ಒಲವು — ಬೆಳ್ಳೂರು ಗದಾಧರ ಅವರ ಕವನ

ಒಲವು

 

couple-drawing cropped

ನಿನ್ನೊಲವಿನ ಸುಳಿಗಾಳಿಯಲಿ
ಪಟವನೇರಿಸಿ ನೀನು
ಜೀವನದ ನೌಕೆಯನು ತೇಲಿ ಬಿಟ್ಟೆ
ಹಗುರ ಹೃದಯದಲಿ
ಆಸೆ ಆಕಾಂಕ್ಷೆಗಳಿಗೆ
ಜೀವ ಯಾತ್ರೆಗೆ ಉಸಿರು ಕೊಟ್ಟೆ

ಪಯಣ ಕಳೆದಂತೆ
ಒಲವು ಪ್ರೀತಿಗಳ
ಎದೆ ಮನಗಳಲಿ ತುಂಬಿ ಇಟ್ಟೆ
ನಿಷ್ಕಲಂಕ ದಿನಗಳು
ಪ್ರೇಮಪೂರ್ಣ ವರ್ಷಗಳು
ನನ್ನ ಸುಖಕೆಂದೇ ಮೀಸಲಿಟ್ಟೆ

ಮರೆತಲ್ಲಿ ನಾ ನಿನ್ನ ತ್ಯಾಗ
ನೀನರ್ಪಿಸಿರುವ ಅನುರಾಗ
ಸ್ವಾರ್ಥ ದಡವ ನಾ ಮುಟ್ಟೆ
ಓ ನನ್ನ ನಾವಿಕಳೆ
ಬರಲಿ ನಿನ್ನೊಲವ ಸುಳಿಗಾಳಿ
ನೌಕೆ ತೇಲಿಸು ಮತ್ತೆ ದಡವ ಬಿಟ್ಟು

5 thoughts on “ಒಲವು — ಬೆಳ್ಳೂರು ಗದಾಧರ ಅವರ ಕವನ

  1. ಮಧುರವಾದ ಕವನ. ತಂಪಾಗಿ ಬೀಸುವ, ಸವಿಯಾದ ಪ್ರೀತಿಯ ಸೌರಭವನ್ನುವನ್ನು ಹೊತ್ತು ತರುವ ಹೊಸಗಾಳಿ.
    ನಿಮ್ಮ ಲೇಖನಿಯನ್ನು ಮತ್ತೆ ಹಾಯಿಸಿ, ಹೊಸ ಪ್ರೀತಿಯ ಅಲೆಗಳನ್ನು ನಮ್ಮವರೆಗೂ ಹರಿಯಬಿಡಿ.
    ನಿಮ್ಮ ಎರಡನೆಯ ಕವನಕ್ಕಾಗಿ ಕಾಯುತ್ತಿದ್ದೇವೆ.

    Like

  2. ಮಾನ್ಯ ಗಧಾಧರ ಅವರೆ ನನ್ನ ಕಂಪ್ಯೂಟರಿನ ತಾಂತ್ರಿಕ ಅಡಚಣೆಯಿಂದಾಗಿ ನಿಮ್ಮ ಕವನಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿರಲಿಲ್ಲ.
    ಸಂಸಾರದ ಪಯಣ ಕಳೆದಂತೆ ಗಂಡ ತನ್ನ ಸ್ವಾರ್ಥತೆಯ ಸುಳಿವಿನಲ್ಲಿ ’ವಾತ್ಸಲ್ಯ ವರುಣೆ’ ಯಾದ ಹೆಂಡತಿಯ ತ್ಯಾಗವನ್ನು ಹಾಗು ನಿಷ್ಕಲಂಕವಾದ ಪ್ರೀತಿಯನ್ನು ಅಂಗೀಕರಿಸದೆ ಅದು ಅವಳ ಕರ್ತವ್ಯವೆಂದು ಪರಿಗಣಿಸುವುದ, ವ್ಯಾಖ್ಯಾನ ಮಾಡುವುದು ಸಾಮಾನ್ಯ. ಇಂತಹ ಒಂದು ಗಂಭೀರವಾದ ಕಳಂಕದಿಂದ ಪುರುಷ ಮುಕ್ತನಾಗಲು ತವಕಿಸುವ ಚಿತ್ರಣ ಬಹಳ ಚನ್ನಾಗಿ ಮೂಡಿಬಂದಿದೆ. It is a very nice tribute to women and a gentle reminder for men who take them for granted. ಜಿ ಎಸ್ ಎಸ್ ಅವರ ’ಸ್ತ್ರೀ’ ಎಂಬ ಕವನವನ್ನು ನೆನಪಿಗೆ ತರುತ್ತದೆ.
    ಅಭಿನಂದನೆಗಳು
    ಪ್ರಸಾದ್

    Like

  3. ಪ್ರಾಸ ಲಯ ಭಾವ , ಪ್ರೇಮ, ಧನ್ಯತೆ, ಕೃತಜ್ಞತೆ, ಅಭಿಮಾನ, ಸಾಫಲ್ಯತೆ ಎಲ್ಲ ವ್ಯಕ್ತಗೊಳಿಸುವ ಅಪೂರ್ವ ಕವನ. ಪ್ರೀತಿ ಪ್ರೇಮಗಳ ಬೆಸುಗೆ ಕುರಿತ ಕವನಗಳಿಗೆ ಕನ್ನಡದಲ್ಲಿ ಬರವೇನೂ ಇಲ್ಲ. ಆದರೆ ಪ್ರತೀ ಕವನವೂ ಈ ಭಾವನೆಗಳಿಗೆ ತನ್ನದೇ ಕಂಪು ನೀಡುವ ಪರಿ ಸೋಜಿಗ. ಗದಾಧರರಿಗೆ ಧನ್ಯವಾದಗಳು

    Like

  4. ತನ್ನ ಜೀವನ ನೌಕೆಯ ಸಂಗಾತಿಯ ನಿಸ್ವಾರ್ಥ ಒಲವನ್ನು, ಅವಳ ತ್ಯಾಗವನ್ನು ಭಾವುಕವಾಗಿ ವರ್ಣಿಸಿರುವ ಗದಾಧರ್ ಅವರ ಕವನ “ಒಲವು“ ಸರಳ ಪ್ರೇಮವನ್ನು ನಮ್ಮ ಮನಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಬಾಳ ಪಯಣದಲ್ಲಿ ಜೊತಗಾರ್ತಿಯ ಅನುರಾಗವೆಷ್ಟು ಸವಿಯಾದ ಅನುಭವ ಎನ್ನುವುದು, ಗದಾಧರ್ ಅವರ ಕವನದಲ್ಲಿ ವ್ಯಕ್ತವಾಗಿದೆ. ಅವರ ಮುಂದಿನ ಕವನಗಳೂ ಇಷ್ಟೇ ಸೊಗಸಾಗಿ ಮೂಡಿಬರಲಿ ಎಂದು ನಿರೀಕ್ಷಿಸುತ್ತೇನೆ.
    ಉಮಾ ವೆಂಕಟೇಶ್

    Like

  5. ನಿಷ್ಕಲಂಕ, ನಿಸ್ವಾರ್ಥ ಪ್ರೇಮಿಗಳ ಒಲುಮೆಯ ಗಾಥೆಯಿದೆ ಈ ಸುಂದರ ಕವನದಲ್ಲಿ. ನಾವಿಕಳ ತ್ಯಾಗಕ್ಕೆ ಕೃತಜ್ನತೆ ತೋರುತ್ತ ಕವಿ ತನ್ನ ಭಾವನೆಗಳಲ್ಲಿ ಮೈಸೂರು ಮಲ್ಲಿಗೆಯ ಕಂಪನ್ನು ’ಅವಳೊಲವಿನ ಸುಳಿಗಾಳ”ಯ ಮೇಲೆ ತೇಲಿಸಿ ಪಸರಿಸಿ ಬಿಟ್ಟಿದ್ದಾರೆ! ಮುಂದಿನ ಲಹರಿಗೆ ಕಾಯುತ್ತಿದ್ದೇವೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.