‘ಬೇರು’ಗಳ ಬೇರು – ವಿನತೆ ಶರ್ಮಾ

(ವಿನತೆ ಶರ್ಮಾ ಹುಟ್ಟಿ ಬೆಳೆದಿರುವುದೆಲ್ಲಾ, ಮೈಸೂರು ಮತ್ತು ಬೆಂಗಳೂರಿನಲ್ಲಿ. ಈಗ ನಾಲ್ಕು ತಿಂಗಳ ಹಿಂದೆ ತಮ್ಮ ಪತಿ ಮತ್ತು ಮಕ್ಕಳೊಂದಿಗೆ, ಯು.ಕೆ ಯಲ್ಲಿ, ಚೆಶೈರಿಗೇ ಬಂದಿದ್ದಾರೆ. ಶಿಕ್ಷಣ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ನಮ್ಮ ವೇದಿಕೆಗೆ ಮತ್ತೊಬ್ಬರು ಸೇರ್ಪಡೆ ಆಗಿದ್ದಾರೆ. ಬ್ಲಾಗಿನ ಕೊಂಡಿ: http://vinathesharma.wordpress.com/)

Image: Lu Yu (Flickr)

ಹುಡುಗ ಮತ್ತು ನನ್ನ ಭೇಟಿ
ಸ್ಚೂಲಿನ ಆಟದ ಮೈದಾನದಲ್ಲಿ.
ಎಂಟು ವರ್ಷದ ಜೊತೆಗೆ
ತಾತ ಮತ್ತು ಫುಟ್ ಬಾಲ್.

ನೋಡಿದ ನನ್ನ ಮಗುವನ್ನ,
ಓಡಲು ಪ್ರಯತ್ನಿಸುತ್ತಿದ್ದ ಕಂದನನ್ನ.
ಕೇಳಿದ “ನೀನು ಅವನ ನ್ಯಾನಿಯಾ”?
ನನ್ನ, ತಾತನ ಸಂಭಾಷಣೆಗೆ ಕೊಕ್ಕಿ.

“ನಿನಗೇನ್ನನ್ನಿಸತ್ತೆ?” ನನ್ನ ಪ್ರಶ್ನೆ.
“ನೀನು ಅವನ ನ್ಯಾನಿಯೇ ಇರಬೇಕು. ಯಾವ ದೇಶದವಳು ನೀನು”?

ಅರೆ, ಇವನ! ಚುರುಕು ಚಿಳ್ಳಾರಿ.
“ನಾನು ಭಾರತದವಳು”.
“ಹಾಗಾದರೆ ನೀನು ಇಲ್ಲಿಯವಳಲ್ಲ.”
ಉತ್ತರಕ್ಕೆ ಅವ ಕಾಯಲಿಲ್ಲ.
“ಹ, ಅವನು ಇಲ್ಲಿಯವನು. ಖಂಡಿತ.”

ನನ್ನ ಮಗುವಿನತ್ತ ಅವನ ಬೆರಳು.
ನನ್ನ ನೋಟ ಅವನತ್ತ, ಮಗುವಿನತ್ತ.
ಕುತೂಹಲ. ಏನೋ ಕಲಕುತ್ತಿದೆ.

ಅವನ ತಾತನ ಪ್ರವೇಶ.
“ನಾನೂ ಕೂಡ ಬೇರೆ ದೇಶದವನು. ನಾನು ಇಲ್ಲಿಯವನಲ್ಲ.
ಬಹಳ ಹಿಂದೆ ಹಡಗನ್ನು ಹತ್ತಿ ನಾನು ಬಂದೆ”.

“ಇಲ್ಲಾ, ನೀನು ಇಲ್ಲಿಯವ”. “ಇಲ್ಲ. ನಾನಲ್ಲ”. “ಹೌದು, ನೀನು ಕೂಡ ಇಲ್ಲಿಯವ, ನನ್ನಂತೆ”.
“ಹಾಗಾದರೆ, ಅವಳು ಕೂಡ. ಅವಳು ಇಲ್ಲಿಯವಳು. ನಮ್ಮಂತೆ”.
ತಾತನ ವಾದ.

ನೋಡುತ್ತಾ ನಿಂತ ಹಾಗೆ
ಬಣ್ಣಗಳು ಬದಲಾದವು.

“ಇಲ್ಲ. ಅವಳು ನಮ್ಮಂತೆ ಅಲ್ಲ. ಅವನು ಹೌದು, ನಮ್ಮಂತೆ”.
ತಾತನ ನೋಟ ನನ್ನ ಕಡೆ, ಮಗುವಿನ ಕಡೆ, ಅವನ ಕಡೆ.

“ಯಾಕೆ ನಿನಗೆ ಹಾಗೆ ಅನ್ನಿಸತ್ತೆ”?

“ಅವನು ನಮ್ಮಂತೆ ಕಾಣಿಸುತ್ತಾನೆ. ಅವಳು ಬೇರೆ ತರ ಇದ್ದಾಳೆ.ಅವಳು ಅವನ ನ್ಯಾನಿ”.

ಇದು ತಮಾಶಿಯಲ್ಲ. ನನ್ನ ದನಿಗೆ ಜೀವ ಬಂತು.
“ನಿನ್ನ ತಾಯಿ ನಿನ್ನ ನ್ಯಾನಿ ಕೂಡ ಹೌದಾ?”
“ಖಂಡಿತ ಇಲ್ಲ. ನನ್ನ ಅಮ್ಮ ನನಗೆ ಅಮ್ಮ ಮಾತ್ರ.”

“ಲೋ ಚಿಳ್ಳಾರಿ, ನನ್ನ ಗುಟ್ಟು ಗೊತ್ತಾ?
ನಾನು ಅವನ ಅಮ್ಮನೂ ಹೌದು, ನ್ಯಾನಿಯೂ ಹೌದು.
ನಿನಗೆ ನಾನು ಅನ್ಯ., ‘ಬೇರೆ’.
ನೀನು ಬರೆಯುವ,
“ಬೇರೆ ತರಹ” ಹಣೆಪಟ್ಟಿ
ನನ್ನ ಶಕ್ತಿ. ನನ್ನ ಬೇರು.
ನನ್ನ ಚಿಲುಮೆ, ಬುಗ್ಗೆ, ನದಿ, ಸಮುದ್ರ.
ನನ್ನ ಹರಿವು-ಅರಿವು.

8 thoughts on “‘ಬೇರು’ಗಳ ಬೇರು – ವಿನತೆ ಶರ್ಮಾ

 1. Excellent poem. Hearty congrats to Vinute. She is another New feather in our Vedike. The more the merrier.
  Yella Makkalu huttidagininda mattina muddeye sari. Avarannella yella anubhavika tande tai, Ajja, Ajji, geleyaru, hagu shaleya shishakarellar sahayadinda muddeyannu moorthiyagi parivartisuvadu adya kartavya. Balyadalli yee kartavya madade hage bittare, moogdha makkalu mannina muddeyeyagi uliyuvadalli sandehavilla. Makkala belavanigege ,Preeti,takka pal ana,poshane,margadarshan, maneyalli adarshya Shanta vatavarane sada nelisirale beku. Yeeve makkalannu belisuva moola adhar sthambagalu.
  Dr.Aravind. Kulkarni
  Radlett. U.K.

  Like

 2. ಯು ಕೆ ಕನ್ನಡಿಗರ ತಂಗುದಾಣಕ್ಕೆ ಸ್ವಾಗತ ವಿನುತೆಯವರೆ. ಮಕ್ಕಳು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಮಕ್ಕಳೇ. ಅವರ ಮುಗ್ದ ನೋಟ ಮತ್ತು ಆಟ ಈ ಜಗತ್ತನ್ನು ಸುಂದರವಾದ ಸ್ಥಳವನ್ನು ಮಾಡಿದೆಯೆಂದು ಹೇಳಬಹುದು. ಹೊಸ ವಿಧವಾದ ನಿಮ್ಮ ಬರವಣಿಗೆ ನಮ್ಮ ಈ ಜಾಲಜಗುಲಿಗೆ ಹೊಸ ಅಬಿರುಚಿಯನ್ನು ಪರಿಚಯಿಸಿದೆ.
  ದಾಕ್ಷಾಯಣಿ

  Like

 3. ಬೇರುಗಳ ಬೇರು ಬಹಳ ಆಳಕ್ಕಿಳಿದು ಹೋಗಿದೆ ಅದನ್ನು ರಾಜಾರಾಮ್ ಅವರು ತಡಕಾಡುವ ಪ್ರಯತ್ನವನ್ನೂ ಚೆನ್ನಾಗಿ ಮಾಡಿದ್ದಾರೆ. ಉತ್ತಮ ಕವಿತೆ. ನಾನು ಸ್ವಲ್ಪ ಹಳೆಯ ಶೈಲಿಯ ಅಭಿಮಾನಿ. ಪ್ರಾಸ ,ಲಯ ಇಲ್ಲದ ಪದ್ಯಗಳು ನನಗೆ ರುಚಿಸುವುದು ಕಡಿಮೆ ಆದರೂ ಈ ವಿನತೆಯವರ ಕವನ ಮನ ಕಲಕಿ ಹಲವು ಭಾವನೆಗಳ ತರಂಗಗಳನ್ನು ಖಂಡಿತವಾಗಿ ಎಬ್ಬಿಸಿತು.
  ಶಿವಪ್ರಸಾದರು ಹೇಳಿದ pattern recognition ಬಾಲ್ಯದಲ್ಲಿ ಶುರುವಾದರೂ ಅದು ನಮ್ಮ ಜೀವನ ಪೂರ್ತಿ ಬೆಂಬಿಡದೆ ನಮ್ಮ ಯೋಚನಗಳನ್ನು ಸ್ವಲ್ಪಮಟ್ಟಿಗಾದರೂ ನಿಯಂತ್ರಿಸುತ್ತದೆ ಎಂಬುದು ನಮ್ಮ ಅಭಿಪ್ರಾಯ. ನಮ್ಮ ಅಲೋಚನೆಗಳ ಕ್ಷೇತ್ರ ವಿಭಿನ್ನ ಅಷ್ಟೆ.

  Like

 4. Dr Prasad writes: ಮಕ್ಕಳ ಕಲಿಕೆಯಲ್ಲಿ ಮತ್ತು ಅವರ ಅರಿವಿನಲ್ಲಿ pattern recognition ಮತ್ತು conformation ಇರುವುದೆಂದು ನನ್ನ ಅನಿಸಿಕೆ. ಬೆಂಗಳೊರಿನಲ್ಲಿ ನಮ್ಮ ಮನೆಗೆ ಬಂದ ಪುಟ್ಟ ಹುಡುಗಿಯನ್ನು ಅವರ ಅಪ್ಪ ಹಾಗು ಅಮ್ಮ ನಾನ್ಯಾರೆಂದು ಕೇಳಿದಾಗ ನನ್ನ ಬಿಳಿಕೂದಲನ್ನು ಗಮನಿಸಿದ ಬಾಲಕಿ ’ತಾತ’ ಎಂದಳು. ಇನ್ನೂ ಕರಿ ಕೂದಲನ್ನು ಉಳಿಸಿಕೊಂಡಿರುವ ನನ್ನ ಹೆಂಡತಿಯನ್ನು ’ಆಂಟಿ’ ಎಂದು ಗುರುತಿಸಿದಳು!
  ಕವನದಲ್ಲಿನ ಮುಗ್ಧಬಾಲಕನ ಆಲೋಚನೆ ಸಹಜವಾಗಿ ಕಂಡರೂ ಜನರ ಮೂಲವನ್ನು ಕೆದಕುವ ಹುಡುಗನ ಅಲೋಚನೆಯ ಹಿನ್ನೆಲೆಯಲ್ಲಿ ವರ್ಣಭೇದದ ಒಂದು ಸೂಕ್ಷ್ಮ ಎಳೆಯನ್ನು ಕವಯಿತ್ರಿ ವಿನತೆ ಶರ್ಮ ಬಹಳ ಚೆನ್ನಾಗಿ ಬೆಸೆದಿದ್ದಾರೆ. ಮಕ್ಕಳ ಆಲೋಚನೆಯಲ್ಲಿ ಪೂರ್ವಕಲ್ಪಿತ ಅಭಿಪ್ರಾಯಗಳು ಉಧ್ಭವಿಸಿದಾಗ ನಾವು ಅವರು ಬೆಳೆಯುತ್ತಿರುವ ಸಮಾಜದ ಮೌಲ್ಯಗಳನ್ನು ವಿಮರ್ಶಿಸಬೇಕಾಗುತ್ತದೆ.

  Like

 5. ವಿನುತೆ ಅವರ “ಬೇರುಗಳ ಬೇರು ಕವನ ನಮ್ಮ ಮನದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹೊರನಾಡಿನಲ್ಲಿರುವ ವರ್ಣೀಯರು , ಅಲ್ಲಿನ ಸಮಾಜದಲ್ಲಿ ಬೇರೂರಲು ಎಷ್ಟೇ ಪ್ರಯತ್ನಿಸಿದರೂ, ಅಲ್ಲಿನ ನೆಲ ನಮಗೆ ಸತತವಾದ ಸವಾಲುಗಳನ್ನು ನೀಡುತ್ತಲೇ ಇರುತ್ತದೆ. ಪೂರ್ವಾಗ್ರಹ ಪೀಡಿತರಾದ ಸಮಾಜದಲ್ಲಿ, ಮಕ್ಕಳನ್ನೂ ಕೂಡಾ ಆ ರೋಗಕ್ಕೆ ತುತ್ತಾಗಿಸುವ ಸ್ಥಳೀಯರ ಮನೋಭಾವನೆ, ನಿಜಕ್ಕೂ ಆಘಾತಕರ. ಆದರೆ ಅದೆಲ್ಲವನ್ನೂ ಧೈರ್ಯದಿಂದ ನಿಭಾಯಿಸುತ್ತಾ, ಇಂದು ಹೊರನಾಡಿನಲ್ಲಿ ಯಶಸ್ಸನ್ನು ಪಡೆದು, ಅಲ್ಲಿ ಬೇರೂರಿರುವ ನಮ್ಮಂತಹ ಸಮುದಾಯದ “ಬೇರೆಯ ಬೇರುಗಳು“ ಅಲ್ಲಿನ ದೇಶಗಳ ಪ್ರತಿಭೆಯ ವೈವಿಧ್ಯತೆಯನ್ನು ಸಂಪನ್ನಗೊಳಿಸುತ್ತಿವೆ. ವಿನುತೆ ಅವರು ಕವನ ಅಂತ್ಯದಲ್ಲಿ, “ಬೇರೆ ತರಹ” ಹಣೆಪಟ್ಟಿ
  ನನ್ನ ಶಕ್ತಿ. ನನ್ನ ಬೇರು.
  ನನ್ನ ಚಿಲುಮೆ, ಬುಗ್ಗೆ, ನದಿ, ಸಮುದ್ರ.
  ನನ್ನ ಹರಿವು-ಅರಿವು. ಎಂದಿದ್ದಾರೆ. ಆ ಮಾತುಗಳು ಬಹಳ ಸತ್ಯವಾದದ್ದು.
  ವಿನುತೆ ಅವರ ಕವನಗಳು ನಮ್ಮ ಜಾಲಜಗುಲಿಯನ್ನು ಹೀಗೆ ಸಂಪನ್ನಗೊಳಿಸಲಿ.
  ಉಮಾ ವೆಂಕಟೇಶ್

  Like

 6. ವಿನತೆಯವರ ಈ ಮಾರ್ಮಿಕ ಕವನದ ಪ್ರಾರಂಭದಲ್ಲಿ ಬಾಲಕನ ಮುಗ್ಧ ಪ್ರಶ್ನೆ ಅವನಿಗೆ ಅರಿವಿರದೆಯೇ ವರ್ಣಭೇದದ ಕಪ್ಪು ನೆರಳಿನ ಪರಿಚಯ ಮಾಡಿಸುತ್ತದೆ. ಇವರ ಮಗುವಿನ ಚರ್ಮದ ವರ್ಣ ತಾಯಿಗಿಂತ ಭಿನ್ನ ಎಂದ ಮೇಲೆ ‘ಅವಳು ತಾಯಿಯಲ್ಲ, ಆಯಾ (ನ್ಯಾನಿ)’ ಎಂದು ಬಾಲಕನ ತರ್ಕ. ಅದರ ಒಳರ್ಥ ಕಟುಕಿದರೂ ಭಾರತೀಯ ತಾಯಿ, ನ್ಯಾನಿ, ಪೋಷಕ, ಗುರು ಎಲ್ಲ ಆಗಿರುತ್ತಾಳೆ ಎಂಬ ಅರಿವು, ಅವಳ ಆ ಭಿನ್ನತೆಯ “ಬೇರು” ಅವಳಿಗೆ ಸ್ಫೂರ್ತಿ, ಶಕ್ತಿ ಕೊಡುತ್ತಿದೆಯೆಂದು ಮನವರಿಕೆ ಮಾಡಿಕೊಡುತ್ತಾರೆ.
  ಇದರಿಂದ ಅನಿವಾಸಿಗಳು ದೇಶ-ವಿದೇಶಗಳಲ್ಲಿ ಅವುಭವಿಸುತ್ತಿರುವ ವರ್ಣಭೇದಕ್ಕೆ ಕನ್ನಡಿ ಹಿಡಿದಿದ್ದಾರೆ. (ಈ ಕವನ ಅವರೇ ಬರೆದ ಆಂಗ್ಲ ಕವನದ ಅನುವಾದ ಎಂದೆನಿಸುತ್ತದೆ. ಅದೂ ಇದರಷ್ಟೇ ಮೊನಚಾಗಿದೆ). ವಿನತೆ ಶರ್ಮಾರನ್ನು ಈ ವೇದಿಕೆ ಸ್ವಾಗತಿಸುತ್ತದೆ.

  Like

 7. ನಮ್ಮ ಗುಂಪಿಗೆ ಸ್ವಾಗತ ವಿನತೆಯವರೆ.
  ಕವನ ಚೆನ್ನಾಗಿದೆ. ರೆಡ್ ಇಂಡಿಯನ್ ಅವರುಗಳನ್ನ ಬಿಟ್ಟರೆ ಅಮೇರಿಕಾದಲ್ಲಿ ಎಲ್ಲರೂ ಪರದೆಸಿಗಳೇ.

  Like

 8. Children have no colour prejudice. But they have a logical mind. The adults have colour prejudice which they instil into their children. As they see most of the nannies are of darker skins, they conclude all darker skinned ladies are nannies. They have yet to learn that a darker skinned lady can be a mother of a fairer skinned child as well!
  I remember an incident where this lack of colour prejudice among children was demonstrated very clearly. The incident happened when I with my wife and our son, about 5 years old, visited our friends who were living in Milton Keynes with their son about 4 years old. It was a fairly hot afternoon when all the houses had their doors and windows wide open. As we all are from India our children with their brown skin mingled with the fair skinned local children and were playing happily without any restrictions. On that afternoon there was the finals of a football match showing on the TV. Obviously all the husbands were watching TV and all the wives were chatting or having a nap during that afternoon. All the children were playing their own invented game called ‘Booing the daddy’. What they were doing was by going in a group silently into a house and suddenly shout ‘Boo’ behind the man of the house who was watching the TV and make him startle and jump that made all the children laugh. They were doing this to all daddies in all the houses and enjoying themselves. When it came to our turn all the children came in behind me and suddenly shouted, ‘Boo’ that made me and my friend jump, not only that the fair skinned children told my son, ‘Oh you have got an Indian one’. Although they were playing with my son and my friend’s son, both with brown skin, the fair skinned children mingled and played with them without being aware of any difference in the colour of the skin of the two boys. Only when they saw the adults they noticed the difference!!

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.