ಸುಹಾಸ ಪಿ ಕರ್ವೆ ಅವರ ಮೂರು ಕವನಗಳು- ತಾಯಿ, ಮನುಜ & ನಿಸರ್ಗ- ಮದುಮಗಳು.

ನನ್ನ ಬಗ್ಗೆ ಒಂದಿಷ್ಟು….

ನಾನು ಸುಹಾಸ್ ಪುರುಷೋತ್ತಮ ಕರ್ವೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶವಾದ ಕಾರವಾರದ ಸದಾಶಿವಗಡ ಎಂಬ ಗ್ರಾಮದವನು.

Electronics & Communication ನಲ್ಲಿ ಇಂಜಿನಿಯರಿಂಗ್ ಪದವೀಧರನಾದ ಬಳಿಕ ‘ಟೆಕ್ ಮಹೀಂದ್ರಾ’ ದಲ್ಲಿ ‘Business Analyst’ ಆಗಿ ಉದ್ಯೋಗ. ವಾರಿಂಗ್ಟನ್ ನಲ್ಲಿ ನನ್ನ ಪತ್ನಿ ‘ಪ್ರತಿಮಾ’ ಹಾಗೂ ಮಗ ‘ಈಶಾನ’  ಜೊತೆಗೆ ವಾಸವಾಗಿರುವ ನಾನು; ಕವಿತೆ, ಹಾಡು ಹಾಗೂ ನಾಟಕದ ಹವ್ಯಾಸವನ್ನು ಬೆಳೆಸಿ ಬಂದವನು. 

++++++++++++++++++++++++++++++++++++++++++++++++++++++++++++++++++++++++++++++++

 || ತಾಯಿ ||

ನಾನು ತಾಯಿಯಾದೆ ಆನಂದದಲ್ಲಿ ತೇಲಾಡಿದೆ

ಕೂಸಿನ ಪ್ರತಿ ಕ್ಷಣದಲ್ಲೂ ನಾನು ಒಡನಾಡಿಯದೆ  || ಧ್ರ ||

 

ಮೊದಲ ಹೆಜ್ಜೆಯ ಮೊದಲ ದನಿಯ

ಶಾಲೆಗೆ ಹೊರಟಾಗ ನಮ್ಮಿಬ್ಬರ ಕಣ್ಣೀರ ಹನಿಯ

ಮರೆಯಲಿ ಹೇಗೆ? ಮರೆಯಲಾಗುವುದುಂಟೆ?

ಮೀಸೆ ಚಿಗುರಿದರೂ ಅದರ ಆರೈಕೆ ಕಡಿಮೆಯಾಗುವುದುಂಟೆ? || ೧ ||

 

ಸಪ್ತಸಮುದ್ರದಾಚೆ ಇಂದು ನನ್ನ ಕೂಸಿನ ವಾಸ

‘ತಾಯಿ’ ಎಂದು ಹತ್ತಿರ ಹೋದರೂ ಕೇವಲ ಕೆಲವೇ ತಿಂಗಳ ಸಹವಾಸ

ಜೊತೆಗಿರುವುದಕ್ಕೂ ಕೂಡ ಈಗ ಒಂದು ‘ಮಿತಿ’

ಕೂಸೇ.. ಬಾ ನೀನು ಮರಳಿ ನಾನಾಗಲಾರೆ ನಿನ್ನ ‘ಅತಿಥಿ’ || ೨ ||

 

ಆಧಾರವಾಗಿದ್ದೆ ಪುಟ್ಟ ಕಾಲ್ಗಳ ಓಟದ

ನೀ ‘ಒಲ್ಲೆ’ ಎಂದರೂ ಕೈತುತ್ತು ಊಟದ

ಬೇಕೆನಿಸುತ್ತಿದೆ ಮುದಿ ವಯಸ್ಸಿನಲ್ಲಿ ನಿನ್ನ ಆಸರೆ

ಸ್ವಾರ್ಥಿಯಲ್ಲ, ಮುಗ್ಧ ಮನಸ್ಸಿನ ಇದೊಂದು ಸಣ್ಣ ಅನಿಸಿಕೆ || ೩ ||

————————————————********************—————————–

|| ಮನುಜ ||

 

courtesy: innerself.com
ನಿನ್ನ ನೀನು ಮರೆತರೇನು ಸುಖವಿದೆ

 

ಹುಚ್ಚರ ಸಂತೆಯಲ್ಲಿ

ಹೆಚ್ಚೆಚ್ಚು ಬೇಕೆಂದು

‘ವಿಷಯಾ’ಸಕ್ತನಾಗಬೇಡೋ ಮನುಜ ಆಗಬೇಡ || ೧ ||

ಇದ್ದಷ್ಟರಲ್ಲೇ ಸಮಾಧಾನಿಯಾಗು

‘ಛಲ’ವಿದ್ದರೆ ದುಡಿದು ಸಂಪಾದಿಸು

‘ಮೋಸ’ಮಾಡಿ ಗಳಿಸಬೇಡೋ ಮನುಜ ಗಳಿಸಬೇಡ || ೨ ||

ಏಕೆ ದಿನವೂ ದೇವಾಲಯಕ್ಕೆ ಹೋಗಬೇಕು

ಕೂತಾಗ ನಿಂತಾಗ ದೇವರ ಧ್ಯಾನ ಸಾಕು

ದೇವರ ನೆನೆಯದೆ ‘ಫಲ’ ಬಯಸಬೇಡೋ ಮನುಜ ಬಯಸಬೇಡ || ೩ ||

ತಾನೇ ದೊಡ್ಡವನು ಎಂದು ಹೇಳಿಕೊಳ್ಳಬೇಡ

ಹಿರಿಯರ ಗೌರವ ಕೊಡಲು ಮರೆಯಬೇಡ

ನಡೆ-ನುಡಿಯಲಿ ಅಹಂಕರಿಯಾಗಬೇಡೋ ಮನುಜ ಆಗಬೇಡ || ೪ ||

————————————————-***********************—————————————-

llನಿಸರ್ಗ- ಮದುಮಗಳುll

ನಿಸರ್ಗವೇ ನೋಡಲು ನೀನು ಮದುಮಗಳು

ನೀನೇ….. ನನ್ನ ಕಾವ್ಯ ಕನ್ನಿಕೆ

ನಿನ್ನ ಸೌಂದರ್ಯ ವರ್ಣಿಸಲು ಸಾಲುವವೇ ಶಬ್ದಗಳು? || ಧ್ರ ||

 

ಈ ಬೆಟ್ಟದ ಸಾಲುಗಳು ನಿನ್ನ ಕಣ್ಣುಗಳಿದ್ದಂತೆ

ಸಾಲ್ಗಳ ನಡುವೆ ಮೂಡುವ ಅರುಣ ನಿನಗಿಟ್ಟ ಕುಂಕುಮದಂತೆ

ಈ ಗಿಡ-ಮರಗಳು ನಿನ್ನ ಭುಜ-ಬಾಹುಗಳು

ಮರಕ್ಕೆ ಸುತ್ತಿದ ಬಳ್ಳಿಗಳು ನಿನ್ನುದ್ದ ಜಡೆಗಳು || ೧ ||

 

ಹೊಳೆಯುವ ಆಭರಣಗಳು ಮುಂಜಾನೆ ಮಂಜಿನ ಹನಿಗಳು

ಮದುವೆಯ ಸೀರೆಯಂತಿರುವ ಸುಂದರ ಜಲಪಾತಗಳು

ರತ್ನಗಂಬಳಿಯಂತೆ ತಪ್ಪಲಲ್ಲಿ ಹರಿಯುವ ನದಿಗಳು

ನಿನಗಿಟ್ಟ ದ್ರಷ್ಟಿ ಬೊಟ್ಟಂತೆ ಈ ಅಮಾವಾಸ್ಯೆಗಳು || ೨ ||

 

ಸುಹಾಸ್ ಪುರುಷೋತ್ತಮ ಕರ್ವೆ.

 

11 thoughts on “ಸುಹಾಸ ಪಿ ಕರ್ವೆ ಅವರ ಮೂರು ಕವನಗಳು- ತಾಯಿ, ಮನುಜ & ನಿಸರ್ಗ- ಮದುಮಗಳು.

  1. Nimma kava na thumba chennagi ede. Nimma madu magalu varnane prakruthige holiseruvudu bahala sundar vagi baravanege ya mulaka bandede.
    Nimma Thayee ya kavana namma thaye avaru thiri kondu sumaru samvatswagalu kaledavu. Avara vathsalyada nanepege bandhu ashru baspagalu oodiridavu..
    Ennu bareyere.
    Vathsala

    Like

    • Tumba dhanyawadgalu Vathsalaravare…

      Nanna kaviteyu nimage tayiya vatsalyavannu magadomme nenesiruvudu keli manavu aa bhavanegalinda tumbitu.

      Suhas

      Like

  2. ಸುಹಾಸ ಅವರೆ, ತಾಯಿ ಕವನ ಸುಂದರವಾಗಿದೆ. ತಾಯಿಯ ಮಮತೆಯ ಮಡಿಲು ಯಾರಿಗೆ ಬೇಡ ಹೇಳಿ. ಇಳಿ ವಯಸ್ಸಿನಲ್ಲೂ ಅದರ ಹಂಬಲ ಇದ್ದೇ ಇರುತ್ತದೆ.
    ಉಮಾ ವೆಂಕಟೇಶ್

    Like

  3. ಸುಹಾಸ ಅವರ ಕವಿತೆಗಳು ಚಿಕ್ಕ ಚೊಕ್ಕವಾಗಿವೆ. ಓದಿದಾಗ ಒಂದು ರೀತಿಯ ಆನಂದ, ವಿಷಾದ , ಬೆರಗು ಎಲ್ಲವೂ ಮೂಡಿ ನಮ್ಮ ಎದೆಯ ಒಳಗಡೆ ಏನನ್ನೋ ತಡಕಾಡಿಕೊಳ್ಳುವ ಭಾವನೆ ಮೂಡುತ್ತದೆ. ‘ತಾಯಿ ‘ ಕವನ ನನಗೆ ತುಂಬಾ ಹಿಡಿಸಿತು. ಉಳಿದ ಎರಡು ಕವನಗಳಿಗಿಂತ ಇದು ಭಾವದಲ್ಲೂ, ಲಯದಲ್ಲೂ, ವಿಷಯ ಗಹನತೆಯಲ್ಲೂ, ಪ್ರಸ್ತುತತೆಯಲ್ಲೂ (ಅನಿವಾಸಿಗಳಿಗೆ), ಪ್ರಾಸದಲ್ಲೂ ಉತೃಉಷ್ಟವಾಗಿದೆ. ಉಳಿದ ಎರಡು ಕವನಗಳೂ ಚೆನ್ನಾಗಿವೆ ಆದರೆ ಅಲ್ಲಿ ನವನೀಯತೆ ಸ್ವಲ್ಪ ಕಡಿಮೆ ಅನ್ನಬಹುದು. ಹೀಗೇ ನಿಮ್ಮ ಲೇಖನಿಯಿಂದ ಕನ್ನಡ ರಸ ಸುರಿಯುತ್ತಿರಲಿ. ನಮ್ಮ ವೇದಿಕೆಗೆ ಸ್ವಾಗತ.

    Like

  4. Welcome to the group Suhaas 🙂
    ತಾಯಿಯ ಭಾವುಕತೆ, ಮನುಜನ ಸಂದೇಶ ಮತ್ತು ಮದುಮಗಳ ವರ್ಣನೆ ಬಹಳ ಚೆನ್ನಾಗಿವೆ 🙂

    Like

  5. Suhasarige,
    Dhanyavadagalu. Nimma Mooru kavan odi manassu higgitu. Nimma shaili saralavagide, sarasavagde.
    Namma vedikege suswagata. March 7 ra Vedike sammelanavannu Keshav hagu ramacharan Avaru derby dalli niverisuttiddare. Neevu kooda barabeku yendu namma apekshe. Baruvadadalli avarige munsuchane madalu vinanti.
    Nanage gottidda mattige, namma K.B .( U.K)ge Karwardinda baruttiruva kannadigaralli neeve prathamaru yendu bhavisuve.

    Aravind Kulkarni
    Radlett. Herts. U.K.

    Like

    • Namaskar Arvindaravare….

      Tumba dhanyawadgalu. Nimage kavitegalu ishtuvagiddu keli anandvayitu.

      Nanu sammelanakke baralu praytna maduttene. Keshav avarige munsuchane niduttene. Nimma awhanakke tumba dhanyawadgalu.

      Suhas Karve

      Like

Leave a comment

This site uses Akismet to reduce spam. Learn how your comment data is processed.