈರ್ ಆದರು.  ಸಾಯಂಕಾಲ ಅವರು ಜಗಲಿ ಮೇಲೆ ಕೂತು ಹಳ್ಳಿಯವರ  ಕಷ್ಟಗಳನ್ನ ಮತ್ತು  ಜಗಳಗಳನ್ನು ಪರಿಹರಿಸುತ್ತಿದರು. ಇದು ಸುಮಾರು 1920 ರಲ್ಲಿ. ಇನ್ನೊಬ್ಬ ಅಣ್ಣ ನಾರಾಯಣರಾಯರು ಬಹಳ ಮುಂದುವರೆದರು. 1925 ರಲ್ಲಿ ಮೈಸೂರು ರಾಜ್ಯದ Education Dept. ನಲ್ಲಿ ಡೈರೆಕ್ಟರ್ ಆಗಿದ್ದರು. ಇವರೇ ನಮ್ಮ ತಂದೆಗೆ ಕೆಲಸ ಕೊಡಿಸಿದ್ದರು. Nepotism ಅಂದಿರಾ, ಹೌದು ಇದು ಬಹಳ ಹಳೇ ಪದ್ದತಿ ಅಲ್ಲವೇ?

ನಾನು ಹುಟ್ಟಿದ್ದು ಕಾವೇರಿ ದಡದಲ್ಲಿರುವ ರಾಮನಾಥಪುರ, ನಮ್ಮ ತಾಯಿಯ ಊರು.  ಇಲ್ಲಿ ನಮ್ಮ ಅಜ್ಜಿ f
ಮತ್ತು ಮುತ್ತಜ್ಜಿ ಇದ್ದರು. ಇವರ ಮನೆಗೆ ಪ್ರತಿ ಬೇಸಿಗೆ ರಜಕ್ಕೆ ಹೋಗುತ್ತಿದ್ದೆ . ನಮ್ಮ ಅಜ್ಜಿ ಅಡ್ರೆಸ್ ಬಹಳ ಸಿಂಪಲ್: “ಅರಕಲಗೂಡು ತಾಲೋಕು ರಾಮನಾಥಪುರದ ಓಣಿ ನಾಗೂ ಬಾಯಿ  ಅವರಿಗೆ”.

ಇವರ ಮನೆ ಸುಬ್ರಹ್ಮಣ್ಯ ದೇವಸ್ತಾನದ ಎದರು ಓಣಿ.  ಸಾಯಂಕಾಲ ನಮ್ಮಗೆಲ್ಲಾ ಮುತ್ತಜ್ಜಿ, ತುಳಸಿಬಾಯಿ ನದಿ ದಡದಲ್ಲಿ ಕಥೆಗಳ ಮಧ್ಯೆ ಕೈತುತ್ತು ಹಾಕುತ್ತಿದ್ದರು. ಈ ನದಿಯಲ್ಲಿ ದೊಡ್ಡ ದೊಡ್ಡ ಮೀನುಗಳು (ಇನ್ನೂ  ಇದೆ).  ಜೇಬಿನಲ್ಲಿ ಕಡಲೆಪುರಿ ತುಂಬಿಕೊಂಡು ಮೀನುಗಳಿಗೆ ಹಾಕುತ್ತಿದ್ದೆವು.

Old woman on BusB&W 4
”ಎಷ್ಟು ಎತ್ತು ಕಟ್ಟಿದ್ದಾರೆ?”

ಅರಕಲ ಗೂಡಿನಿಂದ ಮೊದಲನೇ  ಬಸ್ ಬಂದಾಗ ನಮ್ಮ ಮುತ್ತಜ್ಜಿಯ  ತಾಯಿನ ಬಸ್ನಲ್ಲಿ ಕರೆಕೊಂಡು ಹೋದರು. ಪಾಪ ಈ ಮುದುಕಿಗೆ  ಸರಿಯಾಗಿ ಕಣ್ಣು ಕಾಣುತ್ತಿರಲ್ಲಿಲ್ಲ. ಬಸ್ ಬಹಳ ಸ್ಪೀಡಿನಲ್ಲಿ ಹೋಗುತ್ತಾ ಇತ್ತು. ಆಶ್ಚರ್ಯದಿಂದ   ”ಎಷ್ಟು ಎತ್ತು ಕಟ್ಟಿದಾರೆ ಈ ಗಾಡಿಗೆ” ಅಂತ ಕೇಳಿದ್ದರಂತೆ!

School Teacher by RKLaxman
”ಮೇಷ್ಟ್ರು” – ಆರ್ ಕೆ ಲಕ್ಷ್ಮಣ್ ‘ಕೊರವಂಜಿ’ಯಲ್ಲಿ. ಕೃಪೆ: ಅಪರಂಜಿ ಶಿವಕುಮಾರ
ನಂಜನಗೂಡಿನ ದೇವಸ್ತಾನ
ನಂಜನಗೂಡಿನ ದೇವಸ್ತಾನ

ನಮ್ಮ ತಂದೆ ಹುಟ್ಟಿದ್ದು ನಂಜನಗೂಡಿನಲ್ಲಿ. ಅಲ್ಲಿ ಅವರ ತಂದೆ ಕೆಲಸಕ್ಕೆ ಬಂದವರು ಅಂತ ಕಾಣುತ್ತೆ, ಸರಿಯಾಗಿ ಗೊತ್ತಿಲ್ಲ. ನಾನು ಈ ಊರಿನ ಹೈಸ್ಕೂಲಿನಲ್ಲಿ  ಓದಿದೆ. ನಮ್ಮ ಹೆಡ್ ಮಾಸ್ಟರ ಹೆಸರು “ತಾಪತ್ರಯ ಅಯ್ಯಂಗಾರ್“  ಇವರ ನಿಜವಾದ ಹೆಸರು ಮರುತುಹೋಗಿದೆ.  ಬಹಳ ಸ್ಟಿಕ್ಟ್ ಮನುಷ್ಯ, ಲೇಟಾಗಿ ಬಂದರೆ ಏಟು. ಇವರಿಗೆ ಈ ಅಡ್ಡ ಹೆಸರು ಹೇಗೆ ಬಂತು ಅನ್ನುವುದು ಸ್ವಲ್ಪ ತಮಾಷಿಯಾಗಿದೆ. ಬಾಲ್ಯದಲ್ಲಿ ಇವರು ಚೆನ್ನಾಗಿ ಫುಟ್ ಬಾಲ್ ಆಡುತ್ತಿದ್ದರಂತೆ. ಒಂದು ಮ್ಯಾಚಿಗೆ ಬಂದಿದ್ದು ಲೇಟ ಆಯಿತು “ಏನೋ ಮನೇಲಿ ತಾಪತ್ರಯ ಇತ್ತು ಅದಕ್ಕೆ ಲೇಟ ಆಯಿತು ” ಅಂದರಂತೆ . ಅವತ್ತಿಂದ ಅವರ ಹೆಸರು ಹೀಗೆ ನಿಂತುಹೋಯಿತಂತೆ.

ನಮ್ಮ ತಂದೆ ಮಿಡ್ಲ್ ಸ್ಕೂಲ್ headmaster. ಕೋಲಾರ ಡಿಸ್ಟ್ರಿಕ್ಟ್ ನ ಕೈವಾರ, ಚಿಂತಾಮಣಿ, ಕಾಗತಿ ಮುಂತಾದ ಕಡೆ ಇದ್ದು ಕೊನೆಗೆ ನಾನು ಬೆಂಗಳೂರಿಗೆ ಕೆಲಸಕ್ಕೆ ಬಂದೆ. ನೀವು ಕೈವಾರದ ಹೆಸರು ಕೇಳಿರಬಹುದು. ಪೂರ್ವ ಕಾಲದ ಹೆಸರು ಏಕಚಕ್ರ ನಗರ, ಮಹಾಭಾರತದಲ್ಲಿ. ಇಲ್ಲೇ ಭೀಮ ಬಕಾಸುರನ್ನು ಕೊಂದಿದ್ದು ಅಂತ ಪ್ರತೀತಿ.

ಈ ದೇಶಕ್ಕೆ ಬರುವುದು ನನ್ನ ಕನಸಿನಲ್ಲೂ ಬಂದಿರಲಿಲ್ಲ. ಆದರೆ ನನ್ನ ಸ್ನೇಹಿತ ಹೇಳಿದ Employment voucher ಗೆ  ಅಪ್ಲೈ ಮಾಡು ಅಂದ. ಮಾಡಿ ಆರು ತಿಂಗಳಿಗೆ ಪೋಸ್ಟ್ ನಲ್ಲಿ  On Her Majesty`s Service ಕಾಗದ ಬಂತು ಇಂಗ್ಲೆಂಡಿಗೆ ಹೋಗುವುದಕ್ಕೆ. ಮನೆಯಲ್ಲಿ ಹೇಳಿದರೆ  ನಮ್ಮಜ್ಜಿ ನನಗೆ ಹುಚ್ಚು ಅಂತ ಹೇಳಿದರು. ಆದರೆ ನಮ್ಮ ತಂದೆ ಹೋಗು, ಆದರೆ 5 ವರ್ಷ ದಲ್ಲಿ ವಾಪಸ್ ಬಂದು ಬಿಡು ಅಂದರು. ಇದು ಆಗಿ ಈ ತಿಂಗಳಿಗೆ ೫೦ ವರ್ಷ ಆಯಿತು. ನಾನು ಇನ್ನೂ ಇಲ್ಲೇ ಇದ್ದೀನಿ.OHMS 1965

ಹೇಗೋ ಮಾಡಿ  ಏರ್ ಇಂಡಿಯಾ  ಟಿಕೆಟ್ ಆಯ್ತು. ಆಗ ಪಾಕಿಸ್ತಾನದ ಮೇಲೆ ಯುದ್ಧ ಶುರು ಆಯಿತು. ಬೊಂಬಾಯಿಗೆ ಬಂದರೆ ಅಲ್ಲಿ ಬ್ಲಾಕ್ ಔಟ್. airport ತಲುಪಿದಾಗಲೂ ಹೊರಡುವುದು ಗ್ಯಾರಂಟಿ ಇರಲಿಲ್ಲ .ಆಗ  ಕೇವಲ Rs.50 (£3) ಮಾತ್ರ exchange ಕೊಡುತ್ತಿದ್ದರು.ಇದನ್ನ ಜೇಬಿನಲ್ಲಿ ಹಾಕಿ ಇಲ್ಲಿಗೆ ಬಂದೆ  1965ರಲ್ಲಿ.

ಲಂಡನ್ನಿಗೆ ಬಂದು Essex, Cambridgeshireನಲ್ಲಿ ವಾಸಮಾಡಿ ಈಗ ಮೂವತ್ತು ವರ್ಷಗಳಿಂದ ಬೇಸಿಂಗಸ್ಟೋಕ್ ನಲ್ಲಿ ವಾಸಿಸುತ್ತಿದ್ದೇನೆ. ಈಗ ನೀವೇ ಹೇಳಿ ನನ್ನ ‘ನೇಟಿವ್ ಪ್ಲೇಸ್’ ಯಾವುದು? ಅಂತ. ನೀನು Gipsy ಅಂತ ನಮ್ಮ ಮಕ್ಕಳು ಹಾಸ್ಯ ಮಾಡುತ್ತಾರೆ! ಈ ವಿಚಾರನೆಲ್ಲಾ ನಮ್ಮ ಇಬ್ಬರು ಮೊಮ್ಮಕ್ಕಳಿಗೆ ಹೇಳಬೇಕು!

              ರಾಮಮೂರ್ತಿ, Basingstoke

13 thoughts on “ನಮ್ಮೂರು ಚಂದವೋ, ಈ ಊರು ಅಂದವೋ? ಆದರೆ ಈಗಾವುದಯ್ಯಾ ನನ್ನೂರು?–ರಾಮಮೂರ್ತಿಯವರು ಬರೆದ ಲೇಖನ

  1. ರಾಮಮೂರ್ತಿ ಅಂಕಲ್, ತುಂಬಾ ಚೆನ್ನಾಗಿ ಬರೆದಿದ್ದೀರ. ನಿಜವಾಗಲೂ ಯೋಚನೆ ಮಾಡಬೇಕಾದ ವಿಷಯ.

    We all know about BBCD (British Born Confused Desis), however recently I realized even I am in a confused category, so called Karnataka Born Confused Tamilian. Confusions arise about several things like the language to speak at home, when to celebrate certain festivals etc.

    Even my forefathers are from Tamil nadu, grandparents are from Ramanathapura, I have studied in several different places and moved to England a few years ago. All these places have contributed to my success. ಎಲ್ಲಾ ಊರಿನಲ್ಲಿ ಕುಡಿದ ನೀರು, ಕಲಿತ ವಿಷಯಗಳು, ಅರಿತ ಸಂಸ್ಕೃತಿ, ಜನರ ಒಡನಾಟ, ಹವಾಮಾನ ಎಲ್ಲವೂ ಸೇರಿ ಬಹಶಃ ಕಲಸುಮೇಲೋಗರವಾಗಿದೆಯೇನೋ ಎನಿಸುತ್ತದೆ.

    ನಾನು ಇದ್ದ ಊರುಗಲೆಲ್ಲವೂ ನನ್ನ ಊರೇ? ಹುಟ್ಟಿದ, ಬೆಳೆದ ಊರು ನನ್ನೂರೆ? ಅಥವಾ ನನಗೆ ತುಂಬಾ ಸಂತೋಷ ಕೊಡುವ ಊರು ನನ್ನ ಊರೇ? ಇದ್ದರೂ ಇರಬಹುದು. ಅದು ಏನೇ ಏರಲಿ, ನನಗೂ ನನ್ನ ಊರಿನ ಮೇಲೆ ಅಭಿಮಾನ ಇದೆ, ಇರಬೇಕು; ಆದರೆ ನನ್ನ ಊರೇ ಚೆಂದ ಎಂದರೆ, ಏನು ಚೆಂದ?

    Like

    • It is more appropriate to conclude my previous reply with the following message:
      ನಾನು ಹುಟ್ಟಿ ಬೆಳೆದ ಊರು ಚೆಂದ, ನಾನಿದ್ದ ಊರುಗಲೆಲ್ಲವೂ ಚೆಂದ ಮತ್ತು ಈಗ ನಾನು ಇರುವ ಊರೂ ಚೆಂದ ಎಂದರೆ, ಆಹಾ ಅದೆಷ್ಟು ಚೆಂದ.

      Like

  2. ಏನೋ ತೋಚಿದ್ದು ಬರೆದೆ, ಅದು ನಿಮಗೆಲ್ಲಾ ಇಷ್ಟ ವಾಗಿದ್ದು ಬಹಳ ಸಂತೋಷದ ವಿಷಯ.
    ದೇಸಾಯಿ ಅವರ ಗ್ರಾಫಿಕ್ಸ್ ನಿಂದ ಈ ಲೇಖನಕ್ಕೆ ತುಂಬಾ ಖಳೆ (ಕಳೆ ?) ಬಂದಿದೆ.

    Like

    • ದೇಸಾಯಿ ಅವರ ಫೋಟೋಗ್ರಫಿ ಪ್ರತಿಭೆ ಇದರಲ್ಲಿ ಹೊರಹೊಮ್ಮಿದೆ. ಅವರ ತಂತ್ರಗ್ನಾನದ ಅನುಭವ ನಮ್ಮ ವೇದಿಕೆಗೆ ನಿಜಕ್ಕೂ ಕಳೆ ತಂದಿದೆ.
      ಉಮಾ

      Like

  3. ರಾಮಮೂರ್ತಿ ಅವರೆ ನಿಮ್ಮ ಮೊದಲ ಲೇಖನ ಓದುಗರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿದೆ. ಈಗ ಹಲವು ವರ್ಷಗಳ ಹಿಂದೆ, ಮೌಂಟನಆಷ್ ಕೃಷ್ಣಮೂರ್ತಿ ಅವರ ಮನೆಯಲ್ಲಿ ಭೇಟಿ ಆದಾಗ, ನನ್ನ ಅಜ್ಜಿಯೂ ರಾಮನಾಥಪುರದವರು ಎಂದು ತಿಳಿದು, ನಮ್ಮದೇ ಆದ ಒಂದು ಕ್ಲಬ್ ಪ್ರಾರಂಭಿಸಬೇಕು ಎಂದಿದ್ದಿರಿ. ಈಗ ಅದು ಮತ್ತೊಂದು ರೀತಿಯಲ್ಲಿ ನಿಜವಾಗಿದೆ. ರಾಮನಾಥಪುರದ ಗೋವುಕಲ್ಲಿನ ಚಿತ್ರ ನನ್ನ ಮನದಲ್ಲಿ ನೆನಪಿನ ಅಲೆಗಳನ್ನೇ ಸೃಷ್ಟಿಸಿದೆ. ಕಾವೇರಿ ನದಿಯ ದಡದಲ್ಲಿ ನಿಂತು, ಅಲ್ಲಿನ ಮನೋಹರ ಮೀನುಗಳಿಗೆ ಪುರಿ ಹಾಕುತ್ತಿದ್ದ ಆ ದಿನಗಳು ಮತ್ತೆಲ್ಲಿ. ಕೇವಲ ನಿಮ್ಮಂತಹವರ ಲೇಖನದ ಸಾಲುಗಳಲ್ಲಿ ಅಷ್ಟೇ. ನಿಮ್ಮ ಬರವಣಿಗೆಯ ಶೈಲಿ ಇತರ ಬಳಗದ ಸದಸ್ಯರನ್ನೂ ಹುರಿದುಂಬಿಸಿ ಅವರನ್ನೆಲ್ಲಾ ಬರೆಯಲು ಪ್ರೇರೇಪಿಸುತ್ತದೆ ಎಂದು ಆಶಿಸುವೆ. ನಿಮ್ಮ ಬರೆಯುವ ಹವ್ಯಾಸ ಹೀಗೆ ಮುಂದುವರೆಯಲಿ.
    ಉಮಾ

    Like

    • ನಮ್ಮ ಈ ಕ್ಲಬ್ ನಲ್ಲಿ ನೀವು ಸೇರಿದರೆ ಈಗ ೫ membership
      ಹೊಸದಾಗಿ ಶೇಷಾದ್ರಿ ಅಯಂಗಾರ್ ಅನ್ನುವರು ಸೇರಿದ್ದಾರೆ.
      Many thanks for your comments and encouragement. Please suggest a suitable subject I will do my best. I am glad to hear my piece on Karanth is satisfactory, mainly due to your superb translation.

      Like

      • ರಾಮಮೂರ್ತಿ ಅವರೆ, ಕಾರಂತರ ಲೇಖನವೂ ಒಳ್ಳೆಯ ಪ್ರತಿಕ್ರಿಯೆಯನ್ನು ಗಿಟ್ಟಿಸುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ೧೯೮೯ರಲ್ಲಿ ನಿಮ್ಮೊಡನೆ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದ ನಮ್ಮ ಬಳಗದ ಸದಸ್ಯರೆಲ್ಲರಿಗೂ ಕಾರಂತರನ್ನು ಭೇಟಿಮಾಡಿದ ನೆನಪು ಖಂಡಿತಾವಾಗೂ ಇರುತ್ತದೆ. ನಿಮ್ಮ ಲೇಖನ ಬಳಗದ ಇತರ ಹಿರಿಯ ಸದಸ್ಯರನ್ನು ನಮ್ಮ ವೇದಿಕೆಗೆ ಕರೆತರುವಲ್ಲಿ ಸಹಾಯಕವಾಗುತ್ತದೆ ಎಂದು ಆಶಿಸುತ್ತೇನೆ. ನೀವು ಅನೇಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಲೇ ಇರುತ್ತೀರಿ. ಕರ್ನಾಟಕಕ್ಕೆ ಹೋದಾಗ ಗಣ್ಯರನ್ನು ಭೇಟಿ ಮಾಡುತ್ತಲೂ ಇರುತ್ತೀರಿ. ಆ ಸಮಯದಲ್ಲಿ ಅವರೊಡನೆ ಕಳೆದ ಕ್ಷಣಗಳನ್ನು ನಿಮ್ಮ ಲೇಖನಿಯಲ್ಲಿ ಗದ್ಯರೂಪಕ್ಕಿಳಿಸಿ. ಅಷ್ಟೇ ಸಾಕು. ಜೊತೆಗೆ ನೀವು ಓದಿದ ಉತ್ತಮ ಪುಸ್ತಕಗಳ (ಇಂಗ್ಲೀಷ್ ಆದರೂ ಪರವಾಗಿಲ್ಲ) ವಿಮರ್ಷೆ ಬರೆಯಿರಿ. ನಿಮಗೂ ಇದರಿಂದ ಒಂದು ತೃಪ್ತಿ ಮತ್ತು ಇದೊಂದುಉತ್ತಮ ಹವ್ಯಾಸವೂ ಕೂಡಾ ಅಲ್ಲವೇ?
        ಉಮಾ

        Like

  4. ಬಹಳ ಸೊಗಸಾಗಿದೆ ಬರಹ.

    ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಎನ್ನುವ ಹಾಗೆ ನಮ್ಮ ಬದುಕು.

    ಬದುಕು ಜಟಕಾ ಬಂಡಿ, ಕುದುರೆಗಳೇ ನಾವು, ಪಯಣ ಎಲ್ಲಿ ಎಂದು ಹೇಳುವವರೂ ಇಲ್ಲ. ಬದುಕು ದಾರಿ ತೋರಿಸಿದ ಕಡೆ ಸ್ವಲ್ಪ ನಿಲುಗಡೆ, ಮತ್ತೆ ಪಯಣ.

    ಕೇಶವ

    Like

  5. ತಮ್ಮ ಪೂರ್ವಜರು ನೆಲೆಸಿದ, ತಿರುಗಿದ ಬೇರೆ ಬೇರೆ ಊರುಗಳ ರೋಚಕ ವಿಷಯಗಳನ್ನು ಕೂಡಿಸಿ ಬರೆದ ರಾಮಮೂರ್ತಿಯವರ ಲೇಖನ, ಮೇಲೆ ಬರೆದ ನಮ್ಮ ಮಿತ್ರರ ಊರಲ್ಲಿ ಸಿಗುವ ‘ಮಿಸಳ’ದಂತೆ ಸ್ವಾದಿಷ್ಟವಾಗಿದೆ! ‘ ‘ನಮ್ಮೂರನ್ನು’ ಆಕರ್ಷಕವಾಗಿ ಮಾಡುವ ಕಲೆ ಲೇಖನಿಯಲ್ಲಿ ಎಂದು ಇಲ್ಲಿ, ಮತ್ತುಹಿಂದಿನ ಲೇಖಕರೂ ತೋರಿಸಿಕೊಟ್ಟಿದ್ದಾರೆ. ಅಲೆಮಾರಿ ಕೊನೆಗೆ ‘ನಮ್ಮೂರು’ ಬೇಸಿಂಗ ಸ್ಟೊಕಿನ ಬಗ್ಗೆಯೂ ಬರೆಯಬಹುದೇನೋ!
    ನಾಡಗೀರರು ಯಾವ ದೇಸಾಯಿಯನ್ನು ತರಾಟೆಗೆ ತೆಗೆದು ಕೊಂಡರೋ, ಯಾಕೆ ಗೊತ್ತಿಲ್ಲ! ಅವರೂ ಇದನ್ನು ಓದಿ ಸಂತೋಷ ವ್ಯಕ್ತ ಪಡಿಸಿದ್ದಕ್ಕೆ, ಮತ್ತು ನಿಮಗೆ, ಧನ್ಯವಾದಗಳು.
    ಶ್ರೀವತ್ಸ ದೇಸಾಯಿ

    Like

  6. ರಾಮಮೂರ್ತಿಯವರೆ,
    ನಿಮ್ಮ ಲೇಖನ ನನ್ನದಕ್ಕಿಂತ ಚೆನ್ನಾಗಿದೆ. ಇಷ್ಟು ದಿವಸ ನೀವು ಕನ್ನಡದಲ್ಲಿ ಇಷ್ಟು ಬರೆದದ್ದನ್ನೇ ನೋಡಿಲ್ಲ!
    ನಿಮ್ಮಿಂದ ಇನ್ನಷ್ಟು ಸಾರಸ್ಯಕರ ಸರಕು ಇರಬಹುದೇನೋ! ಓದುವ ಕಾತರವಿದೆ.

    Like

  7. Raamamoorthiyavare,
    Nimma lekhana toombaa sogasaagide. Eene aadaruu namma mitra Desaiyavara mitrarallave. Avarashte sogasaagi bareyuttiree. Desai avara lekhana odidashte sntoshvaayitu. Nanage nimma tarahada tondare illa. Naanu Dharwadadalli belede, kalite nantara kelasakkoskara bere bere oorinalli idde haagu eega tirugi dharawadakke bandu nelesiddene. Yaaru kelidaroo naanu dharawaadi ende heluttene. namma mitra Desai avaru ide vichaaravaagi lekhana bareyabahudu. Higeye niivu bareyuttiri. Dhanyavaadagalu
    Arun Nadgir

    Like

  8. Ramamurthyyavare,
    Nimma lekhan tumba swarasyavaagide. Mooru pound jebinalli haakikonDa janar yaadi maaDidadare nannannu kooda sareisikoLliri! Nemma poorvajaru ( taayi kuTumbadavaru) kooDa marathi vaumshadavariddaroo nimage Marathi yeke barolla? EnglanDadalli 50 varush kaLedaroo nimma Kannada baravaNi,shailiyalli kannaDada abhimaana tumbituLikuttide. DhanyavaadagaLu. Heegeye nimma anubhavagaLa bagge nammellara makkaLa saluvaagi bareyuttiddalli, avarigella kannaDada bagge,prothsaahana,abhiruchi,samskrutiya jnaan labhisalu saaku.
    Aravind

    Like

Leave a comment

This site uses Akismet to reduce spam. Learn how your comment data is processed.